ವಿಷಯಕ್ಕೆ ಹೋಗು

ಅಂಜದೀವ್

Coordinates: 14°45′24″N 74°06′45″E / 14.75667°N 74.11250°E / 14.75667; 74.11250
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಜಿದಿವ್
Native name: अंजदीव / Anjadiv
Ilha de Angediva
Geography
Locationಅರಬ್ಬೀ ಸಮುದ್ರ
Coordinates14°45′24″N 74°06′45″E / 14.75667°N 74.11250°E / 14.75667; 74.11250
ವಿಸ್ತೀರ್ಣ೧.೫ km (೦.೫೮ sq mi)
ಉದ್ದ೧.೫ km (೦.೯೩ mi)
ಅಗಲ೦.೨೫ km (೦.೧೫೫ mi)
Country
ಭಾರತ
ರಾಜ್ಯಗೋವಾ
ಜಿಲ್ಲೆದಕ್ಷಿಣ ಗೋವಾ

ಅಂಜಿದಿವ್ ದ್ವೀಪ ಇದು ಕರ್ನಾಟಕ-ಗೋವಾ ಕರಾವಳಿಯಲ್ಲಿ ಅರಬ್ಬೀ ಸಮುದ್ರದಲ್ಲಿರುವ ಒಂದು ದ್ವೀಪ. ಮೊದಲು ಇದು ಪೋರ್ಚುಗೀಸರ ಸ್ವಾಧೀನದಲ್ಲಿತ್ತು.

