ವಿಷಯಕ್ಕೆ ಹೋಗು

ಅರ್ಧ್ ಸತ್ಯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ಧ್ ಸತ್ಯ
ಭಿತ್ತಿಪತ್ರ
ನಿರ್ದೇಶನಗೋವಿಂದ್ ನಿಹಲಾನಿ
ನಿರ್ಮಾಪಕಮನ್‍ಮೋಹನ್ ಶೆಟ್ಟಿ
ಪ್ರದೀಪ್ ಉಪ್ಪೂರ್
ಲೇಖಕವಸಂತ್ ದೇವ್ (ಸಂಭಾಷಣೆ)
ಚಿತ್ರಕಥೆವಿಜಯ್ ತೆಂಡೂಲ್ಕರ್
ಕಥೆಎಸ್. ಡಿ. ಪನ್ವಲ್ಕರ್
ಆಧಾರಎಸ್. ಡಿ ಪಾನ್ವಲ್‍ಕರ್‌ರ ಸಣ್ಣ ಕಥೆಯಾದ ಸೂರ್ಯಾ ಮೇಲೆ ಆಧಾರಿತ
ಪಾತ್ರವರ್ಗಓಂ ಪುರಿ
ಸ್ಮಿತಾ ಪಾಟೀಲ್
ಅಮ್ರೀಶ್ ಪುರಿ
ಶಫಿ ಇನಾಮ್‍ದಾರ್
ನಾಸೀರುದ್ದೀನ್ ಶಾ
ಸದಾಶಿವ್ ಅಮ್ರಾಪುರ್‌ಕರ್
ಸಂಗೀತಅಜೀತ್ ವರ್ಮನ್
ಛಾಯಾಗ್ರಹಣಗೋವಿಂದ್ ನಿಹಲಾನಿ
ಸಂಕಲನರೇಣು ಸಲೂಜಾ
ಬಿಡುಗಡೆಯಾಗಿದ್ದು
 • 19 ಆಗಸ್ಟ್ 1983 (1983-08-19) (India)
ಅವಧಿ130 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಬಂಡವಾಳ೬೭ ಲಕ್ಷ
ಬಾಕ್ಸ್ ಆಫೀಸ್೧.೫೬ ಕೋಟಿ

ಅರ್ಧ್ ಸತ್ಯ 1983 ರ ಒಂದು ಹಿಂದಿ ಚಲನಚಿತ್ರ. ಇದನ್ನು ಗೋವಿಂದ್ ನಿಹಲಾನಿ ನಿರ್ದೇಶಿಸಿದ್ದಾರೆ. ಖ್ಯಾತ ಮರಾಠಿ ನಾಟಕಕಾರ ವಿಜಯ್ ತೆಂಡೂಲ್ಕರ್ ಈ ಚಿತ್ರದ ಚಿತ್ರಕಥೆಯನ್ನು ಬರೆದಿದ್ದಾರೆ; ಇದು ಎಸ್.‌ಡಿ. ಪನ್ವಾಲ್ಕರ್‌ರ 'ಸೂರ್ಯ' ಎಂಬ ಸಣ್ಣ ಕಥೆಯನ್ನು ಆಧರಿಸಿದೆ ಮತ್ತು ವಸಂತ್ ದೇವ್ ಇದರ ಸಂಭಾಷಣೆಗಳನ್ನು ಬರೆದಿದ್ದಾರೆ.[೧]

ಈ ಮೆಚ್ಚುಗೆ ಪಡೆದ ಪೋಲಿಸ್ ಚಿತ್ರದಲ್ಲಿ ನಾಯಕನಾದ ಓಂ ಪುರಿ ತನ್ನ ಸುತ್ತಲಿನ ದುಷ್ಕೃತ್ಯಗಳೊಂದಿಗೆ ಮತ್ತು ತನ್ನದೇ ಆದ ದುರ್ಬಲತೆಗಳೊಂದಿಗೆ ಹೋರಾಡುತ್ತಿರುವ ಪೊಲೀಸಿನವನಾಗಿದ್ದಾನೆ. ಈ ಚಿತ್ರದಲ್ಲಿ ಅಮ್ರೀಶ್ ಪುರಿ, ಸ್ಮಿತಾ ಪಾಟೀಲ್, ನಸೀರುದ್ದೀನ್ ಷಾ ಮತ್ತು ಸದಾಶಿವ್ ಅಮ್ರಾಪುರ್ಕರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಮರಾಠಿ ಬರಹಗಾರ ದಿಲೀಪ್ ಚಿತ್ರೆಯವರ ವಿಷಯ ಕಾವ್ಯವಿದೆ. ಚಿತ್ರದ ಶೀರ್ಷಿಕೆ ದಿಲೀಪ್ ಚಿತ್ರೆ ಬರೆದ ಕವಿತೆಯಿಂದ ಬಂದಿದೆ.[೨]

ಅರ್ಧ್ ಸತ್ಯ ಅನೇಕ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಒಂದು ಪ್ರಖ್ಯಾತ ಚಿತ್ರವಾಯಿತು. [೩] ಇದನ್ನು ಈಗಲೂ ಭಾರತದಲ್ಲಿ ತಯಾರಿಸಲಾದ ಅತ್ಯುತ್ತಮ ಪೋಲಿಸ್ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. [೪] ಈ ಚಿತ್ರದ ಉತ್ತರಭಾಗವೂ ಬಿಡುಗಡೆಗೊಂಡಿತು.

