ಆಂಟನ್ ಚೆಕೊವ್
Антон Павлович Чехов ಆಂಟನ್ ಚೆಕೊವ್ | |
---|---|
ಜನನ | Taganrog, Russian Empire | ೨೯ ಜನವರಿ ೧೮೬೦
ಮರಣ | July 15, 1904 Badenweiler, German Empire | (aged 44)
ವೃತ್ತಿ | ಭೌತಶಾಸ್ತ್ರಜ್ಞ, short story writer, playwright |
ರಾಷ್ಟ್ರೀಯತೆ | ರಷ್ಯನ್ |
ಪ್ರಭಾವಗಳು | |
ಪ್ರಭಾವಿತರು
| |
ಸಹಿ |
ಆಂಟನ್ ಪವ್ಲೋವಿಚ್ ಚೆಕೊವ್ (Russian: Антон Павлович Чехов, pronounced [ɐnˈton ˈpavləvʲɪtɕ ˈtɕɛxəf]; 29 January [O.S. 17 January] 1860 – 15 July [O.S. 2 July] 1904) ರಷ್ಯನ್ ಸಣ್ಣ ಕಥೆಗಾರ, ನಾಟಕಕಾರ ಹಾಗು ವೈದ್ಯ. ಇವರನ್ನು ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ಅತ್ಯುತ್ತಮ ಸಣ್ಣ ಕಥೆಗಾರನೆಂದು ಪರಿಗಣಿಸಲಾಗಿದೆ.[೧] ನಾಟಕಕಾರರಾಗಿ ಅವರ ವೃತ್ತಿಜೀವನದಲ್ಲಿ ನಾಲ್ಕು ಪ್ರಸಿದ್ಧ ನಾಟಕಗಳನ್ನು ಬರೆದಿದ್ದಾರೆ ಹಾಗು ಅವರ ಅತ್ಯುತ್ತಮ ಸಣ್ಣ ಕಥೆಗಳಿಗೆ ಬರಹಗಾರರು ಹಾಗು ವಿಮರ್ಶಕರು ಅತೀವ ಮನ್ನಣೆಯನ್ನು ನೀಡುತ್ತಾರೆ.[೨][೩] ತಮ್ಮ ಸಾಹಿತ್ಯಕ ವೃತ್ತಿಜೀವನದುದ್ದಕ್ಕೂ ಚೆಕೊವ್ ಒಬ್ಬ ವೈದ್ಯನಾಗಿ ವೃತ್ತಿಯನ್ನು ಅನುಸರಿಸುತ್ತಾರೆ: ಒಂದೊಮ್ಮೆ ಅವರು "ವೈದ್ಯಶಾಸ್ತ್ರವು ನನ್ನ ನ್ಯಾಯಸಮ್ಮತ ಪತ್ನಿ" "ಹಾಗು ಸಾಹಿತ್ಯ ನನ್ನ ಉಪಪತ್ನಿ" ಎಂದು ಹೇಳುತ್ತಾರೆ.[೪] 1896ರಲ್ಲಿ ದಿ ಸೀಗಲ್ ಗೆ ದೊರೆತ ಪ್ರತಿಕೂಲ ಸ್ವಾಗತದ ನಂತರ ಚೆಕೊವ್ ರಂಗಭೂಮಿಯನ್ನು ತ್ಯಜಿಸುತ್ತಾರೆ; ಆದರೆ 1898ರಲ್ಲಿ ಕಾನ್‌ಸ್ಟಾನ್‌ಟಿನ್ ಸ್ಟಾನಿಸ್ಲಾವ್ಸ್ಕಿ ಯ ಮಾಸ್ಕೋ ಆರ್ಟ್ ಥಿಯೇಟರ್ ನಲ್ಲಿ ನಾಟಕವು ಪ್ರಶಂಸೆ ಗಳಿಸುವ ಮಟ್ಟಕ್ಕೆ ಮರುಪ್ರದರ್ಶನ ಕಂಡಿತು. ಇದು ನಂತರ ಅಂಕಲ್ ವಾನ್ಯ ವನ್ನೂ ಸಹ ನಿರ್ಮಾಣ ಮಾಡಿತು ಜೊತೆಗೆ ಚೆಕೊವ್ ರ ಕಡೆ ಎರಡು ನಾಟಕಗಳಾದ ತ್ರೀ ಸಿಸ್ಟರ್ಸ್ ಹಾಗು ದಿ ಚೆರ್ರಿ ಆರ್ಚರ್ಡ್ ಗಳ ಪ್ರಥಮ ಪ್ರದರ್ಶನವನ್ನು ಏರ್ಪಡಿಸಿತು. ಈ ನಾಲ್ಕು ಕೃತಿಗಳು ನಟನಾ ತಂಡಕ್ಕೆ [೫] ಹಾಗು ಪ್ರೇಕ್ಷಕರಿಗೆ ಸವಾಲನ್ನು ಒಡ್ಡುತ್ತವೆ, ಏಕೆಂದರೆ ಸಾಂಪ್ರದಾಯಿಕ ಶೈಲಿಗೆ ಬದಲಾಗಿ ಚೆಕೊವ್ "ಭಾವನೆಗಳ ನಾಟಕ" ಹಾಗು "ಕಥಾವಸ್ತುವಿನಲ್ಲಿ ಮುಳುಗಿದ ಜೀವನವನ್ನು"ಒದಗಿಸುತ್ತಾರೆ.[೬] ಚೆಕೊವ್ ಮೊದಲು ಕಥೆಗಳನ್ನು ಕೇವಲ ಹಣಕ್ಕಾಗಿ ಬರೆದರು. ಆದರೆ ಅವರ ಕಲಾತ್ಮಕ ಮಹತ್ವಾಕಾಂಕ್ಷೆಯು ಹೆಚ್ಚಾಗುತ್ತಿದ್ದಂತೆ, ವಿಧ್ಯುಕ್ತವಾದ ಹೊಸ ನಾವೀನ್ಯಗಳನ್ನು ತಂದರು. ಇದು ಆಧುನಿಕ ಸಣ್ಣ ಕಥೆಯ ವಿಕಾಸಕ್ಕೆ ಪ್ರಭಾವ ಬೀರಿತು.[೭] ಅವರ ಸ್ವೋಪಜ್ಞತೆಯು ನಿರೂಪಣಾ ವಿಧಾನ ತಂತ್ರದ ಆರಂಭಿಕ ಬಳಕೆಯನ್ನು ಒಳಗೊಂಡಿತ್ತು. ಇದನ್ನು ನಂತರದಲ್ಲಿ ಜೇಮ್ಸ್ ಜಾಯ್ಸ್ ಹಾಗು ಇತರ ಆಧುನಿಕತಾವಾದಿಗಳು ಸಾಂಪ್ರದಾಯಿಕ ಕಥಾ ರಚನೆಯಲ್ಲಿ ನೈತಿಕ ಅಂತ್ಯತೆಯ ನಿರಾಕರಣೆಯ ಸಂಯೋಜನೆಯೊಂದಿಗೆ ಅಳವಡಿಸಿಕೊಂಡರು.[೮] ಇದು ಓದುಗರಿಗೆ ಒಡ್ಡುತ್ತಿದ್ದ ಕ್ಲಿಷ್ಟತೆಗಳಿಗೆ ಎಂದಿಗೂ ಅವರು ಕ್ಷಮೆಯಾಚಿಸುತ್ತಿರಲಿಲ್ಲ. ಒಬ್ಬ ಕಲಾವಿದನ ಕೆಲಸವೆಂದರೆ ಪ್ರಶ್ನೆಯನ್ನು ಹಾಕುವುದು, ಅವುಗಳಿಗೆ ಉತ್ತರಿಸುವುದಲ್ಲವೆಂದು ಪ್ರತಿಪಾದಿಸುತ್ತಿದ್ದರು.[೯]
ಜೀವನ ವೃತ್ತಾಂತ
[ಬದಲಾಯಿಸಿ]ಬಾಲ್ಯ
[ಬದಲಾಯಿಸಿ]ಆಂಟನ್ ಚೆಕೊವ್ 29 ಜನವರಿ 1860ರಲ್ಲಿ, ಬದುಕುಳಿದ ಆರು ಮಕ್ಕಳಲ್ಲಿ ಮೂರನೆಯವರಾಗಿ, ದಕ್ಷಿಣ ರಷ್ಯಾದಲ್ಲಿರುವ ಸೀ ಆಫ್ ಅಜೊವ್ ನ ಬಂದರಿನ ಪಟ್ಟಣ ತಗನ್ರೋಗ್ ನಲ್ಲಿ ಜನಿಸಿದರು. ಒಬ್ಬ ಮಾಜಿ ಜೀತಗಾರನ ಮಗನಾಗಿದ್ದ ಚೆಕೊವ್ ತಂದೆ, ಪಾವೆಲ್ ಯೆಗೊರೋವಿಚ್ ಚೆಕೊವ್, ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು. ಪ್ಯಾರಿಷ್ ಕ್ವಯರ್(ಚರ್ಚಿನ ಗಾಯಕವೃಂದ)ನ ನಿರ್ದೇಶಕ, ಧರ್ಮನಿಷ್ಠ ಸಂಪ್ರದಾಯಸ್ಥ ಕ್ರಿಶ್ಚಿಯನ್, ಹಾಗು ದೈಹಿಕವಾಗಿ ಹಿಂಸಿಸುತ್ತಿದ್ದ ತಂದೆಯಾಗಿ ಪಾವೆಲ್ ಚೆಕೊವ್ ರನ್ನು ಕೆಲವು ಇತಿಹಾಸಜ್ಞರು ಅವರ ಮಗನ ಹಲವು ಪಾತ್ರಗಳಲ್ಲಿ ಕಂಡುಬರುವ ಆಷಾಢಭೂತಿತನದ ಮಾದರಿಯೆಂದು ಅಭಿಪ್ರಾಯಪಡುತ್ತಾರೆ.[೧೦] ಚೆಕೊವ್ ರ ತಾಯಿ, ಎವ್ಗೆನಿಯಾ, ಒಬ್ಬ ಅತ್ಯದ್ಭುತ ಕಥಾನಿರೂಪಕಿ. ಈಕೆ ತಮ್ಮ ವಸ್ತ್ರವ್ಯಾಪಾರಿ ತಂದೆಯ ಜೊತೆಗೆ ರಷ್ಯಾದುದ್ದಕ್ಕೂ ಪ್ರವಾಸ ಮಾಡಿದ ಕಥೆಗಳೊಂದಿಗೆ ಮಕ್ಕಳ ಮನರಂಜಿಸುತ್ತಿದ್ದರು.[೧೧][೧೨] "ನಮಗೆ ಪ್ರತಿಭೆಯು ನಮ್ಮ ತಂದೆಯಿಂದ ಬಂದ ಬಳುವಳಿ," ಎಂದು ಚೆಕೊವ್ ಸ್ಮರಿಸಿಕೊಳ್ಳುತ್ತಾರೆ, "ಆದರೆ ನಮಗೆ ಬೌದ್ಧಿಕ ಸ್ವಭಾವವು ನಮ್ಮ ತಾಯಿಯಿಂದ ಬಂದಿದೆ."[೧೩] ತಮ್ಮ ಪ್ರೌಢವಯಸ್ಸಿನಲ್ಲಿ, ಚೆಕೊವ್ ಅವರ ಸಹೋದರ ಅಲೆಕ್ಸಾಂಡರ್ ತಮ್ಮ ಪತ್ನಿ ಹಾಗು ಮಕ್ಕಳಿಗೆ ತೋರುತ್ತಿದ್ದ ಅನಾದರದ ಬಗ್ಗೆ ಪಾವೆಲ್ ರ ದಬ್ಬಾಳಿಕೆಯನ್ನು ನೆನಪಿಸುತ್ತಾ ಟೀಕಿಸುತ್ತಿದ್ದರು.
Let me ask you to recall that it was despotism and lying that ruined your mother's youth. Despotism and lying so mutilated our childhood that it's sickening and frightening to think about it. Remember the horror and disgust we felt in those times when Father threw a tantrum at dinner over too much salt in the soup and called Mother a fool.[೧೪][೧೫]
ಚೆಕೊವ್ ಸ್ಕೂಲ್ ಫಾರ್ ಗ್ರೀಕ್ ಬಾಯ್ಸ್ ಶಾಲೆಯಲ್ಲಿ ಕಲಿತು, ನಂತರ ತಗನ್ರೋಗ್ ಜಿಮ್ನೆಶಿಯಂ ನಲ್ಲಿ ಅಭ್ಯಾಸ ಮಾಡಿದರು, ಇದು ಈಗ ಚೆಕೊವ್ ಜಿಮ್ನೆಶಿಯಂ ಎಂದು ಮರುನಾಮಕರಣಗೊಂಡಿದೆ, ಗ್ರೀಕ್ ಪರೀಕ್ಷೆಯಲ್ಲಿ ನಪಾಸಾದ ಕಾರಣಕ್ಕೆ ಅವರ ಹದಿನೈದನೆ ವರ್ಷದಲ್ಲಿ ಅವರನ್ನು ಒಂದು ವರ್ಷ ಅದೇ ತರಗತಿಯಲ್ಲಿ ಇರಿಸಲಾಯಿತು.[೧೬] ಅವರು ತಗನ್ರೋಗ್‌ನ ಗ್ರೀಕ್ ಸಾಂಪ್ರದಾಯಿಕ ಮಂದಿರ ಹಾಗು ತಮ್ಮ ತಂದೆಯ ಗಾಯನವೃಂದದಲ್ಲಿ ಹಾಡುತ್ತಿದ್ದರು. 1892ರ ಒಂದು ಪತ್ರದಲ್ಲಿ, ತಮ್ಮ ಬಾಲ್ಯದ ನೆನಪುಗಳನ್ನು ವಿವರಿಸಲು "ಸಂಕಷ್ಟ " ಎಂಬ ಪದವನ್ನು ಬಳಸುತ್ತಾರೆ.
When my brothers and I used to stand in the middle of the church and sing the trio "May my prayer be exalted", or "The Archangel's Voice", everyone looked at us with emotion and envied our parents, but we at that moment felt like little convicts.[೧೭]
1876ರಲ್ಲಿ, ಹೊಸ ಮನೆಯನ್ನು ಕಟ್ಟಲು ಚೆಕೊವ್‌ರ ತಂದೆ ಮಿತಿಮೀರಿ ಸಾಲವನ್ನು ಪಡೆದ ನಂತರ ಅವರನ್ನು ದಿವಾಳಿ ಎಂದು ಘೋಷಿಸಲಾಯಿತು,[೧೮] ಜೊತೆಗೆ ಸಾಲಗಾರರ ಬಂದೀಖಾನೆಯಿಂದ ತಪ್ಪಿಸಲು ಅವರು ಮಾಸ್ಕೋಗೆ ಪರಾರಿಯಾದರು, ಅಲ್ಲಿ ಅವರ ಇಬ್ಬರು ಹಿರಿಯ ಮಕ್ಕಳಾದ ಅಲೆಕ್ಸಾಂಡರ್ ಹಾಗು ನಿಕೊಲೈ, ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದರು. ಮಾಸ್ಕೋನಲ್ಲಿ ಕುಟುಂಬವು ಬಡತನದಲ್ಲಿ ವಾಸಿಸಿತು, ಚೆಕೊವ್ ರ ತಾಯಿ ದೈಹಿಕವಾಗಿ ಹಾಗು ಮಾನಸಿಕವಾಗಿ ಜರ್ಜರಿತರಾದರು.[೧೯] ಬೇರೆ ಮಾರ್ಗವಿಲ್ಲದೆ ಚೆಕೊವ್ ತಮ್ಮ ಕೌಟುಂಬಿಕ ಆಸ್ತಿಪಾಸ್ತಿಗಳನ್ನು ಮಾರಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬೇಕಾಯಿತು.
ಚೆಕೊವ್ ಮತ್ತೆ ಮೂರು ವರ್ಷಗಳ ಕಾಲ ತಗನ್ರೋಗ್ ನಲ್ಲೇ ಉಳಿದು ಸೇಲಿವನೋವ್ ಎಂಬುವವರ ಮನೆಯಲ್ಲಿ ಭೋಜನ ಮಾಡುತ್ತಿದ್ದರು. ಈ ಪರಿಸ್ಥಿತಿಯು ದಿ ಚೆರ್ರಿ ಆರ್ಚರ್ಡ್ ನಲ್ಲಿ ಬರುವ ಲೊಪಾಖಿನ್ ರೀತಿಯಲ್ಲಿ ಅವರ ಮನೆಯ ಮೌಲ್ಯದ ಆಧಾರದ ಮೇಲೆ ಕುಟುಂಬವನ್ನು ಬಿಡಿಸುತ್ತಾನೆ.[೨೦] ಚೆಕೊವ್ ತಮ್ಮ ಶಿಕ್ಷಣವನ್ನು ಮುಂದುವರಿಸಲು ತಾವೇ ಹಣವನ್ನು ಹೊಂದಿಸಿಕೊಳ್ಳಬೇಕಾಯಿತು, ಇದನ್ನು ಅವರು ಮನೆಪಾಠ ಮಾಡುವ ಮೂಲಕ, ಸ್ವರ್ಣಪಕ್ಷಿ ಗಳನ್ನು ಹಿಡಿಯುವುದು ಹಾಗು ಮಾರಾಟಮಾಡುವುದು, ಹಾಗು ದಿನಪತ್ರಿಕೆಗಳಿಗೆ ಸಣ್ಣ ರೇಖಾಚಿತ್ರಗಳನ್ನು ಮಾರಾಟ ಮಾಡುವ ಮೂಲಕ ನಿರ್ವಹಿಸಿದರು.[೨೧] ಅವರು ಉಳಿಸಿದ ಒಂದೊಂದು ರೂಬಲ್ ನ್ನು ಮಾಸ್ಕೊಗೆ ಕಳುಹಿಸುವುದರ ಜೊತೆಗೆ ತಮ್ಮ ಕುಟುಂಬವನ್ನು ಹುರಿದುಂಬಿಸಲು ಹಾಸ್ಯಭರಿತ ಪತ್ರಗಳನ್ನು ಬರೆಯುತ್ತಿದ್ದರು.[೨೧] ಈ ಅವಧಿಯಲ್ಲಿ, ಅವರು ವ್ಯಾಪಕವಾಗಿ ಹಾಗು ವಿಶ್ಲೇಷಣಾತ್ಮಕವಾಗಿ ಅಧ್ಯಯನ ನಡೆಸಿದರು, ಇವರ ಅಧ್ಯಯನದಲ್ಲಿ ಸರ್ವಾನ್ಟೆಸ್, ತುರ್ಗೆನೆವ್, ಗೊಂಚರೋವ್, ಹಾಗು ಸ್ಕ್ಹೊಪೇನ್ ಹುಯೇರ್;[೨೨][೨೩] ಸೇರಿದ್ದರು ಜೊತೆಗೆ ಒಂದು ಪೂರ್ಣಪ್ರಮಾಣದ ಹಾಸ್ಯ ನಾಟಕ ಫಾದರ್ಲೆಸ್ ನ್ನು ಬರೆದರು.ಅದನ್ನು ಸಹೋದರ ಅಲೆಕ್ಸಾಂಡರ್ " ಕ್ಷಮಿಸಲಾಗದ ಅಮಾಯಕ ಕಲ್ಪನೆ" ಎಂದು ತಳ್ಳಿಹಾಕಿದರು.[೨೪] ಚೆಕೊವ್ ಪ್ರೇಮ ಪ್ರಕರಣಗಳ ಸರಣಿಯನ್ನೇ ಅನುಭವಿಸಿದರು, ಇದರಲ್ಲಿ ಒಬ್ಬ ಶಿಕ್ಷಕನ ಪತ್ನಿಯೊಂದಿಗಿನ ಪ್ರೇಮ ಪ್ರಕರಣವೂ ಸೇರಿದೆ.[೨೧] 1879ರಲ್ಲಿ, ಚೆಕೊವ್ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ, ಮಾಸ್ಕೋ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆತ ಕಾರಣ ಮಾಸ್ಕೋನಲ್ಲಿರುವ ತಮ್ಮ ಕುಟುಂಬವನ್ನು ಸೇರುತ್ತಾರೆ.[೨೫]
ಆರಂಭಿಕ ಬರಹಗಳು
[ಬದಲಾಯಿಸಿ]ಚೆಕೊವ್ ಸಂಪೂರ್ಣ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ.[೨೬] ಕುಟುಂಬದ ನಿರ್ವಹಣೆಗೆ ಹಾಗು ಕಾಲೇಜಿನ ಶುಲ್ಕವನ್ನು ಭರಿಸಲು, ಅವರು ನಿತ್ಯವೂ ಸಣ್ಣ, ಹಾಸ್ಯಭರಿತ ರೇಖಾಚಿತ್ರಗಳನ್ನು ಹಾಗು ಸಮಕಾಲೀನ ರಷ್ಯನ್ ಜೀವನಶೈಲಿಯ ಮುಖಪತ್ರಚಿತ್ರ(ವೀನ್ಯೆಟ್)ವನ್ನು ಗುಪ್ತನಾಮಗಳಲ್ಲಿ ರಚಿಸುತ್ತಾರೆ ಉದಾಹರಣೆಗೆ "ಅನ್ತೋಷ ಚೆಕ್ಹೊಂತೆ" (Антоша Чехонте) ಹಾಗು "ಮ್ಯಾನ್ ವಿಥೌಟ್ ಸ್ಪ್ಲೀನ್" (Человек без селезенки). ಅವರ ಅಸಾಧಾರಣ ಕೆಲಸವು ಕ್ರಮೇಣ ಅವರಿಗೆ ರಷ್ಯಾದ ಬೀದಿ ಬದಿಯ ಜೀವನದ ವಿಡಂಬನಾತ್ಮಕ ದಾಖಲೆಗಾರ ಎಂಬ ಖ್ಯಾತಿಯನ್ನು ಗಳಿಸಿಕೊಟ್ಟಿತು, ಹಾಗು 1882ರ ಹೊತ್ತಿಗೆ, ಅಂದಿನ ಅವಧಿಯಲ್ಲಿ ಪ್ರಮುಖ ಪ್ರಕಾಶಕರಾಗಿದ್ದ ನಿಕೊಲೈ ಲೆಯಿಕಿನ್‌ರ ಒಡೆತನದಲ್ಲಿದ್ದ ಓಸ್ಕೊಲ್ಕಿ ಯಲ್ಲಿ(ಫ್ರಾಗ್ಮೆಂಟ್ಸ್ ) ಅವರ ಬರಹಗಳು ಪ್ರಕಟವಾದವು.[೨೭] ಈ ಹಂತದಲ್ಲಿ ಚೆಕೊವ್ ರ ಶೈಲಿಯು ಅವರ ಪಕ್ವಗೊಂಡ ಕಾದಂಬರಿಗಳ ಶೈಲಿಗಿಂತ ಕಟುವಾಗಿತ್ತು.[೨೮] 1884ರಲ್ಲಿ, ಚೆಕೊವ್ ಒಬ್ಬ ವೈದ್ಯನಾಗಿ ಅರ್ಹತೆಯನ್ನು ಗಳಿಸಿದರು, ಈ ವೃತ್ತಿಯಿಂದ ಅಲ್ಪ ಹಣವನ್ನು ಗಳಿಸಿದರೂ ಸಹ ಅವರು ಇದನ್ನು ತಮ್ಮ ಪ್ರಧಾನ ವೃತ್ತಿಯೆಂದು ಪರಿಗಣಿಸಿ, ಬಡವರಿಗೆ ಉಚಿತವಾದ ಸೇವೆಯನ್ನು ಒದಗಿಸುತ್ತಿದ್ದರು.[೨೯] 1884 ಹಾಗು 1885ರಲ್ಲಿ, ಚೆಕೊವ್ ರಕ್ತವಾಂತಿಯಿಂದ ಬಳಲಿದರು, ಹಾಗು 1886ರಲ್ಲಿ ಈ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿತು; ಆದರೆ ತಮ್ಮ ಕುಟುಂಬಕ್ಕೆ ಹಾಗು ಸ್ನೇಹಿತರಿಗೆ ಇದು ಕ್ಷಯವೆಂದು ಅವರು ಹೇಳಿಕೊಳ್ಳಲಿಲ್ಲ,[೧೩] ಲೆಯಿಕಿನ್ ರೊಂದಿಗೆ ಈ ಸಂಗತಿಯನ್ನು ಒಪ್ಪಿಕೊಳ್ಳುತ್ತಾ,"ನನ್ನ ಸಹೋದ್ಯೋಗಿಗಳ ಧ್ವನಿ ಕೇಳುವಂತೆ ಸ್ವತಃ ತಮ್ಮನ್ನು ಒಳಪಡಿಸಿಕೊಳ್ಳಲು ಹೆದರಿಕೆಯಾಯಿತು ಎಂದು ಹೇಳಿದ್ದಾರೆ.[೩೦] ಅವರು ವಾರಪತ್ರಿಕೆಗಳಿಗೆ ಬರವಣಿಗೆಯನ್ನು ಮುಂದುವರೆಸಿದರು, ಕುಟುಂಬವನ್ನು ಒಂದು ಉತ್ತಮ ಸೌಕರ್ಯವುಳ್ಳ ಮನೆಗೆ ವರ್ಗಾಯಿಸಲು ಬೇಕಾದಷ್ಟು ಹಣವನ್ನು ಗಳಿಸಿದರು. 1886ರ ಆರಂಭದಲ್ಲಿ St. ಪೀಟರ್ಸ್ಬರ್ಗ್ ನ ಅತ್ಯಂತ ಜನಪ್ರಿಯ ಪತ್ರಿಕೆಯಾದ ನೋವೊಯೇ ವ್ರೆಮ್ಯ (ನ್ಯೂ ಟೈಮ್ಸ್ ) ನಲ್ಲಿ ಬರೆಯಲು ಆಹ್ವಾನ ನೀಡಲಾಯಿತು, ಈ ಪತ್ರಿಕೆಯನ್ನು ಕೋಟ್ಯಧಿಪತಿ ಉದ್ಯಮಿ ಅಲೆಕ್ಸೆಯ್ ಸುವೊರಿನ್ ಮಾಲೀಕತ್ವ ಮತ್ತು ಸಂಪಾದಕತ್ವ ವಹಿಸಿದ್ದರು. ಇವರು ಒಂದು ಸಾಲಿಗೆ ಲೆಯಿಕಿನ್ ನೀಡುತ್ತಿದ್ದ ಹಣಕ್ಕಿಂತ ದುಪ್ಪಟ್ಟು ಹಣವನ್ನು ನೀಡುವುದರ ಜೊತೆಗೆ ಪತ್ರಿಕೆಯಲ್ಲಿ ಮೂರು ಪಟ್ಟು ಅಧಿಕ ಜಾಗವನ್ನು ಒದಗಿಸಿಕೊಟ್ಟರು.[೩೧] ಸುವೊರಿನ್ ಜೀವನಾವಧಿಯ ಒಬ್ಬ ಸ್ನೇಹಿತರಾದರು, ಬಹುಶಃ ಚೆಕೊವ್ ರ ಅತ್ಯಂತ ಆತ್ಮೀಯರು.[೩೨][೩೩] ಶೀಘ್ರದಲ್ಲೇ, ಚೆಕೊವ್ ಸಾಹಿತ್ಯಕವಾಗಿ ಹಾಗೂ ಜನಪ್ರಿಯ ಗಮನವನ್ನು ಸೆಳೆದರು. ಅಂದಿನ ಪ್ರಸಿದ್ಧ ರಷ್ಯನ್ ಕಥೆಗಾರ ಅರವತ್ತನಾಲ್ಕು ವರ್ಷದ ಡಿಮಿಟ್ರಿ ಗ್ರಿಗೊರೋವಿಚ್, ಚೆಕೊವ್ ರ ಸಣ್ಣ ಕಥೆ ದಿ ಹಂಟ್ಸ್‌ಮನ್ ನನ್ನು ಓದಿದ ಬಳಿಕ ಅವರಿಗೆ ಪತ್ರ ಬರೆಯುತ್ತಾರೆ,[೩೪]"ನಿಮಗೆ ನಿಜ ವಾದ ಪ್ರತಿಭೆಯಿದೆ-ಈ ಪ್ರತಿಭೆಯು ನಿಮ್ಮನ್ನು ಹೊಸ ಪೀಳಿಗೆಯ ಬರಹಗಾರರ ನಡುವೆ ಅಗ್ರಸ್ಥಾನದಲ್ಲಿ ಇರಿಸುತ್ತದೆ." ಅವರು ಚೆಕೊವ್ ಗೆ ನಿಧಾನಗತಿಯಲ್ಲಿ, ಕಡಿಮೆ ಬರೆಯಬೇಕೆಂದು, ಹಾಗು ಸಾಹಿತ್ಯದ ಗುಣಮಟ್ಟದ ಮೇಲೆ ಗಮನವನ್ನು ಹರಿಸಬೇಕೆಂದು ಸಲಹೆ ನೀಡುತ್ತಾರೆ. ಚೆಕೊವ್ ಅವರಿಗೆ ಮರು ಪ್ರತಿಕ್ರಿಯೆ ನೀಡುತ್ತಾ ಪತ್ರವು ಅವರನ್ನು "ಸಿಡಿಲಿನಂತೆ"ಬಡಿಯಿತೆಂದು ಹೇಳುತ್ತಾರೆ. ಜೊತೆಗೆ "ನಾನು ನನ್ನ ಕಥೆಗಳನ್ನು ವರದಿಗಾರರು ಅಗ್ನಿಅನಾಹುತಗಳ ಬಗ್ಗೆ ಬರೆಯುವ ಟಿಪ್ಪಣಿಗಳ ಮಾದರಿಯಲ್ಲಿ ಬರೆದಿದ್ದೇನೆ- ಯಾಂತ್ರಿಕವಾಗಿ, ಅರೆ-ಪ್ರಜ್ಞಾಪೂರ್ವಕವಾಗಿ, ಓದುಗನ ಬಗ್ಗೆಯಾಗಲಿ ಅಥವಾ ನನ್ನ ಬಗ್ಗೆಯಾಗಲಿ ಸ್ವಲ್ಪವೂ ಗಮನಹರಿಸದೆ ಬರೆದಿದ್ದೇನೆ" ಎಂದು ಒಪ್ಪಿಕೊಳ್ಳುತ್ತಾರೆ.[೩೫] ಈ ಒಪ್ಪಿಗೆಯು ಚೆಕೊವ್ ಗೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಿತು, ಅವರು ಸಾಮಾನ್ಯವಾಗಿ ತೀವ್ರ ಕಾಳಜಿಯಿಂದ, ಸತತವಾಗಿ ಪುನರಾವರ್ತನೆ ಮಾಡಿ ಬರೆಯುತ್ತಿದ್ದರೆಂಬುದಕ್ಕೆ ಅವರ ಹಿಂದಿನ ಹಸ್ತಪ್ರತಿಗಳು ಬಹಿರಂಗ ಮಾಡಿವೆ.[೩೬] ಆದಾಗ್ಯೂ ಗ್ರಿಗೊರೋವಿಚ್ ರ ಸಲಹೆಯು ಅತ್ಯಂತ ತೀವ್ರವಾಗಿ, ಕಲಾತ್ಮಕ ಮಹತ್ವಾಕಾಂಕ್ಷೆಯನ್ನು ಇಪ್ಪತ್ತು ವರ್ಷದ ಚೆಕೊವ್ ರಲ್ಲಿ ತುಂಬಿತು. 1887ರಲ್ಲಿ, ಗ್ರಿಗೊರೋವಿಚ್‌ರ ಸ್ವಲ್ಪ ನಿಯಂತ್ರಣದೊಂದಿಗೆ ಬರೆದ ಸಣ್ಣಕಥಾ ಸಂಗ್ರಹ ಅಟ್ ಡಸ್ಕ್ (V ಸುಮೆರ್ಕಖ್ ) ಚೆಕೊವ್‌ಗೆ ಪ್ರತಿಷ್ಟಿತ ಪುಷ್ಕಿನ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. "ಅಧಿಕ ಕಲಾತ್ಮಕ ಅರ್ಹತೆಯಿಂದ ವಿಶಿಷ್ಟವಾಗಿರುವ ಅತ್ಯುತ್ತಮ ಸಾಹಿತ್ಯಕ ಕೃತಿ" ಗಾಗಿ ಈ ಪ್ರಶಸ್ತಿ ಸಿಕ್ಕಿತು."[೩೭]
ನಿರ್ಣಾಯಕ ತಿರುವುಗಳು
[ಬದಲಾಯಿಸಿ]ಆ ವರ್ಷ, ಅಧಿಕ ಕೆಲಸ ಕಾರ್ಯಗಳು ಹಾಗು ಅನಾರೋಗ್ಯದ ಕಾರಣದಿಂದಾಗಿ ಬಳಲಿದ ಚೆಕೊವ್ ಉಕ್ರೈನ್ ಗೆ ಪ್ರವಾಸ ಹೋಗುತ್ತಾರೆ. ಅಲ್ಲಿನ ಸ್ಟೆಪ್ಪೆಯ ಸೌಂದರ್ಯದಿಂದ ಪುನರ್ಜಾಗೃತರಾಗುತ್ತಾರೆ.[೩೮] ಅಲ್ಲಿಂದ ಮರಳಿದ ನಂತರ, ಕಿರು ಕಾದಂಬರಿ ಪ್ರಮಾಣದ ಸಣ್ಣ ಕಥೆ ದಿ ಸ್ಟೆಪ್ಪೆ ಯ ಬರವಣಿಗೆಯನ್ನು ಆರಂಭಿಸುತ್ತಾರೆ, "ಒಂದಷ್ಟು ವಿಚಿತ್ರವೆನಿಸಿದರೂ ಹೆಚ್ಚು ನವೀನತೆಯನ್ನು ಕೂಡಿತ್ತು"ಎಂದು ಹೇಳುತತಾರೆ. ಅಂತಿಮವಾಗಿ ಈ ಕಥೆಯನ್ನು ಸೆವೆರ್ನಿ ವೆಸ್ಟ್ನಿಕ್ (ದಿ ನಾರ್ದನ್ ಹೆರಾಲ್ಡ್ ) ನಲ್ಲಿ ಪ್ರಕಟಿಸಲಾಯಿತು.[೩೯] ಪಾತ್ರಗಳ ಚಿಂತನಾ ಪ್ರಕ್ರಿಯೆಗಳನ್ನು ಒಟ್ಟುಗೂಡಿಸುವ ಕಥಾ ನಿರೂಪಣೆಯಲ್ಲಿ, ಚೆಕೊವ್, ಹುಲ್ಲುಗಾವಲಿನಲ್ಲಿ ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡುವ ಚಿಕ್ಕ ಹುಡುಗನ ದೃಷ್ಟಿಕೋನದ ಮೂಲಕ ಕಥೆಯನ್ನು ಸೃಷ್ಟಿಸುತ್ತಾರೆ, ಈ ಹುಡುಗನನ್ನು ಅವನ ಮನೆಯಿಂದ, ಅವನ ಒಡನಾಡಿಗಳಾದ ಒಬ್ಬ ಪಾದ್ರಿ ಹಾಗು ಒಬ್ಬ ವ್ಯಾಪಾರಿಯ ಜತೆ ದೂರ ವಾಸಿಸಲು ಕಳುಹಿಸಲಾಗುತ್ತದೆ. ದಿ ಸ್ಟೆಪ್ಪೆ ಯನ್ನು, ಚೆಕೊವ್ ರ ಕೃತಿಗಳ ನಿಘಂಟು" ಎಂದು ಕರೆಯಲಾಗಿದೆ, ಇದು ಸಾಹಿತ್ಯಲೋಕದಲ್ಲಿ ಚೆಕೊವ್ ರ ಗಮನಾರ್ಹ ಮುನ್ನಡೆಯನ್ನು ಪ್ರತಿನಿಧಿಸುತ್ತದೆ, ಅವರ ಪಕ್ವಕಾದಂಬರಿಗಳ ಉತ್ತಮ ಗುಣಮಟ್ಟವನ್ನು ಪ್ರದರ್ಶಿಸುವುದರ ಜೊತೆಗೆ ದಿನಪತ್ರಿಕೆಗಿಂತ ಹೆಚ್ಚಾಗಿ ಒಂದು ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಗೊಳ್ಳುವುದರ ಮೂಲಕ ಗೆಲುವನ್ನು ಸಾಧಿಸುತ್ತದೆ.[೪೦] 1887ರ ಶರತ್ಕಾಲದಲ್ಲಿ, ಕೊರ್ಶ್ ಎಂಬ ರಂಗಭೂಮಿ ವ್ಯವಸ್ಥಾಪಕ, ನಾಟಕವನ್ನು ಬರೆಯಲು ಚೆಕೊವ್ ರನ್ನು ನಿಯೋಜಿಸುತ್ತಾರೆ, ಇದರ ಪರಿಣಾಮವಾಗಿ ಹದಿನೈದು ದಿವಸಗಳೊಳಗಾಗಿ ಹೊರಬಂದ ನಾಟಕವೇ ಇವನೋವ್ ಹಾಗು ಇದನ್ನು ಅದೇ ವರ್ಷದ ನವೆಂಬರ್ ನಲ್ಲಿ ನಿರ್ಮಾಣ ಮಾಡಲಾಯಿತು.[೧೩] ಈ ಅನುಭವವು ಚೆಕೊವ್ ರಿಗೆ "ಬೇಸರವನ್ನು" ಉಂಟುಮಾಡಿತು, ಹಾಗು ತಮ್ಮ ಸಹೋದರ ಅಲೆಕ್ಸಾಂಡರ್ ಗೆ ಈ ಅವ್ಯವಸ್ಥಿತ ನಿರ್ಮಾಣದ ಬಗ್ಗೆ ಒಂದು ಹಾಸ್ಯಾಸ್ಪದ ನುಡಿಚಿತ್ರದೊಂದಿಗೆ ಪತ್ರವನ್ನು ಬರೆಯುತ್ತಾರೆ. ಚೆಕೊವ್ ರನ್ನು ತಬ್ಬಿಬ್ಬುಗೊಳಿಸುವಂತೆ ನಾವೀನ್ಯತೆಯ ಕೃತಿಯಾಗಿ ನಾಟಕವು ಜನಪ್ರಿಯತೆ ಹಾಗೂ ಪ್ರಶಂಸೆಯನ್ನು ಗಳಿಸುತ್ತದೆ.[೪೧] ಮಿಖೈಲ್ ಚೆಕೊವ್ ಐವನೋವ್ ನ್ನು ತಮ್ಮ ಸಹೋದರನ ಬೌದ್ಧಿಕ ಬೆಳವಣಿಗೆ ಹಾಗು ಸಾಹಿತ್ಯಕ ವೃತ್ತಿಜೀವನದ ಒಂದು ಪ್ರಮುಖ ಕ್ಷಣವೆಂದು ಪರಿಗಣಿಸುತ್ತಾರೆ.[೧೩] ಈ ಅವಧಿಯಿಂದ ಚೆಕೊವ್ ರ ಕೃತಿಗಳ ಗಂಭೀರ ಪರಿಶೀಲನೆಯು ಆರಂಭವಾಗುತ್ತದೆ, ಇದು "ಚೆಕೊವ್'ಸ್ ಗನ್" ಎಂದು ಹೆಸರಾಗುತ್ತದೆ. ಇದನ್ನು ಇಲಿಯ ಗುರ್ಲಿಯಂಡ್ ಅವರೊಂದಿಗಿನ ಸಂಭಾಷಣೆಯಲ್ಲಿ ಕಂಡುಬರುತ್ತದೆ "ದೃಶ್ಯದಲ್ಲಿ ಗೋಡೆಯ ಮೇಲೆ ಪಿಸ್ತೂಲು ಕಂಡುಬಂದರೆ, ಕಡೆ ದೃಶ್ಯದಲ್ಲಿ ಅದರಿಂದ ಗುಂಡನ್ನು ಹಾರಿಸಬೇಕು."[೪೨][೪೩] 1889ರಲ್ಲಿ ಚೆಕೊವ್ ರ ಸಹೋದರ ನಿಕೊಲೈ ಕ್ಷಯದಿಂದ ಮರಣ ಹೊಂದಿದ್ದು ಏ ಡ್ರಿಯರಿ ಸ್ಟೋರಿ ಯ ಬರಹಕ್ಕೆ ಕಾರಣವಾಯಿತು. ಸೆಪ್ಟೆಂಬರ್ ನಲ್ಲಿ ಪೂರ್ಣಗೊಂಡ ಕಥೆಯಲ್ಲಿ, ಒಬ್ಬ ಮನುಷ್ಯ ತನ್ನ ಜೀವನವು ಉದ್ದೇಶರಹಿತವಾದುದ್ದೆಂದು ಮನಗಂಡ ಬಳಿಕ ತನ್ನ ಜೀವನದ ಅಂತ್ಯವನ್ನು ಎದುರಿಸುತ್ತಾನೆ.[೪೪][೪೫] ನಿಕೊಲೈನ ಮರಣದ ನಂತರ ಅವರ ಸಹೋದರನ ಖಿನ್ನತೆ ಹಾಗು ಚಡಪಡಿಕೆಯನ್ನು ದಾಖಲಿಸಿದ ಮಿಖೈಲ್ ಚೆಕೊವ್, ಆ ಸಮಯದಲ್ಲಿ ತಮ್ಮ ಕಾನೂನು ಅಧ್ಯಯನ ಭಾಗವಾಗಿ ಬಂಧಿಖಾನೆಗಳಿಗೆ ಭೇಟಿ ನೀಡಿ ಸಂಶೋಧನೆಯನ್ನು ನಡೆಸುತ್ತಿದ್ದರು, ಹಾಗು ಆಂಟನ್ ಚೆಕೊವ್, ತಮ್ಮ ವೈಯಕ್ತಿಕ ಜೀವನ ಉದ್ದೇಶದ ಶೋಧನೆಯಲ್ಲಿ, ಸ್ವತಃ ಬಂಧಿಖಾನೆಯನ್ನು ಸುಧಾರಣೆ ಮಾಡುವ ವಿಷಯ ಮನಸ್ಸನ್ನು ಆವರಿಸಿತು.[೧೩]
ಸಖಾಲಿನ್
[ಬದಲಾಯಿಸಿ][[|thumb|left|ಟಾಮ್ಸ್ಕ್ ಸ್ಮಾರಕ. "ಆಂಟನ್ ಪವ್ಲೋವಿಚ್ ಟಾಮ್ಸ್ಕ್ ನಲ್ಲಿ-ಎಂದಿಗೂ ಕಷ್ತಂಕವನ್ನು ಓದಿರದ,ಚರಂಡಿಯಲ್ಲಿ ಬಿದ್ದಿರುವ ಕುಡುಕನ ದೃಷ್ಟಿಕೋನ,[೪೬] ]] 1890ರಲ್ಲಿ, ಚೆಕೊವ್ ರೈಲಿನಲ್ಲಿ, ಕುದುರೆ ಗಾಡಿಯಲ್ಲಿ, ಹಾಗು ನದಿಯ ಸ್ಟೀಮರ್‌ಗಳಲ್ಲಿ ರಷ್ಯಾದ ದೂರ ಪ್ರದೇಶಗಳು ಹಾಗು ಕಟೋರ್ಗಕ್ಕೆ ಅಥವಾ ಉತ್ತರ ಜಪಾನ್‌ನ ಸಕಾಲಿನ್ ದ್ವೀಪದ ದಂಡನೆಯ ನೆಲೆಗೆ ಪ್ರಯಾಸಕರವಾದ ಪ್ರಯಾಣವನ್ನುಕೈಗೊಳ್ಳುತ್ತಾರೆ. ಇಲ್ಲಿ ಅವರು ಜನಗಣತಿಗಾಗಿ ಸಾವಿರಾರು ಕೈದಿಗಳು ಹಾಗೂ ನೆಲೆಸ್ಥಾಪಿಸಿದವರ ಸಂದರ್ಶನ ಮಾಡುತ್ತಾ ಮೂರು ತಿಂಗಳು ಕಳೆಯುತ್ತಾರೆ. ಸಖಾಲಿನ್ ಗೆ ಕೈಗೊಂಡ ಎರಡೂವರೆ ತಿಂಗಳ ಪ್ರಯಾಣದ ಅವಧಿಯಲ್ಲಿ ಚೆಕೊವ್ ಬರೆದ ಪತ್ರಗಳು ಅವರ ಅತ್ಯುತ್ತಮ ಬರಹಗಳೆಂದು ಪರಿಗಣಿಸಲಾಗಿದೆ.[೪೭] ಟಾಮ್ಸ್ಕ್ ಬಗ್ಗೆ ತಮ್ಮ ಸಹೋದರಿಗೆ ಬರೆದ ಪತ್ರವು ಸಹ ಕುಖ್ಯಾತಿ ಗಳಿಸಿತು.[೪೮][೪೯]
