ಅಳತೆ, ತೂಕ, ಎಣಿಕೆ
ವಸ್ತುಗಳ ಅಳತೆ (ಮೆಷರ್), ತೂಕ (ವೆಯ್ಟ್), ಎಣಿಕೆ (ಕೌಂಟ್) ಮಾನವನ ವ್ಯವಹಾರದಲ್ಲಿ ಅವಿಭಾಜ್ಯ ಅಂಗಗಳು. ಇವುಗಳನ್ನು ಅಭ್ಯಸಿಸುವ ಶಾಸ್ತ್ರದ ಹೆಸರು ಮಾಪನಶಾಸ್ತ್ರ (ಮೆಟರಾಲಜಿ;). ಈ ವರ್ಷ ಬಿದ್ದ ಮಳೆ ಎಷ್ಟು; ಭೂಮಿಯಿಂದ ಚಂದ್ರನಿಗೆ ದೂರ ಎಷ್ಟು-ಇಲ್ಲಿ ಅಳತೆಯ ಪಾತ್ರವಿದೆ. ಚಂದ್ರನಿಂದ ಮಾನವ ಭೂಮಿಗೆ ತಂದ ಶಿಲೆಯ ಭಾರ ಎಷ್ಟು; ಪೈಲ್ವಾನನ ಭಾರ ಎಷ್ಟು-ಇಲ್ಲಿ ತೂಕದ ಪಾತ್ರವಿದೆ. ಈ ವರ್ಷ ಬಿ.ಎ ಪರೀಕ್ಷೆಗೆ ಕುಳಿತವರೆಷ್ಟು; 1972ರಲ್ಲಿ ಎಷ್ಟು ದಿವಸಗಳಿವೆ-ಇಲ್ಲಿ ಎಣಿಕೆಯ ಪಾತ್ರವಿದೆ. ಅಳತೆ, ತೂಕ, ಎಣಿಕೆ ಇವು ಮೂರಕ್ಕೂ ಅನ್ವಯವಾಗುವ ಮೂರು ಮುಖ್ಯ ಸೂತ್ರಗಳಿವೆ-ಇವೆಲ್ಲವನ್ನೂ ಸಂಖ್ಯೆಯಲ್ಲಿ ಸೂಚಿಸುತ್ತೇವೆ; ಸಂಖ್ಯೆ ಬರೆದ ಮೇಲೆ ಅದರ ಹೆಸರನ್ನು ಅಂದರೆ ಮಾನವನ್ನು ಮುಂದೆ ಬರೆಯುತ್ತೇವೆ; ಹೀಗೆ ತಿಳಿಯುವ ವಸ್ತುವಿನ ಮಾಪನ ಒಂದು ದತ್ತಮೂಲಮಾನದ ಗುಣಕ. ಉದಾಹರಣೆಗೆ, ಭೂಮಿ-ಚಂದ್ರರ ಸರಾಸರಿ ದೂರ 2,39,000 ಮೈಲಿಗಳು. ಇಲ್ಲಿ ಮೈಲಿ ಪದ ಅಳತೆಯ ಮಾನ, ದತ್ತಮೂಲಮಾನ ಒಂದುಮೈಲಿ. ಪೈಲ್ವಾನನ ತೂಕ 100 ಕಿ.ಗ್ರಾಂಗಳು. ಇಲ್ಲಿ ಕಿಲೋಗ್ರಾಂ ಪದ ತೂಕದ ಮಾನ, ದತ್ತಮೂಲಮಾನ ಒಂದು ಕಿಲೋಗ್ರಾಂ. 1972ರ ಅವಧಿ 366 ದಿವಸಗಳು. ಇಲ್ಲಿ ದಿವಸ ಪದ ಎಣಿಕೆಯ ಮಾನ, ದತ್ತಮೂಲಮಾನ ಒಂದು ದಿವಸ.[೧]
