ಅಮರ್ ಗೋಸ್ವಾಮಿ

ವಿಕಿಪೀಡಿಯ ಇಂದ
Jump to navigation Jump to search
ಅಮರ್‌ ಗೋಸ್ವಾಮಿ
ಜನನಅಮರ್‌ ಗೋಸ್ವಾಮಿ
(೧೯೪೫-೧೧-೨೮)೨೮ ನವೆಂಬರ್ ೧೯೪೫
ಮುಲ್ತಾನ್, ಪಂಜಾಬ್‌ ಪ್ರಾಂತ್ಯ
ಮರಣ೨೬ ಜೂನ್ ೨೦೧೨(2012-06-26) (aged ೬೬)
ಗಾಜಿಯಾಬಾದ್,ಉತ್ತರ ಪ್ರದೇಶ, ಭಾರತ
ಕಾವ್ಯನಾಮಅಮರ್‌ ಗೋಸ್ವಾಮಿ
ವೃತ್ತಿಬರಹಗಾರ ಮತ್ತು ಪತ್ರಕರ್ತ
ಭಾಷೆಹಿಂದಿ
ರಾಷ್ಟ್ರೀಯತೆಭಾರತೀಯ
ಕಾಲ1945–2012
ಪ್ರಕಾರ/ಶೈಲಿಕಾದಂಬರಿ, ಸಣ್ಣ ಕತೆ ಹಾಗೂ ಪ್ರಬಂಧ
ಪ್ರಮುಖ ಕೆಲಸ(ಗಳು)ಹವಾ ಕೆ ವಿರುದ್,ಇಸ್‌ ದೌರ್‌ ಮೆ ಹಮ್ ಸಫರ್,ಸಾಭಾಶ್‌ ಮುನ್ನು

ಅಮರ್ ಗೋಸ್ವಾಮಿ, ಇವರು ೨೮ ನವೆಂಬರ್ ೧೯೪೫ರಂದು ಮುಲ್ತಾನ್ ಪ್ರಾಂತ್ಯದಲ್ಲಿ ಜನಿಸಿದರು. ಅಮರ್ ಗೋಸ್ವಾಮಿಯವರು ಹಿರಿಯ ಪತ್ರಕರ್ತರು ಹಾಗೂ ಬರಹಗಾರರು. ಇವರ ಬರಹಗಳಲ್ಲಿ ಅನೇಕ ಕಾಲ್ಪನಿಕ ಕಥೆಗಳನ್ನು ಓದಬಹುದು. ಇವರು ಹಿಂದಿ ಭಾಷೆಯಲ್ಲಿ ನೈಪುಣ್ಯತೆಯನ್ನು ಹೊಂದಿರುವ ಬರಹಗಾರರಲ್ಲಿ ಓಬ್ಬರು. ಇವರು ಸಣ್ಣ ಕಥೆಗಳು, ಕವನಗಳು, ಕಾದಂಬರಿಗಳನ್ನು ರಚಿಸಿದ್ದಾರೆ ಹಾಗೂ ಅನೇಕ ಕಾದಂಬರಿಗಳನ್ನು,ಕವನಗಳನ್ನು ಬೆಂಗಾಲಿ ಭಾಷೆಯಿಂದ ಹಿಂದಿ ಭಾಷೆಗೆ ಭಾಷಾಂತರಿಸಿದ್ದಾರೆ. ಇವರ ಸಣ್ಣ ಕಥೆಗಳನ್ನು ಆಧರಿಸಿ ಸಿನಿಮಾ ಮತ್ತು ನಾಟಕಗಳನ್ನು ಮಾಡಲಾಗಿದೆ.[೧]

ಜೀವನ ಚರಿತ್ರೆ[ಬದಲಾಯಿಸಿ]

