ಸುಧಾ ಚಂದ್ರನ್
ಸುಧಾ ಚಂದ್ರನ್ | |
---|---|
Born | ೨೭ ಸಪ್ಟೆಂಬರ್ ೧೯೬೫ ಭಾರತ |
Occupation(s) | ಭರತನಾಟ್ಯ ನೃತ್ಯ ಕಲಾವಿದೆ , ನಟಿ |
Years active | ೧೯೮೪ – |
Spouse | ರವಿ ದಂಗ್ |
Parent | ಕೆ.ಡಿ.ಚಂದ್ರನ್ |
ಸುಧಾ ಚಂದ್ರನ್ ರವರು(೨೭ ಸಪ್ಟೆಂಬರ್ ೧೯೬೫) ಭಾರತೀಯ ಚಲನಚಿತ್ರ ಮತ್ತು ಕಿರುತರೆ ನಟಿ ಹಾಗೂ ಭರತನಾಟ್ಯ ನೃತ್ಯ ಕಲಾವಿದೆ . ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ತಮಿಳುನಾಡಿನ ತಿರುಚಿರಾಪಲ್ಲಿ ಬಳಿ ರಸ್ತೆ ಅಪಘಾತದಿಂದಾಗಿ ತನ್ನ ಕಾಲನ್ನು ಕಳೆದುಕೊಂಡರು . ನಂತರ ಕೃತಕ ಕಾಲಿನ ಸಹಾಯದಿಂದ ಅವರು ನಡೆಯಲು ಪ್ರಾರಂಭಿಸಿದರು. ಸುಧಾ ರವರು ಕಾಹಿನ್ ಕಿಸ್ಸಿ ರೋಜ್ ನಲ್ಲಿ ರಾಮೋಲಾ ಸಿಕಂದ್ , ನಾಗಿನ್ ೧ ಮತ್ತು ನಾಗಿನ್ ೨ ನಲ್ಲಿ ಯಾಮಿನಿ ಸಿಂಗ್ ರಹೇಜಾ , ದೈವಂ ತಂದ ವೀಡು ನಲ್ಲಿ ಚಿತ್ರಾದೇವಿ ಹಮ್ ಪಾಂಚ್ ( ೨ ) ನಲ್ಲಿ ಆನಂದ ನ ಮೊದಲನೆಯ ಹೆಂಡತಿಯಾಗಿ , ಪರ್ದೇಸ್ ಮೆ ಹೆ ಮೇರಾ ದಿಲ್ ನಲ್ಲಿ ಹರ್ಜೀತ್ ಖುರಾನ , ಯೆ ಹೆ ಮೊಹೋಬತೆ ನಲ್ಲಿ ಸುಧಾ ಶ್ರೀವಾತ್ಸವ್ ಎಂಬ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.[೧]
ಜನನ , ಆರಂಭಿಕ ಜೀವನ
[ಬದಲಾಯಿಸಿ]ಸುಧಾ ಚಂದ್ರನ್ ರವರು ೨೭ ಸೆಪ್ಟೆಂಬರ್ ೧೯೬೫ ರಂದು ಮುಂಬೈ ನಲ್ಲಿ ತಮಿಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು.[೨] ನೆಟ್ವುವಿನ ಸಂದರ್ಶನವೊಂದರಲ್ಲಿ, ಅವರು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ ಎಂದು ಹೇಳಿದ್ದರು, ಆದರೆ ಆಕೆಯ ಕುಟುಂಬವು ತಮಿಳುನಾಡಿನ ತಿರುಚಿರಪಳ್ಳಿಯ ವಯಾಲೂರ್ ನವರು. ಅವರ ತಂದೆ ಕೆ.ಡಿ.