ಸಮಸ್ಯೆಗಳು
[ಬದಲಾಯಿಸಿ]ಪ್ರಾಚೀನ ಮಾನವನಿಗೆ ಇಂಥ ಸಮಸ್ಯೆಗಳು ಎದುರಾದವು. ಗುಡಿಸಲು ಕಟ್ಟಲು, ಮರ ಕಡಿಯಲು, ಧಾನ್ಯ ವಿನಿಮಯಿಸಲು, ಒಂದು ನೆಲೆಯಿಂದ ಇನ್ನೊಂದು ನೆಲೆಗೆ ನಡೆಯಲು ಅಳತೆ ಮಾಡಬೇಕಾಯಿತು. ಕಲ್ಲುಗಳ, ಮರಗಳ, ಧಾನ್ಯ ರಾಶಿಯ, ಗಾಯಗೊಂಡ ಬಂಧು ಮಿತ್ರರ ತೂಕ ತಿಳಿಯಬೇಕಾಯಿತು. ಹೆಂಡಿರು ಮಕ್ಕಳ, ಸೈನಿಕರ, ದನ ಕುದುರೆಗಳ ಎಣಿಕೆ ಹಾಕಬೇಕಾಯಿತು. ಇಲ್ಲೆಲ್ಲ ಪರೋಕ್ಷವಾಗಿ ತಿಳಿದ ಮೂಲಮಾನಗಳಿಂದ ತಿಳಿಯದ ವಸ್ತುಗಳನ್ನು ಸೂಚಿಸುವುದು ಅನಿವಾರ್ಯ ಮನಸ್ಸಿನ ಸಹಜ ಹರಿಯುವಿಕೆಗೆ ಸಮಸ್ಯೆಗಳ ಬಿಡಿಸಿಕೆಯ ಅಥವಾ ಸುಲಭೀಕರಣದ ದಾರಿಯಲ್ಲಿ ಆ ಮೊದಲೇ ಬಳಕೆಗೆ ಬಂದಿದ್ದ ಅಂಕೆಸಂಖ್ಯೆಗಳು ಸಮರ್ಥ ಸೂಚ್ಯಂಖಗಳಾದವು. ಕಾಲ್ನಡಿಗೆಯಿಂದ ಗಮಿಸಿದ ದೂರ, ಬೊಗಸೆ ಹಿಡಿದ ಧಾನ್ಯ, ಗೇಣುಕಾಕಿದ ಉದ್ದ, ದೊಡ್ಡ ಗಾತ್ರದ ಮನುಷ್ಯನ ಅಥವಾ ಮುಂದಾಳಿನ ಎತ್ತರ ಮುಂತಾದವು ಅಳತೆಯ ಮಾನವನ್ನು ಒದಗಿಸಿದವು. ಒಂದು ನಿಯತಗಾತ್ರಕ್ಕೆ ಒಟ್ಟಿದ ಧಾನ್ಯ ರಾಶಿಯ ಭಾರ, ನೈಸರ್ಗಿಕವಾಗಿ ಲಭಿಸಿದ ಸ್ಪಷ್ಟಾಕೃತಿಯ ಕಲ್ಲು ತುಂಡಿನ ಭಾಗ, ಒಬ್ಬ ವ್ಯಕ್ತಿಯ ಭಾರ ಮುಂತಾದವು ತೂಕದ ಮಾನ ನೀಡಿದುವು. ಅಂಕೆಸಂಖ್ಯೆಗಳು ಎಣಿಕೆಗೆ ಸಹಾಯಕಗಳಾದವು. ಆ ದಿವಸಗಳಲ್ಲಿ ಸರಿಸುಮಾರು ಲೆಕ್ಕಾಚಾರ ಸಾಕಾಗುತ್ತಿತ್ತು. ಆದರೆ ಜ್ಞಾನ ಬೆಳೆದಂತೆ ವಿಜ್ಞಾನ ಆಗಮಿಸಿದಂತೆ, ಅಳತೆ, ತೂಕ, ಎಣಿಕೆಗಳು ದೈನಂದಿನ ವ್ಯವಹಾರದಲ್ಲಿಯೂ ವೈಜ್ಞಾನಿಕಾನ್ವೇಷಣೆಯಲ್ಲಿಯೂ ಸಮಾನ ಪ್ರಾಮುಖ್ಯ ಪಡೆದವು; ಹೆಚ್ಚಿನ ನಿಷ್ಕøಷ್ಟತೆ ಅತ್ಯವಶ್ಯಕವಾಯಿತು. ವ್ಯಕ್ತಿ-ವ್ಯಕ್ತಿ, ವ್ಯಕ್ತಿ-ಸಮಾಜ, ವ್ಯಕ್ತಿ ವ್ಯವಹಾರಗಳಲ್ಲಿ ಎಲ್ಲರೂ ಒಪ್ಪಿರುವ, ಸಮಾನಾರ್ಥ ನೀಡುವ, ಬಳಕೆಗೆ ಹಿತಮಿತವಾಗಿರುವ, ರೂಢಿಯಲ್ಲಿ ಬೆಳೆದು ಬಂದಿರುವ, ಮಾನದಂಡಗಳನ್ನು ಅವಲಂಬಿಸಿರುವ ಮೂಲಮಾನಗಳು ಅನಿವಾರ್ಯವಾದವು. ಹೀಗೆ ಮೂಲಮಾನಗಳು, ಮಾನದಂಡಗಳು, ಸಾರ್ವತ್ರಿಕ ಬೆಂಬಲದಿಂದ ರೂಪುಗೊಂಡವು. ಮುಂದೆ ವ್ಯಾಪಾರ, ವಾಣಿಜ್ಯ, ವೈಜ್ಞಾನಿಕ ಸಂಶೋಧನೆಗಳು ಪ್ರಗತಿಗೊಂಡಂತೆ ಮಾನಗಳ ಏಕರೂಪತೆ ಅವಶ್ಯವಾಯಿತು. ಇಲ್ಲಿ ಸರ್ಕಾರದ ಪ್ರವೇಶ ಕಾಣುತ್ತೇವೆ. ಸರ್ಕಾರ ಶಾಸನರೀತ್ಯ ಮೂಲಮಾನಗಳನ್ನು ಮಾನದಂಡಗಳನ್ನೂ ನಿರ್ಧರಿಸಿ ಅವುಗಳ ಬಳಕೆಯನ್ನು ಕಡ್ಡಾಯಗೊಳಿಸಿತು. ಸಾರ್ವಜನಿಕ ವ್ಯವಹಾರಗಳಲ್ಲಿ ಇವನ್ನು ಬಳಸದಿರುವುದು ಶಿಕ್ಷಾರ್ಹ ಅಪರಾಧವೆನಿಸಿತು [೨]
ಮಾಪನಗಳಲ್ಲಿ ಪ್ರಮುಖ ವ್ಯವಸ್ಥೆಗಳು
[ಬದಲಾಯಿಸಿ]ಮಾಪನಗಳಲ್ಲಿ ಎರಡು ಪ್ರಮುಖ ವ್ಯವಸ್ಥೆಗಳು ಪ್ರಪಂಚದಲ್ಲಿ ಬಳಕೆಯಲ್ಲಿವೆ. ಅಡಿ, ಪೌಂಡ್, ಸೆಕೆಂಡ್ ವ್ಯವಸ್ಥೆ (ಫುಟ್, ಪೌಂಡ್, ಸೆಕೆಂಡ್ ಅಥವಾ ಎಫ್.ಪಿ.ಎಸ್. ಸಿಸ್ಟಂ). ಮತ್ತು ಸೆಂಟಿಮೀಟರ್, ಗ್ರಾಂ, ಸೆಕೆಂಡ್ ವ್ಯವಸ್ಥೆ, (ಸಿ.