ಅಬ್ಬಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಬ್ಬಣಿ

ಅಬ್ಬಣಿ
village

ಅಬ್ಬಣಿ ಕೋಲಾರ ಜಿಲ್ಲೆಯ ಕೋಲಾರ ತಾಲ್ಲೂಕಿನಲ್ಲಿರುವ ಗ್ರಾಮ. ಕನ್ನಡದ ಪದಬಂಧ ಲೇಖಕ ಅ.ನಾ.ಪ್ರಹ್ಲಾದ ರಾವ್ ಈ ಗ್ರಾಮದಲ್ಲಿ ಜನಿಸಿದರು. ಇವರು ದುಗ್ಗರಾಜ ವಂಶಸ್ಥರು. ಇವರ ತಾತ ಶ್ಯಾನುಭೋಗ್ ಜಿ.ರಾಮಯ್ಯನವರು ಹಲವಾರು ದಾಸ ಕೀತ೯ನೆಗಳನ್ನು ರಚಿಸಿದ್ದಾರೆ. ಅಬ್ಬಣಿ ಗ್ರಾಮ ಆಲೂಗಡ್ಡೆ ಹಾಗೂ ತರಕಾರಿ ಬೆಳೆಯುವಲ್ಲಿ ಹೆಸರುವಾಸಿ. ಅಬ್ಬಣಿ ಒಂದು ಚಿಕ್ಕ ಗ್ರಾಮ. ಇದು ಕೋಲಾರ ತಾಲೂಕಿನಲ್ಲಿದೆ. ಗಂಗ ಸಾಮ್ರಾಜ್ಯದ ಅಪೂರ್ವ ರಾಜಧಾನಿಯಾದ ಕೋಲಾರದಿಂದ ನೊಳಂಬರ ಪ್ರಸಿದ್ಧ ನಗರವಾದ ಆವನಿಯ ಮಾರ್ಗದಲ್ಲಿ ವಿಜಯನಗರ ಸಾಮ್ರಾಜ್ಯದ ಪೂರ್ವ ರಾಜಧಾನಿಯಾದ ಮುಳಬಾಗಲಿಗೆ ಸಾಗುವವರೆಗೆ ನೋಡಲು ಸಿಗುವ ಗ್ರಾಮ ಅಬ್ಬಣಿ. ಇಲ್ಲಿಯೂ ಸಹಾ ಹಲವಾರು ಇತಿಹಾಸದ ಪಳೆಯುಳಿಕೆಗಳಿರುವುದು ಗಮನಾರ್ಹ. ದುರ್ಗರಾಜ’ವಂಶದ ಕುಡಿಯೊಂದು ಈ ಪ್ರಾಚೀನ ಗ್ರಾಮದಲ್ಲಿ ಜನಿಸಿ ರೂಪುತÀಳೆದು ಜಿಲ್ಲೆ, ರಾಜ್ಯ, ರಾಷ್ಟ್ರಗಳಿಗೆ ವ್ಯಾಪಿಸಿ ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನ ಹೆಜ್ಜೆಯನ್ನೂರಿರುವುದು ವಾಮನನ್ನಲ್ಲಿನ ತ್ರಿವಿಕ್ರಮ ಗುಣ-ಸ್ವಭಾವಕ್ಕೆ ಸಾಕ್ಷಿಯಾದದ್ದೆನ್ನಬೇಕು. ಅಬ್ಬಣಿಯಲ್ಲಿನ ಪ್ರತಿಷ್ಠಿತ ಕುಟುಂಬ ಶ್ರೀ ನಾರಾಯಣರಾವ್ ಅವರದು. ಇವರು ಕಬ್ಬಿಣದ ರಾಮಪ್ಪನವರ ವಂಶಕ್ಕೆ ಸೇರಿದವರು. ಕಬ್ಬಿಣದಷ್ಟೆ ದೃಢವಾದ ಮತ್ತು ಗಟ್ಟಿಯಾದ ಮನಃಸ್ವಭಾವಗಳಿಂದ ಇವರು ಅಬ್ಬಣಿಯಲ್ಲಿ ನೆಲೆಯೂರಿದರು. ದುರ್ಗದ ರಾಜರು, ದುಗ್ಗರಾಜರು ಎಂಬ ಹೆಸರಿನ ಹಿಂದೆಯೂ ಇತಿಹಾಸದ ಛಾಪನ್ನು ಕಾಣಬಹುದು. ಗಂಗ ವಂಶದ ಪ್ರತಿಷ್ಠಿತ ರಾಜನಾದ ಶ್ರೀಪುರುಷನ ಮಗನೂ ದುಗ್ಧಮಾರನೇ ಆಗಿರುತ್ತಾನೆ (ಕಾಲ ಎಂಟನೇ ಶತಮಾನ). ಗಂಗ ರಾಜರು ತಮ್ಮನ್ನು ಹಾರೀತ ಪುತ್ರರೆಂದು ಹೇಳಿಕೊಂಡಿದ್ದಾರೆ. ದುರ್ಗರಾಜರ ವಂಶಸ್ಥರು ಸಹ ಹರಿತಸ ಗೋತ್ರಕ್ಕೆ ಸೇರಿದವರೇ ಆಗಿದ್ದಾರೆ. ತಲೆಯಿಂದ ತಲೆಗೆ, ಪೀಳಿಗೆಯಿಂದ ಪೀಳಿಗೆಯವರೆಗೆ ಸಾಗಿ ಬಂದ ವಂಶಾನುಚರಿತೆಯ ಪಥದಲ್ಲಿ ತಮ್ಮದೊಂದು ನೆಲೆಯನ್ನು ಅಬ್ಬಣಿಯಲ್ಲಿ ಕಂಡುಕೊಂಡಿರುವ ಸಾರ್ಥಕ ವ್ಯಕ್ತಿ ಅ.