ವಿಷಯಕ್ಕೆ ಹೋಗು

ಜೋಡಿ ಸ್ಕೇಟಿಂಗ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
1908ರ ಒಲಿಂಪಿಕ್ಸ್‌ನಲ್ಲಿ ಆರಂಭಿಕ ಜೋಡಿ ಸ್ಕೇಟಿಂಗ್‌.

ಜೋಡಿ ಸ್ಕೇಟಿಂಗ್‌ ಒಂದು ಫಿಗರ್ ಸ್ಕೇಟಿಂಗ್‌ ವಿಧಾನವಾಗಿದೆ. ಇಂಟರ್‌ನ್ಯಾಷನಲ್ ಸ್ಕೇಟಿಂಗ್ ಯೂನಿಯನ್ (ISU) ನಿಯಮಗಳು 'ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ'ನನ್ನು ಒಳಗೊಂಡಿರುವುದನ್ನು ಜೋಡಿ ತಂಡಗಳೆಂದು ಹೇಳುತ್ತವೆ. ನೆತ್ತಿಯ ಮೇಲೆ ಎತ್ತುವುದು, ಎತ್ತಿ ಸುತ್ತಿಸುವುದು, ಮಾರಣಾಂತಿಕ ಸುರುಳಿ ಸುತ್ತುವುದು ಮತ್ತು ಮೇಲಕ್ಕೆ ನೆಗೆಯುವುದು ಮೊದಲಾದ ಲಕ್ಷಣಗಳನ್ನು ಹೊಂದುವುದರೊಂದಿಗೆ ಜೋಡಿ ಸ್ಕೇಟಿಂಗ್‌ ಐಸ್ ಡ್ಯಾನ್ಸಿಂಗ್ ಮತ್ತು ಸಿಂಗಲ್ ಸ್ಕೇಟಿಂಗ್‌ನಿಂದ ಭಿನ್ನವಾಗಿದೆ. ಈ ತಂಡಗಳು ಸಾಮರಸ್ಯದೊಂದಿಗೆ ಸಿಂಗಲ್ ಸ್ಕೇಟಿಂಗ್‌ನ ಚಲನೆಗಳನ್ನೂ ನಿರ್ವಹಿಸುತ್ತವೆ. ಜೋಡಿ ಸ್ಕೇಟಿಂಗ್‌ ಕಷ್ಟಕರವಾಗಿರುತ್ತದೆ ಏಕೆಂದರೆ ಈ ಮಟ್ಟದ ಸಾಮರಸ್ಯವನ್ನು ಪಡೆಯಲು ನಿರ್ವಹಣೆಯ ಎಲ್ಲಾ ಚಲನೆಗಳಲ್ಲಿ ಒಂದೇ ರೀತಿಯ ಕೌಶಲ ಮತ್ತು ಸಮಯವು ಬೇಕಾಗುತ್ತದೆ ಮಾತ್ರವಲ್ಲದೆ ಜೊತೆಗಾರರ ನಡುವೆ ನಂಬಿಕೆ ಮತ್ತು ಅಭ್ಯಾಸ ಇರಬೇಕಾಗುತ್ತದೆ. 'ಇಬ್ಬರು ಒಬ್ಬರೇ ಆಗಿ ಸ್ಕೇಟಿಂಗ್ ಮಾಡುತ್ತಿರುವ' ಭಾವನೆಯನ್ನು ಮೂಡಿಸುವುದು ಇದರ ಗುರಿಯಾಗಿರುತ್ತದೆ. ಜೋಡಿ ಸ್ಕೇಟಿಂಗ್‌ನಲ್ಲಿ ಗಂಭೀರ ಸ್ಕೇಟಿಂಗ್ ಅಪಘಾತಗಳು ಹೆಚ್ಚು ಸಾಮಾನ್ಯವಾಗಿರುತ್ತವೆ.

೧೯೦೮ರ ಫೆಬ್ರವರಿಯಲ್ಲಿ, ಜೋಡಿ ಸ್ಕೇಟಿಂಗ್‌ ಮೊದಲ ಬಾರಿಗೆ ವರ್ಲ್ಡ್ ಚಾಂಪಿಯನ್‌ಶಿಪ್ಸ್‌ನಲ್ಲಿ ಕಂಡುಬಂದಿತು, ಇದರಲ್ಲಿ ಜರ್ಮನಿ, ಯುನೈಟೆಡ್ ಕಿಂಗ್ಡಮ್ ಮತ್ತು ರಷ್ಯಾದಿಂದ ಮೂರು ತಂಡಗಳು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸ್ಪರ್ಧಿಸಿದವು. ಇದು ಒಲಿಂಪಿಕ್‌ನಲ್ಲಿ ಮೊದಲ ಬಾರಿಗೆ ೧೯೦೮ರ ಅಕ್ಟೋಬರ್‌ನಲ್ಲಿ ಭಾಗವಹಿಸಿತು, ಇದರಲ್ಲಿ ಜರ್ಮನಿಯಿಂದ ಒಂದು ಮತ್ತು U.K.ಯಿಂದ ಎರಡು ಒಟ್ಟು ಮೂರು ತಂಡಗಳು ಲಂಡನ್‌ನಲ್ಲಿ ಸ್ಪರ್ಧಿಸಿದವು. ಜೋಡಿ ಸ್ಕೇಟಿಂಗ್‌ ಅದರ ಮೊದಲ ಆರಂಭದಿಂದ ಗಮನಾರ್ಹವಾಗಿ ಅಭಿವೃದ್ಧಿ ಹೊಂದಿತು. ಆಧುನಿಕ-ದಿನದ ಕ್ರೀಡೆಯಲ್ಲಿರುವ ಕೆಲವು ಸಾಮಾನ್ಯ ಚಲನೆಗಳನ್ನು ಕೆಲವು ದಶಕಗಳವರೆಗೆ ಬಳಕೆಗೆ ತಂದಿರಲಿಲ್ಲ.

ಜೋಡಿ ಸ್ಕೇಟಿಂಗ್‌ ಚಲನೆಗಳು

[ಬದಲಾಯಿಸಿ]
ಕೈ-ಕೈ ಎತ್ತುವಿಕೆ. ಒಂದು-ಕೈಯ ಹಿಡಿತಕ್ಕೆ ಬದಲಾದ ತಲೆಗಿಂತ ಮೇಲಿನ ತಿರುಗಿಸುವಿಕೆ.
ಎತ್ತಿ ತಿರುಗಿಸುವುದು.
ಗಾಳಿಯಲ್ಲಿ ಎಸೆಯುವುದು.
ಬೆನ್ನು ಮಂಜುಗಡ್ಡೆಯೆಡೆಗೆ ಮುಖಮಾಡಿರುವ ಮಾರಣಾಂತಿಕ ಸುರುಳಿ ಸುತ್ತುವಿಕೆ.
ಜೋಡಿ ಸುತ್ತುವಿಕೆ

ಗಮನಿಸಿ: ISU ನಿಯಮಗಳಲ್ಲಿ ಮಹಿಳೆಯರನ್ನು"ಲೇಡೀಸ್" ಎಂದು ಸೂಚಿಸಲಾಗುತ್ತದೆ.

