ವಿಷಯಕ್ಕೆ ಹೋಗು

ಅಡೋಬ್ ಫ್ಲ್ಯಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Adobe Flash
ಅಭಿವೃದ್ಧಿಪಡಿಸಿದವರುAdobe Systems (formerly by Macromedia)
ಕ್ರಮವಿಧಿಯ ಭಾಷೆC++
ಕಾರ್ಯಾಚರಣಾ ವ್ಯವಸ್ಥೆMicrosoft Windows, Mac OS X, Linux, Solaris, Symbian, Windows Mobile, Ubuntu Netbook Edition (Optional)
ವಿಧMultimedia
ಪರವಾನಗಿProprietary EULA
ಅಧೀಕೃತ ಜಾಲತಾಣAdobe Flash Platform Homepage

ಅಡೋಬ್‌ ಫ್ಲ್ಯಾಶ್ (ಹಿಂದೆ ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ ಎಂದು ಕರೆಯಲ್ಪಡುತ್ತಿತ್ತು) ಎಂಬುದು ಒಂದು ಮಲ್ಟಿಮೀಡಿಯಾ ವೇದಿಕೆಯಾಗಿದ್ದು, ವೆಬ್‌ ಪುಟಗಳಿಗೆ ಅನಿಮೇಷನ್‌, ದೃಶ್ಯಭಾಗ, ಮತ್ತು ಪಾರಸ್ಪರಿಕ ಪಟುತ್ವವನ್ನು ಸೇರಿಸಲು ಇದನ್ನು ಬಳಸಲಾಗುತ್ತದೆ. ಜಾಹೀರಾತುಗಳು ಮತ್ತು ಆಟಗಳಿಗೆ ಸಂಬಂಧಿಸಿದಂತೆ ಫ್ಲ್ಯಾಶ್‌‌‌ ಆಗಿಂದಾಗ್ಗೆ ಬಳಸಲ್ಪಡುತ್ತದೆ. ತೀರಾ ಇತ್ತೀಚಿಗೆ, "ಸಮೃದ್ಧ ಅಂತರಜಾಲ ಅನ್ವಯಿಕೆಗಳಿಗೆ" ("ರಿಚ್‌ ಇಂಟರ್‌ನೆಟ್‌ ಅಪ್ಲಿಕೇಷನ್ಸ್‌‌-RIAಗಳು") ಸಂಬಂಧಿಸಿದ ಒಂದು ಸಲಕರಣೆಯಾಗಿ ಇದು ಸ್ಥಾನವನ್ನು ಪಡೆದುಕೊಂಡಿದೆ. ಪಠ್ಯದ ಅನಿಮೇಷನ್‌, ರೇಖಾಕೃತಿಗಳು, ಮತ್ತು ಸ್ಥಿರ ಚಿತ್ರಗಳನ್ನು ಒದಗಿಸುವುದಕ್ಕಾಗಿ ಸದಿಶ ಪ್ರಮಾಣ ಮತ್ತು ರ್ಯಾಸ್ಟರ್‌‌ ರೇಖಾಚಿತ್ರಗಳನ್ನು ಫ್ಲ್ಯಾಶ್‌‌‌ ಕುಶಲತೆಯಿಂದ ನಿರ್ವಹಿಸುತ್ತದೆ. ಶ್ರವ್ಯಾಂಶ ಮತ್ತು ದೃಶ್ಯಭಾಗದ ಎರಡು ದಿಕ್ಕಿನ ಪ್ರವಹಿಸುವಿಕೆಯನ್ನು ಇದು ಬೆಂಬಲಿಸುತ್ತದೆ, ಮತ್ತು ಮೌಸು, ಕೀಲಿಮಣೆ, ಧ್ವನಿವರ್ಧಕ, ಹಾಗೂ ಕ್ಯಾಮರಾಗಳ ಮೂಲಕ ಬಳಕೆದಾರರು ಮಾಡುವ ದತ್ತಾಂಶದ ಪ್ರದಾನವನ್ನು ಇದು ಸೆರೆಹಿಡಿಯಬಲ್ಲದು. ಆಕ್ಷನ್‌ ಸ್ಕ್ರಿಪ್ಟ್‌ ಎಂದು ಕರೆಯಲಾಗುವ ಒಂದು ವಸ್ತು-ಉದ್ದೇಶಿತ ಭಾಷೆಯನ್ನು ಫ್ಲ್ಯಾಶ್‌‌‌ ಒಳಗೊಂಡಿರುತ್ತದೆ. ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌‌ನ್ನು ಬಳಸಿಕೊಂಡು ಹಲವಾರು ಕಂಪ್ಯೂಟರ್‌ ವ್ಯವಸ್ಥೆಗಳು ಹಾಗೂ ಸಾಧನಗಳ ಮೇಲೆ ಫ್ಲ್ಯಾಶ್‌‌‌ ಹುರುಳನ್ನು ಪ್ರದರ್ಶಿಸಬಹುದು. ಅಡೋಬ್‌ ಫ್ಲ್ಯಾಶ್‌ ಪ್ಲೇಯರ್ ಎಂಬುದು ಸಾಮಾನ್ಯ ವೆಬ್‌ ಬ್ರೌಸರ್‌‌‌ಗಳಿಗೆ, ಕೆಲವೊಂದು ಮೊಬೈಲ್‌ ಫೋನ್‌‌ಗಳಿಗೆ ಹಾಗೂ (ಫ್ಲ್ಯಾಶ್‌‌‌ ಲೈಟ್‌ ಬಳಸುತ್ತಿರುವ) ಇತರ ಕೆಲವೇ ವಿದ್ಯುನ್ಮಾನ ಸಾಧನಗಳಿಗೆ ಸಂಬಂಧಿಸಿದಂತೆ ಉಚಿತವಾಗಿ ಲಭ್ಯವಿದೆ.

ಇತಿಹಾಸ

[ಬದಲಾಯಿಸಿ]

ಮೂಲತಃ ಮ್ಯಾಕ್ರೋಮೀಡಿಯಾದಿಂದ ಸ್ವಾಧೀನಕ್ಕೊಳಗಾದ ಫ್ಲ್ಯಾಶ್‌‌‌ 1996ರಲ್ಲಿ ಪರಿಚಯಿಸಲ್ಪಟ್ಟಿತು, ಮತ್ತು ಅದೀಗ ಪ್ರಸಕ್ತವಾಗಿ ಅಡೋಬ್‌ ಸಿಸ್ಟಮ್ಸ್‌‌‌ನಿಂದ ಅಭಿವೃದ್ಧಿಪಡಿಸಲ್ಪಡುತ್ತಿದೆ ಮತ್ತು ವಿತರಿಸಲ್ಪಡುತ್ತಿದೆ. ಫ್ಲ್ಯಾಶ್‌‌‌ ಅನ್ವಯಿಕೆಗೆ ಪೂರ್ವವರ್ತಿಯಾಗಿದ್ದ ಸ್ಮಾರ್ಟ್‌ಸ್ಕೆಚ್‌ ಒಂದು ರೇಖಾಕೃತಿ ಅನ್ವಯಿಕೆಯಾಗಿದ್ದು, ಜೋನಾಥನ್‌ ಗೇ ಎಂಬಾತನಿಂದ ಅಭಿವೃದ್ಧಿಪಡಿಸಲ್ಪಟ್ಟ ಪೆನ್‌ಪಾಯಿಂಟ್‌ OSನ್ನು ಅಳವಡಿಸಿಕೊಂಡಿರುವ ಪೆನ್‌ ಕಂಪ್ಯೂಟರ್‌ಗಳಿಗೆ ಅದು ಸಂಬಂಧಿಸಿತ್ತು. ಜೋನಾಥನ್‌ ಗೇ ಕಾಲೇಜಿನಲ್ಲಿರುವಾಗ ಇದರ ಕುರಿತೇ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಮತ್ತು ಸದರಿ ಪರಿಕಲ್ಪನೆಯನ್ನು ಸಿಲಿಕಾನ್‌ ಬೀಚ್‌ ಸಾಫ್ಟ್‌ವೇರ್‌‌ ಮತ್ತು ಅದರ ತರುವಾಯದ ಕಂಪನಿಗಳಿಗಾಗಿ ವಿಸ್ತರಿಸಿದ.[][] ಮಾರುಕಟ್ಟೆ ಸ್ಥಳದಲ್ಲಿ ಪೆನ್‌ಪಾಯಿಂಟ್‌ ವಿಫಲಗೊಂಡಾಗ, ಮೈಕ್ರೋಸಾಫ್ಟ್‌ ವಿಂಡೋಸ್‌‌ ಮತ್ತು ಮ್ಯಾಕ್‌ OSಗೆ ಸ್ಮಾರ್ಟ್‌ಸ್ಕೆಚ್‌ನ್ನು ವರ್ಗಾಯಿಸಲಾಯಿತು. ಅಂತರಜಾಲವು ಹೆಚ್ಚು ಜನಪ್ರಿಯಗೊಳ್ಳಲು ಪ್ರಾರಂಭಿಸಿದ್ದರಿಂದ, ಫ್ಯೂಚರ್‌ಸ್ಪ್ಲ್ಯಾಶ್ ಎಂಬ ಹೆಸರಿನಿಂದ ಸ್ಮಾರ್ಟ್‌ಸ್ಕೆಚ್‌ ಮರು-ಬಿಡುಗಡೆಗೊಂಡಿತು. ಇದು ಮ್ಯಾಕ್ರೋಮೀಡಿಯಾ ಷಾಕ್‌ವೇವ್‌‌ಗೆ ಪೈಪೋಟಿಯಾಗಿ ನಿಂತ ಒಂದು ಸದಿಶ ಪ್ರಮಾಣ-ಆಧರಿತ ವೆಬ್‌ ಅನಿಮೇಷನ್‌ ಆಗಿತ್ತು. 1995ರಲ್ಲಿ, ಸ್ಮಾರ್ಟ್‌ಸ್ಕೆಚ್‌ನ ಒಂದೊಂದು ಚೌಕಟ್ಟಿನ ಅನಿಮೇಷನ್‌ ಲಕ್ಷಣಗಳನ್ನೂ ಮತ್ತಷ್ಟು ಮಾರ್ಪಡಿಸಲಾಯಿತು ಮತ್ತು ಬಹುವೇದಿಕೆಗಳ ಮೇಲಿನ ಫ್ಯೂಚರ್‌ಸ್ಪ್ಲ್ಯಾಶ್‌ ಅನಿಮೇಟರ್‌‌ ಆಗಿ ಅದು ಮರು-ಬಿಡುಗಡೆಗೊಂಡಿತು.[] ಈ ಉತ್ಪನ್ನವನ್ನು ಅಡೋಬ್‌ಗೆ ನೀಡಲಾಯಿತು ಮತ್ತು ಅಂತರಜಾಲದೊಂದಿಗಿನ (MSN) ತನ್ನ ಆರಂಭಿಕ ಕೆಲಸದಲ್ಲಿ ಮೈಕ್ರೋಸಾಫ್ಟ್‌ ಕಂಪನಿಯಿಂದ ಇದು ಬಳಸಲ್ಪಟ್ಟಿತು. 1996ರಲ್ಲಿ, ಫ್ಯೂಚರ್‌ಸ್ಪ್ಲ್ಯಾಶ್‌ನ್ನು ಮ್ಯಾಕ್ರೋಮೀಡಿಯಾ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು ಮತ್ತು "ಫ್ಯೂಚರ್‌‌" ಹಾಗೂ "ಸ್ಪ್ಲ್ಯಾಶ್‌" ಎಂಬ ಪದಗಳನ್ನು ಸಂಕುಚನಗೊಳಿಸಿ ಫ್ಲ್ಯಾಶ್‌‌‌ ಎಂಬ ಹೆಸರಿನಲ್ಲಿ ಅದನ್ನು ಬಿಡುಗಡೆ ಮಾಡಿತು.

ಇತ್ತೀಚಿನ ಬೆಳವಣಿಗೆಗಳು

[ಬದಲಾಯಿಸಿ]

ಅಡೋಬ್‌ ಲ್ಯಾಬ್ಸ್ (ಹಿಂದೆ ಮ್ಯಾಕ್ರೋಮೀಡಿಯಾ ಲ್ಯಾಬ್ಸ್‌‌ ಎಂದು ಕರೆಯಲ್ಪಡುತ್ತಿತ್ತು) ಎಂಬುದು, ಅಡೋಬ್‌ನಿಂದ ಅಸ್ತಿತ್ವಕ್ಕೆ ಬರುತ್ತಿರುವ ಉತ್ಪನ್ನಗಳು ಹಾಗೂ ತಂತ್ರಜ್ಞಾನಗಳ ಸುದ್ದಿ ಹಾಗೂ ಬಿಡುಗಡೆ-ಪೂರ್ವ ಆವೃತ್ತಿಗಳಿಗೆ ಸಂಬಂಧಿಸಿದ ಒಂದು ಮೂಲವಾಗಿದೆ. ಫ್ಲ್ಯಾಶ್‌‌‌ 9, ಫ್ಲೆಕ್ಸ್‌ 3, ಮತ್ತು ಆಕ್ಷನ್‌ ಸ್ಕ್ರಿಪ್ಟ್‌ 3.0ನಂಥ ಬಹುತೇಕ ಹೊಸ ಮಾರ್ಪಾಟುಗಳೆಲ್ಲವೂ ತಾಣದ ಮೇಲೆ ಚರ್ಚೆಗೆ ಒಳಗಾಗುತ್ತಾ ಬಂದಿವೆ ಮತ್ತು/ಅಥವಾ ಪರೀಕ್ಷಾ-ಪ್ರಕ್ರಿಯೆಗಳಿಗೆ ಒಳಗಾಗುತ್ತಾ ಬಂದಿವೆ. 2009ರ ಫೆಬ್ರುವರಿ ವೇಳೆಗೆ ಇದ್ದಂತೆ, ಸಮೃದ್ಧ ಅಂತರಜಾಲ ಅನ್ವಯಿಕೆಗಳ (RIAಗಳು) ನಿಯೋಜನೆಯ ಕ್ಷೇತ್ರದ ಮೇಲೆ ಅಡೋಬ್‌ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ. ಇದರ ಅಂತ್ಯದ ವೇಳೆಗೆ, ಅಡೋಬ್‌ ಇಂಟಿಗ್ರೇಟೆಡ್‌ ರನ್‌ಟೈಮ್‌ (AIR) ಎಂಬ ಒಂದು ಅಡ್ಡ-ವೇದಿಕೆ ರನ್‌ಟೈಮ್‌ ವಾತಾವರಣವನ್ನು ಕಂಪನಿಯು ಬಿಡುಗಡೆಮಾಡಿತು. ಒಂದು ಡೆಸ್ಕ್‌ಟಾಪ್‌ ಅನ್ವಯಿಕೆಯಾಗಿ ನಿಯೋಜಿಸಲ್ಪಡಬಹುದಾದ ಸಮೃದ್ಧ ಅಂತರಜಾಲ ಅನ್ವಯಿಕೆಗಳನ್ನು ಅಡೋಬ್‌ ಫ್ಲ್ಯಾಶ್‌ನ್ನು ಬಳಸಿಕೊಳ್ಳುವ ಮೂಲಕ ನಿರ್ಮಿಸಲು ಸದರಿ ಅಡೋಬ್‌ ಇಂಟಿಗ್ರೇಟೆಡ್‌ ರನ್‌ಟೈಮ್‌ನ್ನು ಬಳಸಿಕೊಳ್ಳಬಹುದು. ಇದು ಇತ್ತೀಚಿಗೆ ವಿಶ್ವಾದ್ಯಂತ 100 ದಶಲಕ್ಷ ಅಳವಡಿಕೆಗಳನ್ನು ದಾಟಿಕೊಂಡು ಹೋಯಿತು.[] ಇದಕ್ಕೆ ಮುಖ್ಯ ಕಾರಣವೇನೆಂದರೆ, ಆಕ್ರೋಬ್ಯಾಟ್‌ ರೀಡರ್‌‌ ಅಳವಡಿಸಲ್ಪಡುವಾಗ ಇದು ಸದ್ದಿಲ್ಲದೆ ಅಳವಡಿಸಲ್ಪಡುತ್ತದೆ. ಅನೇಕ ಬಳಕೆದಾರರು ತಮ್ಮ ಕಂಪ್ಯೂಟರ್‌‌ಗಳಲ್ಲಿ ಇದರ ಇರುವಿಕೆಯ ಕುರಿತು ಅರಿವನ್ನು ಹೊಂದಿಲ್ಲ.[ಸೂಕ್ತ ಉಲ್ಲೇಖನ ಬೇಕು] ಫ್ಲ್ಯಾಶ್‌ನ ಭವಿಷ್ಯದ ಬಿಡುಗಡೆಗಳಿಗೆ ಸಂಬಂಧಿಸಿದಂತೆ, ಬೃಹತ್‌-ಪ್ರಮಾಣದ ಅಳವಡಿಸುವಿಕೆಗಾಗಿ ವಿನ್ಯಾಸಗೊಳಿಸಲ್ಪಟ್ಟ ಎರಡು ಹೆಚ್ಚುವರಿ ಭಾಗಗಳು ಅಡೋಬ್‌ನಿಂದ ಪ್ರಸ್ತಾವಿಸಲ್ಪಟ್ಟಿವೆ: ಮೊದಲನೆಯದು, ಪ್ರಮುಖ ದೃಶ್ಯಭಾಗ ತುಣುಕು ಚಾಲಿಸಲ್ಪಡುವುದಕ್ಕೆ ಮುಂಚಿತವಾಗಿ ಸಂಪೂರ್ಣವಾಗಿ ಚಾಲಿಸಲ್ಪಡಬೇಕಾದ ಒಂದು ಜಾಹೀರಾತನ್ನು ಬಯಸುವ ಆಯ್ಕೆಯಾದರೆ; ಎರಡನೆಯದು, ಡಿಜಿಟಲ್‌ ಹಕ್ಕುಗಳ ವ್ಯವಸ್ಥಾಪನೆಯ (ಡಿಜಿಟಲ್‌ ರೈಟ್ಸ್‌‌ ಮ್ಯಾನೇಜ್‌ಮೆಂಟ್‌-DRM) ಸಾಮರ್ಥ್ಯಗಳ ಒಗ್ಗೂಡಿಸುವಿಕೆಯಾಗಿದೆ. ಈ ರೀತಿಯಲ್ಲಿ, ಹುರುಳಿನೊಂದಿಗೆ ಒಂದು ಜಾಹೀರಾತನ್ನು ಸಂಪರ್ಕಿಸುವ ಆಯ್ಕೆಯನ್ನು ಕಂಪನಿಗಳಿಗೆ ಅಡೋಬ್‌ ನೀಡಬಲ್ಲದು ಮತ್ತು ಎರಡೂ ಸಹ ಚಾಲಿಸಲ್ಪಡುತ್ತವೆ ಹಾಗೂ ಬದಲಾಗದೇ ಉಳಿದಿರುತ್ತವೆ ಎಂಬ ಬಗ್ಗೆ ಖಾತ್ರಿಯನ್ನು ಅದು ನೀಡುತ್ತದೆ.[] ಈ ಎರಡು ಯೋಜನೆಗಳ ಪ್ರಸಕ್ತ ಸ್ಥಿತಿಯು ಅಸ್ಪಷ್ಟವಾಗಿದೆ.Expression error: Unexpected < operator. ಸ್ಮಾರ್ಟ್‌ ಫೋನುಗಳಿಗೆ ಸಂಬಂಧಿಸಿದ ಫ್ಲ್ಯಾಶ್‌‌‌ ಪ್ಲೇಯರ್‌‌, 2009ರ ಅಂತ್ಯದ ವೇಳೆಗೆ ಹ್ಯಾಂಡ್‌ಸೆಟ್‌ ತಯಾರಕರಿಗೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.[]

ಓಪನ್‌ ಸ್ಕ್ರೀನ್‌ ಪ್ರಾಜೆಕ್ಟ್‌‌

[ಬದಲಾಯಿಸಿ]

2008ರ ಮೇ 1ರಂದು ಓಪನ್‌ ಸ್ಕ್ರೀನ್‌ ಪ್ರಾಜೆಕ್ಟ್‌‌‌ ನ್ನು ಅಡೋಬ್‌ ಘೋಷಿಸಿತು. ಪರ್ಸನಲ್‌ ಕಂಪ್ಯೂಟರ್‌‌‌‌ಗಳು, ಮೊಬೈಲ್‌ ಸಾಧನಗಳು ಮತ್ತು ಗ್ರಾಹಕ ಬಳಕೆಯ ವಿದ್ಯುನ್ಮಾನಗಳಂಥ ಸಾಧನಗಳಲ್ಲಿ ಒಂದು ಸುಸಂಗತ ಅನ್ವಯಿಕೆಯ ಇಂಟರ್‌ಫೇಸ್‌ನ್ನು ಒದಗಿಸುವ ಆಶಯವನ್ನು ಇದು ಹೊಂದಿದೆ.[] ಈ ಯೋಜನೆಯನ್ನು ಘೋಷಿಸಿದಾಗ ಹಲವಾರು ಗುರಿಗಳ ರೂಪರೇಖೆಯನ್ನು ರಚಿಸಲಾಯಿತು: ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌‌ ಮತ್ತು ಅಡೋಬ್‌ ಇಂಟಿಗ್ರೇಟೆಡ್‌ ರನ್‌ಟೈಮ್‌‌‌ಗೆ ಸಂಬಂಧಿಸಿದ ಪರವಾನಗಿ ಶುಲ್ಕಗಳ ರದ್ದತಿ, ಷಾಕ್‌ವೇವ್‌ ಫ್ಲ್ಯಾಶ್‌‌‌ (SWF) ಮತ್ತು ಫ್ಲ್ಯಾಶ್‌‌‌ ವಿಡಿಯೋ (FLV) ಕಡತ ಸ್ವರೂಪದ ಬಳಕೆಯ ಮೇಲಿನ ಕಟ್ಟುಪಾಡುಗಳ ತೆಗೆದುಹಾಕುವಿಕೆ, ಹೊಸ ಸಾಧನಗಳಿಗೆ ಫ್ಲ್ಯಾಶ್‌‌‌ನ್ನು ವರ್ಗಾಯಿಸುವುದಕ್ಕೆ ಸಂಬಂಧಿಸಿದಂತೆ ಅನ್ವಯಿಕೆಯ ಕಾರ್ಯಸೂಚಿಸುವ ಇಂಟರ್‌ಫೇಸ್‌ಗಳ ಪ್ರಕಟಿಸುವಿಕೆ ಮತ್ತು ದೂರದ ದತ್ತಾಂಶ ಸಂಗ್ರಹಗಳಿಂದ ಮಾಹಿತಿಯನ್ನು ಸ್ವೀಕರಿಸುವಲ್ಲಿ ಫ್ಲ್ಯಾಶ್‌‌‌ ಅನ್ವಯಿಕೆಗಳಿಗೆ ಅನುವುಮಾಡಿಕೊಟ್ಟ ಫ್ಲ್ಯಾಶ್‌‌‌ ಕ್ಯಾಸ್ಟ್‌‌ ವಿಧ್ಯುಕ್ತ ನಿರೂಪಣೆ ಮತ್ತು ಆಕ್ಷನ್‌ ಮೆಸೇಜ್‌ ಫಾರ್ಮ್ಯಾಟ್‌ (AMF) ಇವುಗಳ ಪ್ರಕಟಿಸುವಿಕೆ.[] 2009ರ ಫೆಬ್ರುವರಿಯ ವೇಳೆಗೆ ಇದ್ದಂತೆ, SWF ಮತ್ತು FLV/F4V ವಿವರಣೆಗಳ ಬಳಕೆಯ ಮೇಲಿನ ಕಟ್ಟುಪಾಡುಗಳನ್ನು ತೆಗೆದುಹಾಕುವ ನಿರ್ದಿಷ್ಟ ವಿವರಣೆಗಳು ಪ್ರಕಟಿಸಲ್ಪಟ್ಟಿವೆ.[] ಮೊಬೈಲ್‌ ಕಂಟೆಂಟ್‌ ಡೆಲಿವರಿ ಪ್ರೋಟೋಕಾಲ್ ಎಂದು ಈಗ ಹೆಸರಾಗಿರುವ ಫ್ಲ್ಯಾಶ್‌‌‌ ಕ್ಯಾಸ್ಟ್‌‌ ವಿಧ್ಯುಕ್ತ ನಿರೂಪಣೆ ಮತ್ತು AMF ವಿಧ್ಯುಕ್ತ ನಿರೂಪಣೆಗಳನ್ನು ಕೂಡಾ ದೊರೆಯುವಂತೆ[] ಮಾಡಲಾಗಿದ್ದು, ಬ್ಲೇಝ್‌DS ಎಂದು ಕರೆಯಲಾಗುವ ಒಂದು ಮುಕ್ತ ಮೂಲದ ಅಳವಡಿಸುವಿಕೆಯಾಗಿ AMF ಲಭ್ಯವಿದೆ. ಪದರಗಳನ್ನು ವರ್ಗಾಯಿಸುವ ಸಾಧನದ ಕುರಿತಾದ ಕೆಲಸವು ಆರಂಭಿಕ ಹಂತಗಳಲ್ಲಿದೆ. ಓಪನ್‌ ಸ್ಕ್ರೀನ್‌ ಪ್ರಾಜೆಕ್ಟ್‌‌ಗೆ ಸಂಬಂಧಿಸಿದಂತೆ ತಮ್ಮ ಬಿಡುಗಡೆಯ ಹಂತದಲ್ಲಿನ ಸಾಧನಗಳಿಗಾಗಿರುವ ಫ್ಲ್ಯಾಶ್‌‌‌ ಪ್ಲೇಯರ್‌‌ ಮತ್ತು ಅಡೋಬ್‌ AIRಗೆ ಮೀಸಲಾದ ಪರವಾನಗಿ ಶುಲ್ಕಗಳನ್ನು ತೆಗೆದುಹಾಕಲು ಅಡೋಬ್‌ ಆಶಿಸುತ್ತದೆ. ಸದರಿ ಯೋಜನೆಗೆ ಕೈಜೋಡಿಸಿರುವ ಮೊಬೈಲ್‌ ಸಾಧನ ಒದಗಿಸುವವರ ಪಟ್ಟಿಯಲ್ಲಿ ಪಾಮ್‌, ಮೋಟೋರೋಲಾ ಮತ್ತು ನೋಕಿಯಾ[] ಕಂಪನಿಗಳು ಸೇರಿದ್ದು, ಇವು ಅಡೋಬ್‌ನ ಜೊತೆಗೆ ಒಟ್ಟಾಗಿ 10 ದಶಲಕ್ಷ $ನಷ್ಟು ಮೊತ್ತದ ಓಪನ್‌ ಸ್ಕ್ರೀನ್‌ ಪ್ರಾಜೆಕ್ಟ್‌ ನಿಧಿಯೊಂದನ್ನು ಘೋಷಿಸಿವೆ.[೧೦]

ಸ್ವರೂಪ

[ಬದಲಾಯಿಸಿ]

ಸಾಂಪ್ರದಾಯಿಕವಾಗಿ "S hockW ave F‌‌‌ lash" ಚಲನಚಿತ್ರಗಳು, "ಫ್ಲ್ಯಾಶ್‌‌‌ ಚಲನಚಿತ್ರಗಳು" ಅಥವಾ "ಫ್ಲ್ಯಾಶ್‌‌‌ ಆಟಗಳು" ಎಂದು ಕರೆಯಲ್ಪಡುವ ಫ್ಲ್ಯಾಶ್‌‌‌ ಕಡತಗಳು SWF ಸ್ವರೂಪದಲ್ಲಿದ್ದು, ಸಾಮಾನ್ಯವಾಗಿ ಒಂದು .swf ಕಡತ ವಿಸ್ತರಣೆಯನ್ನು ಅವು ಹೊಂದಿರುತ್ತವೆ, ಮತ್ತು ಒಂದು ಸ್ವತಂತ್ರವಾದ ಫ್ಲ್ಯಾಶ್‌‌‌ ಪ್ಲೇಯರ್‌ನಲ್ಲಿ ಕಟ್ಟುನಿಟ್ಟಾಗಿ "ಚಾಲಿಸಲಾದ" ಒಂದು ವೆಬ್‌-ಪುಟದ ಪ್ಲಗ್‌-ಇನ್‌ನ ಸ್ವರೂಪದಲ್ಲಿ ಅವನ್ನು ಬಳಸಬಹುದಾಗಿದೆ, ಅಥವಾ ಒಂದು ಸ್ವಯಂ-ನಿರ್ವಾಹಕ ಪ್ರಕ್ಷೇಪಕ ಚಲನಚಿತ್ರದೊಳಗೆ (ಮೈಕ್ರೋಸಾಫ್ಟ್‌ ವಿಂಡೋಸ್‌‌‌ನಲ್ಲಿನ ಒಂದು .exe ವಿಸ್ತರಣೆಯೊಂದಿಗೆ) ಅವನ್ನು ಸಂಯೋಜಿಸಬಹುದಾಗಿದೆ. ಫ್ಲ್ಯಾಶ್‌‌‌ ವಿಡಿಯೋ ಕಡತಗಳು[spec ೧] ಒಂದು .flv ಕಡತ ವಿಸ್ತರಣೆಯನ್ನು ಹೊಂದಿರುತ್ತವೆ ಮತ್ತು ಅವುಗಳನ್ನು .swf ಕಡತಗಳೊಳಗಿಂದ ಬಳಸಲಾಗುತ್ತದೆ ಅಥವಾ VLC, ಅಥವಾ ಕ್ವಿಕ್‌ಟೈಮ್‌ ಮತ್ತು ಬಾಹ್ಯ ಕೋಡೆಕ್‌ಗಳನ್ನು ಸೇರಿಸಲ್ಪಟ್ಟಿರುವ ವಿಂಡೋಸ್‌‌ ಮೀಡಿಯಾ ಪ್ಲೇಯರ್‌‌‌ನಂಥ ಒಂದು flv-ಗುರುತಿಸುವ ಪ್ಲೇಯರ್ ಮೂಲಕ ಚಾಲಿಸಲಾಗುತ್ತದೆ. ಕಾರ್ಯಸೂಚಿ ಸಂಕೇತದೊಂದಿಗೆ ಸಂಯೋಜಿಸಲ್ಪಟ್ಟ ಸದಿಶ ಪ್ರಮಾಣದ ರೇಖಾಚಿತ್ರಗಳ ಬಳಕೆಯು, ಸಂಬಂಧಿಸಿದ ಬಿಟ್‌ನಕಾಶೆಗಳು ಅಥವಾ ದೃಶ್ಯಭಾಗದ ತುಣುಕುಗಳಿಗಿಂತ ಫ್ಲ್ಯಾಶ್‌‌‌ ಕಡತಗಳು ಸಣ್ಣ ಗಾತ್ರದಲ್ಲಿರುವಂತಾಗಲು ಅನುವುಮಾಡಿಕೊಡುತ್ತವೆ- ಮತ್ತು ತನ್ಮೂಲಕ ಕಡಿಮೆ ಆವರ್ತನ ಶ್ರೇಣಿಯನ್ನು ಬಳಸಲು ಹರಿವುಗಳಿಗೆ ಅವಕಾಶ ಕಲ್ಪಿಸುತ್ತವೆ. ಒಂದು ಏಕ ಸ್ವರೂಪದಲ್ಲಿನ (ಅಂದರೆ ಕೇವಲ ಪಠ್ಯ, ದೃಶ್ಯಭಾಗ, ಅಥವಾ ಶ್ರವ್ಯಾಂಶದಂಥವು) ಹುರುಳಿಗೆ ಸಂಬಂಧಿಸಿದಂತೆ, ಇತರ ಪರ್ಯಾಯಗಳು ಉತ್ತಮ ಕಾರ್ಯನಿರ್ವಹಣೆಯನ್ನು ಒದಗಿಸಬಹುದು ಮತ್ತು ಸಂಬಂಧಿಸಿದ ಫ್ಲ್ಯಾಶ್‌‌‌ ಚಲನಚಿತ್ರಕ್ಕಿಂತ ಕಡಿಮೆ ಪ್ರಮಾಣದಲ್ಲಿ CPUನ ಶಕ್ತಿಯನ್ನು ಬಳಸಿಕೊಳ್ಳಬಹುದು; ಉದಾಹರಣೆಗೆ ಪಾರದರ್ಶಕತೆಯನ್ನು ಬಳಸಿಕೊಳ್ಳುವಾಗ ಅಥವಾ ಛಾಯಾಚಿತ್ರಗ್ರಹಣದ ಅಥವಾ ಪಠ್ಯದ ಮಂಕಾಗುವಿಕೆಗಳಂಥ ಬೃಹತ್‌‌ ತೆರೆ ಪರಿಷ್ಕರಣೆಗಳನ್ನು ಮಾಡುವಾಗ ಇದು ಅರಿವಿಗೆ ಬರುತ್ತದೆ. ಒಂದು ಸದಿಶ ಪ್ರಮಾಣವನ್ನು-ಮೂಡಿಸುವ ಎಂಜಿನ್‌ಗೆ ಜೊತೆಯಾಗಿ ಒಂದು ವಾಸ್ತವಾಭಾಸದ ಯಂತ್ರವನ್ನೂ ಫ್ಲ್ಯಾಶ್‌‌‌ ಪ್ಲೇಯರ್‌‌ ಒಳಗೊಂಡಿದ್ದು ಇದಕ್ಕೆ ಆಕ್ಷನ್‌ ಸ್ಕ್ರಿಪ್ಟ್‌ ವರ್ಚುಯಲ್‌ ಮೆಷೀನ್‌ (AVM) ಎಂದು ಕರೆಯಲಾಗುತ್ತದೆ. ರನ್‌-ಟೈಮ್‌ನಲ್ಲಿನ ಲಿಪಿಗಾರಿಕೆಯ ಪಾರಸ್ಪರಿಕ ಪಟುತ್ವಕ್ಕೆ ಸಂಬಂಧಿಸಿದಂತೆ, ದೃಶ್ಯಭಾಗ, MP3-ಆಧರಿತ ಶ್ರವ್ಯಾಂಶ, ಮತ್ತು ಬಿಟ್‌ನಕಾಶೆ ರೇಖಾಚಿತ್ರಗಳಿಗೆ ಬೆಂಬಲವನ್ನು ನೀಡಲು ಇದು ಬಳಕೆಯಾಗುತ್ತದೆ. ಫ್ಲ್ಯಾಶ್‌‌‌ ಪ್ಲೇಯರ್‌‌ 8ಕ್ಕೆ ಸಂಬಂಧಿಸಿ ಹೇಳುವುದಾದರೆ, ಇದು ಎರಡು ದೃಶ್ಯಭಾಗದ ಕೋಡೆಕ್‌ಗಳನ್ನು ನೀಡುತ್ತದೆ. ಅವೆಂದರೆ: ಆನ್‌‌2 ತಂತ್ರಜ್ಞಾನಗಳು VP6 ಹಾಗೂ ಸೋರೆನ್‌ಸನ್‌ ಸ್ಪಾರ್ಕ್‌, ಮತ್ತು JPEG, ಪ್ರಗತಿಶೀಲ JPEG, PNG, ಹಾಗೂ GIFಗೆ ಸಂಬಂಧಿಸಿದ ರನ್‌-ಟೈಮ್‌ ಬೆಂಬಲ. ಮುಂದಿನ ಆವೃತ್ತಿಯಲ್ಲಿ, ಆಕ್ಷನ್‌ ಸ್ಕ್ರಿಪ್ಟ್‌ ಎಂಜಿನ್‌ಗೆ ಸಂಬಂಧಿಸಿದಂತೆ ಒಂದು ಚುರುಕಾದ-ಕಾರ್ಯಕ್ಷಮತೆಯ ಪರಿವರ್ತಕವನ್ನು ಬಳಸಲು ಫ್ಲ್ಯಾಶ್‌‌‌ ಏರ್ಪಾಡು ಮಾಡಿಕೊಂಡಿದೆ. ಫ್ಲ್ಯಾಶ್‌‌‌ ಪ್ಲೇಯರ್‌‌ ಒಂದು ಬ್ರೌಸರ್‌‌ ಪ್ಲಗ್‌ಇನ್‌ ಆಗಿದ್ದು, ಔಟ್‌ಲುಕ್‌‌ನಂಥ ಒಂದು ವಾಡಿಕೆಯ ಇ-ಮೇಲ್‌ ಗ್ರಾಹಕನೊಳಗೆ ಅದು ಓಡಲಾರದು. ಅದರ ಬದಲಿಗೆ, ಒಂದು ಬ್ರೌಸರ್‌‌ ವಿಂಡೋವನ್ನು ಒಂದು ಕೊಂಡಿಯು ತೆರೆಯಬೇಕಾಗುತ್ತದೆ. ಇ-ಮೇಲ್‌ಗಳಲ್ಲಿ ಕೊಂಡಿಯ ಸ್ವರೂಪದಲ್ಲಿ ಬಂದಿರುವ ಯೂಟ್ಯೂಬ್‌ ದೃಶ್ಯಭಾಗಗಳನ್ನು ಮರುಚಾಲಿಸಲು Gಮೇಲ್‌ ಲ್ಯಾಬ್ಸ್‌ನ ಒಂದು ಲಕ್ಷಣವು ಅವಕಾಶ ಮಾಡಿಕೊಡುತ್ತದೆ.

ಫ್ಲಾಶ್ ದೃಶ್ಯಭಾಗ

[ಬದಲಾಯಿಸಿ]

HTML5ನ ಉದಯವಾಗುವವರೆಗೂ, ದೃಶ್ಯಭಾಗವನ್ನು ಪ್ರದರ್ಶಿಸಲು ಬ್ರೌಸರ್‌ಗಳನ್ನು ಪಡೆಯುವುದೇ ವೇದಿಕೆಯ ಒಂದು ನಿರ್ದಿಷ್ಟವಾದ ಸಮಸ್ಯೆಯಾಗಿತ್ತು. ದೃಶ್ಯಭಾಗ ಹಾಗೂ ಒಂದು ಸಾಮಾನ್ಯ ದೃಶ್ಯಭಾಗ ಸ್ವರೂಪಕ್ಕೆ ಸಂಬಂಧಿಸಿದ ಒಂದು ವೆಬ್‌ ಮಾನದಂಡದ ಕೊರತೆಯೇ ಇದಕ್ಕೆ ಕಾರಣವಾಗಿತ್ತು. ದೃಶ್ಯಭಾಗವನ್ನು ಅಳವಡಿಸಲು ಫ್ಲ್ಯಾಶ್‌‌‌ನ್ನು ಬಳಸುವ ಪರಿಪಾಠವು, ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌‌ನ ಒಂದು ವ್ಯಾಪಕ ವಿತರಣೆಗೆ ಕಾರಣವಾಯಿತು. ಏಕೆಂದರೆ ಎಲ್ಲಾ ವೇದಿಕೆಗಳಾದ್ಯಂತ ಇದನ್ನು ಬಳಕೆದಾರರಿಗೆ ಉಚಿತವಾಗಿ ನೀಡಲಾಗಿತ್ತು (ನೋಡಿ: ಅಳವಡಿಸಿಕೊಂಡ ಬಳಕೆದಾರರ ನೆಲೆ), ಆದಾಗ್ಯೂ ಈ ತಂತ್ರಜ್ಞಾನವು ಆಪಲ್‌ ವೇದಿಕೆಗಳ ಮೇಲೆ ಸೂಕ್ತವಾಗಿ ಹೊಂದಿಕೊಳ್ಳುವುದಿಲ್ಲ ಎಂಬ ಕಾರಣಕ್ಕಾಗಿ ಆಪಲ್‌ನಿಂದ ಇದು ಇತ್ತೀಚಿಗೆ ಟೀಕೆಗೊಳಗಾಗಿದೆ (ನೋಡಿ: ಟೀಕೆ). ದೃಶ್ಯಭಾಗಕ್ಕೆ ಸಂಬಂಧಿಸಿದ ಒಂದು ವೆಬ್‌ ಮಾನದಂಡವು HTML5ಗಾಗಿ ಅಭಿವೃದ್ಧಿಯ ಹಂತದಲ್ಲಿದೆ, ನೋಡಿ: HTML5 ದೃಶ್ಯಭಾಗ.

ಫ್ಲ್ಯಾಶ್‌‌‌ ಶ್ರವ್ಯಾಂಶ

[ಬದಲಾಯಿಸಿ]

ಫ್ಲ್ಯಾಶ್‌‌‌ ಶ್ರವ್ಯಾಂಶವು ಬಹು ಸಾಮಾನ್ಯವಾಗಿ MP3 ಅಥವಾ AACಯಲ್ಲಿ (ಅಡ್ವಾನ್ಸ್‌ಡ್‌ ಆಡಿಯೋ ಕೋಡಿಂಗ್‌‌) ಸಂಕೇತಭಾಷೆಯಲ್ಲಿ ಇಡಲ್ಪಟ್ಟಿರುತ್ತದೆ; ಆದಾಗ್ಯೂ ಇದು ADPCM, ನೆಲ್ಲಿಮೋಸರ್‌ (ನೆಲ್ಲಿಮೋಸರ್‌ ಅಸಾವೊ ಕೋಡೆಕ್‌) ಮತ್ತು ಸ್ಪೀಕ್ಸ್‌‌ ಶ್ರವ್ಯಾಂಶ ಕೋಡೆಕ್‌ಗಳನ್ನೂ ಬೆಂಬಲಿಸುತ್ತದೆ. 11,22,44.1 kHzನಷ್ಟಿರುವ ಮಾದರಿ ದರ್ಜೆಗಳಿಗೆ ಫ್ಲ್ಯಾಶ್‌ ಅವಕಾಶ ನೀಡುತ್ತದೆ. ಶಿಷ್ಟ Tv, DVD ಮಾದರಿ ದರ್ಜೆಯಾಗಿರುವ 48 kHz ಶ್ರವ್ಯಾಂಶ ಮಾದರಿ ದರ್ಜೆಯನ್ನು ಇದು ಬೆಂಬಲಿಸುವುದಿಲ್ಲ. ಫ್ಲ್ಯಾಶ್‌‌‌ ಪ್ಲೇಯರ್‌‌ 9ರ ಪರಿಷ್ಕೃತ ಆವೃತ್ತಿ 3ರ ನೆರವಿನೊಂದಿಗೆ MPEG-4 ಅಂತರರಾಷ್ಟ್ರೀಯ ಮಾನದಂಡಗಳ ಕೆಲವೊಂದು ಭಾಗಗಳನ್ನೂ ಸಹ ಫ್ಲ್ಯಾಶ್‌‌‌ ವಿಡಿಯೋ ಬೆಂಬಲಿಸಲಿದೆ ಎಂದು ಅಡೋಬ್‌ 2007ರ ಆಗಸ್ಟ್‌‌ 20ರಂದು ತನ್ನ ಬ್ಲಾಗ್‌ನಲ್ಲಿ ಘೋಷಿಸಿತು.[೧೧] ನಿರ್ದಿಷ್ಟವಾಗಿ ಹೇಳುವುದಾದರೆ, H.264ನಲ್ಲಿ (MPEG-4 ಭಾಗ 10) ಸಂಕ್ಷೇಪಿಸಲ್ಪಟ್ಟ ದೃಶ್ಯಭಾಗವನ್ನು, AAC (MPEG-4 ಭಾಗ 3), F4V, MP4 (MPEG-4 ಭಾಗ 14), M4V, M4A, 3GP ಮತ್ತು MOV ಮಲ್ಟಿಮೀಡಿಯಾ ಧಾರಕ ಸ್ವರೂಪಗಳು, 3GPP ಟೈಮ್ಡ್‌‌ ಟೆಕ್ಸ್ಟ್‌ ನಿರ್ದಿಷ್ಟ ವಿವರಣೆ (MPEG-4 ಭಾಗ 17) ಇವೇ ಮೊದಲಾದವುಗಳನ್ನು ಬಳಸಿಕೊಂಡು ಸಂಕ್ಷೇಪಿಸಲ್ಪಟ್ಟ ಶ್ರವ್ಯಾಂಶವನ್ನು ಫ್ಲ್ಯಾಶ್‌‌‌ ಪ್ಲೇಯರ್‌ ಬೆಂಬಲಿಸುತ್ತದೆ. 3GPP ಟೈಮ್ಡ್‌‌ ಟೆಕ್ಸ್ಟ್‌ ನಿರ್ದಿಷ್ಟ ವಿವರಣೆಯು (MPEG-4 ಭಾಗ 17) ಒಂದು ಪ್ರಮಾಣಕವಾಗಿಸಿದ ಉಪಶೀರ್ಷಿಕೆ ಸ್ವರೂಪವಾಗಿದೆ ಮತ್ತು 'ilst' ಆಟಂಗೆ ಸಂಬಂಧಿಸಿದಂತಿರುವ ಆಂಶಿಕವಾಗಿ ವಿವರಿಸಿ ತಿಳಿಸುವ ಬೆಂಬಲವಾಗಿದೆ. 'ilst' ಆಟಂ ಎಂಬುದು ID3 ಸಮಾನವಾಗಿದ್ದು, ಉಪದತ್ತಾಂಶವನ್ನು ಶೇಖರಿಸಲು ಐಟ್ಯೂನ್ಸ್‌ ಇದನ್ನು ಬಳಸುತ್ತದೆ. MPEG-4 ಭಾಗ 2 ಮತ್ತು H.263ಗಳಿಗೆ F4V ಕಡತ ಸ್ವರೂಪದಲ್ಲಿ ಬೆಂಬಲವು ದೊರೆಯುವುದಿಲ್ಲ. FLV ಸ್ವರೂಪದಿಂದ ಶಿಷ್ಟ ISO ಆಧಾರದ ಮೀಡಿಯಾ ಕಡತ ಸ್ವರೂಪದೆಡೆಗೆ (MPEG-4 ಭಾಗ 12) ತಾನು ಕ್ರಮೇಣವಾಗಿ ಮಾರ್ಗ ಬದಲಿಸುತ್ತಿರುವುದಾಗಿಯೂ ಸಹ ಅಡೋಬ್‌ ಘೋಷಿಸಿದೆ. H.264ಯ ಪ್ರವಹಿಸುವಿಕೆಯನ್ನು ಮಾಡುವಾಗ FLV ರಚನಾ-ಸ್ವರೂಪದೊಂದಿಗಿನ ಕಾರ್ಯಚಟುವಟಿಕೆಯ ಮಿತಿಗಳೇ ಇದಕ್ಕೆ ಕಾರಣ ಎಂದು ಅದು ತಿಳಿಸಿದೆ. MPEG-4 ಮಾನದಂಡಗಳ ಕೆಲವು ಭಾಗಗಳನ್ನು ಬೆಂಬಲಿಸುವ ಫ್ಲ್ಯಾಶ್‌‌‌ ಪ್ಲೇಯರ್‌‌ನ ಅಂತಿಮ ಬಿಡುಗಡೆಯು 2007ರ ಶರತ್ಕಾಲದಲ್ಲಿ ಲಭ್ಯವಾಗಲಿದೆ.[೧೨]

ನಿರ್ಮಿಸುವಿಕೆಯ ಸಲಕರಣೆಗಳು

[ಬದಲಾಯಿಸಿ]
Adobe Flash Professional
Adobe Flash CS5 Icon
Adobe Flash CS5 Professional
Adobe Flash CS5 Professional (11.0.0.485) under Windows 7.
ಅಭಿವೃದ್ಧಿಪಡಿಸಿದವರುAdobe Systems (formerly by Macromedia)
ಕ್ರಮವಿಧಿಯ ಭಾಷೆC++
ಕಾರ್ಯಾಚರಣಾ ವ್ಯವಸ್ಥೆMicrosoft Windows and Mac OS X
ವಿಧMultimedia
ಪರವಾನಗಿProprietary EULA
ಅಧೀಕೃತ ಜಾಲತಾಣAdobe Flash Professional Homepage

ಅಡೋಬ್‌ ಫ್ಲ್ಯಾಶ್‌ ಪ್ರೊಫೆಷನಲ್‌ ಎಂಬ ಮಲ್ಟಿಮೀಡಿಯಾ ನಿರ್ಮಿಸುವಿಕೆಯ ಕಾರ್ಯಸೂಚಿಯನ್ನು ವೆಬ್‌ ಅನ್ವಯಿಕೆಗಳು, ಆಟಗಳು ಮತ್ತು ಚಲನಚಿತ್ರಗಳಂಥ ಅಡೋಬ್‌ ಎಂಗೇಜ್‌ಮೆಂಟ್‌ ಪ್ಲಾಟ್‌ಫಾರ್ಮ್‌ಗೆ, ಮತ್ತು ಮೊಬೈಲ್‌ ಫೋನುಗಳು ಹಾಗೂ ಇತರ ಅಳವಡಿಸಲ್ಪಟ್ಟ ಸಾಧನಗಳಿಗೆ ಸಂಬಂಧಿಸಿದ ಹುರುಳನ್ನು ಸೃಷ್ಟಿಸಲು ಬಳಸಲಾಗುತ್ತದೆ.

ಇತಿಹಾಸ

[ಬದಲಾಯಿಸಿ]
ಬಿಡುಗಡೆ ವರ್ಷ ವಿವರಣೆ
ಫ್ಯೂಚರ್‌ಸ್ಪ್ಲ್ಯಾಶ್‌ ಅನಿಮೇಟರ್‌‌ 1996 ಮೂಲಭೂತ ಪರಿಷ್ಕರಣಾ ಸಲಕರಣೆಗಳು ಮತ್ತು ಒಂದು ಕಾಲಯೋಜನೆಯೊಂದಿಗಿನ ಫ್ಲ್ಯಾಶ್‌‌‌ನ ಆರಂಭಿಕ ಆವೃತ್ತಿ
ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ 1 1996 ಫ್ಯೂಚರ್‌ಸ್ಪ್ಲ್ಯಾಶ್‌ ಅನಿಮೇಟರ್‌‌ನ ಒಂದು ಮರು-ಬ್ರಾಂಡ್‌ ಮಾಡಲಾದ ಮ್ಯಾಕ್ರೋಮೀಡಿಯಾ ಆವೃತ್ತಿ
ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ 2 1997 ಫ್ಲ್ಯಾಶ್‌‌‌ ಪ್ಲೇಯರ್‌‌ 2ರೊಂದಿಗೆ ಬಿಡುಗಡೆ ಮಾಡಲಾಯಿತು; ಸೇರ್ಪಡೆಗೊಂಡ ಹೊಸ ಲಕ್ಷಣಗಳು: ವಸ್ತು ಸಂಗ್ರಹಣೆ
ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ 3 1998 ಫ್ಲ್ಯಾಶ್‌‌‌ ಪ್ಲೇಯರ್‌‌ 3ರೊಂದಿಗೆ ಬಿಡುಗಡೆ ಮಾಡಲಾಯಿತು; ಸೇರ್ಪಡೆಗೊಂಡ ಹೊಸ ಲಕ್ಷಣಗಳು: ಚಲನಚಿತ್ರದ ತುಣುಕಿನ ಅಂಶ, ಜಾವಾಸ್ಕ್ರಿಪ್ಟ್‌ ಪ್ಲಗ್‌-ಇನ್‌ ಒಗ್ಗೂಡಿಸುವಿಕೆ, ಪಾರದರ್ಶಕತೆ ಮತ್ತು ಒಂದು ಬಾಹ್ಯ ಸ್ವತಂತ್ರವಾದ ಪ್ಲೇಯರ್‌‌
ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ 4 1999 ಫ್ಲ್ಯಾಶ್‌‌‌ ಪ್ಲೇಯರ್‌‌ 4ರೊಂದಿಗೆ ಬಿಡುಗಡೆ ಮಾಡಲ್ಪಟ್ಟಿತು; ಸೇರ್ಪಡೆಗೊಂಡ ಹೊಸ ಲಕ್ಷಣಗಳು: ಆಂತರಿಕ ಚಲ ಪರಿಮಾಣಗಳು, ಒಂದು ಪ್ರದಾನ ಕ್ಷೇತ್ರ, ಮುಂದುವರಿದ ಆಕ್ಷನ್‌ ಸ್ಕ್ರಿಪ್ಟ್‌, ಹಾಗೂ ಪ್ರವಹಿಸುವ MP3
ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ 5 2000 ಫ್ಲ್ಯಾಶ್‌‌‌ ಪ್ಲೇಯರ್‌‌ 5ರೊಂದಿಗೆ ಬಿಡುಗಡೆ ಮಾಡಲ್ಪಟ್ಟಿತು; ಸೇರ್ಪಡೆಗೊಂಡ ಹೊಸ ಲಕ್ಷಣಗಳು: ಆಕ್ಷನ್‌ ಸ್ಕ್ರಿಪ್ಟ್‌ 1.0 (ಇದು ECMAಸ್ಕ್ರಿಪ್ಟ್‌‌ ಮೇಲೆ ಆಧರಿಸಲ್ಪಟ್ಟಿರುವುದರಿಂದ, ವಾಕ್ಯರಚನೆಯಲ್ಲಿ ಜಾವಾಸ್ಕ್ರಿಪ್ಟ್‌ನ್ನು ಅತ್ಯಂತ ಹೋಲುವಂತಿರುತ್ತದೆ), XML ಬೆಂಬಲ, ಸ್ಮಾರ್ಟ್‌ಕ್ಲಿಪ್‌ಗಳು (ಫ್ಲ್ಯಾಶ್‌‌‌ನಲ್ಲಿನ ಭಾಗಗಳಿಗೆ ಪೂರ್ವವರ್ತಿಯಾಗಿರುವುದು), ಚಲನಶೀಲ ಪಠ್ಯಕ್ಕಾಗಿ ಸೇರ್ಪಡೆ ಮಾಡಲಾದ HTML ಪಠ್ಯ ಫಾರ್ಮ್ಯಾಟ್‌ ಮಾಡುವಿಕೆ
ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ MX 2002 ಫ್ಲ್ಯಾಶ್‌‌‌ ಪ್ಲೇಯರ್‌‌ 6ರೊಂದಿಗೆ ಬಿಡುಗಡೆ ಮಾಡಲ್ಪಟ್ಟಿತು; ಸೇರ್ಪಡೆಗೊಂಡ ಹೊಸ ಲಕ್ಷಣಗಳು: ಒಂದು ದೃಶ್ಯಭಾಗದ ಕೋಡೆಕ್‌ (ಸೋರೆನ್‌ಸನ್‌ ಸ್ಪಾರ್ಕ್‌), ಯೂನಿಕೋಡ್‌, v1 UI ಭಾಗಗಳು, ಸಂಪೀಡನ, ಆಕ್ಷನ್‌ ಸ್ಕ್ರಿಪ್ಟ್‌ ಸದಿಶ ಪ್ರಮಾಣ ರೇಖಾಕೃತಿ API
ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ MX 2004 2003 ಫ್ಲ್ಯಾಶ್‌‌‌ ಪ್ಲೇಯರ್‌‌ 7ರೊಂದಿಗೆ ಬಿಡುಗಡೆ ಮಾಡಲ್ಪಟ್ಟಿತು; ಸೇರ್ಪಡೆಗೊಂಡ ಹೊಸ ಲಕ್ಷಣಗಳು: ಆಕ್ಷನ್‌ ಸ್ಕ್ರಿಪ್ಟ್‌ 2.0 (ಇದು ಫ್ಲ್ಯಾಶ್‌‌‌ಗೆ ಸಂಬಂಧಿಸಿದ ಒಂದು ವಸ್ತು-ಉದ್ದೇಶಿತ ಕಾರ್ಯಸೂಚಿ ರಚಿಸುವಿಕೆಯ ಮಾದರಿಯನ್ನು ಶಕ್ತಗೊಳಿಸಿತಾದರೂ, ಇತರ ಆವೃತ್ತಿಗಳ ಲಿಪಿಗೆ ನೆರವಾಗುವ ಕಾರ್ಯಚಟುವಟಿಕೆಯನ್ನು ಹೊಂದಿರಲಿಲ್ಲ; ಹೀಗಾಗಿ ಆಕ್ಷನ್‌ಸ್ಕ್ರಿಪ್ಟ್‌ನ್ನು ಕೇವಲ ಕೈನಿಂದಲೇ ಅಚ್ಚಿಸಬೇಕು ಎಂಬುದು ಇದರರ್ಥವಾಗಿತ್ತು), ವರ್ತನೆಗಳು, ವಿಸ್ತರಣೀಯತೆಯ ಪದರ (JSAPI), ಉಪನಾಮದ ಪಠ್ಯ ಬೆಂಬಲ, ಕಾಲಯೋಜನೆ ಪರಿಣಾಮಗಳು. ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ MX ಪ್ರೊಫೆಷನಲ್‌ 2004 ಆವೃತ್ತಿಯು ಫ್ಲ್ಯಾಶ್‌‌‌ MX 2004ರ ಆವೃತ್ತಿಯ ಎಲ್ಲಾ ಲಕ್ಷಣಗಳನ್ನೂ ಒಳಗೊಂಡಿತ್ತು ಹಾಗೂ ಜೊತೆಗೆ ಈ ಅಂಶಗಳನ್ನೂ ಒಳಗೊಂಡಿತ್ತು: ತೆರೆಗಳು (ಪವರ್‌‌ ಪಾಯಿಂಟ್‌‌‌‌ನಂಥ ಒಂದು ರೇಖೀಯ ಸ್ಲೈಡು ಸ್ವರೂಪದಲ್ಲಿ ಹುರುಳನ್ನು ಸಂಘಟಿಸುವುದಕ್ಕಾಗಿರುವ ರೇಖೀಯವಲ್ಲದ ಸ್ಥಿತಿ-ಆಧರಿತ ಅಭಿವರ್ಧನೆ ಹಾಗೂ ಸ್ಲೈಡುಗಳಿಗೆ ಸಂಬಂಧಿಸಿದ ಸ್ವರೂಪಗಳು), ವೆಬ್‌ ಸೇವೆಗಳು ಒಗ್ಗೂಡಿಸುವಿಕೆ, ದೃಶ್ಯಭಾಗವನ್ನು ತಂದುಕೊಳ್ಳುವ ಕಾರ್ಯಪಟು, ಮೀಡಿಯಾ ಮರುಚಾಲಿಸುವ ಭಾಗಗಳು (ಒಂದು SWFನಲ್ಲಿ ಇರಿಸಬಹುದಾದ ಭಾಗವೊಂದರಲ್ಲಿನ ಒಂದು ಸಂಪೂರ್ಣ MP3 ಮತ್ತು/ಅಥವಾ FLV ಪ್ಲೇಯರ್‌‌ನ್ನು ಇದು ಕೋಶೀಕರಿಸುತ್ತದೆ), ದತ್ತಾಂಶ ಭಾಗಗಳು (ಡೇಟಾಸೆಟ್‌, XMLಕನೆಕ್ಟರ್‌‌, ವೆಬ್‌ಸರ್ವೀಸಸ್‌ ಕನೆಕ್ಟರ್‌‌, Xಅಪ್‌ಡೇಟ್‌ ರಿಸಾಲ್ವರ್‌‌, ಇತ್ಯಾದಿ.) ಮತ್ತು ದತ್ತಾಂಶ ಬಂಧಕ APIಗಳು, ಪ್ರಾಜೆಕ್ಟ್‌ ಪ್ಯಾನೆಲ್‌, v2 UI ಭಾಗಗಳು, ಮತ್ತು ಪರಿವರ್ತನಾ ವರ್ಗದ ಸಂಗ್ರಹಣೆಗಳು.
ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ 8 2005 ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ ಬೇಸಿಕ್‌ 8 ಎಂಬುದು ಫ್ಲ್ಯಾಶ್‌‌‌ ನಿರ್ಮಿಸುವಿಕೆ ಸಲಕರಣೆಯ ಒಂದು ಕಡಿಮೆ ಲಕ್ಷಣ-ಸಮೃದ್ಧ ಆವೃತ್ತಿಯಾಗಿದ್ದು, ಕೇವಲ ಮೂಲಭೂತ ರೇಖಾಕೃತಿ, ಅನಿಮೇಷನ್‌ ಮತ್ತು ಪಾರಸ್ಪರಿಕ ಪಟುತ್ವವನ್ನು ಮಾಡಬಯಸುವ ಹೊಸ ಬಳಕೆದಾರರ ಕಡೆಗೆ ಇದು ಗುರಿಯಿರಿಸಿಕೊಂಡಿದೆ. ಫ್ಲ್ಯಾಶ್‌‌‌ ಪ್ಲೇಯರ್‌‌ 8ರೊಂದಿಗೆ ಬಿಡುಗಡೆ ಮಾಡಲ್ಪಟ್ಟ ಉತ್ಪನ್ನದ ಈ ಆವೃತ್ತಿಯು ದೃಶ್ಯಭಾಗ ಹಾಗೂ ಮುಂದುವರಿದ ರೇಖಾತ್ಮಕ ಮತ್ತು ಅನಿಮೇಷನ್‌ ಪರಿಣಾಮಗಳಿಗೆ ಸಂಬಂಧಿಸಿದಂತೆ ಸೀಮಿತ ಬೆಂಬಲವನ್ನು ಹೊಂದಿದೆ. ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ ಪ್ರೊಫೆಷನಲ್‌ 8 ಆವೃತ್ತಿಯು ಹೊರಗೆಡಹುವ ಗುಣ, ಗುಣಮಟ್ಟ, ದೃಶ್ಯಭಾಗ, ಮತ್ತು ಮೊಬೈಲ್‌ ನಿರ್ಮಿಸುವಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದ ಲಕ್ಷಣಗಳನ್ನು ಸೇರ್ಪಡೆ ಮಾಡಿತು. ಸೇರ್ಪಡೆಗೊಂಡ ಹೊಸ ಲಕ್ಷಣಗಳೆಂದರೆ: ಶೋಧಕಗಳು ಮತ್ತು ಬೆರೆಸುವ ವಿಧಾನಗಳು, ಅನಿಮೇಷನ್‌ಗೆ ಸಂಬಂಧಿಸಿದ ಸರಾಗಗೊಳಿಸುವ ‌ನಿಯಂತ್ರಣ, ವರ್ಧಿಸಲ್ಪಟ್ಟ ಗೆರೆಯ ಲಕ್ಷಣಗಳು (ಮುಚ್ಚಿಕೆಗಳು ಮತ್ತು ಸಂಗಮ-ಬಿಂದುಗಳು), ವಸ್ತು-ಆಧರಿತ ರೇಖಾಕೃತಿ ವಿಧಾನ, ರನ್‌-ಟೈಮ್‌ ಬಿಟ್‌ನಕಾಶೆ ಕ್ಯಾಷಿಂಗ್‌, ಪಠ್ಯಕ್ಕೆ ಸಂಬಂಧಿಸಿದ ಫ್ಲ್ಯಾಶ್‌‌‌ ಟೈಪ್‌ ಮುಂದುವರಿದ ಉಪನಾಮ-ನಿರೋಧಕ, ಆನ್‌‌2 VP6 ಮುಂದುವರಿದ ದೃಶ್ಯಭಾಗ ಕೋಡೆಕ್‌, ದೃಶ್ಯಭಾಗದಲ್ಲಿನ ಆಲ್ಫಾ ಪಾರದರ್ಶಕತೆಗೆಗಾಗಿರುವ ಬೆಂಬಲ, ಒಂದು ಸ್ವತಂತ್ರವಾದ ಸಂಕೇತಲಿಪಿಗ ಮತ್ತು ಮುಂದುವರಿದ ದೃಶ್ಯಭಾಗವನ್ನು ತಂದುಕೊಳ್ಳುವ ಕಾರ್ಯಪಟು, FLV ಕಡತಗಳಲ್ಲಿನ ಕ್ಯೂ ಪಾಯಿಂಟ್‌ ಬೆಂಬಲ, ದೃಶ್ಯಭಾಗವನ್ನು ಮರುಚಾಲಿಸುವ ಒಂದು ಮುಂದುವರಿದ ಭಾಗ, ಮತ್ತು ಒಂದು ಪಾರಸ್ಪರಿಕ ಕ್ರಿಯೆಯ ಮೊಬೈಲ್‌ ಸಾಧನ ಅನುಕರಣಕಾರ.
ಅಡೋಬ್‌ ಫ್ಲ್ಯಾಶ್‌ CS3 ಪ್ರೊಫೆಷನಲ್‌ 2007 ಫ್ಲ್ಯಾಶ್‌‌‌ CS3 ಅಡೋಬ್‌ ಹೆಸರಿನ ಅಡಿಯಲ್ಲಿ ಬಿಡುಗಡೆಯಾದ ಫ್ಲ್ಯಾಶ್‌‌‌ನ ಮೊದಲ ಆವೃತ್ತಿಯಾಗಿದೆ. ಆಕ್ಷನ್‌ ಸ್ಕ್ರಿಪ್ಟ್‌ 3.0ಗೆ ಸಂಬಂಧಿಸಿದಂತಿರುವ ಸಂಪೂರ್ಣ ಬೆಂಬಲವನ್ನು CS3 ಒಳಗೊಂಡಿದ್ದು, ಸಮಗ್ರ ಅನ್ವಯಿಕೆಗಳು ಆಕ್ಷನ್‌ ಸ್ಕ್ರಿಪ್ಟ್‌ ಆಗಿ ಮಾರ್ಪಡಿಸಲ್ಪಡಲು ಅದು ಅನುವುಮಾಡಿಕೊಡುತ್ತದೆ, ಅಡೋಬ್‌ ಫೋಟೋಷಾಪ್‌‌ನಂಥ ಇತರ ಅಡೋಬ್‌ ಉತ್ಪನ್ನಗಳೊಂದಿಗೆ ಉತ್ತಮ ಒಗ್ಗೂಡಿಸುವಿಕೆಯನ್ನು ಸೇರಿಸುತ್ತದೆ, ಮತ್ತು ಉತ್ತಮ ಸದಿಶ ಪ್ರಮಾಣದ ರೇಖಾಕೃತಿ ವರ್ತನೆಯನ್ನು ಒದಗಿಸುವ ಮೂಲಕ ಅದು ಅಡೋಬ್‌ ಇಲಸ್ಟ್ರೇಟರ್‌ ಮತ್ತು ಅಡೋಬ್‌ ಫೈರ್‌ವರ್ಕ್ಸ್‌‌ ರೀತಿಯಲ್ಲಿ ಕಾರ್ಯವೆಸಗುತ್ತದೆ.
ಅಡೋಬ್‌ ಫ್ಲ್ಯಾಶ್‌ CS4 ಪ್ರೊಫೆಷನಲ್‌‌ 2008 ವಿಲೋಮ ಚಲನಶಾಸ್ತ್ರ (ದಾಳಗಳು), ಮೂಲಭೂತ 3D ವಸ್ತು ಕುಶಲ ಬಳಕೆ, ವಸ್ತು-ಆಧರಿತ ಅನಿಮೇಷನ್‌, ಒಂದು ಪಠ್ಯ ಎಂಜಿನ್‌, ಹಾಗೂ ಆಕ್ಷನ್‌ ಸ್ಕ್ರಿಪ್ಟ್‌ 3.0ಗೆ ಸಂಬಂಧಿಸಿದ ಮುಂದುವರಿದ ವಿಸ್ತರಣೆಗಳನ್ನು ಇದು ಒಳಗೊಳ್ಳುತ್ತದೆ. ಹಿಂದಿನ ಆವೃತ್ತಿಗಳಲ್ಲಿ ಗೈರುಹಾಜರಾಗಿದ್ದ ಅನೇಕ ಲಕ್ಷಣಗಳೊಂದಿಗಿನ ಅನಿಮೇಷನ್‌ಗಳನ್ನು ಸೃಷ್ಟಿಸುವಲ್ಲಿ CS4 ಅಭಿವರ್ಧಕರಿಗೆ ಅನುವುಮಾಡಿಕೊಡುತ್ತದೆ.
ಅಡೋಬ್‌ ಫ್ಲ್ಯಾಶ್‌ CS5 ಪ್ರೊಫೆಷನಲ್‌ 2010 2010ರ ಏಪ್ರಿಲ್‌‌ 12ರಂದು ಫ್ಲ್ಯಾಶ್‌‌‌ CS5 ಬಿಡುಗಡೆಯಾಯಿತು, ಮತ್ತು 2010ರ ಏಪ್ರಿಲ್‌‌ 30ರಂದು ಪರೀಕ್ಷಾ-ಪ್ರಕ್ರಿಯೆ ಹಾಗೂ ಖರೀದಿಸುವಿಕೆಗಾಗಿ ಇದನ್ನು ವಿಧಿವತ್ತಾಗಿ ಮಾರುಕಟ್ಟೆಗೆ ಬಿಡಲಾಯಿತು. ಫ್ಲ್ಯಾಶ್‌‌‌ CS5 ಪ್ರೊಫೆಷನಲ್‌ ಆವೃತ್ತಿಯು ಐಫೋನ್‌ ಅನ್ವಯಿಕೆಗಳನ್ನು ಪ್ರಕಟಿಸುವುದಕ್ಕೆ ಸಂಬಂಧಿಸಿದಂತಿರುವ ಆಧಾರವನ್ನು ಒಳಗೊಂಡಿದೆ. ಆದಾಗ್ಯೂ, ಐಫೋನ್‌ ಪರಿವರ್ತಕಕ್ಕೆ[೧೩] ಫ್ಲ್ಯಾಶ್‌ನ ಬಳಕೆಯನ್ನು ಪರಿಣಾಮಕಾರಿಯಾಗಿ ನಿಷೇಧಿಸಲು ತನ್ನ ಅಭಿವರ್ಧಕ ಪರವಾನಗಿಯನ್ನು ಆಪಲ್‌ ಕಂಪನಿಯು 2010ರ ಏಪ್ರಿಲ್‌‌ 8ರಂದು ಬದಲಾಯಿಸಿತು ಮತ್ತು ಐಫೋನ್‌ ಹಾಗೂ ಐಪ್ಯಾಡ್‌‌ನ್ನು ಗುರಿಯಾಗಿಟ್ಟುಕೊಂಡು ಫ್ಲ್ಯಾಶ್‌‌‌ CS5ರಲ್ಲಿ ತಾನು ಯಾವುದೇ ಹೆಚ್ಚುವರಿ ಹೂಡಿಕೆಗಳನ್ನು ಮಾಡುತ್ತಿಲ್ಲ ಎಂದು 2010ರ ಏಪ್ರಿಲ್‌‌ 20ರಂದು ಅಡೋಬ್‌ ಘೋಷಿಸಿತು.[೧೪]

ಫ್ಲ್ಯಾಶ್‌‌‌ CS5ರ ಇತರ ಲಕ್ಷಣಗಳೆಂದರೆ, ಒಂದು ಹೊಸ ಪಠ್ಯ ಎಂಜಿನ್‌ (TLF), ವಿಲೋಮ ಚಲನಶಾಸ್ತ್ರಕ್ಕೆ ಮಾಡಲಾದ ಮತ್ತಷ್ಟು ಸುಧಾರಣೆ, ಹಾಗೂ ಸಂಕೇತ ತುಣುಕುಗಳ ಪಟ್ಟಿ.

ಅನ್ಯಾರ್ಥ ಸಲಕರಣೆಗಳು

[ಬದಲಾಯಿಸಿ]

ಅಜಾಕ್ಸ್‌ ಅನಿಮೇಟರ್‌‌ Archived 2012-02-05 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗೂ (ಈಗ ಬಳಕೆಯಲ್ಲಿಲ್ಲದ) UIRAದಂಥ ಮುಕ್ತ ಮೂಲದ ಯೋಜನೆಗಳು, ಒಂದು ರೇಖಾತ್ಮಕ ಬಳಕೆದಾರ ವಾತಾವರಣದೊಂದಿಗೆ ಸಂಪೂರ್ಣವಾಗಿರುವ ಒಂದು ಫ್ಲ್ಯಾಶ್‌‌‌ ಅಭಿವೃದ್ಧಿ ವಾತಾವರಣವನ್ನು ಸೃಷ್ಟಿಸುವ ಗುರಿಹೊಂದಿವೆ. ಇದಕ್ಕೆ ಪರ್ಯಾಯವಾಗಿ, swfಮಿಲ್‌, SWFಟೂಲ್ಸ್‌‌‌, ಹಾಗೂ MTASCನಂಥ ಕಾರ್ಯಸೂಚಿಗಳು SWF ಕಡತಗಳನ್ನು ಸೃಷ್ಟಿಸುತ್ತವೆಯಾದರೂ, ಪಠ್ಯ, ಆಕ್ಷನ್‌ ಸ್ಕ್ರಿಪ್ಟ್‌ನ್ನು ಅಥವಾ XML ಕಡತಗಳನ್ನು ಫ್ಲ್ಯಾಶ್‌‌‌ ಅನಿಮೇಷನ್‌ಗಳೊಳಗೆ ಸಂಕಲಿಸುವ ಮೂಲಕ ಅದನ್ನು ನೆರವೇರಿಸುತ್ತವೆ. C, PHP, C++, ಪರ್ಲ್‌, ಪೈಥಾನ್‌, ಹಾಗೂ ರೂಬಿ ಮೊದಲಾವುಗಳಿಗೆ ಸಂಬಂಧಿಸಿದಂತೆ ಇಂಟರ್‌ಫೇಸ್‌ಗಳನ್ನು ಹೊಂದಿರುವ ಮಿಂಗ್‌‌ ಸಂಗ್ರಹಣೆಯನ್ನು ಬಳಸಿಕೊಳ್ಳುವ ಮೂಲಕವೂ ಸಹ, SWF ಕಡತಗಳನ್ನು ಸರಣಿಬದ್ಧವಾಗಿ ಸೃಷ್ಟಿಸಲು ಸಾಧ್ಯವಿದೆ. haXe ಎಂಬುದು ಒಂದು ಮುಕ್ತ ಮೂಲದ, ಉನ್ನತ-ಮಟ್ಟದ ವಸ್ತು-ಉದ್ದೇಶಿತ ಕಾರ್ಯಸೂಚಿ ರಚಿಸುವಿಕೆಯ ಭಾಷೆಯಾಗಿದ್ದು, ಫ್ಲ್ಯಾಶ್‌‌‌ ಕಡತಗಳನ್ನು ಸಂಕಲಿಸಬಲ್ಲ ವೆಬ್‌-ಹುರುಳಿನ ಸೃಷ್ಟಿಯೆಡೆಗೆ ಅದು ಅನುಬಂಧಿಸಲ್ಪಟ್ಟಿದೆ. ಅನೇಕ ಷೇರ್‌ವೇರ್‌ ಅಭಿವರ್ಧಕರು ಫ್ಲ್ಯಾಶ್‌‌‌ ಸೃಷ್ಟಿ ಸಲಕರಣೆಗಳನ್ನು ನಿರ್ಮಿಸಿದರು ಮತ್ತು 2000 ಹಾಗೂ 2002ರ ನಡುವೆ 50 US$ಗಿಂತ ಕೆಳಗಿನ ಬೆಲೆಯಲ್ಲಿ ಅವುಗಳನ್ನು ಮಾರಿದರು. 2003ರಲ್ಲಿ, ಫ್ಲ್ಯಾಶ್‌‌‌ ಸೃಷ್ಟಿಯ ಉಚಿತ ಸಲಕರಣೆಗಳ ಪೈಪೋಟಿ ಮತ್ತು ಹೊರಹೊಮ್ಮುವಿಕೆಯು ಅನೇಕ ಅನ್ಯಾರ್ಥ ಫ್ಲ್ಯಾಶ್‌‌‌-ಸೃಷ್ಟಿಯ ಸಲಕರಣೆ-ನಿರ್ಮಾತೃಗಳನ್ನು ಮಾರುಕಟ್ಟೆಯಿಂದ ಆಚೆಗೆ ಓಡಿಸಿತ್ತು. ಇದರಿಂದಾಗಿ ಉಳಿದ ಅಭಿವರ್ಧಕರು ತಮ್ಮ ಬೆಲೆಗಳನ್ನು ಏರಿಸುವಲ್ಲಿ ಅನುವುಮಾಡಿಕೊಟ್ಟಂತಾಗಿತ್ತು. ಆದರೂ ಸಹ ಬಹುಪಾಲು ಉತ್ಪನ್ನಗಳು ಈಗಲೂ ಸಹ 100 US$ಗಿಂತ ಕಡಿಮೆ ಬೆಲೆಯನ್ನು ಹೊಂದಿವೆ ಮತ್ತು ಆಕ್ಷನ್‌ ಸ್ಕ್ರಿಪ್ಟ್‌‌ನ್ನು ಅವು ಬೆಂಬಲಿಸುತ್ತವೆ. ಮುಕ್ತ ಮೂಲದ ಸಲಕರಣೆಗಳಿಗೆ ಸಂಬಂಧಿಸಿ ಹೇಳುವುದಾದರೆ, Kಟೂನ್‌ ಸದಿಶ ಪ್ರಮಾಣಗಳನ್ನು ಪರಿಷ್ಕರಿಸಬಲ್ಲದು ಮತ್ತು SWFನ್ನು ಸೃಷ್ಟಿಸಬಲ್ಲದು, ಆದರೆ ಇದರ ಇಂಟರ್‌ಫೇಸ್‌ ಮ್ಯಾಕ್ರೋಮೀಡಿಯಾದ ಇಂಟರ್‌ಫೇಸ್‌ಗಿಂತ ಅತ್ಯಂತ ವಿಭಿನ್ನವಾಗಿದೆ. ಒಂದು ಫ್ಲ್ಯಾಶ್‌‌‌ ಸೃಷ್ಟಿ ಸಲಕರಣೆಯ ತೀರಾ ಇತ್ತೀಚಿನ ಮತ್ತೊಂದು ಉದಾಹರಣೆಯೆಂದರೆ, ಮ್ಯಾಕ್ರೋಮೀಡಿಯಾದ ಓರ್ವ ಮಾಜಿ-ಉದ್ಯೋಗಿಯಿಂದ ರೂಪಿಸಲ್ಪಟ್ಟ SWiSH ಮ್ಯಾಕ್ಸ್‌‌. ಟೂನ್‌ ಬೂಮ್ ಟೆಕ್ನಾಲಜೀಸ್‌ ಕೂಡಾ ಫ್ಲ್ಯಾಶ್‌‌‌ ಆಧರಿತ ಸಾಂಪ್ರದಾಯಿಕ ಅನಿಮೇಷನ್‌ ಸಲಕರಣೆಯೊಂದನ್ನು ಮಾರಾಟಮಾಡುತ್ತದೆ. ಇದರ ಜೊತೆಗೆ, ಹಲವಾರು ಕಾರ್ಯಸೂಚಿಗಳು ತಮ್ಮ ಕಾರ್ಯಸೂಚಿಗಳಿಂದ ಹೊರಹೊಮ್ಮುವ ಉತ್ಪನ್ನ ಅಥವಾ ಫಲಿತಾಂಶವಾಗಿ .swfನ್ನು-ಅನುಸರಿಸುವ ಕಡತಗಳನ್ನು ಸೃಷ್ಟಿಸುತ್ತವೆ. ಸ್ಕ್ರೀನ್‌ಕ್ಯಾಸ್ಟ್‌‌ ಸಲಕರಣೆಗಳು ಇವುಗಳ ಪೈಕಿ ಅತ್ಯಂತ ಪ್ರಖ್ಯಾತವಾದವುಗಳಾಗಿದ್ದು, ಪ್ರಾತ್ಯಕ್ಷಿಕೆಗಳು, ಬೋಧಕ ಸಾಮಗ್ರಿಗಳು, ಅಥವಾ ಕಾರ್ಯಸೂಚಿಗಳ ತಂತ್ರಾಂಶ ಅನುಕರಣಗಳನ್ನು ನಿರ್ಮಿಸುವ ಸಲುವಾಗಿ, ಸೆರೆಹಿಡಿಯಲ್ಪಟ್ಟ ತೆರೆಯ ಹುರುಳಿನ ನಷ್ಟರಹಿತ ಸಂಪೀಡನ ಹಾಗೂ ಮರುಚಾಲನೆಯನ್ನು ಮಾಡುವಲ್ಲಿ ಸನ್ನೆಯ ರೀತಿಯಲ್ಲಿ ಸಾಮರ್ಥ್ಯವನ್ನು ಬಳಸುತ್ತವೆ. ಪ್ರೋಗ್ರ್ಯಾಮರ್‌ಗಳಲ್ಲದವರಿಂದಲೂ ಬಳಸಲ್ಪಡುವುದಕ್ಕೆ ಸಂಬಂಧಿಸಿದಂತೆ, ಹಾಗೂ ಫ್ಲ್ಯಾಶ್‌‌‌ ಹುರುಳನ್ನು ಕ್ಷಿಪ್ರವಾಗಿ ಮತ್ತು ಸುಲಭವಾಗಿ ಸೃಷ್ಟಿಸಲು ಅನುವಾಗುವಂತೆ ಈ ಕಾರ್ಯಸೂಚಿಗಳನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆಯಾದರೂ, ಇದು ಆಧಾರವಾಗಿರುವ ಫ್ಲ್ಯಾಶ್‌‌‌ ಸಂಕೇತವನ್ನು (ಅಂದರೆ ಟ್ವೀನಿಂಗ್‌‌ ಮತ್ತು ರೂಪಾಂತರಗಳು, ಇತ್ಯಾದಿ) ವಾಸ್ತವವಾಗಿ ಪರಿಷ್ಕರಿಸಲಾರದು. ಸ್ಕ್ರೀನ್‌ಕ್ಯಾಮ್ ಎಂಬುದು ಪ್ರಾಯಶಃ, ಫ್ಲ್ಯಾಶ್‌‌‌ನ್ನು ಆದ್ಯತೆಯ ಉತ್ಪನ್ನ ಅಥವಾ ಫಲಿತದ ಸ್ವರೂಪದಲ್ಲಿ ಅಳವಡಿಸಲು ಇರುವ ಅತ್ಯಂತ ಹಳೆಯ ಸ್ಕ್ರೀನ್‌ಕ್ಯಾಸ್ಟಿಂಗ್‌‌ ನಿರ್ಮಿಸುವಿಕೆಯ ಸಲಕರಣೆಯಾಗಿದ್ದು, 90ರ-ದಶಕದಿಂದೀಚೆಗೆ ಅದು ಅಭಿವೃದ್ಧಿಪಡಿಸಲ್ಪಟ್ಟಿದೆ. ಸ್ಕ್ರೀನ್‌ಕ್ಯಾಸ್ಟಿಂಗ್‌‌ ಕಾರ್ಯಸೂಚಿಗಳು ಫ್ಲ್ಯಾಶ್‌‌‌ನ್ನು ಆದ್ಯತೆಯ ಉತ್ಪನ್ನ ಅಥವಾ ಫಲಿತವಾಗಿ ಅಳವಡಿಸಿವೆ ಎಂಬ ವಾಸ್ತವಾಂಶವು, ಒಂದು ಸರ್ವತ್ರ ಅಡ್ಡ-ವೇದಿಕೆಯ ಅನಿಮೇಷನ್‌ ಕಡತ ಸ್ವರೂಪವಾಗಿ ಫ್ಲ್ಯಾಶ್‌‌‌ನ ಅಸ್ತಿತ್ವಕ್ಕೆ ಪುರಾವೆಯಾಗಿದೆ. ಇತರ ಸಲಕರಣೆಗಳು ಫ್ಲ್ಯಾಶ್‌‌‌ ಹುರುಳಿನ ನಿರ್ದಿಷ್ಟ ಬಗೆಗಳನ್ನು ಸೃಷ್ಟಿಸುವುದರ ಕುರಿತಾಗಿ ಗಮನಹರಿಸಿವೆ. ಅನಿಮೆ ಸ್ಟುಡಿಯೋ ಎಂಬುದು ಒಂದು 2D ಅನಿಮೇಷನ್‌ ತಂತ್ರಾಂಶದ ಕಟ್ಟು ಆಗಿದ್ದು, SWF ಕಡತಗಳನ್ನು ಸೃಷ್ಟಿಸುವ ಪಾತ್ರದ ಅನಿಮೇಷನ್‌ಗೆ ಸಂಬಂಧಿಸಿದಂತೆ ಅದು ಪರಿಣತಿಯನ್ನು ಪಡೆದಿದೆ. ಇದೇ ರೀತಿಯಲ್ಲಿ ‌‌ಎಕ್ಸ್‌ಪ್ರೆಸ್‌ ಅನಿಮೇಟರ್ ಎಂಬುದು ನಿರ್ದಿಷ್ಟವಾಗಿ ಚಲನ ವ್ಯಂಗ್ಯಚಿತ್ರಕಾರರ ಕಡೆಗೆ ತನ್ನ ಗುರಿಯನ್ನಿಟ್ಟುಕೊಂಡಿದೆ. ಕ್ವೆಶ್ಚನ್‌ ರೈಟರ್‌ ಎಂಬುದು ಫ್ಲ್ಯಾಶ್‌‌‌ ಕಡತ ಸ್ವರೂಪಕ್ಕೆ ತನ್ನ ಪ್ರಶ್ನಾವಳಿಗಳನ್ನು ಪ್ರಕಟಿಸುತ್ತದೆ. ಪ್ರೋಗ್ರ್ಯಾಮರ್‌‌ಗಳಾಗಿಲ್ಲದ ಅಥವಾ ವೆಬ್‌ ವಿನ್ಯಾಸಕರಾಗಿಲ್ಲದ ಬಳಕೆದಾರರೂ ಸಹ, ಸಂಪೂರ್ಣ ಫ್ಲ್ಯಾಶ್‌‌‌-ಆಧರಿತ ವೆಬ್‌ ಸೈಟ್‌‌ಗಳನ್ನು ನಿರ್ಮಿಸುವಲ್ಲಿ ಅವರಿಗೆ ಅನುವುಮಾಡಿಕೊಡುವ ಆನ್‌-ಲೈನ್‌ ಸಲಕರಣೆಗಳನ್ನು ಕಂಡುಕೊಳ್ಳುತ್ತಾರೆ. ಲಭ್ಯವಿರುವ ಅತ್ಯಂತ ಹಳೆಯ ಸೇವೆಗಳ (1998) ಪೈಕಿ ಫ್ಲ್ಯಾಶ್‌‌‌ಟುಗೋ ಒಂದೆನಿಸಿದೆ. ಒಂದು ಹುರುಳು ನಿರ್ವಹಣಾ ವ್ಯವಸ್ಥೆಯೊಂದಿಗೆ ಸಂಬಂಧವಿರಿಸಿಕೊಂಡಿರುವ ಪೂರ್ವ-ನಿರ್ಮಿತ ಮಾದರಿಗಳ (ಪಡಿಯಚ್ಚುಗಳ) ಒಂದು ವ್ಯಾಪಕ ವೈವಿಧ್ಯತೆಯನ್ನು ಇಂಥ ಕಂಪನಿಗಳು ಒದಗಿಸುತ್ತವೆ. ಬಳಕೆದಾರರು ತಮ್ಮ ವೆಬ್‌ ಸೈಟ್‌‌ಗಳನ್ನು ಸುಲಭವಾಗಿ ನಿರ್ಮಿಸಲು, ಪರಿಷ್ಕರಿಸಲು ಮತ್ತು ಪ್ರಕಟಿಸಲು ಸದರಿ ಹುರುಳು ನಿರ್ವಹಣಾ ವ್ಯವಸ್ಥೆಯು ಅವರನ್ನು ಶಕ್ತರನ್ನಾಗಿಸುತ್ತದೆ. ಗಿರಾಕಿಯ ಆದೇಶಾನುಸಾರ ತಯಾರಿಸುವಿಕೆ ಮತ್ತು ವಿನ್ಯಾಸಕ್ಕೆ ಹೊಂದಿಕೊಳ್ಳುವಿಕೆಗೆ ಹೆಚ್ಚಿನ ರೀತಿಯಲ್ಲಿ ಅನುವು ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಇರುವ Wix.com ಹಾಗೂ ಸರ್ಕಲ್‌ಪ್ಯಾಡ್‌ ಇತರ ತಾಣಗಳಾಗಿವೆ. ಪಾರಸ್ಪರಿಕ ಕ್ರಿಯೆಯ ಅನಿಮೇಷನ್‌ ಹುರುಳನ್ನು ಸೃಷ್ಟಿಸುವ ಸಲುವಾಗಿ ಮತ್ತು SWF ಸ್ವರೂಪವೂ ಸೇರಿದಂತೆ ಸ್ವರೂಪಗಳ ಒಂದು ವೈವಿಧ್ಯತೆಗೆ ಅದನ್ನು ಕಳುಹಿಸುವುದಕ್ಕಾಗಿ ವಿನ್ಯಾಸಗೊಳಿಸಲಾದ ಅಡೋಬ್‌ ಲೈವ್‌ಮೋಷನ್‌ ಎಂಬ ಒಂದು ತಂತ್ರಾಂಶದ ಕಟ್ಟನ್ನು ಅಡೋಬ್‌ ಬರೆಯಿತು. ಎರಡು ಪ್ರಮುಖ ಬಿಡುಗಡೆಗಳನ್ನು ಲೈವ್‌ಮೋಷನ್‌ ಕಂಡಿತಾದರೂ, ಯಾವುದೇ ಬಳಕೆದಾರದ ಗಮನಾರ್ಹವಾದ ನೆಲೆಯನ್ನು ಗಳಿಸುವಲ್ಲಿ ಅದು ವಿಫಲವಾಯಿತು. 2003ರ ಫೆಬ್ರುವರಿಯಲ್ಲಿ, ಪ್ರೆಸೆಡಿಯಾವನ್ನು ಮ್ಯಾಕ್ರೋಮೀಡಿಯಾ ಖರೀದಿಸಿತು. ಪವರ್‌‌ ಪಾಯಿಂಟ್‌ ಕಡತಗಳನ್ನು ಸ್ವಯಂಚಾಲಿತವಾಗಿ ಫ್ಲ್ಯಾಶ್‌‌‌ ಕಡತಗಳಾಗಿ ಮಾರ್ಪಡಿಸುತ್ತಿದ್ದ ಒಂದು ಫ್ಲ್ಯಾಶ್‌‌‌ ನಿರ್ಮಿಸುವಿಕೆಯ ಸಲಕರಣೆಯನ್ನು ಪ್ರೆಸೆಡಿಯಾ ಅಭಿವೃದ್ಧಿಪಡಿಸಿತ್ತು. ಮ್ಯಾಕ್ರೋಮೀಡಿಯಾವು ತರುವಾಯ ಈ ಹೊಸ ಉತ್ಪನ್ನವನ್ನು ಬ್ರೀಝ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತು. ಇದು ಅನೇಕ ಹೊಸ ವರ್ಧನೆಗಳನ್ನು ಒಳಗೊಂಡಿತ್ತು. ಇದರ ಜೊತೆಗೆ, (ಆವೃತ್ತಿ 2ರಂತೆ) ಆಪಲ್‌‌ಕೀನೋಟ್‌ ಪ್ರಸ್ತುತಿ ತಂತ್ರಾಂಶವೂ ಸಹ ಪಾರಸ್ಪರಿಕ ಕ್ರಿಯೆಯ ಪ್ರಸ್ತುತಿಗಳನ್ನು ಸೃಷ್ಟಿಸಲು ಮತ್ತು SWFಗೆ ಕಳುಹಿಸಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ.

ಅಳವಡಿಸಿಕೊಂಡ ಬಳಕೆದಾರರ ತಳಹದಿ

[ಬದಲಾಯಿಸಿ]

ಫ್ಲ್ಯಾಶ್‌‌‌ ಒಂದು ಸ್ವರೂಪವಾಗಿ ಡೆಸ್ಕ್‌ಟಾಪ್‌ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಹಬ್ಬಿದೆ; ಒಂದು ಅಂದಾಜಿನ ಪ್ರಕಾರ, 95%ನಷ್ಟು PCಗಳು ಇದನ್ನು ಹೊಂದಿದ್ದರೆ,[೧೫] ಅಡೋಬ್‌ ಸಮರ್ಥಿಸಿಕೊಳ್ಳುವ ಪ್ರಕಾರ 98 ಪ್ರತಿಶತ ಭಾಗದಷ್ಟು U.S. ವೆಬ್‌ ಬಳಕೆದಾರರು ಹಾಗೂ 99.3 ಪ್ರತಿಶತ ಭಾಗದಷ್ಟು ಎಲ್ಲಾ ಅಂತರಜಾಲ ಡೆಸ್ಕ್‌ಟಾಪ್‌ ಬಳಕೆದಾರರು ಫ್ಲ್ಯಾಶ್‌‌‌ ಪ್ಲೇಯರ್‌‌ನ್ನು[೧೬][೧೭] ಅಳವಡಿಸಿಕೊಂಡಿದ್ದು, 92ರಿಂದ 95%ವರೆಗಿನ ಬಳಕೆದಾರರು (ಪ್ರದೇಶವನ್ನವಲಂಬಿಸಿ) ವಿನೂತನ ಆವೃತ್ತಿಯನ್ನು ಹೊಂದಿದ್ದಾರೆ.[೧೮] ಪತ್ತೆಹಚ್ಚುವ ಯೋಜನೆ ಹಾಗೂ ಸಂಶೋಧನಾ ಜನಸಂಖ್ಯಾಶಾಸ್ತ್ರವನ್ನು ಅವಲಂಬಿಸಿ ಸಂಖ್ಯೆಗಳು ಬದಲಾಗುತ್ತವೆ. ಕಂಪ್ಯೂಟರ್‌‌ಗಳು ಹಾಗೂ ಸಾಧನಗಳ ಒಂದು ವೈವಿಧ್ಯಮಯವಾದ ಶ್ರೇಣಿಯಲ್ಲಿ ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌‌ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಅವುಗಳೆಂದರೆ: ವಿಂಡೋಸ್‌‌, ಮ್ಯಾಕ್‌ OS 9/X, ಲೈನಕ್ಸ್‌, ಸೊಲಾರಿಸ್‌, HP-UX, ಪಾಕೆಟ್‌ PC/ವಿಂಡೋಸ್‌‌ CE, OS/2, QNX, ಸಿಂಬಿಯಾನ್‌, ಪಾಮ್‌ OS, ಬಿOS, ಮತ್ತು IRIX; ಇಷ್ಟಾಗಿಯೂ ಸಹ, ವಿಶಿಷ್ಟವೆನಿಸುವಂತೆ ವಿಂಡೋಸ್‌‌ ಮೇಲೆ ಮಾತ್ರವೇ ಇದರ ಕಾರ್ಯನಿರ್ವಹಣೆಯು ಅತ್ಯುತ್ತಮವಾಗಿ ಕಂಡುಬರುತ್ತದೆ (ನೋಡಿ: ಕಾರ್ಯನಿರ್ವಹಣೆ). ಸಾಧನಗಳ (ಅಳವಡಿಸಲ್ಪಟ್ಟ ಕಂಪ್ಯೂಟರ್‌‌ ವ್ಯವಸ್ಥೆಗಳ) ಜೊತೆಗಿನ ಹೊಂದಾಣಿಕೆಗೆ ಸಂಬಂಧಿಸಿದಂತೆ, ನೋಡಿ: ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ ಲೈಟ್‌. ಮೊಬೈಲ್‌ ಸಾಧನಗಳ ವಲಯವನ್ನು ಫ್ಲ್ಯಾಶ್‌‌‌ ಅಷ್ಟಾಗಿ ಭೇದಿಸಿಕೊಂಡು ಹೋಗಿಲ್ಲ; ಏಕೆಂದರೆ, ಜಾಗತಿಕ ಸ್ಮಾರ್ಟ್‌ಫೋನ್‌ ವೆಬ್‌ ದಟ್ಟಣೆಯ ಕ್ಷೇತ್ರದಲ್ಲಿ 60%ಗೂ ಹೆಚ್ಚಿನ ಪಾಲನ್ನು ಹೊಂದಿರುವ ತನ್ನ ಐಫೋನ್‌ನಲ್ಲಿ ಅನ್ಯಾರ್ಥ ರನ್‌ಟೈಮ್‌ಗಳನ್ನು ಆಪಲ್‌ ಕಂಪನಿಯು ತುಂಬುವುದಿಲ್ಲ ಅಥವಾ ಅವಕ್ಕೆ ಅವಕಾಶ ಕಲ್ಪಿಸುವುದಿಲ್ಲ. "ಮೊಬೈಲ್‌ ಅಂತರಜಾಲ ಸಾಧನ" ದಟ್ಟಣೆಯ ಪೈಕಿ 95%ಗೂ ಹೆಚ್ಚಿನ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಐಪಾಡ್‌ ಟಚ್‌ಗೂ ಈ ಮಾತು ಅನ್ವಯಿಸುತ್ತದೆ. ಫ್ಲ್ಯಾಶ್‌‌‌ನ್ನು ಒಂದು ಸರ್ವತ್ರ ಮೊಬೈಲ್‌ ವೇದಿಕೆಯನ್ನಾಗಿ ಮಾರುಕಟ್ಟೆ ಮಾಡುವಲ್ಲಿನ ಅಡೋಬ್‌ನ ಸಾಮರ್ಥ್ಯಕ್ಕೆ ಇದು ಧಕ್ಕೆಯುಂಟುಮಾಡುತ್ತದೆ. ಆದಾಗ್ಯೂ, ಆಂಡ್ರಾಯ್ಡ್‌‌‌ನ ಮುಂದಿನ ಆವೃತ್ತಿಯೂ ಸೇರಿದಂತೆ ಪೈಪೋಟಿಯಲ್ಲಿರುವ ಮೊಬೈಲ್‌ ವೇದಿಕೆಗಳಿಗೆ ಸಂಬಂಧಿಸಿದಂತೆ ಫ್ಲ್ಯಾಶ್‌‌‌ನ ಬೆಂಬಲವು ಈಗಾಗಲೇ ಘೋಷಿಸಲ್ಪಟ್ಟಿದೆ.[೧೯]

64-ಬಿಟ್‌ ಬೆಂಬಲ

[ಬದಲಾಯಿಸಿ]

ಫ್ಲ್ಯಾಶ್‌‌‌ ಪ್ಲೇಯರ್‌‌ 10ರಿಂದ ನಿರ್ಮಿಸಲ್ಪಟ್ಟಿರುವ ಒಂದು ಪ್ರಾಯೋಗಿಕ 64-ಬಿಟ್‌‌ನ್ನು ಅಡೋಬ್‌ ಒದಗಿಸುತ್ತದೆ. ಇದು ಕೇವಲ ಲೈನಕ್ಸ್‌‌ಗಾಗಿ‌, ಮತ್ತು ಕೇವಲ x86-64 ಸಂಸ್ಕಾರಕಗಳಿಗಾಗಿ ರೂಪಿಸಲ್ಪಟ್ಟಿದೆ.[೨೦][೨೧] 2008ರ ನವೆಂಬರ್‌‌ 11ರಂದು 64-ಬಿಟ್‌ ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌‌ ಒಂದರ ಮೊದಲ ಬಿಡುಗಡೆಯಾಯಿತು.[೨೨] ಹಲವಾರು ಮನವಿಗಳ[೨೦] ಕಾರಣದಿಂದಾಗಿ 64-ಬಿಟ್‌ ಲೈನಕ್ಸ್‌ನ್ನು ಬೆಂಬಲಿಸಲು ಅಡೋಬ್‌ ನಿರ್ಧರಿಸಿತು. ಬ್ರೌಸರ್‌‌ ಮತ್ತು ಪ್ಲಗ್‌ಇನ್‌ ನಡುವಣ ಒಂದು (nspluginwrapper‌‌ನಂಥ) ಮಧ್ಯವರ್ತಿ ಪದರವನ್ನು ಬಳಸುವ ಮೂಲಕ, ಪರ್ಯಾಯವಾಗಿ ಒಂದು 64-ಬಿಟ್‌ ಯಂತ್ರ ವ್ಯವಸ್ಥೆಯ ಮೇಲೆ ಒಂದು 32-ಬಿಟ್‌ ಬ್ರೌಸರ್‌‌ನಲ್ಲಿ 32-ಬಿಟ್‌ ಬ್ರೌಸರ್‌‌ ಪ್ಲಗ್‌ಇನ್‌ಗಳನ್ನು ಓಡಿಸಲು ಸಾಧ್ಯವಿದೆಯಾದರೂ, ಬಳಕೆದಾರರಿಗೆ ಸಂಬಂಧಿಸಿದಂತೆ ಈ ಪರಿಹಾರವು ಕಾರ್ಯಸಾಧ್ಯವಲ್ಲದ್ದಾಗಿತ್ತು.[೨೩] ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌‌ನ ಒಂದು ಮುಂಬರುವ ಪ್ರಮುಖ ಬಿಡುಗಡೆಯಲ್ಲಿ ವಿಂಡೋಸ್‌‌, ಮ್ಯಾಕಿಂತೋಷ್‌ ಹಾಗೂ ಲೈನಕ್ಸ್‌ಗೆ ಸಂಬಂಧಿಸಿದಂತೆ ಅಂತಿಮ 64-ಬಿಟ್‌ ಬೆಂಬಲವನ್ನು ಅಡೋಬ್‌ ನಿರೀಕ್ಷಿಸುತ್ತದೆ.[೨೦] ಅಧಿಕೃತವಾದ 32-ಬಿಟ್‌ ಪ್ಲೇಯರ್‌‌ ಈಗಲೂ ಸಹ ಉಬುಂಟು, ಓಪನ್‌SUSEನಂಥ 64-ಬಿಟ್‌ ಲೈನಕ್ಸ್‌ ವಿತರಣೆಗಳಲ್ಲಿ ವಿತರಿಸಲ್ಪಡುತ್ತಿದ್ದು, ಅವುಗಳ ಪೈಕಿ ಕೆಲವೊಂದು ಬಳಕೆದಾರರು ವರದಿಮಾಡಿರುವ ಪ್ರಕಾರ, ಕೆಲವೊಂದು ವೆಬ್‌ತಾಣಗಳ ಮೇಲೆ 32-ಬಿಟ್‌ ಪ್ಲೇಯರ್‌ಗಳು ಸಮಸ್ಯೆಗಳನ್ನು ಹೊಂದಿವೆ.[೨೪][೨೫][೨೬] ತೊಂದರೆಗೊಳಗಾದ ಬಳಕೆದಾರರು ಸ್ವತಃ ತಾವೇ 64-ಬಿಟ್‌ ಪ್ಲೇಯರ್‌ನ್ನು ಅಳವಡಿಸಿಕೊಳ್ಳಬಹುದಾಗಿದೆ.[೨೭] ಮುಕ್ತ ಮೂಲದ ಅಳವಡಿಸುವಿಕೆಗಳು (ಕಡೇಪಕ್ಷ ಗ್ನಾಶ್‌ ಮತ್ತು Swfಡೆಕ್‌ಗಳಿಗೆ ಸಂಬಂಧಿಸಿ) 32-ಬಿಟ್‌ನ ರೀತಿಯಲ್ಲೇ 64-ಬಿಟ್‌ ವಿನ್ಯಾಸಗಳನ್ನು ಬೆಂಬಲಿಸುತ್ತವೆ (ನೋಡಿ: ಮರುಚಾಲನೆ).

ವೆಬ್‌ ಬ್ರೌಸರ್‌‌ಗಳಲ್ಲಿನ ಫ್ಲ್ಯಾಶ್‌‌‌ ತಡೆಗಟ್ಟುವಿಕೆ

[ಬದಲಾಯಿಸಿ]

ಕೆಲವೊಂದು ವೆಬ್‌ ಬ್ರೌಸರ್‌‌ಗಳು ಬಳಕೆದಾರನು ಫ್ಲ್ಯಾಶ್‌‌‌ ಹುರುಳಿನ ಮೇಲೆ ಕ್ಲಿಕ್ಕಿಸುವುದಕ್ಕೆ ಮುಂಚಿತವಾಗಿಯೇ ಅದನ್ನು ಚಾಲನೆ ಮಾಡದಂತೆ ಕಡೆಗಣಿಸುತ್ತವೆ, ಉದಾಹರಣೆಗೆ ಕಾನ್‌ಕರರ್‌‌‌, K-ಮೆಲಿಯಾನ್‌. ಅನೇಕ ಜನಪ್ರಿಯ ಬ್ರೌಸರ್‌‌ಗಳಿಗೆ ಸಂಬಂಧಿಸಿದಂತೆ, ಸಮಾನವಾಗಿರುವ "ಫ್ಲ್ಯಾಶ್‌‌‌ ತಡೆಕಾರಕ" ವಿಸ್ತರಣೆಗಳು ಕೂಡಾ ಅಸ್ತಿತ್ವದಲ್ಲಿವೆ: ನೋಸ್ಕ್ರಿಪ್ಟ್‌ ಮತ್ತು ಫ್ಲ್ಯಾಶ್‌ಬ್ಲಾಕ್‌‌‌ನ್ನು ಫೈರ್‌ಫಾಕ್ಸ್‌ ಹೊಂದಿದ್ದರೆ, ಫ್ಲ್ಯಾಶ್‌ಬ್ಲಾಕ್ ಎಂದೂ ಕರೆಯಲ್ಪಡುವ ಒಂದು ವಿಸ್ತರಣೆಯನ್ನು ಒಪೆರಾ ಹೊಂದಿದೆ. ಒಪೆರಾ ಟರ್ಬೋವನ್ನು ಬಳಸುವಾಗ, ಬಳಕೆದಾರನು ಫ್ಲ್ಯಾಶ್‌‌‌ ಹುರುಳನ್ನು ಚಾಲಿಸಲು ಕ್ಲಿಕ್ಕಿಸುವಿಕೆಗಳನ್ನು ಮಾಡಬೇಕೆಂದು ಅದು ಬಯಸುತ್ತದೆ. ಫಾಕ್ಸೀಯನ್ನು ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌‌ ಹೊಂದಿದ್ದು, ಇದು ಅನೇಕ ಲಕ್ಷಣಗಳನ್ನು ಹೊಂದಿದೆ. ಅವುಗಳ ಪೈಕಿ ಒಂದಕ್ಕೆ ಫ್ಲ್ಯಾಶ್‌ಬ್ಲಾಕ್ ಎಂದೂ ಹೆಸರಿದೆ. ಮ್ಯಾಕ್‌ OS X ಅಡಿಯಲ್ಲಿನ ವೆಬ್‌ಕಿಟ್‌-ಆಧರಿತ ಬ್ರೌಸರ್‌‌ಗಳು ಕ್ಲಿಕ್‌ ಟು ಫ್ಲ್ಯಾಶ್‌‌ನ್ನು ಹೊಂದಿವೆ.[೨೮]

ಪ್ರೋಗ್ರ್ಯಾಮಿಂಗ್‌ ಭಾಷೆ

[ಬದಲಾಯಿಸಿ]

ಸಂಬಂಧಿತ ಕಡತ ಸ್ವರೂಪಗಳು ಮತ್ತು ವಿಸ್ತರಣೆಗಳು

[ಬದಲಾಯಿಸಿ]
ವಿಸ್ತರಣೆ ವಿವರಣೆ
.swf .swf ಕಡತಗಳು ಸಂಪೂರ್ಣಗೊಂಡ, ಸಂಕಲಿಸಲ್ಪಟ್ಟ ಮತ್ತು ಪ್ರಕಟಿಸಲ್ಪಟ್ಟ ಕಡತಗಳಾಗಿದ್ದು, ಅಡೋಬ್‌ ಫ್ಲ್ಯಾಶ್‌ನೊಂದಿಗೆ ಅವನ್ನು ಪರಿಷ್ಕರಿಸಲಾಗುವುದಿಲ್ಲ. ಆದಾಗ್ಯೂ, ಅನೇಕ '.swf ಡೀಕಂಪೈಲರ್‌‌ಗಳು' ಅಸ್ತಿತ್ವದಲ್ಲಿವೆ. ಫ್ಲ್ಯಾಶ್‌‌‌ನ್ನು ಬಳಸಿಕೊಂಡು .swf ಕಡತಗಳನ್ನು ತಂದುಕೊಳ್ಳುವಲ್ಲಿನ ಪ್ರಯತ್ನವು .swfನಿಂದ ಒಂದಷ್ಟು ಮಾಹಿತಿಗಳನ್ನು ಅಥವಾ ಲಕ್ಷಣಗಳನ್ನು ಮರುಸಂಪಾದಿಸಲು ಅನುವುಮಾಡಿಕೊಡುತ್ತದೆಯೇ ಹೊರತು, ಎಲ್ಲವನ್ನೂ ಅಲ್ಲ.
.FXG FXG ಎಂಬುದು ಒಂದು ಏಕೀಕೃತ xml ಕಡತ ಸ್ವರೂಪವಾಗಿದ್ದು, ಫ್ಲೆಕ್ಸ್‌, ಫ್ಲ್ಯಾಶ್‌‌‌, ಫೋಟೋಷಾಪ್‌ ಮತ್ತು ಇತರ ಅನ್ವಯಿಕೆಗಳಿಗಾಗಿ ಅಡೋಬ್‌ನಿಂದ ಅಭಿವೃದ್ಧಿಪಡಿಸಲ್ಪಡುತ್ತಿದೆ.
.fla .fla ಕಡತಗಳು ಫ್ಲ್ಯಾಶ್‌‌‌ ಅನ್ವಯಿಕೆಗೆ ಸಂಬಂಧಿಸಿದ ಮೂಲ ಸಾಮಗ್ರಿಯನ್ನು ಒಳಗೊಳ್ಳುತ್ತವೆ. ಫ್ಲ್ಯಾಶ್‌‌‌ ನಿರ್ಮಿಸುವಿಕೆಯ ತಂತ್ರಾಂಶವು FLA ಕಡತಗಳನ್ನು ಪರಿಷ್ಕರಿಸಬಲ್ಲದು ಮತ್ತು ಅವನ್ನು .swf ಕಡತಗಳೊಳಗೆ ಸಂಕಲಿಸಬಲ್ಲದು. ಫ್ಲ್ಯಾಶ್‌‌‌ ಮೂಲ ಕಡತ ಸ್ವರೂಪವು ಸದ್ಯಕ್ಕೆ ಮೈಕ್ರೋಸಾಫ್ಟ್‌ ಸಂಯುಕ್ತ ಕಡತ ಸ್ವರೂಪವನ್ನು ಆಧರಿಸಿದ ಮೇಲಿನ ಒಂದು ದ್ವಿಮಾನ ಕಡತ ಸ್ವರೂಪವಾಗಿದೆ. ಫ್ಲ್ಯಾಶ್‌‌‌ ಪ್ರೋ CS5ನಲ್ಲಿ, fla ಕಡತ ಸ್ವರೂಪವು XML-ಆಧರಿತ ಯೋಜನೆಯ ರಚನಾ-ಸ್ವರೂಪವೊಂದರ ಒಂದು ಜಿಪ್‌ ಧಾರಕವಾಗಿದೆ.
.xfl .xfl ಕಡತಗಳು XML-ಆಧರಿತ ಯೋಜನೆ ಕಡತಗಳಾಗಿದ್ದು, ದ್ವಿಮಾನ .fla ಸ್ವರೂಪಕ್ಕೆ ಅವು ಸಮಾನವಾಗಿವೆ. ಫ್ಲ್ಯಾಶ್‌‌‌ ನಿರ್ಮಿಸುವಿಕೆಯ ತಂತ್ರಾಂಶವು XFLನ್ನು ಫ್ಲ್ಯಾಶ್‌‌‌ CS4ನಲ್ಲಿನ ಒಂದು ವಿನಿಮಯ ಸ್ವರೂಪವಾಗಿ ಬಳಸುತ್ತದೆ. ಇನ್‌ಡಿಸೈನ್‌ ಮತ್ತು ಆಫ್ಟರ್‌ಎಫೆಕ್ಟ್ಸ್‌ನಿಂದ ಕಳಿಸಲ್ಪಟ್ಟ XFL ಕಡತಗಳನ್ನು ಇದು ಸ್ವೀಕರಿಸುತ್ತದೆ. ಫ್ಲ್ಯಾಶ್‌‌‌ ಪ್ರೋ CS5ನಲ್ಲಿ, xfl ಕಡತವು ಒಂದು ಪ್ರಮುಖ ಕಡತವಾಗಿದ್ದು, "ಸಂಕ್ಷೇಪಿಸಲ್ಪಡದ FLA" ಕಡತವನ್ನು ಅದು ತೆರೆಯುತ್ತದೆ. ಸಂಕ್ಷೇಪಿಸಲ್ಪಡದ FLA ಕಡತವು ಫೋಲ್ಡರುಗಳ ಒಂದು ಶ್ರೇಣಿವ್ಯವಸ್ಥೆಯಾಗಿದ್ದು, XML ಹಾಗೂ ದ್ವಿಮಾನ ಅದು ಕಡತಗಳನ್ನು ಒಳಗೊಂಡಿರುತ್ತದೆ.
.as .as ಕಡತಗಳು ಸರಳ ಮೂಲ ಕಡತಗಳಲ್ಲಿ ಆಕ್ಷನ್‌ ಸ್ಕ್ರಿಪ್ಟ್‌ ಮೂಲ ಸಂಕೇತವನ್ನು ಹೊಂದಿರುತ್ತವೆ. FLA ಕಡತಗಳೂ ಸಹ ನೇರವಾಗಿ ಆಕ್ಷನ್‌ ಸ್ಕ್ರಿಪ್ಟ್‌ ಸಂಕೇತವನ್ನು ಒಳಗೊಳ್ಳಬಲ್ಲವಾಗಿವೆಯಾದರೂ, ರಾಚನಿಕ ಕಾರಣಗಳಿಗಾಗಿ, ಅಥವಾ ಆವೃತ್ತಿಗಾರಿಕೆಯ ಅನ್ವಯಿಕೆಗಳಿಗೆ ಸಂಕೇತವನ್ನು ಒಡ್ಡಲು ಪ್ರತ್ಯೇಕವಾದ .as ಕಡತಗಳು ಅನೇಕವೇಳೆ ಹೊರಹೊಮ್ಮುತ್ತವೆ. ಅವು ಕೆಲವೊಮ್ಮೆ .ಆಕ್ಷನ್‌ ಸ್ಕ್ರಿಪ್ಟ್‌ ವಿಸ್ತರಣೆಯನ್ನು ಬಳಸುತ್ತವೆ.
.mxml .mxml ಕಡತಗಳು ಆಕ್ಷನ್‌ ಸ್ಕ್ರಿಪ್ಟ್‌ ಕಡತಗಳ (ಮತ್ತು .css ಕಡತಗಳ) ಜೊತೆಯಾಗಿ ಬಳಸಲ್ಪಡುತ್ತವೆ, ಮತ್ತು ಫ್ಲೆಕ್ಸ್‌‌ನಲ್ಲಿ GUIನ್ನು ವಿನ್ಯಾಸಗೊಳಿಸುವುದಕ್ಕೆ ಸಂಬಂಧಿಸಿದಂತೆ ಒಂದು ತಿದ್ದುಪಾಟು-ಭಾಷಾ-ಶೈಲಿಯ ವಾಕ್ಯರಚನೆಯನ್ನು (HTML ರೀತಿಯಲ್ಲಿ) ನೀಡುತ್ತದೆ. ಮೂಲ ಟ್ಯಾಗ್‌ನ ವರ್ಗವನ್ನು ವಿಸ್ತರಿಸುವ ಒಂದು ಹೊಸ ವರ್ಗವನ್ನು ಪ್ರತಿ MXML ಕಡತವು ಸೃಷ್ಟಿಸುತ್ತದೆ, ಮತ್ತು ವರ್ಗದ ಮಕ್ಕಳ (ಒಂದು ವೇಳೆ ಅವು UIಭಾಗದ ಸಂತತಿಗಳಾಗಿದ್ದಲ್ಲಿ) ಅಥವಾ ಸದಸ್ಯರ ರೀತಿಯಲ್ಲಿ ಒಂದರೊಳಗೆ ಒಂದನ್ನಿಟ್ಟು ಅಡಕಿಸಿದ ಟ್ಯಾಗ್‌ಗಳನ್ನು ಸೇರಿಸುತ್ತದೆ.
.swd .swd ಕಡತಗಳು ತಾತ್ಕಾಲಿಕವಾದ ದೋಷ ನಿರ್ಮೂಲನಾ ಕಡತಗಳಾಗಿದ್ದು, ಫ್ಲ್ಯಾಶ್‌‌‌ ಅಭಿವೃದ್ಧಿಯ ಸಮಯದಲ್ಲಿ ಬಳಸಲ್ಪಡುತ್ತವೆ. ಒಂದು ಫ್ಲ್ಯಾಶ್‌‌‌ ಯೋಜನೆಯನ್ನು ಅಭಿವೃದ್ಧಿಪಡಿಸುವುದು ಒಮ್ಮೆಗೆ ಮುಗಿದ ನಂತರ, ಈ ಕಡತಗಳ ಅಗತ್ಯವಿರುವುದಿಲ್ಲ ಮತ್ತು ಇವನ್ನು ತೆಗೆದುಹಾಕಬಹುದು.
.asc .asc ಕಡತಗಳು ಸರ್ವರ್‌-ಸೈಡ್‌ ಆಕ್ಷನ್‌ ಸ್ಕ್ರಿಪ್ಟ್‌ನ್ನು ಒಳಗೊಂಡಿದ್ದು, ಸಮರ್ಥವಾದ ಹಾಗೂ ಹೊಂದಿಕೊಳ್ಳುವ ಗ್ರಾಹಕ-ಸರ್ವರ್‌ ಮ್ಯಾಕ್ರೋಮೀಡಿಯಾ ಫ್ಲ್ಯಾಶ್‌‌‌ ಸಂವಹನೆಯ ಸರ್ವರ್‌ MX ಅನ್ವಯಿಕೆಗಳನ್ನು ಅಭಿವೃದ್ಧಿಗೊಳಿಸಲು ಈ ಸ್ಕ್ರಿಪ್ಟ್‌ ಬಳಸಲ್ಪಡುತ್ತದೆ.
.abc .abc ಕಡತಗಳು ಆಕ್ಷನ್‌ಸ್ಕ್ರಿಪ್ಟ್‌ ವಾಸ್ತವಾಭಾಸದ ಯಂತ್ರವಾದ AVM (ಫ್ಲ್ಯಾಶ್‌‌‌ 8 ಮತ್ತು ಮುಂಚಿನದು), ಹಾಗೂ AVM2ನಿಂದ (ಫ್ಲ್ಯಾಶ್‌‌‌ 9 ಅಥವಾ ನಂತರದ್ದು) ಬಳಸಲ್ಪಡುವ ಆಕ್ಷನ್‌ ಸ್ಕ್ರಿಪ್ಟ್‌ ಬೈಟ್‌ಸಂಕೇತವನ್ನು ಒಳಗೊಂಡಿರುತ್ತವೆ.
.flv .flv ಕಡತಗಳು ಫ್ಲ್ಯಾಶ್‌‌‌ ವಿಡಿಯೋ ಕಡತಗಳಾಗಿದ್ದು, ಅಡೋಬ್‌ ಫ್ಲ್ಯಾಶ್‌, ffmpeg, ಸೋರೆನ್‌ಸನ್‌ ಸ್ಕ್ವೀಝ್‌, ಅಥವಾ ಆನ್‌2 ಫ್ಲಿಕ್ಸ್‌‌‌ನಿಂದ ಅವು ಸೃಷ್ಟಿಸಲ್ಪಟ್ಟಿರುತ್ತವೆ. FLV ಕಡತಗಳ ಒಳಗಿರುವ ಶ್ರವ್ಯಾಂಶ ಮತ್ತು ದೃಶ್ಯಭಾಗದ ದತ್ತಾಂಶವು, SWF ಕಡತಗಳ ಒಳಗೆ ಅವು ಇಡಲ್ಪಟ್ಟಿರುವ ರೀತಿಯಲ್ಲಿಯೇ ಸಂಕೇತಭಾಷೆಯಲ್ಲಿ ಇಡಲ್ಪಟ್ಟಿರುತ್ತವೆ.
.f4v .f4v ಕಡತಗಳು MP4 ಕಡತಗಳನ್ನು ಹೋಲುವಂತಿರುತ್ತವೆ ಮತ್ತು ಫ್ಲ್ಯಾಶ್‌‌‌ ಪ್ಲೇಯರ್‌‌ 9ರ ಪರಿಷ್ಕೃತ ಆವೃತ್ತಿ 3 ಅಥವಾ ಅದಕ್ಕಿಂತ ಮೇಲಿನ ಆವೃತ್ತಿಯಿಂದ ಅವನ್ನು ಮರುಚಾಲಿಸಬಹುದಾಗಿದೆ. F4V ಕಡತ ಸ್ವರೂಪವು ಫ್ಲ್ಯಾಶ್‌‌‌ ವಿಡಿಯೋಗೆ ಸಂಬಂಧಿಸಿದಂತೆ ಎರಡನೇ ಧಾರಕ ಸ್ವರೂಪವಾಗಿದೆ ಮತ್ತು FLV ಕಡತ ಸ್ವರೂಪಕ್ಕಿಂತ ಇದು ವಿಭಿನ್ನವಾಗಿದೆ. ಇದು ISO ಆಧಾರದ ಮೀಡಿಯಾ ಕಡತ ಸ್ವರೂಪವನ್ನು ಆಧರಿಸಿದೆ.[೨೯][೩೦]
.f4p .f4p ಕಡತಗಳು ಡಿಜಿಟಲ್‌ ಹಕ್ಕುಗಳ ವ್ಯವಸ್ಥಾಪನೆಯೊಂದಿಗಿನ F4V ಕಡತಗಳಾಗಿವೆ.[೩೦]
.f4a .f4a ಕಡತಗಳು ಕೇವಲ ಶ್ರವ್ಯಾಂಶದ ಹರಿವುಗಳನ್ನು ಒಳಗೊಂಡಿರುವ F4V ಕಡತಗಳಾಗಿವೆ.[೩೦]
.f4b .f4b ಕಡತಗಳು F4V ಶ್ರವ್ಯಾಂಶ ಪುಸ್ತಕದ ಕಡತಗಳಾಗಿವೆ.[೩೦]
.swc .swc ಕಡತಗಳು ಘಟಕಾಂಶಗಳನ್ನು ವಿತರಿಸಲು ಬಳಸಲ್ಪಡುತ್ತವೆ; ಒಂದು ಸಂಕಲಿಸಿದ ತುಣುಕು, ಘಟಕಾಂಶದ ಆಕ್ಷನ್‌ಸ್ಕ್ರಿಪ್ಟ್‌ ವರ್ಗದ ಕಡತ, ಮತ್ತು ಘಟಕಾಂಶವನ್ನು ವಿವರಿಸುವ ಇತರ ಕಡತಗಳನ್ನು ಅವು ಒಳಗೊಂಡಿರುತ್ತವೆ.
.jsfl .jsfl ಕಡತಗಳನ್ನು ಫ್ಲ್ಯಾಶ್‌‌‌ ನಿರ್ಮಿಸುವಿಕೆಯ ವಾತಾವರಣದಲ್ಲಿ ಕ್ರಿಯಾತ್ಮಕತೆಯನ್ನು ಸೇರಿಸಲು ಬಳಸಲಾಗುತ್ತದೆ; ಅವು ಜಾವಾಸ್ಕ್ರಿಪ್ಟ್‌ ಸಂಕೇತವನ್ನು ಒಳಗೊಂಡಿರುತ್ತವೆ ಮತ್ತು ಫ್ಲ್ಯಾಶ್‌‌‌ ಜಾವಾಸ್ಕ್ರಿಪ್ಟ್‌ APIಯನ್ನು ಅವು ಸಂಪರ್ಕಿಸುತ್ತವೆ.
.swt .swt ಕಡತಗಳು .swf ಕಡತಗಳ 'ಪಡಿಯಚ್ಚುಗೊಳಿಸಿದ' ಸ್ವರೂಪಗಳಾಗಿದ್ದು, ಮ್ಯಾಕ್ರೋಮೀಡಿಯಾ ಜನರೇಟರ್‌ನಿಂದ ಅವು ಬಳಸಲ್ಪಡುತ್ತವೆ.
.flp .flp ಕಡತಗಳು XML ಕಡತಗಳಾಗಿದ್ದು, ಫ್ಲ್ಯಾಶ್‌‌‌ ಪ್ರಾಜೆಕ್ಟ್‌ ಒಂದರಲ್ಲಿ ಒಳಗೊಂಡಿರುವ ಎಲ್ಲಾ ದಸ್ತಾವೇಜು ಕಡತಗಳನ್ನು ಉಲ್ಲೇಖಿಸಲು ಅವು ಬಳಸಲ್ಪಡುತ್ತವೆ. ಫ್ಲ್ಯಾಶ್‌‌‌ ಪ್ರಾಜೆಕ್ಟ್‌ನ ಸಂಘಟನೆ, ಸಂಗ್ರಹಕಾರ್ಯ ಮತ್ತು ನಿರ್ಮಿಸುವಿಕೆಯಲ್ಲಿ ನೆರವಾಗುವ ದೃಷ್ಟಿಯಿಂದ ಬಹುಸಂಖ್ಯೆಯ, ಸಂಬಂಧಿತ ಕಡತಗಳನ್ನು ಒಟ್ಟಾಗಿ ಗುಂಪುಮಾಡುವಲ್ಲಿ ಫ್ಲ್ಯಾಶ್‌‌‌ ಪ್ರಾಜೆಕ್ಟ್‌‌ಗಳು ಬಳಕೆದಾರನಿಗೆ ಅನುವುಮಾಡಿಕೊಡುತ್ತವೆ.
.spl .spl ಕಡತಗಳು ಫ್ಯೂಚರ್‌ಸ್ಪ್ಲ್ಯಾಶ್‌ ದಸ್ತಾವೇಜುಗಳಾಗಿವೆ.
.aso .aso ಕಡತಗಳು ಕ್ಯಾಷ್‌ ಕಡತಗಳಾಗಿದ್ದು, ಸಂಕಲಿಸಲ್ಪಟ್ಟ ಆಕ್ಷನ್‌ಸ್ಕ್ರಿಪ್ಟ್‌ ಬೈಟ್‌ ಸಂಕೇತವನ್ನು ಒಳಗೊಂಡಿರುವ ಫ್ಲ್ಯಾಶ್‌‌‌ ಅಭಿವೃದ್ಧಿಯ ಸಮಯದಲ್ಲಿ ಅವು ಬಳಸಲ್ಪಡುತ್ತವೆ. ASO ಕಡತವೊಂದರ ಸಂಬಂಧಿಸಿದ ವರ್ಗ ಕಡತಗಳಲ್ಲಿನ ಒಂದು ಬದಲಾವಣೆಯು ಪತ್ತೆಹಚ್ಚಲ್ಪಟ್ಟಾಗ, ಒಂದು ASO ಕಡತವು ಮರುಸೃಷ್ಟಿಸಲ್ಪಡುತ್ತದೆ. ಒಂದು ಮರುಸಂಕಲಿಕೆಯು ಅಗತ್ಯವಾಗಿದೆ ಎಂಬುದನ್ನು ಸಾಂದರ್ಭಿಕವಾಗಿ ಫ್ಲ್ಯಾಶ್‌‌‌ IDEಯು ಗುರುತಿಸುವುದಿಲ್ಲ, ಮತ್ತು ಈ ಕ್ಯಾಷ್‌ ಕಡತಗಳನ್ನು ನಾವೇ ಸ್ವತಃ ತೆಗೆದುಹಾಕಬೇಕಾಗುತ್ತದೆ. ಅವು %USERPROFILE%\Local Settings\Application Data\Macromedia\Flash8\en\Configuration\Classes\aso on Win32 / Flash8ನಲ್ಲಿ ನೆಲೆಗೊಂಡಿವೆ.
.sol .sol ಕಡತಗಳು, ಲೋಕಲ್‌ ಷೇರ್ಡ್‌ ಆಬ್ಜೆಕ್ಟ್‌‌ಗಳನ್ನು (ಫ್ಲ್ಯಾಶ್‌‌‌ ಪ್ಲೇಯರ್‌‌ನ್ನು ಚಾಲಿಸುತ್ತಿರುವ ಯಂತ್ರವ್ಯವಸ್ಥೆಯ ಮೇಲಿನ ಶೇಖರಿತ ದತ್ತಾಂಶ‌‌) ಹಿಡಿದಿಟ್ಟುಕೊಳ್ಳುವ ಸಲುವಾಗಿ ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌‌‌‌ನಿಂದ ಸೃಷ್ಟಿಸಲ್ಪಡುತ್ತವೆ.

