ಅಂತರರಾಷ್ಟ್ರೀಯ ದಿನಾಂಕ ರೇಖೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

180 ಲಿ ರೇಖಾಂಶದ ಮಧ್ಯಾಹ್ನ ರೇಖೆಗೆ ಈ ಹೆಸರಿದೆ. (ಇಂಟರ್‍ನ್ಯಾಷನಲ್ ಡೇಟ್ ಲೈನ್) ಪೆಸಿಫಿಕ್ ಸಾಗರದ ನಿರ್ಜನ ಪ್ರದೇಶದ ಮೇಲೆ ಇದು ಹಾದುಹೋಗುತ್ತದೆ. ಹೀಗೆ ಸಾಗುವಾಗ ಎದುರಾಗುವ ಒಂದೆರಡು ದ್ವೀಪಗಳನ್ನು ಬಳಸಿಕೊಂಡು ಹೋಗುವಂತೆ ಈ ರೇಖೆಯನ್ನು ಎಳೆಯಲಾಗಿದೆ.

ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಆವರ್ತಿಸುತ್ತಿರುವುದರಿಂದ ಯಾವುದೇ ಒಂದು ಸ್ಥಾನದಲ್ಲಿ ಸೂರ್ಯನ ಉದಯಾಸ್ತಗಳು (ಆದ್ದರಿಂದ ಸಮಯ) ಅದಕ್ಕಿಂತ ಪೂರ್ವಕ್ಕೆ ಇರುವ ಸ್ಥಳದ ಉದಯಾಸ್ತಗಳಿಗಿಂತ (ಸಮಯಕ್ಕಿಂತ) ಹಿಂದೆಯೂ ಪಶ್ಚಿಮಕ್ಕೆ ಇರುವ ಸ್ಥಳದ ಉದಯಾಸ್ತಗಳಿಗಿಂತ (ಸಮಯಕ್ಕಿಂತ) ಮುಂದೆಯೂ ಇರುವುವು. ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಇದರಿಂದ ಉಂಟಾಗುವ ತೊಡಕನ್ನು ನಿವಾರಿಸಲು ಭೂಮಿಯನ್ನು 24 ನಿರ್ದಿಷ್ಟ ಕಾಲಾವಲಯಗಳಾಗಿ ವಿಭಾಗಿಸಲಾಗಿದೆ. ಇದರ ಪ್ರಕಾರ ಗ್ರೀನ್ವಿಚ್ ಮಧ್ಯಾಹ್ನರೇಖೆ (0ಲಿ ರೇಖಾಂಶ) ಪೂರ್ವ ಮತ್ತು ಪಶ್ಚಿಮಕ್ಕೆ 7ಳಿಲಿ ರೇಖಾಂಶದ ಮಧ್ಯಾಹ್ನ ರೇಖೆಗಳು ಒಳಗೊಂಡಿರುವ 15ಲಿ ಅಗಲದ ಪ್ರದೇಶ ಸೊನ್ನೆ ಗಂಟೆಯನ್ನು ತೋರಿಸುವ ಕಾಲ ವಲಯ. ಇವೆರಡೂ ರೇಖೆಗಳಿಂದ ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳ ಕಡೆಗೆ 15ಲಿ ಅಂತರದಲ್ಲಿ ಮಧ್ಯಾಹ್ನ ರೇಖೆಗಳು ಗುರುತಿಸುತ್ತ ಸಾಗಿದರೆ ಪೂರ್ವ ಮತ್ತು ಪಶ್ಚಿಮ ರೇಖಾಂಶಗಳಿರುವ ಮಧ್ಯಾಹ್ನ ರೇಖೆಗಳನ್ನು ತಲುಪುತ್ತೇವೆ. ಹೀಗೆ ಗುರುತಿಸಲಾದ ಕಾಲವಲಯಗಳಲ್ಲಿ ಸಮಯ, ಗ್ರೀನ್ವಿಚ್ ಸಮಯಕ್ಕಿಂತ ಕ್ರಮವಾಗಿ 1. 