ಹ್ಯುಮನ್ ಕಂಪ್ಯೂಟರ್ ಸಿದ್ದು ಲವಟೆ
- ಜನನ : ಫೆಬ್ರುವರಿ ೧೦,೧೯೮೫
- ಸ್ಥ ಳ : ಕಕಮರಿ ಅಥಣಿ ತಾಲೂಕ ಬಿಜಾಪುರ ಜಿಲ್ಲೆ
- ವಿದ್ಯಾರ್ಥಿ: ಎಲ್. ಎಲ್. ಬಿ. ೫ನೇ ವರ್ಷ
- ಎಮ್. ಎಸ್. ರಾಮಯ್ಯ ಕಾಲೇಜ ಬೆಂಗಳೂರು
ಹುಟ್ಟು , ಬದುಕು
[ಬದಲಾಯಿಸಿ]ರೈತ ದಂಪತಿಗಳಾದ ಶ್ರೀ ಶಂಕರ ಮತ್ತು ಸೀತಾರಿಗೆ ಎರಡನೆಯ ಮಗನಾಗಿ ಹುಟ್ಟಿದರು. ದೃಷ್ಟಿಹೀನನಾಗಿದ್ದು ತಡವಾಗಿ ಗೊತ್ತಾಯ್ತು. ನೆರೆ ಹೊರೆಯವರು ಸಿದ್ದುನನ್ನು ಹುಬ್ಬಳ್ಳಿಯ ಅಂಧರ ಶಾಲೆಗೆ ಸೇರಿಸಿದರು . ಪ್ರಾಥಮಿಕ ಶಿಕ್ಷಣ ಅಲ್ಲಿಯೆ ಪ್ರಾರಂಭವಾಯ್ತು. ಇವರ ಜತೆ ಯಲ್ಲಿರುವ ಒಂದನೇ ವರ್ಗದ ಒಬ್ಬ ವಿದ್ಯಾರ್ಥಿ ನೂರರವರೆಗೂ ಮಗ್ಗಿ ಹೇಳುತ್ತಿದ್ದ . ಇಷ್ಟೆ ಸಾಕು ಬೆಳೆವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಸಿದ್ದುವಿನ ಕಲಿಯುವ ಹಂಬಲ ಹೆಮ್ಮರವಾಗಿ ಬೆಳೆಯಲಾರಂಭಿಸಿತು. ಸಿದ್ದು ಎರಡನೆ ವರ್ಗ ಕ್ಕೆ ಬಂದಾಗ ೫೬ (ಐವತ್ತಾರು ) ಲಕ್ಷ ದ ವರೆಗೆ ಮಗ್ಗಿ ಹೇಳಬಲ್ಲವನಾಗಿದ್ದ . ವ್ಯಕ್ತಿಗತವಾಗಿ ಮತ್ತು ಶಾಲೆಗೆ ಪ್ರಶಸ್ತಿ ಮತ್ತು ಪ್ರಶಂಸಾ ಪತ್ರಗಳ ಸುರಿಮಳೆ ಪ್ರಾರಂಭವಾದವು. ಆಗಲೆ ಸಿದ್ದುವಿಗೆ ಹ್ಯುಮನ್ ಕ್ಯಾಲಕ್ಯುಲೆಟರ್ ಎಂಬ ಬಿರುದು ದೊರೆಯಿತು. ಪ್ರಾಥಮಿಕ ಶಿಕ್ಷಣವನ್ನು ಹುಬ್ಬಳ್ಳಿ ಯಲ್ಲಿ ಮುಗಿಸಿದ ತರು ವಾಯ ಮಾಧ್ಯಮಿಕ ಶಿಕ್ಷಣ ವನ್ನು ಬೆಳಗಾವಿಯಲ್ಲಿ ಪ್ರಾರಂಭಿಸಿದ. ಅಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಪ್ರತಿಶತ ಎಂಭತ್ತು ಅಂಕಗಳನ್ನು ಗಳಿಸಿ ತೇರ್ಗಡೆ ಯಾದುದಲ್ಲದೆ ಆ ಶಾಲೆಗೆ ಕೀರ್ತಿ ತಂದ ಆಗ ಸಿದ್ದು ೯೯ ಕೋಟಿ ಮಗ್ಗಿ ಹೇಳಬಲ್ಲವನಾಗಿದ್ದ.
