ಅಮರ ಚಿತ್ರ ಕಥಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಮರ ಚಿತ್ರಕಥೆ ಇಂದ ಪುನರ್ನಿರ್ದೇಶಿತ)
Amar Chitra Katha
ಚಿತ್ರ:Ack logo.jpg
The logo
Publication information
ಪ್ರಕಾಶಕAmar Chitra Katha Pvt. Ltd.
ಪ್ರಕಾರ/ಶೈಲಿ
ಪ್ರಕಟಣೆಗೊಂಡ ಸಂಖ್ಯೆ10001
Creative team
ಬರಹಗಾರ (ರು)Various
ಕಲಾವಿದ (ರು)Various
ಸೃಷ್ಟಿಕರ್ತ (ರು)Anant Pai

ಟೆಂಪ್ಲೇಟು:Comics infobox sec/genrecat

ಅಮರ ಚಿತ್ರ ಕಥಾ (Hindiअमर चित्र कथा, amar citra kathā ?, "ಎಂದೆಂದಿಗೂ ಸೂರೆಗೊಳ್ಳುವ (ಅಥವಾ ಚಿತ್ರ) ಕಥೆಗಳು") (ಅಮರ ಚಿತ್ರ ಕಥಾ PL ) ಎಂಬುದು ಹಿಂದೂ ಪುರಾಣ, ಭಾರತೀಯ ಇತಿಹಾಸ, ಜಾನಪದ ಮತ್ತು ಸಂಸ್ಕೃತಿಯಿಂದ ಕಥೆಗಳನ್ನು ಸಚಿತ್ರ ರೂಪದಲ್ಲಿ ಹೇಳುವ ಭಾರತದ ಅತ್ಯಂತ ಹೆಚ್ಚು ಮಾರಾಟ ಹೊಂದಿದ ಹ್ಯಾಸ ಪುಸ್ತಕ ಸರಣಿಗಳಲ್ಲಿ ಒಂದಾಗಿದ್ದು, ಇದರ ೯೦ ಮಿಲಿಯನ್ ಗಿಂತ ಹೆಚ್ಚು ಪ್ರತಿಗಳು ೨೦ ಭಾರತೀಯ ಭಾಷೆಗಳಲ್ಲಿ ಮಾರಾಟ ಹೊಂದಿವೆ.[೧] ಇದು ೧೯೬೭ ರಲ್ಲಿ ಕಂಡುಬಂದಿದ್ದು, ಇದರ ಅಚ್ಚು ೪೦೦ ಕ್ಕಿಂತ ಹೆಚ್ಚು ಶೀರ್ಷಿಕೆಗಳನ್ನು ಒಳಗೊಂಡಿದೆ. ಮತ್ತೊಂದು ರೀತಿಯಲ್ಲಿ ತಿಳಿಸಲಾದ ಇದರ ಕಥೆಗಳು ಭಾರತದ ಮಹಾಕಾವ್ಯಗಳು, ಪುರಾಣಗಳು , ಇತಿಹಾಸ, ಜನಪದ ಮತ್ತು ಕಲ್ಪಿತ ಕಥೆಗಳಿಂದ ತೆಗೆದುಕೊಳ್ಳಲಾಗಿದ್ದು, ಹಾಸ್ಯ ಪುಸ್ತಕ ಸ್ವರೂಪದಲ್ಲಿವೆ. ಇದನ್ನು ಅನಂತ್ ಪೈ ರವರು ನಿರ್ಮಿಸಿದ್ದು, ಇಂಡಿಯಾ ಬುಕ್ ಹೌಸ್ ಪ್ರಕಟಿಸಿದೆ. ೨೦೦೭ರಲ್ಲಿ, ಅಚ್ಚು ಮತ್ತು ಇದರ ಎಲ್ಲಾ ಶೀರ್ಷಿಕೆಗಳನ್ನು ACK ಮೀಡಿಯ ಎಂದು ಕರೆಯಲ್ಪಡುವ ಹೊಸ ಉದ್ಯಮ ವಶಪಡಿಸಿಕೊಂಡಿತು. ೨೦೦೮ ರ ಅಕ್ಟೋಬರ್ ೧೭ ರಂದು ACK- ಹೊಸ ವೆಬ್ ಸೈಟ್ ಅನ್ನು ಆರಂಭಿಸಿತು.[೨][೩]

ಸೃಷ್ಟಿ ಮತ್ತು ಸೃಷ್ಟಿಕರ್ತ[ಬದಲಾಯಿಸಿ]

