ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೃ.ಭಾ.ಜ.ನಿ.ನಿ.) ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು (ಕೃ.ಮೇ.ಯೋ.) ಕಾರ್ಯಗತಗೊಳಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು ಪೂರ್ಣ ಸ್ವಾಮ್ಯ ಹೊಂದಿರುವ ಒಂದು ನಿಗಮವಾಗಿ 1994ರ ಆಗಸ್ಟ್ 19ರಂದು ನಿಗಮಗಳ ಕಾಯಿದೆ 1956ರ ಅನುಸಾರ ಸ್ಥಾಪಿಸಲಾಗಿದೆ.

ಈ ನಿಗಮವು ಕೃ.ಮೇ.ಯೋ. ವ್ಯಾಪ್ತಿಯ ಎಲ್ಲಾ ನೀರಾವರಿ ಯೋಜನೆಗಳ ರಚನಾಕ್ರಮ, ತನಿಖೆ, ಅಂದಾಜು, ನೆರವೇರಿಕೆ, ಕಾಯಾಚರಣೆ ಮತ್ತು ನಿರ್ವಹಣೆಗೆ ಹೊಣೆಯಾಗಿರುತ್ತದೆ. ಭಾರತ ಸರ್ಕಾರದಿಂದ ಅನುಮತಿ ಪಡೆಯುವುದು ಮತ್ತು ಯು.ಕೆ.ಪಿ.ಯ ನಿರ್ವಹಣೆ ಕೂಡ ನಿಗಮದ ಹೊಣೆಯಾಗಿರುತ್ತದೆ. ಈ ಯೋಜನೆಯಿಂದಾಗಿ ಬಾಧಿತರಾದ ಜನರ ಪನರ್ವಸತಿಯ ಹೊಣೆಯು ನಿಗಮದ ಜವಾಬ್ದಾರಿಯಾಗಿದೆÉ. ನಿಗಮವು ನೀರಿನ ಮಾರಾಟ ಮಾಡುವ ಮತ್ತು ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪಟ್ಟಣಗಳು, ನಗರಸಭೆ, ಪುರಸಭೆ ಮತ್ತು ಕೈಗಾರಿಕೋದ್ಯಮಗಳಿಂದ, ವ್ಯಕ್ತಿಗಳಿಂದ, ರೈತರ ಗುಂಪುಗಳಿಂದ ನೀರಿನ ಕರ ವಸೂಲು ಮಾಡುವ ಅಧಿಕಾರ ಹೊಂದಿರುತ್ತದೆ.

ಕರ್ನಾಟಕದ ಹಲವು ಪ್ರಧೇಶಗಳು ಮಳೆಯ ಕೊರತೆ ಲಕ್ಷಣವುಳ್ಳ ಪಶ್ಚಿಮ ಘಟ್ಟಗಳ ಬರ ಪೀಡಿತ ನೆರಳಿನಲ್ಲಿದೆ. ಈಶಾನ್ಯ ಕರ್ನಾಟಕದ ಬರ ಪೀಡಿತ ಭಾಗಗಳಾದ, ಬೆಂಗಳೂರಿನಿಂದ ಸುಮಾರು 456 ಕಿ.ಮಿ. ದೂರದಲ್ಲಿರುವ ಗುಲಬರ್ಗಾ, ಯಾದಗಿರ್, ರಾಯಚೂರು, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಯು.ಕೆ.ಪಿ. ಮತ್ತಿತರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದು ಕೃಷ್ಣಾ ಮತ್ತು ಭೀಮಾ ನದಿಗಳ ನಡುವಿದ್ದು ಒಂದು ತ್ರಿಕೋನಾಕೃತಿಯ ಪ್ರದೇಶವನ್ನು ಆವರಿಸುತ್ತದೆ. ಈ ಪ್ರದೇಶದಲ್ಲಿರುವ ಜನರು ತಮ್ಮ ಜೀವನೋಪಾಯಕ್ಕಾಗಿ ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿರುವರು. ಈ ಪ್ರದೇಶವು ಮಳೆಯ ಅಭಾವ ಹೊರತಾಗಿಯೂ, ಬಹಳ ಫಲವತ್ತಾದ ಭೂಮಿಯನ್ನು ಹೊಂದಿರುವುದು. ಈ ಪ್ರದೇಶವನ್ನು ನೀರಾವರಿ ಸೌಲಭ್ಯ ಕಲ್ಪಿಸಿರುವುದರಿಂದ ಈ ಪ್ರದೇಶದ ಆರ್ಥಿಕ ಚಿತ್ರಣವು ಬದಲಾಗುವುದು. ಇದು ನೇರವಾಗಿ ಈ ಪ್ರದೇಶದ ಅಭಿವೃದ್ಧಿಗೆ ಮತ್ತು ಪರೋಕ್ಷವಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಬಹಳಷ್ಟು ಮಟ್ಟಿಗೆ ಸಹಕಾರಿಯಾಗುವುದು.

