ಅಡ್ವಾನ್ಸ್‍ಡ್ ಮೈಕ್ರೋ ಡಿವೈಸಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಡ್‌ವ್ಯಾನ್‌ಸ್ಟ್ ಮೈಕ್ರೋ ಡಿವೈಸಸ್, ಇನ್ಕ್. (ಎಎಮ್‌ಡಿ) (ನ್ಯೂ ಯಾರ್ಕ್ ಷೇರುಪೇಟೆ: ಎಎಮ್‌ಡಿ Archived 2012-04-16 ವೇಬ್ಯಾಕ್ ಮೆಷಿನ್ ನಲ್ಲಿ.), ವಾಣಿಜ್ಯ ಹಾಗೂ ಗ್ರಾಹಕ ಮಾರುಕಟ್ಟೆಗಳಿಗಾಗಿ ಗಣಕಯಂತ್ರ ಸಂಸ್ಕಾರಕಗಳು, ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ, ಸನಿವೇಲ್, ಕ್ಯಾಲಿಫೊರ್ನಿಯಾದಲ್ಲಿ ಕೇಂದ್ರ ಕಾರ್ಯಸ್ಥಾನ ಹೊಂದಿರುವ ಅಮೇರಿಕದ ಒಂದು ಬಹುರಾಷ್ಟ್ರೀಯ ಅರೆವಾಹಕ ಕಂಪನಿ. ಅದರ ಮುಖ್ಯ ಉತ್ಪನ್ನಗಳು, ಮೈಕ್ರೋಪ್ರೋಸೆಸರ್‌ಗಳು, ಮಾತೃಫಲಕ ಬಿಲ್ಲೆಸಮೂಹಗಳು (ಚಿಪ್‌ಸೆಟ್), ಹದಿಸಿದ ಸಂಸ್ಕಾರಕಗಳು ಮತ್ತು ಸೇವಕಗಳು (ಸರ್ವರ್), ಕಾರ್ಯಕೇಂದ್ರಗಳು (ವರ್ಕ್‌ಸ್ಟೇಶನ್) ಹಾಗೂ ವೈಯಕ್ತಿಕ ಗಣಕಯಂತ್ರಗಳಿಗಾಗಿ ಚಿತ್ರ ಸಂಸ್ಕಾರಕಗಳು, ಮತ್ತು ಕೈಹಿಡಿ ಸಾಧನಗಳು (ಹ್ಯಾಂಡ್‌ಹೆಲ್ಡ್ ಡಿವೈಸ್), ಅಂಕೀಯ ದೂರದರ್ಶನ, ಮೋಟಾರು ವಾಹನಗಳು, ಗೇಮ್ ಉಪಕರಣ ಕಟ್ಟೆ (ಗೇಮ್ ಕನ್ಸೋಲ್), ಹಾಗೂ ಇತರ ಹದಿಸಿದ ವ್ಯವಸ್ಥೆ ಆನ್ವಯಿಕಗಳಿಗಾಗಿ ಸಂಸ್ಕರಣ ತಂತ್ರಜ್ಞಾನಗಳನ್ನು ಒಳಗೊಂಡಿವೆ. ಎಎಮ್‌ಡಿ ಇಂಟೆಲ್ ಸಂಸ್ಥೆಯ ನಂತರ ಎಕ್ಸ್೮೬ ರಚನೆಯ ಮೇಲೆ ಆಧಾರಿತವಾದ ಮೈಕ್ರೋಪ್ರೋಸೆಸರ್‌ಗಳ ಎರಡನೇ ಅತಿ ದೊಡ್ಡ ಜಾಗತಿಕ ಪೂರೈಕೆದಾರ, ಮತ್ತು ಇಂಟೆಲ್ ಹಾಗೂ ಎನ್‌ವಿಡಿಯಾ ನಂತರ ಚಿತ್ರ ಸಂಸ್ಕರಣ ಘಟಕಗಳ ಮೂರನೇ ಅತಿ ದೊಡ್ಡ ಪೂರೈಕೆದಾರ.