ಅನಾಫಿಲಿಸ್ ಸೊಳ್ಳೆ
ಪ್ರಪಂಚದ ಎಲ್ಲ ಭಾಗಗಳಲ್ಲೂ ಕಾಣಬರುವ ಸೊಳ್ಳೆ. ಅನಾಫಿಲೀಸ್ ಎಂಬ ಪದ ಮೂಲ ಗ್ರೀಕ್ ಪದದಿಂದ ವ್ಯುತ್ಪತ್ತಿಯಾಗಿದೆ. ಅದರ ಮೂಲ ಅರ್ಥ ಉಪದ್ರವಕಾರಿ ಎಂದು.[೧]
ಪಂಗಡಗಳು
[ಬದಲಾಯಿಸಿ]ಸೊಳ್ಳೆಗಳಲ್ಲಿ ಎರಡು ಪ್ರಮುಖ ಪಂಗಡಗಳಿವೆ. ಅವೇ ಅನಾಫಿಲಿನಿ ಮತ್ತು ಕ್ಯುಲಿಸಿನಿ.
ಅನಾಫಿಲಿನಿ
[ಬದಲಾಯಿಸಿ]ಅನಾಫಿಲಿಸ್ ಸೊಳ್ಳೆ ಅನಾಫಿಲಿನಿ ಪಂಗಡಕ್ಕೆ ಸೇರಿದೆ.
ಕ್ಯುಲಿಸಿನಿ
[ಬದಲಾಯಿಸಿ]ಕ್ಯುಲಿಸಿನಿ ಪಂಗಡದಲ್ಲಿ ಕ್ಯುಲೆಕ್ಸ್, ಏಡಿಸ್ ಮತ್ತು ಮಾನಸೋನಿಯಾ ಜಾತಿಗಳನ್ನು ಕಾಣಬಹುದು.
ಜೀವನ
[ಬದಲಾಯಿಸಿ]ನಿಧಾನವಾಗಿ ಹರಿಯುವ ಸ್ವಚ್ಫವಾದ ನೀರಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಅವು 10-12 ದಿನಗಳಲ್ಲಿ ಬೆಳೆದು ದೊಡ್ಡದಾಗಿ ಹಳದಿ ಜ್ವರ, ಮಲೇರಿಯಾ ಜ್ವರ ಹರಡುವಿಕೆಗೆ ಸಹಕಾರಿಯಾಗುತ್ತವೆ. ಗಂಡು ಸಸ್ಯಾಹಾರಿ. ಹೆಣ್ಣುಸೊಳ್ಳೆಗಳು ಮಾತ್ರ ಮನುಷ್ಯನ ಅಥವಾ ಪ್ರಾಣಿಗಳ ರಕ್ತವನ್ನು ಹೀರಬಲ್ಲವು. ರೋಗ ಹರಡುವಿಕೆಯಲ್ಲಿ ಹೆಣ್ಣಿನ ಪಾತ್ರವೇ ಹೆಚ್ಚು.
ಪ್ರಭೇದಗಳು
[ಬದಲಾಯಿಸಿ]ಪ್ರಪಂಚದಲ್ಲಿ ಸುಮಾರು 400 ಜಾತಿಯ ಅನಾಫಿಲೀಸ್ ಸೊಳ್ಳೆಗಳಿವೆ. ಅವುಗಳಲ್ಲಿ 56 ಜಾತಿಗಳು ಭಾರತದಲ್ಲಿವೆ. ಈ ಪೈಕಿ 45 ಜಾತಿಗಳನ್ನು ಕರ್ನಾಟಕ ರಾಜ್ಯದಲ್ಲಿ ಕಾಣಬಹುದು. ಇವುಗಳಲ್ಲಿ 61 ಪ್ರಭೇದಗಳು ಮಾತ್ರ ಪ್ರಪಂಚದಲ್ಲಿ ಮಲೇರಿಯ ರೋಗ ಹರಡಲು ಕಾರಣವಾಗಿವೆ.[೨] ಅವುಗಳಲ್ಲಿ ಸಮತಟ್ಟಾದ ಮೈದಾನ ಪ್ರದೇಶಗಳಲ್ಲಿ ವಾಸಿಸುವ ಅ. ಫಿಲಿಫೆನಿನ್ಸಿಸ್ ಮತ್ತು ಅ. ಕುಲಿಸಿಫ್ಯಾಲಿಸ್; ಗುಡ್ಡಗಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಕಂಡುಬರುವ ಅ. ಪ್ಲೊವಿಟೆಲಿಸ್ ಮತ್ತು ಅ. ಮಿನಿಮಸ್ ಹಾಗೂ ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಅ. ಸುಂಡೈರಸ್ ಮತ್ತು ಅ. ಸ್ಟಿಫೆನ್ಸಿ - ಇವು ಕರ್ನಾಟಕ ರಾಜ್ಯದಲ್ಲಿ ಮಲೇರಿಯಾ ರೋಗವನ್ನು ಹರಡುತ್ತವೆ.
ಲಕ್ಷಣ
[ಬದಲಾಯಿಸಿ]ಈ ಸೊಳ್ಳೆಗಳು ಒಂದು ರೀತಿಯ ಕಪ್ಪು ಮತ್ತು ಬಿಳಿ ಚುಕ್ಕೆಗಳಿಂದ ಕೂಡಿವೆ. ರೆಕ್ಕೆಗಳ ಮಧ್ಯಭಾಗದಲ್ಲಿ ಬೆನ್ನುಭಾಗ ಅರ್ಧ ಚಂದ್ರಾಕಾರವಾಗಿ ಬಾಗಿದೆ. ರಕ್ತವನ್ನು ಹೀರುವ ಹೀರುನಳಿಕೆಯ (ಪ್ರೊಬೊಸಿಸ್) ಪಕ್ಕದಲ್ಲಿರುವ ಪ್ಯಾಲ್ಪ್ಸ್‍ಗಳು ಹೆಣ್ಣಿನಲ್ಲಿ ಉದ್ದನಾಳದಂತೆಯೂ ಗಂಡಿನಲ್ಲಿ ಅದರ ತುದಿ ಗದೆಯ ರೂಪದಲ್ಲೂ ಇರುತ್ತದೆ.
ರೋಗ ಹರಡುವಿಕೆ
[ಬದಲಾಯಿಸಿ]ಅನಾಫಿಲಿಸ್ ಪ್ಲೊವೆಟೆಲಿಸ್‍ಗಳಿಗೆ ರೋಗ ಹರಡುವ ಸಾಮರ್ಥ್ಯ ಹೆಚ್ಚಿದ್ದು ಅ. ಕುಲಿಸಿಫ್ಯಾಲಿಸ್‍ಗಳಿಗೆ ಅಂತಹ ಸಾಮರ್ಥ್ಯ ಕಡಿಮೆ ಇರುತ್ತದೆ. ಸೊಳ್ಳೆಗಳು ಮಾನವರ ಬೆವರಿನ ವಾಸನೆ, ಕಾರ್ಬನ್ ಡೈ ಆಕ್ಸೈಡ್‍ಗಳ ಪ್ರಮಾಣಗಳ ಸುಳಿವಿನಿಂದ ಕತ್ತಲಲ್ಲಿ ತಮ್ಮ ಕಾರ್ಯ ನಡೆಸಬಲ್ಲವು.
ಅನಾಫಿಲಿಸ್ ಮಲೇರಿಯಾ ರೋಗಿಯನ್ನು ಕಚ್ಚಿದಾಗ ನಿರ್ಲಿಂಗ ಮತ್ತು ಲೈಂಗಿಕ ಸ್ವರೂಪದ ಮಲೇರಿಯಾ ಸೂಕ್ಷ್ಮಾಣುಗಳು ಸೊಳ್ಳೆಯ ಹೊಟ್ಟೆಯನ್ನು ಸೇರುತ್ತವೆ. ಇಲ್ಲಿ ನಿರ್ಲಿಂಗ ಸ್ವರೂಪದ ಜೀವಿಗಳು ಬದುಕುಳಿಯಲಾರವು. ಲೈಂಗಿಕ ಸ್ವರೂಪಿಗಳು ಬದಲಾವಣೆ ಹೊಂದಿ ಗಂಡು ಮತ್ತು ಹೆಣ್ಣು ಕೂಟಕಣ ಜೀವಿಗಳು ಸಂಯೋಗಗೊಂಡು ಚಲಾಂಡ ಅಥವಾ ಕೈನೈಟ್‍ಗಳನ್ನುಂಟುಮಾಡುತ್ತದೆ. ಇದರಿಂದ ಅಸಂಖ್ಯ ಬೀಜಕಣ ಜೀವಿಗಳು ಉತ್ಪತ್ತಿಯಾಗಿ ಅನಾಫೀಲಿಸ್ ಸೊಳ್ಳೆಯ ಜೊಲ್ಲುಗ್ರಂಥಿಗಳ ಮೂಲಕ ಮತ್ತೊಬ್ಬ ಆರೋಗ್ಯ ವಂತನ ದೇಹಕ್ಕೆ ಸೇರುವುದರಿಮದ ಸೊಳ್ಳೆಯು ರೋಗವಾಹಕವಾಗಿ ಕಾರ್ಯ ನಿರ್ವಹಿಸುತ್ತದೆ.
ರಕ್ತ ಹೀರಿದ ಹತ್ತು ದಿನಗಳ ನಂತರವೇ ಸೊಳ್ಳೆ ರೋಗವನ್ನು ಹರಡಲು ಸಾದ್ಯ. ಈ ಅವಧಿಯಲ್ಲಿ ಸೊಳ್ಳೆಯ ಜಠರದಲ್ಲಿ ಮಲೇರಿಯಾ ಸೂಕ್ಷ್ಮಾಣುಗಳು ಜೀವನಕ್ರಮ ಮುಂದುವರಿಯುವುದು. ಈ ಅಂಶವನ್ನು ಬಳಸಿಕೊಂಡು ಸೊಳ್ಳೆಗಳ ನಿರ್ಮೂಲನಾ ಕ್ರಮವನ್ನು ಪರಿಗಣಿಸಬಹುದು.