ಭಾರತೀಯ ಮಕ್ಕಳಿಗೆ ಅವರ ಪರಂಪರೆಯ ಬಗ್ಗೆ ಶಿಕ್ಷಣವನ್ನು ನೀಡುವ ಪ್ರಯತ್ನದಲ್ಲಿ ಅನಂತ್ ಪೈ ಎಂಬುವವರು ಈ ಹಾಸ್ಯ ಸರಣಿಗಳನ್ನು ಆರಂಭಿಸಿದರು. ಇವರು ಭಾರತೀಯ ವಿದ್ಯಾರ್ಥಿಗಳು ಗ್ರೀಕ್ ಮತ್ತು ರೋಮನ್ ಪುರಾಣಗಳ ಮೇಲೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬಲ್ಲರು, ಆದರೆ ಅವರದೇ ತಾಯ್ನಾಡಿನ ಇತಿಹಾಸ, ಪುರಾಣ ಮತ್ತು ಜನಪದದ ಬಗ್ಗೆ ಅರಿವಿಲ್ಲದಿರುವುದನ್ನು ಕಂಡು ಆಶ್ಚರ್ಯಪಟ್ಟರು. ೧೯೬೭ ರ ಫೆಬ್ರವರಿಯಲ್ಲಿ ದೂರದರ್ಶನ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾಳುಗಳು ಗ್ರೀಕ್ ಪುರಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುತ್ತಿದ್ದರು. ಆದರೆ "ರಾಮಾಯಣದ ಬಗ್ಗೆ ಕೇಳಲಾದ, ರಾಮನ ತಾಯಿ ಯಾರು?" ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ.[೪][೫] ಕಮಲ ಚಂದ್ರಕಾಂತ್, ಮಾರ್ಗಿ ಶಾಸ್ತ್ರಿ, ಶುಭಾ ರಾವ್, ದೆಬ್ರಾನಿ ಮಿತ್ರ ಮತ್ತು ಸಿ.ಆರ್ ಶರ್ಮಾ ರಂತಹ ಬರಹಗರರು ಅಮರ ಚಿತ್ರ ಕಥೆಯ ಸೃಜನಾತ್ಮಕ ತಂಡಕ್ಕೆ ಅನಂತ ಪೈಯೊಂದಿಗೆ ಸೇರಿಕೊಂಡರು ಹಾಗು ಬಹುಪಾಲು ಸಾಹಿತ್ಯಗಳ ಮೇಲೆ ಸಂಪಾದಕರಾಗಿ, ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ರಾಮ್ ವೆರ್ಕರ್ ರವರನ್ನು ಹೊರತುಪಡಿಸಿ ಗಮನಾರ್ಹ ಉದಾಹರಣಕಾರರೆಂದರೆ: ದಿಲೀಪ್ ಕಾಡಮ್, ಸಂಜೀವ್ ವೆರ್ಕರ್, ಸೌರೆನ್ ರಾಯ್, ಸಿ.ಡಿ ರಾನೆ, ಜೆಫ್ರೆ ಫ್ಲವರ್ ಮತ್ತು ಪ್ರತಾಪ್ ಮುಲಿಕ್.

ಹಾಸ್ಯ ಪುಸ್ತಕಗಳು[ಬದಲಾಯಿಸಿ]