ಕಥಾವಸ್ತು[ಬದಲಾಯಿಸಿ]

ಒಂದು ಪಾರ್ಟಿಯಲ್ಲಿ ಪೊಲೀಸ್ ಅಧಿಕಾರಿಯಾದ ಅನಂತ್ ವೇಲನ್‍ಕರ್ (ಓಂ ಪುರಿ) ಸ್ಥಳೀಯ ಕಾಲೇಜಿನಲ್ಲಿ ಸಾಹಿತ್ಯದ ಉಪನ್ಯಾಸಕಿಯಾದ ಜ್ಯೋತ್ಸ್ನಾ ಗೋಖಲೆಯನ್ನು (ಸ್ಮಿತಾ ಪಾಟೀಲ್) ಭೇಟಿಯಾಗುವ ದೃಶ್ಯದೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಅನಂತ್ ಬಾಂಬೆ ಪೊಲೀಸಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿರುತ್ತಾನೆ. ಸಿದ್ಧಾಂತದ ಬಗ್ಗೆ ಸ್ವಲ್ಪ ಆರಂಭಿಕ ಚಕಮಕಿಗಳ ಹೊರತಾಗಿಯೂ ಅವರು ಒಳ್ಳೆ ಸ್ನೇಹ ಬೆಳೆಸಿಕೊಂಡು, ಸ್ನೇಹವು ಸಂಬಂಧವಾಗಿ ಅರಳುತ್ತದೆ.

ಅನಂತ್ ತನ್ನ ಕೆಲಸಕ್ಕೆ ಶ್ರದ್ಧೆ, ಉತ್ಸಾಹ ಮತ್ತು ಒಂದು ನಿರ್ದಿಷ್ಟ ಆದರ್ಶವಾದವನ್ನು ತರುತ್ತಾನೆ. ಆದರೆ ಕೆಲಸ ಕಠಿಣವಾಗಿರುತ್ತದೆ. ಸ್ಥಳೀಯ ಮಾಫಿಯಾ, ಪೊಲೀಸರು ಮತ್ತು (ಭ್ರಷ್ಟ) ರಾಜಕಾರಣಿಗಳ ನಡುವೆ ಆಳವಾದ ಸಂಬಂಧವಿರುತ್ತದೆ. ಸ್ವತಃ ಪ್ರಾಮಾಣಿಕವಾಗಿದ್ದರೂ, ಅನಂತ್ ಪೊಲೀಸ್ ಶ್ರೇಣಿಯ ಕೆಳ ಹಂತಗಳಲ್ಲಿ ಇರುತ್ತಾನೆ ಮತ್ತು ತನ್ನ ಪ್ರದೇಶದ ವ್ಯವಹಾರಗಳ ಸ್ಥಿತಿಯ ಮೇಲೆ ಸೀಮಿತ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತಾನೆ.

ಅನಂತ್ ಮೂರು ಸಾಮಾನ್ಯ ಕೊಲೆಗಡುಕರನ್ನು ಬಂಧಿಸಿದಾಗ, ಅವನು ಸ್ಥಳೀಯ ಮಾಫಿಯಾದಲ್ಲಿ ಅವರ ಯಜಮಾನನಾದ ರಾಮಾ ಶೆಟ್ಟಿಯನ್ನು (ಸದಾಶಿವ್ ಅಮ್ರಾಪುರ್ಕರ್)ಭೇಟಿಯಾಗಬೇಕೆಂದು ಹೇಳಲಾಗುತ್ತದೆ. ತನ್ನ ಚಮಚಾಗಳನ್ನು ಹೊರತರುವ ಅಥವಾ ಅನಂತ್ ತನ್ನೊಂದಿಗೆ ಸೇರಿಕೊಳ್ಳುವಂತೆ ಪ್ರಚೋದಿಸುವ ರಾಮಾ ಶೆಟ್ಟಿಯ ಎಲ್ಲ ಪ್ರಯತ್ನಗಳನ್ನು ಅನಂತ್ ನಿರಾಕರಿಸುತ್ತಾನೆ. ಶೆಟ್ಟಿ ಅನಂತ್ ಮೇಲೆ ಕಣ್ಣಿಡಲು ನಿರ್ಧರಿಸುತ್ತಾನೆ.

