ಅಮೃತಧಾರೆ (ಚಲನಚಿತ್ರ)
ಅಮೃತಧಾರೆ 2005 ರಲ್ಲಿ ತೆರೆಕಂಡ ಭಾರತೀಯ ಕನ್ನಡ ಭಾಷೆಯ ಪ್ರಣಯ ನಾಟಕ ಚಲನಚಿತ್ರವಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದಾರೆ ಮತ್ತು ಸಹ-ನಿರ್ಮಾಣ ಮಾಡಿದ್ದಾರೆ[೧] [೨] . ನಟ ರಮೇಶ್ ಅರವಿಂದ್ ಮತ್ತು ಚಂದ್ರಶೇಖರ್ ಬರೆದಿದ್ದಾರೆ. ಧ್ಯಾನ್ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಚಿತ್ರವು 7 ಅಕ್ಟೋಬರ್ 2005 ರಂದು ಬಿಡುಗಡೆಯಾಯಿತು. ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ[೩]. ಚಿತ್ರವು ಇಪ್ಪತ್ತೈದು ವಾರಗಳ ಕಾಲ ಚಿತ್ರಮಂದಿರದಲ್ಲಿ ಓಡಿತು [೪][೫] .
ಅಮೃತಧಾರೆ (ಚಲನಚಿತ್ರ) | |
---|---|
ಅಮೃತಧಾರೆ | |
ನಿರ್ದೇಶನ | ನಾಗತಿಹಳ್ಳಿ ಚಂದ್ರಶೇಖರ್ |
ಪಾತ್ರವರ್ಗ | ಧ್ಯಾನ್ ರಮ್ಯ |
ಸಂಗೀತ | ಮನೋಮೂರ್ತಿ |
ಛಾಯಾಗ್ರಹಣ | ಕೃಷ್ಣಕುಮಾರ್ |
ಸಂಕಲನ | ಬಿ.ಎಸ್ ಕೆಂಪೆರಾಜು |
ಬಿಡುಗಡೆಯಾಗಿದ್ದು | 7 ಅಕ್ಟೋಬರ್ 2005 |
ಸಾಹಿತ್ಯ | ನಾಗತಿಹಳ್ಳಿ ಚಂದ್ರಶೇಖರ್ |
ಹಿನ್ನೆಲೆ ಗಾಯನ | ಸೋನು ನಿಗಮ್, ಚೈತ್ರಾ, ಸುಪ್ರಿಯಾ ಆಚಾರ್ಯ, ರಾಜು ಅನಂತಸ್ವಾಮಿ |
ಕಥಾ ಹಂದರ
[ಬದಲಾಯಿಸಿ]ಪುರು (ಧ್ಯಾನ್) ಮತ್ತು ಅಮೃತಾ (ರಮ್ಯಾ) ವಿವಾಹಿತ ದಂಪತಿಗಳು. ಆದಾಗ್ಯೂ, ಅವರು ಪ್ರೇಮಿಗಳಂತೆ ವರ್ತಿಸುತ್ತಾರೆ. ಒಬ್ಬರಿಗೊಬ್ಬರು ಇಷ್ಟಪಟ್ಟರೂ ಕೆಲವೊಮ್ಮೆ ಜಗಳವಾಡುತ್ತಾರೆ. ಅಮೃತಳಿಗೆ ಹಣ ಖರ್ಚು ಮಾಡುವುದೆಂರೆ ಇಷ್ಟ, ಆದರೆ ಪುರು ಜಿಪುಣ. ಅವಳಿಗೆ ತಮ್ಮ ಚಿಕ್ಕ ಕುಟುಂಬಕ್ಕೆ ಮಗು ಒಂದು ಬೇಕೆಂಬ ಬಯಕೆ ಇರುತ್ತದೆ. ಆದರೆ ಪುರು ಒಂದು ಮನೆ ನಿರ್ಮಿಸುವ ಕನಸನ್ನು ಕಾಣುತ್ತಿರುತ್ತಾನೆ. ಇವರಿಬ್ಬರು ಆಧುನಿಕ ಯುಗದಲ್ಲಿ ಮದುವೆಯ ನಂತರ ಬರುವ ಕಷ್ಟಗಳನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರು ನೋಡಬಹುದು. ಚಿತ್ರವು ಬಲವಾದ ಸಾಮಾಜಿಕ ಸಂದೇಶವನ್ನು ಹೊಂದಿದೆ.