ಇವರು ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಮುಲ್ತಾನ್ (ಅವಿಭಜಿತ ಭಾರತ )ಎಂಬಲ್ಲಿ ಜನಿಸಿದರು. ಇವರು ಎರಡನೇ ವಯಸ್ಸಿನಲ್ಲಿದ್ದಾಗ ಇವರ ಕುಟುಂಬದವರು ಮುಲ್ತಾನಿನಿಂದ ಉತ್ತರ ಪ್ರದೇಶದ ಮಿರ್ಜಾಪುರಕ್ಕೆ ವಲಸೆ ಬಂದರು. ಇವರು ಹಿಂದಿಯಲ್ಲಿ ಎಂ.ಎ ಪದವಿಯನ್ನು ಪದೆದಿದ್ದಾರೆ. ಇವರಿಗೆ ಅಲಹಬಾದ್ ವಿಶ್ವವಿದ್ಯಾಲಯದಿಂದ ಸಾಹಿತ್ಯ ಶಿರೋಮಣಿ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ ಲಭಿಸಿದೆ. ಬಾಲ್ಯದಲ್ಲಿ ಅವರು ಮಿರ್ಜಾಪುರದ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದರು. ಅವರು "ಸರಸ್ವತಿ ಆವೃತ್ತಿಗಳ " ಸಂಗ್ರಹಾಲಯದಲ್ಲಿ ಹಿಂದಿ ಸಾಹಿತ್ಯದ ಪ್ಯಾಂಡೋರಾಸ್ ಬಾಕ್ಸ್ ದಂತಹ ಪುಸ್ತಕಗಳಿಂದ ಪ್ರಭಾವಿತರಾಗಿದರು. ನಂತರ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯಗಳನ್ನು ಬರೆಯಲು ಶುರುಮಾಡಿದರು. ಶಾಲಾ ಚರ್ಚಾ ಸ್ಪರ್ಧೆಗಳಲ್ಲಿ ಇವರು ಪ್ರತ್ಯೇಕ ವಿದ್ಯಾರ್ಥಿಯಾಗಿದ್ದರು ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಗಳಿಸುತ್ತಿದ್ದರು. ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಹಾಗಾಗಿ ಇವರು ಕವನಗಳನ್ನು ಬರೆಯುವುದರಲ್ಲಿ ನಿಪುಣರಾಗಿದ್ದರು. ಅದರ ಅನುಗುಣವಾಗಿ ಮಿರ್ಜಾಪುರದ ರೋಟರಿ ಕ್ಲಬ್‌ನಲ್ಲಿ ನಡೆಯುತ್ತಿದ್ದ ಗುಂಪು ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಅಷ್ಟೆ ಅಲ್ಲದೆ ಇವರು ಮಿರ್ಜಾಪುರ ಇತಿಹಾಸದ ಪುಸ್ತಕವನ್ನು ಬರೆದರು.

ಅಲಹಬಾದ್‌ನಲ್ಲಿ ವಿದ್ಯಾಭ್ಯಾಸ[ಬದಲಾಯಿಸಿ]

ಅಮರ್ ಗೋಸ್ವಾಮಿಯವರು ವಾಣಿಜ್ಯ ಶಾಸ್ತ್ರವನ್ನು ಓದಲು ಅಲಹಬಾದ್ ವಿಸ್ವವಿದ್ಯಾಲಯಕ್ಕೆ ತೆರಳಿದರು. ಆ ಸಮಯದಲ್ಲಿ ಅಲಹಬಾದ್ ಭಾರತದ ರಾಜದಾನಿಯಾಗಿ ಪರಿಗಣಿಸಲಾಗಿತ್ತು.ಹಿಂದಿ ಸಾಹಿತ್ಯದ ಸುಮಿತ್ರಾನಂದ ಪಂತ್, ಶೈಲೇಶ್ ಮಾಟಿಯನಿ, ನರೇಶ್ ಮೆಹ್ ತಾ, ಮಹಾದೇವ ವರ್ಮ, ಇಲಿಯಚ್ಂದ ಜಕೋಶ್ ಮತ್ತು ಅನೇಕರನ್ನು ಹಿಂದಿ ಕಟ್ಟಾಳುಗಳನ್ನಾಗಿ ಪರಿಗಣಿಸಲಾಗಿತ್ತು. ಅವರ ಸಾಹಿತ್ಯಿಕಗೋಷ್ಠಿ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿತ್ತು. ಆ ಸಮಯದಲ್ಲಿ ಅವರು ಅನೇಕ ಕಥೆಗಳನ್ನು ಬರೆದರು. ಆಲ್ ಇಂಡಿಯಾ ರೇಡಿಯೋ ಮತ್ತು ಆಜ್ ಮತ್ತು ದೈನಿಕ್ ಭಾಸ್ಕರ್ ವಿವಿಧ ಪತ್ರಿಕೆಗಳಂತೆ ಹಿಂದಿ ಪತ್ರಿಕೆಗಳಾಗಿ ಪ್ರಕಟವಾದವು. ಅವರ "ಕಥಾಂಥರ" ಪತ್ರಿಕೆ ಪ್ರಕಟವಾದ ನಂತರ, ಶೈಲೇಶ್ ಮಟಿಯಾನಿಯವರು ವಿಕಲ್ಪ, ನರೇಶ್ ಮೆಹ್ತಾರವರ ಆಗಮಿಕುಲ್ ಮತ್ತು ಪ್ರಕಾಶನ್‌ರವರು ಮನೋರಮಾ ಮತ್ತು ಸಂಪ (ಮಕ್ಕಳ ಪತ್ರಿಕೆ)ನನ್ನು ಸಂಪಾದಿಸಿದರು.

ವೈಚಾರಿಕ ದಿನಗಳು[ಬದಲಾಯಿಸಿ]

ಅಮರ್ ಗೋಸ್ವಾಮಿಯವರು ಅಲಹಾಬಾದ್ ವೈಚಾರಿಕ ಸಭೆಯನ್ನು ಸಂಘಟಿಸಲು ಗುಂಪನ್ನು ರಚಿಸಿದರು. ಇವರಿಗೆ ಹಿಂದಿ ಲೇಖಕರ ಇತ್ತೀಚಿನ ಕೃತಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಸಾಹಿತ್ಯಕಗೋಷ್ಠಿ ಮುಕ್ತ ವೇದಿಕೆಯಾಗಿತ್ತು. ಅಥಿತಿ ಸ್ಪೀಕರ್ ಸಭೆಯಲ್ಲಿ ಇವರು ಅಧ್ಯಕ್ಷತೆಯನ್ನು ಪಡೆಯತ್ತಿದ್ದರು. ಈ ಸಭೆಯಲ್ಲಿ ಚರ್ಚಿಸಲು ಇತ್ತೀಚಿನ ಕೃತಿಗಳನ್ನು ಬಳಸಲಾಗುತ್ತಿತ್ತು. ಈ ಸಭೆಯಲ್ಲಿ ಸುಮಿತ್ರನಂದ ಪಂತ್, ಇಲಿಯಚಂದ್ ಜೋಶಿ ನರೇಶ್ ಮೆಹ್ತಾ, ಶೈಲೇಸ್ ಮಿಟಿಯಾನಿ ಮತ್ತು ಅನೇಕರು ಭಾಗವಹಿಸುತ್ತಿದ್ದರು, ಇದರಿಂದ ಇತ್ತಿಚಿನ ಕೃತಿಗಳಲ್ಲಿರುವ ದೋಷಗಳು, ಸರಿ- ತಪ್ಪುಗಳ ಅರಿವಾಗುತ್ತಿತ್ತು. ಹೊಸ ಲೇಖಕರಿಗೆ ಸ್ಪೂರ್ತಿದಾಯಕವಾಗಿರುತ್ತಿತ್ತು. ೪. ದೆಹಲಿ ಕಾಸ್ಪೊಪಾಲಿಟನ್ ಜೀವನ ದೆಹಲಿಗೆ ಬಂದ ನಂತರ, ಅವರ ಜೀವನದ ಸಮಸ್ಯೆಗಳು ಮತ್ತು ಮಹಾನಗರದಲ್ಲಿ ಸಾಮಾನ್ಯ ಮನುಷ್ಯರ ಜೀವನ ಮತ್ತು ಮಧ್ಯಮ ವರ್ಗ ಸಮಾಜದ ಹೋರಾಟ ಇದರಲ್ಲಿ ಅಮರ್ ಗೋಸ್ವಾಮಿಯವರ ಬರವಣಿಗೆ ಶೈಲಿ ಬದಲಾಯಿತು. ಅವರು ಸಾಮಾನ್ಯ ಮನುಷ್ಯನ ಹೋರಾಟವನ್ನು ಎತ್ತಿಹಿಡಿಯಲು ತನ್ನ ಕಲಾಕಾರ್ ಬುಧ್ದಿಯನ್ನು ಬಳಸಿದರು. ನಂತರ ಹರ್ಪ್ ರಾಮ್ ಗಡಪ್, ಬುಜೋ ಬಹದ್ದೂರ್, ಜೋಟ , ಅಪ್ನು ಉತ್ಸವ್, ಗೋವಿಂದ ಮೈಹರ್ ಇವರೆಲ್ಲರ ನಂತರ ಹಿಂದಿ ಭಾಷೆಯಲ್ಲಿ ಮೇರು ಕೃತಿಗಳಾನ್ನು ಬರೆದ ಪ್ರಸಿಧ್ದಿ ಇವರಿಗೆ ಸಲೂತ್ತದೆ. ಇವರು ಸಣ್ಣ ಕಥೆಗಳು, ಕಾದಂಬರಿಗಳು, ಮಕ್ಕಳ ಪುಸ್ತಕಗಳು ಮತ್ತು ಹಲವು ಪುಸ್ತಕಗಳನ್ನು ಸಂಗ್ರಹ ಮಾಡಿದ್ದರು. ಇವರು ಬರೆದ ಸಣ್ಣ ಕಥೆಗಳಲ್ಲಿ "ಹಿಮಾಯತಿ" ವಿಶೇಷವಾಗಿ ಬರೆದ ವಯಸ್ಕರ ಶಿಕ್ಷಣ ಅಭಿಯಾನದ ಸಣ್ಣ ಕಥೆ. ೧೯೮೬ ರಲ್ಲಿ ಇವರ ೨೫ದಕ್ಕೂ ಹೆಚ್ಚು