ಸ್ವಲ್ಪ ಸಮಯದ ನಂತರ, ಸ್ಥಳೀಯ ಕೊಳೆಗೇರಿಯ ಒಬ್ಬ ಸೌಮ್ಯ ವ್ಯಕ್ತಿಯು ತನ್ನ ಹೆಂಡತಿಗೆ ಕಿರುಕುಳ ನೀಡುತ್ತಿರುವ ಕೆಲವು ಹಿಂಸಕರ ಬಗ್ಗೆ ದೂರು ನೀಡುತ್ತಾನೆ. ಅನಂತ್ ಅವರನ್ನು ಹುಡುಕಿ, ಸೆರೆಮನೆಗೆ ಹಾಕಿ ತೀವ್ರವಾಗಿ ಹೊಡೆಯುತ್ತಾನೆ. ಪರಿಣಾಮವಾಗಿ ಸ್ಥಳೀಯ ಶಾಸಕನು ಅನಂತ್‍ನನ್ನು ಅಮಾನತುಗೊಳಿಸಬೇಕೆಂದು ಕೇಳುತ್ತಾನೆ.

ಹಿಂಸಕರು ಶಾಸಕನ ನೆಚ್ಚಿನ ಬಂಟರಾಗಿದ್ದು ಚುನಾವಣೆಗಳು ಮತ್ತು ರಾಜಕೀಯ ರ್‍ಯಾಲಿಗಳಲ್ಲಿ ಬಲವನ್ನು ನೀಡುವವರೆಂದು ಅವನ ಮೇಲಧಿಕಾರಿಯಾದ ಇನ್ಸ್‌ಪೆಕ್ಟರ್ ಹೈದರ್ ಅಲಿ ಪೆಚ್ಚಾಗಿರುವ ಅನಂತ್‍ಗೆ ವಿವರಿಸುತ್ತಾನೆ. ಅನಂತ್ ಸ್ಪಷ್ಟವಾದ ಆತ್ಮಸಾಕ್ಷಿಯೊಂದಿಗೆ ಪ್ರತಿಭಟಿಸುತ್ತಾನೆ (ತಾನು ಯಾವುದೇ ತಪ್ಪು ಮಾಡಿಲ್ಲ) ಮತ್ತು ನ್ಯಾಯಮಂಡಳಿಯನ್ನು ಎದುರಿಸಲು ಸಿದ್ಧನಿರುತ್ತಾನೆ. ಅದು ಅಷ್ಟೇನೂ ದೂರ ಹೋಗುವುದಿಲ್ಲ ಎಂದು ಹೈದರ್ ಅಲಿ ವಿವರಿಸುತ್ತಾನೆ. ನ್ಯಾಯಮಂಡಳಿಗಳು ಅನಿರ್ದಿಷ್ಟವಾಗಿ ವಿಳಂಬಗೊಳ್ಳುತ್ತವೆ ಅಥವಾ (ಭ್ರಷ್ಟ ರಾಜಕಾರಣಿಗಳಿಂದ) ಮೋಸದಿಂದ ನಡೆಸಲ್ಪಡುತ್ತವೆ, ಮತ್ತು ಆ ಸಮಯದಲ್ಲಿನ ಅಮಾನತು ಒಬ್ಬರ ದಾಖಲೆಯಲ್ಲಿ ಶಾಶ್ವತ ಕಪ್ಪು ಗುರುತಾಗಿರುತ್ತದೆ (ಏಕೆಂದರೆ ಬೇರೆ ಯಾವುದೇ ರಾಜಕಾರಣಿಯು ಅಂತಹ ತೊಂದರೆಗಾರನೊಂದಿಗೆ ವ್ಯವಹರಿಸಲು ಸಿದ್ಧನಿರುವುದಿಲ್ಲ).

ಅನಂತ್‌ಗೆ ಆರಂಭದಲ್ಲಿ ದಿಗ್ಭ್ರಮೆಯಾಗುತ್ತದೆ. ಆದರೆ "ಕೇಂದ್ರ" ಅಥವಾ ಅಧಿಕಾರದ ರಾಷ್ಟ್ರೀಯ ಪೀಠವಾದ ನವದೆಹಲಿಯಲ್ಲಿ ಸಂಪರ್ಕ ಹೊಂದಿರುವ ಮಧ್ಯವರ್ತಿಯಾದ ದೇಸಾಯಿಯನ್ನು ಕರೆತರುವ ಹೈದರ್‌ನ ಯೋಜನೆಯೊಂದಿಗೆ ಸಹಕರಿಸುತ್ತಾನೆ. ಈ ವಿಷಯವನ್ನು ಸದ್ದಿಲ್ಲದೆ ಮುಚ್ಚಿಹಾಕಲು ದೇಸಾಯಿ ಉನ್ನತ ಅಧಿಕಾರವನ್ನು ಬಳಸುತ್ತಾನೆ. ಈ ಘಟನೆಯಿಂದ ಅನಂತ್‌ನ ನೀತಿಸೂತ್ರಗಳು ಅಲುಗಾಡಿ ಹೋಗುತ್ತವೆ: ಅಪರಾಧಿಗಳ ಮೇಲೆ ತನ್ನ ನೀತಿಯುಳ್ಳ ಕ್ರಮಗಳನ್ನು ಎತ್ತಿಹಿಡಿಯಲು ಅವನು ಕನಿಷ್ಠತಮ ಕಾನೂನುಬದ್ಧ ವಿಧಾನಗಳನ್ನು ಬಳಸಬೇಕಾಯಿತು.