ಇತಿಹಾಸ

[ಬದಲಾಯಿಸಿ]
ಅಂಜಿದಿವ್‍ನ ಕೋಟೆ

ಈ ದ್ವೀಪದ ಬಗ್ಗೆ ಟಾಲೆಮಿ (ಕ್ರಿ.ಶ.೧೫೦) ತನ್ನ ಬರಹಗಳಲ್ಲಿ "ಐಗಿದೋಯಿ" ಎಂದು ಉಲ್ಲೇಖಿಸಿದಂತೆ ತೋರುತ್ತದೆ.೧೩೪೨ರಲ್ಲಿ ಇಲ್ಲಿ ಬಂದಿಳಿದ ಇಬಿನ್ ಬಟೂಟ ಕೂಡಾ ಇದರ ಪ್ರಸ್ತಾಪವನ್ನು ಮಾಡಿದ್ದಾನೆ. ಹದಿನೈದನೆಯ ಶತಮಾನದಲ್ಲಿ ಮುಸಲ್ಮಾನರು ಇದನ್ನು ವಿಜಯನಗರದ ಅರಸರಿಂದ ವಶಪಡಿಸಿಕೊಂಡು ತಮ್ಮ ಬಂದರನ್ನಾಗಿ ಮಾಡಿಕೊಂಡರು.[] ಅದರೂ ಇಲ್ಲಿ ಶಾಶ್ವತ ವಸತಿ ಇಲ್ಲದಿದ್ದುದರಿಂದ ಟಿಪ್ಪು ಸುಲ್ತಾನನ ಕಾಲದಲ್ಲಿ ಬಿದನೂರಿನಿಂದ ಹಾಗೂ ಸೊಂದಾದಿಂದ ಓಡಿಸಲ್ಪಟ್ಟ ಹಿಂದೂ ಹಾಗೂ ಕ್ರಿಶ್ಚಿಯನ್ನರು ಇಲ್ಲಿ ಆಶ್ರಯ ಪಡೆದರು.ಇದರ ಮೊದಲೇ ೧೪೯೮ರಲ್ಲಿ ವಾಸ್ಕೋ ಡ ಗಾಮ ಇಲ್ಲಿಗೆ ಬೇಟಿಕೊಟ್ಟಾಗಲೇ ಪೋರ್ಚುಗೀಸರು ಇಲ್ಲಿ ಕೋಟೆಯನ್ನು ನಿರ್ಮಿಸಿದ್ದರು. ಹಿಂದೆ ಪೋರ್ಚುಗೀಸರ ವಶದಲ್ಲಿದ್ದ ಈ ದ್ವೀಪದ ಬಳಿಯಲ್ಲಿಯೇ 1961ನೆಯ ಡಿಸೆಂಬರ್ ತಿಂಗಳಲ್ಲಿ ಒಬ್ಬ ಭಾರತೀಯ ಅಂಬಿಗನು ಅವರಿಂದ ಗುಂಡು ಹಾರಿಸಿ ಕೊಲ್ಲಲ್ಪಟ್ಟ. 400 ವರ್ಷಗಳಿಗಿಂತ ಹೆಚ್ಚಾಗಿ ಗೋವೆಯಲ್ಲಿ ಭಾರತೀಯರನ್ನು ಕೆಟ್ಟ ರೀತಿಯಿಂದ ಆಳುತ್ತಿದ್ದು ಗೌರವದಿಂದ ಅದನ್ನು ಬಿಟ್ಟುಕೊಡದಿದ್ದ ಪೋರ್ಚುಗೀಸರ ವಿರುದ್ಧ ಭಾರತೀಯರಲ್ಲಿ ಉರಿಯುತ್ತಿದ್ದ ಬೆಂಕಿಯ ಕಿಡಿಯನ್ನು ಎಬ್ಬಸಿದ್ದೂ ಇದೇ ಘಟನೆ. ಭಾರತೀಯ ಬಾಂಧವರನ್ನು ಮತ್ತು ಪೋರ್ಚುಗೀಸರ ವಶದಲ್ಲಿದ್ದ ಇನ್ನುಳಿದ ವಸಾಹತುಗಳನ್ನು ಭಾರತ ಹೇಗೆ ಮುಕ್ತಗೊಳಿಸಿತೆಂಬುದು ಇಂದಿನ ಇತಿಹಾಸಕ್ಕೆ ಸೇರಿಕೊಂಡಿರುವ ವಿಷಯ. ಅಂಜದೀವ್ನ ಬಳಿ ಭಾರತದ ಜಲನೌಕೆಗಳು ಹೋದಾಗ ಪೋರ್ಚುಗೀಸ್ ಪಡೆಗಳು ಶರಣಾಗತವಾದವು. ಆದರೆ ಜಲಸೈನಿಕರು ತೀರದಲ್ಲಿ ಇಳಿಯುವಾಗ ಪೋರ್ಚುಗೀಸರು ಇವರ ಮೇಲೆ ಗುಂಡುಹಾರಿಸಿ ಕೆಲವರನ್ನು ಕೊಂದರು. ಅಂಜದೀವ್ನಲ್ಲಿ ನಡೆದ ಅಂಬಿಗನ ಕೊಲೆಯೇ ಗೋವೆಯನ್ನು ಪೋರ್ಚುಗೀಸರಿಂದ ಮುಕ್ತಗೊಳಿಸಲು ಭಾರತ ಕೈಗೊಂಡ ನಿರ್ಧಾರಕ್ಕೆ ತತ್ಕ್ಷಣದ ಕಾರಣವಾಯಿತೆಂದು ಹೇಳಬಹುದು[]

ಭೌಗೋಳಿಕ

[ಬದಲಾಯಿಸಿ]
೧೮೮೫ರ ದ್ವೀಪದ ಒಂದು ಭೂಪಟ

ಈ ದ್ವೀಪವು 14°45′24″N 74°06′45″E / 14.75667°N 74.11250°E / 14.75667; 74.11250ನಲ್ಲಿ ಅರಬ್ಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ.

ಉಲ್ಲೇಖಗಳು

[ಬದಲಾಯಿಸಿ]
  1. https://dsal.uchicago.edu/reference/gazetteer/pager.html?objectid=DS405.1.I34_V05_393.gif
  2. "ಅಂಜದೀವ". ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ. ಮೈಸೂರು ವಿಶ್ವವಿದ್ಯಾಲಯ. {{cite encyclopedia}}: |access-date= requires |url= (help); Cite has empty unknown parameter: |1= (help)
"https://kn.wikipedia.org/w/index.php?title=ಅಂಜದೀವ್&oldid=1050410" ಇಂದ ಪಡೆಯಲ್ಪಟ್ಟಿದೆ