"Tomsk is a very dull town. To judge from the drunkards whose acquaintance I have made, and from the intellectual people who have come to the hotel to pay their respects to me, the inhabitants are very dull, too."[೫೦]
ನಂತರ ಟಾಮ್ಸ್ಕ್ ನ ನಿವಾಸಿಗಳು ಚೆಕೊವ್ ರ ಒಂದು ಅಣಕು ಸ್ಮಾರಕವನ್ನು ಸ್ಥಾಪಿಸುವುದರ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡರು. ಸಖಾಲಿನ್ ನಲ್ಲಿ ಕಂಡ ದೃಶ್ಯಗಳು ಚೆಕೊವ್ ಗೆ ಆಘಾತವನ್ನು ಹಾಗು ಕ್ರೋಧವನ್ನು ಉಂಟುಮಾಡಿತು, ಇದರಲ್ಲಿ ಚಾವಟಿ ಏಟು, ಪೂರೈಕೆಗಳ ಅಕ್ರಮ, ಹಾಗು ಮಹಿಳೆಯರ ಬಲವಂತದ ವೇಶ್ಯಾವಾಟಿಕೆ ಎಲ್ಲವೂ ಸೇರಿತ್ತು, "ಕೆಲವೊಂದು ಬಾರಿ ನನ್ನ ಕಣ್ಣ ಮುಂದೆ ನಡೆಯುತ್ತಿದ್ದ ಚಟುವಟಿಕೆಗಳು ಕೀಳುಸ್ಥಿತಿಗೆ ಇಳಿದ ಮಾನವನ ಪರಮಾವಧಿಯ ಹಂತ" ಎಂದು ಅನೇಕ ಸಂದರ್ಭಗಳಲ್ಲಿ ಭಾವಿಸಿದ್ದಾಗಿ ಅವರು ಬರೆದಿದ್ದಾರೆ.[೫೧][೫೨] ಅವರು ವಿಶೇಷವಾಗಿ ದಂಡನೆಯ ನೆಲೆಯಲ್ಲಿ ತಮ್ಮ ತಂದೆತಾಯಿಗಳ ಜತೆ ವಾಸವಿದ್ದ ಮಕ್ಕಳ ಸಂಕಷ್ಟದ ಸ್ಥಿತಿ ಕಂಡು ವಿಶೇಷವಾಗಿ ನೊಂದಿದ್ದರು. ಉದಾಹರಣೆಗೆ:
On the Amur steamer going to Sakhalin, there was a convict who had murdered his wife and wore fetters on his legs. His daughter, a little girl of six, was with him. I noticed wherever the convict moved the little girl scrambled after him, holding on to his fetters. At night the child slept with the convicts and soldiers all in a heap together.[೫೩]
ಚೆಕೊವ್, ದಾನಧರ್ಮ ಹಾಗು ಚಂದಾ ನೀಡುವುದು ಇದಕ್ಕೆ ಉತ್ತರವಲ್ಲ. ಆದರೆ ಅಪರಾಧಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳುವುದು ಸರ್ಕಾರದ ಕರ್ತವ್ಯವೆಂಬ ತೀರ್ಮಾನಕ್ಕೆ ಬರುತ್ತಾರೆ. ಅವರ ಅಭಿಪ್ರಾಯಗಳನ್ನು 1893 ಹಾಗು 1894ರಲ್ಲಿ ಓಸ್ಟ್ರೋವ್ ಸಖಾಲಿನ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಯಿತು (ದಿ ಐಲ್ಯಾಂಡ್ ಆಫ್ ಸಖಾಲಿನ್ ), ಇದು ಒಂದು ಸಮಾಜ ವಿಜ್ಞಾನದ ಕೃತಿ - ಸಾಹಿತ್ಯವಲ್ಲ - ಪ್ರತಿಭಾಪೂರ್ಣತೆಗಿಂತ ಹೆಚ್ಚು ಪ್ರಶಂಸಾರ್ಹ ಹಾಗು ಭೋಧಪ್ರದವಾಗಿದೆ.[೫೪][೫೫] ಚೆಕೊವ್ "ಹೆಲ್ ಆಪ್ ಸಖಲೈನ್"ಗೆ ಸಾಹಿತ್ಯಕ ಅಭಿವ್ಯಕ್ತತೆಯನ್ನು ಅವರ ದೀರ್ಘ ಸಣ್ಣಕಥೆ ದಿ ಮರ್ಡರ್ ನಲ್ಲಿ ಕಾಣುತ್ತಾರೆ.[೫೬] ಸಖಾಲಿನ್ ಕುರಿತು ರೂಪುಗೊಂಡಿರುವ ಕಡೆಯ ಅಧ್ಯಾಯದಲ್ಲಿ, ಕೊಲೆಗಾರ ಯಕೊವ್ ರಾತ್ರಿಯಲ್ಲಿ ಮನೆಯನ್ನು ಸೇರುವ ಉತ್ಕಟ ಹಂಬಲದಿಂದ ಕಲ್ಲಿದ್ದಲನ್ನು ತುಂಬಿಸಿಕೊಳ್ಳುತ್ತಾನೆ.
ಮೆಲಿಖೊವೋ
[ಬದಲಾಯಿಸಿ]1892ರಲ್ಲಿ, ಚೆಕೊವ್, ಮಾಸ್ಕೋದ ದಕ್ಷಿಣಕ್ಕಿರುವ ಸುಮ್ಮರು ನಲವತ್ತು ಮೈಲಿ ದೂರದ ಮೆಲಿಖೊವೋದ ಒಂದು ಸಣ್ಣ ಎಸ್ಟೇಟ್ ನ್ನು ಖರೀದಿಸುತ್ತಾರೆ. ಅಲ್ಲಿ ತಮ್ಮ ಕುಟುಂಬದ ಜೊತೆಗೆ 1899ರವರೆಗೂ ವಾಸಿಸುತ್ತಾರೆ. "ಒಡೆಯನಾಗಲು ಬಹಳ ಚೆನ್ನಾಗಿರುತ್ತದೆ," ಎಂದು ಶ್ಚೆಗ್ಲೋವ್ ರೊಂದಿಗೆ ತಮಾಷೆ ಮಾಡುತ್ತಾರೆ;[೧೭] ಆದರೆ ಅವರು ಒಬ್ಬ ಒಡೆಯನ ಜವಾಬ್ದಾರಿಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಹಾಗು ಶೀಘ್ರವೇ ಸ್ಥಳೀಯ ರೈತರಿಗೆ ಬಹಳ ಸಹಕಾರಿಯಾಗುತ್ತಾರೆ. 1892ರಲ್ಲಿ ಏಕಾಏಕಿ ಆರಂಭವಾದ ಕ್ಷಾಮ ಹಾಗು ಕಾಲರಾ ಪೀಡಿತರಿಗೆ ಪರಿಹಾರವನ್ನು ಒದಗಿಸುತ್ತಾರೆ, ಅವರು ಮೂರು ಶಾಲೆಗಳು, ಒಂದು ಅಗ್ನಿಶಾಮಕ ಕೇಂದ್ರ ಹಾಗೂ ಒಂದು ಕ್ಲಿನಿಕ್ ಸ್ಥಾಪಿಸುತ್ತಾರೆ ಮತ್ತು ಆಗಾಗ್ಗೆ ಪುನರಾವರ್ತಿಸುವ ಕ್ಷಯದ ನಡುವೆಯೂ ತಮ್ಮ ವೈದ್ಯಕೀಯ ಸೇವೆಗಳನ್ನು ಸುತ್ತಮುತ್ತಲಿನ ಮೈಲುಗಟ್ಟಲೆ ದೂರದ ರೈತರಿಗೆ ಒದಗಿಸುತ್ತಾರೆ.[೧೦][೨೯][೫೭] ಮೆಲಿಖೊವೋನಲ್ಲಿ ಇವರ ಕುಟುಂಬದ ಸದಸ್ಯರಾಗಿದ್ದ ಮಿಖೈಲ್ ಚೆಕೊವ್, ತಮ್ಮ ಸಹೋದರನ ವೈದ್ಯಕೀಯ ಬದ್ಧತೆಗಳ ಹರವನ್ನು ವಿವರಿಸುತ್ತಾರೆ:
From the first day that Chekhov moved to Melikhovo, the sick began flocking to him from twenty miles around. They came on foot or were brought in carts, and often he was fetched to patients at a distance. Sometimes from early in the morning peasant women and children were standing before his door waiting.[೧೩]
ಔಷಧಗಳ ಮೇಲೆ ಚೆಕೊವ್ ಖರ್ಚು ಮಾಡುತ್ತಿದ್ದ ಹಣವು ಗಮನಾರ್ಹವಾಗಿತ್ತು; ಆದರೆ ರೋಗಿಗಳನ್ನು ಪರೀಕ್ಷಿಸಲು ಹಲವಾರು ಗಂಟೆಗಳ ಕಾಲ ಪ್ರಯಾಣ ಬೆಳೆಸುತ್ತಿದ್ದುದ್ದು ದುಬಾರಿಯೆನಿಸಿತ್ತು, ಇದರಿಂದಾಗಿ ಅವರ ಬರವಣಿಗೆಯ ಸಮಯ ಕುಂಠಿತಗೊಂಡಿತು.[೧೩] ಆದಾಗ್ಯೂ, ಚೆಕೊವ್ ಅವರ ವೈದ್ಯವೃತ್ತಿಯು, ರಷ್ಯಾ ಸಮಾಜದ ಎಲ್ಲ ವರ್ಗಗಳ ಜತೆ ನಿಕಟ ಸಾಮಿಪ್ಯವನ್ನು ತಂದುಕೊಡುವ ಮೂಲಕ ಅವರ ಬರವಣಿಗೆಯನ್ನು ಸಮೃದ್ಧಗೊಳಿಸಿತು. ಉದಾಹರಣೆಗೆ, ಮೊದಲಿಗೆ ಅವರು ರೈತರ ಅನಾರೋಗ್ಯಕರ ಹಾಗೂ ದುರ್ಭರ ಬದುಕಿನ ಸ್ಥಿತಿಗತಿಗಳಿಗೆ ಸಾಕ್ಷಿಯಾದರು. ಇದನ್ನು ಅವರ ಸಣ್ಣಕಥೆ ಪೆಸಂಟ್ಸ್ ನಲ್ಲಿ ಸ್ಮರಿಸಿದ್ದಾರೆ. ಚೆಕೊವ್ ಮೇಲ್ವರ್ಗದ ಜನರನ್ನೂ ಸಹ ಭೇಟಿಯಾಗುತ್ತಿದ್ದರು ಜೊತೆಗೆ ಅದನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿಕೊಳ್ಳುತ್ತಿದ್ದರು: "ಕುಲೀನರು? ಅದೇ ರೀತಿಯ ವಿಕೃತ ದೇಹಗಳು ಹಾಗು ದೈಹಿಕ ಅಶುಚಿಯ , ಅದೇ ಬೊಚ್ಚುಬಾಯಿಯ ವೃದ್ಧರು ಹಾಗು ಬೀದಿ ಮಹಿಳೆಯರಿಗೆ ಬರುವ ಜಿಗುಪ್ಸೆ ತರಿಸುವ ಸಾವು."[೫೮] ಚೆಕೊವ್ 1894ರಲ್ಲಿ ತಮ್ಮ ನಾಟಕ ದಿ ಸೀಗಲ್ ನ್ನು, ಮೆಲಿಖೊವೋದ ಹಣ್ಣಿನ ತೋಟದಲ್ಲಿ ತಾವೇ ನಿರ್ಮಿಸಿದ ಒಂದು ವಸತಿಗೃಹದಲ್ಲಿ ಬರೆಯಲು ಆರಂಭಿಸಿದರು. ಎಸ್ಟೇಟ್ ಗೆ ಬಂದ ಎರಡೇ ವರ್ಷದಲ್ಲಿ, ಅವರು ತಮ್ಮ ಮನೆಯನ್ನು ನವೀಕರಿಸಿ, ಕೃಷಿ ಹಾಗು ತೋಟಗಾರಿಕೆ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ, ಹಣ್ಣಿನ ತೋಟ ಹಾಗು ಕೊಳದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವುದರ ಜೊತೆಗೆ ಹಲವು ಸಸಿಗಳನ್ನು ನೆಡುತ್ತಾರೆ, ಮಿಖೈಲ್ ರ ಪ್ರಕಾರ, ಅವರು "ಅವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತ್ರೀ ಸಿಸ್ಟರ್ಸ್ ನಲ್ಲಿ ಕರ್ನಲ್ ವರ್ಶಿನಿನ್ ರೀತಿಯಲ್ಲಿ, ಅವುಗಳ ಕಡೆ ನೋಡುವಾಗ, ಅವರು ಮುನ್ನೂರು ಅಥವಾ ನಾನೂರು ವರ್ಷಗಳ ಬಳಿಕ ಅವುಗಳು ಹೇಗಿರಬಹುದೆಂದು ಕನಸು ಕಾಣುತ್ತಿದ್ದರು."[೧೩] 17 ಅಕ್ಟೋಬರ್ 1896ರಲ್ಲಿ ಪೀಟರ್ಸ್ಬರ್ಗ್ ನ ಅಲೆಕ್ಸಾಂಡ್ರಿನ್‌ಸ್ಕಿ ಥಿಯೇಟರ್ ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ದಿ ಸೀಗಲ್ ರಸಾಭಾಸವಾಯಿತು ಹಾಗೂ ಅಪಹಾಸ್ಯಕ್ಕೆ ಗುರಿಯಾಯಿತು. ನಾಟಕಕ್ಕೆ ದೊರೆತ ನೀರಸ ಸ್ವಾಗತದ ಪರಿಣಾಮವಾಗಿ ಚೆಕೊವ್ ರಂಗಭೂಮಿಯನ್ನು ತಾತ್ಕಾಲಿಕವಾಗಿ ತ್ಯಜಿಸುವುದಕ್ಕೆ ಕಾರಣವಾಯಿತು.[೫೯] ಆದರೆ ನಾಟಕವು ರಂಗಭೂಮಿ ನಿರ್ದೇಶಕ ವ್ಲಾಡಿಮಿರ್ ನೆಮಿರೋವಿಚ್-ದಂಚೆನ್ಕೋರ ಮೇಲೆ ತೀವ್ರ ಪ್ರಭಾವವನ್ನು ಬೀರಿತು. ಪರಿಣಾಮವಾಗಿ ಅವರು 1898ರಲ್ಲಿ ತಮ್ಮ ಸಹೋದ್ಯೋಗಿ ಕಾನ್ಸ್ಟಾನ್ಟಿನ್ ಸ್ಟಾನಿಸ್ಲಾವಸ್ಕಿಗೆ ಹೊಸ ಮಾಸ್ಕೋ ಆರ್ಟ್ ಥಿಯೇಟರ್ ಗಾಗಿ ನಾಟಕವನ್ನು ನಿರ್ದೇಶಿಸುವಂತೆ ಮನದಟ್ಟು ಮಾಡಿದರು.[೬೦] ಮನೋವೈಜ್ಞಾನಿಕ ವಾಸ್ತವಿಕತೆ ಮತ್ತು ಸಮಗ್ರ ನಾಟಕಕ್ಕೆ ಸ್ಟಾನಿಸ್ಲಾವಸ್ಕಿಯು ನೀಡುತ್ತಿದ್ದ ಗಮನವು ಪಠ್ಯದ ಸೂಕ್ಷ್ಮತೆಗಳನ್ನು ಹೊರಗೆಳೆಯಿತು ಮತ್ತು ನಾಟಕ ಬರವಣಿಗೆಯ ಮೇಲೆ ಚೆಕೊವ್ ಆಸಕ್ತಿ ಮರುಸ್ಥಾಪನೆಯಾಯಿತು.[೬೧] ಕಲಾ ಥಿಯೇಟರ್ ಚೆಕೊವ್ ರಿಂದ ಹೆಚ್ಚಿಗೆ ನಾಟಕಗಳನ್ನು ಬರೆಯಲು ನಿಯೋಜಿಸುತ್ತದೆ ಹಾಗು ಅದರ ಮರು ವರ್ಷವೇ ಅಂಕಲ್ ವಾನ್ಯ ನಾಟಕವು ಪ್ರದರ್ಶನಗೊಳ್ಳುತ್ತದೆ, ನಾಟಕವನ್ನು ಚೆಕೊವ್ 1896ರಲ್ಲೇ ಪೂರ್ಣಗೊಳಿಸಿದ್ದರು.[೬೨]
ಯಾಲ್ಟ
[ಬದಲಾಯಿಸಿ]ಮಾರ್ಚ್ 1897ರಲ್ಲಿ, ಮಾಸ್ಕೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ವಾಸಕೋಶಗಳ ರಕ್ತಸ್ರಾವದಿಂದ ಬಳಲುತ್ತಾರೆ, ಬಹಳ ಕಷ್ಟದಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತದೆ. ಅಲ್ಲಿ ವೈದ್ಯರು ಶ್ವಾಸಕೋಶಗಳ ಮೇಲ್ಭಾಗದಲ್ಲಿ ಕ್ಷಯವು ಹರಡಿರುವುದನ್ನು ಪತ್ತೆ ಮಾಡುತ್ತಾರೆ ಜೊತೆಗೆ ಅವರ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ಆದೇಶಿಸುತ್ತಾರೆ.[೬೩] 1898ರಲ್ಲಿ ಅವರ ತಂದೆಯ ಮರಣಾನಂತರ, ಚೆಕೊವ್ ಯಾಲ್ಟದ ಹೊರಭಾಗದಲ್ಲಿ ಭೂಮಿಯನ್ನು ಖರೀದಿಸಿ ಒಂದು ವಿಲ್ಲಾವನ್ನು ನಿರ್ಮಿಸುತ್ತಾರೆ. ಅದರ ಮುಂದಿನ ವರ್ಷ ತಮ್ಮ ತಾಯಿ ಹಾಗು ತಂಗಿಯೊಂದಿಗೆ ಆ ಮನೆಯನ್ನು ಪ್ರವೇಶಿಸುತ್ತಾರೆ. ಯಾಲ್ಟದ ಮನೆಯಲ್ಲಿ ಗಿಡಗಳು ಹಾಗು ಹೂವುಗಳನ್ನು ನೆಟ್ಟು, ನಾಯಿ ಹಾಗು ಕೊಕ್ಕರೆಗಳನ್ನು ಸಾಕುವುದರ ಜೊತೆಗೆ ಲಿಯೋ ಟಾಲ್ಸ್ಟಾಯ್ ಹಾಗು ಮ್ಯಾಕ್ಸಿಂ ಗಾರ್ಕಿಯಂತಹ ಅತಿಥಿಗಳನ್ನು ಬರಮಾಡಿಕೊಂಡರು. ಆದರೂ ಮಾಸ್ಕೋ ಅಥವಾ ಹೊರದೇಶದ ಪ್ರವಾಸಗಳಿಗಾಗಿ ಹೆಚ್ಚಿನ ಸಮಯ ತೀವ್ರ ಉಷ್ಣತೆಯಸೈಬೀರಿಯದಿಂದ ಹೊರಗಿದ್ದರೆ ಮನಸ್ಸು ಸದಾ ಹಗುರಗೊಳ್ಳುತ್ತಿತ್ತು. ಕುಡಿಯುವ ನೀರಿನ ಅಳವಡಿಕೆಯ ನಂತರ ಅವರು ತಗನ್ರೋಗ್ ಗೆ ಸ್ಥಳ ಬದಲಾವಣೆ ಮಾಡಿಕೊಳ್ಳುವುದಾಗಿ ಘೋಷಿಸಿದರು.[೬೪][೬೫] ಯಾಲ್ಟದಲ್ಲಿ ಆರ್ಟ್ ಥಿಯೇಟರ್‌ಗಾಗಿ ಮತ್ತೆರಡು ನಾಟಕಗಳನ್ನು ಪೂರ್ಣಗೊಳಿಸುತ್ತಾರೆ. ಅವರ ಪ್ರಕಾರ "ಈಗ ಪ್ಯಾನ್ ಕೇಕ್ ತಿನ್ನುವ ಮಾದರಿಯಲ್ಲಿ ಅಂದು ಶಾಂತವಾದ ಮನಸ್ಥಿತಿಯಲ್ಲಿ ಬರೆಯುತ್ತಿದ್ದ" ದಿನಗಳಿಗಿಂತ ಹೆಚ್ಚಿನ ಕಷ್ಟದಿಂದ ಅವುಗಳನ್ನು ರಚಿಸಿದ್ದರು. ಅವರು ತ್ರೀ ಸಿಸ್ಟರ್ಸ್ ಹಾಗು ದಿ ಚೆರ್ರಿ ಆರ್ಚರ್ಡ್ ನಾಟಕಗಳನ್ನು ಬರೆಯಲು ತಲಾ ಒಂದು ವರ್ಷವನ್ನು ತೆಗೆದುಕೊಂಡರು.[೬೬] ಮದುವೆಯ ಬಗ್ಗೆ ತಮಗಿದ್ದ ಭಯಾನಕ ಕಲ್ಪನೆಗಳ ಕಾರಣದಿಂದಾಗಿ, 25 ಮೇ 1901ರಲ್ಲಿ ಚೆಕೊವ್ ಒಲ್ಗ ನಿಪ್ಪರ್ ರನ್ನು ಸದ್ದಿಲ್ಲದೇ ಮದುವೆಯಾಗುತ್ತಾರೆ-ಈಕೆ ಮಾಜಿ ಪೋಷಿತೆ ಹಾಗು ಕೆಲವುಕಾಲ ನೆಮಿರೋವಿಚ್-ದಂಚೆನ್ಕೋರ ಪ್ರೇಯಸಿಯಾಗಿದ್ದಳು. ಈಕೆಯನ್ನು ಚೆಕೊವ್ ದಿ ಸೀಗಲ್ ನಾಟಕದ ಪೂರ್ವಾಭ್ಯಾಸದ ವೇಳೆಯಲ್ಲಿ ಮೊದಲ ಬಾರಿಗೆ ಸಂಧಿಸಿದ್ದರು.[೬೭][೬೮][೬೯] ಅಲ್ಲಿಯವರೆಗೆ, ಚೆಕೊವ್ ರನ್ನು, "ರಷ್ಯಾದ ಅತ್ಯಂತ ಗ್ರಹಿಕೆಗೆ ನಿಲುಕದ ಸಾಹಿತ್ಯಕ ಅವಿವಾಹಿತ" ಎಂದು ಕರೆಯಲಾಗುತ್ತಿತ್ತು,[೭೦] ಬದ್ಧತೆಗಿಂತ ಹೆಚ್ಚಾಗಿ ಅಕ್ರಮ ಸಂಬಂಧಗಳಿಗೆ ಹಾಗೂ ವೇಶ್ಯಾಗೃಹಗಳಿಗೆ ಭೇಟಿ ನೀಡಲು ಆದ್ಯತೆ ನೀಡುತ್ತಿದ್ದರು[೭೧] ಒಮ್ಮೆ ಸುವೊರಿನ್ ಗೆ ಪತ್ರ ಬರೆದಿದ್ದರು.