ಅನಂತ್ ತನ್ನ ಬಾಲ್ಯದ ಬಗ್ಗೆ ಪರ್ಯಾಲೋಚಿಸುತ್ತಾನೆ. ಅವನ ತಂದೆ (ಅಮ್ರಿಶ್ ಪುರಿ) ಗ್ರಾಮದ ಪೊಲೀಸ್ ಪಡೆಯಲ್ಲಿ ಫೌಜ್ದಾರ್ (ಕಾನ್‌ಸ್ಟೆಬಲ್) ಆಗಿ ನಿವೃತ್ತನಾದನು. ಅವನ ತಂದೆ ಕಠಿಣ ಮತ್ತು ಹಿಂಸಾತ್ಮಕ ವ್ಯಕ್ತಿಯಾಗಿದ್ದನು. ಅತಿ ಸಣ್ಣ ನೆಪವೊಡ್ಡಿ ಹೆಂಡತಿಗೆ ಕಪಾಳಮೋಕ್ಷ ಮಾಡಲು ಅಥವಾ ಹೊಡೆಯಲು ಬೇಗನೆ ಮುಂದಾಗುತ್ತಿದ್ದನು. ಅದನ್ನು ನೋಡಿ ಮಧ್ಯಪ್ರವೇಶಿಸಲು ತಾನು ಶಕ್ತಿಹೀನನಾಗಿರುವುದನ್ನು ಅನಂತ್ ನೆನಪಿಸಿಕೊಳ್ಳುತ್ತಾನೆ. ಅನಂತ್ ಕಾಲೇಜಿನಿಂದ ಪದವಿ ಪಡೆದಾಗ, ಉನ್ನತ ಶಿಕ್ಷಣವನ್ನು ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ ಆದರೆ ಪೊಲೀಸ್ ಪಡೆಗೆ ಸೇರಲು ಒತ್ತಾಯಕ್ಕೊಳಗಾಗುತ್ತಾನೆ.

ಕೆಟ್ಟದಾಗಿ ಹೊಡೆತ ತಿಂದು, ಸುಡಲ್ಪಟ್ಟು, ಸಾಯಲು ಬಿಡಲ್ಪಟ್ಟಿರುವ ರಾಮಾ ಶೆಟ್ಟಿಯ ಗೂಂಡಾಗಳಲ್ಲಿ ಒಬ್ಬನನ್ನು ಅನಂತ್ ಪತ್ತೆಹಚ್ಚಿದಾಗ ಪರಿಸ್ಥಿತಿ ಆಸಕ್ತಿದಾಯಕವಾಗುತ್ತದೆ. ಅನಂತ್ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದು ಅವನ ಹೇಳಿಕೆಯನ್ನು ತೆಗೆದುಕೊಳ್ಳುತ್ತಾನೆ. ಅದರಲ್ಲಿ ಅವನು ರಾಮಾ ಶೆಟ್ಟಿ ಮತ್ತು ಈ ಹಲ್ಲೆಯನ್ನು ನಡೆಸಿದ ಇತರರನ್ನು ಹೆಸರಿಸುತ್ತಾನೆ. ಅವನನ್ನು ಬಂಧಿಸಲು ಅನಂತ್ ರಾಮಾ ಶೆಟ್ಟಿಯ ಕೋಣೆಗಳಿಗೆ ನುಗ್ಗುತ್ತಾನೆ. ಆದರೆ ಶೆಟ್ಟಿ ಗಲಿಬಿಲಿಯಾಗುವುದಿಲ್ಲ. ಅವನು ಉನ್ನತ ಶ್ರೇಣಿಯ ಒಬ್ಬ ಪೋಲೀಸಿನವನಿಗೆ ಸರಳವಾದ ಫೋನ್ ಕರೆ ಮಾಡುತ್ತಾನೆ. ಅವನು ತಕ್ಷಣವೇ ಅನಂತ್‍ಗೆ ಇದರಿಂದ ಹಿಂದೆಸರಿಯುವಂತೆ ಹೇಳುತ್ತಾನೆ. ಅನಂತ್ ಸಂದರ್ಭ ಮತ್ತು ಅಗಾಧವಾದ ಪುರಾವೆಗಳನ್ನು ಉಲ್ಲೇಖಿಸುತ್ತಾನೆ. ಆದರೂ ಅದರಿಂದ ದೂರವಿರಲು ಅವನಿಗೆ ಆದೇಶಿಸಲಾಗುತ್ತದೆ. ತೀವ್ರವಾಗಿ ಅವಮಾನ ಅನುಭವಿಸಿ, ದಿಗ್ಭ್ರಮೆಗೊಂಡ, ಅಸಮಾಧಾನಗೊಂಡ ದುರದೃಷ್ಟವಂತ ಅನಂತ್ ಹೊರಡುತ್ತಾನೆ.

