ಅಳತೆಗಳು
ಅಳತೆಗಳು
[ಬದಲಾಯಿಸಿ]ನಿತ್ಯ ಜೀವನದಲ್ಲಿ ತೂಕ ಮತ್ತು ಅಳತೆಗಳು ಪ್ರಮುಖ ಪಾತ್ರವಹಿಸುತ್ತವೆ. ಹೂ ಮಾರುವಾಕೆ ಒಂದು ಮೊಳ ಅಥವಾ ಮಾರಿಗೆ ಇಷ್ಟು ರೂಪಾಯಿ ಎಂದು ಹೇಳುತ್ತಾಳೆ. ಮೊಳ, ಮಾರು, ಹಿಡಿ, ಬೊಗಸೆ, ಹೊರೆ ಇತ್ಯಾದಿಗಳು ಅಳತೆಯ ಬೇರೆ ಬೇರೆ ಪ್ರಮಾಣಗಳು. ವಸ್ತುಗಳನ್ನು ವಿನಿಮಯ ಮಾಡಿಕೊಳ್ಳಲು ಮನುಷ್ಯ ಎಂದು ತೊಡಗಿದನೋ ಅಂದಿನಿಂದಲೇ ತೂಗುವುದು ಮತ್ತು ಅಳೆಯುವುದು ಪ್ರಾರಂಭವಾಯಿತು. ಬೇರೆ ಬೇರೆ ನಾಗರೀಕತೆಗಳಲ್ಲಿ ವಿವಿಧ ರೀತಿಯ ತೂಕ ಮತ್ತು ಅಳತೆ ಪದ್ಧತಿಗಳಿದ್ದವು. ಈಜಿಪ್ಟ್ ಮತ್ತು ಮೆಸಪಟೋಮಿಯಾಗಳಲ್ಲಿ ಉದ್ದವನ್ನು ಮೊಳದ ಆಧಾರದ ಮೇಲೆ ಅಳೆಯುತ್ತಿದ್ದರು. ನ್ಯಾಯ ಬದ್ಧವಾದ ಉದ್ದವನ್ನು ರೂಪಿಸಿ ಲೋಹದ ಸಲಾಕೆಯನ್ನು ಮಾಡುತ್ತಿದ್ದರು. ಅದನ್ನು ದೇವಾಲಯ ಅಥವಾ ಅರಮನೆಯಲ್ಲಿಟ್ಟು ಅದರ ಸಮಾನ ಉದ್ದದ ಸಲಾಕೆಗಳನ್ನು ಜನರ ಉಪಯೋಗಕ್ಕೆ ತಯಾರಿಸುತ್ತಿದ್ದರು. ೧೨೮ ಗಗುಲಗಂಜಿಗಳು ಒಂದು ತೊಲ ಅಥವಾ ೧೧.೬೬೪ ಗ್ರಾಂ. ಎಂದು ಲೆಕ್ಕ. ಕ್ರಮೇಣ ವ್ಯಾಪಾರ ಸಂಬಂಧ ವಿವಿಧ ದೇಶಗಳಲ್ಲಿ ಹಬ್ಬಿದ್ದಾಗ ಏಕರೂಪದ ತೂಕ ಮತ್ತು ಅಳತೆಯ ಅಗತ್ಯ ಉಂಟಾಯಿತು. ೧೩ನೇ ಶತಮಾನದ ವೇಳೆಗೆ ಇಂಗ್ಲೆಂಡಿನಲ್ಲಿ ನ್ಯಾಯಬದ್ಧ ಪ್ರಮಾಣಗಳು ಬಳಕೆಗೆ ಬಂದವು. ಕ್ರಮೇಣ ಅದೇ ಅಳತೆಗಳು ವಿಶ್ವದೆಲ್ಲೆಡೆ ಹಬ್ಬಿದವು. ೧೭೯೫ರಲ್ಲಿ ಫ್ರಾನ್ಸ್ ನಲ್ಲಿ ಅಳತೆ ಮತ್ತು ತೂಕದ ದಶಮಾಂಶ ಪದ್ಧತೆ ಜಾರಿಗೆ ಬಂದಿತು. ಭೂಮಿಯ ಪರಿಧಿಯ ಉದ್ದದಲ್ಲಿ ೪೦ ಲಕ್ಷದಲ್ಲೊಂದು ಪಾಲು ಉದ್ದವನ್ನು ೧ ಮೀಟರ್ ಎಂದು