ಅಮರ ಚಿತ್ರದ ಮೂಲ ಮುದ್ರಣಗಳು ಆಯವ್ಯಯ ನಿರ್ಬಂಧದಿಂದಾಗಿ ಸಂಪೂರ್ಣ ಬಣ್ಣದಲ್ಲಿಲ್ಲ. ಇವುಗಳ ಹಾಳೆಗಳನ್ನು ಹಳದಿ ನೀಲಿ ಮತ್ತು ಹಸಿರು ಬಣ್ಣಗಳನ್ನು ಬಳಸಿ ಮುದ್ರಿಸಲಾಗಿದೆ. ಆದರು ಅನಂತರದ ಸಂಚಿಕೆಗಳನ್ನು ಸಂಪೂರ್ಣ ಬಣ್ಣಕ್ಕೆ ಬದಲಾಯಿಸಲಾಯಿತು. ಅಮರ ಚಿತ್ರ ಕಥೆಯ ಎಲಾ ಪುಸ್ತಕಗಳು, ಕಥೆಯ ಸಾಲುಗಳನ್ನು ವಿನೋದಕರವಾಗಿಸುವ ಮೂಲಕ ಸ್ಪಷ್ಟತೆಗೆ ಒತ್ತು ಕೊಡುವುದರೊಂದಿಗೆ, ಮಾಸಿಕ (ಅನಂತರ ಪಾಕ್ಷಿಕ) ೩೦-ಪುಟದ ಸ್ವರೂಪದಲ್ಲಿ ಹೊರಬರುತ್ತಿದ್ದವು. 'ಏಕ' ಸ್ವರೂಪದ ಜೊತೆಯಲ್ಲಿ ಕಥೆಗಳು ಗಟ್ಟಿರಟ್ಟು ೩ ರಲ್ಲಿ ೧ಮತ್ತು ೫ ರಲ್ಲಿ ೧ ಕಟ್ಟುಗಳ ರೂಪದಲ್ಲು ದೊರಕುತ್ತವೆ. ಕೃಷ್ಣನ ಕಥೆಯನ್ನು ಆಧರಿಸಿದ ೪೨ ಸಂಚಿಕೆಗಳ ಮಹಾಭಾರತ ಮತ್ತು ಒಂಬತ್ತು ಸಂಪುಟಗಳ ಭಾಗವತಪುರಾಣ ಇವು ಧಾರಾವಾಹಿಯಾಗಿ ಪ್ರಕಟಣೆಯ ಪ್ರಯತ್ನಗಳಾಗಿದ್ದವು (ಈ ಎರಡೂ ಕಥೆಗಳ ಪ್ರತ್ಯೇಕ ಸಂಚಿಕೆಗಳು ಮೊದಲೇ ಪ್ರಕಟವಾಗಿದ್ದವು). ಮಹಭಾರತದಂತಹ ಮಹಾಕಾವ್ಯಗಳ ವಿಶೇಷ ಆವೃತ್ತಿಗಳು ಲಭ್ಯವಿದೆ. ಇವು ೩ ಸಂಪುಟದ ೧೩೦೦+ ಪುಟಗಳ ಕಂತೆಯಲ್ಲಿ ದೊರಕುತ್ತವೆ. ಒಮ್ಮೊಮೆ ೯೦ ಪುಟಗಳ "ಬಂಪರ್" ಸಂಚಿಕೆಯನ್ನು ಕೂಡ ಪ್ರಕಟಿಸಲಾಗುತ್ತದೆ. ಇದನ್ನು ಪ್ರತ್ಯೇಕ ಸಂಚಿಕೆಗಳಿಂದ( ಉದಾಹರಣೆಗೆ: ಹಿತೋಪದೇಶ ದಿಂದ ಕೋತಿಯ ಕಥೆಗಳು , ಬೀರಬಲ್ಲ{/2 }ನ ಕಥೆಗಳು ಮತ್ತು ಕೆಲವು ದೀರ್ಘ ಕಥೆಗಳಾಗಿರುತ್ತಿದ್ದವು, ರಾಮ ನ ಕಥೆ ) ತೆಗೆದುಕೊಳ್ಳಲಾದ ಇದೇ ರೀತಿಯ ಅತ್ಯಂತ ಸಂಗ್ರಹಿಸಲಾದ ಕಥೆಗಳನ್ನು ಒಳಗೊಂಡಿರುತ್ತದೆ. ಮಹಾಕಾವ್ಯದ ಕಥೆಗಳು ಹೆಚ್ಚು ಜನಪ್ರಿಯವಾದಂತೆ, ತಂಡವು ಭಾರತೀಯ ಇತಿಹಾಸ, ವಿಭಿನ್ನ ಧರ್ಮಗಳಿಗೆ ಸೇರಿದ ಮಹಿಳೆ ಮತ್ತು ಪುರುಷರನ್ನು ಆಧರಿಸಿದ ಕಥೆಗಳನ್ನು ಪ್ರಕಟಿಸಲು ಆರಂಭಿಸಿತು. ಅಷ್ಟೇ ಅಲ್ಲದೇ ಸಂಸ್ಕೃತ ಮತ್ತು ಪ್ರಾದೇಶಿಕ ಶಾಸ್ತ್ರೀಯ ಭಾಷೆಗಳನ್ನು ಆಧರಿಸಿದ ಕಥೆಗಳನ್ನು ಕೂಡ ಪ್ರಕಟಿಸಲು ಪ್ರಾರಂಭಿಸಿತು. ಈ ಹಾಸ್ಯ ಪುಸ್ತಕಗಳ ಮುಂದುವರೆದ ಜನಪ್ರಿಯತೆಯಿಂದ ಸತತವಾಗಿ ಮರು ಮುದ್ರಣವನ್ನು ಪ್ರಕಟಿಸಲಾಯಿತು. ಇದರಿಂದಾಗಿ ಎಪ್ಪತ್ತರ ಮತ್ತು ಎಂಭತ್ತರ ದಶಕಗಳುದ್ದಕ್ಕೂ ಹಳೆಯ ಸಂಚಿಕೆಗಳು ಮುದ್ರಣದಲ್ಲಿ ಉಳಿಯುವಂತಾಯಿತು. ಎಂಭತ್ತರ ಮಧ್ಯವಧಿಯ ಹೊತ್ತಿಗೆ ಇದರ ಜನಪ್ರಿಯತೆಯ ಉತ್ತುಂಗದಲ್ಲಿ ಇದನ್ನು ಬೆಂಗಾಲಿ, ಮರಾಠಿ , ಅಸ್ಸಾಮಿ, ಗುಜರಾತಿ, ಪಂಜಾಬಿ , ಕನ್ನಡ, ತೆಲುಗು, ತಮಿಳು , ಸಂಸ್ಕೃತ ಮತ್ತು ಉರ್ದು ಭಾಷೆಗಳಿಗೆ ಅನುವಾದಿಸಲಾಯಿತು. ಅಲ್ಲದೇ ಒಂದು ತಿಂಗಳಲ್ಲಿ ಅರ್ಧ ಮಿಲಿಯನ್ ನಷ್ಟು ಪ್ರತಿಗಳು ಮಾರಾಟವಾದವು. ಅಲ್ಲದೇ ಕೆಲವು ಶೀರ್ಷಿಕೆಗಳು ಫ್ರೆಂಚ್, ಸ್ಪ್ಯಾನಿಷ್, ಜರ್ಮನ್ , ಸ್ವ್ಯಾಹಿಲಿ, ಫಿಜಿನ್, ಇಂಡೋನೇಸಿಯನ್ ಮತ್ತು ಸೆರ್ಬೊ-ಕ್ರೋಟ್ ಭಾಷೆಗಳಿಗು ಅನುವಾದಿಸಲ್ಪಟ್ಟವು. ತೊಂಭತ್ತರ ಮಧ್ಯಾವಧಿಯ ಹೊತ್ತಿಗೆ, ಮೂಲ ಹಾಸ್ಯ ಪುಸ್ತಕಗಳನ್ನು ಹೊಳಪಾದ ಮತ್ತು ಹೆಚ್ಚು ಕಾಲ ಉಳಿಯುವ ಆವೃತ್ತಿಯಲ್ಲಿ, ಗಟ್ಟಿಯಾದ ಕಾರ್ಡ್ ಸ್ಟಾಕ್ ಹೊದಿಕೆಗಳೊಂದಿಗೆ ಮತ್ತು ಉತ್ತಮ ಬಣ್ಣದ ಹಂಚಿಕೆಯೊಂದಿಗೆ ಮರು ಮುದ್ರಿಸಲಾಯಿತು. ಇಂದು ಅಮರ ಚಿತ್ರ ಕಥಾ ಎಲ್ಲಾ ಪ್ರಮುಖ ಪುಸ್ತಕ ವ್ಯಾಪಾರಿಗಳು, ನೂರಾರು ಸಣ್ಣ ಪುಸ್ತಕ ಮಳಿಗೆಗಳು, ಸಾವಿರರಾರು ಮಾರಾಟಗಾರರೊಳಗೆ ರಾಷ್ಟ್ರೀಯ ಹೆಜ್ಜೆಗುರುತನ್ನು ಹೊಂದಿದೆ. ಇದು ದೊಡ್ಡ ಸ್ವರೂಪದಲ್ಲಿರುವ ಬಹುಪಾಲು ಮಳಿಗೆಗಳಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಮಕ್ಕಳ ಪ್ರಕಾಶನವಾಗಿದೆ. ೨೦೦೭ ರಲ್ಲಿ ಪ್ರಕಾಶಕರು ಹೊಸ ಆಲ್ ಲೈನ್ ಮಳಿಗೆಯನ್ನು ಅನ್ನು ನಿರ್ಮಿಸಿದರು. ಇದು ಪ್ರಪಂಚದಾದ್ಯಂತ ತಲುಪಿಸುವುದರೊಂದಿಗೆ ಎಲ್ಲಾ ಶೀರ್ಷಿಕೆಗಳ ಅವಕಾಶವನ್ನು ನೀಡಿತು. ಶೀರ್ಷಿಕೆಗಳನ್ನು ಕೆಳಕಂಡ ವರ್ಗಗಳಲ್ಲಿ ವಿಂಗಡಿಸಲಾಗಿದೆ.