By all means I will be married if you wish it. But on these conditions: everything must be as it has been hitherto—that is, she must live in Moscow while I live in the country, and I will come and see her… give me a wife who, like the moon, won't appear in my sky every day.[೭೨]
ಈ ಪತ್ರವು ಚೆಕೊವ್ ರ ಒಲ್ಗರೊಂದಿಗಿನ ವೈವಾಹಿಕ ಏರ್ಪಾಡಿಗೆ ಭವಿಷ್ಯಸೂಚಕವೆಂದು ಸಾಬೀತಾಯಿತು: ಅವರು ಬಹು ಸಮಯ ಯಾಲ್ಟನಲ್ಲಿ ಉಳಿದರೆ, ಅವಳು ಮಾಸ್ಕೋನಲ್ಲಿ ತಮ್ಮ ನಟನಾ ವೃತ್ತಿಯನ್ನು ಮುಂದುವರೆಸಿದಳು. 1902ರಲ್ಲಿ, ಒಲ್ಗಗೆ ಗರ್ಭಪಾತವಾಗುತ್ತದೆ; ಹಾಗು ದಂಪತಿಗಳ ಪತ್ರಗಳನ್ನು ಆಧರಿಸಿ ಡೊನಾಲ್ಡ್ ರೇಫೀಲ್ಡ್ ಇದಕ್ಕೆ ಸಾಕ್ಷ್ಯವನ್ನು ಒದಗಿಸುತ್ತಾರೆ, ಗರ್ಭಪಾತವು ಚೆಕೊವ್ ಹಾಗು ಒಲ್ಗ ಬೇರೆ ಬೇರೆಯಾಗಿದ್ದಾಗ ಸಂಭವಿಸಿರಬಹುದು ಎಂದು ಹೇಳುತ್ತಾರೆ, ಆದಾಗ್ಯೂ ರಷ್ಯನ್ ವಿದ್ವಾಂಸರು ಈ ಸಮರ್ಥನೆಯನ್ನು ನಿರ್ಣಾಯಕವಾಗಿ ಅಲ್ಲಗಳೆಯುತ್ತಾರೆ.[೭೩][೭೪] ಈ ರೀತಿ ದೂರದ ಅಂತರವನ್ನು ಹೊಂದಿದ ಇವರಿಬ್ಬರ ನಡುವಿನ ದಾಂಪತ್ಯದಲ್ಲಿನ ಪತ್ರವ್ಯವಹಾರವು ಸಾಹಿತ್ಯಕ ಪರಂಪರೆಯಾಗಿ ಉಳಿದಿದೆ. ಇದು ರಂಗಭೂಮಿ ಇತಿಹಾಸದ ಅತ್ಯುತ್ಕೃಷ್ಟ ಭಾಗಗಳನ್ನು ರಕ್ಷಿಸಿದೆ. ಜತೆಗೆ ಸ್ಟಾನಿಸ್ಲಾವಸ್ಕಿಯ ನಿರ್ದೇಶನ ವಿಧಾನಗಳ ಬಗ್ಗೆ ದೂರುಗಳನ್ನು ಹಂಚಿಕೊಂಡಿದ್ದು ಹಾಗು ತಮ್ಮ ನಾಟಕಗಳಲ್ಲಿ ಅಭಿನಯಿಸುವ ಬಗ್ಗೆ ಒಲ್ಗಗೆ ಚೆಕೊವ್ ರ ಸಲಹೆಗಳೂ ಸೇರಿವೆ.[೭೫] ಯಾಲ್ಟನಲ್ಲಿ, ಚೆಕೊವ್ ತಮ್ಮ ಅತ್ಯಂತ ಪ್ರಸಿದ್ಧ ಕಥೆ, ದಿ ಲೇಡಿ ವಿಥ್ ದಿ ಡಾಗ್ ನ್ನು ಬರೆಯುತ್ತಾರೆ (ಇದನ್ನು ಲೇಡಿ ವಿಥ್ ದಿ ಲ್ಯಾಪ್ ಡಾಗ್ ) ಎಂದೂ ಸಹ ಕರೆಯಲಾಗುತ್ತದೆ),[೭೬] ಇದು ಯಾಲ್ಟನಲ್ಲಿ ಸಂಧಿಸುವ ಒಬ್ಬ ವಿವಾಹಿತ ಪುರುಷ ಹಾಗು ಒಬ್ಬ ವಿವಾಹಿತ ಮಹಿಳೆಯ ನಡುವೆ ಅನೌಪಚಾರಿಕ ಸಂಬಂಧವನ್ನು ಚಿತ್ರಿಸುತ್ತದೆ. ಇವರಿಬ್ಬರ ಭೇಟಿಯಿಂದ ಯಾವುದೂ ದೀರ್ಘಕಾಲ ಉಳಿಯುವ ನಿರೀಕ್ಷೆ ಇಬ್ಬರಿಗೂ ಇರಲಿಲ್ಲ. ಆದರೆ ಅವರಿಬ್ಬರೂ ಪರಸ್ಪರ ಆಕರ್ಷಿತರಾಗಿ,ಕೌಟುಂಬಿಕ ಜೀವನವನ್ನು ಅಪಾಯಕ್ಕೊಡ್ಡುತ್ತಾರೆ.[೭೭]
ಮರಣ
[ಬದಲಾಯಿಸಿ]ಮೇ 1904ರಲ್ಲಿ, ಚೆಕೊವ್ ಮಾರಕ ಕ್ಷಯದಿಂದ ಬಳಲುತ್ತಾರೆ. ಮಿಖೈಲ್ ಚೆಕೊವ್ "ಅವರನ್ನು ನೋಡಿದ ಎಲ್ಲರೂ ಅವರ ಅಂತ್ಯವು ಸಮೀಪಿಸಿತೆಂದು ಮನಸ್ಸಿನಲ್ಲೇ ಯೋಚಿಸುತ್ತಿದ್ದರು. ಆದರೆ ಅವರು ಸಾವನ್ನು ಸಮೀಪಿಸುತ್ತಿದ್ದಂತೆ, ಅವರು ಅದರ ಬಗ್ಗೆ ಕಡಿಮೆ ಅರಿವನ್ನು ಹೊಂದುತ್ತಿದ್ದರು" ಎಂದು ಸ್ಮರಿಸಿಕೊಳ್ಳುತ್ತಾರೆ.[೧೩] ಜೂನ್ 3ರಂದು ತಮ್ಮ ಪತ್ನಿ ಒಲ್ಗರೊಂದಿಗೆ ಬ್ಲ್ಯಾಕ್ ಫಾರೆಸ್ಟ್ ನ ಬಡೆನ್ವೆಯಿಲರ್ ಎಂಬ ಪಟ್ಟಣದ ಜರ್ಮನ್ ಸ್ಪಾಗೆ (ಖನಿಜ ಜಲಧಾಮ) ಭೇಟಿ ನೀಡುತ್ತಾರೆ, ಅಲ್ಲಿಂದ ತಮ್ಮ ಸಹೋದರಿ ಮಾಷಾಗೆ ಅಲ್ಲಿನ ಆಹಾರ ಹಾಗು ಪರಿಸರವನ್ನು ವರ್ಣಿಸಿ ಉಲ್ಲಾಸಭರಿತ ಪತ್ರಗಳನ್ನು ಬರೆಯುತ್ತಾರೆ. ಜೊತೆಗೆ ಸಹೋದರಿ ಹಾಗು ಅವರ ತಾಯಿಗೆ ತಮ್ಮ ಆರೋಗ್ಯ ಸುಧಾರಣೆಯ ಬಗ್ಗೆ ಭರವಸೆ ನೀಡುತ್ತಾರೆ. ತಮ್ಮ ಅಂತಿಮ ಪತ್ರದಲ್ಲಿ, ಜರ್ಮನ್ ಮಹಿಳೆಯರ ಉಡುಗೆ ಶೈಲಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.[೭೮]
ಚೆಕೊವ್ ರ ಮರಣವು "ಸಾಹಿತ್ಯಕ ಇತಿಹಾಸದ ಮಹತ್ತರ ಅಂಶವೆಂದು" ಪರಿಗಣಿಸಲಾಗುತ್ತದೆ,[೭೯] ಅಲ್ಲಿಂದೀಚೆಗೆ ಹಲವು ಬಾರಿ ಪುನಃ ಹೇಳಲಾಗಿ, ಅಂದಗೊಳಿಸಿ,ಕಾದಂಬರೀಕರಿಸಲಾಗಿದೆ. ಇದು ರೇಮಂಡ್ ಕಾರ್ವರ್ ಅವರ ಎರಾಂಡ್ ಸಣ್ಣಕಥೆಯಲ್ಲಿ ಗಮನಾರ್ಹವೆನಿಸಿದೆ. 1908ರಲ್ಲಿ, ಒಲ್ಗ ತಮ್ಮ ಪತಿಯ ಅಂತಿಮ ಕ್ಷಣಗಳ ಬಗ್ಗೆ ಬರೆಯುತ್ತಾರೆ:
Anton sat up unusually straight and said loudly and clearly (although he knew almost no German): Ich sterbe ("I'm dying"). The doctor calmed him, took a syringe, gave him an injection of camphor, and ordered champagne. Anton took a full glass, examined it, smiled at me and said: "It's a long time since I drank champagne." He drained it, lay quietly on his left side, and I just had time to run to him and lean across the bed and call to him, but he had stopped breathing and was sleeping peacefully as a child...[೮೦]
ಚೆಕೊವ್ ರ ದೇಹವನ್ನು ತಾಜಾ ಸಿಂಪಿಗಾಗಿರುವ ಒಂದು ಶೈತ್ಯೀಕರಣಗೊಂಡ ರೈಲು ಬೋಗಿಯಲ್ಲಿ ಮಾಸ್ಕೋಗೆ ತರಲಾಗುತ್ತದೆ, ಈ ವಿವರವು ಗಾರ್ಕಿಯ ಮನಸ್ಸನ್ನು ನೋಯಿಸುತ್ತದೆ.[೮೧] ಸಾವಿರಾರು ಶೋಕತಪ್ತರು ಒಂದು ಮಿಲಿಟರಿ ವಾದ್ಯವೃಂದ ಜತೆಗೂಡಿದ್ದ ಜನರಲ್ ಕೆಲ್ಲರ್ ರ ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲಿ ತಪ್ಪಾಗಿ ಗ್ರಹಿಸಿಕೊಂಡು ಹಿಂಬಾಲಿಸಿದ್ದರು. ನೋವೊದೆವಿಚಿ ಸ್ಮಶಾನದಲ್ಲಿ ತಮ್ಮ ತಂದೆಯ ಸಮಾಧಿಯ ಪಕ್ಕದಲ್ಲೇ ಚೆಕೊವ್ ರ ಅಂತಿಮ ಸಂಸ್ಕಾರ ನಡೆಸಲಾಯಿತು.[೮೨]
ಪರಂಪರೆ
[ಬದಲಾಯಿಸಿ]ಅವರು ಸಾವಿಗೆ ಕೆಲವು ತಿಂಗಳ ಮುಂಚೆ, ಚೆಕೊವ್ ಇವಾನ್ ಬುನಿನ್ ಎಂಬ ಬರಹಗಾರನಿಗೆ, ಜನರು ಇನ್ನೂ ಏಳು ವರ್ಷಗಳ ಕಾಲ ತಮ್ಮ ಬರಹಗಳನ್ನು ಓದಬಹುದೆಂದು ಭಾವಿಸಿರುವುದಾಗಿ ಹೇಳುತ್ತಾರೆ. "ಏಳು ವರ್ಷ ಏಕೆ?" ಬುನಿನ್ ಪ್ರಶ್ನಿಸುತ್ತಾರೆ." ಸರಿ, ಏಳೂವರೆ ವರ್ಷ," ಚೆಕೊವ್ ಉತ್ತರಿಸುತ್ತಾರೆ. "ಇದರಲ್ಲಿ ನಷ್ಟವೇನೂ ಇಲ್ಲ. ನಾನು ಬದುಕಲು ಇನ್ನೂ ಆರು ವರ್ಷ ಅವಕಾಶವಿದೆ."[೮೩]
ಸದಾ ಸರಳತೆಯಿಂದ ಕೂಡಿದ್ದ ಚೆಕೊವ್ ತಮ್ಮ ಮರಣಾನಂತರ ದೊರೆತ ಖ್ಯಾತಿಯ ಪ್ರಮಾಣವನ್ನು ಊಹಿಸಲು ಸಾಧ್ಯವಾಗಲಿಲ್ಲ. ಅವರು ಸತ್ತ ವರ್ಷ ದಿ ಚೆರ್ರಿ ಆರ್ಚರ್ಡ್ ಗೆ ದೊರೆತ ಉತ್ಸಾಹಪೂರ್ಣ ಸ್ವಾಗತವು ರಷ್ಯನ್ ಸಾರ್ವಜನಿಕರಿಗೆ ಎಷ್ಟು ಪ್ರೀತಿಪಾತ್ರರಾಗಿ ಎಷ್ಟು ಎತ್ತರಕ್ಕೆ ಏರಿದ್ದರೆಂಬುದಕ್ಕೆ ಸಾಕ್ಷಿಯಾಗಿದೆ-ಅಲ್ಲಿಂದೀಚೆಗೆ ಟಾಲ್ಸ್ಟಾಯ್ ನಂತರ ಸಾಹಿತ್ಯಕವಾಗಿ ಪ್ರಸಿದ್ಧ ಪಡೆದ ಎರಡನೇ ವ್ಯಕ್ತಿ,[೮೪] ಟಾಲ್ಸ್ಟಾಯ್ ಇವರ ಮರಣಾನಂತರ ಆರು ವರ್ಷಗಳ ಕಾಲ ಜೀವಿಸಿದ್ದರು-ಆದರೆ ಇವರ ಮರಣದ ನಂತರ, ಚೆಕೊವ್ ರ ಖ್ಯಾತಿಯು ದೂರ ದೂರಕ್ಕೂ ಹರಡಿತು. ಇಂಗ್ಲಿಷ್ ಭಾಷೆಗೆ ಕಾನ್ಸ್ಟನ್ಸ್ ಗಾರ್ನೆಟ್ ರ ಭಾಷಾಂತರಗಳು ಇಂಗ್ಲೀಷ್ ಭಾಷೆಯ ಓದುಗರನ್ನು ಸೆಳೆಯಿತು ಹಾಗು ಜೇಮ್ಸ್ ಜಾಯ್ಸ್, ವರ್ಜೀನಿಯ ವೂಲ್ಫ್, ಹಾಗು ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್ ರಂತ ಲೇಖಕರ ಮೆಚ್ಚುಗೆಗೆ ಪಾತ್ರವಾಯಿತು. ಮ್ಯಾನ್ಸ್ ಫೀಲ್ಡ್ ರ 1910ರ ಕಥೆ ದಿ ಚೈಲ್ಡ್ ಹೂ ವಾಸ್ ಟಯರ್ಡ್ ಹಾಗು ಚೆಕೊವ್ ರ ಸ್ಲೀಪಿ ಕಥೆಗಳ ನಡುವಿನ ನಿಕಟ ಹೋಲಿಕೆಗಳಿಂದಾಗಿ ಉಂಟಾದ ವಿವಾದಗಳು, ವಿಲ್ಲಿಯಮ್ H. ನ್ಯೂ ರ ರೀಡಿಂಗ್ ಮ್ಯಾನ್ಸ್ ಫೀಲ್ಡ್ ಅಂಡ್ ಮೆಟಾಫರ್ಸ್ ಆಫ್ ರಿಫಾರ್ಮ್ ನಲ್ಲಿ ಸಂಕ್ಷೇಪವಾಗಿ ಕೊಡಲಾಗಿದೆ.ಇಂಗ್ಲೆಂಡ್ ನಲ್ಲಿ ನೆಲೆಗೊಂಡಿದ್ದ ರಷ್ಯನ್ ವಿಮರ್ಶಕ D.S. ಮಿರ್ಸ್ಕಿ, ಆ ದೇಶದಲ್ಲಿ ಚೆಕೊವ್ ರ ಜನಪ್ರಿಯತೆಯು ಅವರ "ನಾಯಕತ್ವದ ಮೌಲ್ಯಗಳು ಎಂದು ಕರೆಯಲ್ಪಡುವ ಅಂಶಗಳನ್ನು ಅಸಾಧಾರಣವೆನಿಸುವಂತೆ ಸಂಪೂರ್ಣವಾಗಿ ತಿರಸ್ಕರಿಸಿರುವುದೇ" ಕಾರಣವೆಂದು ಹೇಳುತ್ತಾರೆ.[೮೫] ಖುದ್ದು ರಷ್ಯಾದಲ್ಲೇ, ಚೆಕೊವ್ ರ ನಾಟಕಗಳು ಕ್ರಾಂತಿಯ ನಂತರ ಜನಪ್ರಿಯತೆಯನ್ನು ಕಳೆದುಕೊಂಡವು ಆದರೆ ನಂತರ ಇದನ್ನು ಸೋವಿಯತ್ ಕಾರ್ಯಸೂಚಿಯಲ್ಲಿ ಅಳವಡಿಸಿಕೊಳ್ಳಲಾಯಿತು, ಉದಾಹರಣೆಗೆ ಲೋಪಖಿನ್ ನ ಪಾತ್ರವು ಹೊಸ ಸಾಮಾಜಿಕ ವರ್ಗದ ನಾಯಕನೆಂದು ಮರು ಸೃಷ್ಟಿ ಮಾಡಿ, ಚೆರ್ರಿ ಆರ್ಚಾರ್ಡ್ ನಾಟಕಕ್ಕೆ ಕೊಡಲಿಪೆಟ್ಟು ಹಾಕುತ್ತಾನೆ.[೮೬][೮೭] ಚೆಕೊವ್‌ರ ನಾಟಕಗಳನ್ನು ಪ್ರಶಂಸಿಸಿದ ರಷ್ಯನ್ ಅಲ್ಲದ ಮೊದಲ ವ್ಯಕ್ತಿಯೆಂದರೆ ಜಾರ್ಜ್ ಬರ್ನಾರ್ಡ್ ಷಾ, ಇವರು ತಮ್ಮ ಹಾರ್ಟ್ ಬ್ರೇಕ್ ಹೌಸ್ ಗೆ "ಇಂಗ್ಲಿಷ್ ಕಥಾವಸ್ತುವನ್ನು ಒಳಗೊಂಡ ರಷ್ಯನ್ ಮಾದರಿಯ ಒಂದು ಕಲ್ಪನಾಕೃತಿ" ಎಂದು ಉಪಶೀರ್ಷಿಕೆ ನೀಡುತ್ತಾರೆ. ಹಾಗೂ ಬ್ರಿಟಿಶ್ ಭೂಮಾಲೀಕ ವರ್ಗ ರಷ್ಯನ್ ಸಹಯೋಗಿಗಳ ದುಸ್ಥಿತಿಯಲ್ಲಿ ಸಾದೃಶ್ಯಗಳನ್ನು ಗುರುತಿಸುತ್ತಾರೆ. ಚೆಕೋವ್ ಬಿಂಬಿಸಿರುವಂತೆ : "ಅದೇ ರೀತಿಯ ಒಳ್ಳೆಯ ಜನ, ಅದೇ ರೀತಿಯ ಸಂಪೂರ್ಣನಿಷ್ಪ್ರಯೋಜಕತೆ."