ಹ್ಯುಮನ್ ಕಂಪ್ಯೂಟರ್
[ಬದಲಾಯಿಸಿ]ಮಾಧ್ಯಮಗಳು ಸಿದ್ದು ನನ್ನು ಗುರುತಿಸಲಾರಂಭಿಸಿದರು. ಪತ್ರಿಕೆ ,ಆಕಾಶವಾಣಿ , ದೂರದರ್ಶನ ವಾಹಿನಿಗಳು , ಅವನ ಜೀವನದ ಕಥೆ,ಸಂದರ್ಶನ ಪ್ರಸಾರ ಮಾಡಿದವು. ಬೇರೆಯವರು ಪೆನ್ನು ಪೇಪರ ಬಳಸಿ ಉತ್ತರವನ್ನು ಹೇಳಬಲ್ಲರು . ಆದರೆ ಸಿದ್ದು ಪೆನ್ನು ಪೇಪರ ಬಳಸದೆ ವೇಗವಾಗಿ ಉತ್ತರವ್ನ್ನು ಹೇಳಬಲ್ಲರು.ಆದ್ದರಿಂದ ಸಿದ್ದು ಹ್ಯುಮನ್ ಕಂಪ್ಯೂಟರ್ ಎಂದು ಬದಲಾದ. ಸಿದ್ದುವಿನ ಜಾಲ ತಾಣ www.humancomputersiddu.com ನಲ್ಲಿ ಅವನ ಕುರಿತು ಬರೆದ ಪತ್ರಿಕಾ ತುಣುಕು ಗಳನ್ನು ಗಮನಿಸಬಹುದಾಗಿದೆ. ದೂರದರ್ಶನ ವಾಹಿನಿಗಳು ಪ್ರಸಾರ ಮಾಡಿದ ಕಾರ್ಯಕ್ರಮಗಳು ಯು ಟ್ಯೂಬನಲ್ಲೂ ನೋಡಬಹುದು. the Hindu, times of india , you tube (nanna kathe, blind genius ) prajavani,vijaya karnataka, etc
ಪ್ರಪ್ರಥಮ ಅಂಧ ನಿರೂಪಕ
[ಬದಲಾಯಿಸಿ]ಸಾಮಾನ್ಯ ವಾಗಿ ಅಂಧರು ನಿರೂಪಕರಾಗಿ ಕೆಲಸ ಮಾಡಿಲ್ಲ.ಸ್ಥಳಿಯ ಕೆಬಲ್ ವಾಹಿನಿ ಯಲ್ಲಿ ಸಿದ್ದು ಕ್ವಿಜ್ ಕಾರ್ಯಕ್ರಮ ನಡೆಸಿ ಕೊಡುವದರಿಂದ ಪ್ರಪ್ರಥಮ ಅಂಧ ನಿರೂಪಕ ವೆನ್ನಬಹುದು[ಸೂಕ್ತ ಉಲ್ಲೇಖನ ಬೇಕು]. ಸಿದ್ದು ಕ್ವಿಜ್ ಕಾರ್ಯಕ್ರಮ ಅತ್ಯಂತ ಚೆನ್ನಾಗಿ ನಿರೂಪಿಸುತ್ತಾರೆ. ಎಷ್ಟೋ ಜನರು ಉತ್ತರ ಹೆಳಲು ಕಾತುರದಿಂದ ಕಾಯುತ್ತಿರುವದು ಗಮನಾರ್ಹವಾಗಿದೆ.