  1. ಕಲ್ಪಿತ ಕಥೆ ಮತ್ತು ಜನಪದ ಕಥೆ(ಉದಾಹರಣೆಗೆ ಪಂಚತಂತ್ರ )
  2. ಪುರಾಣ ಸಾಹಿತ್ಯ (ಉದಾಹರಣೆಗೆ ರಾಮಾಯಣ )
  3. ಮಹಾ ಕಾವ್ಯಗಳು (ಉದಾಹರಣೆಗೆ ರಾಮಾಯಣ )
  4. ಹಾಸ್ಯ ಮತ್ತು ಚಮತ್ಕಾರ
  5. ಜೀನವ ಚರಿತ್ರೆಗಳು (ಉದಾಹರಣೆಗೆ ಮಹಾತ್ಮ ಗಾಂಧೀ )
  6. ಸಾಹಿತ್ಯದ ಶ್ರೇಷ್ಠ ಗ್ರಂಥಗಳು
  7. ೩ ಇನ್ ೧ ಟೈಟಲ್ಸ್
  8. ೫ ಇನ್ ೧ ಟೈಟಲ್ಸ್
  9. ವಿಶೇಷ ಸಂಚಿಕೆಗಳು

ಸಾಂಸ್ಕೃತಿಕ ಅರ್ಥಪೂರ್ಣತೆಯ ಮಹತ್ವ[ಬದಲಾಯಿಸಿ]