[೮೮] ಅಮೆರಿಕಾದಲ್ಲಿ, ಚೆಕೊವ್‌ರ ಖ್ಯಾತಿ ಹೆಚ್ಚಳವು ಸ್ವಲ್ಪ ತಡವಾಗಿ ಆರಂಭವಾಯಿತು, ಇದು ಭಾಗಶಃ ಅಂತರಾರ್ಥದ ಕಲ್ಪನೆಯೊಂದಿಗೆ ನಟನೆಯಲ್ಲಿ ಸ್ಟಾನಿಸ್ಲಾವಸ್ಕಿಯ ಮಾರ್ಗದ ಪ್ರಭಾವ: "ಚೆಕೊವ್ ಸಾಮಾನ್ಯವಾಗಿ ತಮ್ಮ ಯೋಚನೆಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸಲಿಲ್ಲ" ಎಂದು ಸ್ಟಾನಿಸ್ಲಾವಸ್ಕಿ ಬರೆಯುತ್ತಾರೆ,"ಆದರೆ ವಿರಾಮಗಳಲ್ಲಿ ಅಥವಾ ಸಾಲುಗಳ ನಡುವೆ ಅಥವಾ ಒಂದೇ ಒಂದು ಪದವನ್ನು ಒಳಗೊಂಡ ಉತ್ತರಗಳಲ್ಲಿ...ಪಾತ್ರಗಳು ಸಾಮಾನ್ಯವಾಗಿ ಮಾತುಗಳಲ್ಲಿ ವ್ಯಕ್ತವಾಗದ ಸಂಗತಿಗಳನ್ನು ಅನುಭವಿಸುತ್ತಿದ್ದವು ಮತ್ತು ಯೋಚಿಸುತ್ತಿದ್ದವು."[೮೯][೯೦] ಅದರಲ್ಲೂ ವಿಶೇಷವಾಗಿ ಗ್ರೂಪ್ ಥಿಯೇಟರ್, ನಾಟಕಕ್ಕೆ ಅಂತರಾರ್ಥದ ಮಾರ್ಗವನ್ನು ಅಭಿವೃದ್ಧಿಪಡಿಸಿತು, ಇದು ಅಮೆರಿಕನ್ ನಾಟಕಕಾರರು, ಚಿತ್ರಕಥೆಗಾರರು, ಹಾಗು ನಟರ ಪೀಳಿಗೆಗಳ ಮೇಲೆ ಪ್ರಭಾವ ಬೀರಿತು.ಇವರಲ್ಲಿ ಕ್ಲಿಫ್ಫೋರ್ಡ್ ಒಡೆಟ್ಸ್, ಎಲಿಯ ಕಜನ್ ಹಾಗು ವಿಶೇಷವಾಗಿ ಲೀ ಸ್ಟ್ರಾಸ್ಬರ್ಗ್ ಸೇರಿದ್ದಾರೆ. ಇದಕ್ಕೆ ಬದಲಿಯಾಗಿ, ಸ್ಟ್ರಾಸ್ಬರ್ಗ್ ರ ಆಕ್ಟರ್ಸ್ ಸ್ಟುಡಿಯೋ ಹಾಗು "ಮೆಥಡ್ ಆಕ್ಟಿಂಗ್" ಮಾರ್ಗ ಹಲವು ನಟರನ್ನು ಪ್ರಭಾವಿತಗೊಳಿಸಿತು. ಇದರಲ್ಲಿ ಮಾರ್ಲನ್ ಬ್ರಾನ್ಡೋ ಹಾಗು ರಾಬರ್ಟ್ ಡೆ ನಿರೋ ಸೇರಿದ್ದಾರೆ, ಆದಾಗ್ಯೂ ಆ ಅವಧಿಯ ಸುಮಾರಿಗೆ ಚೆಕೊವ್ ಸಂಪ್ರದಾಯವು ವಾಸ್ತವಿಕತೆಯ ಪೂರ್ವಾಕ್ರಮಣದಿಂದ ವಿರೂಪಗೊಂಡಿರಬಹುದು.[೯೧] 1981ರಲ್ಲಿ, ನಾಟಕಕಾರ ಟೆನ್ನಿಸೀ ವಿಲಿಯಮ್ಸ್ ದಿ ಸೀಗಲ್ ನ್ನು ದಿ ನೋಟ್ ಬುಕ್ ಆಫ್ ಟ್ರಿಗೋರಿನ್ ಆಗಿ ಅಳವಡಿಸಿಕೊಂಡರು. ಒಬ್ಬ ನಾಟಕಕಾರನಾಗಿ ಚೆಕೊವ್ ಹೆಗ್ಗಳಿಕೆಗೆ ಪಾತ್ರರಾಗಿದ್ದರೂ, ಕೆಲವು ಬರಹಗಾರರು ಅವರ ಸಣ್ಣಕಥೆಗಳು ಹೆಚ್ಚಿನ ಸಾಧನೆಯನ್ನು ಪ್ರತಿನಿಧಿಸುತ್ತದೆಂದು ಭಾವಿಸುತ್ತಾರೆ.[೯೨] ಚೆಕೊವ್ ರ ಮರಣ ಕುರಿತು ರೇಮಂಡ್ ಕಾರ್ವರ್ ಬರೆದ ಎರಾಂಡ್ ಸಣ್ಣಕಥೆಯು ಚೆಕೊವ್ ರನ್ನು ಅತ್ಯುತ್ತಮ ಸಣ್ಣಕಥೆಗಾರನೆಂದು ಪರಿಗಣಿಸುತ್ತದೆ:
Chekhov's stories are as wonderful (and necessary) now as when they first appeared. It is not only the immense number of stories he wrote—for few, if any, writers have ever done more—it is the awesome frequency with which he produced masterpieces, stories that shrive us as well as delight and move us, that lay bare our emotions in ways only true art can accomplish.[೯೩]
ಚೆಕೊವ್ ರಿಂದ ಪ್ರಭಾವಿತರಾದ ಮತ್ತೊಬ್ಬ ಬರಹಗಾರನೆಂದರೆ ಅರ್ನೆಸ್ಟ್ ಹೆಮ್ಮಿಂಗ್ವೇ, ಆದರೆ ಅವರ ಬಗ್ಗೆ ಸಮಾಧಾನವಿಲ್ಲದೇ ಹೇಳುತ್ತಾರೆ: "ಚೆಕೊವ್ ಸುಮಾರು ಆರು ಒಳ್ಳೆ ಕಥೆಗಳನ್ನು ಬರೆದಿದ್ದಾರೆ. ಆದರೆ ಅವರೊಬ್ಬ ಹವ್ಯಾಸಿ ಬರಹಗಾರ."[೯೪] ಹಾಗು ವ್ಲಾಡಿಮಿರ್ ನಬೋಕೊವ್ ಒಂದೊಮ್ಮೆ ಚೆಕೊವ್ ರ ಕೃತಿಗಳನ್ನು "ಭಯಾನಕ ನೀರಸ ಶಬ್ದಗಳ ಕಲಬೆರಕೆ, ಸಿದ್ಧ ವಿಶೇಷಣಗಳು, ಪುನರಾವರ್ತನೆಗಳು" ಎಂದು ಹೇಳುತ್ತಾರೆ.[೯೫] ಆದರೆ ದಿ ಲೇಡಿ ವಿಥ್ ದಿ ಡಾಗ್ ಕಥೆಯನ್ನು "ಹಿಂದೆಂದೂ ಬರೆಯಲಾಗದ ಅತ್ಯುತ್ತಮ ಕಥೆಯೆಂದು" ಘೋಷಿಸುತ್ತಾರೆ ಜೊತೆಗೆ ಚೆಕೊವ್ ರ ಬರವಣಿಗೆಯು " ಒಬ್ಬ ವ್ಯಕ್ತಿಯ ಜೀವನದ ಪ್ರಮುಖ ಘಟನೆಗಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ರೀತಿಯಲ್ಲಿ ನಿಧಾನವಾಗಿ ,ವಿರಾಮವಿಲ್ಲದೇ ನಿಧಾನ ಮಂದ ಧ್ವನಿಯ" ರೀತಿಯಲ್ಲಿ ಇರುತ್ತದೆಂದು ವಿವರಿಸುತ್ತಾರೆ.[೯೬] ಲೇಖಕ ವಿಲ್ಲಿಯಮ್ ಬಾಯ್ಡ್ರಿಗೆ ಚೆಕೊವ್ ರ ಪ್ರಮುಖ ಪ್ರಗತಿಯು ವಿಲ್ಲಿಯಮ್ ಗೆರ್ಹಾರ್ಡಿ ಕರೆಯುವ "ಮಸುಕಾದ, ಭಂಗಗೊಂಡ, ಒರಟಾದ ಅಥವಾ ಇಲ್ಲದಿದ್ದರೆ ಜೀವನದ ನಡುವೆ ಪ್ರವೇಶಿಸುವ "ಕಥಾವಸ್ತುವಿನ ಘಟನೆ"ಯನ್ನು ಬಿಟ್ಟುಬಿಡುವುದಾಗಿತ್ತು.[೯೭] ವರ್ಜೀನಿಯ ವೂಲ್ಫ್ ಚೆಕೊವ್ ರ ಕಥೆಯ ವಿಶಿಷ್ಟ ಗುಣಮಟ್ಟದ ಬಗ್ಗೆ ದಿ ಕಾಮನ್ ರೀಡರ್ ನಲ್ಲಿ ಬಿಂಬಿಸುತ್ತಾರೆ (1925):
But is it the end, we ask? We have rather the feeling that we have overrun our signals; or it is as if a tune had stopped short without the expected chords to close it. These stories are inconclusive, we say, and proceed to frame a criticism based upon the assumption that stories ought to conclude in a way that we recognise. In so doing we raise the question of our own fitness as readers. Where the tune is familiar and the end emphatic—lovers united, villains discomfited, intrigues exposed—as it is in most Victorian fiction, we can scarcely go wrong, but where the tune is unfamiliar and the end a note of interrogation or merely the information that they went on talking, as it is in Tchekov, we need a very daring and alert sense of literature to make us hear the tune, and in particular those last notes which complete the harmony.[೯೮]
ಇವನ್ನೂ ಗಮನಿಸಿ
[ಬದಲಾಯಿಸಿ]- ಆಂಟನ್ ಚೆಕೊವ್ ರ ಪುಸ್ತಕಪಟ್ಟಿ
- ಆಂಟನ್ ಚೆಕೊವ್ ರ ಸಣ್ಣ ಕಥೆಗಳ ಪಟ್ಟಿ
- ಸಣ್ಣ ಕಾದಂಬರಿ
- ವೈದ್ಯ ಲೇಖಕ
- ವೈಟ್ ಡಚ, ಯಾಲ್ಟದಲ್ಲಿರುವ ಚೆಕೊವ್ ರ ಮನೆ
ಟಿಪ್ಪಣಿಗಳು
[ಬದಲಾಯಿಸಿ]- ↑ "Russian literature; Anton Chekhov". Encyclopedia Britannica. Retrieved 2008-06-14.
- ↑ "ಜಗತ್ತು ಕಂಡ ಅತ್ಯುತ್ತಮ ಸಣ್ಣ ಕಥೆಗಾರ." ರೇಮಂಡ್ ಕಾರ್ವರ್ (ರೋಸಾಮಂಡ್ ಬಾರ್ಟ್ಲೆಟ್ ರ ಅಬೌಟ್ ಲವ್ ಅಂಡ್ ಅದರ್ ಸ್ಟೋರೀಸ್ , XX ನ ಪರಿಚಯ); "ಬಹುಶಃ ಸಾರ್ವಕಾಲಿಕವಾದ ಅತ್ಯುತ್ತಮ ಸಣ್ಣ ಕಥೆಗಾರ." ಏ ಚೆಕೊವ್ ಲೆಕ್ಸಿಕಾನ್ , ವಿಲಿಯಂ ಬೋಯ್ಡ್ ರಿಂದ, ದಿ ಗಾರ್ಡಿಯನ್ , 3 ಜುಲೈ 2004. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ
- ↑ "ಕಥೆಗಳು...ಗದ್ಯ ಕಥಾ ನಿರೂಪಣಾ ಶೈಲಿಯ ಅತ್ಯಂತ ಶ್ರೇಷ್ಠ ಸಾಧನೆಯಾಗಿದೆ." ವೋಡ್ಕಾ ಮಿನಿಯೇಚರ್ಸ್, ಬೆಲ್ಚಿಂಗ್ ಅಂಡ್ ಆಂಗ್ರಿ ಕ್ಯಾಟ್ಸ್, ದಿ ಅನ್ಡಿಸ್ಕವರ್ಡ್ ಚೆಕೊವ್ ಕೃತಿಯ ಬಗ್ಗೆ ಜಾರ್ಜ್ ಸ್ಟೇಯಿನರ್ ನ ವಿಮರ್ಶೆ, ದಿ ಅಬ್ಸರ್ವರ್ ನಲ್ಲಿ, 13 ಮೇ 2001. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ ಅಲೆಕ್ಸಿ ಸುವೊರಿನ್ ಗೆ ಬರೆದ ಪತ್ರ, 11 ಸೆಪ್ಟೆಂಬರ್ 1888 . ಆಂಟನ್ ಚೆಕೊವ್ ರ ಪತ್ರಗಳು .
- ↑ "ಚೆಕೊವ್‌ರಂತೆ ನಟರು ಎತ್ತರಕ್ಕೆ ಏರುತ್ತಾರೆ, ಹಗ್ಗದಿಂದ ಒಂದಾಗಿ ಕಟ್ಟಿಕೊಂಡು ಪರ್ವತವನ್ನು ಏರಿದಂತೆ, ಶಿಖರಾಗ್ರಕ್ಕೆ ಏರಿದರೆ, ಉನ್ನತಕೀರ್ತಿಯನ್ನು ಹಂಚಿಕೊಳ್ಳುತ್ತಾರೆ". ಮೈಲ್ಸ್, 9ರಲ್ಲಿ ಉಲ್ಲೇಖಿಸಿದ ನಟ ಐಯಾನ್ ಮ್ಯಾಕ್ಕೆಲ್ಲೆನ್.
- ↑ "ಚೆಕೊವ್‌ರ ಕಲೆಗೆ ಭಾವನೆಗಳ ನಾಟಕದ ಅವಶ್ಯಕತೆಯಿದೆ." ವ್ಸೆವೋಲೋಡ್ ಮೆಯೇರ್ಹೋಲ್ಡ್, ಅಲ್ಲೇನ್, 13ರಲ್ಲಿ ಉಲ್ಲೇಖಿಸಿದಂತೆ; ಪಠ್ಯದಲ್ಲಿರುವ ಸಮೃದ್ಧ ಜೀವನದ ಅರ್ಥವು ವಾಸ್ತವಿಕತೆಯ ಗಂಭೀರ ನಾಟಕದ ಗುಣಲಕ್ಷಣವಾಗಿದೆ, ಇದು ಪ್ರದರ್ಶನದ ಬಾಹ್ಯಲಕ್ಷಣಗಳ ಮೇಲೆ ಬಹಳ ಕಡಿಮೆ ಅವಲಂಬಿತವಾಗಿರುತ್ತದೆ." ಸ್ಟ್ಯಾನ್, 84.
- ↑ "ಚೆಕೊವ್ ರನ್ನು ಆಧುನಿಕ ಸಣ್ಣ ಕಥೆಗಳ ಜನಕನೆಂದು ಹೇಳಲಾಗುತ್ತದೆ". ಮಾಲ್ಕಂ, 87; "ಅವರು ಸಾಹಿತ್ಯಕ್ಕೆ ಕೆಲವು ನಾವಿನ್ಯತೆಯನ್ನು ತಂದರು." ಜೇಮ್ಸ್ ಜಾಯ್ಸ್, ಆರ್ಥರ್ ಪವರ್ ನಲ್ಲಿ, ಕಾವರ್ಸೆಶನ್ಸ್ ವಿಥ್ ಜೇಮ್ಸ್ ಜಾಯ್ಸ್, ಉಸ್ಬಾರ್ನ್ ಪಬ್ಲಿಷಿಂಗ್ Ltd, 1974, ISBN 978-0-86000-006-8, 57; "ಸಾಂಪ್ರದಾಯಿಕ ಸಾಹಿತ್ಯದೊಂದಿಗೆ ಚೆಕೊವ್ ಉಂಟುಮಾಡಿದ ಬಿರುಕು ಆಧುನಿಕ ಸಾಹಿತ್ಯದಲ್ಲಿ ಮಹತ್ವದ ಬದಲಾವಣೆ ಎನಿಸಿದೆ", ಜಾನ್ ಮಿಡಲ್ಟನ್ ಮುರ್ರೆ, ಅತ್ಹೆನಯೇಯುಂ ನಲ್ಲಿ, 8 ಏಪ್ರಿಲ್ 1922ರಂದು ಅಬೌಟ್ ಲವ್ , XX ನ ಬಾರ್ಲೆಟ್ ರ ಪರಿಚಯದಲ್ಲಿ ಉಲ್ಲೇಖಿಸಲಾಗಿದೆ.