ಹೈದರ್ ಅಲಿ ಮತ್ತೊಮ್ಮೆ ವಿವರಿಸುತ್ತಾನೆ: ಮುಂಬರುವ ಪುರಸಭೆ ಚುನಾವಣೆಗಳಲ್ಲಿ ರಾಮಾ ಶೆಟ್ಟಿ ನಗರ ಸಭೆಗೆ ಸ್ಪರ್ಧಿಸಲು ಯೋಜಿಸಿದ್ದಾನೆ ಮತ್ತು ಕೇವಲ ಒಂದು ಸಣ್ಣ ವಿಷಯವು ತನ್ನ ಮಹತ್ವಾಕಾಂಕ್ಷೆಗಳನ್ನು ಗಲಿಬಿಲಿಗೊಳಿಸಲು ಬಿಡುವಂತಿರುವುದಿಲ್ಲ. ಅನಂತ್ ಗಾಬರಿಗೊಂಡು ಕೋಪಗೊಳ್ಳುತ್ತಾನೆ. ಕುಡಿಯುವುದನ್ನು ಆರಂಭಿಸುತ್ತಾನೆ. ಜ್ಯೋತ್ಸ್ನಾಳೊಂದಿಗಿನ ಅವನ ಸಂಬಂಧ ಹಾಳಾಗುತ್ತದೆ. ರಾಮಾ ಶೆಟ್ಟಿಯ ಪ್ರಚಾರ ರ್‍ಯಾಲಿಗಳಿಗೆ ಭದ್ರತಾ ರಕ್ಷಣೆ ನೀಡಲು ತನ್ನನ್ನು ಕಳುಹಿಸಿದಾಗ ಅವನು ತಲ್ಲಣಗೊಳ್ಳುತ್ತಾನೆ.

ಮುಂಬೈನ ಹೊರಗಿನ ಗುಡ್ಡಗಳಲ್ಲಿ ಒಬ್ಬ ಅಪಾಯಕಾರಿ ಡಕಾಯಿತನನ್ನು ಸೆರೆಹಿಡಿಯಲು ಆಕ್ರಮಣ ತಂಡವನ್ನು ಮುನ್ನಡೆಸಿದಾಗ ಅವನು ವೃತ್ತಿಜೀವನದಲ್ಲಿ ಮತ್ತೊಂದು ಹಿನ್ನಡೆ ಅನುಭವಿಸುತ್ತಾನೆ. ಬಂಧನದ ಮನ್ನಣೆಯನ್ನು ಅಂತಿಮವಾಗಿ ಇನ್ನೊಬ್ಬ ಅಧಿಕಾರಿಗೆ ನೀಡಲಾಗುತ್ತದೆ. ಅವನ ಸಂಬಂಧವು ಮತ್ತಷ್ಟು ಹದಗೆಡುತ್ತದೆ ಮತ್ತು ಅವನು ಸಾಕಷ್ಟು ಹೆಚ್ಚು ಕುಡಿಯಲು ಆರಂಭಿಸುತ್ತಾನೆ. ಜ್ಯೋತ್ಸ್ನಾ ಅವನ ಎದುರಿಗೆ ಬಂದಾಗ, ಅವನು ಅವಳಿಗೆ ಎಲ್ಲವನ್ನೂ ಹೇಳುತ್ತಾನೆ.

ಒಂದು ರಾತ್ರಿ ಸಣ್ಣ ರೇಡಿಯೊವನ್ನು ಕದ್ದನೆಂದು ಆರೋಪಿಸಲ್ಪಟ್ಟ ಒಬ್ಬ ಚಿಲ್ಲರೆ ಕಳ್ಳನನ್ನು ವಶಕ್ಕೆ ಪಡೆದ ಸ್ವಲ್ಪ ಸಮಯದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಹಿಡಿತ ತಪ್ಪುತ್ತದೆ. ಅನಂತ್ ತುಂಬಾ ಕುಡಿದು, ಕೋಪಗೊಂಡು ನಿರಾಶೆಗೊಂಡಿರುತ್ತಾನೆ. ಅವನು ಕುಡಿಯುವುದನ್ನು ಮುಂದುವರೆಸುತ್ತಾ ಕಳ್ಳನಿಗೆ ಆಘಾತಕಾರಿಯಾಗಿ ಮತ್ತು ಕ್ರೂರವಾಗಿ ಹೊಡೆದು "ಇತರರ ಕಾನೂನುಬದ್ಧ ಹಕ್ಕುಗಳನ್ನು ಕದಿಯುತ್ತಿರುವನೆಂದು" ಆರೋಪಿಸುತ್ತಾನೆ.

ಆಶ್ಚರ್ಯವಾಗದಂತೇ ಕಳ್ಳ ಬಲಿಯಾಗುತ್ತಾನೆ. ಪರಿಣಾಮವಾಗಿ ಅನಂತ್ ಅಮಾನತುಗೊಳ್ಳುತ್ತಾನೆ ಮತ್ತು ಅತಿಯಾದ ಬಲವಂತದ ಆರೋಪಗಳನ್ನು ಎದುರಿಸುತ್ತಾನೆ. ಅನಂತ್ ಮತ್ತೆ ದೇಸಾಯಿಯನ್ನು ಬಳಸಲು ಪ್ರಯತ್ನಿಸುತ್ತಾನೆ, ಆದರೆ ಪರಿಸ್ಥಿತಿ ಬಹುತೇಕ ಎಲ್ಲರಿಗೂ ತುಂಬಾ ಬಿಸಿಯಾಗಿದೆಯೆಂದು ಹೇಳಿ ಹೈದರ್ ಅಲಿ ಹಿಂದೆ ಸರಿಯುತ್ತಾನೆ. ಪ್ರಾಯಶಃ ಹೊಸದಾಗಿ ಚುನಾಯಿತನಾದ ರಾಮಾ ಶೆಟ್ಟಿ ನೆರವಾಗಬಹುದೆಂದು ಹೈದರ್ ಅಲಿ ಸ್ವಲ್ಪಮಟ್ಟಿಗೆ ಇಷ್ಟವಿಲ್ಲದೆ ಸಲಹೆ ನೀಡುತ್ತಾನೆ.