ಭಾರತೀಯ ಸಾಮಾಜ (ಇತರವುಗಳಲ್ಲಿ) ಸಾಮಾಜಿಕ -ಆರ್ಥಿಕ ಬಿಕ್ಕಟ್ಟು ಮತ್ತು ನಗರೀಕರಣದಿಂದಾಗಿ ನಿಧಾನವಾಗಿ ಸಾಂಪ್ರಾದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆಯಿಂದ ದೂರ ಸರಿಯುತ್ತಿದ್ದ ಹೊತ್ತಿನಲ್ಲಿ ಅಮರ ಚಿತ್ರ ಕಥಾ ಸರಣಿಗಳನ್ನು ಆರಂಭಿಸಲಾಯಿತು. ಅವಿಭಕ್ತ ಕುಟುಂಬದ ವ್ಯವಸ್ಥೆಯಲ್ಲಿ, ಅಜ್ಜ ಅಜ್ಜಿಯರು ಮನೆಯ ಮಕ್ಕಳಿಗೆ ಜನಪದ ದಿಂದ ಮತ್ತು ಮಹಾಕಾವ್ಯಗಳಿಂದ ಕಥೆಗಳನ್ನು ಹೇಳುವ ಮೂಲಕ ಮನರಂಜಿಸುತ್ತಿದ್ದರು. ಪಟ್ಟಣ ಪ್ರದೇಶದಲ್ಲಿರುವ ಸಣ್ಣ ಸಣ್ಣ ಬಿಡಿ ಕುಟುಂಬಗಳಲ್ಲಿ ಅಜ್ಜ ಅಜ್ಜಿಯರು ಬಿಟ್ಟುಹೋದ ಖಾಲಿ ಜಾಗವನ್ನು ತುಂಬಲೆಂದು ಅಮರ ಚಿತ್ರ ಕಥಾ ಸರಣಿಗಳನ್ನು ನೀಡಲಾಯಿತು. ಅಲ್ಲದೇ ಪ್ರಧಾನ ಭಾಷೆಯ ರೂಪದಲ್ಲಿ ಇಂಗ್ಲೀಷ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇದರಿಂದಾಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದ ಬಹುಪಾಲು ಮಕ್ಕಳಿಗೆ ಇದು ತಲುಪುವಂತಾಯಿತು. ಅನಂತರ ಹಾಸ್ಯ ಪುಸ್ತಕ ಐತಿಹಾಸಿಕ ವಿಷಯಗಳನ್ನು ಒಳಗೊಂಡಾಗ, ಇದು ವಿದ್ಯಾರ್ಥಿಗಳಿಗೆ ಅತ್ಯಂತ ಸಹಯಕವೆಂಬುದು ಸಾಬೀತಾಯಿತು. ಬಹುಪಾಲು ಭಾರತೀಯ ಇತಿಹಾಸ, ಹೆಸರುಗಳು ಮತ್ತು ದಿನಾಂಕಗಳ ಮಿಶ್ರಣ ಕಥೆಗಳ ರೂಪದಲ್ಲಿ, ಜೀವಂತವಾಗಿ ಬರತೊಡಗಿತು. ವಾಸ್ತುಶಿಲ್ಪ, ವೇಷಭೂಷಣ, ಪ್ರಾದೇಶಿಕ ಅಭಿರುಚಿಗಳು ಮತ್ತು ನಿಜಸಂಗತಿಗಳ ಮೇಲೆ ಮಾಡಲಾದ ಸಂಪೂರ್ಣ ಸಂಶೋಧನೆ, ಈ ಹಾಸ್ಯ ಪುಸ್ತಕಗಳನ್ನು ಮುಖ್ಯವಾಹಿನಿಯಾಗಿ ಸ್ವಾಗತಿಸುವಂತೆ ಮಾಡಿದವು. ಅಲ್ಲದೇ ಶಿಕ್ಷಕರು ಮತ್ತು ಪೋಷಕರು ಅವುಗಳನ್ನು ಶೈಕ್ಷಣಿಕ ಸಾಧನದಂತೆ ಬಳಸುವಂತಾಯಿತು. ಒಂದು ಹಂತದ ವರೆಗೆ ಈ ಪುಸ್ತಕಗಳು ಅವುಗಳ ಏಕರೂಪವಾಗಿಸಲಾದ ಮತ್ತು ಪೂರ್ವಾಗ್ರಹವಿಲ್ಲದ ಪಾತ್ರ ವಿವರಣೆಗಳಿಂದಾಗಿ ರಾಷ್ಟ್ರೀಯ ಐಕ್ಯತೆಯನ್ನು ಮೂಢಿಸುವಲ್ಲಿ ಮತ್ತು ದೇಶದುದ್ದಕ್ಕೂ ಅಂತರ-ಪ್ರಾಂತೀಯ ಜಾಗೃತಿಯನ್ನು ಹೆಚ್ಚಿಸುವಲ್ಲಿ ದೂರದ ವರೆಗೆ ಸಾಗಿವೆ. ಸರಣಿಗಳು ನಿಯಂತ್ರಣಕ್ಕೆ ಒಳಪಟ್ಟ ವಿಷಯ ಮತ್ತು ಹಿಂಸೆ ಹಾಗು ಕಠಿಣವಾದ ಸೆನ್ಸರ್ ವ್ಯವಸ್ಥೆಗೆ ಒಳಪಡುವ ಮೂಲಕ ವಿವಾದಗಳಿಂದ ದೂರ ಉಳಿದಿವೆ.