- ↑ "ಈ ಬಗೆಯ ವಿವರಣೆ ವಿಧಾನವು ಮುಂಬರುವ ವರ್ಷಗಳಲ್ಲಿ, ರಂಗಕೌಶಲದ ಬಗ್ಗೆ ಚೆಕೊವ್‌ರ ನಾವೀನ್ಯಕ್ಕೆ ಆಧಾರವಾಯಿತು; ಇದು ಕಾದಂಬರಿಗಳಲ್ಲೂ ಸಹ ಹೊಸ ನಾವೀನ್ಯಗಳನ್ನು ತಂದಿತು." ವುಡ್, 81; "ಕಲಾವಿದನು ತನ್ನ ಪಾತ್ರಗಳಿಗೆ ಹಾಗು ಅವರ ಸಂಭಾಷಣೆಗಳಿಗೆ ತಾನೇ ತೀರ್ಪುಗಾರನಾಗಿರಬಾರದು, ಆದರೆ ಕೇವಲ ಒಂದು ನಿಷ್ಪಕ್ಷಪಾತವಾದ ಸಾಕ್ಷಿಯಾಗಿರಬೇಕು." ಲೆಟರ್ ಟು ಸುವೊರಿನ್, 30 ಮೇ 1888; ಕುದುರೆಗಳ್ಳರ ಬಗ್ಗೆ ಅವರು ಬರೆದ ಆಕ್ಷೇಪಣೆಗೆ ಉತ್ತರಿಸುತ್ತಾ, (ದಿ ಹಾರ್ಸ್-ಸ್ಟೀಲರ್ಸ್ , 16 ಫೆಬ್ರವರಿ 2007ರಲ್ಲಿ ಮರುಸಂಪಾದಿಸಲಾಗಿದೆ)ಅವುಗಳನ್ನು ಖಂಡಿಸದೇ, ಓದುಗರು ಕಥೆಯಲ್ಲಿ ಕೊರತೆಯಿರುವ ವ್ಯಕ್ತಿನಿಷ್ಠ ಅಂಶಗಳನ್ನು ತಮಗಾಗಿ ಸೇರಿಸಿಕೊಳ್ಳಬೇಕಾಗಿ ಚೆಕೊವ್ ಹೇಳುತ್ತಾರೆ. ಲೆಟರ್ ಟು ಸುವೊರಿನ್, 1 ಏಪ್ರಿಲ್ 1890. ಆಂಟನ್ ಚೆಕೊವ್ ರ ಪತ್ರಗಳು .
- ↑ "ಲೇಖಕನು ತನ್ನ ಕೃತಿಯ ಬಗ್ಗೆ ಒಂದು ಬೌದ್ಧಿಕ ವರ್ತನೆಯನ್ನು ಹೊಂದಿರಬೇಕೆಂದು ಒತ್ತಾಯಪಡಿಸುವುದು ಸರಿಯಾಗಿದೆ, ಆದರೆ ಎರಡು ಸಂಗತಿಗಳ ಬಗ್ಗೆ ನೀವು ಗೊಂದಲ ಉಂಟು ಮಾಡಿದ್ದೀರಿ: ಸಮಸ್ಯೆಯೊಂದಕ್ಕೆ ಪರಿಹಾರ ಹಾಗು ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿರೂಪಿಸುವುದು. ಕಲಾವಿದನಿಗೆ ಎರಡನೆಯದು ಅನಿವಾರ್ಯ ಕರ್ತವ್ಯವಾಗುತ್ತದೆ" ಲೆಟರ್ ಟು ಸುವೊರಿನ್, 27 ಅಕ್ಟೋಬರ್ 1888. ಆಂಟನ್ ಚೆಕೊವ್ ರ ಪತ್ರಗಳು .
- ↑ ೧೦.೦ ೧೦.೧ ವುಡ್, 78.
- ↑ ಪಾಯ್ನೆ, XVII.
- ↑ ಸಿಮ್ಮೊನ್ಸ್, 18.
- ↑ ೧೩.೦ ೧೩.೧ ೧೩.೨ ೧೩.೩ ೧೩.೪ ೧೩.೫ ೧೩.೬ ೧೩.೭ ೧೩.೮ ಚೆಕೊವ್‌ರ ಸಹೋದರ ಮಿಹೈಲ್ ದಾಖಲಿಸಿದ ನೆನಹುಗಳಿಂದ ಹೊಂದಿಸಿದ ಜೀವನಚರಿತ್ರೆಯ ಸ್ಥೂಲಚಿತ್ರದಲ್ಲಿ, ಕಾನ್ಸ್ಟನ್ಸ್ ಗಾರ್ನೆಟ್ ತರ್ಜುಮೆ ಮಾಡಿದ ಚೆಕೊವ್ ರ ಪತ್ರಗಳ ಮುನ್ನುಡಿ, 1920. ಉಲ್ಲೇಖ ದೋಷ: Invalid
<ref>
tag; name "Bio" defined multiple times with different content - ↑ Letter to brother Alexander, 2 January 1889, in Malcolm, p. 102.
- ↑ Another insight into Chekhov's childhood came in a letter to his publisher and friend Alexei Suvorin: "From my childhood I have believed in progress, and I could not help believing in it since the difference between the time when I used to be thrashed and when they gave up thrashing me was tremendous." Letter to Suvorin, 27 March 1894. Letters of Anton Chekhov.
- ↑ ಬಾರ್ಟ್ಲೆಟ್, 4–5.
- ↑ ೧೭.೦ ೧೭.೧ Letter to I.L. Shcheglov, 9 March 1892. Letters of Anton Chekhov.
- ↑ ಅವರು ಮಿರೋನೋವ್ ಎಂಬ ಗುತ್ತಿಗೆದಾರನಿಂದ ಮೋಸ ಹೋಗಿದ್ದರು, ರೇಫೀಲ್ಡ್, 31.
- ↑ ಸೋದರ ಸಂಬಂಧಿ ಮಿಹೈಲ್ ಗೆ ಬರೆದ ಪತ್ರ, 10 ಮೇ 1877. ಲೆಟರ್ಸ್ ಆಫ್ ಆಂಟನ್ ಚೆಕೊವ್ .
- ↑ ಮಾಲ್ಕಂ, 25.
- ↑ ೨೧.೦ ೨೧.೧ ೨೧.೨ ಪಾಯ್ನೆ, XX.
- ↑ ಸಹೋದರ ಮಿಹೈಲ್ ಗೆ ಬರೆದ ಪತ್ರ, 1 ಜುಲೈ 1876. ಲೆಟರ್ಸ್ ಆಫ್ ಆಂಟನ್ ಚೆಕೊವ್ .
- ↑ ಸಿಮ್ಮೊನ್ಸ್, 26.
- ↑ ಸಿಮ್ಮೊನ್ಸ್, 33.
- ↑ ರೇಫೀಲ್ಡ್, 69.
- ↑ ವುಡ್, 79.
- ↑ ರೇಫೀಲ್ಡ್, 91.
- ↑ "ಈ ಸೂಕ್ಷ್ಮಚಿತ್ರಗಳಲ್ಲಿ ಕ್ರೂರತೆಯನ್ನು ತಡೆಯುವ ಪ್ರಮಾಣವಿದೆ...ಅಚ್ಚರಿ ಹುಟ್ಟಿಸುವಂತಹ ಸಹಾನುಭೂತಿಯನ್ನು ಉಳ್ಳ ಚೆಕೊವ್ ಇನ್ನೂ ಪಕ್ವಗೊಳ್ಳಬೇಕಿದೆ." ವೋಡ್ಕಾ ಮಿನಿಯೇಚರ್ಸ್, ಬೆಲ್ಚಿಂಗ್ ಅಂಡ್ ಆಂಗ್ರಿ ಕ್ಯಾಟ್ಸ್, ದಿ ಅನ್ಡಿಸ್ಕವರ್ಡ್ ಚೆಕೊವ್ ಕೃತಿಯ ಬಗ್ಗೆ ಜಾರ್ಜ್ ಸ್ಟೇಯಿನರ್ ನ ವಿಮರ್ಶೆ, ದಿ ಅಬ್ಸರ್ವರ್ , 13 ಮೇ 2001. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ ೨೯.೦ ೨೯.೧ ಮಾಲ್ಕಂ, 26.
- ↑ ಲೆಟರ್ ಟು N.A .ಲೆಯಿಕಿನ್, 6 ಏಪ್ರಿಲ್ 1886. ಲೆಟರ್ಸ್ ಆಫ್ ಆಂಟೊನಿ ಚೆಕೊವ್ .
- ↑ ರೇಫೀಲ್ಡ್, 128.
- ↑ ಚೆಕಾವು ನ್ಯೂ ಟೈಮ್ಸ್ ನಲ್ಲಿ ಡ್ರೆಯ್ಫಸ್ ಹಾಗು ಜೊಲ ರ ಯೆಹೂದ್ಯ ವಿರೋಧಿ ದಾಳಿಗಳ ವಿರುದ್ಧ ಚೆಕೊವ್ ಆಕ್ಷೇಪಿಸಿದಾಗ, ಅವರು ಒಂದು ಬಾರಿ ತೊರೆದಿದ್ದರು. ರೇಫೀಲ್ಡ್, 448–50.
- ↑ ಹಲವು ವಿಧವಾಗಿ, ಬಲಪಂಥೀಯ ಸುವೊರಿನ್ ರನ್ನು ನಂತರ ಲೆನಿನ್ "ದಿ ರನ್ನಿಂಗ್ ಡಾಗ್ ಆಫ್ ದಿ ಜಾರ್" ಎಂದು ಕರೆಯುತ್ತಾರೆ (ಪಾಯ್ನೆ, XXXV), ಇವರು ಚೆಕೊವ್ ಗೆ ವಿರುದ್ಧ; ಚೆಕೊವ್ ಸುವೊರಿನ್ ರ ಮೂತ್ರಪಿಂಡದ ರೀತಿಯಲ್ಲಿ ಕಾರ್ಯ ನಿರ್ವಹಿಸಿ, ವ್ಯಾಪಾರಸ್ಥನ ವಿಷಗಳಿಂದ ಸಾರವನ್ನು ತೆಗೆಯಬೇಕಾಯಿತು." ವುಡ್, 79.
- ↑ ದಿ ಹಂಟ್ಸ್ಮನ್ .. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ ಮಾಲ್ಕಂ, 32–3.
- ↑ ಪಾಯ್ನೆ, XXIV.
- ↑ ಸಿಮ್ಮೊನ್ಸ್, 160.
- ↑ "ಹುಲ್ಲುಗಾವಲಿನ ಸುಗಂಧ ಹೊರ ಹೊಮ್ಮುತ್ತಿದೆ ಹಾಗು ಒಬ್ಬರು ಹಕ್ಕಿಗಳ ಚಿಲಿಪಿಲಿಯನ್ನು ಕೇಳಬಹುದು. ಹುಲ್ಲುಗಾವಲಿನ ಮೇಲೆ ಹಾರಾಡುವ ನನ್ನ ಹಳೆಯ ಸ್ನೇಹಿತರಾದ ದೊಡ್ಡ ಕಾಗೆಗಳನ್ನು ಕಾಣುತ್ತೇನೆ." ಸಹೋದರಿ ಮಾಷಗೆ ಬರೆದ ಪತ್ರ, 2 ಏಪ್ರಿಲ್ 1887. ಆಂಟನ್ ಚೆಕೊವ್ ರ ಪತ್ರಗಳು .
- ↑ ಗ್ರಿಗೊರೋವಿಚ್ ಗೆ ಬರೆದ ಪತ್ರ, 12 ಜನವರಿ 1888. ಮಾಲ್ಕಂರಿಂದ ಉಲ್ಲೇಖಿತಗೊಂಡಿದೆ, 137.
- ↑ "ದಿ ಸ್ಟೆಪ್ಪೆ ಯು, ಮೈಕಲ್ ಫಿಂಕೆ ಸೂಚಿಸುವಂತೆ, ಚೆಕೊವ್ ರ ಸಾಹಿತ್ಯಕ ಅಧ್ಯಯನಕ್ಕೆ ನಿಘಂಟಿನ ರೀತಿಯಾಗಿದೆ,' ಬಚ್ಚಿಟ್ಟ ಸಾಹಿತ್ಯಕ ಸಾಧನಗಳ ಒಂದು ರೀತಿಯ ಮಾದರಿಯಾಗಿದ್ದು, ಇದನ್ನು ಚೆಕೊವ್ ತಮ್ಮ ಮುಂಬರುವ ಕೃತಿಗಳಲ್ಲಿ ಅಳವಡಿಸಿಕೊಳ್ಳಬಹುದು." ಮಾಲ್ಕಂ, 147.
- ↑ ಸಹೋದರ ಅಲೆಕ್ಸಾಂಡರ್ ಗೆ ಬರೆದ ಪತ್ರ, 20 ನವೆಂಬರ್ 1887. ಆಂಟನ್ ಚೆಕೊವ್ ರ ಪತ್ರಗಳು .
- ↑ ರೇಫೀಲ್ಡ್, 203.
- ↑ ಸಿಮ್ಮನ್ಸ್, 190.
- ↑ ಏ ಡ್ರಿಯರಿ ಸ್ಟೋರಿ .. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ ಸಿಮ್ಮನ್ಸ್, 186–91.
- ↑ ಪ್ರಿಂಟ್ ಇಷ್ಯೂ, ಸೈಬೀರಿಯ.
- ↑ ಮಾಲ್ಕಂ, 129.
- ↑ ಸಿಮ್ಮೊನ್ಸ್, 223.
- ↑ ರೇಫೀಲ್ಡ್, 224.
- ↑ Letter to sister, Masha, 20 May 1890. Letters of Anton Chekhov.
- ↑ ವುಡ್, 85.
- ↑ ರೇಫೀಲ್ಡ್ 230.
- ↑ Letter to A.F.Koni, 16 January 1891. Letters of Anton Chekhov.
- ↑ ಮಾಲ್ಕಂ, 125.
- ↑ "ಕೃತಿಯ ಬಗ್ಗೆ ಹೊರಬಂದ ಸಾಧಾರಣ ವಿಮರ್ಶಾತ್ಮಕ ದೃಷ್ಟಿಕೋನ ಹೀಗಿದೆ. ಆದರೆ ಸಿಮ್ಮನ್ಸ್ ಇದನ್ನು "ಅಮೂಲ್ಯವಾದ ಹಾಗು ಉತ್ಕಟ ಮಾನವ ದಾಖಲೆ ಎಂದು ಹೇಳುತ್ತಾರೆ." ಸಿಮ್ಮನ್ಸ್, 229.
- ↑ ದಿ ಮರ್ಡರ್ .. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ ಪಾಯ್ನೆ, XXXI.
- ↑ ನೋಟ್-ಬುಕ್ .. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ ರೇಫೀಲ್ಡ್, 394–8.
- ↑ ಬೆನೆಡೆಟ್ಟಿ, ಸ್ಟನಿಸ್ಲಾವಸ್ಕಿ: ಆನ್ ಇಂಟ್ರೋಡಕ್ಷನ್ , 25.
- ↑ ಚೆಕೊವ್ ಹಾಗು ರಂಗಭೂಮಿ, ಸ್ಟನಿಸ್ಲಾವಸ್ಕಿಯ ಮಾತುಗಳಲ್ಲಿ, "ಕಲಾತ್ಮಕ ಸರಳತೆಯನ್ನು ಹಾಗು ರಂಗದ ಮೇಲೆ ಸತ್ಯವನ್ನು ಸಾಧಿಸುವ" ಒಂದು ಸಮನಾದ ಉದ್ದೇಶದಿಂದ ಒಟ್ಟುಗೂಡಿದೆ. ಅಲ್ಲೇನ್, 11.
- ↑ ರೇಫೀಲ್ಡ್, 390–1. ರೇಫೀಲ್ಡ್, ಚೆಕೋವ್‌ರ "ಅಂಕಲ್ ವಾನ್ಯ" ಮತ್ತು "ವುಡ್ ಡೆಮನ್"(1995 )ನ ವಿಮರ್ಶಾತ್ಮಕ ಅಧ್ಯಯನದಿಂದ ಚಿತ್ರಿಸುತ್ತಾರೆ. ಚೆಕೋವ್‌ರ ಗುಟ್ಟಿನ ಸಾಧನೆಗಳಲ್ಲಿ ಒಂದಾದ ಇದು ವುಡ್ ಡೆಮನ್ ಅಂಕಲ್ ವಾನ್ಯವಾಗಿ ವಿಕಾಸಗೊಂಡ ಬಗ್ಗೆ ವಿಶ್ಲೇಷಣೆ ನಡೆಸುತ್ತದೆ.
- ↑ ಸುವೊರಿನ್ ಗೆ ಬರೆದ ಪತ್ರ, 1 ಏಪ್ರಿಲ್ 1897. ಆಂಟನ್ ಚೆಕೊವ್ ರ ಪತ್ರಗಳು .
- ↑ ಒಲ್ಗ ನಿಪ್ಪರ್, ಮೆಮೈರ್ , ಬೆನೆಡೆಟ್ಟಿಯಲ್ಲಿ, ಡಿಯರ್ ರೈಟರ್, ಡಿಯರ್ ಆಕ್ಟ್ರೆಸ್ಸ್ , 37, 270.
- ↑ ಬಾರ್ಟ್ಲೆಟ್, 2.
- ↑ ಮಾಲ್ಕಂ, 170–1.
- ↑ "ನನಗೆ ಮದುವೆಗಳ ಬಗ್ಗೆ ಭೀತಿಯಿದೆ, ಅಭಿನಂದನೆಗಳು ಹಾಗು ಶಾಂಪೇನ್, ಸುತ್ತಮುತ್ತ ನಿಂತು, ಕೈಯಲ್ಲಿ ಗಾಜಿನ ಲೋಟ ಹಿಡಿದು ಮುಖದಲ್ಲಿ ಶಾಶ್ವತವಾದ ನಗೆಯನ್ನು ಬೀರುವುದು." ಒಲ್ಗ ನಿಪ್ಪರ್ ಗೆ ಬರೆದ ಪತ್ರ, 19 ಏಪ್ರಿಲ್ 1901.
- ↑ ಬೆನೆಡೆಟ್ಟಿ, ಡಿಯರ್ ರೈಟರ್, ಡಿಯರ್ ಆಕ್ಟ್ರೆಸ್ಸ್ , 125.
- ↑ "ವ್ಲಾಡಿಮಿರ್ ನೆಮಿರೋವಿಚ್-ಡಾನ್ಚೆಂಕೋ ಜೊತೆಗಿನ ಒಲ್ಗಳ ಸಂಬಂಧವು ವೃತ್ತಿಪರತೆಗಿಂತ ಮಿಗಿಲಾದುದಾಗಿತ್ತು." ರೇಫೀಲ್ಡ್, 500.
- ↑ ಚೆಕೊವ್ ರ ಲೀಡಿಂಗ್ ಲೇಡಿ ಯಲ್ಲಿ ಹಾರ್ವೆ ಪಿಚರ್, ಮಾಲ್ಕಂ ನಲ್ಲಿ ಉಲ್ಲೇಖಿಸಲಾಗಿದೆ, 59.
- ↑ "ಚೆಕೊವ್ ಒಬ್ಬ ಸ್ತ್ರೀವಿಲಾಸಿಯ ಮನೋಧರ್ಮವನ್ನು ಹೊಂದಿದ್ದರು. ಲೈಂಗಿಕವಾಗಿ, ಅವರು ವ್ಯಭಿಚಾರ ಗೃಹಗಳು ಅಥವಾ ತಕ್ಷಣದ ಅಕ್ರಮ ಸಂಬಂಧಗಳಿಗೆ ಆದ್ಯತೆ ನೀಡುತ್ತಿದ್ದರು." ವುಡ್, 78.
- ↑ Letter to Suvorin, 23 March 1895. Letters of Anton Chekhov.
- ↑ ರೇಫೀಲ್ಡ್ ಪ್ರಾಯೋಗಿಕವಾಗಿಯೂ ಸಹ ಸೂಚಿಸುತ್ತಾರೆ, ಪ್ರಸವಶಾಸ್ತ್ರದ ಸುಳಿವಿನ ಪ್ರಕಾರ, ಒಲ್ಗ ಗರ್ಭಪಾತಕ್ಕಿಂತ ಹೆಚ್ಚಾಗಿ ಅಪಸ್ಥಾನೀಯ ಗರ್ಭವನ್ನು ಧರಿಸಿದ್ದರು. ರೇಫೀಲ್ಡ್, 556–7.
- ↑ ಗರ್ಭಪಾತದ ನಂತರ ದಂಪತಿಗಳ ನಡುವೆ ಖಂಡಿತವಾಗಿ ವೈಮನಸ್ಯಗಳು ಉಂಟಾದವು, ಆದಾಗ್ಯೂ ಸಿಮ್ಮನ್ಸ್, 569, ಹಾಗು ಬೆನೆಡೆಟ್ಟಿ, ಡಿಯರ್ ರೈಟರ್, ಡಿಯರ್ ಆಕ್ಟ್ರೆಸ್ಸ್ , 241, ಚೆಕೊವ್‌ರ ತಾಯಿ ಹಾಗು ಸಹೋದರಿಗೆ ಬರೆಯುತ್ತಾ, ಒಲ್ಗರ ಗರ್ಭಪಾತಕ್ಕೆ ಅವರ ತಡ ರಾತ್ರಿಯ ಜೀವನಶೈಲಿಯೊಂದಿಗೆ ತಮ್ಮ ನಟ ಸ್ನೇಹಿತರೊಂದಿಗೆ ಬೆರೆಯುತ್ತಿದ್ದುದು ಕಾರಣವೆಂದು ಆರೋಪಿಸುತ್ತಾರೆ.
- ↑ ಬೆನೆಡೆಟ್ಟಿ, ಡಿಯರ್ ರೈಟರ್, ಡಿಯರ್ ಆಕ್ಟ್ರೆಸ್ಸ್: ದಿ ಲವ್ ಲೆಟರ್ಸ್ ಆಫ್ ಒಲ್ಗ ನಿಪ್ಪರ್ ಅಂಡ್ ಆಂಟನ್ ಚೆಕೊವ್
- ↑ ದಿ ಲೇಡಿ ವಿಥ್ ದಿ ಡಾಗ್ .. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ "Yalta Chekhov Campaign". Yaltachekhov.org. 2008-11-13. Archived from the original on 2009-01-22. Retrieved 2009-03-03.[verification needed]
- ↑ ಸಹೋದರಿ ಮಾಷಗೆ ಬರೆದ ಪತ್ರ, 28 ಜೂನ್ 1904. ಆಂಟನ್ ಚೆಕೊವ್ ರ ಪತ್ರಗಳು .