2, . . .. . .. .12 ಗಂಟೆ ಮುಂದೆಯೂ (ಪೂರ್ವದೆಡೆ) ಮತ್ತು ಹಿಂದೆಯೂ (ಪಶ್ಚಿಮದೆಡೆ) ಇರುತ್ತದೆ. ಇದರ ಪ್ರಕಾರ ಪೂರ್ವದಿಂದ 180ಲಿ ವರೆಗಿನ ಅಗಲದ ವಲಯ ಗ್ರೀನ್ವಿಚ್ ಸಮಯಕ್ಕಿಂತ 12 ಗಂಟೆ ಮುಂದೆ ಇದೆ; ಪಶ್ಚಿಮದಿಂದ 180ಲಿ ವರೆಗಿನ ಅಗಲದ ವಲಯ 12 ಗಂಟೆ ಹಿಂದೆಯಿದೆ. ಆದ್ದರಿಂದ ದಿನಾಂಕ ರೇಖೆಯ ಪೂರ್ವಕ್ಕೆ 12 ಗಂಟೆ ಆಗಿರುವಾಗ ಪಶ್ಚಿಮಕ್ಕೆ ಅದೇ ಗಳಿಗೆಯಲ್ಲಿ 12 ಗಂಟೆ ಆಗಿರುತ್ತದೆ. ಒಬ್ಬ ಪ್ರಯಾಣಿಕ ಗ್ರೀನ್ವಿಚ್‍ನಿಂದ (ಅಂದರೆ ಸೊನ್ನೆ ಕಾಲವಲಯದಿಂದ) ಪೂರ್ವಾಭಿಮುಖವಾಗಿ ಸಾಗಿದರೆ ಒಂದೊಂದು ಹೊಸ ಕಾಲವಲಯವನ್ನು ಅನುಕ್ರಮವಾಗಿ ಪ್ರವೇಶಿಸಿದಂತೆಯೂ ಅವನು ತನ್ನ ಗಡಿಯಾರವನ್ನು ಒಂದೊಂದು ಗಂಟೆ ಮುಂದೆ ಇಡಬೇಕು; ಇದರ ಬದಲು ಪಶ್ಚಿಮಾಭಿಮುಖಿಯಾಗಿ ಸಾಗಿದರೆ ಅವನು ತನ್ನ ಗಡಿಯಾರವನ್ನು ಒಂದೊಂದು ಗಂಟೆ ಹಿಂದೆ ಇಡಬೇಕು. ದಿನಾಂಕ ರೇಖೆಯನ್ನು ಪೂರ್ವಾಭಿಮುಖಿಯಾಗಿ ತಲುಪಿದವನ ಗಡಿಯಾರ ಗ್ರೀನ್ವಿಚ್ ಸಮಯಕ್ಕಿಂತ 12 ಗಂಟೆ ಮುಂದೆಯೂ ಪಶ್ಚಿಮಾಭಿಮುಖಿಯಾಗಿ ತಲುಪಿದವನ ಗಡಿಯಾಗ ಗ್ರೀನ್ವಿಚ್ ಸಮಯಕ್ಕಿಂತ 12 ಗಂಟೆ ಹಿಂದೆಯೂ ಇರುವುದು. ದಿನಾಂಕ ರೇಖೆಯನ್ನು ದಾಟದವನು ತೊಡಕಿಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ವ್ಯವಹಾರದಲ್ಲಿ ಈ ವ್ಯತ್ಯಾಸದಿಂದ ಉಂಟಾಗುವ ಸಂದಿಗ್ಧತೆಯನ್ನು ಪರಿಹರಿಸಲು ವಾಷಿಂಗ್ಟನ್ನಿನಲ್ಲಿ ಒಂದು ಅಂತರರಾಷ್ಟ್ರೀಯ ಮಧ್ಯಾಹ್ನ ರೇಖಾ ಸಮಾವೇಶ 1884ರಲ್ಲಿ ನೆರವೇರಿತು. ಅಲ್ಲಿ ಎಲ್ಲಾ ರಾಷ್ಟ್ರಗಳು ಒಪ್ಪಿಕೊಂಡ ಸಂಪ್ರದಾಯದ ಪ್ರಕಾರ ದಿನಾಂಕ ರೇಖೆಯನ್ನು ಪೂರ್ವದಿಂದ ಪಶ್ಚಿಮಕ್ಕೆ ಅಡ್ಡ ಹಾಯ್ದಾಗ ತಾರೀಖು ಪಟ್ಟಿಗೆ ಹಿಂದಿನ ತಾರೀಖನ್ನು ಸೇರಿಸಿಕೊಳ್ಳಬೇಕೆಂದು ಪಶ್ಚಿಮದಿಂದ ಪೂರ್ವಕ್ಕೆ ಅಡ್ಡಹಾಯ್ದಾಗ ಒಂದು ತಾರೀಖನ್ನು ತೆಗೆದು ಹಾಕಬೇಕೆಂದು ತೀರ್ಮಾನವಾಯಿತು. ದಿನಾಂಕ ರೇಖೆ ಗ್ರೀನ್ವಿಚ್ ಮಧ್ಯಾಹ್ನರೇಖೆಯ ಮುಂದುವರಿಕೆ ಎಂಬುದು ಸ್ಪಷ್ಟ.[೧][೨]

ಉಲ್ಲೇಖಗಳು[ಬದಲಾಯಿಸಿ]