ವಿಷಯಕ್ಕೆ ಹೋಗು

ಅನಿರುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಷೆಯೊಂದಿಗೆ ಅನಿರುದ್ಧ

ಅನಿರುದ್ಧ (ಅಂದರೆ "ಅನಿಯಂತ್ರಿತ", "ಅನಿರ್ಬಂಧಿತ" ಅಥವಾ "ಅಡೆತಡೆಗಳಿಲ್ಲದ") ಪ್ರದ್ಯುಮ್ನನ ಮಗ ಮತ್ತು ಕೃಷ್ಣನ ಮೊಮ್ಮಗ.[೧] ಅವನು ಬಹಳವಾಗಿ ತನ್ನ ಅಜ್ಜನಂತೆಯೇ ಇದ್ದನು ಎಂದು ಹೇಳಲಾಗಿದೆ, ಎಷ್ಟರ ಮಟ್ಟಿಗೆ ಎಂದರೆ ಅವನು ಜನ ಅವತಾರ, ವಿಷ್ಣುವಿನ ಅವತಾರನಾಗಿರಬಹುದು. ನಾಲ್ಕನ್ನು ವಿಷ್ಣು ತತ್ತ್ವ ಎಂದು ಪರಿಗಣಿಸಲಾಗುತ್ತದೆ. ಅನಿರುದ್ಧನು ಪರಮಾತ್ಮನಾಗಿ ಪ್ರತಿ ಆತ್ಮನಲ್ಲಿ ಇರುತ್ತಾನೆ.

ಬಾಣಾಸುರನ ಮಗಳು, ಉಷೆ ಎಂಬ ಹೆಸರಿನ ದೈತ್ಯರ ರಾಜಕುಮಾರಿ ಅನಿರುದ್ಧನನ್ನು ಪ್ರೀತಿಸಿದಳು. ಅವನನ್ನು ಮಾಯಾ ಪ್ರಭಾವದಿಂದ ತನ್ನ ತಂದೆಯ ನಗರ ಅಸ್ಸಾಮ್‍ನ ಸೋನಿತ್‍ಪುರದಲ್ಲಿರುವ ತನ್ನ ವಸತಿಗೆ ಕರೆತರಸಿದಳು. ಆದರೆ, ಕೆಲವು ದಂತಕಥೆಗಳ ಪ್ರಕಾರ, ಶೋನಿತ್‍ಪುರವನ್ನು ಹಿಮಾಚಲ ಪ್ರದೇಶಶಿಮ್ಲಾ ಜಿಲ್ಲೆಯ ಸರಾಹನ್‍ನೊಂದಿಗೂ ಗುರುತಿಸಲಾಗಿದೆ. ಅವರ ದಂತಕಥೆಗಳ ಪ್ರಕಾರ ಹೋದರೆ, ಕೃಷ್ಣನು ಪ್ರದ್ಯುಮ್ನನನ್ನು ಶೋನಿತ್‍ಪುರ್‍ನ ರಾಜನನ್ನಾಗಿ ಮತ್ತು ಅನಂತರ ಬುಶಹರ್ ರಾಜ್ಯದ ರಾಜನನ್ನಾಗಿ ಮಾಡಿದನು. ಬಾಣನು ಅವನನ್ನು ವಶಪಡಿಸಿಕೊಳ್ಳಲು ಕಾವಲುಗಾರರನ್ನು ಕಳಿಸಿದನು, ಆದರೆ ಆ ಧೀರ ಯುವಕನು, ಕಬ್ಬಿಣದ ಗದೆಯ ಸಹಾಯದಿಂದ ತನ್ನ ಆಕ್ರಮಣಕಾರರನ್ನು ಸಂಹರಿಸಿದನು. ಬಾಣನು ನಂತರ ಮಾಯಾ ಶಕ್ತಿಗಳನ್ನು ಉಪಯೋಗಿಸಿ ಅವನನ್ನು ವಶಪಡಿಸಿಕೊಂಡನು.

ಅನಿರುದ್ಧನು ದೂರಕ್ಕೆ ಸಾಗಿಸಲ್ಪಟ್ಟಿರುವುದು ಗೊತ್ತಾದ ಮೇಲೆ, ಕೃಷ್ಣ, ಬಲರಾಮ, ಮತ್ತು ಪ್ರದ್ಯುಮ್ನರು ಅವನನ್ನು ರಕ್ಷಿಸಲು ಹೋದರು. ಬಾಣಾಸುರನು ಶಿವನ ಮಹಾಭಕ್ತನಾಗಿದ್ದು ೧೦೦೦ ತೋಳುಗಳನ್ನು ಹೊಂದಿದ್ದನು. ಈ ಕಾರಣದಿಂದ ಯಾರೂ ಅವನೊಡನೆ ಕಾದಾಡಲು ಮನಸ್ಸು ಮಾಡಿರಲಿಲ್ಲ. ತನ್ನ ಅಹಂಕಾರದಿಂದ ಕುರುಡನಾಗಿ, ತನ್ನಷ್ಟು ಬಲಶಾಲಿಯಾದ ಯಾರೊಡನೆಯಾದರೂ ಕಾದಾಡಲು ಅವಕಾಶ ನೀಡುವಂತೆ ಅವನು ಶಿವನನ್ನು ಕೇಳಿದನು. ಹಾಗಾಗಿ, ಶಿವನು ಅವನಿಗೆ ವಿಷ್ಣುವಿನ ಅವತಾರನಾದ ಕೃಷ್ಣನೊಂದಿಗಿನ ಯುದ್ಧದಲ್ಲಿ ಸೋಲಾಗಲಿ ಎಂದು ಶಾಪ ಕೊಟ್ಟನು.

ಕೆಲವು ತಿಂಗಳ ನಂತರವಷ್ಟೇ ಕೃಷ್ಣನಿಗೆ ತನ್ನ ಮೊಮ್ಮಗ ಎಲ್ಲಿದ್ದಾನೆಂದು ಗೊತ್ತಾಯಿತು ಮತ್ತು ದೊಡ್ಡ ಸೇನೆಯೊಂದಿಗೆ ಬಾಣಾಸುರನ ಮೇಲೆ ಆಕ್ರಮಣ ಮಾಡಿದನು. ಘೋರ ಯುದ್ಧ ನಡೆಯಿತು. ಕೃಷ್ಣನೇ ಸ್ವತಃ ಬಾಣಾಸುರನ ಅಸಂಖ್ಯಾತ ತೊಳುಗಳನ್ನು ಕತ್ತರಿಸಿದನು. ಆದರೆ ಶಿವನು ಬಾಣಾಸುರನಿಗೆ ಸಹಾಯ ಮಾಡಿದನು. ಬಾಣಾಸುರನ ನಾಲ್ಕು ಬಾಹುಗಳನ್ನು ಉಳಿಸುವುದಾಗಿ ಕೃಷ್ಣನು ಶಿವನಿಗೆ ಪ್ರಮಾಣ ಮಾಡಿದನು. ಬಾಣಾಸುರನು ಕೃಷ್ಣನಿಗೆ ಸಾಷ್ಟಾಂಗ ನಮಸ್ಕರಿಸಿ ಅನಿರುದ್ಧ ಮತ್ತು ಅವನ ವಧು ಉಷೆಯನ್ನು ಕರೆಸಿದನು. ಎಲ್ಲರೂ ದ್ವಾರಕೆಗೆ ಹಿಂದಿರುಗಿದರು.

ಉಲ್ಲೇಖಗಳು

[ಬದಲಾಯಿಸಿ]
  1. Gopal, Madan (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 68.