ಜಿ.ಎಸ್. ಸಿಸ್ಟಂ). ಮೊದಲನೆಯದನ್ನು ಬ್ರಿಟಿಷ್ ವ್ಯವಸ್ಥೆಯೆಂದೂ ಎರಡನೆಯದನ್ನು ಫ್ರೆಂಚ್ ಅಥವಾ ಮೆಟ್ರಿಕ್ ವ್ಯವಸ್ಥೆಯೆಂದೂ ಕರೆಯುವುದುಂಟು. ವಸ್ತು ಒಂದೇ ಆದರೂ ಮಾನದಂಡಗಳ ಭಿನ್ನತೆಯಿಂದ ಅದರ ಮೌಲ್ಯಗಳು ಭಿನ್ನವಾಗುತ್ತವೆ. ಪೈಲ್ವಾನನ ತೂಕ 220 ಪೌಂಡಗಳು; ಅದು 100 ಕಿಲೋಗ್ರಾಂಗಳೂ ಹೌದು. ಇಲ್ಲಿ 2.2 ಪೌಂಡಗಳು 1 ಕಿಲೋಗ್ರಾಂಗೆ ಸಮಾನ ಎಂಬುದು ಅಧ್ಯಾಹಾರ. ಆದ್ದರಿಂದ ಭಿನ್ನ ಮಾನದಂಡಗಳಲ್ಲಿ ಸಮಾನತೆ (ಈಕ್ವಿವಲೆನ್ಸ್) ಏರ್ಪಡಿಸಿ ವಿನಿಮಯ ಕೋಷ್ಟಕ (ಎಕ್ಸ್‍ಚೇಂಚ್ ಟೇಬಲ್) ವಿಧಿಸುವುದು ಸರ್ಕಾರದ ಇನ್ನೊಂದು ಹೊಣೆ.ರೂಢಿಯುಲ್ಲಿ ದಾಶಮಿಕ ಸಂಖ್ಯಾವ್ಯವಸ್ಥೆ ಪ್ರಚುಲಿತವಾಗಿರುವುದರಿಂದ ಇದರ ನಿಕಟವರ್ತಿಯಾಗಿರುವ ಮೆಟ್ರಿಕ್ (ಮಾಪನ) ವ್ಯವಸ್ಥೆ ವೈಜ್ಞಾನಿಕವಾಗಿ ಹೆಚ್ಚು ಜನಪ್ರಿಯತೆ ಗಳಿಸಿತು. ಮೊದಲು ಎಪ್.ಪಿ.ಎಸ್. ವ್ಯವಸ್ಥೆಯನ್ನು ಅನುಸರಿಸುತ್ತಿದ್ದ ಭಾರತಸರ್ಕಾರ ಶಾಸನರೀತ್ಯ (ದಿ ಸ್ಟ್ಯಾಂಡರ್ಡ್ ಮೆಷರ್ಸ್ ಅಂಡ್ ವೆಯ್ಟ್ಸ್ ಆಕ್ಟ್; 1950ರಲ್ಲಿ ಮಂಜೂರಾಯಿತು) ಮೆಟ್ರಿಕ್ ವ್ಯವಸ್ಥೆಯನ್ನು 1960 ರಲ್ಲಿ ರೂಢಿಗೆ ತಂದಿತು. ಒಂದೆರಡು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.
ದಾಶಮಿಕ ಸಂಖ್ಯಾವ್ಯವಸ್ಥೆ
[ಬದಲಾಯಿಸಿ]--- 1 ಅಂಗುಲ --- 2.54 ಸೆಂ.ಮೀ.