ಸಂಕ್ಷಿಪ್ತ ಇತಿಹಾಸ ಮತ್ತು ನಿಗಮದ ಹಿನ್ನೆಲೆ

ಕೃಷ್ಣಾ ನದಿಯು ಪರ್ಯಾಯದ್ವೀಪದ ಭಾರತದಲ್ಲಿ ಅತಿ ದೊಡ್ಡ ನದಿಗಳಲ್ಲಿ ಎರಡನೆಯದು ಹಾಗೂ ಇದು ಪಶ್ಚಿಮ ಘಟ್ಟಗಳ ಮಹದೇವ ವ್ಯಾಪ್ತಿಯಲ್ಲಿ ಜನ್ಮತಾಳುತ್ತದೆ. ಇದು ಮಹಾರಾಷ್ಟ್ರದ ಮಹಾಬಲೇಶ್ವರದ ಹತ್ತಿರ ಪಶ್ಚಿಮ ಘಟ್ಟಗಳಲ್ಲಿ ಸಮುದ್ರ ಮಟ್ಟದ ಮೇಲೆ 1,336.49 ಮೀ. ಎತ್ತರದಲ್ಲಿ ಜನ್ಮ ತಾಳುತ್ತದೆ ಮತ್ತು ಬಂಗಾಳದ ಕೊಲ್ಲಿಯ ಪಾಲಾಗುವ ಮುನ್ನ ಪರ್ಯಾಯದ್ವೀಪದುದ್ದಕ್ಕೆ ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 1,392 ಕಿ.ಮಿ.ಗಳಷ್ಟು ಹರಿಯುತ್ತದೆ. ತನ್ನ 304 ಕಿ.ಮಿ.ಗೆ ಇದು ಕರ್ನಾಟಕ ರಾಜ್ಯವನ್ನು ಪ್ರವೇಶಿಸುತ್ತದೆ ಹಾಗೂ 480 ಕಿ.ಮಿ.ಗಳಷ್ಟು ರಾಜ್ಯದ ಮೂಲಕ ಹಾದುಹೋಗಿ, ಕೊನೆಗೆ ಆಂಧ್ರ ಪ್ರದೇಶದ ಬಪಟ್ಲಾ ಎಂಬ ಸ್ಥಳದ ಹತ್ತಿರ ಬಂಗಾಳದ ಕೊಲ್ಲಿಗೆ ಧುಮುಕುತ್ತದೆ. ಈ ನದಿಯು ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹರಿಯುವ ಅಂತರರಾಜ್ಯ ನದಿಯಾಗಿರುತ್ತದೆ. ನದಿಯ ಜಲಾನಯನ ಪ್ರದೇಶವು 2.57 ಲಕ್ಷ ಚದರ ಕಿ.ಮಿ ಆಗಿದ್ದು, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಅನುಕ್ರಮವಾಗಿ 68,800 ಚದರ ಕಿ.ಮಿ (26.8%), 1,12,600 ಚದರ ಕಿ.ಮಿ (43.8%) ಮತ್ತು 75,600 ಚದರ ಕಿ.ಮಿ (29.4%) ಪ್ರಮಾಣದಲ್ಲಿರುತ್ತದೆ. ಮೂಲತ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಹಿಂದಿನ ಹೈದರಾಬಾದ್ ರಾಜ್ಯವು ಕೆಳದಂಡೆ ಕೃಷ್ಣಾ ಯೋಜನೆಯೊಡನೆ (ಈಗ ನಾಗಾರ್ಜುನಸಾಗರ ಯೋಜನೆ ಎಂದು ಕರೆಯಲ್ಪಡುತ್ತದೆ) ಪ್ರಾರಂಭಿಸಲಾಯಿತು. ಆರಂಭದಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಆಗಿರಲಿಲ್ಲ ಏಕೆಂದರೆ ಮುಳುಗುವಿಕೆಯು ಬಹುಮಟ್ಟಿಗೆ ಬಿಜಾಪುರ ಜಿಲ್ಲೆಯಲ್ಲಿತ್ತು, ಆ ಸಮಯದಲ್ಲಿ ಬಿಜಾಪುರವು ಮೈಸೂರು ರಾಜ್ಯದ (ಕರ್ನಾಟಕ) ಭಾಗವಾಗಿರಲಿಲ್ಲ. ರಾಜ್ಯಗಳ ಪುನರ್ಸಂಘಟನೆಯ ನಂತರ ಯೋಜನೆಯ ವ್ಯಾಪ್ತಿ ಬದಲಾವಣೆ ಮಾಡಿ ಎರಡು ಸಂಗ್ರಹಣಾ ಜಲಾಶಯಗಳು ಸೇರಿಸಲಾಯಿತು. 