ಜನಪ್ರಿಯ ಸಂಸ್ಕೃತಿಯಲ್ಲಿ[ಬದಲಾಯಿಸಿ]

ಗುಲಾಲ್ ಚಲನಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾದ, ರಣಂಜಯ್ ಸಿಂಗ್ , ಅವರು ಅಮರ ಚಿತ್ರ ಕಥೆ ಯಲ್ಲಿ ಜೀವಿಸಲು ಇಷ್ಟ ಪಡುವುದಿಲ್ಲ ಆದರೆ ನಿಜ ಜೀನವದಲ್ಲಿ ಬದುಕಲು ಬಯಸುತ್ತೇನೆ ಎಂದು ಹೇಳುವ ಮೂಲಕ ಸಾಂಪ್ರದಾಯಿಕ ಅತ್ಯಂತ ಹಿರಿಯವರ ರಜಪೂತ ಸ್ವಪೀಡಕ ವ್ಯವಸ್ಥೆಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾರೆ.

ಆಧುನೀಕರಣ[ಬದಲಾಯಿಸಿ]

ಅಮರ ಚಿತ್ರ ಕಥಾ ಸಮಯ ಸರಿದಂತೆ ಬೆಳೆಯತೊಡಗಿತು. ಈಗ ಇದು ಡಿಜಿಟಲ್ ಮಾಧ್ಯಮದ ರೂಪದಲ್ಲಿ ಅನೇಕ ರೀತಿಯಲ್ಲಿ ದೊರಕುತ್ತದೆಯಲ್ಲದೇ, ಆನ್ ಲೈನ್ ನ ಪ್ರವೇಶದ ಮೂಲಕವು ಮೊಬೈಲ್ ಪೋನ್ ನಲ್ಲು ಲಭ್ಯವಿದೆ. ACK-ಮೀಡಿಯ ಅಮರ ಚಿತ್ರ ಕಥಾ ಸರಣಿಗಳ ಹಾಸ್ಯಗಳನ್ನು ಐಫೋನ್ ವೇದಿಕೆಗೆ ತಲುಪಿಸಲೆಂದು ಇತ್ತೀಚೆಗಷ್ಟೇ ಐರೆಮಿಡಿ ಕಾರ್ಪ್ ಆಫ್ ಅಟ್ಲಾಂಟ, ಜಿಏ ಯೊಂದಿಗೆ ಪಾಲುದಾರನಾಗಿದೆ. ಅಮರ ಚಿತ್ರ ಕಥಾ ಸರಣಿಯ ಜನಪ್ರಿಯ ಹಾಸ್ಯಗಳನ್ನು ೨೦೦೯ ರ ಡಿಸೆಂಬರ್ ೫ ರಂದು ಐರೆಮಿಡಿ ಮತ್ತು ಆಪಲ್, ಐಫೋನ್ ವೇದಿಕೆಯ ಮೇಲೆ ಆರಂಭಿಸಿದವು. ಐರೆಮಿಡೀಸ್ ETHER MEDIA ವ್ಯೂವರ್ ಸಲ್ಯೂಷನ್ ನ ಮೇಲೆ ಐಪಾಡ್ ಸ್ಪರ್ಶ ಪಟಲಗಳು ಮತ್ತು ಐ ಫೋನ್ ಗಳ ಮೇಲೆ ಅಂಕಣಗಳನ್ನು ಓದಲೆಂದು, ಓದುಗರಿಗಾಗಿ ಅಮರ ಚಿತ್ರ ಕಥಾ ಸರಣಿಯ ಹಾಸ್ಯಗಳನ್ನು ಐಫೋನ್ ವೇದಿಕೆಯಲ್ಲಿ ಅವಳವಡಿಸಲಾಗಿದೆ. ಐರೆಮಿಡೀಸ್ ವೆಬ್ ಸೈಟ್ ನಲ್ಲಿ ಅಧಿಕ ಮಾಹಿತಿಯನ್ನು ಕಾಣಬಹುದು.[೬] ಜನಪ್ರಿಯ ACK ಶೀರ್ಷಿಕೆಗಳನ್ನು ನೇರವಾಗಿ ಆಪಲ್ ನ ಐಟ್ಯೂನ್ಸ್ ಅಪ್ ಸ್ಟೋರ್ ನಲ್ಲಿ ಕಾಣಬಹುದಾಗಿದೆ.[೭]

ಟೀಕೆ[ಬದಲಾಯಿಸಿ]