12 ಅಂ. 1 ಅಡಿ 12.0 ಅಂ. 30.48 ಸೆಂ.ಮೀ. 3 ಅ. 1 ಗಜ 36.0 ಅಂ. 91.44 ಸೆಂ.ಮೀ. 5.5 ಗ. 1 ಪೋಲ್ 16.5 ಅ. 5.03 ಮೀಟರ್ 4 ಫೋ. 1 ಚೈನ್ 22.0 ಗ. 20.12 ಮೀಟರ್ 10 ಚೈ. 1 ಫರ್ಲಾಂಗ್ 220.0 ಗ. 201.17 ಮೀಟರ್ 8 ಫ. 1 ಮೈಲಿ 1760.0 ಗ. 1,6093 ಕಿ. ಮೀ. ವಿವರ ಮೆಟ್ರಿಕ್ ಎಫ್.ಪಿ.ಎಸ್. ಸರಳಮಾನ 1 ಮೀಟರ್ 1.09361 ಗಜ ತೂಕಮಾನ 1 ಕಿಲೋಗ್ರಾಂ
...
2.20462ಪೌಂಡ್
ಕಾಲಮಾನ 1 ಸೆಕೆಂಡ್
...
1. ಸೆಕೆಂಡ್
ವಿಸ್ತೀರ್ಣಮಾನ 1 ಚ.ಮೀ./ಸೆಕೆಂಡಿಗೆ
...
1.19599 ಚ.ಗಜ 1.30795 ಘ.ಗ.
ಘನಗಾತ್ರಮಾನ 1 ಘ. ಮೀ.
...
219.969 ಗ್ಯಾಲನ್
ವೇಗಮಾನ 1 ಮೀ/ಸೆಕೆಂಡಿಗೆ
...
3.28084 ಅ/ಸೆ 2.23694 ಮೈ/ಗಂ
ಸಾಂದ್ರತೆಮಾನ 1 ಕಿ.ಗ್ರಾಂ/ಘ.ಮೀ.
...
0.062428 ಪೌಂ/ಘ.ಅ. 0.010022 ಪೌಂ/ಥ್ಯಾ.
ಬಲಮಾನ 1 ನ್ಯೂಟನ್
...
0.224809 ಪೌಂ.ಬಲ
ಸಂಮರ್ದಮಾನ 1 ನ್ಯೂ/ಚ.ಮೀ.
...
1,45038 ಘಿ 10-4 ಪೌ.ಬ./ಚ.ಇಂ
ಶಕ್ತಿಮಾನ 1 ಜೌಲ್
...
0.737562 ಅ.ಪೌಂ.ಬ. 9.47817 ಘಿ 10-4 ಬಿ.ಟಿ.ಯು
ಚೈತನ್ಯಮಾನ 1 ವಾಟ್
...
1.34102 ಘಿ 01-3 ಅಶ್ವಶಕ್ತಿ (ಎಚ್.ಪಿ.)
ಪರಮಾಣುಪ್ರಪಂಚ
[ಬದಲಾಯಿಸಿ]ಪರಮಾಣುಪ್ರಪಂಚಕ್ಕೆ ಸಾಗಿದಂತೆ ಮಾಪನಗಳು ಅನಂತಸೂಕ್ಷ್ಮವಾಗುತ್ತವೆ; ಬೃಹದ್ವಿಶ್ವದೆಡೆಗೆ ಗಮಿಸಿದಂತೆ ಮಾಪನಮಾನಗಳು ಬೃಹತ್ತಾಗಿ ಬೆಳೆಯುತ್ತವೆ. ಆದ್ದರಿಂದ ಇಲ್ಲೆಲ್ಲ ಮಾಪನಾಂಕಗಳು ಒಂದು ಎಣಿಕೆಯ ಮಿತಿಯಲ್ಲಿರಲು ಸಮರ್ಪಕವಾದ ಮಾನದಂಡಗಳನ್ನು ಬಳಸಬೇಕಾಗುವುದು. ಉದಾಹರಣೆಗೆ, ವಿದ್ಯುತ್ಕಾಂತ ತರಂಗಗಳ (ಎಲೆಕ್ಟ್ರೋ ಮ್ಯಾಗ್ನೆಟಿಕ್ ವೇವ್ಸ್) ತರಂಗಮಾನಗಳನ್ನು ಆಂಗಸ್ಟ್ರಮ್‍ಗಳಲ್ಲಿಯೂ ನಕ್ಷತ್ರಗಳ ದೂರಗಳನ್ನು ಜ್ಯೋತಿರ್ವರ್ಷಗಳಲ್ಲಿಯೂ ಅಳೆಯಬೇಕು. ಇವುಗಳ ಪರಿಮಾಣಗಳು ಕ್ರಮವಾಗಿ 10-8 ಸೆಂ.ಮೀ. ಮತ್ತು 946 ಘಿ 1010 ಕಿ.ಮೀ. ಕರ್ನಾಟಕದಲ್ಲಿ ಪ್ರಚುರವಾಗಿದ್ದ ಕೆಲವು ಮಾಪಕಗಳು ಅಳತೆ ದ್ರವ ಧಾನ್ಯಮಾನ
4 ಸೊಲಿಗೆ ... 1 ಪಡಿ 2 ಅಚ್ಚೇರು ... 1 ಸೇರು
4 ಪಡಿ ... 1 ಬಳ್ಳ 2 ಮಾನ ... 1 ಸೇರು
4 ಬಳ್ಳ ... 1 ಕೊಳಗ 2 ಸೇರು ... 1 ಬಳ್ಳ
20 ಕೊಳಗ ... 1 ಖಂಡುಗ 100 ಸೇರು ... 1 ಪಲ್ಲ
4 ಚಟಾಕು ... 1 ಪಾವು 10 ಸೇರು ... 1 ಪರೆ
1
ಅಚ್ಚೇರು
8
ಪರೆ
...
1
ಬಟ್ಟಿ
2 ಪಾವು
1 ಮಾನ 15 ಬಟ್ಟಿ ... 1 ಗಾಡಿ
ದ್ರವಮಾನ
4 ಸೊಲಿಗೆ ... 1 ಸಿದ್ದೆ 4 ಕುಡುತೆ ... 1 ಸೇರು
4 ಸಿದ್ದೆ ... 1` ಸೇರು 6 ಕುಡುತೆ ..
9 ಸೇರು ... 1 ಬೇಳೆ
(1 1/2 ಸೇರು)
1 ಕುತ್ತಿ
ಧಾನ್ಯಮಾನ
4 ಸಿದ್ದೆ ... 1 ಸೇರು 3 ಕಳಸಿಗೆ
14
ಸೇರು
...
1
ಕಳಸಿಗೆ
(42
ಸೇರುತೂಕ)
...
1
ಮಂಡಿ
ತೂಕ
4 ವೀಸ
2 ಅಡಿಸೇರು ... 1 ಪಂಚೇರು
1 ಹಾಗ ... 1 ಗುಲಗಂಜಿ 2 ಪಂಚೇರು ... 1 ದಡಿಯ
2 ಹಾಗ ... 1 ಅಡ್ಡ 4 ಚಡಿಯ
2
ಅಡ್ಡ
...
1
ಹಣ
8
ಪಂಚೇರು
1
9
ಹಣ
...