ಕರೆಯಲಾಯಿತು. ತೂಕದ ಅಳತೆ ಕಿಲೋ. ಗ್ರಾಂ. ಆಯಿತು. ೧೮೭೦ರಲ್ಲಿ ತೂಕ ಮತ್ತು ಅಳತೆಯ ಅಂತರಾಷ್ಟ್ರೀಯ ಸಮ್ಮೇಳನವೊಂದು ನಡೆದು ಮೀಟರ್ ಮತ್ತು ಕಿಲೋ. ಗ್ರಾಂ. ಪ್ರಮಾಣಗಳನ್ನು ಕರಾರುವಕ್ಕಾಗಿ ನಿರೂಪಿಸಿ ಆ ಪದ್ಧತಿ ಅನುಸರಿಸುವ ಎಲ್ಲಾ ದೇಸ್ಜಹಗಳಿಗೂ ಮಾದರಿಗಳನ್ನು ಹಂಚುವ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಅದರ ಫಲವಾಗಿ ಜನಿಸಿದ ಸಂಸ್ಥೆಯು "ಇಂಟರ್ ನ್ಯಾಷನಲ್ ಬ್ಯೂರೋ ಆಫ್ ವೇಟ್ಸ್ ಅಂಡ್ ಮೇಷರ್ಸ್"
ಅಳತೆಯ ವಿಧಾನಗಳು
[ಬದಲಾಯಿಸಿ]ಬ್ರಿಟಿಷ್ ಪದ್ಧತಿ ಮತ್ತು ಮೆಟ್ರಿಕ್ ಪದ್ಧತಿಗಳು ಅಳತೆಯ ಎರಡು ಪದ್ಧತಿಗಳು.ವಿಶ್ವದಾದ್ಯಂತ ಬ್ರಿಟಿಷ್ ಪದ್ಧತಿಯೇ ಬಳಕೆಯಲ್ಲಿದ್ದರೂ ಮೆಟ್ರಿಕ್ ಪದ್ಧತಿಯು ದಶಮಾಂಶ ಪದ್ಧತಿಯ ಅಳತೆಯಾದುದರಿಂದ ಲೆಕ್ಕಾಚಾರಗಳಿಗೆ ಅನುಕೂಲವಾಗಿತ್ತು. ಹಾಗಾಗಿ ಹಲವು ದೇಶಗಳಲ್ಲಿ ಮೆಟ್ರಿಕ್ ಪದ್ಧತಿ ಜಾರಿಗೆ ಬಂತು. ಭಾರತದಲ್ಲಿ ಮೊದಲು ಬ್ರಿಟಿಷ್ ಪದ್ಧತಿ ಇತ್ತು. ಸ್ವಾತಂತ್ರ್ಯ ನಂತರ ೧೯೫೭ ಜುಲೈ ೧ರಂದು ಭಾರತ ಮೆಟ್ರಿಕ್ ಪದ್ಧತಿಯನ್ನು ಜಾರಿಗೆ ತಂದಿತು.
ಉದ್ದದ ಅಳತೆಗಳು
[ಬದಲಾಯಿಸಿ]ಬ್ರಿಟಿಷ್ ಪದ್ಧತಿಯಲ್ಲಿ ಗಜ ಮತ್ತು ಮೆಟ್ರಿಕ್ ಪದ್ಧತಿಯಲ್ಲಿ ಮೀಟರ್ ಉದ್ದದ ಮೂಲಮಾನಗಳು ದಶಮಾಂಶ ಪದ್ಧತಿಯಲ್ಲಿ ೧೦೦ ಮತ್ತು ೧೦೦೦ ರಿಂದ ಮೀಟರನ್ನು ಗುಣಿಸುವುದರಿಂದ ಹೆಕ್ಟೋಮೀಟರ್ ಮತ್ತು ಕಿಲೋ ಮೀಟರ್ ದೊರೆಯುತ್ತವೆ. ಹಾಗೆಯೇ ಮೀಟರನ್ನು ೧೦೦ ಮತ್ತು ೧೦೦೦ದಿಂದ ಭಾಗಿಸುವುದರಿಂದ ಸೆಂಟಿ ಮೀಟರ್ ಮತ್ತು ಮಿಲಿ ಮೀಟರ್ ದೊರೆಯುತ್ತವೆ.