ಎತ್ತುವಿಕೆ

[ಬದಲಾಯಿಸಿ]

ಜೋಡಿ ಎತ್ತುವಿಕೆ ಯು ಸಾಮಾನ್ಯವಾಗಿ ತಲೆಯ ಮೇಲ್ಗಡೆ, ವೃತ್ತಾಕಾರದಲ್ಲಿರುತ್ತದೆ ಮತ್ತು ಇದಕ್ಕೆ ಮಂಜುಗಡ್ಡೆಯ ಮೇಲೆ ಸ್ವಲ್ಪ ದೂರದವರೆಗೆ ಚಲಿಸಲು ಮಂಜುಗಡ್ಡೆಯು ಹರಡಿರಬೇಕಾಗಿರುತ್ತದೆ. ಅಂಕಗಳು ಎತ್ತುವ ರೀತಿ, ಪ್ರವೇಶಿಸುವ ರೀತಿ, ಮಂಜುಗಡ್ಡೆಯ ಹರವು ಮತ್ತು ಮಂಜುಗಡ್ಡೆಯ ಮೇಲಿನ ವೇಗ, ಸ್ಥಾನದ ಬದಲಾವಣೆಗಳು, ಮಹಿಳೆಯ ಸ್ಥಾನದ ಗುಣಮಟ್ಟ, ಪುರುಷನ ದೃಢತೆ ಮತ್ತು ತಿರುಗುವುದರ ಸ್ಪಷ್ಟತೆ (ಅಂದರೆ ಕನಿಷ್ಠ ಮಂಜುಗಡ್ಡೆಯ ಹಾರಾಟ), ಇಳಿಸುವ ರೀತಿ ಮತ್ತು ಭಿನ್ನ ಲಕ್ಷಣಗಳು ಮೊದಲಾದವುಗಳಿಂದ ಪ್ರಭಾವಕ್ಕೊಳಗಾಗುತ್ತವೆ. ಇಬ್ಬರೂ ಜೊತೆಗಾರರು ಸಾಮಾನ್ಯವಾಗಿ ಎತ್ತುವಿಕೆಯನ್ನು ಪೂರ್ಣಗೊಳಿಸಿ ಇಳಿಸುವಾಗ ಒಂದು ಕಾಲಿನಲ್ಲಿ ನಿಂತುಕೊಂಡಿರಬೇಕು. ಎತ್ತುವಾಗ ಗಮನಾರ್ಹವಾಗಿ ನಿಧಾನಗೊಳ್ಳುವುದು ಅಥವಾ ಕಡಿಮೆ ದೂರವನ್ನು ಆವರಿಸುವುದು ತೀರ್ಪುಗಾರರ ಅರ್ಹತೆ ನಿರ್ಣಯದ ಮೇಲೆ ಪ್ರಭಾವ ಬೀರುತ್ತದೆ. ಅಂಕವನ್ನು ಹೆಚ್ಚಿಸಲು ಇರುವ ಐಚ್ಛಿಕ ಆಯ್ಕೆಗಳೆಂದರೆ ಕಷ್ಟದ ಪ್ರವೇಶ ಅಥವಾ ಇಳಿಯುವಿಕೆಯನ್ನು ನಿರ್ವಹಿಸುವುದು, ಒಂದು ಕೈಗೆ ಬಿಟ್ಟುಕೊಡುವುದು, ಎತ್ತುವಾಗ ಸ್ಥಾನದ ಬದಲಾವಣೆಗಳು, ತಿರುಗಿಸುವುದನ್ನು ನಿಲ್ಲಿಸುವುದು ಮತ್ತು/ಅಥವಾ CW ಮತ್ತು CCW ಎರಡೂ ದಿಕ್ಕುಗಳಲ್ಲಿ ತಿರುಗಿಸುವುದು.

ತಿರುಗಿಸದೆ ಎತ್ತುವುದನ್ನು ಎತ್ತಿ ಸಾಗುವುದು ಎಂದು ಹೇಳಲಾಗುತ್ತದೆ. ಪುರುಷರ ಭುಜಗಳಿಗಿಂತ ಕೆಳ ಮಟ್ಟದವರೆಗೆ ಎತ್ತುವುದನ್ನು ಎತ್ತಿ ನೃತ್ಯ ಮಾಡುವುದು ಎಂದು ಹೇಳಲಾಗುತ್ತದೆ ಮತ್ತು ನೃತ್ಯ ಸಂಯೋಜನೆಯ ಪ್ರಕಾರ ಅದನ್ನು ಸ್ಥಾಯಿ ಎತ್ತುವಿಕೆ ಎಂದು ಸೂಚಿಸಲಾಗುತ್ತದೆ, ಸ್ವಲ್ಪವೂ ದೂರಕ್ಕೆ ಚಲಿಸದೆ 'ಇದ್ದಲ್ಲಿಂದಲೇ' ಎತ್ತುವುದು.

ಮಹಿಳೆಯನ್ನು ಪುರುಷನ ತಲೆಗಿಂತ ಮೇಲಕ್ಕೆ ಎತ್ತಲು ಆರಂಭದಲ್ಲಿ ಬಳಸುವ ಹಿಡಿತ ಮತ್ತು ಸ್ಥಾನದ ಆಧಾರದಲ್ಲಿ ಎತ್ತುವಿಕೆಯನ್ನು ವರ್ಗೀಕರಿಸಲಾಗುತ್ತದೆ. ಉದಾಹರಣೆಗಾಗಿ, ಸೊಂಟದಿಂದ ಎತ್ತುವಿಕೆ ಯಲ್ಲಿ ಪುರುಷನು ತನ್ನ ಕೈಗಳಿಂದ ಮಹಿಳೆಯ ಸೊಂಟದಲ್ಲಿ ಹಿಡಿದು ಆಕೆಯನ್ನು ಎತ್ತುತ್ತಾನೆ ಹಾಗೂ ಒತ್ತುವ ಎತ್ತುವಿಕೆ ಯಲ್ಲಿ ಕೈ-ಕೈಹಿಡಿತವನ್ನು ಬಳಸಲಾಗುತ್ತದೆ. ಅತ್ಯಂತ ಕ್ಲಿಷ್ಟವಾದ ಎತ್ತುವಿಕೆಯನ್ನು ಆಕ್ಸೆಲ್ ಲಾಸ್ಸೊ ಎತ್ತುವಿಕೆ ಎಂದು ಪರಿಗಣಿಸಲಾಗುತ್ತದೆ, ಇದರಲ್ಲಿ ಪುರುಷನು ಮಹಿಳೆಯನ್ನು ಕೈ-ಕೈಹಿಡಿತದಿಂದ ಎತ್ತಿದಾಗ ಆಕೆ ಒಂದು ಪೂರ್ಣ ಸುತ್ತು ಸುತ್ತುತ್ತಾಳೆ.

ಎತ್ತಿ ತಿರುಗಿಸುವಿಕೆ

[ಬದಲಾಯಿಸಿ]

ಜೋಡಿ ಸ್ಕೇಟಿಂಗ್‌‌ನಲ್ಲಿ ಮಾತ್ರ ಕಂಡುಬರುವ ಎತ್ತಿ ತಿರುಗಿಸುವಿಕೆ ಯಲ್ಲಿ, ಮಹಿಳೆಯು ಮೊದಲು ಆಕ್ಸೆಲ್ ಅಥವಾ ಕಾಲ್ಬೆರಳ-ಸಹಾಯದಿಂದ ನೆಗೆದು, ಮೇಲೆ ತಿರಗಲು ಆಕೆಗೆ ಪುರುಷನು ನೆರವಾಗುತ್ತಾನೆ ಮತ್ತು ಹಾಗೆ ತಿರುಗುತ್ತಿರುವಾಗ ಪುರುಷನು ಆಕೆಯನ್ನು ಹಿಡಿದು ಮತ್ತೆ ಕೆಳಕ್ಕೆ ಮಂಜುಗಡ್ಡೆಯ ಮೇಲೆ ತರುತ್ತಾನೆ. ಕೆಲವು ತಿರುಗುವಿಕೆಯಲ್ಲಿ, ಮಹಿಳೆಯು ತಿರುಗುವುಕ್ಕಿಂತ ಮೊದಲು ಕಿಸಿಗಾಲು-ನೆಗೆತ(ಸ್ಪ್ಲಿಟ್)ವನ್ನು ಮಾಡುತ್ತಾಳೆ. ದೇಹದ ಅಕ್ಷದಿಂದ ಪ್ರತಿಯೊಂದು ಕಾಲು ಕನಿಷ್ಠ ೪೫° ಕೋನದಲ್ಲಿ ಬೇರ್ಪಟ್ಟಿದ್ದರೆ ಈ ನೆಗೆತವು ನಿರ್ವಹಣೆಯ ಮಟ್ಟವನ್ನು ಹೆಚ್ಚಿಸುತ್ತದೆ. ಜೋಡಿಯು ಕ್ಲಿಷ್ಟವಾದ ಪ್ರವೇಶವನ್ನು ಮಾಡಿದರೆ, ತುಂಬಾ ಹೊತ್ತಿನವರೆಗೆ ತಿರುಗಿಸಿದರೆ ಅಥವಾ ಮಹಿಳೆಯು ತನ್ನ ಕೈಗಳನ್ನು ತಲೆಯ ಮೇಲೆ ಹಿಡಿದುಕೊಂಡಿದ್ದರೆ ಹೆಚ್ಚಿನ ಅಂಕಗಳನ್ನು ಪಡೆಯಬಹುದು.