ಚಂದ್ರನ್, ಯುಎಸ್ಎ ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮಾಜಿ ನಟ. ಸುಧಾ ಚಂದ್ರನ್ ತನ್ನ ಬಿ.ಎ.[೩] ಪದವಿಯನ್ನು ಮುಂಬೈನ ಮಿಥಿಬಾಯ್ ಕಾಲೇಜಿನಿಂದ ಹಾಗೂ ತನ್ನ ಎಂ.ಎ ಪದವಿಯನ್ನು ಅದೇ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.[೪]
ಅಪಘಾತವಾದ ಸಂದರ್ಭ
[ಬದಲಾಯಿಸಿ]ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ಮಧ್ಯ ರಾತ್ರಿ ಆಕೆ ತೆರಳುತ್ತಿದ್ದ ಬಸ್ ತೀರ್ವ ಅಪಘಾತಕ್ಕೆ ಸಿಲುಕಿತ್ತು . ಸುಧಾ ಅವರು ಚಾಲಕನ ಹಿಂಬದಿಯ ಸೀಟಿನಲ್ಲಿ ಕುಳಿತ್ತಿದ್ದರಿಂದ ಅಪಘಾತಕ್ಕೆ ಬಲಿಯಾದರು . ಅಪಘಾತದ ಸಂದರ್ಭದಲ್ಲಿ ಸುಧಾ ಚಂದ್ರನ್ ರವರು ಕಾಲನ್ನು ಮುಂದಕ್ಕೆ ಚಾಚಿದ್ದರು ಇದರಿಂದಾಗಿ ಅವರ ಕಾಲು ಸೀಟಿನ ಮಧ್ಯಕ್ಕೆ ಸಿಲುಕಿತ್ತು. ಬಸ್ ನಲ್ಲಿದ್ದ ಬಹಳಷ್ಟು ಪ್ರಯಾಣಿಕರು ಗಾಯಗೊಂಡಿದ್ದರು . ಸ್ಥಳೀಯರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು . ಬಲಗಾಲು ತೀರ ಗಾಯಗೊಂಡಿತ್ತು . ವೈದ್ಯರು ಆಕೆಗೆ ಪ್ರಥಮ ಚಿಕಿತ್ಸೆಯನ್ನು ನೀಡಿದರು . ಕೆಲ ದಿನಗಳ ನಂತರ ಆಕೆಯ ಕಾಲು ಗ್ಯಾಂಗ್ರೀನ್ ಆಗಿದೆ ಎಂದು ತಿಳಿಯಿತು . ಕೂಡಲೆ ಕಾಲುಗಳನ್ನು ತುಂಡು ಮಾಡುವುದು ಸೂಕ್ತ ಅಥವಾ ಪ್ರಾಣಕ್ಕೆ ಅಪಾಯ ಎಂದು ವೈದ್ಯರು ಸಲಹೆ ನೀಡಿದರು. ಸಲಹೆಯ ಮೇರಿಗೆ ಆಕೆಯ ಕಾಲು ತುಂಡು ಮಾಡಲಾಯಿತು . ಕಾಲಿನ ಬದಲಾಗಿ ಮರದ ಕಾಲನ್ನು ಜೋಡಿಸಲಾಯಿತು . ಮೊದಲಿನಲ್ಲಿ ಸುಧಾರವರು ಬೇಸತ್ತರು . ನಂತರ ಅಭ್ಯಾಸವಾಯಿತು . ದಿನನಿತ್ಯ ಜೀವನದಲ್ಲಿ ಹೊಂದುಕೊಂಡರು . ದಿನ ಕಳೆದಂತೆ ಆತ್ಮವಿಶ್ವಾಸವು ಬೆಳೆಯಿತು . ಮುಂದಿನ ಓದಿನಲ್ಲಿ ಆಸಕ್ತಿವಹಿಸಿದರು . ಅವರ ತಂದೆ ಆಕೆಗೆ ಬೆಂಬಲವಾಗಿದ್ದರು . ವೀಲ್ ಚೇರನ್ನು ಉಪಯೋಗಿಸಲು ಸೂಚಿಸಿದರು . ಇವರು ಅದಕ್ಕೆ ನಿರಾಕರಿಸಿದರು . ಮರಗಾಲಿನಲ್ಲಿಯೇ ನಡೆಯಲು ಪ್ರಾರಂಭಿಸಿದರು . ೬ ತಿಂಗಳ ನಂತರ ಸುಧಾ ಚಂದ್ರನ್ ರವರು ಮ್ಯಾಗಜಿನ್ ಓದುತ್ತಿರುವಾಗ ಡಾಕ್ಟರ್ ಸೆತ್ತಿ ಜೈಪುರ ಅವರ ಕೃತಕ ಕಾಲಿನ ಬಗ್ಗೆ ತಿಳಿದ ಸುಧಾ ಚಂದ್ರನ್ ಅವರ ಕಲಾ ಲೋಕಕ್ಕೆ ಬೆಳಕು ಚೆಲ್ಲಿದಂತಾಯಿತು .[೫][೬]
ಶಿಕ್ಷಣ
[ಬದಲಾಯಿಸಿ]ಸುಧಾ ರವರು ಮಿಥಿಬಾಯ್ ಕಾಲೇಜ್ ಮುಂಬೈನಲ್ಲಿ ಬಿ.ಎ ಮತ್ತು ಎಮ್.ಎ ಪದವಿಯನ್ನು ಪಡೆದರು.[೭]
ವೃತ್ತಿಜೀವನ
[ಬದಲಾಯಿಸಿ]ಸುಧಾ ರವರು ಮಯೂರಿ ಎಂಬ ತೆಲುಗು ಚಲನಚಿತ್ರದಿಂದ ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವನ್ನು ತಮಿಳು , ಮಲೆಯಾಳಂ ಹಾಗೂ ಹಿಂದಿಯಲ್ಲಿ ನಾಚೆ ಮಯೂರಿ ಎಂಬ ಹೆಸರಿನಲ್ಲಿ ಡಬ್ ಮಾಡಲಾಯಿತು . ಈ ಚಿತ್ರದಲ್ಲಿ ಅಭಿನಯಿಸಿದ ಇವರಿಗೆ ೧೯೮೬ ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷವಾದ ಜ್ಯೂರಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು .
ಫಿಲ್ಮೋಗ್ರಾಫಿ
[ಬದಲಾಯಿಸಿ]ವರುಷ | ಚಲನಚಿತ್ರ | ಪಾತ್ರ | ಭಾಷೆ | ಟಿಪ್ಟಣಿ |
---|---|---|---|---|
೨೦೧೮ | ಸಾಮಿ ೨[೮] | ಇಲೈಯ ಪೆರುಮಲ್ (ಪೆರುಮಲ್ ಪಿಚ್ಚೈ)ನ ಹೆಂಡತಿ | ತಮಿಳು | |
೨೦೧೮ | ಕ್ರಿನ [೯] | ಹಿಂದಿ | ||
೨೦೧೭ | ತೇರಾ ಇಂತ್ಜಾರ್ [೧೦] | ಹಿಂದಿ | ||
೨೦೧೭ | ವಿಜ್ಹಿತಿರು[೧೧] | ವಿಜಯಲಕ್ಷ್ಮಿ | ತಮಿಳು | |
೨೦೧೬ | ಸಿಸ್ಟರ್ಸ್ | ಸುಧಾ | ಮರಾಠಿ | |
೨೦೧೬ | ಬಾಬುಜಿ ಎಕ್ ಟಿಕಟ್ ಬಂಬಯಿ[೧೨] | ಹಿಂದಿ | ||
೨೦೧೫ | ಗುರು ಸುಕ್ರನ್[೧೩] | ತಮಿಳು | ||
೨೦೧೩ | ಅಮೀರಿನ್ ಆಧಿ ಭಗವನ್[೧೪] | ಇಂದ್ರ ಸುಂದರಮೂರ್ತಿ | ತಮಿಳು | |