1
ವರಹ
40
ಸೇರು
1 ಮಣ
3 ವರಹ
20 ಮಣ ... 1 ಖಂಡಿ
3.5 ಹಣ ... 1 ರೂಪಾಯಿ 1 ರೂಪಾಯಿ ... 1 ತೊಲ 16 ಔನ್ಸ್ ... 1 ಪೌಂಡ್
1.5 ತೊಲ ... 1 ಚಟಾಕು 3.5 ಪೌಂಡ್ ... 1 ವೀಸ
3 ತೊಲ ... 1 ಅರೆಪಾವು 8 ವೀಸ 2 ಅರೆಪಾವು ... 1 ಪಾವು 28 ಪೌಂಡ್
1 ಮಣ
2 ಪಾವು ... 1 ಅಚ್ಚೇರು 4 ಮಣ ... 1 ಹಂಡ್ರಡ್‍ವೆಯ್ಟ್
2 ಅಚ್ಚೇರು
1 ಸೇರು 24 ರೂಪಾಯಿ
20 ಹಂಡ್ರೆಡ್‍ವೆಯ್ಟ್ ... 1 ಟನ್ (ಣoಟಿ)
1.4 ಸೇರು
1 ಸವ್ವಾಸೇರು 30 ರೂಪಾಯಿ
1,000 ಕಿ.ಗ್ರಾಂ
1 ಮೆ.ಟನ್(ಣoಟಿಟಿe)
2 ಸವ್ವಾಸೇರು ... 1 ಅಡಿಸೇರು ಎಣಿಕೆ
20 ವೀಳ್ಯದೆಲೆ 10 ಬಾಳೆಎಲೆ
1 ಕವಳಿಗೆ 12 ಅಂಗುಲ ... 1 ಅಡಿ 9 ಅಂಗುಲ ... 1 ಗೇಣು
5 ಕವಳಿಗೆ ... 1 ಚೌಕ 2 ಗೇಣು ... 1 ಮೊಳ
2 ಚೌಕ ... 1 ಕಟ್ಟು
3 ಅಡಿ 2 ಮೊಳ ... 1 ಗಜ
1 ಕಾಣಿ ... 1 ಬಿಡಿಗಾಸು 1 ದುಗ್ಗಾಣಿ 2 ಗಜ ... 1 ಬಾರು
2 ಕಾಸು ... .5 ದುಡ್ಡು 5 ಗಜ ... 1 ಪೋಲ್ 220 ಗಜ ... 1 ಫರ್ಲಾಂಗ್
3 ಕಾಸು
1 ಕಾಲಾಣಿ
1
ಬಿಲ್ಲೆ
1 ಮುಕ್ಕಾಲು 4 ಕಾಸು ... 1 ದುಡ್ಡು 8 ಫರ್ಲಾಂಗ ... 1 ಮೈಲಿ 1 ಅರ್ಧಾಣೆ 3 ಮೈಲಿ ... 1 ಹರದಾರಿ
6 ಕಾಸು ... 2 ಮುಉಕ್ಕಾಲು
12 ಕಾಸು ... 1 ಆಣೆ 7.5 ಚ.ಗಜ ... 1 ಅಣಿ 1 ಪಾವಲಿ 16 ಅಣಿ ... 1 ಗುಂಟಿ
4 ಆಣೆ ... 1 ಹಾಗ 40 ಗುಂಟೆ ... 1 ಎಕರೆ
2 ಪಾವಲಿ ... 1 ಅರ್ಧ ರೂ. 640 ಎಕರೆ ... 1 ಚ. ಮೈಲಿ
4 ಪಾವಲಿ ... 1 ರೂಪಾಯಿ
ಪರಿವರ್ತನ ಕೋಷ್ಟಕ
[ಬದಲಾಯಿಸಿ]ಕೆಳಗಿನವುಗಳನ್ನು ಇವುಗಳಿಗೆ ಪರಿವರ್ತಿಸಲು ಇದರಿಂದ ಗುಣಿಸಿ
(x) (ಥಿ) (ಜಿ) ಥಿ=ಜಿx
ಅಡಿ ... ಮೀಟರ್ ... 0.305
ಅಶ್ವಸಾಮಥ್ರ್ಯ(ಮೆಟ್ರಿಕ್) ... ಕಿಲೋವಾಟ್ ... 0.736
ಇಂಚು ... ಸೆಂಟಿಮೀಟರ್ ... 2.54
ಎಕರೆ ... ಚದರ ಮೀಟರ್ ... 40.47
ಎಕರೆ ... ಅಡಿ ... 43.560
ಕಿಲೋಗ್ರಾಂ ... ಪೌಂಡು ... 2.205
ಕಿಲೋಗ್ರಾಂ ... ಸೇರು ... 1.072