ಉತ್ಕೃಷ್ಟ ಮಟ್ಟದಲ್ಲಿ ಎರಡು ಮತ್ತು ಮೂರು ಬಾರಿ ಎತ್ತಿ ತಿರುಗಿಸುವುದು ಸಾಮಾನ್ಯವಾಗಿರುತ್ತದೆ; ಮೊದಲ ನಾಲ್ಕು ಬಾರಿ ಎತ್ತಿ-ತಿರುಗಿಸುವಿಕೆಯನ್ನು ಮರೀನಾ ಚರ್ಕಸೋವ ಮತ್ತು ಸರ್ಗೈ ಶಾಕ್ರೈ ೧೯೭೭ರ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ನಿರ್ವಹಿಸಿದರು.[ಸಾಕ್ಷ್ಯಾಧಾರ ಬೇಕಾಗಿದೆ]

ಮೇಲಕ್ಕೆ ನೆಗೆಯುವುದು

[ಬದಲಾಯಿಸಿ]

ಮೇಲಕ್ಕೆ ನೆಗೆಯುವುದು ಜೋಡಿ ಸ್ಕೇಟಿಂಗ್‌‌ನಲ್ಲಿ ಭಿನ್ನವಾದ ಒಂದು ಚಲನೆಯಾಗಿದೆ, ಇದರಲ್ಲಿ ಮಹಿಳೆಗೆ ಮೇಲಕ್ಕೆ ಹಾರಲು ಪುರುಷನು ನೆರವಾಗುತ್ತಾನೆ ಮತ್ತು ನಂತರ ಆಕೆ ತಾನಾಗಿಯೇ ಕೆಳಕ್ಕೆ ಇಳಿಯುತ್ತಾಳೆ. ಮೇಲಕ್ಕೆ ನೆಗೆಯುವುದನ್ನು ಯಾವುದೇ ರೀತಿಯ ಹಾರುವುದರೊಂದಿಗೆ ಮಾಡಲಾಗುತ್ತದೆ, ಇದನ್ನು ಉತ್ಕೃಷ್ಟ ಜೋಡಿ ತಂಡಗಳಲ್ಲಿ ಎರಡು, ಮೂರು ಅಥವಾ ನಾಲ್ಕು ಬಾರಿ ಮಾಡಲಾಗುತ್ತದೆ. ಟೊ ಲೂಪ್ ಮತ್ತು ಸಾಲ್ಚೊವನ್ನು ಸುಲಭ ನೆಗೆತಗಳೆಂದು ಪರಿಗಣಿಸಲಾಗುತ್ತದೆ. ಅದೇ ಲೂಪ್ ಮತ್ತು ಫ್ಲಿಪ್ ತುಂಬಾ ಕಷ್ಟವಾಗಿರುತ್ತದೆ; ಹೆಚ್ಚು ಕ್ಲಿಷ್ಟವಾದ ನೆಗೆತವೆಂದರೆ ಆಕ್ಸೆಲ್. ನೆಗೆಯುವುದರ ವೇಗ ಹಾಗೂ ನೆಗೆತದ ದೂರ ಮತ್ತು ಎತ್ತರವನ್ನೂ ಒಳಗೊಂಡಂತೆ ಮೇಲಕ್ಕೆ ಹಾರುವುದರ ಗುಣಮಟ್ಟವು ಅಂಕದ ಮೇಲೆ ಪ್ರಭಾವ ಬೀರುತ್ತದೆ. ಪುರುಷನು ಸರಾಗವಾಗಿ ಸ್ಕೇಟಿಂಗ್ಅನ್ನು ಮುಂದುವರಿಸಬೇಕು, ತನ್ನ ಪ್ರಯತ್ನವನ್ನು ನಿಲ್ಲಿಸಬಾರದು ಅಥವಾ ಹೆಚ್ಚು ಮುಂದಕ್ಕೆ ಮುನ್ನುಗ್ಗಬಾರದು. ಸುರುಳಿಯಾಗಿ ಚಲಿಸುವಂತಹ ಕ್ಲಿಷ್ಟವಾದ ಪ್ರವೇಶಗಳು ಅಂಕವನ್ನು ಹೆಚ್ಚಿಸಬಹುದು.

ಸ್ಪರ್ಧೆಯನ್ನು ಪೂರ್ಣಗೊಳಿಸುವ ಅತ್ಯಂತ ಕಷ್ಟವಾದ ನೆಗೆತವೆಂದರೆ ಆಕ್ಸೆಲ್ ನೆಗೆತವನ್ನು ಮೂರು ಬಾರಿ ಮಾಡುವುದು. ಇದನ್ನು ಮೊದಲು ರೇನಾ ಇನ್ಯೂ ಮತ್ತು ಜಾನ್ ಬಾಲ್ಡ್ವಿನ್ ಜೂನಿಯರ್ ೨೦೦೬ರ U.S. ಫಿಗರ್ ಸ್ಕೇಟಿಂಗ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ನಿರ್ವಹಿಸಿದರು. ಇದನ್ನು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ೨೦೦೬ರ ವಿಂಟರ್ ಒಲಿಂಪಿಕ್ಸ್‌ನಲ್ಲಿ ನಿರ್ವಹಿಸಲಾಯಿತು.

ಮಾರಣಾಂತಿಕ ಸುರುಳಿ ಸುತ್ತುವಿಕೆ

[ಬದಲಾಯಿಸಿ]

ಮಾರಣಾಂತಿಕ ಸುರುಳಿ ಸುತ್ತುವಿಕೆ ಯು ಜೋಡಿ ಸ್ಕೇಟಿಂಗ್‌ನಲ್ಲಿ ಒಂದು ಭಿನ್ನವಾದ ಚಲನೆಯಾಗಿದೆ, ಇದರಲ್ಲಿ ಮಂಜುಗಡ್ಡೆಗೆ ಹೆಚ್ಚುಕಡಿಮೆ ಸಮಾಂತರವಾದ ಸ್ಥಿತಿಯಲ್ಲಿ ಮಹಿಳೆಯನ್ನು ಸುತ್ತಲೂ ತೂಗಾಡಿಸುವಾಗ ಪುರುಷನೂ ಸಹ ತಿರುಗುತ್ತಾನೆ. ಹೊರಗಿನ ಎಲ್ಲೆಯ ಮಾರಣಾಂತಿಕ ಸುರುಳಿ ಸುತ್ತುವಿಕೆಯನ್ನು ಒಳಗಿನ ಎಲ್ಲೆಯ ಸುರುಳಿ ಸುತ್ತುವಿಕೆಗಿಂತ ಹೆಚ್ಚು ಕಷ್ಟವಾದುದೆಂದು ಪರಿಗಣಿಸಲಾಗುತ್ತದೆ, ಅದರಲ್ಲೂ ಮುನ್ನುಗ್ಗುವ ಹೊರಗಿನ ಎಲ್ಲೆಯ ಮಾರಣಾಂತಿಕ ಸುರುಳಿ ಸುತ್ತುವಿಕೆಯು ಎಲ್ಲಕ್ಕಿಂತಲೂ ಹೆಚ್ಚು ಕ್ಲಿಷ್ಟವಾದುದಾಗಿದೆ. ಶೂಟ್-ದಿ-ಡಕ್ ಅಥವಾ ಕ್ಯಾಚ್-ಫೂಟ್ ಸ್ಥಿತಿ, ನಿರ್ವಹಿಸುವಾಗ ಕೈಯನ್ನು ಬದಲಿಸುವುದು ಮತ್ತು/ಅಥವಾ ಕ್ಯಾಚ್-ಫೂಟ್ ಸ್ಥಿತಿಯನ್ನು ನಿರ್ವಹಿಸುವುದು ಮೊದಲಾದ ಅಸಾಮಾನ್ಯ ಪ್ರವೇಶಗಳು ಅಂಕವನ್ನು ಹೆಚ್ಚಿಸಬಹುದು.

