ಅರೇಟೇನೋ

ವಿಕಿಪೀಡಿಯ ಇಂದ
Jump to navigation Jump to search
ಅರೇಟೇನೋ
ಜನನ(೧೪೯೨-೦೪-೨೦)೨೦ ಏಪ್ರಿಲ್ ೧೪೯೨
Arezzo
ಮರಣ೨೧ ಅಕ್ಟೋಬರ್ ೧೫೫೬(1556-10-21) (aged ೬೪)
Venice
ವೃತ್ತಿAuthor, playwright, poet, satirist
ರಾಷ್ಟ್ರೀಯತೆಇಟಾಲಿಯನ್
Pietro Aretino, in Titian's first portrait of him
St Bartholomew (Aretino was the model) displaying his flayed skin, in The Last Judgment by Michelangelo.
Der Tod des Dichters Pietro Aretino by Anselm Feuerbach.

ಅರೇಟೇನೋ, ಪಿ ಎತ್ರೊ :(20 ಎಪ್ರಿಲ್ 1492 – 21 ಒಕ್ಟೋಬರ್ 1556). ಇಟಲಿಯ ಗದ್ಯ ಕವಿ ಮತ್ತು ನಾಟಕಕಾರ. ಉತ್ತರ ಇಟಲಿಯ ಮಧ್ಯಭಾಗದ ಅರೆಜ್ಜೋವಿನದಲ್ಲಿ ಜನಿಸಿದುದರಿಂದ ಅರೇಟೇನೊ ಎಂಬ ಹೆಸರಿನಲ್ಲಿ ಪ್ರಖ್ಯಾತನಾಗಿದ್ದಾನೆ. ಸಾಹಿತ್ಯದಲ್ಲಿ ಸಂಪ್ರದಾಯದ ಹೆಜ್ಜೆಗಳನ್ನು ತೊರೆದು ಹೊಸ ಹಾದಿವನ್ನು ಹಿಡಿದವೆ. ಆ ಶತಮಾನದ ಮೊದಲ ಪತ್ರಿಕಾಕರ್ತನೆಂದು ಕರೆಸಿಕೊಂಡಿದ್ದಾನೆ. ಚಿಕ್ಕವನಾಗಿದ್ದಾಗಲೇ ಪೆರುಜಿಯಕ್ಕೆ ಹೊರಟು ಅಲ್ಲಿ ಚಿತ್ರಕಲೆಯನ್ನು ಅಭ್ಯಾಸಮಾಡಿ ಅನಂತರ ರೋಮಿಗೆ ಹಿಂತಿರುಗಿ ರೋಮಿನಲ್ಲಿ ವಿಡಂಬನಾತ್ಮಕ ಪದ್ಯಗಳನ್ನು ಬರೆದು ಪ್ರಕಟಿಸಿದ. 1527ರಲ್ಲಿ ವೆನಿಸ್ಸಿಗೆ ಬಂದು ಸಾಯುವವರೆಗೂ ಅಲ್ಲಿಯೇ ಇದ್ದ. ಈತ ಅನೇಕ ಭಾವಗೀತೆ, ವಿಡಂಬನ ಗೀತೆಗಳನ್ನು ರಚಿಸಿದ್ದಾನೆ. ಅಪೂರ್ಣವಾದ 4 ಮಹಾಕಾವ್ಯಗಳನ್ನು ರಚಿಸಿದ್ದಾನೆ. ಅಲ್ಲದೆ ಸಂಭಾಷಣಾರೂಪದ ಗದ್ಯ ಸಾಹಿತ್ಯ ಮತ್ತು ಸುಖಾಂತ (ಕಾಮೆಡಿ) ನಾಟಕಗಳನ್ನು ರಚಿಸಿದ್ದಾನೆ. ಇವನ 3,000ಕ್ಕೂ ಮಿಕ್ಕ ಪತ್ರಗಳಲ್ಲಿ 16ನೆಯ ಶತಮಾನದ ಇಟಲಿಯ ಜನಜೀವನವನ್ನು ಚಿತ್ರಿಸುವುದರ ಮೂಲಕ ತನ್ನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ್ದಾನೆ. ಒರೇಜಿಯ ಎಂಬ ರುದ್ರನಾಟಕವನ್ನು (ಟ್ರ್ಯಾಜಿಡಿ) ಬರೆದಿದ್ದಾನೆ. ಇವನು ಸುಖಾಂತ ನಾಟಕಗಳು ಪ್ರಸಿದ್ಧವಾಗಿವೆ. 18ನೆಯ ಶತಮಾನದ ಲೇಖಕರನೇಕರ ಮೇಲೆ ಇವನ ಪ್ರಭಾವ ಸಾಕಷ್ಟು ಬಿದ್ದಿದೆ. ಆಧುನಿಕ ಲೇಖಕರಿಗೆ ಇವನ ಸಾಹಿತ್ಯದಲ್ಲಿ ಕಾಣುವ ಆ ಕಾಲದ ಜನಜೀವನದ ವಾಸ್ತವಿಕಾಂಶಗಳಿಂದಾಗಿ ಈತ ಮೆಚ್ಚುಗೆಯವನೂ ಮುಖ್ಯನೂ ಆಗಿದ್ದಾನೆ. ಇವನ ಮುಖ್ಯ ಕೃತಿಗಳು: ಲಾ ಕಾರ್ಟಿಜಿಯಾನ (ಆಸ್ಥಾನ ಜೀವನ), ಇಲ್ ಮಾರೆಸ್ಕಾಲೊ (ಅಶ್ವವೈದ್ಯ), ಲೊ ಇಪೊಕ್ರಿಟೊ (ಆಷಾಢಭೂತಿ) ಮೊದಲಾದ ಐದು ಹರ್ಷನಾಟಕಗಳು ಮತ್ತು ಒರೇಜಿಯ ಎಂಬ ಗಂಭೀರ ನಾಟಕ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅರೇಟೇನೋ&oldid=608213" ಇಂದ ಪಡೆಯಲ್ಪಟ್ಟಿದೆ