ಅರುಣ್ ಸಾಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರುಣ್ ಸಾಗರ್
ಜನನ
Arun Sagar

(1965-10-23) ೨೩ ಅಕ್ಟೋಬರ್ ೧೯೬೫ (ವಯಸ್ಸು ೫೮)
ಸಾಗರಾ, ಕರ್ನಾಟಕ, ಭಾರತ
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ವೃತ್ತಿ ನಟ, ಕಲಾ ನಿರ್ದೇಶಕ, ಹಾಸ್ಯಗಾರ
Years active1997–present
Television
 • ತರ್ಲೆ (2006)
 • ಮಾಜಾ ವಿತ್ ಸುರುಜಾ (2011)[೧]
 • ಕೊಯ್ಯಂ ಕೋತ್ರಾ (2013)
 • ಕಾಮಿಡಿ ಸರ್ಕಲ್ (2014)
 • ಸಿಂಪಲ್ಲಾಗ್ ಒಂಡು ಸಿಂಗಿಂಗ್ ಶೋ
ಸಂಗಾತಿಮೀರಾ

ಅರುಣ್ ಸಾಗರ್ ಭಾರತದ ಚಿತ್ರರಂಗದ ನಟ, ನಿರ್ದೇಶಕ ಮತ್ತು ಹಾಸ್ಯ ಕಲಾವಿದ . ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಕ್ಟೋಬರ್ ೨೩ ೧೯೬೫ ರಂದು ಸಾಗರದಲ್ಲಿ ಜನಿಸಿದರು. ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಸಹ ಇವರನ್ನು ಒಬ್ಬ ಹಾಸ್ಯ ಕಲಾವಿದ ಎಂದಲೇ ಗುರುತಿಸಿಕೊಂಡಿದ್ಡಾರೆ. "ಭೂಮಿ ಗೀತ" ಎಂಬ ಪರಿಸರ ಸಂಭಂದಿತ ಚಿತ್ರಕ್ಕೆ ರಾಷ್ರ ಪ್ರಶಸ್ತಿ ದೊರಕಿದೆ. ಸಾಗರ್- ಪೂರಿ ಜಗನ್ನಾಥ, ಮೆಹೆರ್ ರಮೇಶ್, ವೀರಶಂಕರ್ ಮತ್ತು ಕೆ. ರಾಘವೇಂದ್ರ ರಾವ್ ಅನೇಕ ನಿರ್ದೇಶಕರ ಜೊತೆಗೆ ಕೆಲಸ ನಿರ್ವಹಿಸಿದ್ದಾರೆ, ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿದೆ.[೨][೩]

ಟಿ ವಿ ಕಾರ್ಯಕ್ರಮಗಳು[ಬದಲಾಯಿಸಿ]

ಕಸ್ತೂರಿ ವಾಹಿನಿಯಲ್ಲಿ ಬರುತ್ತಿದ್ದ ತರ್ಲೆ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಇನ್ನು ಸಾಗರ್ ಅವರು ಮತ್ತೊಂದು ಕಾರ್ಯಕ್ರಮ "ಮಜ ವಿಥ್ ಸ್ರುಜ"- ಇವರು ಇಲ್ಲಿ ಅನೇಕ ಹಾಸ್ಯ ಹಾಗು ಪ್ರತಿಭಾವಂತ ಸೆಲೆಬ್ರಿಟಿಗಳ ಹಾಗು ರಾಜಕಾರಣಿಗಳ ಬಗ್ಗೆ ನಟನೆ ತೋರಿದ್ದರು. ಮತ್ತೆ ಕೆಲವು ದಿವಸಗಳ ನಂತರ ಬಿಗ್ ಬಾಸ್ ಕನ್ನಡ ಸೀಸನ್ 1 ರಲ್ಲಿ ಅವರು ಎರಡನೇ ಸ್ಥಾನವನ್ನು ಪಡೆದುಕೊಂಡರು. ತದನಂತರ ಇವರು ಕಾಮಿಡಿ ಸರ್ಕಲ್ಲಿನಲ್ಲಿ ಈ ಟಿ ವಿಯ ಮೂಲಕ ಕಾಣಿಸಿಕೊಂಡರು. ಟಿ ವಿ೯ ನಲ್ಲಿ ಕೊಯ್ಯಮ್ ಕೊಟ್ರ ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಮಜ ವಿಥ್ ಸೃಜ ಇದು ಸುಮಾರು ೨೦೧೦ರಲ್ಲಿ ನಡೆಯುತಿದ್ದ ಹಾಸ್ಯ ಕಾರ್ಯಕ್ರಮ. ವಿಜಯ್ ಪ್ರಸಾದ್ರವರು ನಿರ್ದೇಶನವಹಿಸಿದ್ದರು. ಪ್ರಸಾದ್ ರವರು ಬೇರೆ ಯಾರು ಅಲ್ಲದೆ ಮುಂಚಿತವಾಗಿ ಬರುತಿದ್ದ ಸಿಲ್ಲಿ ಲಲ್ಲಿ ಕಾರ್ಯಕ್ರಮವನ್ನು ನಿರ್ದೇಶಿಸಿದ್ದವರು. ಇವರು ಅನೇಕ ಹಾಸ್ಯ ನಟನೆಯವರೊಂದಿಗೆ ಕಿಜೋಡಿಸಿದ್ದಾರೆ. ಉದಾ: ಮಿಮಿಕ್ರಿ ದಯಾನಂದ, ಅಂತೋಣಿ ಕಮಯ್ ಮತ್ತು ಸ್ರುಜನ್ ಲೋಕೇಶ್. ಸೆಲಿಬ್ರಿಟಿಗಳನ್ನು ಕರೆದು, ಮಾತನಾಡಿದ ಅವರೊಟ್ಟಿಗೆ ಹಾಸ್ಯವನ್ನು ಮಾಡುತ್ತಿದ್ದರು. ಇಂಥ ಒಂದು ಕಾರ್ಯಕ್ರಮ ಮುಗಿದದ್ದು ೨೦೧೧ರಲ್ಲಿ. ಸಾಗರ್ ರವರು ಇದರಲ್ಲಿ ಮುಖ್ಯವಾಗಿ "ಚಿಡುಪುಡಿ ಚಿದಾನಂದ" ಎಂಬ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ಕೊಯ್ಯಮ್ ಕೊಟ್ರ ಟಿ ವಿ ನಿನೆ ವಾಹಿನಿಯವರು ಅರುಣ್ ರವರನ್ನು ಮುಂದಿಟ್ಟುಕೊಂಡು ಕಾರ್ಯಕ್ರಮ ಮಾಡಿದ್ದರು. ಈ ಒಂದು ಕಾರ್ಯಕ್ರಮವು ಸುಮಾರು ೨೫ ಸಂಚಿಕೆಗಳಶ್ಟ್ ಹೊರಬಂದಿತ್ತು.

ಕೆಲವು ಚಿತ್ರಗಳು[ಬದಲಾಯಿಸಿ]

ಕೆ ರಾಘವೇಂದ್ರ ರಾವ್ ರವರ ಚಿತ್ರ "ಶ್ರೀ ಮಂಜುನಾಥ" ಕನ್ನಡ ಮತ್ತು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ . ಇಲ್ಲಿಯವರೆಗು ಇವರು ಸುಮಾರು ೫೨ ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಅನೇಕ ಪ್ರಭಾವ ಉಳ್ಲ ನಟ, ನಿರ್ದೇಶಕರ ಜೊತೆ ಕಾರ್ಯ ನಿರ್ವಹಿಸಿದ್ದಾರೆ. ಉದಾ: ರವಿಚಂದ್ರನ್, ವಿಶ್ಣುವರ್ಧನ್, ಸುದೀಪ್, ಪುನೀತ್ ರಾಜ್ಕುಮಾರ್, ಗಣೇಶ್ ಮತ್ತು ಇನ್ನು ಹಲವಾರು.