ಕಥೆಗಳು ಅತ್ಯಂತ ಸರಳೀಕೃತವಾಗಿವೆ. ಅಲ್ಲದೇ ಕೆಲವೊಮ್ಮೆ ಸಾಹಿತ್ಯಕ್ಕಾಗಿ ಆಧಾರಪೂರ್ವಕವನ್ನು ಬಿಟ್ಟು ಏಕ ಮೂಲಗಳನ್ನು ಅವಲಂಭಿಸಿವೆ. ಇದರಿಂದಾಗಿ ಅವುಗಳನ್ನು "ಇತಿಹಾಸ" ಎಂದು ಪರಿಗಣಿಸಲಾಗುವುದಿಲ್ಲ ಎಂದು ಟೀಕಿಸಲಾಗಿದೆ. ಅಮರ ಚಿತ್ರ ಕಥಾ ಸರಣಿಯಲ್ಲಿ ಚಿತ್ರಿಸಲಾದ ಚಿತ್ರಣಗಳು, ಕೇವಲ ಇದರ ಮೂಲಕವೇ ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳನ್ನು ನೋಡುವಂತಹ ಭಾರತೀಯ ಪೀಳಿಗೆಯನ್ನು ಸೃಷ್ಟಿಸಿವೆ. ಸಾಮಾನ್ಯವಾಗಿ ಇವುಗಳನ್ನು ಆಳವಾಗಿ ಸಂಶೋಧಿಸಲಾಗಿರುವುದಿಲ್ಲ ಮತ್ತು ಇವು ನೈಜ ಚಿತ್ರಣಗಳಾಗಿರುವುದಿಲ್ಲ, ಆದರೆ ಇವುಗಳನ್ನು 'ಮಹಾಭಾರತ' ಮತ್ತು 'ರಾಮಾಯಣ' ದಂತಹ ಟಿವಿ ಸರಣಿಗಳಲ್ಲಿ ಉತ್ಸಾಹದಿಂದ ಅನುಕರಿಸಲಾಗಿದೆ. ಇವುಗಳಲ್ಲಿ ಬಹುಪಾಲು ರಾಜಾ ರವಿವರ್ಮರ ವರ್ಣಚಿತ್ರಗಳು ಮತ್ತು ಚಿತ್ರಣಗಳಿಂದ ಹುಟ್ಟಿಕೊಂಡವಾಗಿವೆ.[೮] ಖಳನಾಯಕರು ಮತ್ತು ನಾಯಕರ ರೂಪದಲ್ಲಿ ಪಾತ್ರಗಳನ್ನು ಸರಳವಾಗಿ ಚಿತ್ರಿಸುವುದು(ಮುಖ್ಯ ವಾಹಿನಿ ಹಿಂದಿ ಚಲನಚಿತ್ರಗಳಲ್ಲಿರುವಂತೆ) ಕೆಲವು ಜನಾಂಗೀಯ ರೂಢ ಮಾದರಿಯೊಂದಿಗೆ ಮಾಡಿಕೊಳ್ಳಲಾದ ಜತೆಗಾರಿಕೆಯನ್ನು ತೋರಿಸುತ್ತದೆ. ಉದಾಹರಣೆಗೆ ಎಲ್ಲಾ ರಾಕ್ಷಸರನ್ನು ಕಪ್ಪು ಬಣ್ಣದಲ್ಲಿ ಚಿತ್ರಿಸಲಾಗಿದೆ. ಈ ಕೆಲವು ಟೀಕೆಗಳು ಕೆಲವು ಹಾಸ್ಯ ಸರಣಿಗಳಿಗೆ ಅಂಗೀಕಾರರ್ಹವಾದರು ಕೂಡ, ಅನೇಕ ಟೀಕಾಕಾರರು ಅವರ ಧರ್ಮದ ಆಲೋಚನಸರಣಿ ಮತ್ತು ಶೈಕ್ಷಣಿಕ ಸಂಸ್ಥೆಯಿಂದ ರಾಜಕೀಯವಾಗಿ ಪ್ರೇರೆಪಿಸಲ್ಪಟ್ಟರು;ಪೂರ್ವಕಲ್ಪಿತ ಅಭಿಪ್ರಾಯಗಳು ಮತ್ತೆ ಮತ್ತೆ ಕೆಲವು ಟೀಕೆಯ ಆಧಾರವಾದವು.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಕರ್ ಲೈನ್ ಮ್ಯಾಕ್ ಲ್ಯೇನ್ ರವರಿಂದ ಇಂಡಿಯಾಸ್ ಇಮಾರ್ಟಲ್ ಕಾಮಿಕ್ ಬುಕ್ಸ್: ಗಾಡ್ಸ್, ಕಿಂಗ್ಸ್, ಅಂಡ್ ಅದರ್ ಹಿರೋಸ್ , ಭಾರತೀಯ ವಿಶ್ವವಿದ್ಯಾಲಯದ ಮುದ್ರಣಾಯ, ೨೦೦೯. ISBN ೯೭೮-೦-೨೫೩-೨೨೦೫೨-೩.
  • ನಂದಿನಿ ಚಂದ್ರರವರಿಂದ ದಿ ಕ್ಲಾಸಿಕ್ ಪಪ್ಯೂಲರ್: ಅಮರ ಚಿತ್ರ ಕಥಾ (೧೯೬೭-೨೦೦೭) , ಯೋಧ ಮುದ್ರಣಾಲಯ, ೨೦೦೮. ISBN ೮೧-೯೦೩೬೩೪-೩-೩.
  • ಸಂಜಯ್ ಸಿರ್ಕರ್ ರವರಿಂದ "ಅಮರ ಚಿತ್ರ ಕಥಾ: ವೆಸ್ಟರ್ನ್ ಫಾರ್ಮ್ಸ್, ಇಂಡಿಯನ್ ಕಂಟೆಂಟ್ಸ್" ಬುಕ್ ಬರ್ಡ್, ಅಂತರರಾಷ್ಟ್ರೀಯ ಮಕ್ಕಳ ಸಾಹಿತ್ಯದ ದಿನಪತ್ರಿಕೆ, ೨೦೦೦, ೩೮, Nr. ೪, p. ೩೫-೩೬.
  • ಅರುಣ ರಾವ್ ರವರಿಂದ "ಫ್ರಮ್ ಸೆಲ್ಫ್-ನಾಲೆಡ್ಜ್ ಟು ಸೂಪರ್ ಹೀರೋಸ್: ದಿ ಸ್ಟೋರಿ ಆಫ್ ಇಂಡಿಯನ್ ಕಾಮಿಕ್ಸ್",, ೨೦೦೧, ರಲ್ಲಿ: ಲೆಂಟ್, ಎ. ಜಾನ್ (Ed.),