ಹಲವಾರು ದಿನಗಳ ಆಲೋಚನೆಯ ನಂತರ, ಅನಂತ್ ರಾಮಾ ಶೆಟ್ಟಿಯನ್ನು ಅವನ ಜೂಜು ಸ್ಥಳದಲ್ಲಿ ಭೇಟಿಯಾಗಲು ನಿರ್ಧರಿಸುತ್ತಾನೆ.

ರಾಮಾ ಶೆಟ್ಟಿ ಅನಂತ್‌ನನ್ನು ಸೌಹಾರ್ದಯುತವಾಗಿ ಬರಮಾಡಿಕೊಳ್ಳುತ್ತಾನೆ ಮತ್ತು ಪ್ರಾಯಶಃ ಈ ನೀತಿವಂತ ಪೋಲೀಸನವನು ಅಂತಿಮವಾಗಿ ತನ್ನ ಮುಂದೆ ಅವನ ಮೊಣಕಾಲೂರಿದ್ದಾನೆ ಎಂದು ಅರಿವಾಗಿ ಅವನನ್ನು ತನ್ನ ಒಳಗಿನ ಕೋಣೆಗೆ ಒಬ್ಬಂಟಿಯಾಗಿ ಆಹ್ವಾನಿಸುತ್ತಾನೆ. ಅನಂತ್ ಪ್ರತಿಯಾಗಿ ತನ್ನೊಂದಿಗೆ ಸೇರಿಕೊಂಡರೆ ಮಾತ್ರ ಅವನಿಗೆ ಸಹಾಯ ಮಾಡಲು ಅವನು ಒಪ್ಪುತ್ತಾನೆ. ಅನಂತ್ ತನ್ನ 'ದುರ್ಬಲ' ನಿಷ್ಕ್ರಿಯತೆಯಿಂದ ಹೊರಬಂದು ಕೋಪಗೊಂಡು, ಬೆರಗುಗೊಳಿಸುವ ಹಿಂಸಾತ್ಮಕ ಚಲನೆಯಲ್ಲಿ ರಾಮಾ ಶೆಟ್ಟಿಯನ್ನು ಅಲ್ಲಿ ಅದೇ ಕ್ಷಣದಲ್ಲೇ ಕತ್ತು ಹಿಸುಕಿ ಕೊಲ್ಲುತ್ತಾನೆ.

ಅನಂತ್ ತಾನೇ ಶರಣಾಗುವುದರೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ.

ತಯಾರಿಕೆ[ಬದಲಾಯಿಸಿ]

ಚಲನಚಿತ್ರ ವಿಶೇಷಜ್ಞ ರಾಜೇಶ್ ಸುಬ್ರಮಣಿಯನ್ ಪ್ರಕಾರ, ಅಮಿತಾಭ್ ಬಚ್ಚನ್ ಅವರಿಗೆ ಮೊದಲು ಮುಖ್ಯ ಪಾತ್ರವನ್ನು ನೀಡಲಾಗಿತ್ತು. ಆದರೆ ತಮ್ಮ ಪುರುಸೊತ್ತಿಲ್ಲದ ವೇಳಾಪಟ್ಟಿಯ ಕಾರಣ ಅವರು ಅದನ್ನು ನಿರಾಕರಿಸಿದರು. ಅನಂತ್ ವೇಲನ್‍ಕರ್ ಪಾತ್ರವನ್ನು ಓಂ ಪುರಿಗೆ ಹಂಚಲಾಯಿತು ಮತ್ತು ಇದು ಅವರ ವೃತ್ತಿಜೀವನದಲ್ಲಿ ನೆನಪಿನಲ್ಲುಳಿಯುವ ಪಾತ್ರವಾಯಿತು.