ನಾ.ಪ್ರಹ್ಲಾದರಾವ್ ಆಗಿದ್ದಾರೆ.ಭಾರತೀಯ ಭಾಷೆಗಳಲ್ಲಿಯೇ ಅತಿ ಹೆಚ್ಚು ಪದಬಂಧಗಳನ್ನು ರಚಿಸಿದ ಅ.ನಾ.ಪ್ರಹ್ಲಾದರಾವ್ ಅವರ ಹೆಸರು 2015ರ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪುಸ್ತಕದಲ್ಲಿ ದಾಖಲಾಗಿದೆ. ಭಾರತದ ಪ್ರಾದೇಶಿಕ ಭಾಷೆಗಳ ಪೈಕಿ ಅತಿ ಹೆಚ್ಚು ಪದಬಂಧ ರಚಿಸಿದ ಕಾರಣಕ್ಕಾಗಿ ಇವರ ಹೆಸರು ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲೆಯಾಗಿದೆ. 1984ರಲ್ಲಿ ಅರಗಿಣಿ ಪತ್ರಿಕೆಗೆ ಪದಬಂಧ ರಚಿಸಲಾರಂಭಿಸಿದ ಅ.ನಾ.ಪ್ರಹ್ಲಾದರಾವ್ ಅವರು 2014ರ ಜೂನ್ 30ರವರೆಗೆ 29,218 ಪದಬಂಧಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ. ಅಬ್ಬಣಿಗೊಂದು ವಿಶಿಷ್ಠವಾದ ಹಿನ್ನೆಲೆಯಿರಬೇಕೆಂದು ಭಾಸವಾಗುತ್ತದೆ. ನಮ್ಮ ಪ್ರಾಚೀನ ಗ್ರಾಮಗಳು ತಮ್ಮ ನಾಮರೂಪಗಳೊಂದಿಗೆ ನಿಸರ್ಗ ಸಂಪತ್ತನ್ನಾಗಲೀ, ಜಾನಪದ ವೈಭವವನ್ನಾಗಲೀ, ಇತಿಹಾಸ ಪರಂಪರೆಯನ್ನಾಗಲೀ ಯಾವುದಾದರೊಂದು ಸಂಬಂಧವನ್ನು ಹೊಂದಿಯೇ ಇರುವುದನ್ನು ನಮ್ಮ ದೇಶದ ಸಹಸ್ರಾರು ಹಳ್ಳಿಗಳ ಸ್ಥಳನಾಮಗಳಲ್ಲಿ ಕಾಣುತ್ತೇವೆ. ಅಬ್ಬಣಿಗೂ ಇಂತಹದೊಂದು ಸಂಬಂಧ ಇತಿಹಾಸದ ದಟ್ಟಮಂಜಿನಲ್ಲಿ ಮಸಕು ಮಸಕಾಗಿ ಗೋಚರವಾಗುತ್ತದೆ. (ಗಂಗರ ಪ್ರಾಚೀನ ಶಾಸನಗಳಲ್ಲಿ ಸುಮಾರು ಎಂಟನೇ ಶತಮಾನಕ್ಕೆ ಸೇರಿದ್ದು) ಪುತ್ತೂರು-ಅತ್ತಾಣಿ ಎಂಬ ಯುಗಳರೂಪ ದೊರೆಯುತ್ತದೆ. ಪುತ್ತೂರು (ಈಗ ಹುತ್ತೂರು) ಎಂಬುದು ಅಬ್ಬಣಿಗೆ ಸನಿಹದಲ್ಲಿರುವ ಪ್ರಸಿದ್ಧವಾದ ಗ್ರಾಮವಾಗಿದ್ದು, ಅತ್ತಾಣಿ ಎಂಬುದು ಕಾಲಕ್ರಮೇಣ ಮಾರ್ಪಾಡು ಹೊಂದಿದ ಅಬ್ಬಣಿಯ ಪ್ರಾಚೀನ ರೂಪವೆಂದು ಊಹಿಸಬಹುದಾಗಿದೆ. ಅತ್ತಾಣಿ ಎಂಬುವವನು ವೀರಪುರುಷನೂ ಆಗಿದ್ದನೆಂಬುದು ಗಮನಾರ್ಹ ಅಂಶವಾಗಿದೆ. https://www.youtube.com/watch?v=QV2dYGo9DK0

"https://kn.wikipedia.org/w/index.php?title=ಅಬ್ಬಣಿ&oldid=1044107" ಇಂದ ಪಡೆಯಲ್ಪಟ್ಟಿದೆ