ನಟಿಸಿರುವ ಚಿತ್ರಗಳು[ಬದಲಾಯಿಸಿ]

 • ಮರ್ಮ,
 • ಪರ್ವ
 • ಚಂದು
 • ಜಸ್ಟ್ ಮಾತ್ ಮಾತಲ್ಲಿ
 • ರಾಮ್
 • ನಂ ೭೩ ಶಾಂತಿ ನಿವಾಸ
 • ವೀರ ಮದಕರಿ
 • ವಿಶ್ಣುವರ್ಧನ
 • ಚಿಂಗಾರಿ
 • ಬಚ್ಚ್ನ್
 • ಆಟೊ ರಾಜ
 • ಮೀನಾ
 • ಬೆಂಕಿ ಪಟ್ನಾ
 • ರಿಂಗ್ ಮಾಸ್ಟೆರ್
 • ಜೋಕರ್
 • ಪೊಉರ್ನಮಿ [ತೆಲುಗು]
 • ಸಂಡಮಾರುತಮ್ [ತೆಮಿಳು]

ಪರದೆಯ ಮೇಲೆ[ಬದಲಾಯಿಸಿ]

ಪರದೆಯ ಮೇಲೆ ಕಾಣಿಸಿಕೊಂಡಿರುವ ಕೆಲವು ಕಾರ್ಯಕ್ರಮವೆಂದರೆ -

 • ತರ್ಲೆ,
 • ಕೊಯ್ಯಮ್ ಕೊಟ್ರ,
 • ಕಾಮಿಡಿ ಸರ್ಕಲ್,
 • ಸಿಂಪಲ್ಲಾಗಿ ಒಂದು ಸಿಂಗಿಂಗ್ ಶೋ,
 • ಬೆಂಗಳೂರು ಬೆಣ್ಣೆ ದೋಸೆ.