ಪಾತ್ರವರ್ಗ[ಬದಲಾಯಿಸಿ]

 • ಸಬ್-ಇನ್‍ಸ್ಪೆಕ್ಟರ್ ಅನಂತ್ ವೇಲನ್‍ಕರ್ ಪಾತ್ರದಲ್ಲಿ ಓಂ ಪುರಿ
 • ಜ್ಯೋತ್ಸ್ನಾ ಗೋಖಲೆ ಪಾತ್ರದಲ್ಲಿ ಸ್ಮಿತಾ ಪಾಟೀಲ್
 • ಅನಂತ್‍ನ ತಂದೆಯಾಗಿ ಅಮರೀಶ್ ಪುರಿ
 • ಅನಂತ್‍ನ ತಾಯಿಯಾಗಿ ಮಾಧುರಿ ಪುರಂದರೆ
 • ಮೈಕ್ ಲೋಬೊ ಪಾತ್ರದಲ್ಲಿ ನಸೀರುದ್ದೀನ್ ಷಾ
 • ರಾಮಾ ಶೆಟ್ಟಿ ಪಾತ್ರದಲ್ಲಿ ಸದಾಶಿವ್ ಅಮ್ರಾಪುರ್‌ಕರ್
 • ಇನ್‍ಸ್ಪೆಕ್ಟರ್ ಹೈದರ್ ಅಲಿ ಪಾತ್ರದಲ್ಲಿ ಶಫಿ ಇನಾಮ್ದಾರ್
 • ಸ್ನೇಹಾ ವಾಜಪೇಯಿ ಪಾತ್ರದಲ್ಲಿ ಇಲಾ ಅರುಣ್
 • ಡಕಾಯಿಟ್ ಆಗಿ ಸತೀಶ್ ಷಾ
 • ಇನ್ಸ್‌ಪೆಕ್ಟರ್ ಪಾಟೀಲ್ ಆಗಿ ಅಚ್ಯುತ್ ಪೋತ್‍ದಾರ್

ಪ್ರಶಸ್ತಿಗಳು[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

 • ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ - ಓಂ ಪುರಿ - ಗೆಲುವು

ಫಿಲ್ಮ್‌ಫೇರ್ ಪ್ರಶಸ್ತಿಗಳು

 • ಅತ್ಯುತ್ತಮ ಚಲನಚಿತ್ರ - ಮನ್‍ಮೋಹನ್ ಶೆಟ್ಟಿ, ಪ್ರದೀಪ್ ಉಪ್ಪೂರ್ - ಗೆಲುವು
 • ಅತ್ಯುತ್ತಮ ನಿರ್ದೇಶಕ - ಗೋವಿಂದ್ ನಿಹಲಾನಿ - ಗೆಲುವು
 • ಅತ್ಯುತ್ತಮ ಪೋಷಕ ನಟ - ಸದಾಶಿವ್ ಅಮ್ರಾಪುರ್‌ಕರ್ - ಗೆಲುವು
 • ಅತ್ಯುತ್ತಮ ಕಥೆ - ಎಸ್.ಡಿ. ಪಾನ್ವಲ್‍ಕರ್ - ಗೆಲುವು
 • ಅತ್ಯುತ್ತಮ ಚಿತ್ರಕಥೆ - ವಿಜಯ್ ತೆಂಡುಲ್ಕರ್ - ಗೆಲುವು

ಅಸ್ತಿತ್ವದ ಬಿಕ್ಕಟ್ಟು[ಬದಲಾಯಿಸಿ]

ಜ್ಯೋತ್ಸ್ನಾ ಎದುರು ಅನಂತ್ ಕವಿತೆಯನ್ನು ಓದುವ ದೀರ್ಘ ದೃಶ್ಯವು ಆಧುನಿಕ ಸಿನೆಮಾದಲ್ಲಿ ಮನುಷ್ಯನ ಮೇಲೆ ಕಲೆಯ ಪರಿಣಾಮವನ್ನು ಚಿತ್ರಿಸುವ ವಿಶ್ವ ಸಿನೆಮಾ ತೋರಿಸಿದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ.

ಅಂತಹ ಪರಿಮಾಣದ ನೈತಿಕ ಅಥವಾ ಅಸ್ತಿತ್ವದ ಆಯ್ಕೆಯನ್ನು ಎದುರಿಸಿದಾಗ, ಮನುಷ್ಯನು ಮೂಲಭೂತವಾಗಿ ಒಬ್ಬಂಟಿಯಾಗಿರುತ್ತಾನೆ ಮತ್ತು ಇನ್ನೊಬ್ಬನು ಅವನ ದುಃಖದಲ್ಲಿ ಪಾಲ್ಗೊಳ್ಳಲು ಅಥವಾ ಅವನ ಹೊರೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಅನಂತ್ ತನ್ನ ಪರಿಸ್ಥಿತಿಯಿಂದ ಹೊರಬರಲು ನಿರಾಕರಿಸುತ್ತಾನೆ, ನಿಂತು ತನ್ನ ಶೂನ್ಯತೆಯನ್ನು ಎದುರಿಸುವುದನ್ನು ಆಯ್ದುಕೊಳ್ಳುತ್ತಾನೆ - ತನ್ನ ಸಮವಸ್ತ್ರವನ್ನು ಬಿಟ್ಟುಕೊಟ್ಟು ತನ್ನ ಪುರುಷತ್ವ ಮತ್ತು ಸ್ವಯಂ-ಪರಿಣಾಮಕಾರಿತ್ವವನ್ನು ಮರಳಿ ಪಡೆಯುವ ಬದಲು 'ದುರ್ಬಲ' ಪೊಲೀಸ್ ಅಧಿಕಾರಿಯಾಗಿ ಮುಂದುವರಿಯುತ್ತಾನೆ ಎಂದು ಚಲನಚಿತ್ರವು ಸೂಚಿಸುತ್ತದೆ.

