ವಿಷಯಕ್ಕೆ ಹೋಗು

ದಿಲೀಪ್ ಚಿತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(-೧೦, ಡಿಸೆಂಬರ್, ೨೦೦೯)

ಮರಾಠಿ ಕವಿ, ಲೇಖಕ, ವಿಮರ್ಶಕ, ಮತ್ತು ಚಲನಚಿತ್ರ ನಿರ್ಮಾಪಕ, ದಿಲೀಪ್ ಚಿತ್ರೆಯವರು, ಒಬ್ಬ ಹೆಸರಾಂತ ಚಿತ್ರಕಾರರೂ ಆಗಿದ್ದರು. ದಿಲೀಪ್ ರವರ ಏಕಮಾತ್ರ ಮಗ ’ಭೂಪಾಲ್ ಗ್ಯಾಸ್ ದುರಂತ’ದಲ್ಲಿ ಅಸುನೀಗಿದ್ದರು. ತಮ್ಮ ಪತ್ನಿಯವರನ್ನೂ ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸುತ್ತವೆ. ೧೯೬೦ ರಬಳಿಕದ ಆಧುನಿಕ ಕಾವ್ಯರಚನೆಯ ಒಬ್ಬ ಖ್ಯಾತಿವೆತ್ತ ಪ್ರತಿನಿಧಿಯಾಗಿದ್ದರು. ದಿಲೀಪ್ ಚಿತ್ರೆಯವರು ಇಂಗ್ಲೀಷ್ ಭಾಷೆಯಲ್ಲಿ ಕವನಗಳನ್ನು ಬರೆದರು. ಅವಕ್ಕೆ ವಿಮರ್ಶಕರಿಂದ ಪ್ರಶಂಸೆ ಬಂದಿದೆ. ೧೬ ನೆಯ ಶತಮಾನದಲ್ಲಿ ’ಸಂತ ತುಕಾರಾಮ್ರಚಿಸಿದ 'ಮರಾಠಿ ಅಭಂಗ'ಗಳನ್ನು(ಭಕ್ತಿ ಗೀತೆಗಳು)ದಿಲೀಪ್ ಚಿತ್ರೆಯವರು, ಆಂಗ್ಲಭಾಷೆಗೆ ತರ್ಜುಮೆಮಾಡಿದ್ದು,ಅದು ಪ್ರಶಂಸೆಗೆ ಪಾತ್ರವಾಗಿತ್ತು. ನಂತರ ಅದು ಜರ್ಮನ್ ಭಾಷೆಗೆ ಭಾಷಾಂತರಗೊಂಡಿತು.

ಕ್ಯಾನ್ಸರ್ ಕಾಯಿಲೆಯಿಂದ ಪೀಡಿತ ಚಿತ್ರೆಯವರ ನಿಧನ

[ಬದಲಾಯಿಸಿ]

೭೧ ವರ್ಷ ಪ್ರಾಯದ ಚಿತ್ರೆಯವರು, ೨೦೦೯ ರ ಡಿಸೆಂಬರ್, ೧೦, ಗುರುವಾರದಂದು,ವಿಧಿವಶರಾದರು. ದೀರ್ಘಕಾಲದಿಂದಲೂ ಅವರು ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದರು.