ಅಡಿಗೆ ಬಾಳೆ
ಅಡಿಗೆ ಬಾಳೆ
[ಬದಲಾಯಿಸಿ]ಸಸ್ಯ ಮೂಲ-ಪರಿಚಯ
[ಬದಲಾಯಿಸಿ]ಕದಳಿ ಎಂದೇ ಪ್ರಸಿದ್ದವಾದ ಬಾಳೆಯನ್ನು ಹಣ್ಣು ಮತ್ತು ತರಕಾರಿಯಾಗಿ ಬಳಸುತ್ತಾರೆ. ಏಷ್ಯಾದಲ್ಲಿ ಹುಟ್ಟಿದ ಬಾಳೆಯನ್ನು ಜಗತ್ತಿನ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಹಣ್ಣಾಗದ ಕಾಯಿಗಳಲ್ಲಿ ಪಿಷ್ಠದ ಪ್ರಮಾಣ ಹೆಚ್ಚಿರುವುದರಿಂದ ಜೀರ್ಣಿಸಿಕೊಳ್ಳಬೇಕಾದರೆಕಾಯಿ ಹಣ್ಣಾಗಬೇಕು, ಅಥವಾ ಬೇಯಿಸಿ ತಿನ್ನಬೇಕು. ಹೆಚ್ಚಾಗಿ ತರಕಾರಿ ಬಳಸಲ್ಪಡುವ ಭಾಗ ಎಂದರೆ ಕಾಯಿ. ಒಣದಿಂಡನ್ನು ಸಹ ಪಲ್ಯ, ಸಾರು ಮುಂತಾದ ಪದಾರ್ಥಗಳ ತಯಾರಿಕೆಗೆ ಬಳಸುತ್ತಾರೆ.
ಔಷಧೀಯ ಗುಣಗಳು
[ಬದಲಾಯಿಸಿ]ಬಾಳೆ ಉತ್ತಮ ಹಣ್ಣು ಅಲ್ಲದೆ ತರಕಾರಿಯೂ ಹೌದು. ಅಕಸ್ಮಾತ್ ಬಾಳೆಯ ಸೇವನೆಯಿಂದ ದೇಹದ ಮೇಲೆ ಹಾನಿಕಾರಕ ಪರಿಣಾಮಗಳೇರ್ಪಟ್ಟರೆ ಬಾಳೆ ತಿನ್ನುವುದನ್ನು ನಿಲ್ಲಿಸಬೇಕು ಅಥವಾ ಏಲಕ್ಕಿಯೊಂದಿಗೆ ಉಪಯೋಗಿಸಿದರೆ ಈ ಪರಿಣಾಮಗಳು ಕಂಡು ಬರುವುದಿಲ್ಲ. ಬಾಳೆಯ ನಿತ್ಯ ಉಪಯೋಗ ತೂಕ ಹೆಚ್ಚಿಸುತ್ತದೆ. ಬಾಳೆ ಬಜ್ಜಿ ಇದು ಬಹಳ ಜನಪೀಯವಾದದ್ದು, ಇದನ್ನು ಕರಿದು ತಯಾರಿಸಲಾಗುವುದು. ಆದರೆ ಇದರ ಬಹಳ ಸೇವನೆ ಒಳ್ಳೆಯದಲ್ಲ. ಅದರಲ್ಲೂ ವಾತರೋಗ, ಅಗ್ನಿಮಾಂದ್ಯ, ಕೆಮ್ಮಿನಿಂದ ನರಳುವವರು ಉಪಯೋಗಿಸಲೇಬಾರದು. ಬಾಳೆದಿಂಡಿನ ಸಳ್ಳಿ ಎಳೆಬಾಳೆ ದಿಂಡನ್ನು ಸಣ್ಣಗೆ ಹೆಚ್ಚಿ, ಹಿಂಡಿ ನೀರು ತೆಗೆದು ಹಸಿಶುಂಠಿ, ಹಸಿಮೆಣಸಿನಕಾಯಿ, ಜೀರಿಗೆ ಅರೆದು ಮೊಸರಿಗೆ ಸೇರಿಸಿ ಅದರಲ್ಲಿ ಹಿಂಡಿದ ಬಾಳೆದಿಂಡನ್ನು ಹಾಕಿ ರುಚಿಗೆ ತಕ್ಕಸ್ಟು ಉಪ್ಪನ್ನು ಸೇರಿಸಿ ಉಪಯೋಗ ಮಾಡಬಹುದು. ಬಾಳೆ೪ದಿಂಡಿನ ಗೊಜ್ಜು ಎಳೆ ದಿಂಡನ್ನು ದುಂಡಗೆ ಹೆಚ್ಚಿ ನಾರು ತೆಗೆದು ದುಂಡಗೆ ಹೆಚ್ಚಿ ಉಪ್ಪು ಹಾಕಿ ಬೇಯಿಸಿ, ಮೊಸರು ಸೇರಿಸಿ ಹಿಂಗು ಸಾಸಿವೆ ಒಗ್ಗರಣೆ ಕೊಡುವುದು.
ಮಣ್ಣು ಮತ್ತು ಹವಾಗುಣ
[ಬದಲಾಯಿಸಿ]ಕನಿಷ್ಠ ೩ ಮೀಟರ್ ಆಳದ ನೀರು ಬೇಯಿಸುವಂತಹ ಮಣ್ಣು ಬೇಕು. ರೇವೆಮಣ್ಣು, ಕೆಂಪುಮಣ್ಣು ಮುಂತಾದ ಮಣ್ಣುಗಳು ಹೆಚ್ಚು ಫಲವತ್ತಾಗಿದ್ದರೆ ಒಳ್ಳೆಯದು.[೧]
ಉಲ್ಲೇಖ
[ಬದಲಾಯಿಸಿ]- ↑ ಬಹು ವಾರ್ಷಿಕ ತರಕಾರಿಗಳು ಪಿ ನಾರಾಯಣ ಸ್ವಾಮಿ,ಮುದ್ರಣ ೧೯೯೨,ಪುಟ ಸಂಖ್ಯೆ ೩೦