ಪೈಪೋಟಿ

[ಬದಲಾಯಿಸಿ]

ಮೈಕ್ರೋಸಾಫ್ಟ್‌ ಸಿಲ್ವರ್‌ಲೈಟ್‌

[ಬದಲಾಯಿಸಿ]

ಇತ್ತೀಚಿನ ವರ್ಷಗಳಲ್ಲಿ, ಫ್ಲ್ಯಾಶ್‌‌‌ಗೆ ಒಂದು ಪ್ರಬಲವಾದ ಪ್ರತಿಸ್ಪರ್ಧಿಯಾಗಿ ಮೈಕ್ರೋಸಾಫ್ಟ್‌ ಸಿಲ್ವರ್‌ಲೈಟ್‌ ಹೊರಹೊಮ್ಮಿದೆ. ವೆಬ್‌ ಸೈಟ್‌‌ಗಳ ಮೇಲೆ ಫ್ಲ್ಯಾಶ್‌‌‌ ಈಗಾಗಲೇ ಪ್ರಚಲಿತವಾಗಿರುವಷ್ಟು ಮಟ್ಟದಲ್ಲಿ ಅದು ಇಲ್ಲದಿದ್ದರೂ, ಅನೇಕ ಉನ್ನತ ವಲಯದ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ದೃಶ್ಯಭಾಗದ ಪ್ರವಹಿಸುವಿಕೆಯನ್ನು ಒದಗಿಸಲು ಸಿಲ್ವರ್‌ಲೈಟ್‌ ಬಳಕೆಗೊಳಗಾಗುತ್ತಾ ಬಂದಿದೆ. ಬೀಜಿಂಗ್‌‌ನಲ್ಲಿ[೩೧] ನಡೆದ 2008ರ ಬೇಸಿಗೆ ಒಲಿಂಪಿಕ್ಸ್‌, ವ್ಯಾಂಕೂವರ್‌‌ನಲ್ಲಿ[೩೨] ನಡೆದ 2010ರ ಚಳಿಗಾಲದ ಒಲಿಂಪಿಕ್ಸ್‌, ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಎರಡೂ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ 2008ರ ಔಪಚಾರಿಕ ಸಮ್ಮೇಳನಗಳು ಈ ಉನ್ನತ ವಲಯದ ವಿದ್ಯಮಾನಗಳಲ್ಲಿ ಸೇರಿವೆ.[೩೩] ತನ್ನ ದಿಢೀರ್‌‌ ದೃಶ್ಯಭಾಗ ಪ್ರವಹಿಸುವಿಕೆಯ ಸೇವೆಗೆ ಸಂಬಂಧಿಸಿದಂತೆ ನೆಟ್‌ಫ್ಲಿಕ್ಸ್‌‌‌ನಿಂದಲೂ ಸಹ ಸಿಲ್ವರ್‌ಲೈಟ್‌ ಬಳಸಲ್ಪಟ್ಟಿದೆ.[೩೪]

ಜಾವಾ FX

[ಬದಲಾಯಿಸಿ]

ಸಮೃದ್ಧ ಅಂತರಜಾಲ ಅನ್ವಯಿಕೆಗಳಿಗೆ ಸಂಬಂಧಿಸಿದ ಮತ್ತೊಂದು ಪ್ರತಿಸ್ಪರ್ಧಿ ಎಂದು ಸನ್‌ ಜಾವಾ FX ಪರಿಗಣಿಸಲ್ಪಟ್ಟಿದೆ. ಇದು ಜಾವಾ ಪ್ರೋಗ್ರ್ಯಾಮಿಂಗ್‌ ಭಾಷೆಯನ್ನು ಆಧರಿಸಿದೆ.

ಮುಕ್ತ ಮಾನದಂಡದ ಪರ್ಯಾಯಗಳು

[ಬದಲಾಯಿಸಿ]

W3CSVG ಹಾಗೂ SMIL ಮಾನದಂಡಗಳು ಫ್ಲ್ಯಾಶ್‌‌‌ನ ಅತ್ಯಂತ ನಿಕಟವಾದ ಪ್ರತಿಸ್ಪರ್ಧಿಗಳಾಗಿ ಪರಿಗಣಿಸಲ್ಪಟ್ಟಿವೆ.[೩೫] ಹಿಂದೆ MS ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌‌ಗಾಗಿ ಅಡೋಬ್‌ ಕಂಪನಿಯು 'ಅಡೋಬ್‌ SVG ವ್ಯೂವರ್‌‌' ಗ್ರಾಹಕ ಪ್ಲಗ್‌-ಇನ್‌ನ್ನು ಅಭಿವೃದ್ಧಿಪಡಿಸಿತು ಮತ್ತು ವಿತರಿಸಿತು, ಆದರೆ 2009ರ ಜನವರಿ 1ರಂದು ಇದರ ಬೆಂಬಲ ಹಾಗೂ ವಿತರಣೆಯನ್ನು ಮುಂದುವರಿಸದೆ ನಿಲ್ಲಿಸಿತು.[೩೬] ಉದ್ಯಮ ವ್ಯಾಖ್ಯಾನಕಾರರಿಂದ ವ್ಯಾಖ್ಯಾನಿಸಲ್ಪಟ್ಟಿರುವ ಪ್ರಕಾರ, ಮ್ಯಾಕ್ರೋಮೀಡಿಯಾದ ಫ್ಲ್ಯಾಶ್‌‌ನೊಂದಿಗೆ ಪೈಪೋಟಿ ನಡೆಸುವ ಹಂತದಿಂದ ಸ್ವತಃ ತಂತ್ರಜ್ಞಾನದ ಸ್ವಾಮ್ಯತೆಯನ್ನು ಹೊಂದುವೆಡೆಗೆ ಅಡೋಬ್‌ ಮುಂದಡಿಯಿಟ್ಟು ಚಲಿಸಿದ ಒಂದು ಸಮಯದಲ್ಲಿಯೇ ಇದು ನಡೆದಿದ್ದು ಪ್ರಾಯಶಃ ಕಾಕತಾಳೀಯವಾಗಿರಲಿಲ್ಲ.[೩೭] ಈ ಮಧ್ಯೆ, ಆವೃತ್ತಿ 8ರ ನಂತರದ SVG ಆವೃತ್ತಿಯನ್ನು ಒಪೆರಾ ಬೆಂಬಲಿಸಿದರೆ, ಆವೃತ್ತಿ 3ರ[೩೮] ನಂತರ ಬಂದಿದ್ದನ್ನು ಸಫಾರಿ ಬೆಂಬಲಿಸಿದೆ ಮತ್ತು SVGಗೆ ಸಂಬಂಧಿಸಿದಂತಿರುವ ಮೊಝಿಲ್ಲಾ ಫೈರ್‌ಫಾಕ್ಸ್‌‌‌ನ ಅಂತರ್ನಿರ್ಮಿತ ಬೆಂಬಲವು ತನ್ನ ಬೆಳವಣಿಗೆಯನ್ನು ಮುಂದುವರಿಸಿದೆ.[೩೯][೪೦] UIRA ಎಂಬುದು ಒಂದು ಉಚಿತ ತಂತ್ರಾಂಶ ಯೋಜನೆಯಾಗಿತ್ತು ಮತ್ತು ಅಡೋಬ್‌ ಫ್ಲ್ಯಾಶ್‌ಗೆ ಸಂಬಂಧಿಸಿದಂತೆ ಒಂದು ಸಂಪೂರ್ಣ ಬದಲಿ ಬಳಕೆಯ ಪಾತ್ರವನ್ನು ವಹಿಸುವ ಆಶಯವನ್ನು ಅದು ಹೊಂದಿತ್ತು. 2007ರ ಮಧ್ಯಭಾಗದಲ್ಲಿ ಈ ಯೋಜನೆಯು ಕುಸಿಯಿತಾದರೂ, ಇದನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಅಥವಾ ಮುಂದುವರಿಸುವ ಬಗ್ಗೆ ಜನರು ಈಗ ಚರ್ಚಿಸುತ್ತಿದ್ದಾರೆ[೪೧] ಮತ್ತು ಅಜಾಕ್ಸ್‌ ಅನಿಮೇಟರ್‌‌‌ Archived 2012-02-05 ವೇಬ್ಯಾಕ್ ಮೆಷಿನ್ ನಲ್ಲಿ. ನಂಥ ಇತರ ಕೆಲವು ಯೋಜನೆಗಳು ಇನ್ನೂ ಅಸ್ತಿತ್ವದಲ್ಲಿವೆ. ಫ್ಲ್ಯಾಶ್‌‌ಗೆ ಒಂದು ಪ್ರತಿಸ್ಪರ್ಧಿಯಾಗಿ HTML 5 ಬೇರುಬಿಡುತ್ತಿದೆ: ಕ್ಯಾನ್ವಾಸ್‌ ಅಂಶವು ಅನಿಮೇಷನ್‌ನ್ನು ಶಕ್ಯಗೊಳಿಸುತ್ತದೆ, ಮತ್ತು ಶ್ರವ್ಯಾಂಶ ಹಾಗೂ ದೃಶ್ಯಭಾಗ ಅಂಶದ ಕಾಲಪರಿಷ್ಕರಣ ವಿದ್ಯಮಾನಗಳೊಂದಿಗೆ ಲಿಪಿಗಾರಿಕೆಯನ್ನು ಸಮನ್ವಯಗೊಳಿಸಬಹುದಾಗಿದೆ.

ಅನ್ಯಾರ್ಥ ಅಳವಡಿಸುವಿಕೆ

[ಬದಲಾಯಿಸಿ]

ವಿಶಿಷ್ಟ ವಿವರಣೆಗಳು

[ಬದಲಾಯಿಸಿ]

1998ರ ಅಕ್ಟೋಬರ್‌ನಲ್ಲಿ, ಮ್ಯಾಕ್ರೋಮೀಡಿಯಾವು ತನ್ನ ವೆಬ್‌ಸೈಟ್‌ನಲ್ಲಿ ಫ್ಲ್ಯಾಶ್‌‌‌ ಆವೃತ್ತಿ 3ರ ವಿಶಿಷ್ಟ ವಿವರಣೆಯನ್ನು ವಿಶ್ವಕ್ಕೆ ಹೊರಗೆಡಹಿತು. ಕ್ಸಾರಾದ ಫ್ಲೇರ್‌‌ ಮತ್ತು ಷಾರ್ಪ್‌ನ ಎಕ್ಸ್‌ಟೆಂಡೆಡ್‌ ವೆಕ್ಟರ್‌‌ ಅನಿಮೇಷನ್‌ ಸ್ವರೂಪಗಳಂಥ, SWFನೊಂದಿಗೆ ಸ್ಪರ್ಧಿಸುತ್ತಿರುವ ಅನೇಕ ಹೊಸ ಮತ್ತು ಅರೆ-ಮುಕ್ತ ಸ್ವರೂಪಗಳಿಗೆ ಪ್ರತಿಕ್ರಿಯೆಯಾಗಿ ಅದು ಈ ಕ್ರಮವನ್ನು ಅನುಸರಿಸಿತು. SWFನ್ನು ರೂಪಿಸುವುದಕ್ಕೆ ಸಂಬಂಧಿಸಿದಂತಿರುವ ಒಂದು C ಸಂಗ್ರಹಣೆಯನ್ನು ಹಲವಾರು ಅಭಿವರ್ಧಕರು ಕ್ಷಿಪ್ರವಾಗಿ ಸೃಷ್ಟಿಸಿದರು. 1999ರ ಫೆಬ್ರುವರಿಯಲ್ಲಿ, ಮಾರ್ಫ್‌ಇಂಕ್‌ 99ನ್ನು ಕಂಪನಿಯು ಪರಿಚಯಿಸಿತು. ಇದು SWF ಕಡತಗಳನ್ನು ಸೃಷ್ಟಿಸುವುದಕ್ಕಾಗಿದ್ದ ಮೊದಲ ಅನ್ಯಾರ್ಥ ಕಾರ್ಯಸೂಚಿಯಾಗಿತ್ತು. 3ರಿಂದ 5ರವರೆಗಿನ SWF ಕಡತ ಸ್ವರೂಪದ ಆವೃತ್ತಿಗಳಿಗೆ ಸಂಬಂಧಿಸಿದಂತೆ, ಒಂದು ಉಚಿತವಾಗಿ ಲಭ್ಯವಾಗುವ ಅಭಿವರ್ಧಕರ ಕಿಟ್‌‌ನ್ನು ಸೃಷ್ಟಿಸಲು ಮ್ಯಾಕ್ರೋಮೀಡಿಯಾ ಕೂಡಾ ಮಿಡ್ಲ್‌ಸಾಫ್ಟ್‌‌ನ್ನು ಎರವಲಾಗಿ ಪಡೆಯಿತು. 6ರ ಆವೃತ್ತಿಗಳಿಗಾಗಿ ಮೀಸಲಾಗಿರುವಂತೆ ಫ್ಲ್ಯಾಶ್‌‌‌ ಕಡತಗಳ ವಿಶಿಷ್ಟ ವಿವರಣೆಗಳನ್ನು ಮ್ಯಾಕ್ರೋಮೀಡಿಯಾ ಮಾಡಿತು ಹಾಗೂ ನಂತರ ಕೇವಲ ಒಂದು ಬಹಿರಂಗಪಡಿಸದಿರುವಿಕೆಯ ಒಪ್ಪಂದದ ಅಡಿಯಲ್ಲಿ ಅವು ಲಭ್ಯವಾಗುವಂತಾದವು, ಆದರೆ ಹಲವಾರು ತಾಣಗಳಿಂದ ಅವು ವ್ಯಾಪಕವಾಗಿ ಲಭ್ಯವಾಗುತ್ತಿವೆ. 2006ರ ಏಪ್ರಿಲ್‌‌ನಲ್ಲಿ, ಆಗ ಅತ್ಯಂತ ಹೊಸದಾಗಿದ್ದ ಆವೃತ್ತಿ ಸ್ವರೂಪದ (ಫ್ಲ್ಯಾಶ್‌‌‌ 8) ಮೇಲಿನ ವಿವರಗಳೊಂದಿಗೆ ಫ್ಲ್ಯಾಶ್‌‌‌ SWF ಕಡತ ಸ್ವರೂಪದ ವಿಶಿಷ್ಟ ವಿವರಣೆಯು ಬಿಡುಗಡೆ ಮಾಡಲ್ಪಟ್ಟಿತು. ಸಂಯೋಜಿಸಲ್ಪಟ್ಟ ದೃಶ್ಯಭಾಗದ ಸಂಪೀಡನ ಸ್ವರೂಪಗಳ (ಆನ್‌‌2, ಸೋರೆನ್‌ಸನ್‌ ಸ್ಪಾರ್ಕ್‌, ಇತ್ಯಾದಿ.) ಮೇಲಿನ ನಿರ್ದಿಷ್ಟ ಮಾಹಿತಿಯನ್ನು ಹೊಂದುವಲ್ಲಿ ಇನ್ನೂ ಕೊರತೆಯನ್ನು ಎದುರಿಸುತ್ತಿದ್ದರೂ ಸಹ, ಹೊಸ ಆಕ್ಷನ್‌ಸ್ಕ್ರಿಪ್ಟ್‌ ಆದೇಶಗಳು, ಅಭಿವ್ಯಂಜಕ ಶೋಧಕ ನಿಯಂತ್ರಣಗಳು, ಮತ್ತು ಇನ್ನೂ ಅನೇಕ ಲಕ್ಷಣಗಳೂ ಸೇರಿದಂತೆ ಫ್ಲ್ಯಾಶ್‌‌‌ v8ನಲ್ಲಿ ನೀಡಲ್ಪಟ್ಟಿದ್ದ ಎಲ್ಲಾ ಹೊಸ ಲಕ್ಷಣಗಳನ್ನು ಈ ಹೊಸ ದಾಖಲೆ ಸಂಗ್ರಹಣೆಯು ತನ್ನ ವ್ಯಾಪ್ತಿಯಲ್ಲಿ ಸೇರಿಸಿಕೊಂಡಿತ್ತು. ಒಂದು ಪರವಾನಗಿ ಒಪ್ಪಂದಕ್ಕೆ ಒಪ್ಪುವ ಅಭಿವರ್ಧಕರಿಗೆ ಮಾತ್ರವೇ ಕಡತ ಸ್ವರೂಪದ ವಿಶಿಷ್ಟ ವಿವರಣೆಯ ದಸ್ತಾವೇಜನ್ನು ನೀಡಲಾಗುತ್ತದೆ. ಫ್ಲ್ಯಾಶ್‌‌‌ ಕಡತ ಸ್ವರೂಪಕ್ಕೆ ಕಳಿಸಿಕೊಡಬಲ್ಲ ಕಾರ್ಯಸೂಚಿಗಳನ್ನು ಮಾತ್ರವೇ ಅಭಿವೃದ್ಧಿಪಡಿಸಲು ಈ ವಿಶಿಷ್ಟ ವಿವರಣೆಗಳನ್ನು ಬಳಸುವುದಕ್ಕೆ ಈ ಪರವಾನಗಿ ಒಪ್ಪಂದವು ಅನುಮತಿ ನೀಡುತ್ತದೆ. ಫ್ಲ್ಯಾಶ್‌‌‌ ಕಡತಗಳನ್ನು ಮರುಚಾಲಿಸುವುದಕ್ಕಾಗಿ ಬಳಸಲ್ಪಡುವ ಕಾರ್ಯಸೂಚಿಗಳನ್ನು ಸೃಷ್ಟಿಸಲು ಸದರಿ ವಿಶಿಷ್ಟ ವಿವರಣೆಗಳನ್ನು ಬಳಸದಂತೆ ಸದರಿ ಪರವಾನಗಿಯು ನಿಷೇಧಿಸುತ್ತದೆ. ಇದೇ ಬಗೆಯ ಕಟ್ಟುಪಾಡುಗಳ ಅಡಿಯಲ್ಲಿ ಫ್ಲ್ಯಾಶ್‌‌‌ 9ರ ವಿಶಿಷ್ಟ ವಿವರಣೆಯನ್ನು ದೊರಕಿಸಲಾಯಿತು.[೪೨] 2009ರ ಜೂನ್‌ನಲ್ಲಿ, ಓಪನ್‌ ಸ್ಕ್ರೀನ್‌ ಪ್ರಾಜೆಕ್ಟ್‌‌‌ನ್ನು (ಅಡೋಬ್‌ ಕೊಂಡಿ) ಅಡೋಬ್‌ ಮಾರುಕಟ್ಟೆಗೆ ವಿಧಿವತ್ತಾಗಿ ಬಿಡುಗಡೆಮಾಡಿತು. ಇದು ಯಾವುದೇ ಕಟ್ಟುಪಾಡುಗಳಿಲ್ಲದೆಯೇ SWF ವಿಶಿಷ್ಟ ವಿವರಣೆಯನ್ನು ಲಭ್ಯವಾಗಿಸಿತು. ಇದಕ್ಕೂ ಮುಂಚಿತವಾಗಿ, SWF-ಸಹೋಪಯೋಗಿಯಾದ ಪ್ಲೇಯರ್‌‌ಗಳನ್ನು ರೂಪಿಸುವುದಕ್ಕೆ ಸಂಬಂಧಿಸಿದಂತೆ ಅಭಿವರ್ಧಕರು ವಿಶಿಷ್ಟ ವಿವರಣೆಯನ್ನು ಬಳಸುವಂತಿರಲಿಲ್ಲ, ಆದರೆ SWFನ್ನು-ಕಳಿಸಿಕೊಡುವ ನಿರ್ಮಿಸುವಿಕೆಯ ತಂತ್ರಾಂಶವನ್ನು ರೂಪಿಸುವುದಕ್ಕಾಗಿ ಮಾತ್ರವೇ ಅದನ್ನು ಬಳಸಬಹುದಾಗಿತ್ತು. ಆದಾಗ್ಯೂ, ಸೋರೆನ್‌ಸನ್‌ ಸ್ಪಾರ್ಕ್‌‌‌‌‌ನಂಥ ಕೋಡೆಕ್‌ಗಳ ಮೇಲಿನ ಮಾಹಿತಿಯನ್ನು ವಿಶಿಷ್ಟ ವಿವರಣೆಯು ಈಗಲೂ ಬಿಟ್ಟುಬಿಡುತ್ತದೆ.[೪೩]

ಮರುಚಾಲಿಸುವಿಕೆ

[ಬದಲಾಯಿಸಿ]

