ಅನುರಾಧಾ ಟಿ.ಕೆ.
ಅನುರಾಧಾ ಟಿ.ಕೆ. | |
---|---|
ಜನನ | ೩೦ ಎಪ್ರಿಲ್ ೧೯೬೦ ಬೆಂಗಳೂರು, ಕರ್ನಾಟಕ, ಭಾರತ |
ವಾಸಸ್ಥಳ | ಬೆಂಗಳೂರು,ಕರ್ನಾಟಕ, ಭಾರತ |
ರಾಷ್ಟ್ರೀಯತೆ | ಭಾರತೀಯ |
ಸಂಸ್ಥೆಗಳು | ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) |
ಅಭ್ಯಸಿಸಿದ ವಿದ್ಯಾಪೀಠ | ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು |
ಅನುರಾಧಾ ಟಿ.ಕೆ. ಒಬ್ಬ ಭಾರತೀಯ ವಿಜ್ಞಾನಿ. ಇವರು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ)ದಲ್ಲಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಜಿಎಸ್ಎಟಿ -೧೨ ಮತ್ತು ಜಿಎಸ್ಎಟಿ -೧೦ ಉಪಗ್ರಹಗಳ ಉಡಾವಣಾ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. [೧]
ಆರಂಭಿಕ ಜೀವನ
[ಬದಲಾಯಿಸಿ]ಅನುರಾಧಾ ಟಿ.ಕೆ. ರವರು ೩೦ ಎಪ್ರಿಲ್ ೧೯೬೦ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ನಲ್ಲಿ ಸ್ನಾತಕೋತರ ಪದವಿಯನ್ನು ಪಡೆದರು.[೨]
ವೃತ್ತಿಜೀವನ
[ಬದಲಾಯಿಸಿ]ಅನುರಾಧಾ ಟಿ.ಕೆ. ರವರು ಇಸ್ರೋ ಉಪಗ್ರಹ ಕೇಂದ್ರದಲ್ಲಿ ಭಾರತೀಯ ಜಿಯೋಸಾಟ್ ಪ‍್ರೋಗ್ರಾಮ್ ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಯೋ -ಸಿಂಕ್ರೋನಸ್ ಉಪಗ್ರಹಗಳ ಪ್ರದೇಶಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಹಲವಾರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಸ್ರೋ ಸಂವಹನ ಉಪಗ್ರಹ ಜಿಎಸ್ಎಟಿ-೧೨ ಅನ್ನು ಅಭಿವೃದ್ದಿ ಪಡಿಸುವ ಮತ್ತು ಪ್ರಾರಂಭಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ೨೦ ಎಂಜಿನಿಯರಿಂಗ್ ಗಳ ತಾಂತ್ರಿಕ ಗುಂಪುಗಳ ಮುಖ್ಯಸ್ಥರಾಗಿದ್ದರು. ಮಹಿಳಾ ಸಂಶೋಧನ ತಂಡದ ಅಂಗವಾಗಿ ಹಾಸನದಲ್ಲಿ ಇಸ್ರೋನ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್)ನಿಂದ ಜಿಎಸ್ಎಟಿ -೧೨ ಅನ್ನು ಅದರ ಅಂತಿಮ ಕಕ್ಷೆಗೆ ತಲುಪಿಸಿದರು. ಜಿಎಸ್ಎಟಿ-೧೨ ನೊಂದಿಗೆ ಕೆಲಸ ಮಾಡಿದ ನಂತರ ಅನುರಾಧಾ ಟಿ.ಕೆ.ರವರು ಸೆಪ್ಟೆಂಬರ್ ೨೦೧೨ರಲ್ಲಿ ಅತಿ ದೊಡ್ಡ ಸಂವಹನ ಉಪಗ್ರಹ ಜಿಎಸ್ಎಟಿ -೧೦ ಉಡಾವಣೆ ಮಾಡಿದರು. ಯೋಜನಾ ನಿರ್ದೇಶಕರಾಗಿ ಅವರು ಜಿಎಸ್ಎಟಿ-೯, ಜಿಎಸ್ಎಟಿ-೧೭ ಮತ್ತು ಜಿಎಸ್ಎಟಿ-೧೮ ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಿದರು. ಅವರು ಭಾರತೀಯ ರಿಮೋಟ್ ಸೆನ್ಸಿಂಗ್ ಮತ್ತು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ಕಾರ್ಯಕ್ರಮಗಳಿಗೆ ಪ್ರಾಜೆಕ್ಟ್ ಮ್ಯಾನೇಜರ್, ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್ ಮತ್ತು ಅಸೋಸಿಯೆಟ್ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.[೩][೪][೫]
ಪ್ರಶಸ್ತಿಗಳು
[ಬದಲಾಯಿಸಿ]- ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿನ ಸೇವೆಗಳಿಗಾಗಿ ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ೨೦೦೩ರ ಸ್ಪೇಸ್ ಗೋಲ್ಡ್ ಮೆಡಲ್ ಪ್ರಶಸ್ತಿ.
- ೨೦೧೧ ಐಇಐನ ರಾಷ್ಟ್ರೀಯ ವಿನ್ಯಾಸ ಮತ್ತು ಸಂಶೋಧನಾ ವೇದಿಕೆಯಿಂದ ಸುಮನ್ ಶರ್ಮಾ ಪ್ರಶಸ್ತಿ.
- ೨೦೧೨ರಲ್ಲಿ ಸಂವಹನ ಬಾಹ್ಯಾಕಾಶನೌಕೆ ಸಾಧನೆಗಾಗಿ ಎಎಸ್ಐ-ಇಸ್ರೋ ಮೆರಿಟ್ ಪ್ರಶಸ್ತಿಗಳು.
- ೨೦೧೨ರಲ್ಲಿ ಇಸ್ರೋ ಟೀಮ್ ಅವಾರ್ಡ್.[೬]
ಉಲ್ಲೇಖಗಳು
[ಬದಲಾಯಿಸಿ]- ↑ https://www.deccanherald.com/content/181618/meet-isros-space-girls.html
- ↑ https://sites.grenadine.co/sites/pmibangalore/en/pmpc-2017/participants/2348[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.indiatoday.in/india/south/story/isro-gsat-12-138117-2011-07-23
- ↑ "ಆರ್ಕೈವ್ ನಕಲು". Archived from the original on 2020-09-28. Retrieved 2019-03-19.
- ↑ https://www.shethepeople.tv/news/tech-women-meet-anuradha-tk
- ↑ http://wiesummit.ieeer10.org/smt-t-k-anuradha/