ಅಮ್ಮಚ್ಚಿಯೆಂಬ ನೆನಪು (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಅಮ್ಮಚ್ಚಿಯೆಂಬ ನೆನಪು
ನಿರ್ದೇಶನಚಂಪಾ ಪಿ ಶೆಟ್ಟಿ
ನಿರ್ಮಾಪಕ
 • ಪ್ರಕಾಶ್ ಪಿ ಶೆಟ್ಟಿ
 • ಗೀತಾ ಸೂರತ್ಕಲ್
 • ಗೌರಮ್ಮ
 • ವಂದನಾ ಇನಾಂದಾರ್
 • ಕಲಾ ಕದಂಬ ಆರ್ಟ್ ಸೆಂಟರ್
ಲೇಖಕವೈದೇಹಿ
ಚಿತ್ರಕಥೆಚಂಪಾ ಪಿ ಶೆಟ್ಟಿ
ಪಾತ್ರವರ್ಗ
 • ರಾಜ್ ಬಿ. ಶೆಟ್ಟಿ
 • ವೈಜಯಂತಿ ವಿ ಅಡಿಗ
 • ದಿಯಾ ಪಾಲಕ್ಕಲ್
 • ದೀಪಿಕಾ ಆರಾಧ್ಯ
 • ರಾಧಾಕೃಷ್ಣ ಉರಾಲ
ಸಂಗೀತಕಾಶೀನಾಥ್ ಪತ್ತಾರ್
ಛಾಯಾಗ್ರಹಣನವೀನ್ ಕುಮಾರ್
ಸಂಕಲನಹರೀಶ್ ಕೊಮ್ಮೆ
ಬಿಡುಗಡೆಯಾಗಿದ್ದು
 • 1 ನವೆಂಬರ್ 2018 (2018-11-01)
ಅವಧಿ132 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಅಮ್ಮಚ್ಚಿಯೆಂಬ ನೆನಪು ೨೦೧೮ರ ಒಂದು ಕನ್ನಡ ನಾಟಕೀಯ ಚಲನಚಿತ್ರ. ಚಂಪಾ ಪಿ. ಶೆಟ್ಟಿ ನಿರ್ದೇಶಿಸಿದ ಈ ಚಿತ್ರವು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬರಹಗಾರ್ತಿ ವೈದೇಹಿಯವರ ಮೂರು ಸಣ್ಣಕಥೆಗಳ ಮೇಲೆ ಆಧಾರಿತವಾಗಿದೆ.[೧][೨][೩] ಚಿತ್ರದ ಸಂಗೀತವನ್ನು ಕಾಶೀನಾಥ್ ಪತ್ತಾರ್ ಸಂಯೋಜಿಸಿದ್ದಾರೆ. ರಾಜ್ ಬಿ. ಶೆಟ್ಟಿ, ವೈಜಯಂತಿ ವಿ ಅಡಿಗ, ದಿಯಾ ಪಾಲಕ್ಕಲ್, ದೀಪಿಕಾ ಆರಾಧ್ಯ, ಡಾ. ರಾಧಾಕೃಷ್ಣ ಉರಾಲ, ಗೀತಾ ಸೂರತ್ಕಲ್, ವಿಶ್ವನಾಥ ಉರಾಲ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಏಪ್ರನ್ ಪ್ರೊಡಕ್ಷನ್ಸ್ ಲಾಂಛನದಡಿ ಪ್ರಕಾಶ್ ಪಿ. ಶೆಟ್ಟಿ, ಗೀತಾ ಸೂರತ್ಕಲ್, ವಂದನಾ ಇನಾಂದಾರ್, ಕಲಾ ಕದಂಬ ಆರ್ಟ್ ಸೆಂಟರ್, ಗೌರಮ್ಮ ನಿರ್ಮಾಣ ಮಾಡಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

 • 'ವೆಂಕಪ್ಪಯ್ಯ' ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ
 • 'ಅಮ್ಮಚ್ಚಿ' ಪಾತ್ರದಲ್ಲಿ ವೈಜಯಂತಿ ವಿ. ಅಡಿಗ
 • 'ಯುವ ಸೀತಾ' ಪಾತ್ರದಲ್ಲಿ ದಿಯಾ ಪಾಲಕ್ಕಳ್
 • 'ಅಕ್ಕು' ಪಾತ್ರದಲ್ಲಿ ದೀಪಿಕಾ ಆರಾಧ್ಯ
 • 'ಹಿರಿವಯಸ್ಸಿನ ಸೀತಾ' ಪಾತ್ರದಲ್ಲಿ ವೈದೇಹಿ
 • ರಾಧಾಕೃಷ್ಣ ಉರಾಲ 'ಪುಟ್ಟಮ್ಮತ್ತೆ'
 • 'ಶೇಷಮ್ಮ' ಪಾತ್ರದಲ್ಲಿ ಗೀತಾ ಸೂರತ್ಕಲ್
 • 'ವಾಸು' ಪಾತ್ರದಲ್ಲಿ ವಿಶ್ವನಾಥ ಉರಾಲ
 • 'ಅಣ್ಣಯ್ಯ' ಪಾತ್ರದಲ್ಲಿ ಬಿ ಜಿ ರಾಮಕೃಷ್ಣ
 • 'ಅಕ್ಕು ಗಂಡ'ನ ಪಾತ್ರದಲ್ಲಿ ಚಂದ್ರಹಾಸ ಉಳ್ಳಾಲ

ಧ್ವನಿವಾಹಿನಿ[ಬದಲಾಯಿಸಿ]

ಚಿತ್ರದ ಧ್ವನಿವಾಹಿನಿಯನ್ನು ಕಾಶೀನಾಥ್ ಪತ್ತಾರ್ ಸಂಯೋಜಿಸಿದ್ದಾರೆ. ವೈದೇಹಿಯವರು ಎಲ್ಲ ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ.

ಸಂ.ಹಾಡುಗಾಯಕ(ಕಿ)ಸಮಯ
1."ಹೊಳೆವ ಹೊಳೆಯಾಚೆಗೆ (ನಿಧಾನ)"ಅನುರಾಧಾ ಭಟ್ 
2."ಸರಪಳಿ ಇಲ್ಲದೇ"ಮಂಗಳಾ ರವಿ 
3."ಏಳು ಸುತ್ತಿನ ಕೋಟೆ"ಅನುರಾಧಾ ಭಟ್ 
4."ಕೆಳ ಹೂವ ಹಣೆಬರಹ"ಸಂಗೀತಾ ಕಟ್ಟಿ 
5."ಕಿಟಕಿಯಾಚೆಯ ಕಾಲ"ಮಾನಸ ಹೊಳ್ಳ 

ವಿಮರ್ಶಾತ್ಮಕ ಪ್ರತಿಕ್ರಿಯೆ[ಬದಲಾಯಿಸಿ]

ಈ ಚಲನಚಿತ್ರವು ವಿಮರ್ಶಕರಿಂದ ಉತ್ಸಾಹಭರಿತ ವಿಮರ್ಶೆಗಳನ್ನು ಪಡೆಯಿತು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]