ಕಿಲೋಮೀಟರ್ ... ಮೈಲಿ ... 0.621
ಕಿಲೋವಾಟ್ ... ಅಶ್ವಸಾಮಥ್ರ್ಯ ... 1.341
ಕ್ವಿಂಟಲ್ ... ಕಿಲೋಗ್ರಾಂ ... 100
ಗಜ ... ಮೀಟರ್ ... 0.9144
ಗ್ಯಾಲನ್ (ಇಂಪೀರಿಯಲ್) ... ಲೀಟರ್ ... 4.546
ಗ್ಯಾಲನ್ (ಯು.ಎಸ್.) ... ಲೀಟರ್ ... 3.785
ಗ್ರಾಮ್ ... ಗ್ರೈನ್ ... 15.432
ಗ್ರಾಮ್ ... ಔನ್ಸ್ ... 0.035
ಗ್ರಾಮ್ ... ತೊಲ ... 0.085
ಗ್ರೈನ್ ... ಕ್ಯಾರೆಟ್ (ಮೆಟ್ರಿಕ್) ... 0.324
ಗ್ರೈನ್ ... ಗ್ರಾಂ ... 0.065
ಗ್ರೈನ್ ... ಔನ್ಸ್ ... 0.002
ಗ್ರೈನ್ ... ತೊಲ ... 0.006
ಘನ ಅಡಿ ... ಘನ ಮೀಟರ್ ... 0.028
ಘನ ಅಡಿ ... ಗ್ಯಾಲನ್ (ಇಂ) ... 6.229
ಘನ ಅಡಿ ... ಲೀಟರ್ ... 28.316
ಘನ ಸೆಂಟಿಮೀಟರ್ ... ಘನ ಇಂಚು ... 0.061
ಘನ ಸೆಂಟಿಮೀಟರ್ ... ಔನ್ಸ್ (ದ್ರವ) ... 0.028
ಘನ ಸೆಂಟಿಮೀಟರ್ ... ಲೀಟರ್ ... 0.001
ಟನ್ ... ಮಣ ... 27.222
ಟನ್ ... ಮೆಟ್ರಿಕ್ ಟನ್ (ಖಿoಟಿಟಿe) ... 1.016
ತೊಲ ... ಔನ್ಸ್ ... 0.4114
ತೊಲ ... ಗ್ರಾಂ ... 11.664
ಪೌಂಡ್ ... ಕಿಲೋಗ್ರಾಂ ... 0.454
ಪೌಂಡ್ ... ಸೇರು ... 0.486
ಫರ್ಲಾಂಗ್ ... ಮೀಟರ್ ... 201.168
ಫಾದಂ ... ಅಡಿ ... 6
ಬುಷಿಲ್ ... ಗ್ಯಾಲನ್ (ಇಂ) ... 8
ಬುಷಿಲ್ ... ಲೀಟರ್ ... 36.368
ಮಣ ... ಮೆಟ್ರಿಕ್‍ಟನ್ ... 0.0372
ಮಣ ... ಟನ್ ... 0.0367
ಮೀಟರ್ ... ಇಂಚು ... 39.37
ಮೀಟರ್ ... ಗಜ ... 1.0936
ಮೈಲಿ ... ಅಡಿ ... 5.280
ಮೈಲಿ ... ಕಿಲೋಮೀಟರ್ ... 1.609
ರಿಮ್ ... ಹಾಳೆ ... 500
ಲೀಟರ್ ... ಗ್ಯಾಲನ್ (ಇಂ.) ... 0.23
ಸೆಂಟಿಗ್ರಾಂ ... ಗ್ರೈನ್ ... 0.154
ಸೆಂಟಿಮೀಟರ್ ... ಇಂಚು ... 0.394
ಹಂಡ್ರಡ್ ವೆಯ್ಟ್ ... ಕಿಲೋಗ್ರಾಂ ... 50.802
ಹಂಡ್ರಡ್ ವೆಯ್ಟ್ ... ಮಣ ... 1.361
ಹಂಡ್ರಡ್ ವೆಯ್ಟ್ ... ಟನ್ ... 0.05
ಹಂಡ್ರಡ್ ವೆಯ್ಟ್ ... ಮೆಟ್ರಿಕ್ ಟನ್ ... 0.056