ಅಗಾಧ ನೆನಪಿನ ಶಕ್ತಿ
[ಬದಲಾಯಿಸಿ]ಸಿದ್ದು ಅವರಿಗೆ ಅಪರಿಮಿತ ಅದ್ಭ್ಹುತ ನೆನಪಿನ ಶಕ್ತಿ ಇದೆ ಅಂದರೆ ನಂಬಲಸಾಧ್ಯವಲ್ಲವೆ. ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚು ಮೊಬೈಲ ಮತ್ತು ದೂರವಾಣಿ ಸಂಖ್ಯಗಳು ಅವರ ನೆನಪಿನ ಭಂಡಾರ ದಲ್ಲಿವೆ.ಮುಂದಿನ ೨೫ ಲಕ್ಷ ವರ್ಷಗಳ ದಿನಾಂಕ ಕೊಟ್ಟರೆ ಯಾವ ದಿನ ಬರುತ್ತದೆ ಎಂದು ಹೇಳಬಲ್ಲರು.ಇದಲ್ಲದೆ ಸಂಖ್ಯಾ ಶಾಸ್ತ್ರ , ಜ್ಯೋತಿಷ್ಯ ಶಾಸ್ತ್ರ ಹೇಳಬಲ್ಲರು.ಆತ್ಮ ವಿಶ್ವಾಸ ಗಳಿಸಲು ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ಜೀವನದಲ್ಲಿ ನೊಂದವರು,ಜುಗುಪ್ಸೆ ಹೊಂದಿದವರಿಗೆ ಮತ್ತು ವಿದ್ಯಾರ್ಥಿ ಗಳಿಗೆ ಅನುಕೂಲವಾಗಲೆಂದು ಆಧುನಿಕ ಆರ್ಯಭಟ ಸಿ ಡಿ ಯನ್ನು ಬಿಡುಗಡೆ ಮಾಡಿದ್ದಾರೆ.
ಗುರಿ
[ಬದಲಾಯಿಸಿ]ಸದ್ಯ ಬೆಂಗಳೂರಿನ ಎಮ್ ಎಸ್ ರಾಮಯ್ಯ ಕಾಲೇಜಿನಲ್ಲಿ ಐದನೆ ವರ್ಷದ ಎಲ್ ಎಲ್ ಬಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರೊಬ್ಬ ಐ ಎ ಎಸ್ ಅದಿಕಾರಿ ಯಾಗಿ ದೀನರು,ದಲಿತರು ಹಿಂದುಳಿದವರು ಅವರ ಶ್ರೇಯೊಭಿವ್ರಧ್ಧಿಗಾಗಿ ನಿಷ್ಟಾವಂತ ಅಢಿಕಾರಿಯಾಗಿ ಸೇವೆ ಸಲ್ಲಿಸಬೇಕೆನ್ನುವ ಜೀವನದ ಮುಖ್ಯ ಗುರಿ ಯಾಗಿದೆ..
ಪ್ರಶಸ್ತಿ ಮತ್ತು ಪುರಸ್ಕಾರ
[ಬದಲಾಯಿಸಿ]- ಆಧುನಿಕ ಆರ್ಯಭಟ = ಟಿ ವಿ 9 ಕನ್ನಡ ೨೦೦೮
- ನಡೆದಾಡುವ ಕಂಪ್ಯೂಟರ = ಸುವರ್ಣ್ ನ್ಯೂಸ್ ಕನ್ನಡ ೨೦೧೦
- ಬ್ಯುಟಿಫುಲ್ ಮೈಂಡ = ಟಿ ವಿ 9 ತೆಲಗು ೨೦೧೧
- ಹ್ಯುಮನ್ ಸುಪರ ಕಂಪೂಟರ= ಸಾಕ್ಷಿ ಟಿ ವಿ ತೆಲಗು
- ಕೆಂಪೇಗೌಡ ಪ್ರಶಸ್ತಿ = ೨೦೧೧
- ಬಸವ ಜ್ಯೋತಿ ಪ್ರಶಸ್ತಿ = ೨೦೧೧
- ಡಾ . ಬತ್ರಾಸ ೬ನೇ ಪೊಸಿಟಿವ ಹೆಲ್ಥ ಪ್ರಶಸ್ತಿ = ೨೦೧೧
ಆಧಾರ
[ಬದಲಾಯಿಸಿ]- ಪ್ರಜಾವಾಣಿ - "ಬಹುಮುಖ ಪ್ರತಿಭೆಯ ಅಂಧ ಯುವಕ ಸಿದ್ದು " http://humancomputersiddu.com/uploads/add-26.JPG
- ಸಂಯುಕ್ತ ಕರ್ನಾಟಕ - "ಅಂಧ ವಿದ್ಯಾರ್ಥಿಗೆ ಧ್ಯೇಯ ಸಾಧನೆ ಸಂಕಲ್ಪ "
- ವಿಜಯ ಕರ್ನಾಟಕ - "ಅಂದುಕೊಂಡಿದ್ದರ ಸಾಧನೆಗೆ ಅಂಧತ್ವ ಅಡ್ಡಿಯಲ್ಲ "
- ಮಲ್ಲಿಗೆ - " ಒಳಗಿನ ಕಣ್ಣು ತೆರೆದಾಗ ಹೊರ ಹೊಮ್ಮಿದ ಪ್ರತಿಭೆ " 1) http://humancomputersiddu.com/uploads/olaginaKannanuTheredaga.jpg 2) http://humancomputersiddu.com/uploads/News%20Paper_article.jpg