ಅರ್ಧ್ ಸತ್ಯ ಕವಿತೆ[ಬದಲಾಯಿಸಿ]

ದಿಲೀಪ್ ಚಿತ್ರೆ (ಹಿಂದಿ) ಅವರ ವಿಷಯ ಸಂಬಂಧಿ ಕವಿತೆ ಅರ್ಧ್ ಸತ್ಯ (अर्धसत्य) ಕನ್ನಡ ಅನುವಾದ
चक्रव्यूह में घुसने से ವಂಚನೆಯ ವಲಯವನ್ನು ಪ್ರವೇಶಿಸುವ ಮೊದಲು,
कौन था मै और कैसा ನಾನು ಯಾರಾಗಿದ್ದೆ ಮತ್ತು ಹೇಗಾಗಿದ್ದೆ,
मुझे याद ही ना ನನಗೆ ನೆನಪಿರುವುದಿಲ್ಲ.
चक्रव्यूह में घुसने के ವಂಚನೆಯ ವಲಯವನ್ನು ಪ್ರವೇಶಿಸಿದ ನಂತರ,
मेरे और चक्रव्यूह के ನನ್ನ ಮತ್ತು ವಲಯದ ನಡುವೆ (ಇತ್ತು),
सिर्फ़ एक जानलेवा निकटता ಕೇವಲ ಮಾರಣಾಂತಿಕ ಅನ್ಯೋನ್ಯತೆ
इसका मुझे पता ही ना ನಾನು ಎಂದಿಗೂ ಅರಿಯಲಿಲ್ಲ.
चक्रव्यूह से निकलने के ವಂಚನೆಯ ವಲಯವನ್ನು ಬಿಟ್ಟ ನಂತರ,
मुक्त हो जाऊँ भले ನನ್ನನ್ನು ಮುಕ್ತಗೊಳಿಸಿದರೂ
फिर भी चक्रव्यूह की रचना ವಂಚನೆಯ ವಲಯದ ವಿನ್ಯಾಸ,
ही ना ಅಷ್ಟೇನೂ ಭಿನ್ನವಾಗಿರುವುದಿಲ್ಲ.
मरूँ या मारूँ ನಾನು ಕೊಂದರೂ ಅಥವಾ ಸತ್ತರೂ,
जाऊँ या जान से मार ನಾನು ಕೊಲ್ಲಲ್ಪಡುತ್ತೇನೆ, ಅಥವಾ ಕೊಲ್ಲುತ್ತೇನೆ (ಇತರ)
इसका फ़ैसला कभी ना हो ಈ ಪ್ರಶ್ನೆಗಳನ್ನು ಎಂದಿಗೂ ನಿರ್ಧರಿಸಲಾಗುವುದಿಲ್ಲ.
हुआ आदमी ಮಲಗಿರುವ ವ್ಯಕ್ತಿಯು
से उठकर चलना शुरू करता ಎಚ್ಚರವಾಗಿ ಮುಂದೆ ಹೆಜ್ಜೆ ಹಾಕಿದಾಗ,
तब सपनों का संसार ಕನಸುಗಳ ಜಗತ್ತು
दोबारा दिख ही ना ಮತ್ತೆ ಎಂದಿಗೂ ಕಾಣಿಸದಿರಬಹುದು (ಅವನಿಂದ).
रोशनी में जो निर्णय की ಅದರಲ್ಲಿ, ನಿರ್ಧಾರದ ಬೆಳಕು,
सब कुछ समान होगा ಎಲ್ಲವೂ ಸಮಾನವಾಗಿರುವುದೇ?
पलड़े में (ತಕ್ಕಡಿಯ) ಒಂದು ತಟ್ಟೆಯಲ್ಲಿ ದುರ್ಬಲತೆಯಿದೆ,
पलड़े में ಮತ್ತು ಇನ್ನೊಂದರಲ್ಲಿ ಪುರುಷತ್ವ,
और ठीक तराज़ू के काँटे ಮತ್ತು ಸೂಜಿ ಬಿಂದುವಿನಲ್ಲಿ ನಿಖರವಾಗಿ
अर्ध सत्य ಅರ್ಧ ಸತ್ಯವಿದೆ.

ಉಲ್ಲೇಖಗಳು[ಬದಲಾಯಿಸಿ]

 1. Ardh Satya at lib.virginia.edu Archived 13 December 2007 ವೇಬ್ಯಾಕ್ ಮೆಷಿನ್ ನಲ್ಲಿ.
 2. Salam, Ziya Us (6 November 2014). "Ardh Satya (1983)". The Hindu. Retrieved 25 March 2016.
 3. Ardh Satya Review
 4. Best cop films[ಶಾಶ್ವತವಾಗಿ ಮಡಿದ ಕೊಂಡಿ] starboxoffice.com.

ಹೊರಗಿನ ಕೊಂಡಿಗಳು[ಬದಲಾಯಿಸಿ]