ಬಿ.ವಿಠ್ಠಲಾಚಾರ್ಯ
ಬಿ.ವಿಠ್ಠಲಾಚಾರ್ಯ | |
---|---|
Born | |
Died | May 28, 1999 | (aged 79)
Other names | ಜಾನಪದ ಬ್ರಹ್ಮ |
Occupation(s) | ಸಿನಿಮಾ ನಿರ್ದೇಶಕ, ಸಿನೆಮಾ ನಿರ್ಮಾಪಕ |
Years active | ೧೯೪೪ ರಿಂದ ೧೯೯೩ |
Spouse | ಶ್ರೀಮತಿ ಜಯಲಕ್ಷ್ಮೀ ಆಚಾರ್ |
ಬಿ.ವಿಠ್ಠಲಾಚಾರ್ಯ (ಜನನ: ೨೮ ಜನವರಿ ೧೯೨೦ - ಮರಣ: ೨೮ ಮೇ ೧೯೯೯) ತೆಲುಗು ಮತ್ತು ಕನ್ನಡ ಚಲನಚಿತ್ರಗಳ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು.
ವಿಠ್ಠಲ ಆಚಾರ್ಯ ಅವರು ಜನವರಿ 20, 1920 ರಂದು ಅಂದಿನ ಉಡುಪಿ ತಾಲೂಕಿನ, ಉದ್ಯಾವರದಲ್ಲಿ ಮಧ್ಯಮ ವರ್ಗ ಮಾಧ್ವ ಬ್ರಾಹ್ಮಣ ದಂಪತಿಗಳಿಗೆ ಏಳನೆಯ ಮಗುವಾಗಿ ಹುಟ್ಟಿದರು. ಅವರಿಗೆ ಬಾಲ್ಯದಿಂದಲೂ ನಾಟಕ, ಬಯಲಾಟ ಮತ್ತು ಯಕ್ಷಗಾನಗಳಲ್ಲಿ ಆಸಕ್ತಿ. ಅವರ ತಂದೆ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಒಬ್ಬ ಹೆಸರಾಂತ ಆಯುರ್ವೇದ ವೈದ್ಯರಾಗಿದ್ದರು. ಅವರು ಮೂರನೇ ವರ್ಗದವರೆಗೆ ಮಾತ್ರ ಶಾಲೆ ಕಲಿತರು. ಅವರು ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಅದೃಷ್ಟವನ್ನು ಅರಸಿ ಮನೆಯನ್ನು ಬಿಟ್ಟು ಹೋದರು. ಅರಸೀಕೆರೆ ತಲುಪಿದ ಅವರು ನಾನಾ ಕೆಲಸಗಳನ್ನು ಮಾಡಿದರು ಮತ್ತು ಅಂತಿಮವಾಗಿ ತನ್ನ ಸೋದರಸಂಬಂಧಿಯಿಂದ ಉಡುಪಿ ಹೋಟೆಲೊಂದನ್ನು ಖರೀದಿಸಿ ಯಶಸ್ವಿಯಾಗಿ ಅದನ್ನು ನಡೆಸಿದರು. ಅವರು ಕೆಲವು ಸ್ನೇಹಿತರ ಜೊತೆಗೆ ಬ್ರಿಟಿಷ್ ಸರ್ಕಾರದ ವಿರುದ್ಧ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿದರು. ಅವರನ್ನು ಬಂಧಿಸಲಾಯಿತು. ಜೈಲ್ ನಿಂದ ಬಿಡುಗಡೆ ನಂತರ, ತನ್ನ ಕಿರಿಯ ಸೋದರನಿಗೆ ತನ್ನ ಹೋಟೆಲ್ ಉದ್ಯಮ ಹಸ್ತಾಂತರಿಸಿದರು. ತನ್ನ ಸ್ನೇಹಿತ ಡಿ ಶಂಕರ್ ಸಿಂಗ್ ಮತ್ತು ಇತರರ ಜೊತೆಗೂಡಿ ಹಾಸನ ಜಿಲ್ಲೆಯಲ್ಲಿ ಒಂದು ಟೂರಿಂಗ್ ಟಾಕೀಸ್ ಅನ್ನು ಸ್ಥಾಪಿಸಿದರು. ಅವರು ಒಂದು ಟೂರಿಂಗ್ ಟಾಕೀಸ್ ಅನ್ನು ನಾಲ್ಕು ಆಗಿ ಬೆಳೆಸಿದರು. ಅವರು ಪ್ರದರ್ಶಿಸಲಾಗುತ್ತಿದ್ದ ಪ್ರತಿಯೊಂದು ಚಲನಚಿತ್ರ ನೋಡಿ ಮತ್ತು ಚಿತ್ರಗಳ ತಯಾರಿಕೆಯ ತಂತ್ರವನ್ನು ಕಲಿತುಕೊಂಡರು. ೧೯೪೪ ರಲ್ಲಿ ಕೆ ಆರ್ ಪೇಟೆಯ ರಾಮದಾಸ ಆಚಾರ್ಯರ ಮೂರನೇ ಮಗಳಾದ ಜಯಲಕ್ಷ್ಮಿಯನ್ನು ವಿವಾಹವಾದರು.