೨೦೧೩ | ಪರಮ್ವೀರ್ ಪರಶುರಾಮ್ | ಭೋಜ್ಪುರಿ | ||
೨೦೧೩ | ಕ್ಲಿಯೋಪತ್ರ[೧೫] | ಮಲೆಯಾಳಂ | ||
೨೦೧೧ | ವೆನ್ಘಯ್[೧೬] | ರಾಧಿಕಾ ಳ ತಾಯಿ | ತಮಿಳು | |
೨೦೧೦ | ಅಲೆಕ್ಸಾಂಡರ್ ದಿ ಗ್ರೇಟ್ [೧೭] | ಗಾಯತ್ರಿ ದೇವಿ | ಮಲೆಯಾಳಂ | |
೨೦೦೮ | ಸತ್ಯಂ | ಸತ್ಯಂ ನ ತಾಯಿ | ತಮಿಳು | |
೨೦೦೮ | ಪ್ರಣಾಲಿ[೧೮] | ಆಕಾ | ಹಿಂದಿ | |
೨೦೦೬ | ಶಾಧಿ ಕರ್ಕೆ ಫಸ್ ಗಯ ಯಾರ್[೧೯] | ಡಾಕ್ಟರ್ | ಹಿಂದಿ | |
೨೦೦೬ | ಮಾಲಾಮಾಲ್ ವೀಕ್ಲಿ[೨೦] | ಠಕುರಾಇನ್ | ಹಿಂದಿ | |
೨೦೦೪ | ಸ್ಮೈಲ್ ಪ್ಲೀಸ್ [೨೧] | ತುಳಸಿ | ಹಿಂದಿ | |
೨೦೦೧ | ಏಕ್ ಲುಟೇರೆ | ಹಿಂದಿ | ||
೨೦೦೦ | ತೂನೆ ಮೇರ ದಿಲ್ ಲೆ ಲಿಯಾ | ರಾಣಿ | ಹಿಂದಿ | |
೧೯೯೯ | ಹಮ್ ಆಪ್ಕೆ ದಿಲ್ ಮೆ ರೆಹೆತೆ ಹೆ[೨೨] | ಮಂಜು | ಹಿಂದಿ | |
೧೯೯೯ | ಮಾ ಬಾಪ್ ನೆ ಭುಲ್ಸೊ ನಹೀಂ | ಶರ್ದಾ | ಗುಜರಾತಿ | |
೧೯೯೫ | ಮಿಲನ್[೨೩] | ಜಯ | ಹಿಂದಿ | |
೧೯೯೫ | ರಘುವೀರ್ | ಆರ್ತಿ ವರ್ಮ | ಹಿಂದಿ | |
೧೯೯೪ | ಅಂಜಾಮ್[೨೪] | ಶಿವಾನಿಯ ತಂಗಿ | ಹಿಂದಿ | |
೧೯೯೪ | ಡಾಲ್ದು ಚೊರಯು ಧೀರೆ ಧೀರೆ | ಹಿಂದಿ | ||
೧೯೯೪ | ಬಾಲಿ ಉಮರ್ ಕೊ ಸಲಾಮ್[೨೫] | ಹಿಂದಿ | ||
೧೯೯೩ | ಫೂಲನ್ ಹಸೀನಾ ರಮ್ಕಲಿ[೨೬] | ಫೂಲನ್ | ಹಿಂದಿ | |
೧೯೯೨ | ನಿಶ್ಚಯ್[೨೭] | ಜೂಲಿ | ಹಿಂದಿ | |
೧೯೯೨ | ನಿಶ್ಚಯ್ | ಹಿಂದಿ | ||
೧೯೯೨ | ಇಂತೆಹ ಪ್ಯಾರ್ ಕಿ | ತಾನಿಯಾಳ ವಿವಾಹದಲ್ಲಿ ನರ್ತಕಿಯಾಗಿ | ಹಿಂದಿ | |
೧೯೯೨ | ಕೇದ್ ಮೆ ಹೆ ಬುಲ್ ಬುಲ್ | ಜೂಲಿ | ಹಿಂದಿ | |
೧೯೯೨ | ಶೋಲ ಔರ್ ಶಬ್ನಮ್[೨೮] | ಕರಣ್ ನ ತಂಗಿ | ಹಿಂದಿ | |
೧೯೯೧ | ಇನ್ಸಾಫ್ ಕಿ ದೇವಿ[೨೯] | ಸೀತಾ ಎಸ್.ಪ್ರಕಾಶ್ | ಹಿಂದಿ | |
