ವಿಷಯಕ್ಕೆ ಹೋಗು

ಕಾಲ್ಬೆರಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಂಗುಟ ಇಂದ ಪುನರ್ನಿರ್ದೇಶಿತ)

ಕಾಲ್ಬೆರಳುಗಳು ಟೆಟ್ರಪಾಡ್‍ಗಳ ಪಾದಬೆರಳುಗಳು. ತಮ್ಮ ಕಾಲ್ಬೆರಳುಗಳ ಮೇಲೆ ನಡೆಯುವ ಬೆಕ್ಕುಗಳಂತಹ ಪ್ರಾಣಿ ಪ್ರಜಾತಿಗಳನ್ನು ಅಂಗುಲಿಗಾಮಿ ಎಂದು ವಿವರಿಸಲಾಗುತ್ತದೆ. ತಮ್ಮ ಪಾದದ ಅಂಗಾಲುಗಳ ಮೇಲೆ ನಡೆಯುವ ಮಾನವರು, ಮತ್ತು ಇತರ ಪ್ರಾಣಿಗಳನ್ನು ಅಂಗಾಲುಗಾಮಿ ಎಂದು ವಿವರಿಸಲಾಗುತ್ತದೆ; ಖುರಗಾಮಿ ಪ್ರಾಣಿಗಳು ತಮ್ಮ ಕಾಲ್ಬೆರಳುಗಳ ತುದಿಗಳಲ್ಲಿರುವ ಗೊರಸುಗಳ ಮೇಲೆ ನಡೆಯುತ್ತವೆ.

ಪ್ರತಿ ಮಾನವ ಪಾದದ ಮೇಲೆ ಐದು ಬೆರಳುಗಳು ಇರುತ್ತವೆ.

ಕಾಲ್ಬೆರಳ ಚಲನೆಯು ಸಾಮಾನ್ಯವಾಗಿ ಸ್ನಾಯುರಜ್ಜುಗಳ ಮೂಲಕ ಬಾಗುವಿಕೆ ಮತ್ತು ವಿಸ್ತರಣೆ.

ಕಾಲ್ಬೆರಳುಗಳು ರಕ್ತವನ್ನು ಪಾದಪಂಚಾಸ್ಥಿ ಅಪಧಮನಿಗಳಿಂದ ಪಡೆಯುತ್ತವೆ ಮತ್ತು ಪಾದದ ಬೆಂಗಡೆಯ ಅಭಿಧಮನಿ ಕಮಾನಿನಲ್ಲಿ ಹೊರಹಾಕುತ್ತವೆ.

ಮಾನವರಲ್ಲಿ, ಹೆಬ್ಬೆರಳು ಸಾಮಾನ್ಯವಾಗಿ ಹೆಚ್ಚು ಉದ್ದವಿರುತ್ತದೆ, ಆದರೆ ಕೆಲವರಲ್ಲಿ, ಇದು ಇಲ್ಲದಿರಬಹುದು.

ಕಾಲ್ಬೆರಳುಗಳು ಮಾನವರಿಗೆ ನಡೆಯುವಾಗ ಸಹಾಯ ಮಾಡುತ್ತವೆ ಮತ್ತು ಸಮತೋಲನ, ಭಾರ ಹೊರುವಿಕೆ ಹಾಗೂ ನೂಕುಬಲವನ್ನು ನೀಡುತ್ತವೆ.