ಪುಸ್ತಕಗಳನ್ನು ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಲಾಯಿತು. ಅಲ್ಲದೆ ಅವರು ಬಂಗಾಲಿಯಿಂದ ಹಿಂದಿಭಾಷೆಗೆ ೭೦ಕ್ಕೂ ಹೆಚ್ಚು ಪುಸ್ತಕಗಳನ್ನು ಅನುವಾದಿಸಿದ್ದಾರೆ. ಅವರ ಪಠ್ಯಕ್ರಮ ವಿನ್ಯಾಸ ಮತ್ತು ಹಿಂದಿ ಕಥೆಗಳ ಆಯ್ಕೆ ಮೇಲೆ ನಡೆಸಿದ ಎನ್.ಸಿ.ಇ.ಆರ್.ಟಿ ಕಾರ್ಯಾಗಾರಗಳು ಸಮಿತಿಯ ಭಾಗವಾಗಿತ್ತು. ೫. ಬರವಣಿಗೆ ಶೈಲಿ ಅಮರ್ ಗೋಸ್ವಾವಿಯವರು ಪ್ರಮುಖವಾಗಿ ವಿಡಂಬನೆ ಮತ್ತು ಸುತ್ತಮುತ್ತ ನಡೆಯುತ್ತಿದ್ದ ಕೆಲವು ಸಾಮಾನ್ಯ ಘಟನೆಗಳನ್ನು ಬೆಳಕಿಗೆ ತೆರೆದಿಡಿತ್ತಿದ್ದರು. ತನ್ನ ಬರಹಗಾರಿಕೆಯಲ್ಲಿ ಮೆಟ್ರೊಪಾಲಿಟನ್ಸ್, ಮಾನವನ ಅತಿವೇಗದ ಜೀವನ, ಮಾನವ ಸಂಬಂಧ, ಭ್ರಷ್ಟಾಚಾರ, ಸಾಮಾಜಿಕ ತಾರತಮ್ಯ, ಬಡತನ ಮತ್ತು ಸರ್ಕಾರದ ನೀತಿಗಳು ಮತ್ತು ಜನಸಾಮಾನ್ಯನ ಸಮಸ್ಯೆಗಳ ಕಡೆಗೆ ಕೇಂದ್ರೀಕರಿಸುತ್ತದೆ. ತಮ್ಮ ಬರವಣಿಗೆಯಿಂದ ಜನರ ಸಂಪರ್ಕ ಸಾಧ್ಯವಾಗುತ್ತಿತು. ಇವರು ತಮ್ಮ ಬರವಣಿಗೆಗಳ ಮೂಲಕ ಸಮಾಜದ ಓಳಿತನ್ನು ಕಾಣುತ್ತಿದ್ದರು, ಸಮಾಜಕ್ಕೆ ನೀತಿ ಪಾಠಗಳನ್ನು ಬೋಧಿಸುತ್ತಿದ್ದರು. ೬.ಈಸ್ ಡಾರ್ ಮೆ ಹಮ್ಸಫರ್ ಅವರು ಈ ಎರಡು ಕಾದಂಬರಿಗಳು ಪ್ರಮುವಾದ ಕಾದಂಬರಿಗಳು ಮಾತ್ರವಲ್ಲ. ಈ ಕಾದಂಬರಿಯಲ್ಲಿ ಎಲ್ಲಾ ಪಾತ್ರಗಳನ್ನು ಸುಂದರವಾಗಿ ಅಭಿವೃದ್ಧಿಪಡಿಸಿದ್ದಾರೆ. ಈ ಕಾದಂಬರಿಯಲ್ಲಿ ಪ್ರಮುಖವಾಗಿ ಭಾರತದ ಪ್ರಬಲ ಮಹಿಳೆಯರ ಶಕ್ತಿಯನ್ನು ಎತ್ತಿ ಹಿಡಿದಿದ್ದಾರ್. ೭.ಅನುವಾದ ಅವರು ಬಂಗಾಳಿ ಭಾಷೆಯ ಬರಹಗಾರರ ಮೇರು ಕೃತಿಗಳ ಭಾಷಾಂತರಕ್ಕೆ ಸಮಾನ ಸಮಯ ಮೀಸಲಿಟ್ಟಿದ್ದರು. ಅವರು ಯಾವಾಗಲು ಬಂಗಾಲಿ ಭಾಷೆಯಲ್ಲಿ ಬರೆದ ಶ್ರೇಷ್ಠ ಪುಸ್ತಕಗಳನ್ನು ಭಾಷಾಂತರಿಸುತ್ತಿದ್ದರು ಏಕೆಂದರೆ ಈ ಪುಸ್ತಕಗಳಲ್ಲಿ ಜನರಿಗೆ ಅರಿವು ಮೂಡಿಸುವ ಸಂಗತಿಗಳು ಬಹಳಷ್ಟಿವೆ. ಆದ್ದರಿಂದ ನಮ್ಮ ಜನರಲ್ಲಿ ಅರಿವು ಮೂಡಿಸಲುಬಯಸುತ್ತಿದ್ದರು. ಅಮರ್ ಗೋಸ್ವಾಮಿಯವರ ಸಂದೇಶವೇನೆಂದರೆ " ಓದುಗರು ಭಾಷೆಯ ನಿರ್ಭಂಧಗಳ ಕಾರಣದಿಂದಾಗಿ ಮಹಾನ್ ಕೃತಿಗಳನ್ನು ಓದುವುದರಿಂದ ವಂಚಿತರಾಗಬಾರದು, ಮತ್ತು ಅವರು ಹಿಂದಿಯಲ್ಲಿ ಬಂಗಾಳಿ ಲೇಖಕರ ಕೃತಿಗಳನ್ನು ಭಾಷಾಂತರಿಸುವ ಮೂಲಕ ತನ್ನ ಪಾಲಿನ ಕಾರ್ಯವನ್ನು ಕೊಡುಗೆ ನೀಡಿದ್ದಾರೆ". ಇವರ ಸಾಮಾಜಿಕ ಕಾಳಜಿ ಈ ಸಂದೇಶದಲ್ಲಿ ಕಾಣಬಹುದು. ಇದರಿಂದ ಇವರು ಸಮಾಜದ ಓಳಿತನ್ನು ಬಸುವ ವ್ಯಕ್ತಿಯೆಂದು ತಿಳಿದುಬರುತ್ತದೆ. ಅಮರ್ ಗೋಸ್ವಾಮಿಯವರು ಸೇರಿದಂತೆ ಪ್ರಮುಖ ಬರಹಗಾರರು ೭೦ ಕ್ಕೂ ಹೆಚ್ಚೂ ಪುಸ್ತಕಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ರವೀಂದ್ರನಾಥ ಟ್ಯಾಗೋರ್ , ತಸ್ಲೀಮ ನಸ್ರೀನ್ ಅವರ ಪುಸ್ತಕ, ತಾರಾಶಂಕರ್ ಬಂಧೋಪಧ್ಯಯ , ರಮಾನಾಥ ರೇ, ಬಿಭುತಿ ಭೂಷಣ್ ಬಂಧೋಪಧ್ಯಯ ನಜ್ರುಲ್ ಇಸ್ಲಾಂ ಧರ್ಮ ಮತ್ತು ಸತ್ಯಜಿತ್ ರೇ ಹೀಗೆ ಹಲವಾರು ಬರಹಗಾರರ ಪುಸ್ತಕಗಳನ್ನು ಅನುವಾದಿಸಿದ ಕೀರ್ತಿ ಹಿಂದಿ ಬರಹಗಾರರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ಇವರು ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಈ ಕೆಳಗಿನವು ಬಹು ಪ್ರಮುಖವಾದವು: ಹಿಮಯತಿ ಮಹುಯೆ ಕಾ ಪೇಡ್ ಧರತೀಪುತ್ರಾ ಉದಾಸ್ ರಗೋಡಾಸ್ ಅರಣ್ಯ ಮೇ ಹಮ್ ಬುಜೋ ಬಹದ್ದೂರ್ ಅಪ್ನಿ ಅಪ್ನಿ ದುನಿಯಾ ಕಲ್ ಕಾ ಭರೋಸ ಮಹಾಬಲಿ ಇಕ್ಕಿಸ್ ಕಹಾನಿಯ ದೌರ್ ಮೆ ಹಮ್ಸಫರ್ ಆಗಿದೆ. ಸುದಾಮ ಮುಕ್ತಿ ( ವಯಸ್ಕರ ಶಿಕ್ಷಣ ಅಭಿಯಾನದ ಮೂಲಕ ನ್ಯಾಷನಲ್ ಬುಕ್ ಟ್ರಸ್ಟ್ ಬರೆದ ಪುಸ್ತಕ) ಮಕ್ಕಳ ಪುಸ್ತಕಗಳು: ತುನ್ನಿ ಮಚಲಿ ಟಿಂಕು ಛತ್ರ್ ಸೇ ಜಿದ್ದಿ ಪತಂಗ್ ಶೇರ್ ಸಿಂಗ್ ಕು ಚಸ್ಮಾ ಶಭಾಷ್ ಮುನ್ನು ಮೇಘ ಐಸ್ ಕೀಂ ಹನಿ ಡ್ರಾಪ್ ಹನಿ

