ಅಲ್ತಮೀರ
ಗೋಚರ
ಸ್ಪೇನ್ ದೇಶದ ಉತ್ತರ ಭಾಗದಲ್ಲಿ ಕ್ಯಾಂಟಿಬ್ರಿಯನ್ ಪರ್ವತಶ್ರೇಣಿಯಲ್ಲಿರುವ ಗುಹೆ. ಹಳೆ ಶಿಲಾಯುಗದ ಗವಿಚಿತ್ರಗಳಿಗೆ ಪ್ರಸಿದ್ಧವಾಗಿದೆ. ಹೊರಭಾಗದಲ್ಲಿ ಸುಣ್ಣಕಲ್ಲು ಬೆಟ್ಟಗಳಿದ್ದು, ಸು.27ಮೀ.ವರೆಗೆ ಒಳಗೆ ಹೋಗಬಹುದಾದ ಈ ಗುಹೆಯಲ್ಲಿರುವ ಮುಖ್ಯ ಚಿತ್ರಗಳೆಲ್ಲವನ್ನೂ ಗುಹೆಯ ಪ್ರಾರಂಭದಿಂದ ಸು.18-30ಮೀ ದೂರದಲ್ಲೇ ಕಾಣಬಹುದು. ಗೂಳಿ, ಕಾಡುಹಂದಿ, ಕಾಡುಕುದುರೆ, ಕಾಟಿ, ಜಿಂಕೆ ಮುಂತಾದ ಹಲವು ಕಾಡುಮೃಗಗಳ ವರ್ಣರಂಜಿತ ಚಿತ್ರಗಳು ಇಲ್ಲಿಯ ವೈಶಿಷ್ಟ್ಯ. ಗೂಳಿಗಳ ಬಲಿಷ್ಠ ದೃಢಕಾಯ ಎದ್ದು ಕಾಣುತ್ತದೆ. ಶಿಲಾಯುಗದ ಕಾಲಕ್ಕೆ ಸೇರಿದ್ದಾದರೂ ಇಲ್ಲಿಯ ಬಹುಪಾಲು ಚಿತ್ರಗಳು ಹಳೆಯ ಶಿಲಾಯುಗದ ಕೊನೆಯ ಭಾಗದಲ್ಲಿದ್ದ ಮ್ಯಾಗ್ಡಲೇನಿಯನ್ ಸಂಸ್ಕೃತಿಗೆ ಸೇರಿದ್ದವು. ಇಂಗಾಲ-14 ವೈಜ್ಞಾನಿಕ ವಿಧಾನದಿಂದ ಈ ಚಿತ್ರಗಳ ಕಾಲಮಾನ ಸು.ಪ್ರ.ಶ.ಪೂ. 20,000-15,000ಗಳಷ್ಟು ಪುರಾತನದವೆಂದು ಗೊತ್ತುಮಾಡಲಾಗಿದೆ.ಅಲ್ತಮೀರ ಗುಹೆ ಇತಿಹಾಸಪೂರ್ವದಲ್ಲಿ ಗುಹಾ ವರ್ಣಚಿತ್ರಗಳು ದೊರಕಿರುವ ಗುಹೆಗಳಗಳಲ್ಲಿ ಎರಡನೆಯ ಗುಹೆಯಾಗಿದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: