ಅರ್ಜುನ್ ಅಭಿಮನ್ಯು (ಚಲನಚಿತ್ರ)
"ಟೈಗರ್" ಪ್ರಭಾಕರರವರು ನಿರ್ದೇಶಿಸಿ, ನಟಿಸಿರುವ ಚಲನಚಿತ್ರ "ಅರ್ಜುನ್ ಅಭಿಮನ್ಯು.ಇವರ ಜೊತೆಗೆ ನಾಯಕರಾಗಿ "ನವರಸ ನಾಯಕ" ಜಗ್ಗೇಶ್ ಅಭಿನಯಿಸಿದ್ದಾರೆ . ಶ್ರೀಕನ್ಯಾ, ಪಾಯಲ್ ಮಲ್ಹೋತ್ರ ಸುಂದರ್ ರಾಜ್ ಹಾಗೂ ಖಳನಾಯಕನ ಪಾತ್ರದಲ್ಲಿ ವಜ್ರಮುನಿ ನಟಿಸಿದ್ದರೆ. "ಶ್ರೀಲಕ್ಶ್ಮಿ ಫಿಲಮ್ಸ್" ಬ್ಯಾನರ್ ನಲ್ಲಿ ಬಂದ ಈ ಚಿತ್ರ ೧೯೯೮ ನೇ ವರ್ಷದಲ್ಲಿ ತೆರೆ ಕಂಡಿತು.ಈ ಚಿತ್ರದ ನಿರ್ಮಾಪಕರು ನ್.ಕುಮಾರ್ ರವರು. ಕಥೆ-ಚಿತ್ರಕಥೆ-ನಿರ್ದೇಶನ ಪ್ರಭಾಕರ್ ರವರು. ಸಂಭಾಶಣೆ ಜೋಸೆಫ್
ರವರು. ಈ ಚಿತ್ರಕ್ಕೆ ಸಂಗೀತ ನೀಡಿದವರು ರಾಜನ್-ನಾಗೇಂದ್ರ .ಸಮಾಜದ ಬಗ್ಗೆ ಕಾಳಜಿ ವಹಿಸಿದ ನಾಯಕರು ಸಮಾಜದಲ್ಲಿ ಇರುವ ಕೆಟ್ಟ ಹುಳುಗಳನ್ನು ಸಾಯಿಸಿ ಜಯಗಳಿಸಿದ ಈ ಕಥೆಯ ಪೊಲೀಸ್ ಪಡೆಯವರೆ ಸಮಾಜ ಘಾತುಕರು ಎಂಬ ಸ್ಪಷ್ಟ ನಿಲುವನ್ನು ನಿಡುತ್ತದೆ.ಯಾರೇ ಆಗಲಿ ಸತ್ಯಕ್ಕೆ ನ್ಯಾಯ ನಿತಿಗೆ ಜಯಭೇರಿ ಖಂಡಿತ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದು.ಒಳ್ಳೆಯವರಿಗೆ ಕಾಲವಿಲ್ಲದ ಈ ಕಾಲದಲ್ಲಿ ನ್ಯಾಯ ಗೆಲ್ಲುತ್ತದೆ ಎಂಬುದನ್ನು ಪ್ರಭಕರ್ ಸ್ಪಷ್ಟ ಪಡಿಸಿದ್ದರೆ.ಈ ಚಿತ್ರದ ಹಾಡುಗಳೂ ಸಹ ಚೆನ್ನಾಗಿ ಮೂಡಿಬಂದಿದೆ .ಅವಿನಾಶ್ ಅವರು ಪೋಲೀಸ್ ಪಾತ್ರಧಾರಿಯಾಗಿ ಖಳನಾಯಕನ ಪಾತ್ರಕ್ಕೆ ಮರುಗು ನೀಡಿದ್ದಾರೆ ."ನ್ಯಾಯ ದೇವತೆಗೆ ಕಣ್ಣಿಲ್ಲದಿದ್ದರೂ ನ್ಯಾಯ ಗೆದ್ದೇ ಗೆಲ್ಲುತ್ತದೆ."
ಅರ್ಜುನ್ ಅಭಿಮನ್ಯು (ಚಲನಚಿತ್ರ) | |
---|---|
ಅರ್ಜುನ್ ಅಭಿಮನ್ಯು | |
ನಿರ್ದೇಶನ | ಪ್ರಭಾಕರ್ |
ಪಾತ್ರವರ್ಗ | ಪ್ರಭಾಕರ್, ಜಗ್ಗೇಶ್ ಶ್ರೀಕನ್ಯಾ, ಪಾಯಲ್ ಮಲ್ಹೋತ್ರ ಸುಂದರ್ ರಾಜ್, ವಜ್ರಮುನಿ |
ಬಿಡುಗಡೆಯಾಗಿದ್ದು | ೧೯೯೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಲಕ್ಷ್ಮೀ ಫಿಲಮ್ಸ್ |