೧೯೯೧ | ಕುರ್ಬಾನ್ | ಪೃಥ್ವಿಯ ತಂಗಿ | ಹಿಂದಿ | |
೧೯೯೧ | ಜಾನ್ ಪೆಹೆಚಾನ್ | ಹೇಮಾ | ಹಿಂದಿ | |
೧೯೯೧ | ಜೀನೆ ಕಿ ಸಜಾ[೩೦] | ಶೀತಲ್ | ಹಿಂದಿ | |
೧೯೯೦ | ರಾಜ್ನರ್ತಕಿ[೩೧] | ಚಂದ್ರಿಮ | ಬಂಗಾಳಿ | |
೧೯೯೦ | ಥಾನೆದಾರ್[೩೨] | ಶ್ರೀಮತಿ.ಜಗದೀಶ್ ಚಂದ್ರ | ಹಿಂದಿ | |
೧೯೯೦ | ಪತಿ ಪರ್ಮೇಶ್ವರ್[೩೩] | ಹಿಂದಿ | ||
೧೯೮೮ | ಒಲವಿನ ಆಸರೆ[೩೪] | ಕನ್ನಡ | ||
೧೯೮೮ | ತಂಗ ಕಲಸಂ | ತಮಿಳು | ||
೧೯೮೭ | ಕಲಂ ಮರಿ ಕಥಾ ಮರಿ[೩೫] | ಆರಿಫ | ಮಲೆಯಾಳಂ | |
೧೯೮೭ | ಚಿನ್ನ ತಂಬಿ ಪೆರಿಯ ತಂಬಿ[೩೬] | ತಾಯಮ್ಮ | ತಮಿಳು | |
೧೯೮೭ | ಚಿನ್ನ ಪೂವೆ ಮೆಲ್ಲ ಪೆಸು | ಶಾಂತಿ | ತಮಿಳು | |
೧೯೮೭ | ಥಯೆ ನೀಯೆ ತುನೈ | ತಮಿಳು | ||
೧೯೮೬ | ನಾಚೆ ಮಯೂರಿ[೩೭] | ಮಯೂರಿ | ಹಿಂದಿ | |
೧೯೮೬ | ವಸಂತ ರಾಗಂ[೩೮] | ತಮಿಳು | ||
೧೯೮೬ | ಧರ್ಮಂ[೩೯] | ತಮಿಳು | ||
೧೯೮೬ | ನಂಬಿನಾರ್ ಕೇಡುವಾತಿಲೈ[೪೦] | ತಮಿಳು | ||
೧೯೮೬ | ಸರ್ವಂ ಸಕ್ತಿಮಯಂ[೪೧] | ಸಿವಕಾಮಿ | ತಮಿಳು | |
೧೯೮೬ | ಮಲರುಂ ಕಿಲಿಯುಂ[೪೨] | ರೇಖ | ಮಲೆಯಾಳಂ | |
೧೯೮೪ | ಮಯೂರಿ[೪೩] | ಮಯೂರಿ | ತೆಲುಗು |
ಪ್ರಶಸ್ತಿಗಳು
[ಬದಲಾಯಿಸಿ]- ನ್ಯಾಷನಲ್ ಫಿಲ್ಮ್ ಅವಾರ್ಡ್ / ಜ್ಯೂರಿ ಪ್ರಶಸ್ತಿ - ೧೯೮೬. [೪೪]
- ಸ್ಟಾರ್ ಪರಿವಾರ್ ಅವಾರ್ಡ್ಸ್ - ೨೦೦೪. [೪೫]
- ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ ಇನ್ ನೆಗೆಟಿವ್ ರೋಲ್ - ೨೦೦೫.
- ಏಷಿಯನೆಟ್ ಟೆಲಿವಿಷನ್ ಅವಾರ್ಡ್ಸ್ - ೨೦೧೩.[೪೬]
- ವಿಜಯ್ ಟೆಲಿವಿಷನ್ ಅವಾರ್ಡ್ - ೨೦೧೪.[೪೭]
- ವಿಜಯ್ ಟೆಲಿವಿಷನ್ ಅವಾರ್ಡ್(ಬೆಸ್ಟ್ ಅತ್ತೆ) - ೨೦೧೫.