1973ಯಲ್ಲಿ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ (ಕೃಜವಿನ್ಯಾ) ಕೃಷ್ಣಾ ನದಿ ನೀರನ್ನು ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹಂಚುವ ಬಗ್ಗೆ ತೀರ್ಪು ಪ್ರಕಟಿಸಿತ್ತು. ಕೃಜವಿನ್ಯಾ-1, ಡಿಸೆಂಬರ್ 24, 1973ರ ತನ್ನ ಅಂತಿಮ ತೀರ್ಪಿನಲ್ಲಿ ಕೃಷ್ಣಾ ನೀರಿನ 2060 ಟಿಎಂಸಿಯ 75% ಹರಿಯುವಿಕೆಗಳನ್ನು ಮೂರು ನದಿತೀರದ ರಾಜ್ಯಗಳಿಗೆ ಹಂಚಲಾಗಿದೆ ಹಾಗೂ ಕರ್ನಾಟಕ ರಾಜ್ಯದ ಪಾಲು ಒಟ್ಟಾರೆ 734 ಸಾವಿರ ದಶಲಕ್ಷ ಘನ ಅಡಿ (ಖಿಒಅ) ಯಷ್ಟು ಆಗುತ್ತದೆ. ದಿನಾಂಕ ಮೇ 27, 1976ರ ನ್ಯಾಯಮಂಡಳಿಯ ಮುಂದಿನ ವರದಿಯು, ಕಾಯ್ದೆಯ ಪರಿಚ್ಛೇದ 5(3)ರ ಅಡಿಯಲ್ಲಿ ವಿವಿಧ ರಾಜ್ಯಗಳು ಮಾಡಿದ ಉಲ್ಲೇಖಗಳ ಆಧಾರದ ಮೇಲೆ ಅಂತಿಮ ಪರಿಪೂರ್ಣ ಆದೇಶವು ಕೂಡ ಹೊಂದಿತ್ತು. ಕೇಂದ್ರ ಸರಕಾರವು ಮೇಲ್ಕಂಡ ಆದೇಶವನ್ನು ನ್ಯಾಯಮಂಡಳಿಯ ಆದೇಶವೆಂದು ವ್ಯಾಖ್ಯಾನಿಸಿತು ಮತ್ತು ಅಂತೆಯೇ ಅದನ್ನು ಎಕ್ಸ್‍ಸ್ಟಾರ್ಡಿನರಿ ಗಜೆಟ್ ದಿನಾಂಕ ಮೇ 31, 1976ರಲ್ಲಿ ಪ್ರಕಟಗೊಳಿಸಿತು ಹಾಗೂ ಇಂಥ ಪ್ರಕಟಣೆಯ ಮೇರೆಗೆ ಈ ಅಂತಿಮ ತೀರ್ಪು ಶಾಸನಬದ್ಧವಾಗಿ ಅಂತಿಮವಾಗಿದೆ ಮತ್ತು ವಿವಾದದ ಸಂದರ್ಭದಲ್ಲಿ ಇರುವ ಎಲ್ಲಾ ವ್ಯಕ್ತಿಗಳ ಮೇಲೆ ಬದ್ಧವಾಗಿರುತ್ತದೆ. ಈ ತೀರ್ಪಿನ ಅನುಷ್ಠಾನಕ್ಕಾಗಿ, ಕರ್ನಾಟಕ ಸರಕಾರವು ಹಲವು ಯೋಜನೆಗಳನ್ನೊಳಗೊಂಡ ಒಂದು ಮಾಸ್ಟರ್ ಪ್ಲಾನ್ ರೂಪಿಸಿತು. ಕೃಷ್ಣಾ ಮೇಲ್ದಂಡೆ ಯೋಜನೆಯು ಇವುಗಳಲ್ಲಿ ಒಂದು, ಇದರಲ್ಲಿ 173 ಟಿಎಂಸಿ ನೀರಿನ ಬಳಕೆಯನ್ನು ಪ್ರಸ್ತಾಪಿಸಲಾಯಿತು. ಕನಿಷ್ಠ ಸಮಯದಲ್ಲಿ ಗರಿಷ್ಠ ಲಾಭ ಪಡೆಯುವ ಸಲುವಾಗಿ, 119 ಟಿಎಂಸಿ ನೀರನ್ನು ಹಂತ 1ರಲ್ಲಿ ಮತ್ತು 54 ಟಿಎಂಸಿ ಹಂತ 2ರಲ್ಲಿ ಬಳಸಲು ಈ ಯೋಜನೆಯನ್ನು ಹಲವು ಹಂತಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ.

ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಕೃಷ್ಣಾ ನೀರು ಹಂಚಿಕೆ ವಿಧಾನವನ್ನು 30-12-2010ರಂದು ಆದೇಶ ಪ್ರಕಟಿಸಿತ್ತು. ಹೆಚ್ಚುವರಿ ಹರಿವುಗಳಿಗಾಗಿ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಮಾಡಿದ ನೀರಿನ 65% ಹಂಚಿಕೆಯು ಈ ಕೆಳಗಿನಂತಿದೆ:

1 ಮಹಾರಾಷ್ಟ್ರ - 81 ಟಿಎಮ್‍ಸಿ 2 ಕರ್ನಾಟಕ -177 ಟಿಎಮ್‍ಸಿ 3 ಆಂಧ್ರ ಪ್ರದೇಶ -190 ಟಿಎಮ್‍ಸಿ

ಕೃಜವಿನ್ಯಾ-2, ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ 177 ಟಿಎಮ್‍ಸಿಯಲ್ಲಿ, 130.90 ಟಿಎಮ್‍ಸಿಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಹಂಚಿಕೆ ಮಾಡಿಲಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ

ಕೃಷ್ಣಾ ಮೇಲ್ದಂಡೆ ಯೋಜನೆಯು ಕೃಷ್ಣಾ ನದಿಯ ಉದ್ದಗಲಕ್ಕೆ ಎರಡು ಆಣೆಕಟ್ಟುಗಳು ಮತ್ತು ಕಾಲುವೆಗಳ ಜಾಲ ಹೊಂದಿರುತ್ತದೆ. ಘಟಪ್ರಭಾ ನದಿ ಮತ್ತು ಕೃಷ್ಣಾ ನದಿಗಳ ಸಂಗಮದಿಂದ ಕೆಲವು ಕಿ.ಮಿ ಕೆಳದಿಕ್ಕಿನಲ್ಲಿ ಅಲಮಟ್ಟಿ ಜಲಾಶಯವು ಪ್ರಮುಖ ಶೇಖರಣೆ ಜಲಾಶಯವಾಗಿದೆ. ಮಲಪ್ರಭಾ ನದಿ ಮತ್ತು ಕೃಷ್ಣಾ ನದಿಗಳ ಸಂಗಮದಿಂದ ಕೆಲವು ಕಿ.ಮಿ ಕೆಳದಿಕ್ಕಿನಲ್ಲಿ ನಾರಾಯಣಪುರದಲ್ಲಿ ಸ್ಥಿತವಿರುವ ಕೆಳಭಾಗದ ಅಣೆಕಟ್ಟು, ನಾರಾಯಣಪುರ ಆಣೆಕಟ್ಟು, ದಿಕ್ಪರಿವರ್ತನಾ ಆಣೆಕಟ್ಟಾಗಿ ಕಾರ್ಯನಿರ್ವಹಿಸುವುದು. ಈ ಯೋಜನೆಯನ್ನು ವಿವಿಧ ಹಂತಗಳು ಮತ್ತು ಘಟಕಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಯೋಜನೆಯ ಹಂತ-1, 119 ಟಿಎಂಸಿ ನೀರನ್ನು ಉಪಯೋಗಿಸಿ 4,25,000 ಹೆಕ್ಟೇರುಗಳ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತಿಸಲು ಆಲೋಚಿಸಿದೆ ಹಾಗೂ ಹಂತ-2ರಲ್ಲಿ, 54 ಟಿಎಂಸಿ ನೀರನ್ನು ಬಳಸಿ 1,97,120 ಹೆಕ್ಟೇರುಗಳ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತಿಸಲು ಯೋಜಿಸಲಾಗಿದೆ. ಉತ್ತರ ಕರ್ನಾಟಕದ ಬರ ಪೀಡಿತ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಗಳಾದ ಗುಲಬರ್ಗಾ, ಯಾದಗಿರ್, ರಾಯಚೂರು, ಬಿಜಾಪುರ ಮತ್ತು ಬಾಗಲಕೋಟೆ, ಈ ಸ್ಥಳಗಳಿಗೆ ಕೃಮೇಯೋ ಹಂತ 1 ಮತ್ತು 2ರ ಕೆಳಗೆ ಒಟ್ಟು 173 ಟಿಎಂಸಿ ನೀರಿನ ಬಳಕೆಯೊಂದಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ, ಕೃಮೇಯೋ ಹಂತ-1 ಮತ್ತು 2ರ ಯೋಜನೆ ಬಹಳಷ್ಟು ಪೂರ್ಣಗೊಂಡಿದ್ದು 6.08 ಲಕ್ಷ ಹೆಕ್ಟೇರುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.

ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಕೃಷ್ಣಾ ನೀರು ಹಂಚಿಕೆ ವಿಧಾನವನ್ನು 30-12-2010ರಂದು ಆದೇಶ ಪ್ರಕಟಿಸಿತ್ತು. ಹೆಚ್ಚುವರಿ ಹರಿವುಗಳಿಗಾಗಿ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಮಾಡಿದ ನೀರಿನ 65% ಹಂಚಿಕೆಯು ಈ ಕೆಳಗಿನಂತಿದೆ:

1 ಮಹಾರಾಷ್ಟ್ರ - 81 ಟಿಎಮ್‍ಸಿ 2 ಕರ್ನಾಟಕ -177 ಟಿಎಮ್‍ಸಿ 3 ಆಂಧ್ರ ಪ್ರದೇಶ -190 ಟಿಎಮ್‍ಸಿ

ಕೃಜವಿನ್ಯಾ-2, ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ 177 ಟಿಎಮ್‍ಸಿಯಲ್ಲಿ, 130.90 ಟಿಎಮ್‍ಸಿಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಹಂಚಿಕೆ ಮಾಡಿಲಾಗಿದೆ.