ವಿಷಯಕ್ಕೆ ಹೋಗು

ಅಕ್ಯಾಂತೊಟೆರಿಜಿಯೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ಯಾಂತೊಟೆರಿಜಿಯೈ
Labidesthes sicculus
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಆ್ಯಕ್ಟಿನೋಟೆರಿಜೀ
(ಶ್ರೇಣಿಯಿಲ್ಲದ್ದು): ಅಕ್ಯಾಂತೊಮೊರ್ಫ಼ಾ
ಮೇಲ್ಗಣ: ಅಕ್ಯಾಂತೊಪ್ಟೆರಿಜಿಯಿ
Orders

See text.


ಅಕ್ಯಾಂತೊಟೆರಿಜಿಯೈಮೂಳೆಯ ಮೀನುಗಳಲ್ಲಿ ಇವು ವಿಕಾಸದ ದೃಷ್ಟಿಯಿಂದ ಮುಂದುವರಿದ ಉಪವರ್ಗಕ್ಕೆ ಸೇರಿವೆ.

ಲಕ್ಷಣಗಳು[ಬದಲಾಯಿಸಿ]

ಮುಂದಿನ ಈಜುರೆಕ್ಕೆಯ ಕಿರಣಗಳು ಬಿಡುವಾಗಿದ್ದು ಮೊದಲನೆಯದು ಮುಳ್ಳಾಗಿ ಪರಿವರ್ತನೆಹೊಂದಿದೆ. ಮೈಮೇಲಿನ ಹುರುಪೆಗಳು ಸಾಧಾರಣವಾಗಿ ಟೀನಾಯಿಡ್ ರೀತಿಯವು. ಪ್ರೌಢಜೀವಿಗಳಲ್ಲಿ ಅನ್ನನಾಳಕ್ಕೂ ಗಾಳಿ[ಯ ಕೋಶಕ್ಕೂ ಸಂಬಂಧವಿರುವುದಿಲ್ಲ. ಸೊಂಟದ ಈಜುರೆಕ್ಕೆಗಳು ಮುಂದೆ ಸರಿದು ಎದೆಯ, ಕೊರಳಿನ ಅಥವಾ ಕೆಳದವಡೆಯ ತಳದಲ್ಲಿ ಇರುತ್ತವೆ. ನಡುಕಟ್ಟು ಕ್ಲೈತ್ರಂ ಮೂಳೆಗೆ ಅಂಟಿಕೊಂಡಿರುತ್ತದೆ. ಮೇಲ್ದವಡೆಯ ಮ್ಯಾಕ್ಸಿಲ್ಲ ಮೂಳೆಗಳಲ್ಲಿ ಹಲ್ಲುಗಳಿಲ್ಲ ಮತ್ತು ಅವು ಬಾಯಿಯ ಅಂಚಿಗೆ ಸೇರಿರುವುದಿಲ್ಲ.

ವಾಸ[ಬದಲಾಯಿಸಿ]

ಇವು ಸಾಧಾರಣವಾಗಿ ಸಮುದ್ರವಾಸಿಗಳು.

ಪ್ರಬೇಧಗಳು[ಬದಲಾಯಿಸಿ]

ಇವುಗಳಲ್ಲಿ ಸುಮಾರು 36 ಕುಟುಂಬಗಳಿವೆ. ಹಾರುಮೀನು, ಬಾಸ್, ಗೋಬಿ, ಫ್ಲೌಂಡರ್, ಬಾಂಗಡಮೀನು, ಉಬ್ಬು ಮೀನು, ಮೂರ್ಖಮೀನು, ಸಂದೂಕಮೀನು, ಮುಳ್ಳುಹಂದಿ ಮೀನು, ತಲೆಮೀನು, ಅಳಿಮೀನು ಮುಂತಾದುವು ಈ ಉಪವರ್ಗಕ್ಕೆ ಸೇರಿವೆ. ಇವುಗಳ ಕೆಲವು ಜಾತಿಗಳು ಕ್ರಿಟೇಷಿಯಸ್ ಯುಗದಲ್ಲಿ ಹುಟ್ಟಿ ಟರ್ಷಿಯರಿ ಯುಗದಲ್ಲಿ ಅಧಿಕವಾಗಿದ್ದುವು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: