ವಿಷಯಕ್ಕೆ ಹೋಗು

ಅನ್ವೇಷಣಾ ಕಲಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಗು ಸ್ಟೈರೋಫೊಮ್‌ನಿಂದ ಆಟಿಕೆ ವಿಮಾನದ ಹಾರಾಟದ ನಡವಳಿಕೆಯನ್ನು ಗಮನಿಸುತ್ತಿದೆ

ಅನ್ವೇಷಣಾ ಕಲಿಕೆಯುು ವಿಚಾರಣಾ-ಆಧಾರಿತ ಕಲಿಕೆಯ ತಂತ್ರವಾಗಿದೆ ಮತ್ತು ಇದನ್ನು ಶಿಕ್ಷಣದಲ್ಲಿ ರಚನಾತ್ಮಕ ಆಧಾರಿತ ವಿಧಾನವೆಂದೂ ಪರಿಗಣಿಸಲಾಗುತ್ತದೆ. ಇದನ್ನು ಸಮಸ್ಯೆ ಆಧಾರಿತ ಕಲಿಕೆ, ಅನುಭವದ ಕಲಿಕೆ ಮತ್ತು 21 ನೇ ಶತಮಾನದ ಕಲಿಕೆ ಎಂದೂ ಕರೆಯಲಾಗುತ್ತದೆ. ಈ ಕಲಿಕೆಯು, ಕಲಿಕಾಸಿದ್ಧಾಂತಿಗಳು ಮತ್ತು ಜೀನ್ ಪಿಯಾಜೆ, ಜೆರೋಮ್ ಬ್ರೂನರ್ ಮತ್ತು ಸೆಮೌರ್ ಪೇಪರ್ಟ್‌ರ ಕಾರ್ಯಗಳನ್ನು ಬೆಂಬಲಿಸುತ್ತದೆ.

ಜೆರೋಮ್ ಬ್ರೂನರ್ 1960 ರ ದಶಕದಲ್ಲಿ ಅನ್ವೇಷಣಾ ಕಲಿಕೆಯನ್ನು ಪ್ರಾರಂಭಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ, ಆದರೆ ಅವರ ಆಲೋಚನೆಗಳು ಜಾನ್ ಡೀವಿಯಂತಹ ಹಿಂದಿನ ಕಲಿಕಾ ಬರಹಗಾರರ ಆಲೋಚನೆಗಳಿಗೆ ಹೋಲುತ್ತವೆ. [] "ತಮ್ಮನ್ನು ತಾವು ಕಂಡುಕೊಳ್ಳುವ ಅಭ್ಯಾಸವು ಮಾಹಿತಿಯನ್ನು ಸಂಪಾದಿಸಲು ಕಲಿಸುತ್ತದೆ ಮತ್ತು ಅದು ಸಮಸ್ಯೆಯನ್ನು ಪರಿಹರಿಸುವಿಕೆಯನ್ನು, ಆ ಮಾಹಿತಿಯು ಸುಲಭವಾಗಿ ಕಾರ್ಯಸಾಧ್ಯವಾಗಿಸುತ್ತದೆ" ಎಂದು ಬ್ರೂನರ್ ವಾದಿಸುತ್ತಾರೆ. [] ಈ ತತ್ವಶಾಸ್ತ್ರವು ತದನಂತರ 1960 ರ ದಶಕದಲ್ಲಿ ಅನ್ವ್ವೇಷಣಾ ಕಲಿಕೆಯ ಚಳುವಳಿಯಾಯಿತು. ಈ ತಾತ್ವಿಕ ಚಳವಳಿಯ ಮಂತ್ರವು ಮಕ್ಕಳು "ಮಾಡುವುದರ ಮೂಲಕ ಕಲಿಯಬೇಕು" ಎಂದು ಸೂಚಿಸುತ್ತದೆ.

ಅನ್ವೇಷಣಾ ಕಲಿಕೆಯು ವಿವಿಧ ಸೂಚನಾ ತಂತ್ರಗಳನ್ನು ಒಳಗೊಂಡಿರುತ್ತದೆ. ಆಲ್ಫೈರಿ, ಬ್ರೂಕ್ಸ್, ಆಲ್ಡ್ರಿಚ್, ಸಗಾನ್ನ್ನ್ದ್ರೆ ಟೆನೆನ್‌ಬಾಮ್ (2011) ನಡೆಸಿದ ಮೆಟಾ-ವಿಶ್ಲೇಷಣಾತ್ಮಕ ವಿಮರ್ಶೆಯ ಪ್ರಕಾರ, ಒಂದು ಅನ್ವೇಷಣೆ ಕಲಿಕೆಯ ಕಾರ್ಯವು, ಸೂಚ್ಯ ಮಾದರಿಯ ಪತ್ತೆಹಚ್ಚುವಿಕೆಯಿಂದ ಪ್ರಾರಂಭವಾಗಿ ವಿವರಣೆಗಳ ಹೊರಹೊಮ್ಮುವಿಕೆಯವರೆಗೂ ವ್ಯಾಪಿಸದೆ. ಇದು ಕೈಪಿಡಿಗಳ ಮೂಲಕ ಪ್ರತ್ಯಾನುಕರಣೆ ನಡೆಸುವವರೆಗೂ ಇರುತ್ತದೆ. ವಿದ್ಯಾರ್ಥಿಗೆ ನಿಖರವಾದ ಉತ್ತರವನ್ನು ಒದಗಿಸದೇ, ಕಲಿಕಾ ಸಾಮಗ್ರಿಗಳನ್ನು ನೀಡಿದಾಗ ಸ್ವತಃ ಉತ್ತರವನ್ನು ಹುಡುಕಲು ಪ್ರಾರಂಭಿಸುತ್ತಾನೆ.ಇದೇ ಅನ್ವೇಷಣಾ ಕಲಿಕೆ.

ಅನ್ವೇಷಣಾ ಕಲಿಕೆಯು, ಸಮಸ್ಯೆ ಪರಿಹರಿಸುವ ಸಂದರ್ಭಗಳಲ್ಲಿ ಕಂಡುಬರುತ್ತದೆ. ಕಲಿಯುವವನು ತನ್ನ ಸ್ವಂತ ಅನುಭವ ಮತ್ತು ಪೂರ್ವ ಜ್ಞಾನವನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಾನೆ. ಇದು ಸೂಚನಾ ಬೋಧನಾ ವಿಧಾನವಾಗಿದ್ದು, ಅದರ ಮೂಲಕ ವಿದ್ಯಾರ್ಥಿಗಳು ತಮ್ಮ ಪರಿಸರದೊಂದಿಗಿನ ವಸ್ತುಗಳನ್ನು ಅನ್ವೇಷಿಸುವ ಮತ್ತು ನಿರ್ವಹಿಸುವ ಮೂಲಕ, ಪ್ರಶ್ನೆಗಳು ಮತ್ತು ವಿವಾದಗಳೊಂದಿಗೆ ಹೋರಾಟ ಮತ್ತು ಪ್ರಯೋಗಗಳನ್ನು ಮಾಡುತ್ತಾರೆ.

. []

[]

[]

ಉಲ್ಲೇಖಗಳು

[ಬದಲಾಯಿಸಿ]
  1. (Monroe, 1911)
  2. (Bruner, 1961, p. 26)
  3. (Stokke, 2015)
  4. (Dorier & Garcia, 2013)
  5. (Alfieri, Brooks, Aldrich, & Tenenbaum, 2011)