ಪಾತ್ರವರ್ಗ
[ಬದಲಾಯಿಸಿ]- ಮುಖ್ಯ ಪಾತ್ರಗಳು
- ಪೋಷಕ ಪಾತ್ರಗಳು
- ಗಣೇಶ್: ವೆಂಕಿ ಮತ್ತು ಪುರುವಿನ ಸಹೋದ್ಯೋಗಿ
- ಮಂಡ್ಯಾ ರಮೇಶ್: ಡಾ ಸುಬ್ಬು, ಪುರು ಮತ್ತು ಅಮೃತಳಾ ಸ್ನೇಹಿತನಾಗಿ
- ಮುಖ್ಯಮಂತ್ರಿ ಚಂದ್ರು : ಪೋಲಿಸ್ ಇನ್ಸ್‌ಪೆಕ್ಟರ್ ಆಗಿ.
- ಭವ್ಯ : ಅಮೃತಳಾ ಅಮ್ಮನಾಗಿ
- ಅವಿನಾಶ್: ಪುರುವಿನ ಅಪ್ಪನಾಗಿ
- ಚಿತ್ರಾ ಶೈಣೈ
- ಯಶವಂತ ಸರದೇಶಪಾಂಡೆ: ನಾನಿಯಾಗಿ, ಪುರು ಮತ್ತು ಅಮೃತಳಾ ಸ್ನೇಹಿತನಾಗಿ
- ಮನದೀಪ್ ರಾಯ್: ಸೇಠ್ ಆಗಿ.
- ಕರಿ ಬಸಯ್ಯ
- ಗೌರವ ಪಾತ್ರ(ಗಳು)
ಸಂಗೀತ
[ಬದಲಾಯಿಸಿ]ಅಧಿಕೃತ ಧ್ವನಿಪಥವು ಆರು ಹಾಡುಗಳನ್ನು ಒಳಗೊಂಡಿದೆ. ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ನಾಗತಿಹಳ್ಳಿ ಚಂದ್ರಶೇಖರ್ ಸಾಹಿತ್ಯವನ್ನು ಬರೆದಿದ್ದಾರೆ.
ಪ್ರಶಸ್ತಿಗಳು ಮತ್ತು ನಾಮನಿರ್ದೇಶನ
[ಬದಲಾಯಿಸಿ]ವರ್ಷ | ಪ್ರಶಸ್ತಿ | ವರ್ಗ | ಫಲಿತಾಂಶ | ಇತರೆ ಟಿಪ್ಪಣಿಗಳು! | |
---|---|---|---|---|---|
2005–06 | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು | ಮೂರನೇ ಅತ್ಯುತ್ತಮ ಚಿತ್ರ | ಗೆಲುವು | ||
2005–06 | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು | ಅತ್ಯುತ್ತಮ ಚಿತ್ರ ಹಿನ್ನೆಲೆ ಗಾಯಕಿ | ಗೆಲುವು | ಚೈತ್ರ ಎಚ್.ಜಿ (ಹಾಡು:ಹುಡುಗ ಹುಡುಗ) | |
2005–06 | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು | ಅತ್ಯುತ್ತಮ ಸೌಂಡ್ ರೆಕಾರ್ಡಿಂಗ್ | ಗೆಲುವು | ಜಾನ್‌ಸನ್ | |
2005 | 53 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ದಕ್ಷಿಣ | ಅತ್ಯುತ್ತಮ ಚಲನಚಿತ್ರ | Nominated | ||
2005 | 53 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ದಕ್ಷಿಣ | ಅತ್ಯುತ್ತಮ ನಿರ್ದೇಶನ | Nominated | ||
2005 | 53 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ದಕ್ಷಿಣ | ಅತ್ಯುತ್ತಮ ನಟಿ | Nominated |
ಉಲ್ಲೇಖಗಳು
[ಬದಲಾಯಿಸಿ]- ↑ Jha, Lata (19 September 2005). "Amrithdhare: A must watch!". Rediff.com. Archived from the original on 2 January 2023. Retrieved 6 June 2022.
- ↑ "Amrithadhare". Sify. 18 September 2005. Archived from the original on 6 June 2022.
- ↑ "Amitabh in Amruthadhare". Deccan Herald. 31 July 2005. Archived from the original on 10 April 2007. Retrieved 11 October 2020.
- ↑ Vijayasarathy, R. G. "'Anna Thangi' continues onward march". IANS. Archived from the original on 19 June 2006. Retrieved 20 May 2017.
- ↑ Vijayasarathy, R. G. (24 July 2006). "'I'm not making films for charity'". IANS. Archived from the original on 30 April 2023. Retrieved 30 April 2023.