ಅಮ್ರೋಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮ್ರೋಹ ಉತ್ತರ ಪ್ರದೇಶ ರಾಜ್ಯದ ಅಮ್ರೋಹ ಜಿಲ್ಲೆ ಯ ಆಡಳಿತ ಕೇಂದ್ರ.

ಇತಿಹಾಸ[ಬದಲಾಯಿಸಿ]

ಅಮ್ರೋಹದ ಹೆಸರು ಅಮ್ ಎಂದರೆ ಮಾವು ಎಂಬುದರಿಂದ ಬಂದಿದೆ. ಈ ಪ್ರದೇಶವು ಮಾವಿನ ಹಣ್ಣಿಗೆ ಪ್ರಸಿದ್ಧವಾಗಿದೆ.೧೨೬೬ರಲ್ಲಿ ಘಿಯಾಸುದ್ದೀನ್ ಬಾಲ್ಬನ್ ಇಲ್ಲಿಗೆ ದಂಡೆತ್ತಿ ಬಂದುದು ಈಗ ಲಭ್ಯವಿರುವ ಅಧಿಕೃತ ಪುರಾವೆ.ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ದಂಡೆತ್ತಿ ಬಂದ ಮಂಗೋಲರನ್ನು ಹಿಮ್ಮೆಟ್ಟಿಸಿದ ಸ್ಥಳ ಇದಾಗಿದೆ.

ಜನ-ಜೀವನ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೧,೯೭,೧೩೫.ಪುರುಷರು:೧,೦೨,೮೦೪ ಮತ್ತು ಮಹಿಳೆಯರು ೪,೩೩೧. ಸಾಕ್ಷರತೆ:೬೩.೮೮% . ಮುಖ್ಯವಾಗಿ ಈ ನಗರವು ಮುಸ್ಲಿಂ ಸಮುದಾಯ ಹೆಚ್ಚಾಗಿರುವ ನಗರವಾಗಿದೆ.

ಅಮ್ರೋಹದಲ್ಲಿ ವಿವಿಧ ಧರ್ಮಗಳು
ಧರ್ಮ ಶೇಕಡಾ
ಹಿಂದೂ ಧರ್ಮ
  
32%
ಮುಸ್ಲಿಂ
  
66%
Jains
  
1.7%
ಇತರರು†
  
0.3%
Distribution of religions
ಸೇರಿದೆ ಸಿಖ್s (0.2%), ಬೌದ್ಧರು (<0.2%).

ಆರ್ಥಿಕತೆ[ಬದಲಾಯಿಸಿ]

ಮಾವು ಇಲ್ಲಿಯ ಮುಖ್ಯ ಬೆಳೆ ಮತ್ತು ಆರ್ಥಿಕ ಮೂಲ.ಕರಕುಶಲ ವಸ್ತುಗಳ ತಯಾರಿಕೆ,ಕುಂಬಾರಿಕೆ ಮುಂತಾದವುಗಳೂ ಪ್ರಾಮುಖ್ಯವಾದವುಗಳು.

ಬಾಹ್ಯ ಸಂಪರ್ಕ[ಬದಲಾಯಿಸಿ]

"https://kn.wikipedia.org/w/index.php?title=ಅಮ್ರೋಹ&oldid=1128790" ಇಂದ ಪಡೆಯಲ್ಪಟ್ಟಿದೆ