ಬಿಳ್ಳೂರ ಗುರುಬಸವ ಮಹಾಸ್ವಾಮೀಜಿ ಅಭಿಯಾಂತ್ರಿಕ ಮಹಾವಿದ್ಯಾಲಯ, ಮುಧೋಳ, ಬಾಗಲಕೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಳ್ಳೂರ ಗುರುಬಸವ ಮಹಾಸ್ವಾಮೀಜಿ ಅಭಿಯಾಂತ್ರಿಕ ಮಹಾವಿದ್ಯಾಲಯ, ಮುಧೋಳ, ಬಾಗಲಕೋಟ
ಬಿಜಿಎಮ್ಐಟಿ(BGMIT)
ಸ್ಥಾಪನೆ2013
ಸ್ಥಳಮುಧೋಳ, ಬಾಗಲಕೋಟ, ಕರ್ನಾಟಕ
ವಿದ್ಯಾರ್ಥಿಗಳ ಸಂಖ್ಯೆ೨೪೦
ಪದವಿ ಶಿಕ್ಷಣ೧೦೦೦

ಬಿಳ್ಳೂರ ಗುರುಬಸವ ಮಹಾಸ್ವಾಮೀಜಿ ಅಭಿಯಾಂತ್ರಿಕ ಮಹಾವಿದ್ಯಾಲಯವು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಮುಧೋಳ 2013ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ. ಪ್ರಸ್ತುತ ೪ ಪದವಿ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.

ಚರಿತ್ರೆ[ಬದಲಾಯಿಸಿ]

ಬಿಳ್ಳೂರ ಗುರುಬಸವ ಮಹಾಸ್ವಾಮೀಜಿ ಅಭಿಯಾಂತ್ರಿಕ ಮಹಾವಿದ್ಯಾಲಯವು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ 2013ರಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಕೇಂದ್ರ ಕಛೇರಿ ಹಳೆ ಬಾಗಲಕೋಟ ನಗರದಲ್ಲಿದೆ.

ವಿಭಾಗಗಳು[ಬದಲಾಯಿಸಿ]

ಪದವಿ ವಿಭಾಗಗಳು

  1. ಸಿವಿಲ್ ಎಂಜಿನಿಯರಿಂಗ್
  2. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  3. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  4. ಯಾಂತ್ರಿಕ ಎಂಜಿನಿಯರಿಂಗ್

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ , ಬಾಗಲಕೋಟ[ಬದಲಾಯಿಸಿ]

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು ೧೯೦೬ದಲ್ಲಿ ಶ್ರೀ ಬಿಳ್ಳೂರು ಗುರುಬಸವ ಮಹಾಸ್ವಾಮಿಜಿಗಳಿಂದ ಸ್ಥಾಪಿಸಲ್ಪಟ್ಟಿದೆ. ಸಂಘವು ೨೦೦೬ರಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಿತು.

ಆಡಳಿತ[ಬದಲಾಯಿಸಿ]

ಪ್ರಸ್ತುತ ಶ್ರೀ ವೀರಣ್ಣ ಚರಂತಿಮಠರು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದಾರೆ.

ಆವರಣ[ಬದಲಾಯಿಸಿ]

ಮಹಾವಿದ್ಯಾಲಯವು ೫೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚೆಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ[ಬದಲಾಯಿಸಿ]

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ[ಬದಲಾಯಿಸಿ]

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿವೇತನ[ಬದಲಾಯಿಸಿ]

  • ಅರ್ಹತೆ ವಿದ್ಯಾರ್ಥಿವೇತನ
  • ರಕ್ಷಣಾ ವಿದ್ಯಾರ್ಥಿವೇತನ
  • ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ
  • ಯೋಜನೆ ವಿದ್ಯಾರ್ಥಿವೇತನ
  • ಆಯಾ ರಾಜ್ಯ ಸರ್ಕಾರದ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
  • ಮೆಟ್ರಿಕ್ ವಿದ್ಯಾರ್ಥಿ ವಿದ್ಯಾರ್ಥಿವೇತನ
  • ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿವೇತನ

ವಿದ್ಯಾರ್ಥಿನಿಲಯಗಳು[ಬದಲಾಯಿಸಿ]

  • ವಿದ್ಯಾರ್ಥಿ ನಿಲಯ
  • ವಿದ್ಯಾರ್ಥಿನಿಯರ ನಿಲಯ

ಜೀವನ ಮಾರ್ಗದರ್ಶನ ಕೇಂದ್ರ[ಬದಲಾಯಿಸಿ]

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಬಿಳ್ಳೂರ ಗುರುಬಸವ ಮಹಾಸ್ವಾಮೀಜಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಅಧಿಕೃತ ಅಂತರ್ಜಾಲ ತಾಣ