SVGಯಂಥ ಒಂದು ಮುಕ್ತ ಮಾನದಂಡದ ಮೇಲೆ ಫ್ಲ್ಯಾಶ್‌‌‌ ಕಡತಗಳು ಅವಲಂಬಿತವಾಗುವುದಿಲ್ಲವಾದ್ದರಿಂದ, ಸ್ವರೂಪವನ್ನು ಬೆಂಬಲಿಸಲು ಇರುವ ವ್ಯಾಪಾರಿ-ಉದ್ದೇಶದ್ದಲ್ಲದ ತಂತ್ರಾಂಶಕ್ಕೆ ಸಂಬಂಧಿಸಿದ ಉತ್ತೇಜನವನ್ನು ಇದು ತಗ್ಗಿಸುತ್ತದೆ; ಆದರೂ ಸಹ SWF ಕಡತ ಸ್ವರೂಪವನ್ನು ಬಳಸುವ ಮತ್ತು ಸೃಷ್ಟಿಸುವ ಹಲವಾರು ಅನ್ಯಾರ್ಥ ಸಲಕರಣೆಗಳು ಲಭ್ಯವಿವೆ. ಒಂದು ಅಪ್ಪಟವಾದ ಮುಕ್ತ ಮೂಲದ, ಅಥವಾ ಸಂಪೂರ್ಣವಾಗಿ ಉಚಿತವಾಗಿರುವ ಕಾರ್ಯಾಚರಣಾ ವ್ಯವಸ್ಥೆಯ ಭಾಗವಾಗಿ ಫ್ಲ್ಯಾಶ್‌‌‌ ಪ್ಲೇಯರ್‌‌ ನೀಡಲ್ಪಡುವುದಿಲ್ಲ. ಏಕೆಂದರೆ, ಇದರ ವಿತರಣೆಯು ಮ್ಯಾಕ್ರೋಮೀಡಿಯಾ ಪರವಾನಗಿಯ ಕಾರ್ಯಸೂಚಿ ಯ ಕಟ್ಟುಪಾಡಿಗೆ ಮತ್ತು ಅನುಮೋದನೆಗೆ ಒಳಪಟ್ಟಿದೆ. 2008ರ ಅಂತ್ಯದ ವೇಳೆಗೆ ಇದ್ದಂತೆ, ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌ನ ವಿನೂತನ ಆವೃತ್ತಿಯ ಎಲ್ಲಾ ಕ್ರಿಯಾತ್ಮಕತೆಯನ್ನು ನೀಡುವ, ಸಂಪೂರ್ಣ ಉಚಿತವಾದ ಯಾವುದೇ ಬದಲಿ ತಂತ್ರಾಂಶವು ಲಭ್ಯವಿಲ್ಲ. ಗ್ನಾಶ್‌ ಒಂದು ಸಕ್ರಿಯ ಯೋಜನೆಯಾಗಿದ್ದು, ಅಡೋಬ್‌ ಫ್ಲ್ಯಾಶ್‌ ಕಡತ ಸ್ವರೂಪಕ್ಕೆ ಸಂಬಂಧಿಸಿದಂತೆ ಒಂದು ಉಚಿತವಾದ ಪ್ಲೇಯರ್‌ ಹಾಗೂ ಬ್ರೌಸರ್‌‌ ಪ್ಲಗ್‌ಇನ್‌ನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಮತ್ತು ತನ್ಮೂಲಕ GNU ಸಾರ್ವತ್ರಿಕ ಸಾರ್ವಜನಿಕ ಪರವಾನಗಿಯ ಅಡಿಯಲ್ಲಿ ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌‌ಗೆ ಒಂದು ಉಚಿತವಾದ ಪರ್ಯಾಯವನ್ನು ಒದಗಿಸುವುದು ಅದರ ಉದ್ದೇಶವಾಗಿದೆ. ಇದರಲ್ಲಿ ತೊಡಗಿಸಿಕೊಂಡಿರುವ[೪೪] ಕಡತಗಳ ಸ್ವಂತ-ಸ್ವಾಮ್ಯದ ಸ್ವರೂಪದ ಕಾರಣದಿಂದಾಗಿ ಉದ್ಭವವಾಗುವ ಸಂಭವನೀಯ ಹಕ್ಕುಸ್ವಾಮ್ಯದ ಚಿಂತೆಗಳ ಹೊರತಾಗಿಯೂ, ಬಹುಪಾಲು SWF v7 ಲಕ್ಷಣಗಳು ಹಾಗೂ ಕೆಲವೊಂದು SWF v8 ಹಾಗೂ v9ಗಳನ್ನು ಗ್ನಾಶ್‌ ಬೆಂಬಲಿಸುತ್ತದೆ.[೪೫][೪೬] 32-ಬಿಟ್‌, 64-ಬಿಟ್‌ ಮತ್ತು ಇತರ ವಿನ್ಯಾಸಗಳ ಮೇಲಿನ ವಿಂಡೋಸ್‌‌, ಲೈನಕ್ಸ್‌ ಹಾಗೂ ಇತರ ಕಾರ್ಯಾಚರಣಾ ವ್ಯವಸ್ಥೆಗಳ ಮೇಲೆ ಗ್ನಾಶ್‌ ಓಡುತ್ತದೆ. ಲೈನಕ್ಸ್‌, ಫ್ರೀBSD ಮತ್ತು ಓಪನ್‌BSDಗಳಿಗೆ ಸಂಬಂಧಿಸಿದಂತೆ Swfಡೆಕ್‌ ಎಂಬುದು ಲಭ್ಯವಿರುವ ಮತ್ತೊಂದು ಮುಕ್ತ-ಮೂಲದ ಫ್ಲ್ಯಾಶ್‌‌‌ ಪ್ಲೇಯರ್‌‌ ಆಗಿದೆ. ಇದನ್ನೂ ನೋಡಿ: SWFಓಪನರ್. ಸ್ಕೇಲ್‌ಫಾರ್ಮ್ GFx ಎಂಬುದು ಒಂದು ವ್ಯಾಪಾರಿ ಪರ್ಯಾಯ ಫ್ಲ್ಯಾಶ್‌‌‌ ಪ್ಲೇಯರ್‌‌ ಆಗಿದ್ದು, GPUಯನ್ನು ಬಳಸಿಕೊಂಡಿರುವ ಸಂಪೂರ್ಣ ಯಂತ್ರಾಂಶ ವೇಗವರ್ಧನೆಯನ್ನು ಅದು ಒಳಗೊಂಡಿದೆ ಮತ್ತು ಫ್ಲ್ಯಾಶ್‌‌‌ 8ರವರೆಗೆ ಮತ್ತು AS2ಗೆ ಉನ್ನತವಾದ ಅನುಸರಣೆಯನ್ನು ಅದು ಹೊಂದಿದೆ. ಒಂದು ಗೇಮ್‌ ಮಿಡ್ಲ್‌ವೇರ್‌‌ ಪರಿಹಾರೋಪಾಯವಾಗಿ ಸ್ಕೇಲ್‌ಫಾರ್ಮ್‌ GFx ಪರವಾನಗಿಯನ್ನು ಪಡೆದಿದ್ದು, ಬಳಕೆದಾರ ಇಂಟರ್‌ಫೇಸ್‌ಗಳು, HUDಗಳು, ಕಿರು ಆಟಗಳು, ಹಾಗೂ ದೃಶ್ಯಭಾಗದ ಮರುಚಾಲನೆಗೆ ಸಂಬಂಧಿಸಿದ ಅನೇಕ PC ಹಾಗೂ ಕನ್ಸೋಲ್‌ 3D ಆಟಗಳಿಂದ ಇದು ಬಳಸಲ್ಪಡುತ್ತದೆ. rtmpdump ಎಂಬುದು ಓರ್ವ RTMP ಗ್ರಾಹಕನ ಒಂದು ಮುಕ್ತ ಮೂಲದ ತಂತ್ರಾಂಶ ಅಳವಡಿಕೆಯಾಗಿದ್ದು, ಅದು ಫ್ಲ್ಯಾಶ್‌‌‌ನ ಸ್ವಂತದ ಪ್ರವಹಿಸುವಿಕೆಯ ವಿಧ್ಯುಕ್ತ ನಿರೂಪಣೆಯಾಗಿದೆ. ಅಡೋಬ್‌ನಿಂದ ಬಂದ ಮನವಿಯ ಮೇರೆಗೆ rtmpdumpನ್ನು ಸೋರ್ಸ್‌ಫೋರ್ಜ್‌‌‌‌‌ನಿಂದ ತೆಗೆದುಹಾಕಲಾಯಿತು. flvಸ್ಟ್ರೀಮರ್‌‌ ಎಂಬುದು ಓರ್ವ RTMP ಗ್ರಾಹಕನ ಮುಕ್ತ ಮೂಲದ ತಂತ್ರಾಂಶ ಅಳವಡಿಕೆಯಾಗಿದ್ದು, ಅದು ಫ್ಲ್ಯಾಶ್‌‌‌ನ ಸ್ವಂತದ ಪ್ರವಹಿಸುವಿಕೆಯ ವಿಧ್ಯುಕ್ತ ನಿರೂಪಣೆಯಾಗಿದೆ. ಇದು rtmpdumpನ ಒಂದು ಕವಲಾಗಿದ್ದು, ಸಂಕೇತದಿಂದ ತೆಗೆದುಹಾಕಲ್ಪಟ್ಟ ಗೂಢಲಿಪಿಶಾಸ್ತ್ರದ ಎಲ್ಲಾ ಬೆಂಬಲವನ್ನು (ಅಂದರೆ RTMPE ಹಾಗೂ SWF ಪರಿಶೀಲನೆ) ಹೊಂದಿದೆ.

ಭದ್ರತೆ

[ಬದಲಾಯಿಸಿ]

ಫ್ಲ್ಯಾಶ್‌‌‌ನ್ನು ಅಳವಡಿಸಿಕೊಳ್ಳದಿರುವಂತೆ ಅಥವಾ ಅದಕ್ಕೆ[೪೭] ತಡೆಯೊಡ್ಡುವಂತೆ ಹಲವಾರು ಸುರಕ್ಷತಾ ಪರಿಣಿತರು ಶಿಫಾರಸು ಮಾಡುವುದಕ್ಕೆ ಫ್ಲ್ಯಾಶ್‌‌‌ನ ಸುರಕ್ಷತಾ ದಾಖಲೆಯು[೪೮] ಕಾರಣವಾಗಿದೆ. ನೋಸ್ಕ್ರಿಪ್ಟ್‌[೪೯] ಬಳಸುವ ಮೂಲಕ ಫ್ಲ್ಯಾಶ್‌‌‌ಗೆ ತಡೆಯೊಡ್ಡಲು US-CERT ಶಿಫಾರಸು ಮಾಡುತ್ತದೆ. ಚಾರ್ಲೀ ಮಿಲ್ಲರ್ ಎಂಬಾತ "ಫ್ಲ್ಯಾಶ್‌‌‌ನ್ನು ಅಳವಡಿಸದಿರುವಂತೆ"[೫೦] ಕಂಪ್ಯೂಟರ್‌ ಸುರಕ್ಷತಾ ಸಮ್ಮೇಳನವಾದ ಕ್ಯಾನ್‌ಸೆಕ್‌ವೆಸ್ಟ್‌‌ನಲ್ಲಿ ಶಿಫಾರಸು ಮಾಡಿದ. 2010ರ ಮೇ 17ರ ವೇಳೆಗೆ ಇದ್ದಂತೆ, ಫ್ಲ್ಯಾಶ್‌‌‌ ಪ್ಲೇಯರ್‌ 77 CVE ನಮೂದುಗಳನ್ನು[೫೧] ಹೊಂದಿದ್ದು, ಅವುಗಳ ಪೈಕಿ 34 ನಮೂದುಗಳು ಒಂದು ಉನ್ನತವಾದ ತೀಕ್ಷ್ಣತೆಯೊಂದಿಗಿನ ಶ್ರೇಯಾಂಕವನ್ನು (ಇದು ಅನಿಯಂತ್ರಿತ ಸಂಕೇತ ನೆರವೇರಿಕೆಗೆ ಕಾರಣವಾಗುತ್ತದೆ), ಮತ್ತು 40 ನಮೂದುಗಳು ಮಧ್ಯಮ ಶ್ರೇಯಾಂಕವನ್ನು ಪಡೆದಿವೆ. 1 ವರ್ಷಕ್ಕೂ ಹೆಚ್ಚಿನ ಅವಧಿಯವರೆಗೆ ಒಂದು ತಿಳಿದ ಭೇದ್ಯತೆಯನ್ನು ಪರಿಹರಿಸಲಾಗದ ಕಾರಣಕ್ಕಾಗಿ, 2010ರ ಫೆಬ್ರುವರಿಯಲ್ಲಿ ಅಡೋಬ್‌ ಅಧಿಕೃತವಾಗಿ ಕ್ಷಮೆ ಕೋರಿತು.[೫೨] ಸಿಮನ್‌ಟೆಕ್‌‌ನ ಅಂತರಜಾಲ ಸುರಕ್ಷತಾ ಬೆದರಿಕೆಯ ವರದಿಯು[೫೩] ತಿಳಿಸುವ ಪ್ರಕಾರ, ಅಡೋಬ್‌ ರೀಡರ್‌‌ ಹಾಗೂ ಫ್ಲ್ಯಾಶ್‌‌‌ ಪ್ಲೇಯರ್‌‌ನಲ್ಲಿನ[೫೪] ಒಂದು ದೂರದ ಸಂಕೇತ ನೆರವೇರಿಕೆಯು 2009ರಲ್ಲಿನ ಎರಡನೇ ಅತಿಹೆಚ್ಚು ದಾಳಿಗೊಳಗಾದ ಭೇದ್ಯತೆಯಾಗಿತ್ತು. ಅವಿಶ್ವಸನೀಯ ತಾಣಗಳಿಗೆ ಭೇಟಿನೀಡುವಾಗ ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌ನ್ನು ಅನರ್ಹಗೊಳಿಸಲು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬ್ರೌಸರ್‌‌ ಆಡ್‌-ಆನ್‌ಗಳನ್ನು ಬಳಸಿಕೊಳ್ಳಲು ಇದೇ ವರದಿಯು ಶಿಫಾರಸುಗಳನ್ನು ಮಾಡಿತು. ಮೆಕ್‌ಅಫೀ ಊಹಿಸುವ ಪ್ರಕಾರ, ಅಡೋಬ್‌ ತಂತ್ರಾಂಶ, ಅದರಲ್ಲೂ ವಿಶೇಷವಾಗಿ ರೀಡರ್‌ ಮತ್ತು ಫ್ಲ್ಯಾಶ್‌‌‌ಗಳು 2010ರಲ್ಲಿ[೫೫] ದಾಳಿಗಳಿಗೆ ಸಂಬಂಧಿಸಿದಂತೆ ಪ್ರಧಾನ ಗುರಿಯಾಗಲಿವೆ. 2009ರ[೫೬] ಕೊನೆಯ ತ್ರೈಮಾಸಿಕದ ಅವಧಿಯಲ್ಲಿ ದಾಳಿಕೋರರಿಗೆ ಸಂಬಂಧಿಸಿದಂತೆ ಅಡೋಬ್‌ ಅನ್ವಯಿಕೆಗಳಾಗಲೇ ಅತ್ಯಂತ ಜನಪ್ರಿಯ ಗ್ರಾಹಕ-ತಂತ್ರಾಂಶದ ಗುರಿಗಳಾಗಿ ಮಾರ್ಪಟ್ಟಿದ್ದವು.

ಲೋಕಲ್‌ ಷೇರ್‌ಡ್‌ ಆಬ್ಜೆಕ್ಟ್‌ಗಳು ("ಫ್ಲ್ಯಾಶ್‌‌‌ ಕುಕೀಗಳು")

[ಬದಲಾಯಿಸಿ]

HTTP ಕುಕೀಯಂತೆ, ಒಂದು ಫ್ಲ್ಯಾಶ್‌‌‌ ಕುಕೀಯನ್ನು (ಇದಕ್ಕೆ ಲೋಕಲ್‌ ಷೇರ್ಡ್‌ ಆಬ್ಜೆಕ್ಟ್‌ ಎಂದೂ ಹೆಸರಿದೆ) ಅನ್ವಯಿಕೆಯ ದತ್ತಾಂಶವನ್ನು ಉಳಿಸಲು ಬಳಸಿಕೊಳ್ಳಬಹುದು. ಫ್ಲ್ಯಾಶ್‌‌‌ ಕುಕೀಗಳು ಡೊಮೈನ್‌ಗಳ ಆದ್ಯಂತ ಹಂಚಿಕೆಗೆ ಒಳಪಡುವುದಿಲ್ಲ. 2009ರ ಆಗಸ್ಟ್‌‌ನಲ್ಲಿ ಸೋಷಿಯಲ್‌ ಸೈನ್ಸ್‌ ರಿಸರ್ಚ್‌ ನೆಟ್‌ವರ್ಕ್‌‌‌ ವತಿಯಿಂದ ಕೈಗೊಳ್ಳಲಾದ ಅಧ್ಯಯನವೊಂದು ಕಂಡುಕೊಂಡ ಪ್ರಕಾರ, ಫ್ಲ್ಯಾಶ್‌ನ್ನು ಬಳಸುತ್ತಿರುವ ವೆಬ್‌ತಾಣಗಳ ಪೈಕಿ 50%ನಷ್ಟು ತಾಣಗಳು ಫ್ಲ್ಯಾಶ್‌‌‌ ಕುಕೀಗಳನ್ನೂ ಬಳಸಿಕೊಳ್ಳುತ್ತಿದ್ದರೂ ಸಹ, ಗೋಪ್ಯತೆಯ ಕಾರ್ಯನೀತಿಗಳು ಅವುಗಳನ್ನು ಹೊರಗೆಡಹಿದ್ದು ಅಪರೂಪವಾಗಿತ್ತು, ಮತ್ತು ಗೋಪ್ಯತೆಯ ಆದ್ಯತೆಗಳಿಗೆ ಸಂಬಂಧಿಸಿದ ಬಳಕೆದಾರ ನಿಯಂತ್ರಣಗಳು ಇಲ್ಲದಿದ್ದುದು ಒಂದು ಕೊರತೆಯಾಗಿತ್ತು.[೫೭] ಬಹುಪಾಲು ಬ್ರೌಸರ್‌‌ಗಳ ಕ್ಯಾಷ್‌ ಮತ್ತು ಇತಿಹಾಸದ ದಮನಮಾಡುವ ಅಥವಾ ತೆಗೆದುಹಾಕುವ ಕಾರ್ಯಚಟುವಟಿಕೆಗಳು, ತನ್ನದೇ ಸ್ವಂತದ ಕ್ಯಾಷ್‌ಗೆ ಫ್ಲ್ಯಾಶ್‌‌‌ ಪ್ಲೇಯರ್ ಲೋಕಲ್‌ ಷೇರ್ಡ್‌ ಆಬ್ಜೆಕ್ಟ್‌ಗಳನ್ನು ಬರೆದುಕೊಳ್ಳುವುದಕ್ಕೆ ಅಡ್ಡಿಪಡಿಸುವುದಿಲ್ಲ, ಮತ್ತು HTTP ಕುಕೀಗಳಿಗಿಂತ[೫೮] ಫ್ಲ್ಯಾಶ್‌‌‌ ಕುಕೀಗಳ ಅಸ್ತಿತ್ವ ಹಾಗೂ ಕಾರ್ಯಚಟುವಟಿಕೆಯ ಕುರಿತು ಬಳಕೆದಾರ ಸಮುದಾಯಕ್ಕೆ ಇರುವ ಅರಿವಿನ ಪ್ರಮಾಣ ತುಂಬಾ ಕಡಿಮೆ. ಈ ರೀತಿಯಾಗಿ, HTTP ಕುಕೀಗಳನ್ನು ತೆಗೆದುಹಾಕಿರುವ ಮತ್ತು ಬ್ರೌಸರ್‌‌ ಇತಿಹಾಸದ ಕಡತಗಳು ಹಾಗೂ ಕ್ಯಾಷ್‌ಗಳನ್ನು ಅಳಿಸಿಹಾಕಿರುವ ಬಳಕೆದಾರರು, ತಮ್ಮ ಕಂಪ್ಯೂಟರ್‌ಗಳಿಂದ ಜಾಡುಹಿಡಿಯುವ ಎಲ್ಲಾ ದತ್ತಾಂಶವನ್ನೂ ತಾವು ಅಳಿಸಿಹಾಕಿರುವುದಾಗಿ ಭಾವಿಸುತ್ತಾರೆ, ಆದರೆ ವಾಸ್ತವವಾಗಿ ಫ್ಲ್ಯಾಶ್‌‌‌ ಬ್ರೌಸಿಂಗ್‌‌ ಇತಿಹಾಸವು ಉಳಿದುಕೊಂಡಿರುತ್ತದೆ. ಅಡೋಬ್‌ನ ಸ್ವಂತದ ಫ್ಲ್ಯಾಶ್‌‌‌ ವೆಬ್‌ಸೈಟ್‌ ಸ್ಟೋರೇಜ್‌ ಸೆಟಿಂಗ್ಸ್‌ ಪ್ಯಾನಲ್‌, ಅಡೋಬ್‌ನ ಫ್ಲ್ಯಾಶ್‌‌‌ ಸೆಟಿಂಗ್ಸ್‌ ಮ್ಯಾನೇಜರ್‌ ವೆಬ್‌ ಅಪ್ಲಿಕೇಷನ್‌‌‌‌ ನ ಒಂದು ಉಪ ಸೇವಾಪಟ್ಟಿ, ಮತ್ತು ಇತರ ಪರಿಷ್ಕಾರಕಗಳು ಮತ್ತು ಸಲಕರಣೆಯ ಕಿಟ್‌ಗಳು ಫ್ಲ್ಯಾಶ್‌‌‌ ಲೋಕಲ್‌ ಷೇರ್ಡ್‌ ಆಬ್ಜೆಕ್ಟ್‌ಗಳಿಗೆ[೫೯] ಸಂಬಂಧಿಸಿದಂತೆ ಹಾಗೂ ಅವನ್ನು ತೆಗೆದುಹಾಕಲು ಸಜ್ಜಿಕೆಗಳನ್ನು ನಿರ್ವಹಿಸಬಲ್ಲವು.

ಕಾರ್ಯನಿರ್ವಹಣೆ

[ಬದಲಾಯಿಸಿ]
  • ದೃಶ್ಯಭಾಗದ ಮೂಡಿಸುವಿಕೆಗಳ ಮೇಲ್ಭಾಗದಲ್ಲಿ ಚಲನೆಯ ರೂಪ ಕೊಡಲು ಯಾವುದೇ ಫ್ಲ್ಯಾಶ್‌‌‌ ಪ್ಲೇಯರ್‌‌ ಸಮರ್ಥವಾಗಿರಬೇಕಾಗುತ್ತದೆ. ಇದರಿಂದಾಗಿ ಒಂದು ಉದ್ದೇಶ ನಿರ್ಮಿತ ಮಲ್ಟಿಮೀಡಿಯಾ ಪ್ಲೇಯರ್‌‌‌‌ನೊಂದಿಗೆ ಕಂಡುಬರುವಂತೆ ಕಡೇಪಕ್ಷ ಒಂದು ತೊಡಕಿಲ್ಲದ ಮೂಡಿಸುವಿಕೆಗಳಂತಿರದ ಯಂತ್ರಾಂಶದ ವೇಗವರ್ಧಿತ ದೃಶ್ಯಭಾಗದ ಮೂಡಿಸುವಿಕೆಯನ್ನು ಉಂಟುಮಾಡಲು ಸಾಧ್ಯವಾಗುತ್ತದೆ.[೬೦] ಆದ್ದರಿಂದ, ಕೇವಲ ದೃಶ್ಯಭಾಗವನ್ನಷ್ಟೇ ಪ್ರದರ್ಶಿಸುವಾಗಲೂ ಸಹ, ಮುಡಿಪಾಗಿಟ್ಟಿರುವ ದೃಶ್ಯಭಾಗದ ಪ್ಲೇಯರ್‌‌ ತಂತ್ರಾಂಶಕ್ಕಿಂತಲೂ ಫ್ಲ್ಯಾಶ್‌‌‌ ಪ್ಲೇಯರ್‌‌ಗಳು ಹೆಚ್ಚು ಸಂಪನ್ಮೂಲ ಕೇಂದ್ರೀಕೃತವಾಗಿರುತ್ತವೆ.
  • ಹೋಲಿಕೆಗಳು ತೋರಿಸಿರುವ ಪ್ರಕಾರ, ಮ್ಯಾಕ್‌ OSX ಮತ್ತು ಲೈನಕ್ಸ್‌‌ಗಿಂತಲೂ ಅದೇ ಯಂತ್ರಾಂಶದೊಂದಿಗಿನ ವಿಂಡೋಸ್‌‌ ಮೇಲೆ ಅಡೋಬ್‌ ಫ್ಲ್ಯಾಶ್‌ ಪ್ಲೇಯರ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.[೬೧][೬೨]

ಪ್ರವೇಶ ಲಭ್ಯತೆ

[ಬದಲಾಯಿಸಿ]

ಫ್ಲ್ಯಾಶ್‌‌‌ನ್ನು ಬಳಸುವುದರಿಂದ ಸಾಮಾನ್ಯ HTML ಪುಟಗಳೊಂದಿಗೆ ಸಂಬಂಧವನ್ನು ಹೊಂದಿರುವ ಔಪಚಾರಿಕ ರೂಢಿಗಳು ಮುರಿದುಹೋಗುವ ಪ್ರವೃತ್ತಿಯು ಕಂಡುಬರುತ್ತದೆ. ಪಠ್ಯವನ್ನು ಆಯ್ಕೆಮಾಡುವುದು, ಮೇಲೆ-ಕೆಳಗೆ ಚಲಿಸುವುದು,[೬೩] ಸ್ವರೂಪ ನಿಯಂತ್ರಣ ಮತ್ತು ಮೌಸ್‌ನ ಬಲಭಾಗದ ಗುಂಡಿಯನ್ನು ಕ್ಲಿಕ್ಕಿಸುವಿಕೆ ಇವೇ ಮೊದಲಾದ ಪ್ರಕ್ರಿಯೆಗಳು, ಒಂದು ವಾಡಿಕೆಯ HTML ವೆಬ್‌ಪುಟದೊಂದಿಗೆ ನಡೆಯುವುದಕ್ಕಿಂತ ವಿಭಿನ್ನವಾಗಿ ನಡೆಯುತ್ತವೆ. ಇಂಟರ್‌ಫೇಸ್‌ನ ಇಂಥ ಅನೇಕ ಅನಿರೀಕ್ಷಿತತೆಗಳನ್ನು ವಿನ್ಯಾಸಕಾರರಿಂದ ಸರಿಪಡಿಸಲು ಸಾಧ್ಯವಿದೆ. ಉಪಯುಕ್ತತೆಯ ಕುರಿತಾದ ಜಾಕೋಬ್‌ ನೀಲ್‌ಸೆನ್‌ ಎಂಬ ಓರ್ವ ಪರಿಣಿತನು, ಫ್ಲ್ಯಾಶ್‌‌‌: 99% ಬ್ಯಾಡ್‌‌ ಎಂಬ ಶೀರ್ಷಿಕೆಯ ಅಡಿಯಲ್ಲಿ 2000ದಲ್ಲಿ ಒಂದು ಅಲರ್ಟ್‌ಬಾಕ್ಸ್‌ನ್ನು ಪ್ರಕಟಿಸಿದ್ದು, ಈ ಬಗೆಯ ಸಮಸ್ಯೆಗಳನ್ನು ಅದು ಪಟ್ಟಿಮಾಡಿದೆ.[೬೪] ನೀಲ್‌ಸೆನ್‌‌ನಿಂದ ದೂರುಗಳು ಬಂದಾಗಿನಿಂದ ಕೆಲವೊಂದು ಸಮಸ್ಯೆಗಳನ್ನು ಸುಧಾರಿಸಲಾಗಿದೆ:

  • ಅನೇಕ ಆಧುನಿಕ ಬ್ರೌಸರ್‌‌ಗಳಲ್ಲಿ ಕಂಡುಬರುವಂತೆ, ಸಂಪೂರ್ಣ ಪುಟದ ಸಮೀಪೀಕರಣದ ಆಯ್ಕೆಯನ್ನು ಬಳಸಿಕೊಳ್ಳುವ ಮೂಲಕ ಪಠ್ಯದ ಗಾತ್ರವನ್ನು ನಿಯಂತ್ರಿಸಬಹುದಾಗಿದೆ.
  • ಫ್ಲ್ಯಾಶ್‌‌‌ ಪ್ಲೇಯರ್‌‌ 6 ಆವೃತ್ತಿಯು ಬಂದಾಗಿನಿಂದ ಫ್ಲ್ಯಾಶ್‌‌‌ನಲ್ಲಿ ಪರ್ಯಾಯ ಪಠ್ಯವನ್ನು ಸೇರಿಸಲು ಲೇಖಕರಿಗೆ ಸಾಧ್ಯವಾಗುತ್ತಾ ಬಂದಿದೆ. ಈ ಪ್ರವೇಶ ಲಭ್ಯತೆಯ ಲಕ್ಷಣವು ಕೇವಲ ಕೆಲವೊಂದು ಸ್ಕ್ರೀನ್‌ ರೀಡರ್‌ಗಳೊಂದಿಗೆ ಮತ್ತು ಕೇವಲ ವಿಂಡೋಸ್‌‌ ಅಡಿಯಲ್ಲಿ ಮಾತ್ರವೇ ಹೊಂದಿಕೊಂಡುಹೋಗುತ್ತದೆ.[೬೫]

ಅಸಾಮರ್ಥ್ಯಗಳೊಂದಿಗಿನ ಅಮೆರಿಕನ್ನರಿಗೆ ಸಂಬಂಧಿಸಿದ 1990ರ ಕಾಯಿದೆಗೆ ಸಂಬಂಧಿಸಿದಂತೆ, US ನ್ಯಾಯ ಇಲಾಖೆಯು ಈ ಕೆಳಕಂಡಂತೆ ಹೇಳಿಕೆ ನೀಡಿದೆ:[೬೬]

ADA ಅಡಿಯಲ್ಲಿ ಬರುವ ವ್ಯವಹಾರದ ಅಸ್ತಿತ್ವಗಳು, ಅವು ಮುದ್ರಣ ಮಾಧ್ಯಮ, ಶ್ರವಣ ಮಾಧ್ಯಮ, ಅಥವಾ ಅಂತರಜಾಲದಂಥ ಗಣಕೀಕೃತ ಮಾಧ್ಯಮದ ಮೂಲಕ ಸಾಮಾನ್ಯವಾಗಿ ಸಂವಹನ ನಡೆಸುತ್ತವೆಯೇ ಎಂಬುದನ್ನು ಲೆಕ್ಕಿಸದೆ ಪರಿಣಾಮಕಾರಿ ಸಂವಹನೆಯನ್ನು ಒದಗಿಸುವುದು ಅಗತ್ಯವಾಗಿದೆ. ತಮ್ಮ ಕಾರ್ಯಸೂಚಿಗಳು, ಸರಕುಗಳು, ಅಥವಾ ಸೇವೆಗಳಿಗೆ ಸಂಬಂಧಿಸಿದ ಸಂವಹನೆಗಳಿಗಾಗಿ ಅಂತರಜಾಲವನ್ನು ಬಳಸುವ, ಈ ಕಾಯಿದೆಯ ವ್ಯಾಪ್ತಿಗೊಳಪಟ್ಟ ವ್ಯವಹಾರದ ಅಸ್ತಿತ್ವಗಳು, ಆ ಸಂವಹನೆಗಳನ್ನು ಪ್ರವೇಶಸಾಧ್ಯ ಮಾರ್ಗಗಳ ಮೂಲಕ ಒದಗಿಸಲೂ ಸಹ ಸಿದ್ಧವಾಗಿರಬೇಕು.