ಕನ್ನಡಿಗರು ಬಳಸುತ್ತಿದ್ದ ಕೆಲವು ಅಳತೆಗಳು
[ಬದಲಾಯಿಸಿ]ಅಳತೆ | ತಿಳಿವು |
---|---|
ಗೇಣು | ಹೆಬ್ಬೆರಳ ಒಂದು ಗೆಣ್ಣು |
ಅಡಿ | ಒಂದು ಹೆಜ್ಜೆಯ ಅಳವು |
ಮೊಳ | ಮುಂಗೈಯಿಂದ ನಡುಬೆರಳ ತುದಿವರೆಗೆ |
ಮಾರು | ಎರಡೂ ಕಾಯನ್ನು ನೇರವಾಗಿ ಚಾಚಿದಾಗ ಒಂದು ಕೈ ತುದಿಯಿಂದ ಇನ್ನೊಂದು ಕೈ ತುದಿಯವರೆಗೆ |
ಆಳು | ಒಬ್ಬ ಆಳಿನಶ್ಟು ಎತ್ತರ |
ಹೆಜ್ಜೆ | ಒಂದು ಹೆಜ್ಜೆಯಶ್ಟು |
ಗುಡ್ಡದೆರಹು | ಒಂದು ಕಿ.ಮೀ.ನಶ್ಟು |
ಬೆಟ್ಟದೆರಹು | ಹತ್ತು ಗುಡ್ಡ/ಕಿ.ಮೀ.ನಶ್ಟು |
ಕಾಡುದೆರಹು | ಐದು ಬೆಟ್ಟ / ಐವತ್ತು ಕಿ.ಮೀ.ನಶ್ಟು |
ಕಡಲುದೆರಹು | ಸಾವಿರ ಗುಡ್ಡ / ಸಾವಿರ ಕಿ.ಮೀ.ನಶ್ಟು |
ನೆಲದೆರಹು | ನೆಲದ ಒಂದು ಸುತ್ತಳತೆ / ೪೦ ಸಾವಿರ ಕಿ.ಮೀ. |
ಕಾಲದ ಅಳತೆ
[ಬದಲಾಯಿಸಿ]ಕಾಲದ ಅಳತೆ ಎರಡು ಪದ್ಧತಿಗಳಲ್ಲೂ ಸೆಕೆಂಡ್ ಆಗಿದೆ. ಸರಾಸರಿ ಸೌರ ದಿನವೊಂದರ ೮೬,೪೦೦ನೇ ಒಂದು ಭಾಗ ಒಂದು ಸೆಕೆಂಡ್. ಆದರೆ ಈಗ ಇದಕ್ಕಿಂತ ಇನ್ನೂ ನಿಖರವಾದ ಮಾನ ನಿರೂಪಿಸಲಾಗಿದೆ. ಇದರ ಪ್ರಕಾರ ಸೀಸಿಯಂ-೧೩೩ ಸಮಸ್ಥಾನಿಯು ಅತ್ಯುನ್ನತವಾದ ಎರಡು ಸ್ಥಿತಿಗಳ ಮಧ್ಯೆ ಹೊರಸೂಸುವ ವಿಕಿರಣ ಆವರ್ತನಾಂಕ ೯,೧೯೨,೬೧೩.೭೭೦ನ್ನು ಒಂದು ಸೆಕೆಂಡ್ ಎಂದು ನಿರೂಪಿಸಲಾಗಿದೆ.
ದ್ರವ್ಯರಾಶಿಯ ಅಳತೆ
[ಬದಲಾಯಿಸಿ]ಪೌಂಡ್ ಮತ್ತು ಕಿಲೋ. ಗ್ರಾಂ. ದ್ರವ್ಯರಾಶಿಯ ಪ್ರಮಾಣಿತ ಮಾನಗಳು . ಲಂಡನ್ನಿನಲ್ಲಿರುವ ಪ್ಲಾಟಿನಂ ಲೋಹದ ತುಂಡಿನ ದ್ರವ್ಯರಾಶಿ ಒಂದು ಪೌಂಡ್. ಫ್ರಾನ್ಸಿನ ಸೇವ್ರ್ ನಗರದಲ್ಲಿರುವ ಪ್ಲಾಟಿನಂ ಲೋಹದ ಒಂದು ತುಂಡಿನ ದ್ರವ್ಯರಾಶಿ ಕಿಲೋ. ಗ್ರಾಂ.