- ಕಲರ್ಸ್ ಗೋಲ್ಡನ್ ಪೆಟಲ್ ಅವಾರ್ಡ್ಸ್ - ೨೦೧೬.[೪೮]
- ಕಲರ್ಸ್ ಗೋಲ್ಡನ್ ಪೆಟಲ್ ಅವಾರ್ಡ್ಸ್(ಬೆಸ್ಟ್ ಕಾಮಿಕ್ ರೋಲ್) - ೨೦೧೭ .[೪೯]
ತೀರ್ಪುಗಾರರಾಗಿ
[ಬದಲಾಯಿಸಿ]ವರ್ಷ | ಕಾರ್ಯಕ್ರಮ | ಚಾನೆಲ್ | ಭಾಷೆ |
---|---|---|---|
೨೦೧೯ | ತಕರ್ಪನ್ ಕಾಮಿಡಿ | ಮಜ್ಹಾವಿಲ್ ಮನೋರಮಾ | ಮಲಯಾಳಂ |
೨೦೧೮ | ಡಾನ್ಸ್ ಜೋಡಿ ಡಾನ್ಸ್ ಜೂನಿಯರ್ಸ್ | ಝೀ ತಮಿಳ್ | ತಮಿಳು |
೨೦೧೮/೨೦೧೯ | ಕಾಮಿಡಿ ಸ್ಟಾರ್ಸ್ ಸೀಸನ್ ೨ | ಏಷಿಯನೆಟ್ | ಮಲಯಾಳಂ |
೨೦೧೭-೨೦೧೮ | ಝೀ ಡಾನ್ಸ್ ಲೀಗ್[೫೦] | ಝೀ ತಮಿಳ್ | ತಮಿಳು |
೨೦೧೭ | ಡಾನ್ಸಿಂಗ್ ಖಿಲಾಡೀಸ್[೫೧] | ಝೀ ತಮಿಳ್ | |
ಮಲಯಾಳಿ ವೀತಮ್ಮ | ಫ್ಲವರ್ಸ್ ಟಿವಿ | ಮಲಯಾಳಂ | |
೨೦೧೬-೨೦೧೭ | ಡಾನ್ಸ್ ಜೋಡಿ ಡಾನ್ಸ್[೫೨] | ಝೀ ತಮಿಳ್ | ತಮಿಳು |
೨೦೧೩ | ಉಗ್ರಂ ಉಜ್ವಲಂ[೫೩] | ಮಜ್ಹಾವಿಲ್ ಮನೋರಮಾ | ಮಲಯಾಳಂ |
ಲಿಟಲ್ ಸ್ಟಾರ್ಸ್ | ಏಷಿಯನೆಟ್ | ||
೨೦೧೨ | ಮರಾಠಿ ತರಾಕಾ | ಝೀ ಮರಾಠಿ | ಮರಾಠಿ |
೨೦೦೯ | ಸೂಪರ್ ಡಾನ್ಸರ್ ಜೂನಿಯರ್ ೨[೫೪] | ಅಮೃತಾ ಟಿವಿ | ಮಲಯಾಳಂ |
೨೦೦೮ | ಕ್ರೇಜಿ ಕಿಯಾ ರೇ[೫೫] | ಡಿಡಿ ನ್ಯಾಷನಲ್ | ಹಿಂದಿ |
ಸೂಪರ್ ಡಾನ್ಸರ್[೫೬] | ಅಮೃತಾ ಟಿವಿ | ಮಲಯಾಳಂ | |
೨೦೦೭ | ಸೂಪರ್ ಡಾನ್ಸರ್ ಜೂನಿಯರ್[೫೪] | ಅಮೃತಾ ಟಿವಿ |
ಉಲ್ಲೇಖಗಳು
[ಬದಲಾಯಿಸಿ]- ↑ https://www.revolvy.com/page/Sudha-Chandran
- ↑ https://www.filmibeat.com/celebs/sudha-chandran/awards.html
- ↑ Reddy, drusenireddymallu_221 (9 August 2017). "Sudha Chandran Indian Bharatanatyam Dancer". Diary Store (in ಇಂಗ್ಲಿಷ್). Archived from the original on 3 ನವೆಂಬರ್ 2019. Retrieved 19 March 2020.
{{cite web}}
: CS1 maint: numeric names: authors list (link) - ↑ "Sudha Chandran and Her Husband: How They Met and In Loved?". MIJ Miner8. 10 August 2016. Archived from the original on 19 ಮಾರ್ಚ್ 2020. Retrieved 19 March 2020.
- ↑ ಸುಧಾ ಚಂದ್ರನ್,ಟೈಮ್ಸ್ ಆಫ್ ಇಂಡಿಯಾ January 18, 2016, 9:15 PM IST
- ↑ "Sudha Chandran's story about her accident will leave you inspired". Times of India Blog. 18 January 2016. Retrieved 19 March 2020.