- ಉದಯ ವಾಣಿ - "ಗಣೀತದಲ್ಲಿ ಅಸಾಮಾನ್ಯ ಪರಿಣಿತ ಅಂಧ ಯುವಕ "
- ಟಿ,ವ್ಹಿ ೯ ಕನ್ನಡ - " ನನ್ನ ಕಥೆ "
- ಕೇಬಲ್ ವಾರ್ತೆ - "ಎಲ್ಲರಿಗೂ ಸವಾಲಾಗಬಲ್ಲ ಸಿದ್ದು "
* ಲಂಕೇಶ ಪತ್ರಿಕೆ - ಅಂಧ ನೆಂಬ ಸಹಾನುಭೂತಿ ನನಗೆ ಬೇಕಿಲ್ಲ http://humancomputersiddu.com/uploads/add-12.JPG * ಈ ಸಂಜೆ - ಮಾನಿಟರ್ ರಹಿತ ಕಂಪ್ಯೂಟರ್ http://humancomputersiddu.com/uploads/add-13.JPG
- Bangalore Mirror - "The Man with big vision " http://humancomputersiddu.com/uploads/Bangalore%20Mirror.jpg
- The Hindu - " I don't want pity,but respect Says this math wiz " http://humancomputersiddu.com/uploads/Hindu%20Newspaper.jpg
- The New Indian Express - "Extra Ordinary Talent "
- Deccan Herald - "Blind but has civil services in his sights " http://humancomputersiddu.com/uploads/add-11.JPG
- Indian Express - "Karnataka's Human Computer " http://humancomputersiddu.com/uploads/add-8.JPG
http://humancomputersiddu.com/uploads/add-10.JPG
ಹೊರಗಿನ ಕೊಂಡಿಗಳು
[ಬದಲಾಯಿಸಿ]- http://humancomputersiddu.com/ Archived 2013-06-26 ವೇಬ್ಯಾಕ್ ಮೆಷಿನ್ ನಲ್ಲಿ.
- https://www.youtube.com/watch?v=7eJ2lZey-S4
- https://www.youtube.com/watch?v=h8lbanWXlm8
- http://humancomputersiddu.com/uploads/Aadhuika%20Aaryabhata%20-%20CD%20Release.pdf
- http://humancomputersiddu.com/uploads/add-4.JPG
- http://humancomputersiddu.com/uploads/add-3.JPG
- http://humancomputersiddu.com/uploads/add-4.JPG
- http://humancomputersiddu.com/uploads/add-6.JPG
- http://humancomputersiddu.com/uploads/add-10.JPG