ಪ್ರಶಸ್ತಿಗಳು[ಬದಲಾಯಿಸಿ]

ಹಿಂದಿ ಕೇಂದ್ರೀಯ ನಿರ್ದೇಶನಾಲಯ ಪ್ರಶಸ್ತಿ-೨೦೦೬ ಬಾಲ ಮತ್ತು ಕಿಶೋರ್ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಹಿಂದಿ ಅಕಾಡೆಮಿ ಪ್ರಶಸ್ತಿ ದೆಹಲಿ ಪ್ರಶಸ್ತಿ-೨೦೦೩-೨೦೦೪ ಡಾ. ರಾಮ್ ಲಾಲ್ ವರ್ಮಾ ಸಮ್ಮನ್ ಸಾಹಿತ್ಯ ಕಲಾ ಪರಿಷತ್ -೧೯೮೭-೮೮ ಇಂಡೋ- ರಷ್ಯನ್ ಸಾಹಿತ್ಯ ಕ್ಲಬ್ -೧೯೯೯ ಹೀಗೆ ಹಿಂದಿ ಮಹತ್ವದ ಬರಹಗಾರ ಹಾಗೂ ಪತ್ರಕರ್ತರಾಗಿ ಬೆಳಗಿದ ಅಮರ್ ಗೋಸ್ವಾಮಿಯವರು ೨೦೧೨ ಜೂನ್ ೨೬ ರಂದು ಅಸ್ತಂಗತರಾದರು. ಹಿಂದಿ ಭಾಷೆಗೆ ಇವರ ಕೊಡಿಗೆ ಅಪಾರವಾದದ್ದು. ಉಲ್ಲೇಖಗಳು

  1. ಅವರ ಜೀವನ

http://bharatdiscovery.org/india/%E0%A4%85%E0%A4%AE%E0%A4%B0_%E0%A4%97%E0%A5%8B%E0%A4%B8%E0%A5%8D%E0%A4%B5%E0%A4%BE%E0%A4%AE%E0%A5%80