- ↑ ಮಾಲ್ಕಂ, 62.
- ↑ Olga Knipper, Memoir, in Benedetti, Dear Writer, Dear Actress, 284.
- ↑ "ನಿಸ್ಸಾರತೆಯು ಒಂದು ಅಹಿತಕಾರಿ ಕುಚೇಷ್ಟೆಯಿಂದ ಅವರ ಮೇಲೆ ಸ್ವತಃ ಸೇಡನ್ನು ತೀರಿಸಿಕೊಂಡಿತು, ಅದು ಅವರ ಕಳೇಬರ, ಕವಿಯ ಕಳೇಬರವನ್ನು "ಆಯ್‌ಸ್ಟರ್(ಸಿಂಪಿ)ಗಳ ಸಾಗಣೆಗೆ" ಇರುವ ರೈಲ್ವೆ ಟ್ರಕ್‌ನಲ್ಲಿ ಇರಿಸಲಾಯಿತು. ಮ್ಯಾಕ್ಸಿಂ ಗಾರ್ಕಿಯ ರೆಮಿನಿಸೆನ್ಸ್ ಆಫ್ ಆಂಟನ್ ಚೆಕೊವ್ Archived 2015-09-14 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ . 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ ಮಾಲ್ಕಂ, 19; ಅಲೆಕ್ಸಾಂಡರ್ ಕುಪ್ರಿನ್ ರ ರೆಮಿನಿಸೆನ್ಸ್ ಆಫ್ ಆಂಟನ್ ಚೆಕೊವ್ . Archived 2015-09-14 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ ಪಾಯ್ನೆ, XXXVI.
- ↑ ಚೆಕೊವ್ ರ ಸಣ್ಣಕಥೆಗಳ ಬಹು ದೊಡ್ಡ ಅಭಿಮಾನಿಯಾಗಿದ್ದ ಟಾಲ್ಸ್ಟಾಯ್, ಅವುಗಳನ್ನು "ಮೊದಲ ದರ್ಜೆ" ಹಾಗು "ಎರಡನೇ ದರ್ಜೆ" ಎಂದು ಎರಡು ವಿಭಾಗ ಮಾಡಿದ್ದರು. ಮೊದಲ ವರ್ಗದ ಸಣ್ಣಕಥೆಗಳಲ್ಲಿ ಚಿಲ್ಡ್ರನ್, ದಿ ಕೋರಸ್ ಗರ್ಲ್, ಏ ಪ್ಲೇ, ಹೋಂ, ಮಿಸರಿ, ದಿ ರನ್ ಅವೇ, ಇನ್ ಕೋರ್ಟ್, ವಂಕ, ಲೇಡೀಸ್, ದಿ ಮೇಲ್ ಫ್ಯಾಕ್ಟರ್ಸ್, ದಿ ಬಾಯ್ಸ್, ಡಾರ್ಕ್ನೆಸ್ಸ್, ಸ್ಲೀಪಿ, ದಿ ಹೆಲ್ಪ್ ಮೇಟ್, ದಿ ಡಾರ್ಲಿಂಗ್ ; ಎರಡನೇ ಗುಂಪಿನ ಸಣ್ಣಕಥೆಗಳೆಂದರೆ: ಏ ಟ್ರ್ಯಾನ್ಸ್ ಗ್ರೆಷನ್, ಸಾರೋ, ದಿ ವಿಚ್, ವೆರೋಚ್ಕ, ಇನ್ ಏ ಸ್ಟ್ರೇಂಜ್ ಲ್ಯಾಂಡ್, ದಿ ಕುಕ್'ಸ್ ವೆಡ್ಡಿಂಗ್, ಏ ಟೀಡಿಯಸ್ ಬಿಸ್ನೆಸ್ಸ್, ಆನ್ ಅಪ್ ಹೀವಲ್, ಒಹ್! ಸೇರಿದ್ದವು.ದಿ ಪಬ್ಲಿಕ್!, ದಿ ಮಾಸ್ಕ್, ಏ ವುಮನ್'ಸ್ ಲಕ್, ನರ್ವಸ್, ದಿ ವೆಡ್ಡಿಂಗ್, ಏ ಡಿಫೆನ್ಸ್ ಲೆಸ್ ಕ್ರಿಯೇಚರ್, ಪೇಸಂಟ್ ವೈವ್ಸ್ . ಈ ಕಥೆಗಳನ್ನು ಅವರು ಒಂದು ಪುಸ್ತಕದಲ್ಲಿ ಸಂಕಲಿಸಿ ಪುನರಾವರ್ತಿತವಾಗಿ ಬಹಳ ತೃಪ್ತಿಯೊಂದಿಗೆ ಓದುತ್ತಿದ್ದರು. - ಸಿಮ್ಮನ್ಸ್, ಪುಟ. 595.
- ↑ ವುಡ್, 77.
- ↑ ಅಲ್ಲೇನ್, 88.
- ↑ "ಕುಲೀನರು ಕಳೆದುಕೊಂಡ ಎಸ್ಟೇಟುಗಳ ಬಗ್ಗೆ ಗೋಳಾಡುವಂತಹ ನಾಟಕಗಳ ಪ್ರದರ್ಶನಕ್ಕೆ ಅವರು ಅವಕಾಶ ನೀಡುವುದಿಲ್ಲ." ವ್ಲಾಡಿಮಿರ್ ನೆಮಿರೋವಿಚ್ ಡಾನ್ಚೆಂಕೋ ರ ಪತ್ರ, ಚೆಕೊವ್ ಅಟ್ ದಿ ಮಾಸ್ಕೋ ಥಿಯೇಟರ್ ನಲ್ಲಿ ಅನಾಟೋಲಿ ಸ್ಮೆಲಿಯನ್ಸ್ಕಿ ಉಲ್ಲೇಖಿಸುತ್ತಾರೆ, ದಿ ಕೇಂಬ್ರಿಡ್ಜ್ ಕಂಪ್ಯಾನಿಯನ್ ಟು ಚೆಕೊವ್ , 31–2.
- ↑ ಅನ್ನಾ ಒಬ್ರಜ್ಟ್ ಸೋವ, ಬರ್ನಾರ್ಡ್ ಷಾ'ಸ್ ಡೈಲಾಗ್ ವಿಥ್ ಚೆಕೊವ್ , ಮೈಲ್ಸ್ ನಲ್ಲಿ, 43–4.
- ↑ ರೆನಾಲ್ಡ್ಸ್, ಎಲಿಜಬೆಥ್(ಸಂಪಾದನೆ), ಸ್ಟಾನಿಸ್ಲಾವ್ಸ್ಕಿ'ಸ್ ಲೆಗೆಸಿ, ಥಿಯೇಟರ್ ಆರ್ಟ್ ಬುಕ್ಸ್, 1987, ISBN 978-0-87830-127-0, 81, 83.
- ↑ "ಚೆಕೊವ್ ಮೊದಲ ಬಾರಿಗೆ ಉದ್ದೇಶಪೂರ್ವಕವಾಗಿ ಸಂಭಾಷಣೆಗಳನ್ನು ಬರೆದರು. ಇದರಲ್ಲಿ ಭಾವನಾತ್ಮಕ ಕಥಾವಸ್ತುವಿನ ಮುಖ್ಯವಾಹಿನಿಗೆ ಕಡಿಮೆ ಪ್ರಾಶಸ್ತ್ಯ ನೀಡಲಾಯಿತು. ಮನುಷ್ಯರು ತಮ್ಮೊಳಗೆ ಆಳವಾಗಿ ಅಡಗಿರುವ ಭಾವನೆಗಳನ್ನು ಪರಸ್ಪರ ಮುಕ್ತವಾಗಿ ಮಾತನಾಡುವುದಿಲ್ಲವೆಂಬ ಕಲ್ಪನೆಯನ್ನು ಸ್ಪಷ್ಟವಾಗಿ ತಿಳಿಸಿದರು, ಮಹತ್ತರವಾದ, ವಿಷಾದಕರ, ಚರಮಸ್ಥಿತಿಗಳು ಸಾಮಾನ್ಯವಾಗಿ ಹೊರನೋಟಕ್ಕೆ ಕಾಣುವ ನೀರಸ ಸಂಭಾಷಣೆಯ ಕೆಳಗೂ ಸಂಭವಿಸುತ್ತದೆ." ಮಾರ್ಟಿನ್ ಎಸ್ಸ್ಲಿನ್, ಟೆಕ್ಸ್ಟ್ ಅಂಡ್ ಸಬ್ ಟೆಕ್ಸ್ಟ್ ಇನ್ ಶವಿಯನ್ ಡ್ರಾಮ ನಲ್ಲಿ, 1922: ಷಾ ಅಂಡ್ ದಿ ಲಾಸ್ಟ್ ಹಂಡ್ರೆಡ್ ಇಯರ್ಸ್ ನಲ್ಲಿ, ಸಂಪಾದನೆ. ಬರ್ನಾರ್ಡ್. F. ಡುಕೊರೆ, ಪೆನ್ನ್ ಸ್ಟೇಟ್ ಪ್ರೆಸ್, 1994, ISBN 978-0-271-01324-4, 200.
- ↑ "ಲೀ ಸ್ಟ್ರಾಸ್ಬರ್ಗ್ ನನ್ನ ಅಭಿಪ್ರಾಯದಲ್ಲಿ ಚೆಕಾವಿಯನ್ ಥಿಯೇಟರ್ ನ ಸಾಂಪ್ರದಾಯಿಕ ಕಲ್ಪನೆಗೆ ಬಲಿಪಶುವಾದರು...ಅವರು ಚೆಕೊವ್ ಚಿತ್ರಣಗಳಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ." ಜಾರ್ಜೀ ತೊಸ್ತೋನೋಗೊವ್ ಸ್ಟ್ರಾಸ್ಬರ್ಗ್ ರ ತ್ರೀ ಸಿಸ್ಟರ್ಸ್ ನಿರ್ಮಾಣದ ಬಗ್ಗೆ ದಿ ಡ್ರಾಮ ರಿವ್ಯೂ ನಲ್ಲಿ (ಮಾಗಿಕಾಲ 1968). ಸ್ಟ್ಯಾನ್ ಇದರ ಬಗ್ಗೆ ಉಲ್ಲೇಖಿಸಿದ್ದಾರೆ, 121.
- ↑ "ನಾಟಕಗಳು ಕಾದಂಬರಿಯ ನಯವಾದ ಉಲ್ಲೇಖದ ಕೊರತೆ ಹೊಂದಿರುತ್ತದೆ: ಇದರಲ್ಲಿ ಮಹತ್ವದ ಪಾತ್ರಗಳು, ಸುಂದರವಾದ ದೃಶ್ಯಾವಳಿಗಳು, ಅತ್ಯಮೋಘ ಭಾಗಗಳು, ಉತ್ಕಟವಾದ ಖೇದ ತುಂಬಿದ ಕ್ಷಣಗಳು ಹಾಗು ಸೂಕ್ಷ್ಮ ಪರಿಜ್ಞಾನವಿದೆ, ಆದರೆ ಒಟ್ಟಾರೆ ಅಂಶಗಳಿಗಿಂತ ಭಾಗಗಳು ಮಹತ್ತರವಾಗಿ ಕಂಡುಬರುತ್ತದೆ." ಏ ಚೆಕೊವ್ ಲೆಕ್ಸಿಕಾನ್ ವಿಲ್ಲಿಯಮ್ ಬಾಯ್ಡ್ ರಿಂದ , ದಿ ಗಾರ್ಡಿಯನ್ , 3 ಜುಲೈ 2004. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ Bartlett, From Russia, with Love, The Guardian, 15 July 2004. Retrieved 17 February 2007.
- ↑ ಅರ್ಚಿಬಾಲ್ಡ್ ಮ್ಯಾಕ್ಲೀಷ್ ಗೆ ಅರ್ನೆಸ್ಟ್ ಹೆಮ್ಮಿಂಗ್ವೇ ಬರೆದ ಪತ್ರ, 1925 (ಆಯ್ದ ಪತ್ರ ಗಳಿಂದ, ಪುಟ. 179), ಅರ್ನೆಸ್ಟ್ ಹೆಮ್ಮಿಂಗ್ವೇ ಆನ್ ರೈಟಿಂಗ್ , ಸಂಪಾದನೆ ಲ್ಯಾರಿ W. ಫಿಲಿಪ್ಸ್, ಟಚ್ ಸ್ಟೋನ್, (1984) 1999, ISBN 978-0-684-18119-6, 101.
- ↑ ವುಡ್, 82.
- ↑ ವ್ಲಾಡಿಮಿರ್ ನಬೋಕೊವ್ ರ ಲೆಕ್ಚರ್ಸ್ ಆನ್ ರಷ್ಯನ್ ಲಿಟರೇಚರ್ ನಿಂದ, ಲರ್ನಿಂಗ್ ಫ್ರಮ್ ಚೆಕೊವ್ ನಿಂದ ಫ್ರಂಸಿನೆ ಪ್ರೋಸ್ ಉಲ್ಲೇಖಿಸಿದ್ದಾರೆ, 231.
- ↑ "ಸಾಹಿತ್ಯದಲ್ಲಿ ಮೊದಲ ಬಾರಿಗೆ ಜೀವನದ ಸ್ರಾವತೆ ಹಾಗು ಸ್ವೇಚ್ಛೆಯನ್ನು ಕಾದಂಬರಿ ರೂಪದಲ್ಲಿ ತರಲಾಗಿದೆ. ಚೆಕೊವ್ ಗೆ ಮುಂಚೆ, ಎಲ್ಲ ಕಾದಂಬರಿಗಳಲ್ಲಿ ಘಟನಾವಳಿಗಳನ್ನು ಆಧರಿಸಿದ ಕಥಾವಸ್ತುವು ಸೆಳೆಯಿತು." ವಿಲ್ಲಿಯಮ್ ಬಾಯ್ಡ್, ಕಥೆಗಾರ ವಿಲ್ಲಿಯಮ್ ಗೆರ್ಹಾರ್ಡಿಯ ಆಂಟನ್ ಚೆಕೊವ್: ಏ ಕ್ರಿಟಿಕಲ್ ಸ್ಟಡಿ , ಯನ್ನು ವಿಶ್ಲೇಷಿಸುತ್ತಾ ಸೂಚಿಸುತ್ತಾರೆ, 1923. ಏ ಚೆಕೊವ್ ಲೆಕ್ಸಿಕನ್ ವಿಲ್ಲಿಯಮ್ ಬಾಯ್ಡ್ ರಿಂದ, ದಿ ಗಾರ್ಡಿಯನ್ , 3 ಜುಲೈ 2004. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ↑ Woolf, Virginia, The Common Reader: First Series, Annotated Edition, Harvest/HBJ Book, 2002, ISBN 015602778X, 172.
ಉಲ್ಲೇಖಗಳು
[ಬದಲಾಯಿಸಿ]- ಅಲ್ಲೇನ್, ಡೇವಿಡ್, ಪರ್ಫಾರ್ಮಿಂಗ್ ಚೆಕೊವ್ , ರೌಟ್ಲೆಡ್ಜ್ (UK), 2001, ISBN 978-0-415-18934-7
- ಬಾರ್ಟ್ಲೆಟ್, ರೋಸಾಮಂಡ್, ಹಾಗು ಆಂಟನಿ ಫಿಲ್ಲಿಪ್ಸ್ (ಭಾಷಾಂತರಕಾರರು), ಚೆಕೊವ್: ಏ ಲೈಫ್ ಇನ್ ಲೆಟರ್ಸ್ , ಪೆಂಗ್ವಿನ್ ಬುಕ್ಸ್, 2004, ISBN 978-0-14-044922-8
- ಬಾರ್ಟ್ಲೆಟ್, ರೋಸಾಮಂಡ್, ಚೆಕೊವ್: ಸೀನ್ಸ್ ಫ್ರಂ ಏ ಲೈಫ್ , ಫ್ರೀ ಪ್ರೆಸ್, 2004, ISBN 978-0-7432-3074-2
- ಬೆನೆಡೆಟ್ಟಿ, ಜೀನ್ (ಸಂಪಾದಕ ಹಾಗು ಭಾಷಾಂತರಕಾರ), ಡಿಯರ್ ರೈಟರ್, ಡಿಯರ್ ಆಕ್ಟ್ರೆಸ್ಸ್: ದಿ lav letars of ಒಲ್ಗ ನಿಪ್ಪರ್ ಅಂಡ್ ಆಂಟನ್ ಚೆಕೊವ್ , ಮೆತುಯೇನ್ ಪಬ್ಲಿಷಿಂಗ್ Ltd, 1998ರ ಆವೃತ್ತಿ, ISBN 978-0-413-72390-1
- ಬೆನೆಡೆಟ್ಟಿ, ಜೀನ್, ಸ್ಟಾನಿಸ್ಲಾವಸ್ಕಿ: ಆನ್ ಇಂಟ್ರೋಡಕ್ಶನ್ , ಮೆತುಯೇನ್ ಡ್ರಾಮ, 1989ರ ಆವೃತ್ತಿ, ISBN 978-0-413-50030-4
- ಚೆಕೊವ್, ಆಂಟನ್, ಅಬೌಟ್ ಲವ್ ಅಂಡ್ ಅದರ್ ಸ್ಟೋರೀಸ್ , ರೋಸಾಮಂಡ್ ಬಾರ್ಟ್ಲೆಟ್ ರಿಂದ ಭಾಷಾಂತರಗೊಂಡಿದೆ, ಆಕ್ಸ್ಫಾರ್ಡ್ ಯುನಿವರ್ಸಿಟಿ ಪ್ರೆಸ್, 2004, ISBN 978-0-19-280260-6
- ಚೆಕೊವ್, ಆಂಟನ್, ದಿ ಅನ್ಡಿಸ್ಕವರ್ಡ್ ಚೆಕೊವ್: ಫಿಫ್ಟಿ ನ್ಯೂ ಸ್ಟೋರೀಸ್ , ಪೀಟರ್ ಕಾನ್ಸ್ಟಾನ್ಟಿನ್ ರಿಂದ ಭಾಷಾಂತರಗೊಂಡಿದೆ, ಡಕ್ ಎಡಿಶನ್ಸ್, 2001, ISBN 978-0-7156-3106-5
- ಚೆಕೊವ್,ಆಂಟನ್, ಈಸ್ಟರ್ ವೀಕ್ , ಮೈಕಲ್ ಹೆನ್ರಿ ಹೆಯಿಂರಿಂದ ಭಾಷಾಂತರಗೊಂಡಿದೆ, ಬ್ಯಾರಿ ಮೋಸರ್ ರ ಚಿತ್ರಣ, ಶಾಕ್ಮ್ಯಾನ್ ಪ್ರೆಸ್, 2010.
- ಚೆಕೊವ್, ಆಂಟನ್, ಫಾರ್ಟಿ ಸ್ಟೋರೀಸ್ , ರಾಬರ್ಟ್ ಪಾಯ್ನೆಯವರ ಭಾಷಾಂತರ ಹಾಗು ಪರಿಚಯ, ನ್ಯೂ ಯಾರ್ಕ್, ವಿಂಟೇಜ್, 1991ರ ಆವೃತ್ತಿ, ISBN 978-0-679-73375-1
- ಚೆಕೊವ್, ಆಂಟನ್, ಲೆಟರ್ಸ್ ಆಫ್ ಆಂಟನ್ ಚೆಕೊವ್ ಟು ಹಿಸ್ ಫ್ಯಾಮಿಲಿ ಅಂಡ್ ಫ್ರೆಂಡ್ಸ್ ವಿಥ್ ಬಯೋಗ್ರಾಫಿಕಲ್ ಸ್ಕೆಚ್ , ಕಾನ್ಸ್ಸ್ಟನ್ಸ್ ಗಾರ್ನೆಟ್ ರಿಂದ ಭಾಷಾಂತರಗೊಂಡಿದೆ, ಮ್ಯಾಕ್ಮಿಲನ್, 1920 . ಗುಟೆನ್ಬರ್ಗ್ ನಲ್ಲಿರುವ ಸಂಪೂರ್ಣ ವಿಷಯವಸ್ತು. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ.
