ವಿಷಯಕ್ಕೆ ಹೋಗು

ಅಂತರಾಷ್ಟ್ರೀಯ ಅಹಿಂಸಾ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ಟೋಬರ ೨ ಮಹಾತ್ಮ ಗಾಂಧಿ ಯವರ ಹುಟ್ಟುಹಬ್ಬವನ್ನು ಅಂತರಾಷ್ಟ್ರೀಯ ಅಹಿಂಸಾ ದಿನ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಈ ದಿನವನ್ನು ಮಹಾತ್ಮ ಗಾಂಧಿ ಜಯಂತಿ ಎಂದು ಆಚರಿಸಲಾಗುತ್ತದೆ.

ಹುಟ್ಟು

[ಬದಲಾಯಿಸಿ]

೨೦೦೪ರ ಜನವರಿಯಲ್ಲಿ ಇರಾನಿಯನ್ ನೊಬೆಲ್ ಪ್ರಶಸ್ತಿ ವಿಜೇತ ಶಿರಿನ್ ಎಬಾಡಿ ಪ್ಯಾರಿಸ್ನಾ ಅಂತರಾಷ್ಟ್ರೀಯ ಅಹಿಂಸಾ ದಿನದ ಪ್ರಸ್ತಾಪವನ್ನು ಕೈಗೆತ್ತಿಕೊಂಡರು. ಮುಂಬೈಯ ವರ್ಲ್ಡ್ ಸೋಶಿಯಲ್ ಫ಼ಾರಮ್ ನ ಹಿಂದಿ ಶಿಕ್ಷಕರಿಂದ ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ಯಾರೀಸ್ ನಲ್ಲಿ ಪಾಠ ಮಾಡುತ್ತಿದ್ದಾಗ ಈ ಕಲ್ಪನೆ ಬಂದಿತ್ತು. ಈ ಯೋಚನೆ ಕ್ರಮೇಣ ಭಾರತದ ಕಾಂಗ್ರೆಸ್ ಪಕ್ಷದ ನಾಯಕರ ಗಮನಕ್ಕೆ ಬಂದಿತ್ತು. ಕೊನೆಗೆ ಜನವರಿ ೨೦೦೭ರಲ್ಲಿ ನವದೆಹಲಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆರ್ಚ್ ಬಿಷಪ್ ಡೆಸ್ಮ್ಂಡ್ ಟುಟು ನಡೆಸಿದ ಸತ್ಯಾಗ್ರಹ ಸಮಾವೇಶದಿಂದ ಈ ಕಲ್ಪನೆಯನ್ನು ಅಳವಡಿಸಿಕೊಳ್ಳಲು ಯುನೈಟೆಡ್ ನೇಷನ್ಸ್ ಗೆ ಕರೆ ನೀಡಿದರು.

ಅಂಗೀಕಾರ

[ಬದಲಾಯಿಸಿ]

೨೦೦೭ ರ ಜೂನ್ ೧೫ ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅಕ್ಟೋಬರ್ ೨ ನ್ನು ಅಂತರಾಷ್ಟ್ರೀಯ ಅಹಿಂಸಾ ದಿನವಾಗಿ ಸ್ಥಾಪಿಸಲು ಮತ ಹಾಕಿತು. ಜನರಲ್ ಅಸೆಂಬ್ಲಿಯ ನಿರ್ಣಯದಂತೆ ಯುನೈಟೆಡ್ ನೇಷನ್ಸ್ ವ್ಯವಸ್ಥೆಯ ಎಲ್ಲಾ ಸದಸ್ಯರನ್ನು ಅಕ್ಟೋಬರ್ ೨ ದಿನವನ್ನು "ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ ಸೇರಿದಂತೆ ಅಹಿಂಸೆಯ ಸಂದೇಶವನ್ನು ಸೂಕ್ತ ರೀತಿಯಲ್ಲಿ ಪ್ರಸಾರ ಮಾಡಬೇಕು" ಎಂದು ಕೇಳಿಕೊಳ್ಳುತ್ತದೆ.

ಪ್ರಚಾರ

[ಬದಲಾಯಿಸಿ]

ಯುನೈಟೆಡ್ ನೇಷನ್ಸ್ ನೊಂದಿಗೆ ಭಾರತದ ಖಾಯಂ ಕಾರ್ಯಾಚರಣೆಯ ನಿಟ್ಟಿನಲ್ಲಿ, ಭಾರತದ ರಾಯಭಾರಿಯ ಕೋರಿಕೆಯ ಮೇರೆಗೆ, ನ್ಯೂಯಾರ್ಕ್ ನಗರದ ಯುನೈಟೆಡ್ ಪೋಸ್ಟಲ್ ಅಡ್ಮಿನಿಸ್ಟ್ರೇಷನ್ (UNPA) ವಿಶೇಷ ಸ್ಟಾಂಪ್ ಒಂದನ್ನು ತಯಾರಿಸಿತ್ತು.[] ಯು.ಎನ್.ಪಿ.ಎ ದಿಂದ ತಯಾರಿಸಲ್ಪಟ್ಟ ಈ ಪೆಟ್ಟಿಗೆಯ ಚಿತ್ರಣದ ಸ್ಟಾಂಪ್ ಯು.ಎನ್.ಪಿ.ಎ. ದ ಎನ್.ವೈ. ಸ್ಥಳದಲ್ಲಿ ರದ್ದುಗೊಳಿಸಲಾಗುತ್ತಿತ್ತು. ಅಕ್ಟೋಬರ್ ೨ ರಿಂದ ೩೧ ರವರೆಗೆ ಯು.ಎನ್.ಪಿ.ಎ. ಯಿಂದ ಹೊರಹೋಗುವ ಎಲ್ಲಾ ಮೈಲ್ ಗಳೂ ಕೂಡ, ಈ ಛಾಪು ಹೊಂದಿರಲೇಬೇಕೆಂದು ಯು.ಎನ್.ಪಿ.ಎ. ಸೂಚಿಸಿತ್ತು.

ಅಂತರಾಷ್ಟ್ರೀಯ ಅಹಿಂಸಾ ಶಿಲ್ಪ

[ಬದಲಾಯಿಸಿ]

ಅಂತರಾಷ್ಟ್ರೀಯ ಅಹಿಂಸಾ ದಿನದ ದ್ಯೋತಕವಾಗಿ ಕಾರ್ಲ್ ಫ಼್ರೆಡ್ರಿಕ್ ರಾಯಿಟರ್ ಸ್ವಾರ್ಡ್ ರಿಂದ ನಿರ್ಮಿತವಾದ ಅಹಿಂಸಾ ಶಿಲ್ಪ ಸ್ವೀಡನ್ ನ ಮಾಲ್ಮೋನಲ್ಲಿದೆ.[]

ಉಲ್ಲೇಖಗಳು

[ಬದಲಾಯಿಸಿ]