ಮುಕ್ತ ವೆಬ್‌ಗೆ ಪ್ರತಿಯಾಗಿರುವ ಸ್ವಂತ-ಸ್ವಾಮ್ಯದ ಪ್ಲಗ್‌ಇನ್‌ಗಳು

[ಬದಲಾಯಿಸಿ]

ಫ್ಲ್ಯಾಶ್‌‌‌ನ ಸ್ವಂತ ಸ್ವಾಮ್ಯದ ಸ್ವರೂಪವು, ಮುಕ್ತ ಮಾನದಂಡಗಳು ಮತ್ತು ಮುಕ್ತ ತಂತ್ರಾಂಶದ ಪ್ರತಿಪಾದಕರಿಗೆ ಒಂದು ಕಾಳಜಿಯ ವಿಷಯವಾಗಿದೆ. ಇಂಥ ಕೆಲವೊಂದು ವೀಕ್ಷಕರ ಪ್ರಕಾರ, ವ್ಯಾಪಕವಾಗಿ ಹಬ್ಬಿರುವ ಇದರ ಬಳಕೆಯು ವರ್ಲ್ಡ್‌‌ ವೈಡ್‌‌ ವೆಬ್‌‌‌‌ನ ಅನ್ಯಥಾ ಮುಕ್ತ ಸ್ವರೂಪಕ್ಕೆ ಹಾನಿಯುಂಟುಮಾಡಿದೆ.[೬೭] ಇದಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಯೊಂದನ್ನು ಅಡೋಬ್‌ನ ಓಪನ್‌ ಸ್ಕ್ರೀನ್‌ ಪ್ರಾಜೆಕ್ಟ್‌‌‌ನಲ್ಲಿ ಕಾಣಬಹುದು. CSSನ ಆವಿಷ್ಕಾರಕ ಹಾಗೂ HTML5ನ ಸಹ-ಲೇಖಕನಾದ ಹ್ಯಾಕಾನ್‌ ವಿಯಂ ಲೈ ಎಂಬಾತ ಮುಕ್ತ ಮಾನದಂಡಗಳನ್ನು ಪ್ರತಿನಿಧಿಸುತ್ತಾ, "ದಿ <ವಿಡಿಯೋ> ಎಲಿಮೆಂಟ್‌" ಎಂಬ ಶೀರ್ಷಿಕೆಯನ್ನು ಹೊಂದಿದ್ದ ಗೂಗಲ್‌ ಟೆಕ್‌ ಟಾಕ್‌ ಎಂಬ ಒಂದು ವೇದಿಕೆಯಲ್ಲಿ ಥಿಯೋರಾದ ಪ್ರಸ್ತಾವವನ್ನು HTML5 ದೃಶ್ಯಭಾಗಕ್ಕಾಗಿರುವ ಸ್ವರೂಪವಾಗಿ ವಿವರಿಸಿದ:[೬೮]

ನಾನು ಬಲವಾಗಿ ನಂಬಿರುವುದೇನೆಂದರೆ, ಒಂದು ವೇಳೆ ದೃಶ್ಯಭಾಗದ ಅಂಶವು ಯಶಸ್ಸು ಕಾಣಲಿದೆ ಎಂದಾದರೆ, ಯಾವುದಾದರೊಂದು ವಿಧದ ಬೇಸ್‌ಲೈನ್‌ ವಿಡಿಯೋ ಸ್ವರೂಪದ ಕುರಿತು ನಾವು ಸಮ್ಮತಿ ಸೂಚಿಸುವುದು ಅಗತ್ಯವಾಗಿದೆ. ಇಂದು ಫ್ಲ್ಯಾಶ್‌‌‌ ಎಂಬುದು ವೆಬ್‌ನ ಮೇಲಿರುವ ಬೇಸ್‌ಲೈನ್‌ ಸ್ವರೂಪವಾಗಿದೆ. ಫ್ಲ್ಯಾಶ್‌‌‌ ಒಂದು ಮುಕ್ತ ಮಾನದಂಡವಾಗಿಲ್ಲದಿರುವುದೇ ಅದು ಹೊಂದಿರುವ ಸಮಸ್ಯೆಯಾಗಿದೆ.

ಮುಕ್ತ ತಂತ್ರಾಂಶದ ಆಂದೋಲನವನ್ನು ಪ್ರಸ್ತುತಪಡಿಸುತ್ತಾ 2004ದ ಅಕ್ಟೋಬರ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ರಿಚರ್ಡ್‌ ಸ್ಟಾಲ್‌ಮನ್‌ ಈ ರೀತಿ ಹೇಳಿಕೆ ಕೊಟ್ಟ:[೬೯]

ವೆಬ್‌ತಾಣಗಳಲ್ಲಿನ ಫ್ಲ್ಯಾಶ್‌‌‌ನ ಬಳಕೆಯು ನಮ್ಮ ಸಮುದಾಯಕ್ಕೆ ಸಂಬಂಧಿಸಿದ ಒಂದು ಪ್ರಮುಖ ಸಮಸ್ಯೆಯಾಗಿದೆ.

ಯಾವುದೇ ಉಚಿತ ಪ್ಲೇಯರ್‌‌ಗಳು ತುಲನಾತ್ಮಕವಾಗಿ ಸಾಕಷ್ಟು ಉತ್ತಮವಾಗಿಲ್ಲ ಎಂಬುದು ಸ್ಟಾಲ್‌ಮನ್‌ನ ಅಂದಿನ ವಾದವಾಗಿತ್ತು. 2010ರ ಫೆಬ್ರುವರಿ ವೇಳೆಗೆ ಇದ್ದಂತೆ, ಗ್ನಾಶ್‌ ಮತ್ತು Swfಡೆಕ್‌‌‌ಗಳು ಅಡೋಬ್‌ನ ಪ್ಲೇಯರ್‌‌ ಜೊತೆಗಿನ ಸ್ಪರ್ಧೆಯಲ್ಲಿ ಅತ್ಯಂತ ಸೀಮಿತ ಯಶಸ್ಸನ್ನು ಕಂಡಿವೆ. ಅನೇಕ ಮುಖ್ಯ ಹಾಗೂ ಜನಪ್ರಿಯ ವೆಬ್‌ತಾಣಗಳು ಬಯಸುವಂತೆ ಬಳಕೆದಾರರು ಒಂದು ಫ್ಲ್ಯಾಶ್‌‌‌ ಪ್ಲೇಯರ್‌‌ನ್ನು ಹೊಂದುವುದು ಅಗತ್ಯವಾಗಿರುತ್ತದೆ‌‌; ಫ್ಲ್ಯಾಶ್‌‌‌-ಬಳಸದ ವೆಬ್‌ ಬಳಕೆದಾರರಿಗೆ ಸಂಬಂಧಿಸಿದಂತೆ ಕೆಲವೊಮ್ಮೆ ಇದು ಯಾವುದೇ ತುರ್ತುಸ್ಥಿತಿಯ ಕೂಲಿಯೊಂದಿಗೆ ಇರಬೇಕಾಗುತ್ತದೆ. ಆದ್ದರಿಂದ, ಒಂದು ಉತ್ತಮವಾದ ಉಚಿತ ಫ್ಲ್ಯಾಶ್‌‌‌ ಪ್ಲೇಯರ್‌ನ ಕೊರತೆಯು, ಉಚಿತ ತಂತ್ರಾಂಶದೊಂದಿಗೆ ವೆಬ್‌ನ ಅವಲೋಕನವನ್ನು ಅನುಭವಿಸುವುದಕ್ಕಿರುವ ಒಂದು ವಾದಯೋಗ್ಯವಾದ ಅಡಚಣೆಯಾಗಿದೆ, ಮತ್ತು ಮೇಲೆ ನಮೂದಿಸಲಾದ ಫ್ಲ್ಯಾಶ್‌‌‌ನ ಸರ್ವತ್ರ ಅಸ್ತಿತ್ವವು, ಪ್ರಯತ್ನಿಸುವ ಯಾರಿಗೇ ಆಗಲಿ ಸಮಸ್ಯೆಯನ್ನು ಸ್ಪಷ್ಟವಾಗಿ ಉಂಟುಮಾಡುತ್ತದೆ. ಉನ್ನತವಾದ ಆದ್ಯತೆಯ ಯೋಜನೆಗಳ[೭೦] ಫ್ರೀ ಸಾಫ್ಟ್‌ವೇರ್‌ ಫೌಂಡೇಷನ್‌‌ನ ಪಟ್ಟಿಯಲ್ಲಿ ಗ್ನಾಶ್‌ ಗಳಿಸಿರುವ ನಿರಂತರವಾಗಿರುವ ಉನ್ನತ ಶ್ರೇಯಾಂಕವು, ಉಚಿತ ತಂತ್ರಾಂಶದ ಸಮುದಾಯದಿಂದ ತೀರ್ಮಾನಿಸಲ್ಪಟ್ಟಂತೆ ಸಮಸ್ಯೆಯ ತೀಕ್ಷ್ಣತೆಯನ್ನು ಸೂಚಿಸಬಹುದು.

64-ಬಿಟ್‌ ಲೈನಕ್ಸ್‌ನೊಂದಿಗಿನ ಸಮಸ್ಯೆಗಳು

[ಬದಲಾಯಿಸಿ]

ಅಡೋಬ್‌ನ 64-ಬಿಟ್‌ ಫ್ಲ್ಯಾಶ್‌‌‌ ಪ್ಲೇಯರ್‌‌ ಪ್ರಾಯೋಗಿಕವಾಗಿದೆ[೭೧] ಮತ್ತು ಅನೇಕವೇಳೆ ಲೈನಕ್ಸ್‌ ವಿತರಣೆಗಳೊಂದಿಗೆ ನೀಡಲ್ಪಡುವುದಿಲ್ಲ. ಕೆಲವೊಂದು ವಿತರಣೆಗಳು ಬೆಂಬಲ ಪಡೆದ 32-ಬಿಟ್‌ ಆವೃತ್ತಿಯನ್ನು ನೀಡುವ ಅಥವಾ ಕಟ್ಟುವ ಪ್ರಯತ್ನವನ್ನು ಮಾಡಬಹುದಾದರೂ, ಅದು ಸಮಸ್ಯಾತ್ಮಕವಾಗಿ ಪರಿಣಮಿಸಬಹುದು. ನೋಡಿ: 64-ಬಿಟ್‌ ಬೆಂಬಲ.

ಇವನ್ನೂ ನೋಡಿ

[ಬದಲಾಯಿಸಿ]
ಅಡೋಬ್ ಫ್ಲ್ಯಾಶ್
ಇತರೆ

ಅಡಿ ಬರಹಗಳು

[ಬದಲಾಯಿಸಿ]
  1. FLV ಮತ್ತು F4V ವಿಡಿಯೋ ಫೈಲ್‌ ಫಾರ್ಮ್ಯಾಟ್‌ ಸ್ಪೆಸಿಫಿಕೇಷನ್‌ ವರ್ಷನ್‌ 9
    F4Vಯು ISO ಆಧಾರದ ಮೀಡಿಯಾ ಕಡತ ಸ್ವರೂಪ ಮಾನದಂಡವವಾದ ಉಚಿತವಾಗಿ ಲಭ್ಯ ISO ಮಾನದಂಡಗಳು ಎಂಬುದನ್ನು ಆಧರಿಸಿದೆ, ಮತ್ತು ಚಂದಾದಾರಿಕೆಯ ಮೂಲಕವೂ ಲಭ್ಯವಿದೆ [೧]

ಆಕರಗಳು

[ಬದಲಾಯಿಸಿ]
  1. Waldron, Rick (2006-08-27). "The Flash History". Flashmagazine. Archived from the original on 2008-08-20. Retrieved 2001-06-18. {{cite web}}: Cite has empty unknown parameter: |coauthors= (help)
  2. Gay, Jonathan (2001). "The History of Flash". Adobe Systems Inc. Retrieved 2009-10-18.
  3. "Grandmasters of Flash: An Interview with the Creators of Flash". ColdHardFlash.com. Retrieved 2008-02-12.
  4. "AIR passes 100 million installations". Archived from the original on 2 ಫೆಬ್ರವರಿ 2009. Retrieved 3 February 2009.
  5. "Adobe unveils Flash video control". BBC News. BBC. 2007-04-16. Retrieved 2007-06-18. {{cite web}}: Cite has empty unknown parameter: |coauthors= (help)
  6. "Palm Latest Mobile Industry Leader to Join Open Screen Project". 2009-02-16. Retrieved 2009-02-20.
  7. ೭.೦ ೭.೧ "Adobe and Industry Leaders Establish Open Screen Project". 2008-05-01. Retrieved 2009-02-20.
  8. ೮.೦ ೮.೧ Murarka, Anup. "Inside the Open Screen Project". Retrieved 2009-02-21.
  9. "Open Screen Project partners". Retrieved 2009-02-20.
  10. "Adobe and Nokia Announce $10 Million Open Screen Project Fund". 2009-02-16. Retrieved 2009-02-20.
  11. "What just happened to video on the web". Adobe. Archived from the original on 2016-06-25. Retrieved 2010-06-15.
  12. ಫ್ಲ್ಯಾಶ್‌‌‌ ಪ್ಲೇಯರ್‌‌ 9ರಲ್ಲಿನ MPEG-4 ಬೆಂಬಲದ ಕುರಿತಾದ ಅಡೋಬ್‌ನ ಪತ್ರಿಕಾ ಹೇಳಿಕೆ
  13. "New iPhone Developer Agreement Bans the Use of Adobe's Flash-to-iPhone Compiler". Daring Fireball. Retrieved 2010-04-22.
  14. "On Adobe, Flash CS5 and iPhone Applications". Mike Chambers. Retrieved 2010-04-22.
  15. "Web Browser Plugin Market Share". StatOwl. Archived from the original on 2016-04-11. Retrieved 2009-08-18.
  16. 98%: NPD ಅಧ್ಯಯನ
  17. 99.3%: ಮಿಲ್‌ವಾರ್ಡ್‌ ಬ್ರೌನ್‌ ಸಮೀಕ್ಷೆ, 2009ರ ಜೂನ್‌ನಲ್ಲಿ ಕೈಗೊಳ್ಳಲಾಯಿತು. "Flash Player Statistics". Adobe Systems. Retrieved 2009-06-04. {{cite web}}: Cite has empty unknown parameter: |month= (help)
  18. "Adobe Flash Player Version Penetration". Adobe Systems. Retrieved 2009-06-04. {{cite web}}: Cite has empty unknown parameter: |month= (help)
  19. "ಆಂಡ್ರಾಯ್ಡ್‌ ಕಾರ್ಯಾಚರಣಾ ವ್ಯವಸ್ಥೆಯ ಫ್ರೊಯೋ ಆವೃತ್ತಿಯಲ್ಲಿ ಫ್ಲ್ಯಾಶ್‌ ಬರುತ್ತಿದೆ ಎಂದು ಆಂಡಿ ರೂಬಿನ್‌ ಹೇಳುತ್ತಾರೆ"
  20. ೨೦.೦ ೨೦.೧ ೨೦.೨ "ಆರ್ಕೈವ್ ನಕಲು". Archived from the original on 2010-12-05. Retrieved 2010-06-15.
  21. "ಆರ್ಕೈವ್ ನಕಲು". Archived from the original on 2009-05-30. Retrieved 2010-06-15.
  22. Huang, Emmy (2008-11-17). "SWF 10 spec available AND Flash Player alpha for 64-bit Linux on Labs". Adobe Systems. Archived from the original on 2009-04-16. Retrieved 2010-06-15.
  23. "Linus struggles with Flash Player". Fedora bugtracker. Retrieved 2009-02-21.
  24. ಉಬುಂಟು 9.10 ಕಾರ್ಮಿಕ್‌ ಕೊವಾಲಾದಲ್ಲಿ ಅಡೋಬ್‌ ಫ್ಲ್ಯಾಶ್‌ 64 ಬಿಟ್‌‌ನ್ನು ಅಳವಡಿಸುವಿಕೆ
  25. "ಆರ್ಕೈವ್ ನಕಲು". Archived from the original on 2010-09-24. Retrieved 2010-06-15.
  26. "ಆರ್ಕೈವ್ ನಕಲು". Archived from the original on 2010-06-06. Retrieved 2010-06-15.
  27. "ಆರ್ಕೈವ್ ನಕಲು". Archived from the original on 2010-10-06. Retrieved 2010-06-15.
  28. "ClickToFlash". Archived from the original on 2009-10-25. Retrieved 2009-10-18.
  29. Adobe Systems Incorporated (November 2008). "Video File Format Specification, Version 10" (PDF). Adobe Systems Incorporated. Archived from the original (PDF) on 2008-12-03. Retrieved 2009-08-03. {{cite journal}}: Cite journal requires |journal= (help)
  30. ೩೦.೦ ೩೦.೧ ೩೦.೨ ೩೦.೩ "ಹೊಸ ಕಡತ ವಿಸ್ತರಣೆಗಳು ಮತ್ತು MIME ಬಗೆಗಳು". Archived from the original on 2010-07-06. Retrieved 2010-06-15.
  31. "Microsoft Silverlight Gets a High Profile Win: 2008 Beijing Olympics". Retrieved 2010-02-23.
  32. "Microsoft Wins The 2010 Olympics For Silverlight". Retrieved 2010-02-23.
  33. "Microsoft Working to Make Political Conventions Unconventional". Retrieved 2010-02-23.
  34. "Netflix Begins Roll-Out of 2nd Generation Media Player for Instant Streaming on Windows PCs and Intel Macs". Archived from the original on 2010-05-29. Retrieved 2010-02-23.
  35. XML.com: Picture Perfect
  36. "Adobe to Discontinue Adobe SVG Viewer". Adobe Systems. Retrieved 2007-06-18.
  37. "Adobe, 'Rich Internet Applications' and Standards". Web Standards Project. April 19, 2005. Retrieved 2010-02-25.
  38. "Opera". Svg wiki. Svg.org. 2006-12-27. Archived from the original on 2010-01-25. Retrieved 2007-06-18.
  39. Quint, Antoine (2006-07-13). "First Firefox 2.0 Beta Released". Svg.org. Archived from the original on 2010-01-15. Retrieved 2007-06-18.
  40. "SVG improvements in Firefox 3". Mozilla Developer Center. Mozilla. 2008-06-17. Retrieved 2008-07-20.
  41. "UIRA, Unfreeze". unfreeze.net. 2008-04-20. Archived from the original on 2018-04-02. Retrieved 2008-04-21.
  42. "Adobe File Format Specification FAQ". Adobe Systems. Retrieved 2007-11-15.
  43. "Free Flash community reacts to Adobe Open Screen Project". Retrieved 2008-11-29.
  44. Hudson, Paul (2008). "Quick as a Gnash". Linux Format (107): 48–49. What happened is this little thing called "software patents". When you use MP3 or FLV, they're proprietary. And although we use FFMPEG and Gstreamer - we actually support all these codecs - we can't distribute Gnash that way. ...of course the OLPC project cannot legally redistribute the codecs. ...Gnash fully supports patent-free codecs such as Ogg Vorbis and Theora and Direc and stuff — Rob Savoye. {{cite journal}}: |access-date= requires |url= (help); Unknown parameter |month= ignored (help)
  45. "Gnash Introduction". Free Software Foundation, Inc. 2008-06-26. Retrieved 2008-07-20.
  46. Rob Savoye, Ann Barcomb (2007). "Gnash Manual version 0.4.0". Free Software Foundation. Archived from the original on 2008-01-17. Retrieved 2007-08-15. {{cite web}}: Unknown parameter |month= ignored (help)
  47. "Expert says Adobe Flash policy is risky". 2009-11-12. Archived from the original on 2011-04-26. Retrieved 2010-03-27.
  48. "Security bulletins and advisories". Retrieved 2010-03-27.
  49. "Securing Your Web Browser". Archived from the original on 2010-03-26. Retrieved 2010-03-27.
  50. "Pwn2Own 2010: interview with Charlie Miller". 2010-03-01. Archived from the original on 2011-04-24. Retrieved 2010-03-27.
  51. "SecurityFocus search results for Adobe Flash Player Vulnerabilities". Archived from the original on 2011-04-24. Retrieved 2010-03-27.
  52. "Flash Bug Report". 2010-02-06. Archived from the original on 2010-02-10. Retrieved 2010-03-27.
  53. "Internet Security Threat Report: Volume XV: April 2010". Symantec. April 2010. pp. 37, 40, 42. Archived from the original on 2010-04-25. Retrieved 2010-05-09.
  54. "Adobe Acrobat, Reader, and Flash Player Remote Code Execution Vulnerability". 2009-10-15. Archived from the original on 2011-04-24. Retrieved 2010-05-09.
  55. "2010 Threat Predictions" (PDF). McAfee Labs. December 2009. p. 2. Retrieved 2010-05-09.
  56. "McAfee Threats Report: Fourth Quarter 2009" (PDF). McAfee Avert Labs. February 2010. p. 16. Archived from the original (PDF) on 2010-02-15. Retrieved 2010-05-09.
  57. "Soltani, Ashkan, Canty, Shannon, Mayo, Quentin, Thomas, Lauren and Hoofnagle, Chris Jay: Flash Cookies and Privacy". 2009-08-10. Retrieved 2009-08-18.
  58. "Local Shared Objects -- "Flash Cookies"". Electronic Privacy Information Center. 2005-07-21. Archived from the original on 2010-04-16. Retrieved 2010-03-08.
  59. "How to manage and disable Local Shared Objects". Adobe Systems Inc. 2005-09-09. Retrieved 2010-03-08.
  60. "ಆರ್ಕೈವ್ ನಕಲು". Archived from the original on 2010-02-01. Retrieved 2010-06-15.
  61. "Flash benchmarks on different operating systems".
  62. https://arstechnica.com/media/news/2009/10/hands-on-hulu-desktop-for-linux-beta-a-big-resource-hog.ars
  63. ಮೇಲೆ-ಕೆಳಗೆ ಚಲಿಸುವುದು ಮತ್ತು ಮೇಲೆ-ಕೆಳಗೆ ಚಲಿಸುವ ಪಟ್ಟಿಗಳು (ಜಾಕೋಬ್‌ ನೀಲ್‌ಸೆನ್‌ನ ಅಲರ್ಟ್‌ಬಾಕ್ಸ್‌‌)
  64. Nielsen, Jakob (2000-10-29). "Flash: 99% Bad". Retrieved 2009-02-21.
  65. "Provide text equivalents for graphics - in Flash". Skills for Access – How To. Archived from the original on 2017-07-03. Retrieved 2007-06-18. {{cite web}}: Cite has empty unknown parameters: |month= and |coauthors= (help)
  66. Cynthia D. Waddell, JD. "Applying the ADA to the Internet: A Web Accessibility Standard". Archived from the original on 2010-02-18. Retrieved 2010-04-11.
  67. Meyer, David (2008-04-30). "Mozilla warns of Flash and Silverlight 'agenda'". ZDNet. Archived from the original on 2008-12-27. Retrieved 2009-01-11. Companies building websites should beware of proprietary rich-media technologies like Adobe's Flash and Microsoft's Silverlight, the founder of Mozilla Europe has warned.
  68. "Håkon Wium Lie on the video element in HTML 5". Google Video. 2007-03-29. Retrieved 2009-02-22.
  69. "Richard Stallman on The free software movement and its challenges". Australian National University, Canberra, Australia: Google Video. Archived from the original on 2011-06-29. Retrieved 2009-02-21.
  70. High Priority Free Software Projects, Free Software Foundation, retrieved 2009-07-09
  71. "Flash Player 10 for 64-bit Linux". Archived from the original on 2010-12-02. Retrieved 2010-05-17.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಸಮುದಾಯಗಳು

[ಬದಲಾಯಿಸಿ]

ಟೆಂಪ್ಲೇಟು:Flash builders