ಅದೇ ಸ್ನೇಹಿತರೊಂದಿಗೆ ಅವರು ಮೈಸೂರಿಗೆ ತೆರಳಿ ಮಹಾತ್ಮ ಪಿಕ್ಚರ್ಸ್ ಹೆಸರಿನಲ್ಲಿ ಒಂದು ಚಿತ್ರ ನಿರ್ಮಾಣ ಕಂಪನಿಯನ್ನು ಸ್ಥಾಪಿಸಿದರು. ೧೯೪೪ ರಿಂದ ೧೯೫೩ ರ ಅವಧಿಯಲ್ಲಿ ೧೮ ಕನ್ನಡ ಚಿತ್ರಗಳನ್ನು ನಿರ್ಮಿಸಿದರು. ಅವುಗಳಲ್ಲಿ ನಾಗ ಕನ್ಯಾ, ಜಗನ್ ಮೋಹಿನಿ, ಶ್ರೀನಿವಾಸ ಕಲ್ಯಾಣ ಮುಂತಾದವು ತುಂಬ ಯಶಸ್ವಿ ಯಾದವು. ಈ ಅವಧಿಯಲ್ಲಿ ಒಬ್ಬೊಬರಾಗಿ ಪಾಲುದಾರರು ಕಂಪನಿಯನ್ನು ಬಿಟ್ಟು ಒನೆಗೆ ಅದರಲ್ಲಿ ಶಂಕರಸಿಂಗ್ ಮತ್ತು ವಿಠ್ಠಲಾಚಾರ್ಯರಷ್ಟೇ ಉಳಿದರು. ಈ ಚಿತ್ರಗಳಲ್ಲಿ ಕೆಲವನ್ನು ವಿಠ್ಠಲಾಚಾರ್ಯರೂ ,ಕೆಲವನ್ನು ಶಂಕರಸಿಂಗರೂ ಇನ್ನು ಕೆಲವನ್ನು ಉಳಿದವರೂ ನಿರ್ದೇಶಿಸಿದರು.
೧೯೫೩ರಲ್ಲಿ ಕೆಲವೊಂದು ತಪ್ಪುಕಲ್ಪನೆಗಳಿಂದಾಗಿ ವಿಠ್ಠಲಾಚಾರ್ಯರೂ ಶಂಕರಸಿಂಗರಿಂದ ಬೇರೆಯಾಗಿ . ವಿಠ್ಠಲ್ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಕಂಪನಿಯನ್ನು ಮಾಡಿಕೊಂಡು ತಮ್ಮ ಮೊದಲ ಚಿತ್ರ ರಾಜ್ಯಲಕ್ಷ್ಮಿಯನ್ನು ನಿರ್ದೇಶಿಸಿ ತಯಾರಿಸಿದರು.
೧೯೫೪ ರಲ್ಲಿ, ಅವರು ಬಾರಿಗೆ ಕನ್ಯಾ ಧನ ಎಂಬ ಆ ಕಾಲಕ್ಕೆ ಕ್ರಾಂತಿಕಾರಿಯಾದ ಒಂದು ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದರು. ಅದನ್ನೇ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡಬಯಸಿ ಮದ್ರಾಸ್ ಗೆ ಹೋದರು. ತಮ್ಮ ಸಾವಿನ ತನಕ ಅಲ್ಲಿಯೇ ನೆಲೆಸಿದರು. ಇನ್ನೂ ಎರಡು ಕನ್ನಡ ಚಲನಚಿತ್ರಗಳನ್ನು ತಯಾರಿಸಿದ ಮಾಡಿದ ನಂತರ, ಅವರು ಕೇವಲ ತೆಲುಗು ಚಲನಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅವರು ಇತರ ನಿರ್ಮಾಪಕರಿಗಾಗಿ ಕೂಡ ಚಲನಚಿತ್ರಗಳನ್ನು ನಿರ್ದೇಶಿಸಿದರು.
ಅವರು ನಂತರ ಆಂಧ್ರ ಪ್ರದೇಶದ ಪ್ರಮುಖ ನಾಯಕನಟರಾದ ಎನ್ ಟಿ ರಾಮರಾವ್ ಅವರಿಗಾಗಿ ಒಟ್ಟು ೧೫ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಯಾವುದೇ ಪ್ರಶಸ್ತಿ ಪಡೆಯಲಿಲ್ಲವಾದರೂ ಅವನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡವು. ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ "ಜನಪದ ಬ್ರಹ್ಮ" ಎಂದು ಕರೆದರು.