ಏಷ್ಯಾದ ಹಾಸ್ಯಗಳು, ಹಾಸ್ಯ ನಿಯತಕಾಲಿಕೆಗಳು ಹ್ಯೂಮರ್ ಮತ್ತು ಚಿತ್ರ ಪುಸ್ತಗಳ ಚಿತ್ರಣ, ರಿಚ್ ಮಂಡ್, p. ೩೭-೬೩.

ಉಲ್ಲೇಖಗಳು[ಬದಲಾಯಿಸಿ]

  1. "Amar Chitra Katha, Tinkle to entertain kids on Net". CNN-IBN. ೨೦೦೮-೦೧-೨೭. Retrieved ೨೦೦೮-೦೧-೨೮. {{cite news}}: Check date values in: |accessdate= and |date= (help)
  2. "ACK Media buys Amar Chitra Katha, Tinkle brands". The Hindu Business Line. ೨೦೦೭-೧೧-೨೨. Retrieved ೨೦೦೮-೦೧-೨೮. {{cite news}}: Check date values in: |accessdate= and |date= (help)
  3. ಇನ್ ಇಂಡಿಯಾ, ನ್ಯೂ ಲೈಫ್ ಫಾರ್ ಕಾಮಿಕ್ ಬುಕ್ಸ್ ಆಸ್ TV ಕಾರ್ಟೂನ್ಸ್ ನ್ಯೂಯಾರ್ಕ್ ಟೈಮ್ಸ್, ೨೦೦೯ ರ ಜುಲೆ ೧೯."...ಇಂಗ್ಲೀಷ್ ಭಾಷೆಯಲ್ಲಿ ಮತ್ತು ೨೦ ಕ್ಕಿಂತ ಹೆಚ್ಚು ಭಾರತೀಯ ಭಾಷೆಗಳಲ್ಲಿ ವರ್ಷಕ್ಕೆ ಸುಮಾರು ಮೂರು ಮಿಲಿಯನ್ ನಷ್ಟು ಹಾಸ್ಯ ಪುಸ್ತಕಗಳು ಮಾರಾಟವಾಗಿವೆ, ಅಲ್ಲದೇ ೧೯೬೭ ರಲ್ಲಿ ಇದನ್ನು ಪ್ರಾರಂಭಿಸಿದಾಗ ೧೦೦ ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದವು".
  4. ನವ್, ಅಮರ ಚಿತ್ರ ಕಥಾ ಗೆಟ್ಸ್ ಈವನ್ ಯಂಗರ್ ವಿಜಯ್ ಸಿಂಗ್, TNN, ದಿ ಟೈಮ್ಸ್ ಆಫ್ ಇಂಡಿಯಾ, ೨೦೦೯ ರ ಅಕ್ಟೋಬರ್ ೧೬.
  5. ಲಾರೆನ್ಸ್ ಎ ಬಾಬ್ , ಸೂಸನ್ ಎಸ್ . ವ್ಯಾಡ್ಲೆ ಯವರಿಂದ ದಿ ವಲ್ಡ್ ಆಫ್ ಅಮರ ಚಿತ್ರ ಕಥಾ ಮೀಡಿಯ ಅಂಡ್ ದಿ ಟ್ರಾನ್ಸ್ ಫಾರ್ಮೇಷನ್ ಆಫ್ ರಿಲಿಜನ್ ಇನ್ ಸೌತ್ ಏಷ್ಯಾ . ಮೋತಿಲಾಲ್ ಬನಾರಸಿದಾಸ್ Publ., ೧೯೯೮. ISBN ೦೬೮೮೧೬೮೯೪೯ ಚಾಪ್ಟರ್. ೪, p. ೭೬-೮೬ .
  6. http://www.iRemedi.com/amarchitrakatha.htm
  7. http://ax.search.itunes.apple.com/WebObjects/MZSearch.woa/wa/search?entity=software&media=all&submit=seeAllLockups&term=iremedi
  8. http://famous-paintings.adzoomin.com/೨೦೧೧/೦೨/comic-art-paintings-from.html[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಕೊಂಡಿಗಳು‌[ಬದಲಾಯಿಸಿ]