ಇವರು ದೆಸಿನೆರ್, ನಟ ಮತ್ತು ಎ‍ಎಕ್ಯೂಟರ್ ಆಗಿ ಭಾರತ ಹಾಗು ಅನೇಕ ಬೇರೆ ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೆ ಅಲ್ಲದೆ ಪ್ರತಿಭಾವಂತ ತಿಯೇಟರ್ ಪೆರ್ಸೊನಾಲಿಟಿಗಳ ಜೊತೆಗೆ ಕೂಡ ಕೆಲಸ ಮಾಡಿದ್ದಾರೆ. ಉದಾ: ಗಿರೀಶ್ ಕಾರ್ನಾಡ್, ಲೇಟ್ ಬಿ ವಿ ಕಾರಂತ್ ಜೊತೆಯು ಕೂಡ ಕೆಲಸ ಮಾಡಿದ್ದಾರೆ. ಹೊರ ದೇಶದ ನಿರ್ದೇಶಕರಾದ ವಾಸಲಿ, ಫ಼್ರಿತೆಸ್ ಬೆನೆವಿಡೆಸ್, ಕ್ರಿಸ್ಟೋ ಜೊತೆಯು ಕೂಡ ಕೆಲಸ ಮಾಡಿದ್ದಾರೆ. ಯುರೋಪ್ ಮತ್ತು ಅಮೇರಿಕ ದೇಶದ ಒಬ್ಬ ಅದ್ಬುತ ನಟನಾಗಿ ಪ್ರಯಾಣಿಸಿದ್ದಾರೆ. ಅಲ್ಲಿ ಹೋಗಿ ಅವರು ನಟನೆ ಮಾಡಿದ್ದ ಪ್ರದರ್ಶನ "ರಂಗಯ್ಯನ" ಮ್ಯ್ಸಸೂರು. ಇವರು ಮುಖ್ಯವಾಗಿ ಜೀ ಕನ್ನಡ, ಸುವರ್ಣ, ಕಸ್ತೂರಿ, ಉದಯ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಿಡಿದಿಯ ಇನ್ನೊವೇಟಿವ್ ಫ಼ಿಲ್ಮ್ ಸಿಟಿಗೆ ಕಲಾ ನಿರ್ದೇಶ್ಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಶ್ತೇ ಅಲ್ಲದೆ ಹಲವಾರು ಚಿತ್ರಗಳಿಗೆ ಕಲಾ ನಿರ್ದೇಶ್ಕರಾಗಿ ದುಡಿದಿದ್ದಾರೆ. ಉದಾ: ಜೂಲಿ, ರಿಶಿ, ಆಕಾಶ್, ಸಿ, ನ್ಯೂಸ್, ನಮ್ಮ ಬಸವ, ಅಮ್ರಿತ ದಾರೆ, ಲವ್, ಕಾಂತಿ, ಕಾಚನ ಗಂಗಾ, ಲಂಕೇಶ್ ಪತ್ರಿಕೆ, ಪ್ರೀತಿ ಪ್ರೇಮ ಪಣಯ, ಚಂದು, ಧ್ಮ್ ಮತ್ತು ಇನ್ನೂ ಕೆಲುವು. ಅರುಣ್ ಸಾಗರ್ ಒಬ್ಬ ಕಲಾವಿದ, ನಿರ್ದೇಶಕ, ಹಾಸ್ಯ ನಟ ಎಲ್ಲವೂ ಆಗಿದ್ದರೂ ಸಹ ಕನ್ನಡ ಚಿತ್ರರಂಗದಲ್ಲಿ ಸರಿಯಾದ ತಳಪಾಯ ಇವರಿಗಿನ್ನು ದೊರಕಿಲ್ಲ. ಬೆಂಕಿಪಣ್ನ ಎಂಬ ಒಂದು ಕನ್ನಡ ಚಿತ್ರದಲ್ಲಿ ಬೇರೆಯಾವ ದೊಡ್ದ ಪ್ರಾಜೆಕ್ಟ್ ಇವರು ಕೈಗೊಡಲಿಲ್ಲ. ಇವರು ಕಾಮಿಡಿ ಸರ್ಕಸ್ ಎಂಬ ಕಾರ್ಯಕ್ರಮದಲ್ಲಿ ತಮ್ಮ ಪ್ರಯಾಣವನ್ನು ಅರ್ಧಕ್ಕೆ ನಿಲ್ಲಿಸಿದರು. ಏನೇ ಆದರು ಸಾಗರ್ ತಮ್ಮಲ್ಲಿರುವ ಕಲೆಯನ್ನು ಹೊರಹಾಕುವುದಕ್ಕೆ ಇಶ್ತಪಡುತ್ತಾರೆ. ಹಾಗಾಗಿ ಅದನ್ನು ಸಾದಿಸಲು ಕೂಡ ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಅರುಣ್ ರವರು ಹಿಂದೀ, ಕನ್ನಡ, ತೆಮಿಳುನಲ್ಲಿಯೂ ಹೆಜ್ಜಿ ಇಡುತ್ತಿದ್ದಾರೆ. ಇವರನ್ನು ತಮಿಳಿಗೆ ಪರಿಚಯಿಸಿಕೊಡುತ್ತಿರುವವರು ಸರತ್ ಕುಮಾರ್. ಕನ್ನಡದ ಉತ್ತಮ ನಿರ್ದೇಶಕರಾದ ನಾಗಶೇಖರ್, ಸತ್ಯ ಹೆಗ್ಡೆರವರು ಸಹ ಅರುಣ್ ಸಾಗರ್ ರವರಿಗೆ ಕೈಚಾಚಿದ್ದಾರೆ.[೪]

ಉಲ್ಲೇಖನಗಳು[ಬದಲಾಯಿಸಿ]