ಅಮ್ಮಚ್ಚಿಯೆಂಬ ನೆನಪು (ಚಲನಚಿತ್ರ)
ಗೋಚರ
ಅಮ್ಮಚ್ಚಿಯೆಂಬ ನೆನಪು | |
---|---|
Directed by | ಚಂಪಾ ಪಿ ಶೆಟ್ಟಿ |
Written by | ವೈದೇಹಿ |
Screenplay by | ಚಂಪಾ ಪಿ ಶೆಟ್ಟಿ |
Produced by |
|
Starring |
|
Cinematography | ನವೀನ್ ಕುಮಾರ್ |
Edited by | ಹರೀಶ್ ಕೊಮ್ಮೆ |
Music by | ಕಾಶೀನಾಥ್ ಪತ್ತಾರ್ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Running time | 132 ನಿಮಿಷಗಳು |
Country | ಭಾರತ |
Language | ಕನ್ನಡ |
ಅಮ್ಮಚ್ಚಿಯೆಂಬ ನೆನಪು ೨೦೧೮ರ ಒಂದು ಕನ್ನಡ ನಾಟಕೀಯ ಚಲನಚಿತ್ರ. ಚಂಪಾ ಪಿ. ಶೆಟ್ಟಿ ನಿರ್ದೇಶಿಸಿದ ಈ ಚಿತ್ರವು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬರಹಗಾರ್ತಿ ವೈದೇಹಿಯವರ ಮೂರು ಸಣ್ಣಕಥೆಗಳ ಮೇಲೆ ಆಧಾರಿತವಾಗಿದೆ.[೧][೨][೩] ಚಿತ್ರದ ಸಂಗೀತವನ್ನು ಕಾಶೀನಾಥ್ ಪತ್ತಾರ್ ಸಂಯೋಜಿಸಿದ್ದಾರೆ. ರಾಜ್ ಬಿ. ಶೆಟ್ಟಿ, ವೈಜಯಂತಿ ವಿ ಅಡಿಗ, ದಿಯಾ ಪಾಲಕ್ಕಲ್, ದೀಪಿಕಾ ಆರಾಧ್ಯ, ಡಾ. ರಾಧಾಕೃಷ್ಣ ಉರಾಲ, ಗೀತಾ ಸೂರತ್ಕಲ್, ವಿಶ್ವನಾಥ ಉರಾಲ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಏಪ್ರನ್ ಪ್ರೊಡಕ್ಷನ್ಸ್ ಲಾಂಛನದಡಿ ಪ್ರಕಾಶ್ ಪಿ. ಶೆಟ್ಟಿ, ಗೀತಾ ಸೂರತ್ಕಲ್, ವಂದನಾ ಇನಾಂದಾರ್, ಕಲಾ ಕದಂಬ ಆರ್ಟ್ ಸೆಂಟರ್, ಗೌರಮ್ಮ ನಿರ್ಮಾಣ ಮಾಡಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- 'ವೆಂಕಪ್ಪಯ್ಯ' ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ
- 'ಅಮ್ಮಚ್ಚಿ' ಪಾತ್ರದಲ್ಲಿ ವೈಜಯಂತಿ ವಿ. ಅಡಿಗ
- 'ಯುವ ಸೀತಾ' ಪಾತ್ರದಲ್ಲಿ ದಿಯಾ ಪಾಲಕ್ಕಳ್
- 'ಅಕ್ಕು' ಪಾತ್ರದಲ್ಲಿ ದೀಪಿಕಾ ಆರಾಧ್ಯ
- 'ಹಿರಿವಯಸ್ಸಿನ ಸೀತಾ' ಪಾತ್ರದಲ್ಲಿ ವೈದೇಹಿ
- ರಾಧಾಕೃಷ್ಣ ಉರಾಳ 'ಪುಟ್ಟಮ್ಮತ್ತೆ'
- 'ಶೇಷಮ್ಮ' ಪಾತ್ರದಲ್ಲಿ ಗೀತಾ ಸೂರತ್ಕಲ್
- 'ವಾಸು' ಪಾತ್ರದಲ್ಲಿ ವಿಶ್ವನಾಥ ಉರಾಳ
- 'ಅಣ್ಣಯ್ಯ' ಪಾತ್ರದಲ್ಲಿ ಬಿ ಜಿ ರಾಮಕೃಷ್ಣ
- 'ಅಕ್ಕು ಗಂಡ'ನ ಪಾತ್ರದಲ್ಲಿ ಚಂದ್ರಹಾಸ ಉಳ್ಳಾಲ
ಧ್ವನಿವಾಹಿನಿ
[ಬದಲಾಯಿಸಿ]ಚಿತ್ರದ ಧ್ವನಿವಾಹಿನಿಯನ್ನು ಕಾಶೀನಾಥ್ ಪತ್ತಾರ್ ಸಂಯೋಜಿಸಿದ್ದಾರೆ. ವೈದೇಹಿಯವರು ಎಲ್ಲ ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ.
ಸಂ. | ಹಾಡು | ಗಾಯಕ(ಕಿ) | ಸಮಯ |
---|---|---|---|
1. | "ಹೊಳೆವ ಹೊಳೆಯಾಚೆಗೆ (ನಿಧಾನ)" | ಅನುರಾಧಾ ಭಟ್ | |
2. | "ಸರಪಳಿ ಇಲ್ಲದೇ" | ಮಂಗಳಾ ರವಿ | |
3. | "ಏಳು ಸುತ್ತಿನ ಕೋಟೆ" | ಅನುರಾಧಾ ಭಟ್ | |
4. | "ಕೆಳ ಹೂವ ಹಣೆಬರಹ" | ಸಂಗೀತಾ ಕಟ್ಟಿ | |
5. | "ಕಿಟಕಿಯಾಚೆಯ ಕಾಲ" | ಮಾನಸ ಹೊಳ್ಳ |
ವಿಮರ್ಶಾತ್ಮಕ ಪ್ರತಿಕ್ರಿಯೆ
[ಬದಲಾಯಿಸಿ]ಈ ಚಲನಚಿತ್ರವು ವಿಮರ್ಶಕರಿಂದ ಉತ್ಸಾಹಭರಿತ ವಿಮರ್ಶೆಗಳನ್ನು ಪಡೆಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ https://timesofindia.indiatimes.com/entertainment/kannada/movie-reviews/ammachi-yemba-nenapu/movie-review/66454059.cms
- ↑ "ಆರ್ಕೈವ್ ನಕಲು". Archived from the original on 2019-12-28. Retrieved 2020-04-26.
- ↑ https://www.thenewsminute.com/article/ammachi-yemba-nenapu-review-beautiful-kannada-film-celebrates-women-90909