- ↑ Sudha Chandran Biodata
- ↑ Sammy 2
- ↑ Krina
- ↑ Tera Intezaar
- ↑ Vizhithiru
- ↑ Baabuji ek ticket mumbai
- ↑ "Guru sukran". Archived from the original on 2019-03-29. Retrieved 2019-03-29.
- ↑ Ameerin aadhi bhagavan
- ↑ Cleopatra
- ↑ Venghai
- ↑ Alexander the Great
- ↑ Pranaali
- ↑ Shaadi Karke Phas Gaya Yaar
- ↑ Malmaal Weekly
- ↑ "Smile please". Archived from the original on 2019-03-29. Retrieved 2019-03-29.
- ↑ Hum Aapke Dil Mein Rehte Hain
- ↑ Milan
- ↑ Anjaam
- ↑ Baali Umar Ko Salaam
- ↑ Phoolan Hasina Ramkali
- ↑ Nischay
- ↑ Shola Aur Shabnam
- ↑ Insaaf Ki Devi
- ↑ Jeene Ki Saza
- ↑ Raajanartaki
- ↑ "Thaanedaar". Archived from the original on 2019-03-29. Retrieved 2019-03-29.
- ↑ "Pati Parmeshwar". Archived from the original on 2019-03-29. Retrieved 2019-03-29.
- ↑ Olavina Aasare
- ↑ Chinna Poove Mella Pesu
- ↑ Chinna Thambi Periya Thamb
- ↑ Naache Mayuri
- ↑ Vsanta Ragam
- ↑ "Dharmam". Archived from the original on 2022-08-14. Retrieved 2019-03-29.
- ↑ Nambinar Keduvathillai
- ↑ "Sarvam Sakthimayam". Archived from the original on 2019-03-29. Retrieved 2019-03-29.
- ↑ Malarum Kiliyume
- ↑ Mayuri
- ↑ "ಆರ್ಕೈವ್ ನಕಲು". Archived from the original on 2019-03-29. Retrieved 2019-03-29.
- ↑ https://alchetron.com/Sudha-Chandran
- ↑ "ಆರ್ಕೈವ್ ನಕಲು". Archived from the original on 2019-04-12. Retrieved 2019-03-29.
- ↑ https://brainly.in/question/2710686
- ↑ ಸುಧಾ ಚಂದ್ರನ್
- ↑ Colors Golden Petal Awards for best comic role female
- ↑ "Zee Telugu News | Latest News on Zee Telugu - Times of India - Page 12". The Times of India. Archived from the original on 19 ಮಾರ್ಚ್ 2020. Retrieved 19 March 2020.
- ↑ "Sudha Chandran: Indian dancer and actress - Biography and Life". peoplepill.com. Retrieved 19 March 2020.
- ↑ "Laila, Sneha and Sudha Chandran have a blast on the sets of Dance Jodi Dance Juniors; see video". Times of India.
{{cite web}}
: CS1 maint: url-status (link) - ↑ "'Ugram Ujjwalam' another feather in my cap: Sudha Chandran".
{{cite web}}
: CS1 maint: url-status (link) - ↑ ೫೪.೦ ೫೪.೧ "Diva and loving it". The Hindu.
{{cite web}}
: CS1 maint: url-status (link) - ↑ "Krazzy Kiya Re | TV Guide". TVGuide.com (in ಇಂಗ್ಲಿಷ್). Archived from the original on 19 ಮಾರ್ಚ್ 2020. Retrieved 19 March 2020.
- ↑ "Sudha Chandran – Keynote Speaker | Speaker Bureau in India". London Speaker Bureau (in Indian English). Retrieved 19 March 2020.
- Pages using the JsonConfig extension
- CS1 maint: numeric names: authors list
- CS1 ಇಂಗ್ಲಿಷ್-language sources (en)
- CS1 maint: url-status
- CS1 Indian English-language sources (en-in)
- Pages using infoboxes with thumbnail images
- Articles with hCards
- ನಟಿಯರು
- ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ
- ಹಿಂದಿ ಚಲನಚಿತ್ರ ನಟಿಯರು