- ಚೆಕೊವ್, ಆಂಟನ್, ನೋಟ್-ಬುಕ್ ಆಫ್ ಆಂಟನ್ ಚೆಕೊವ್, S. S. ಕೋಟೆಲಿಯಂಸ್ಕಿ ಹಾಗು ಲಿಯೋನಾರ್ಡ್ ವೂಲ್ಫ್ ರಿಂದ ಭಾಷಾಂತರಗೊಂಡಿದೆ, B.W. ಹುಯೆಬ್ಸ್ಚ್, 1921. ಗುಟೆನ್ಬರ್ಗ್ ನಲ್ಲಿರುವ ಸಂಪೂರ್ಣ ವಿಷಯವಸ್ತು. 2007ರ ಫೆಬ್ರವರಿ 16ರಂದು ಮರುಸಂಪಾದಿಸಲಾಗಿದೆ
- ಚೆಕೊವ್, ಆಂಟನ್, ದಿ ಅದರ್ ಚೆಕೊವ್ , ಒಕ್ಲ ಎಲಿಯಟ್ ಹಾಗು ಕೈಲೆ ಮೈನರ್ ಸಂಪಾದಿಸಿದ್ದಾರೆ, ಪಿಂಚ್ಕ್ನೇಯ್ ಬೆನೆಡಿಕ್ಟ್, ಫ್ರೆಡ್ ಚಾಪಲ್, ಕ್ರಿಸ್ತೋಫಾರ್ ಕೊಕೆ, ಪಾಲ್ ಕ್ರೆಂಷಾ, ಡೋರೋಥಿ ಗಮ್ಬ್ರೆಲ್, ಸ್ಟೀವನ್ ಗಿಲ್ಲಿಸ್, ಮೈಕಲ್ ಹರ್ಮನ್, ಜೆಫ್ಫ್ ಪಾರ್ಕರ್, ಬೆಂಜಮಿನ್ ಪರ್ಸಿ, ಹಾಗು ಡೇವಿಡ್ R. ಸ್ಲಾವಿಟ್ ರಿಂದ ಕಥಾ ಪರಿಚಯ. ನ್ಯೂ ಅಮೇರಿಕನ್ ಪ್ರೆಸ್, 2008ರ ಆವೃತ್ತಿ, ISBN 978-0972967983
- ಚೆಕೊವ್, ಆಂಟನ್, ಸೆವೆನ್ ಶಾರ್ಟ್ ನಾವೆಲ್ಸ್ , ಬಾರ್ಬರ ಮಕನೋವಿಟ್ಜ್ಕಿಯಿಂದ ಭಾಷಾಂತರಗೊಂಡಿದೆ, W.W.ನಾರ್ಟನ್ & ಸಂಸ್ಥೆ, ISBN 978-0-393-00552-3
- ಫಿಂಕೆ, ಮೈಕಲ್ C., ಚೆಕೊವ್'ಸ್ 'ಸ್ಟೆಪ್ಪೆ': ಏ ಮೆಟಾಪೊಯಟಿಕ್ ಜರ್ನಿ , ಆಂಟನ್ ಚೆಕೊವ್ ರೀಡಿಸ್ಕವರ್ಡ್ ನಲ್ಲಿರುವ ಒಂದು ಪ್ರಬಂಧ. ಸವೆಲಿ ಸೆಂಡೆರೋವಿಚ್ ಹಾಗು ಮುನೀರ್ ಸೆಂಡಿಚ್, ಮಿಚಿಗನ್ ರಷ್ಯನ್ ಲಾಂಗ್ವೇಜ್ ಜರ್ನಲ್, ISBN 9999838855
- ಫಿಂಕೆ, ಮೈಕಲ್ C., ಸೀಯಿಂಗ್ ಚೆಕೊವ್: ಲೈಫ್ ಅಂಡ್ ಆರ್ಟ್ , ಕಾರ್ನೆಲ್ UP, 2005, ISBN 978-0801443152
- ಗೆರ್ಹಾರ್ಡಿ, ವಿಲ್ಲಿಯಮ್, ಆಂಟನ್ ಚೆಕೊವ್ , ಮ್ಯಾಕ್ ಡೋನಾಲ್ಡ್, (1923) 1974ರ ಆವೃತ್ತಿ, ISBN 978-0-356-04609-9
- ಗಾರ್ಕಿ, ಮ್ಯಾಕ್ಸಿಂ, ಅಲೆಕ್ಸಾಂಡರ್ ಕುಪ್ರಿನ್, ಹಾಗು I.A. ಬುನಿನ್, ರೆಮಿನಿಸೆನ್ಸ್ ಆಫ್ ಆಂಟನ್ ಚೆಕೊವ್ , S. S. ಕೋಟೆಲಿಯಂಸ್ಕಿ ಹಾಗು ಲಿಯೋನಾರ್ಡ್ ವೂಲ್ಫ್ ಭಾಷಾಂತರಿಸಿದ್ದಾರೆ, B.W. ಹುಯೆಬ್ಸ್ಚ್, 1921. ಎಲ್ಡ್ರಿಟ್ ಪ್ರೆಸ್ ನಲ್ಲಿ ಓದಿ. Archived 2015-09-14 ವೇಬ್ಯಾಕ್ ಮೆಷಿನ್ ನಲ್ಲಿ. 2007ರ ಫೆಬ್ರವರಿ 15ರಂದು ಮರುಸಂಪಾದಿಸಲಾಗಿದೆ.
- ಗೊಟ್ಲಿಯೆಬ್, ವೇರ, ಹಾಗು ಪಾಲ್ ಅಲ್ಲೈನ್(ಸಂಪಾದಕರು), ದಿ ಕೇಂಬ್ರಿಡ್ಜ್ ಕಂಪ್ಯಾನಿಯನ್ ಟು ಚೆಕೊವ್ , ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 2000, ISBN 978-0-521-58917-8
- ಜ್ಯಾಕ್ಸನ್, ರಾಬರ್ಟ್ ಲೂಯಿಸ್, ದೋಸ್ತೋವೆಸ್ಕಿ ಇನ್ ಚೆಕೊವ್'ಸ್ ಗಾರ್ಡನ್ ಆಫ್ ಈಡನ್-'ಬಿಕಾಸ್ ಆಫ್ ಲಿಟಲ್ ಆಪಲ್ಸ್', ಡೈಲಾಗ್ಸ್ ವಿಥ್ ದೋಸ್ತೋವೆಸ್ಕಿ ಯಲ್ಲಿ, ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ ಪ್ರೆಸ್, 1993, ISBN 978-0-8047-2120-2
- ಕ್ಲವನ್ಸ್, ಹರೋಲ್ಡ್ L., ಚೆಕೊವ್'ಸ್ ಲೈ , 1997, ISBN 1-888799-12-9.
ವೈದ್ಯಕೀಯ ಜೀವನದೊಂದಿಗೆ ಬರವಣಿಗೆಯನ್ನು ಸೇರಿಸಿದಾಗ ಉದ್ಭವವಾಗುವ ಸವಾಲುಗಳ ಬಗ್ಗೆ.
- ಮಾಲ್ಕಂ, ಜಾನೆಟ್, ರೀಡಿಂಗ್ ಚೆಕೊವ್, ಏ ಕ್ರಿಟಿಕಲ್ ಜರ್ನಿ , ಗ್ರಾನ್ಟಾ ಪಬ್ಲಿಕೇಷನ್ಸ್, 2004ರ ಆವೃತ್ತಿ, ISBN 978-1-86207-635-8
- ಮೈಲ್ಸ್, ಪ್ಯಾಟ್ರಿಕ್ (ಸಂಪಾದನೆ), ಚೆಕೊವ್ ಆನ್ ದಿ ಬ್ರಿಟಿಶ್ ಸ್ಟೇಜ್ , ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 1993, ISBN 978-0-521-38467-4
- ನಬೋಕೊವ್, ವ್ಲಾಡಿಮಿರ್, ಆಂಟನ್ ಚೆಕೊವ್ , ಲೆಕ್ಚರ್ಸ್ ಆನ್ ರಷ್ಯನ್ ಲಿಟರೇಚರ್ ನಲ್ಲಿ, ಹಾರ್ವೆಸ್ಟ್/HBJ ಬುಕ್ಸ್, [1981] 2002ರ ಆವೃತ್ತಿ, ISBN 978-0-15-602776-2.
- ಪಿಚರ್, ಹಾರ್ವೆ, ಚೆಕೊವ್'ಸ್ ಲೀಡಿಂಗ್ ಲೇಡಿ: ಪೋರ್ಟ್ರೈಟ್ ಆಫ್ ದಿ ಆಕ್ಟ್ರೆಸ್ಸ್ ಒಲ್ಗ ನಿಪ್ಪರ್ , J ಮುರ್ರೆ, 1979, ISBN 978-0-7195-3681-6
- ಪ್ರೋಸ್, ಫ್ರಾಂಕೈನ್, ಲರ್ನಿಂಗ್ ಫ್ರಂ ಚೆಕೊವ್ , ರೈಟರ್ಸ್ ಆನ್ ರೈಟಿಂಗ್ ನಲ್ಲಿ, ಸಂಪಾದನೆ. ರಾಬರ್ಟ್ ಪ್ಯಾಕ್ ಹಾಗು ಜಯ್ ಪರಿನಿ, UPNE, 1991, ISBN 978-0-87451-560-2
- ರೇಫೀಲ್ಡ್, ಡೋನಾಲ್ಡ್, ಆಂಟನ್ ಚೆಕೊವ್: ಏ ಲೈಫ್ , ಹೆನ್ರಿ ಹೊಲ್ಟ್ & ಕೋ, 1998, ISBN 978-0-8050-5747-8
- ಸಿಮ್ಮೊನ್ಸ್, ಅರ್ನೆಸ್ಟ್ J., ಚೆಕೊವ್: ಏ ಬಯೋಗ್ರಫಿ , ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್,(1962) 1970ರ ಆವೃತ್ತಿ, ISBN 978-0-226-75805-3
- ಸ್ಟಾನಿಸ್ಲವಾಸ್ಕಿ, ಕಾನ್ಸ್ಟಾನ್ಟಿನ್, ಮೈ ಲೈಫ್ ಇನ್ ಆರ್ಟ್ , ಮೆತುಯೇನ್ ಡ್ರಾಮ, 1980ರ ಆವೃತ್ತಿ, ISBN 978-0-413-46200-8
- ಸ್ಟ್ಯಾನ್, ಜಾನ್ ಲೂಯಿಸ್, ಮಾಡ್ರನ್ ಡ್ರಾಮ ಇನ್ ಥಿಯರಿ ಅಂಡ್ ಪ್ರ್ಯಾಕ್ಟಿಸ್ , ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 1981, ISBN 978-0-521-29628-1
- ವುಡ್, ಜೇಮ್ಸ್, ವಾಟ್ ಚೆಕೊವ್ ಮೆಂಟ್ ಬೈ ಲೈಫ್ , ದಿ ಬ್ರೋಕನ್ ಎಸ್ಟೇಟ್ ನಲ್ಲಿ: ಎಸ್ಸೆಸ್ ಇನ್ ಲಿಟರೇಚರ್ ಅಂಡ್ ಬಿಲೀಫ್ , ಪಿಮ್ಲಿಕೋ, 2000ದ ಆವೃತ್ತಿ, ISBN 978-0-7126-6557-5
- ಜೆಯಿಗರ್, ಆರ್ಥರ್, ದಿ ಪ್ಲೇಸ್ ಆಫ್ ಆಂಟನ್ ಚೆಕೊವ್ , ಕ್ಲ್ಯಾಕ್ಸ್ಟನ್ ಹೌಸ್, Inc., ನ್ಯೂಯಾರ್ಕ್, NY, 1945.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about ಆಂಟನ್ ಚೆಕೊವ್ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
ಜೀವನಚರಿತ್ರೆ
- ಬಯೋಗ್ರಫಿ Archived 2010-07-11 ವೇಬ್ಯಾಕ್ ಮೆಷಿನ್ ನಲ್ಲಿ. ಬುಕ್ಸ್ ಅಂಡ್ ರೈಟರ್ಸ್ ನಲ್ಲಿ (ಪೆಟ್ರಿ ಲಿಯುಕ್ಕೊನೇನ್)
- ಬಯೋಗ್ರಫಿ ದಿ ಲಿಟರೇಚರ್ ನೆಟ್ವರ್ಕ್ ನಲ್ಲಿ
- "ಚೆಕೊವ್'ಸ್ ಲೆಗಸಿ" ಕಾರ್ನೆಲ್ ವೆಸ್ಟ್ ರಿಂದ NPR ನಲ್ಲಿ, 2004
- ದಿ ಇಂಟರ್ ನ್ಯಾಷನಲ್ ಕಾಂಪಿಟಿಶನ್ ಆಫ್ ಫಿಲಲಾಗಿಕಲ್, ಕಲ್ಚರ್ ಅಂಡ್ ಫಿಲಂ ಸ್ಟಡೀಸ್ ವರ್ಕ್ಸ್ ಡೆಡಿಕೇಟೆಡ್ ಟು ಆಂಟನ್ ಚೆಕೊವ್'ಸ್ ಲೈಫ್ ಅಂಡ್ ಕ್ರಿಯೇಟಿವ್ ವರ್ಕ್ Archived 2009-01-09 ವೇಬ್ಯಾಕ್ ಮೆಷಿನ್ ನಲ್ಲಿ.(Russian)
ಇತರೆ
- ‘DEAD MAN’S BLUFF’ ನಾಟಕದ ನಿರ್ಮಾಣ, ಮೈಕೇಲ್ ವೋಲ್ಕೋವ್ ವಿತ್ ಬರ್ನಾರ್ಡ್ ಸೋಬೆಲ್ ಅವರಿಂದ. Archived 2014-03-26 ವೇಬ್ಯಾಕ್ ಮೆಷಿನ್ ನಲ್ಲಿ.ನಾಟಕದ ಪಾತ್ರದಲ್ಲಿ ಫ್ರೆಂಚ್ ರಂಗಭೂಮಿಯ ಪ್ರತಿಭಾಶಾಲಿಗಳು ಹಾಗು ಚಿತ್ರಕಥೆ ಡೆನಿಸ್ ಲವಂಟ್ ಹಾಗು ಹ್ಯುಗೆಸ್ ಕ್ವೆಸ್ಟರ್, ತ್ರೈನಾಟಕಗಳ ರೂಪದಲ್ಲಿ A. ಚೆಕೊವ್ ರ 'ದಿ ಚೆರ್ರಿ ಆರ್ಚರ್ಡ್'(1903), I. ಬಬೇಲ್ ರ 'ಮರಿಯಾ'(1933) ಹಾಗು M. ವೋಲೋಕ್ಹೊವ್ ರ 'ಡೆಡ್ ಮ್ಯಾನ್'ಸ್ ಬ್ಲಫ್" ಸೇರಿದಂತೆ ಅಂತಾರಾಷ್ಟ್ರೀಯ ಯೋಜನೆ (1989)' ಡೆಡ್ ಮ್ಯಾನ್ ಬ್ಲಫ್'ನ ಒಂದು ಭಾಗವಾಗಿ ಪ್ರದರ್ಶನಗೊಂಡಿತು Archived 2014-03-26 ವೇಬ್ಯಾಕ್ ಮೆಷಿನ್ ನಲ್ಲಿ..
- ಯಾಲ್ಟದಲ್ಲಿರುವ ಚೆಕೊವ್ ರ ಮನೆಯನ್ನು ಸಂರಕ್ಷಿಸಲು ಅಭಿಯಾನ Archived 2009-01-22 ವೇಬ್ಯಾಕ್ ಮೆಷಿನ್ ನಲ್ಲಿ.
- ಆಂಟನ್ ಪವ್ಲೋವಿಚ್ ಚೆಕೊವ್ ರ ಬುದ್ಧಿ ಚಾತುರ್ಯ ಹಾಗು ಜಾಣತನಕ್ಕೆ ಒಂದು ನಿತ್ಯದ ಡೋಸು.
ಕೃತಿಗಳು
- ವರ್ಕ್ಸ್ ಬೈ ಅಂಡ್ ಅಬೌಟ್ ಆಂಟನ್ ಚೆಕೊವ್ ಇಂಟರ್ನೆಟ್ ಅರ್ಚಿವ್ ನಲ್ಲಿ. ಸ್ಕ್ಯಾನ್ ಮಾಡಲಾಗಿರುವ ಪುಸ್ತಕಗಳು, ಬಣ್ಣ, ಕೆಲವು ದೃಷ್ಟಾಂತಗಳ, ಮೂಲ ಸಂಪಾದನೆಗಳು.
- ರೆಕಾರ್ಡೆಡ್ ಸ್ಟೋರೀಸ್ ಆಫ್ ಆಂಟನ್ ಚೆಕೊವ್ ಇಂಟರ್ನೆಟ್ ಆರ್ಚಿವ್ ನಲ್ಲಿ. ಕಾನ್ಸ್ಟನ್ಸ್ ಗಾರ್ನೆಟ್, ಮರಿಯೋನ್ ಫೆಲ್ಲ್, ಹಾಗು ಇತರರಿಂದ ಭಾಷಾಂತರಗೊಂಡಿದೆ. mp3 ಹಾಗು ಒಗ್ಗ್ ಕ್ರಮವ್ಯವಸ್ಥೆಯಲ್ಲಿ ಪ್ರಸ್ತುತಪಡಿಸಲಾಗಿದೆ.
- Works by Anton Chekhov at Project Gutenberg.
ಕಾನ್ಸ್ಟನ್ಸ್ ಗಾರ್ನೆಟ್ ರ ಸಣ್ಣಕಥೆಗಳ ಹಾಗು ಪತ್ರಗಳ ಎಲ್ಲ ತರ್ಜುಮೆಗಳು ಲಭ್ಯವಿದೆ, ಜೊತೆಗೆ S. S. ಕೋಟೆಲಿಯಾನ್ಸ್ಕಿ ಹಾಗು ಲಿಯೋನಾರ್ಡ್ ವೂಲ್ಫ್ ರ ತರ್ಜುಮೆಗೊಂಡ ನೋಟ್-ಬುಕ್ ನ ಆವೃತ್ತಿ - ಈ ಎಲ್ಲವುಗಳ ಮುದ್ರಣ ವಿವರಣೆಯ ಬಗ್ಗೆ ಮಾಹಿತಿಯನ್ನು "ರೆಫೆರೆನ್ಸಸ್" ನಲ್ಲಿ ನೋಡಿ. ಎಲ್ಲ ನಾಟಕಗಳ ಬಗೆಗಿನ ತರ್ಜುಮೆಗಳಿಗೆ ಜಾಲವೂ ಸಹ ಲಭ್ಯವಿದೆ.
- 201 ಸ್ಟೋರೀಸ್ ಬೈ ಆಂಟನ್ ಚೆಕೊವ್, ಕಾನ್ಸ್ಸ್ಟನ್ಸ್ ಗಾರ್ನೆಟ್ ರಿಂದ ತರ್ಜುಮೆಗೊಂಡು ಟಿಪ್ಪಣಿಗಳು ಸೇರಿದಂತೆ ರಷ್ಯನ್ ಮುದ್ರಣದಲ್ಲಿ ಕಾಲಾನುಕ್ರಮವಾಗಿ ಪ್ರಸ್ತುತಪಡಿಸಲಾಗಿದೆ.
- Антон Павлович Чехов ಮೂಲ ರಷ್ಯನ್ ಭಾಷೆಯಲ್ಲಿ ಚೆಕೊವ್ ರ ಕೃತಿಗಳು. 2008ರ ಫೆಬ್ರವರಿ 17ರಂದು ಮರುಸಂಪಾದಿಸಿದ್ದು (Russian)
- Pages with reference errors
- Pages using the JsonConfig extension
- All pages needing factual verification
- Wikipedia articles needing factual verification from March 2009
- Articles with invalid date parameter in template
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using ISBN magic links
- Pages with unresolved properties
- Articles containing Russian-language text
- Pages using Lang-xx templates
- Pages with plain IPA
- Articles with Russian-language external links
- ೧೮೬೦ ಜನನ
- 1904ರಲ್ಲಿ ಮರಣಹೊಂದಿದವರು
- 19ನೇ-ಶತಮಾನದ ರಂಗಭೂಮಿ
- ಆಂಟನ್ ಚೆಕೊವ್
- ಕ್ಷಯದಿಂದ ಸಂಭವಿಸಿದ ಮರಣಗಳು
- ರಷ್ಯಾದಲ್ಲಿರುವ ಪೂರ್ವಭಾಗದ ಸಾಂಪ್ರದಾಯಿಕ ಕ್ರೈಸ್ತರು
- ಜರ್ಮನಿಯಲ್ಲಿ ಸೋಂಕಿನ ಕಾಯಿಲೆಗಳಿಂದ ಸಂಭವಿಸಿದ ಮರಣಗಳು
- ವೈದ್ಯ ಬರಹಗಾರರು
- ಮಾಸ್ಕೋ ಆರ್ಟ್ ಥಿಯೇಟರ್
- ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯ ಹಳೆ ವಿದ್ಯಾರ್ಥಿಗಳು
- ತಗನ್ರೋಗ್ ನ ಜನರು
- ರಷ್ಯಾದ ನಾಟಕಕಾರರು ಹಾಗು ಪ್ಲೇರೈಟ್ಸ್
- ರಷ್ಯಾದ ಕಾದಂಬರಿಕಾರರು
- ರಷ್ಯಾದ ಸಾಂಪ್ರದಾಯಿಕ ಕ್ರೈಸ್ತರು
- ರಷ್ಯಾದ ವೈದ್ಯರುಗಳು
- ರಷ್ಯಾದ ಸಣ್ಣ ಕಥೆಗಾರರು
- ಸಾಹಿತಿಗಳು
- ರಷ್ಯನ್ ಭಾಷೆ
- ನಾಟಕಕಾರರು