ಜೋಡಿ ತಿರುಗುವಿಕೆ

[ಬದಲಾಯಿಸಿ]

ಜೋಡಿ ತಿರುಗುವಿಕೆ ಯಲ್ಲಿ ಇಬ್ಬರೂ ಪರಸ್ಪರ ಹಿಡಿದುಕೊಂಡು ಒಂದು ಸಾಮಾನ್ಯ ಅಕ್ಷದ ಸುತ್ತ ತಿರುಗುತ್ತಾರೆ. ಜೊತೆಗಾರರನ್ನು ಹಿಡಿದುಕೊಳ್ಳುವ ಮೂಲಕ ಪಡೆಯುವ ಹೆಚ್ಚುವರಿ ಸಮತೋಲನವು ಜೋಡಿ ಸ್ಕೇಟರ್‌ಗಳಿಗೆ ತಿರುಗಲು ಅವಕಾಶ ಮಾಡಿಕೊಡುತ್ತದೆ, ಈ ರೀತಿ ತಿರುಗಲು ಏಕಾಂಗಿ ಸ್ಕೇಟರ್‌ಗೆ ಕಷ್ಟವಾಗಬಹುದು ಅಥವಾ ಅಸಾಧ್ಯವಾಗಬಹುದು. ತಿರುಗುವ ವೇಗ, ಕೇಂದ್ರೀಕರಿಸುವುದು ಹಾಗೂ ಸ್ಥಾನಗಳ ಗುಣಮಟ್ಟ ಮತ್ತು ಕಷ್ಟ ಮೊದಲಾದವು ಅಂಕದ ಮೇಲೆ ಪ್ರಭಾವ ಬೀರುತ್ತವೆ. ಜೋಡಿಗಳು CW ಮತ್ತು CCW ದಿಕ್ಕುಗಳೆರಡರಲ್ಲೂ ವಿಲಕ್ಷಣ ಪ್ರವೇಶಗಳನ್ನು ಮಾಡಬಹುದು ಅಥವಾ ತಿರುಗಬಹುದು.

ಪಕ್ಕ-ಪಕ್ಕದಲ್ಲಿ ಮತ್ತು ಇತರ ಚಲನೆಗಳು

[ಬದಲಾಯಿಸಿ]
ಮಹಿಳೆಯು ಪಾದವನ್ನು ಹಿಡಿದಿರುವ ಭಂಗಿಯಲ್ಲಿ ಜಾರಿಕೊಂಡು ಮತ್ತು ಪುರುಷನು ಅರಬ್ಬಿ-ವಿನ್ಯಾಸ ಭಂಗಿಯಲ್ಲಿದ್ದುಕೊಂಡು ಸುರುಳಿ ಸುತ್ತುವುದು.

ಜೋಡಿ ಸ್ಕೇಟರ್‌ಗಳು ಸಾಮರಸ್ಯದೊಂದಿಗೆ ಏಕಾಂಗಿ ಸ್ಕೇಟಿಂಗ್ ಚಲನೆಗಳನ್ನೂ ನಿರ್ವಹಿಸುತ್ತಾರೆ. ಅವುಗಳೆಂದರೆ: ನೆಗೆತ, ತಿರುಗುವಿಕೆ, ಹೆಜ್ಜೆ ಸರಣಿಗಳು, ಸುತ್ತುವ ಸರಣಿಗಳು ಮತ್ತು ನೆಲದ ಮೇಲಿನ ಇತರ ಚಲನೆಗಳು.

'ಇಬ್ಬರು ಒಬ್ಬರಾಗಿ ಸ್ಕೇಟಿಂಗ್' ಮಾಡುವುದನ್ನು ಗಮನದಲ್ಲಿಟ್ಟುಕೊಂಡು, ಪಕ್ಕ-ಪಕ್ಕದ ಚಲನೆಯ ಗುಣಮಟ್ಟವನ್ನು ಪ್ರತಿಯೊಬ್ಬ ಸ್ಕೇಟರ್‌ನ ಪೂರ್ಣಗೊಳಿಸುವಿಕೆಯ ಸರಾಸರಿಯಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ, ಸ್ಕೇಟರ್‌ಗಳು ಒಟ್ಟಿಗೆ ಪಕ್ಕ-ಪಕ್ಕದ ಚಲನೆಯನ್ನು ಆರಂಭಿಸಬೇಕು, ಕೊನೆಯವರೆಗೂ ಪರಸ್ಪರ ಸಾಮರಸ್ಯ ಮತ್ತು ಹೆಚ್ಚು ಸಾಮಿಪ್ಯವನ್ನು ನಿರ್ವಹಿಸಬೇಕು ಮತ್ತು ಜೊತೆಯಾಗಿ ಮುಕ್ತಾಯಗೊಳಿಸಬೇಕು.

ಪಕ್ಕ-ಪಕ್ಕದ ನೆಗೆತದಲ್ಲಿ, ಜೋಡಿಗಳು ಸಾಮರಸ್ಯದಲ್ಲಿ ಮತ್ತು ಸಾಧ್ಯವಾದಷ್ಟು ಹತ್ತಿರದಲ್ಲಿ ಒಂದೇ ನೆಗೆತವನ್ನು ನಿರ್ವಹಿಸಬೇಕು. ಒಬ್ಬ ಜೊತೆಗಾರ ನೆಗೆತವನ್ನು ಅಪೂರ್ಣಗೊಳಿಸಿದರೆ, ಎರಡೂ ನೆಗೆತಗಳನ್ನು ಅವುಗಳಲ್ಲಿ ಕೆಳಮಟ್ಟದ್ದು ಯಾವುದೊ ಅದೆಂದು ಸೂಚಿಸಲಾಗುತ್ತದೆ. ಒಂದೇ ರೀತಿಯ ಪ್ರವೇಶಿಸುವ ರೀತಿ ಮತ್ತು ಸಮಯವನ್ನು ನಿರ್ವಹಿಸಬೇಕಾದುದರಿಂದ, ಪ್ರತ್ಯೇಕವಾಗಿ ನೆಗೆಯುವ ಸಾಮರ್ಥ್ಯವನ್ನು ಹೊಂದಿರುವ ಸ್ಕೇಟರ್‌ಗಳು ಜೊತೆಗಾರರೊಂದಿಗೆ ನೆಗೆಯಲು ಕಷ್ಟಪಡಬಹುದು. ಏಕಾಂಗಿ ಸ್ಕೇಟರ್‌ಗಳಿಗೆ ಭಿನ್ನವಾಗಿ, ಜೋಡಿ ಸ್ಕೇಟರ್‌ಗಳು ಸಿದ್ಧರಾಗಿದ್ದೇವೆಂದು ಭಾವಿಸುವವರೆಗೆ ಅಥವಾ ಹೆಚ್ಚುವರಿ ಕೌಶಲವನ್ನು ಸೇರಿಸುವವರೆಗೆ ನೆಗೆತವನ್ನು ತಡಮಾಡುವ ಆಯ್ಕೆಯನ್ನು ಹೊಂದಿರುವುದಿಲ್ಲ ಏಕೆಂದರೆ ಅವರು ತಮ್ಮ ಜೊತೆಗಾರರೊಂದಿಗೆ ಏಕಕಾಲಿಕತೆಯಿಂದ ಹೊರಗಿರುತ್ತಾರೆ.

ಪಕ್ಕ-ಪಕ್ಕದ ತಿರುಗುವಿಕೆಯನ್ನು ಹೊಂದಾಣಿಕೆ ಮತ್ತು ಸಮಯ, ಸ್ಥಾನಗಳ ಕ್ಲಿಷ್ಟತೆ ಮತ್ತು ಗುಣಮಟ್ಟ, ಸಾಮಿಪ್ಯ, ಕೇಂದ್ರೀಕರಿಸುವುದು ಮತ್ತು ತಿರುಗುವ ವೇಗ ಮೊದಲಾದವುಗಳ ಆಧಾರದಲ್ಲಿ ನಿರ್ಣಯಿಸಲಾಗುತ್ತದೆ. ಜೋಡಿಗಳು ಕೆಲವೊಮ್ಮೆ ಸಮಯವನ್ನು ನಿರ್ವಹಿಸಲು ಮತ್ತು ಸರಿಹೊಂದಿಸಲು ತಮ್ಮ ಜೊತೆಗಾರರಿಗೆ ಕೇಳಿಸುವ ಸೂಚನೆಗಳನ್ನು ಕೂಗುತ್ತಾರೆ.

ತಿರುಗುವ ಸರಣಿಗಳನ್ನು ಒಂದೇ ರೀತಿಯ ಸ್ಥಾನಗಳಲ್ಲಿ ನಿರ್ವಹಿಸಬೇಕಿಲ್ಲ. ವೇಗ, ಮಂಜುಗಡ್ಡೆಯ ಹರವು, ಬಾಗುವುದರ ಆಳ ಮತ್ತು ಸ್ಥಾನಗಳ ಗುಣಮಟ್ಟ ಮೊದಲಾದವು ಅಂಕವನ್ನು ನಿರ್ಧರಿಸುತ್ತದೆ.

ನೆಲದ ಮೇಲಿನ ಚಲನೆಗಳೆಂದರೆ ಕಾಲುಗಳನ್ನೂ ತೋಳುಗಳನ್ನೂ ಅಗಲಿಸುವುದು, ತಿರುಗುವಿಕೆ, ಇನಾ ಬಾಯರ್ಸ್, ಕ್ಯಾಂಟಿಲೆವರ್ಸ್, ನೃತ್ಯದಿಂದ ಎತ್ತುವುದು ಮತ್ತು ಇತರೆ. ಜೋಡಿಗಳು ಈ ಚಲನೆಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು ಮತ್ತು ಅವುಗಳನ್ನು ಸೇರಿಸಬಹುದು.

ನಿಯಮ-ವಿರುದ್ಧ ಚಲನೆಗಳು

[ಬದಲಾಯಿಸಿ]
ಕ್ಯೋಕ ಇನಾ ಮತ್ತು ಜಾನ್ ಜಿಮ್ಮರ್‌ಮನ್ ಒಂದು ಕೈಯ 'ಡೆಟ್ರೋಯ್ಟರ್'ಅನ್ನು ನಿರ್ವಹಿಸುತ್ತಿರುವುದು.

ಕೆಲವು ಜೋಡಿ ಸ್ಕೇಟಿಂಗ್‌ ಕುಶಲಚಲನೆಗಳು ಸ್ಕೇಟರ್‌ಗಳಿಗೆ ಗಂಭೀರ ಹಾನಿಯನ್ನು ಉಂಟುಮಾಡುವ ಅಪಾಯವನ್ನು ಹೊಂದಿರುವುದರಿಂದ ಅವುಗಳನ್ನು ಒಲಿಂಪಿಕ್-ಯೋಗ್ಯ ಸ್ಕೇಟಿಂಗ್‌ನಿಂದ ನಿಷೇಧಿಸಲಾಗಿದೆ. ನಿಯಮ-ವಿರುದ್ಧ ಚಲನೆಗಳಿಗೆ ೬.೦ ಮತ್ತು ISU ತೀರ್ಪು ನೀಡುವ ವ್ಯವಸ್ಥೆಗಳೆರಡರಲ್ಲೂ ಪ್ರವೇಶವಿರುವುದಿಲ್ಲ. ಈ ಚಲನೆಗಳನ್ನು ಪ್ರದರ್ಶನಗಳಲ್ಲಿ ಅಥವಾ ವೃತ್ತಿಪರ ಸ್ಪರ್ಧೆಗಳಲ್ಲಿ ಮಾತ್ರ ನಿರ್ವಹಿಸಲಾಗುತ್ತದೆ.

  • ಹೆಡ್‌ಬ್ಯಾಂಗರ್ ಅಥವಾ ಬೌನ್ಸ್ ಸ್ಪಿನ್ ‌ನಲ್ಲಿ, ಪುರುಷನು ಮಹಿಳೆಯನ್ನು ಆಕೆಯ ಎರಡೂ ಪಾದಗಳಿಂದ ಮಂಜುಗಡ್ಡೆಯ ಮೇಲಕ್ಕೆ ಸುತ್ತಲೂ ತಿರುಗಿಸುತ್ತಾನೆ, ಇದರಲ್ಲಿ ಮಹಿಳೆಯು ಕೇವಲ ಆಕೆಯ ಕಣಕಾಲಿನ ಮೇಲಿನ ಪುರುಷನ ಹಿಡಿತದಿಂದ ಮಾತ್ರ ಆಧಾರವನ್ನು ಹೊಂದಿರುತ್ತಾಳೆ. ಹೀಗೆ ತಿರುಗಿಸುವಾಗ ಮಹಿಳೆಯು ಆವರ್ತಕ ಶೈಲಿಯಲ್ಲಿ ಮೇಲೆತ್ತಲ್ಪಡುತ್ತಾಳೆ ಮತ್ತು ಕೆಳಕ್ಕೆ ಇಳಿಸಲ್ಪಡುತ್ತಾಳೆ, ಕೆಲವೊಮ್ಮೆ ಆಕೆಯ ತಲೆ ಅಪಾಯಕಾರಿಯಾಗಿ ಮಂಜುಗಡ್ಡೆಯನ್ನು ಮುಟ್ಟುವಂತೆ ಅದರ ಹತ್ತಿರಕ್ಕೆ ಬರುತ್ತದೆ.
  • ಡೆಟ್ರೋಯ್ಟರ್ ‌ನಲ್ಲಿ ಪುರುಷನು ಮಹಿಳೆಯನ್ನು ತನ್ನ ತಲೆಗಿಂತ ಮೇಲಕ್ಕೆ ಎತ್ತುತ್ತಾನೆ, ಆತನು ಎರಡು-ಪಾದದಲ್ಲಿ ತಿರುಗುವಾಗ ಆಕೆಯನ್ನು ಮಂಜುಗಡ್ಡೆಗೆ ಸಮಾಂತರವಾಗಿ ಹಿಡಿದುಕೊಂಡಿರುತ್ತಾನೆ. ಪುರುಷನು ಮಹಿಳೆಯನ್ನು ಆಕೆಯ ಕಾಲುಗಳಿಂದ ಮಾತ್ರ ಹಿಡಿದುಕೊಂಡಿರುವುದರಿಂದ ಆ ಹಿಡಿತವು ತುಂಬಾ ಅಪಾಯಕಾರಿಯಾಗಿರುತ್ತದೆ. ಒಂದು ಕೈಯಿಂದ ಹಿಡಿದುಕೊಳ್ಳುವ ಮೂಲಕ ಈ ಚಲನೆಯನ್ನು ಇನ್ನಷ್ಟು ಆಕರ್ಷಕವಾಗಿ ಮತ್ತು ಅಪಾಯಕಾರಿಯಾಗಿ ನಿರ್ವಹಿಸಲಾಗುತ್ತದೆ.

ಇತರ ನಿಯಮ-ವಿರುದ್ಧ ಕುಶಲಚಲನೆಗಳೆಂದರೆ:

  • ಪಲ್ಟಿ ಹಾಕುವ ರೀತಿಯ ನೆಗೆತ
  • ತಪ್ಪು ಹಿಡಿತದಿಂದ ಎತ್ತುವುದು
  • ಪುರುಷನು ೩ ½ ಗಿಂತಲೂ ಹೆಚ್ಚು ಆವರ್ತನಗಳೊಂದಿಗೆ ಎತ್ತುವುದು
  • ಮಹಿಳೆಯ ಕೈ ಅಥವಾ ಪಾದವನ್ನು ಹಿಡಿದುಕೊಂಡು ಆಕೆಯನ್ನು ಗಾಳಿಯಲ್ಲಿ ಸುತ್ತಿಸುವ ಪುರುಷನ ತಿರುಗುವ ಚಲನೆಗಳು
  • ತಿರುಚುವ-ರೀತಿಯ ಅಥವಾ ಚಕ್ರಾಕಾರದಲ್ಲಿ ಸುತ್ತುವ ಚಲನೆಗಳು, ಇವುಗಳಲ್ಲಿ ಮಹಿಳೆಯು ತನ್ನ ಸ್ಕೇಟಿಂಗ್ ಮಾಡುವ ಪಾದಗಳನ್ನು ಮಂಜುಗಡ್ಡೆಯಿಂದ ಮೇಲಕ್ಕೆತ್ತಿ ತಿರುಗುತ್ತಾಳೆ.
  • ಒಬ್ಬ ಜೊತೆಗಾರನು ಮತ್ತೊಬ್ಬ ಜೊತೆಗಾರನ ಕಾಲು, ಕೈ ಮತ್ತು ಕುತ್ತಿಗೆಯಲ್ಲಿ ಹಿಡಿದುಕೊಂಡು ಚಕ್ರಾಕಾರದಲ್ಲಿ ಸುತ್ತುವ ಚಲನೆಗಳು
  • ಒಬ್ಬ ಜೊತೆಗಾರನು ಮತ್ತೊಬ್ಬ ಜೊತೆಗಾರನೆಡೆಗೆ ನೆಗೆಯುವುದು
  • ಯಾವುದೇ ಕ್ಷಣದಲ್ಲಿ ಮಂಜುಗಡ್ಡೆಯ ಮೇಲೆ ಮಲಗುವುದು ಮತ್ತು ದೀರ್ಘಕಾಲದವರೆಗೆ ಮತ್ತು/ಅಥವಾ ಅಲ್ಪಕಾಲದವರೆಗೆ ಎರಡೂ ಮಂಡಿಗಳನ್ನು ಬಗ್ಗಿಸುವುದು

ಪಾರಿಭಾಷಿಕ ಪದಗಳು

[ಬದಲಾಯಿಸಿ]
  • ಮಿರರ್ ಜೋಡಿಗಳು ವಿರುದ್ಧ ಪರಿಭ್ರಮಣ ದಿಕ್ಕುಗಳಲ್ಲಿ ಪಕ್ಕ-ಪಕ್ಕದ ಚಲನೆಗಳನ್ನು ನಿರ್ವಹಿಸುವ ವಿರಳ ತಂಡಗಳಾಗಿವೆ. ಅಂತಹ ಒಂದು ಜೋಡಿಯೆಂದರೆ ಕ್ರಿಸ್ಟಿ ಯಮಗುಚಿ (ಅಪ್ರದಕ್ಷಿಣವಾಗಿ) ಮತ್ತು ರುಡಿ ಗ್ಯಾಲಿಂಡೊ (ಪ್ರದಕ್ಷಿಣವಾಗಿ). ಜಿಲ್ ವಾಟ್ಸನ್(ಅಪ್ರದಕ್ಷಿಣವಾಗಿ) ಮತ್ತು ಪೀಟರ್ ಒಪ್ಪೆಗಾರ್ಡ್(ಪ್ರದಕ್ಷಿಣವಾಗಿ) ಸಹ ವಿರುದ್ಧ ದಿಕ್ಕುಗಳಲ್ಲಿ ನೆಗೆತವನ್ನು ಮಾಡಿದರು. ಇತ್ತೀಚೆಗೆ ಟಿಫ್ಫಾನಿ ವೈಸ್ (ಪ್ರದಕ್ಷಿಣವಾಗಿ) ಮತ್ತು ಡೆರೆಕ್ ಟ್ರೆಂಟ್ (ಅಪ್ರದಕ್ಷಿಣವಾಗಿ) ಸಹ ವಿರುದ್ಧ ದಿಕ್ಕುಗಳಲ್ಲಿ ತಿರುಗಿದರು.
  • ಮಿರರ್ ಸ್ಕೇಟಿಂಗ್ ಮಿರರ್ ಜೋಡಿಗಳಂತಹುದೇ ಒಂದು ಪದವಾಗಿದೆ, ಆದರೆ ಇದು ನೆಗೆಯುವುದು ಮತ್ತು ತಿರುಗುವುದರ ಬದಲಿಗೆ ಚಲನೆಗಳನ್ನು ಸೂಚಿಸುತ್ತದೆ. ಆಂಡ್ರೀ ಮತ್ತು ಪಿಯರ್ರೆ ಬ್ರುನೆಟ್‌ನ ಜೋಡಿ ತಂಡವು ಈ ರೀತಿಯ ಚಲನೆಯನ್ನು ನಿರ್ವಹಿಸಿದ ಕೀರ್ತಿಗೆ ಪಾತ್ರವಾಗಿದೆ.[]
  • ಶಾಡೊ ಸ್ಕೇಟಿಂಗ್ ‌ನಲ್ಲಿ ಜೋಡಿಯು ಪರಸ್ಪರ ಮುಟ್ಟದೆ ಒಂದೇ ರೀತಿಯ ಚಲನೆಗಳನ್ನು ನಿರ್ವಹಿಸುತ್ತದೆ.
  • ಒಂದೇ ರೀತಿಯ ಜೋಡಿ ಎಂದರೆ ಇಬ್ಬರು ಪುರುಷರು ಅಥವಾ ಇಬ್ಬರು ಮಹಿಳೆಯರನ್ನು ಒಳಗೊಂಡ ಒಂದು ಜೋಡಿ ತಂಡವಾಗಿದೆ. ಇದು ಮಿಶ್ರ ಜೋಡಿಯ ವಿರುದ್ಧವಾಗಿದೆ. ಒಂದೇ ರೀತಿಯ ಜೋಡಿಯು ISU ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲ.

ಅರ್ಹತೆ

[ಬದಲಾಯಿಸಿ]

ಸ್ಕೇಟರ್‌ಗಳು ಪೌರತ್ವವು ಅಗತ್ಯವಾಗಿರಬೇಕಾದ ಒಲಿಂಪಿಕ್ಸ್ಅನ್ನು ಹೊರತುಪಡಿಸಿ ಹೆಚ್ಚಿನ ಸ್ಪರ್ಧೆಗಳಲ್ಲಿ ಪೌರರಲ್ಲದ ರಾಷ್ಟ್ರವನ್ನು ಪ್ರತಿನಿಧಿಸಬಹುದು. ಒಬ್ಬ ಸ್ಕೇಟರ್ ಹಿಂದೆ ಬೇರೆ ರಾಷ್ಟ್ರವನ್ನು ಪ್ರತಿನಿಧಿಸಿದ್ದರೆ, ಇಂಟರ್‌ನ್ಯಾಷನಲ್ ಸ್ಕೇಟಿಂಗ್ ಯೂನಿಯನ್ ನಿಯಮಗಳು ಹಿಂದಿನ ರಾಷ್ಟ್ರದ ಪರವಾಗಿ ಆತ ಅಥವಾ ಆಕೆ ಪ್ರತಿನಿಧಿಸಿದ ಸ್ಪರ್ಧೆಯ ದಿನದಿಂದ ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸದಂತೆ ನಿರ್ಬಂಧವನ್ನು ಹಾಕುತ್ತವೆ. ಆದರೆ ಜೊತೆಗಾರರನ್ನು ಹುಡುಕುವ ಕಷ್ಟವನ್ನು ಪರಿಹರಿಸಲು, ಸ್ಕೇಟರ್ ಆತನ ಅಥವಾ ಆಕೆಯ ಹಿಂದಿನ ರಾಷ್ಟ್ರದಿಂದ ಅನುಮತಿಯನ್ನು ಪಡೆದರೆ ಇದು ಜೋಡಿ ಸ್ಕೇಟರ್‌ಗಳಿಗೆ (ಮತ್ತು ಐಸ್ ಡ್ಯಾನ್ಸರ್‌ಗಳಿಗೆ) ಒಂದು ವರ್ಷವಾಗಿ ಕಡಿಮೆಯಾಗಬಹುದು. ಹಿಂದಿನ ರಾಷ್ಟ್ರವು ನಿರಾಕರಿಸಿದರೆ, ಇದು ಎರಡು-ವರ್ಷ ಬಹಿಷ್ಕರಣವಾಗಿರುತ್ತದೆ.

೧೯೯೬ರಲ್ಲಿ, ಇಂಟರ್‌ನ್ಯಾಷನಲ್ ಸ್ಕೇಟಿಂಗ್ ಯೂನಿಯನ್ ವಯಸ್ಸಿನ ಅವಶ್ಯಕತೆಗಳನ್ನು ವಿಧಿಸಿದೆ. ವರ್ಲ್ಡ್ಸ್, ಯುರೋಪಿಯನ್ಸ್, ಫೋರ್ ಕಾಂಟಿನೆಂಟ್ಸ್ ಅಥವಾ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು, ಸ್ಕೇಟರ್‌ಗಳಿಗೆ ಹಿಂದಿನ ವರ್ಷದ ಜುಲೈ ೧ರೊಳಗೆ ೧೫ ವರ್ಷವಾಗಿರಬೇಕು ಅಥವಾ ಇತರ ಹಿರಿಯ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ೧೪ ವರ್ಷವಾಗಿರಬೇಕು. ಜೂನಿಯರ್-ಮಟ್ಟದ ಸ್ಪರ್ಧೆಗಳಿಗೆ ಅರ್ಹರಾಗಲು, ಜೋಡಿ ಸ್ಕೇಟರ್‌ಗೆ ಜುಲೈ ೧ರೊಳಗೆ ೧೩ ವರ್ಷವಾಗಿರಬೇಕು, ಆದರೆ ೧೯ ವರ್ಷ (ಮಹಿಳೆಯರು) ಅಥವಾ ೨೧ ವರ್ಷಕ್ಕಿಂತ (ಪುರುಷರು) ಹೆಚ್ಚಾಗಿರಬಾರದು.[]

ಸ್ಕೇಟರ್‌ಗಳು ಒಪ್ಪಿಗೆ ಕೊಡದ ಪ್ರದರ್ಶನ ಅಥವಾ ಸ್ಪರ್ಧೆಯಲ್ಲಿ ನಿರ್ವಹಿಸಿದ್ದರೆ ಒಲಿಂಪಿಕ್‌ನಲ್ಲಿ ಭಾಗವಹಿಸುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ.

ಅಫಘಾತಗಳು

[ಬದಲಾಯಿಸಿ]
ಪಕ್ಕ-ಪಕ್ಕದ ಕ್ಯಾಮೆಲ್ ಸುತ್ತುವಿಕೆಯಲ್ಲಿ ಜೊತೆಗಾರರು ಹೆಚ್ಚು ಹತ್ತಿರಕ್ಕೆ ಬಂದರೆ ಗಂಭೀರವಾದ ಗಾಯಗಳು ಉಂಟಾಗಬಹುದು.

ಸ್ಪರ್ಧಾತ್ಮಕ ಜೋಡಿ ಸ್ಕೇಟರ್‌ಗಳು ಸಾಮಾನ್ಯವಾಗಿ ಕೇವಲ ೪ ಮೀಮೀ (೩/೧೬ ಇಂಚು) ದಪ್ಪವಿರುವ ಬ್ಲೇಡ್‌ಗಳಲ್ಲಿ ಅಪಾಯಕಾರಿ ಕುಶಲಚಲನೆಗಳನ್ನು ನಿರ್ವಹಿಸುವಾಗ ಹೆಲ್ಮೆಟ್‌ಗಳನ್ನು ಅಥವಾ ಇತರ ರಕ್ಷಣಾತ್ಮಕ ಉಡಿಗೆಗಳನ್ನು ಧರಿಸುವುದಿಲ್ಲ. ಸಾಮಾನ್ಯವಾಗಿ ಎತ್ತುವಾಗ ಬಿದ್ದರೆ ತಲೆಗೆ ಗಂಭೀರವಾಗಿ ಪೆಟ್ಟು ಬೀಳುವ ಅಪಾಯವಿರುತ್ತದೆ.[] ಸ್ಪರ್ಧೆಗಿಂತ ಒಂದು ದಿನ ಮೊದಲು ಜೋರಾದ ಪೆಟ್ಟು ಬಿದ್ದುದರಿಂದ ಮತ್ತು ತಲೆಬುರುಡೆಯೊಳಗಿನ ಊತಕಗಳಲ್ಲಿ ರಕ್ತ ಹೆಪ್ಪುಗಟ್ಟಿ ಊದಿಕೊಂಡಿದುದರಿಂದ ಆಸ್ಪತ್ರೆಗೆ ದಾಖಲಾಗಿದ್ದರೂ ಐರಿನಾ ರೋಡ್ನಿನಾ ೧೯೭೨ರ ವರ್ಲ್ಡ್ ಚಾಂಪಿಯನ್‌ಶಿಪ್ಸ್‌ನಲ್ಲಿ ಸ್ಪರ್ಧಿಸಿದರು.[] ಟಾಟಿಯಾನ ಟೋಟ್ಮಿಯಾನಿನ ೨೦೦೪ರ ಸ್ಕೇಟ್ ಅಮೇರಿಕಾದಲ್ಲಿ ದಿಗಿಲುಗೊಳಿಸುವ ರೀತಿಯಲ್ಲಿ ಬಿದ್ದರು ಮತ್ತು ತೀವ್ರ ಆಘಾತಕ್ಕೆ ಒಳಗಾದರು, ಆದರೆ ಅಷ್ಟೊಂದು ಗಂಭೀರವಾಗಿ ಪೆಟ್ಟಾಗಲಿಲ್ಲ.[] ಜೆ. ಪಾಲ್ ಬಿನ್ನೆಬೋಸ್ ತನ್ನ ಜೊತೆಗಾರನನ್ನು ಎತ್ತುವಾಗ ಬಿದ್ದುದರಿಂದ ಮಾರಣಾಂತಿಕವಾಗಿ ತಲೆಗೆ ಪೆಟ್ಟು ತಗುಲಿತು; ಆತ ಭಾಗಶಃ ನಿಷ್ಕ್ರಿಯಗೊಂಡರು ಮತ್ತು ನಂತರ ಸ್ಪರ್ಧೆಗೆ ಹಿಂದಿರುಗಲಿಲ್ಲ.[]

ಜೊತೆಗಾರರು ನಿರ್ದಿಷ್ಟವಾಗಿ ಪಕ್ಕ-ಪಕ್ಕದ ಕ್ಯಾಮೆಲ್ ತಿರುಗುವಿಕೆಯ ಸಂದರ್ಭದಲ್ಲಿ ತುಂಬಾ ಹತ್ತಿರಕ್ಕೆ ಬಂದಾಗ ಪರಸ್ಪರ ಸೀಳುಗಾಯ ಮಾಡುವ ಸಂಭವವಿರುತ್ತದೆ. ಈ ಚಲನೆಯ ಸಂದರ್ಭದಲ್ಲಿ ಅನೇಕ ಮಹಿಳಾ ಜೋಡಿ ಸ್ಕೇಟರ್‌ಗಳಿಗೆ ತಲೆ/ಮುಖದ ಗಾಯಗಳು ಆಗಿವೆ, ಅವರೆಂದರೆ ಎಲೀನಾ ಬೆರೆಜ್ನಾಯ,[] ಜೆಸ್ಸಿಕಾ ಡುಬೆ,[][] ಮತ್ತು ಗ್ಯಾಲಿನಾ ಮ್ಯಾನಿಯಾಚೆಂಕೊ.[೧೦] ಅಂತಹ ಅಪಘಾತಗಳು ಇತರ ಚಲನೆಗಳ ಸಂದರ್ಭದಲ್ಲೂ ಸಂಭವಿಸಬಹುದು, ಉದಾ, ಸೇಡಿ ಡೆನ್ನಿ ಪಕ್ಕ-ಪಕ್ಕದ ನೆಗೆತಗಳನ್ನು ಮಾಡುವಾಗ ಆಕಸ್ಮಿಕವಾಗಿ ಜೆರೆಮಿ ಬ್ಯಾರೆಟ್ಟ್‌ರ ಕಣಕಾಲಿನ ಹಿಂಭಾಗವನ್ನು ಕತ್ತರಿಸಿದರು, ಈ ಗಾಯಕ್ಕೆ ೪೨ ಹೊಲಿಗೆಗಳನ್ನು ಹಾಕಬೇಕಾಯಿತು.[೧೧] ಅದೇ ರೀತಿ ಮಿಯಾಗನ್ ದುಹಾಮೆಲ್ ಪಕ್ಕ-ಪಕ್ಕದ ನೆಗೆತಗಳನ್ನು ಮಾಡುವಾಗ ಕ್ರೈಗ್ ಬುಂಟಿನ್‌ರ ಕೈಯನ್ನು ಸೀಳಿದರು.[೧೨]

ತಿರುಚಿ ಎತ್ತುವಿಕೆಯೂ ಸಹ ಇಬ್ಬರು ಜೊತೆಗಾರರಿಗೂ ಹಾನಿಯನ್ನು ಉಂಟುಮಾಡಬಹುದು. ಕೆಲವೊಮ್ಮೆ ಸುರುಳಿಯಾಕಾರದಲ್ಲಿ ತಿರುಗಿಸಿ ಕೆಳಗಿಳಿಸುವಾಗ ಮಹಿಳೆಯು ತನ್ನ ಜೊತೆಗಾರನನ್ನು ತಳ್ಳಬಹುದು; ಈ ಅಪಘಾತಗಳು ಅಭ್ಯಾಸ ಮಾಡುವಾಗ ಮತ್ತು ಕೆಲವೊಮ್ಮೆ ಸ್ಪರ್ಧೆಯಲ್ಲೂ ಸಾಮಾನ್ಯವಾಗಿರುತ್ತದೆ, ಉದಾ, ದುಹಾಮೆಲ್ ೨೦೧೧ರ ವರ್ಲ್ಡ್ಸ್‌ನಲ್ಲಿ ಎರಿಕ್ ರಾಡ್ಫೋರ್ಡ್‌ರ ಮೂಗನ್ನು ಗಾಯಗೊಳಿಸಿದರು.[೧೩][೧೪] ಕೆಲವು ಸಂದರ್ಭಗಳಲ್ಲಿ, ಇದು ಪುರುಷನು ತನ್ನ ಜೊತೆಗಾರನನ್ನು ಹಿಡಿಯುವುದನ್ನು ನಿರ್ಬಂಧಿಸುತ್ತದೆ, ಉದಾ, ೨೦೦೯ರ ವರ್ಲ್ಡ್ ಟೀಮ್ ಟ್ರೋಫಿಯಲ್ಲಿ ಜೆಸ್ಸಿಕಾ ಡುಬೆ ಮತ್ತು ಬ್ರೈಸ್ ಡ್ಯಾವಿಸನ್.[೧೫] ಮೇಲಕ್ಕೆ ಹಾರುವುದರ ಎತ್ತರ ಮತ್ತು ಬಲವೂ ಸಹ ಮಹಿಳೆಗೆ ಹಾನಿಯನ್ನು ಉಂಟುಮಾಡಬಹುದು, ನಿರ್ದಿಷ್ಟವಾಗಿ ಕ್ವಾಡ್ ಎಸೆತದ ಸಂದರ್ಭದಲ್ಲಿ.

ಬೇರೆ ಬೇರೆ ಜೋಡಿಗಳ ನಡುವೆ ಅಭ್ಯಾಸ ಘರ್ಷಣೆಗಳು ವಿರಳವಾಗಿರುತ್ತವೆ. ಅಭ್ಯಾಸದ ಸಂದರ್ಭದಲ್ಲಿ ಜೋಡಿಗಳು ಅವರ ಸಂಗೀತವು ನುಡಿಯುತ್ತಿರುವಾಗ ಮಾರ್ಗದ ಹಕ್ಕನ್ನು ಹೊಂದಿರುತ್ತಾರೆ. ಜೋಡಿಗೆ ಅಭ್ಯಾಸವನ್ನು ಬದಲಿಸುವುದು ತುಂಬಾ ಕಷ್ಟವಾದುದರಿಂದ, ಒಂದು ಘಟಕವಾಗಿ ಸ್ಕೇಟಿಂಗ್ ಮಾಡುವ ಜೋಡಿಗಳು ಪ್ರತ್ಯೇಕವಾಗಿ ಅಭ್ಯಾಸ ಮಾಡುವವರಿಗಿಂತ ಹೆಚ್ಚಿನ ಮಾರ್ಗದ ಹಕ್ಕನ್ನು ಹೊಂದಿರುತ್ತಾರೆ.

ಅಪಘಾತಗಳ ಅಪಾಯವನ್ನು ಕಡಿಮೆಮಾಡಲು ಹೆಚ್ಚಿನ ಗಮನವನ್ನು ಹರಿಸುವುದು ಅಗತ್ಯವಾಗಿರುತ್ತದೆ. ಕೆಲವು ಸ್ಕೇಟರ್‌ಗಳು ಹತ್ತಕ್ಕಿಂತ ಕಡಿಮೆ ವಯಸ್ಸಿನಲ್ಲೇ ಐಸ್ ಡ್ಯಾನ್ಸಿಂಗ್ ಮಾಡಬಹುದು, ಆದರೆ ಇದು ಜೋಡಿ ಸ್ಕೇಟಿಂಗ್‌‌ನಲ್ಲಿ ಸಾಧ್ಯವಾಗುವುದಿಲ್ಲ. ಜೋಡಿ ಸ್ಕೇಟರ್‌ಗಳು ಸಾಮಾನ್ಯವಾಗಿ ಏಕಾಂಗಿ ಸ್ಕೇಟಿಂಗ್‌ನಲ್ಲಿ ಆರಂಭಿಸುತ್ತಾರೆ ಮತ್ತು ನಂತರದ ವಯಸ್ಸಿಲ್ಲಿ ಜೋಡಿ ಸ್ಕೇಟಿಂಗ್‌ಗೆ ಬದಲಾಗುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ಎಳೆಯ ಹದಿಹರೆಯದಲ್ಲಿ ಮತ್ತು ಪುರುಷರು ಸ್ವಲ್ಪ ತಡವಾಗಿ ಬದಲಾಗುತ್ತಾರೆ. ಕೆಲವರು ಕೇವಲ ಜೋಡಿ ಸ್ಕೇಟಿಂಗ್‌ನ ಮೇಲೆ ಗಮನವನ್ನು ಕೇಂದ್ರೀಕರಿಸಲು ನಿರ್ಧರಿಸುತ್ತಾರೆ. ಮತ್ತೆ ಕೆಲವರು ನಿರ್ದಿಷ್ಟವಾಗಿ ಉತ್ತರ ಅಮೇರಿಕನ್ನರು ಏಕಕಾಲದಲ್ಲಿ ಇತರ ವಿಧಾನಗಳಲ್ಲೂ ಸ್ಪರ್ಧಿಸಬಹುದು.

ಉಲ್ಲೇಖಗಳು‌‌

[ಬದಲಾಯಿಸಿ]
  1. ಆಂಡ್ರೀ ಬ್ರುನೆಟ್ ಆಂಡ್ ಪಿಯೆರ್ರಿ ಬ್ರುನೆಟ್ - ಬ್ರಿಟಾನಿಕಾ ಆನ್‌ಲೈನ್ ಎನ್‌ಸೈಕ್ಲೊಪೀಡಿಯಾ
  2. "China eyed over 9 athletes' ages". Associated Press. ESPN. February 14, 2011. Retrieved February 14, 2011.
  3. Klimovich Harrop, JoAnne (October 24, 2004). "Skater injured at Skate America". Pittsburgh Tribune-Review. Retrieved November 27, 2010.[ಶಾಶ್ವತವಾಗಿ ಮಡಿದ ಕೊಂಡಿ]
  4. Pushkina, Oksana (October 3, 2004). "Ирина Константиновна Роднина". peoples.ru (in Russian). Retrieved April 23, 2011. {{cite web}}: Unknown parameter |trans_title= ignored (help)CS1 maint: unrecognized language (link)
  5. Yates, Jennifer C. (October 24, 2004). "Scary fall mars Skate America ; Totmianina taken to hospital after". Associated Press. FindArticles. Archived from the original on ನವೆಂಬರ್ 24, 2011. Retrieved November 27, 2010.
  6. Beiser, H. Darr (December 21, 2010). "Skater Binnebose back on the ice, teaching after brain surgery". USA Today. Retrieved December 22, 2010.
  7. Longman, Jere (March 19, 1997). "Russian's Comeback In Pairs Is Stunning". ದ ನ್ಯೂ ಯಾರ್ಕ್ ಟೈಮ್ಸ್. Retrieved 6 June 2010.
  8. "Statement About Condition of Canadian Pairs Skater Jessica Dube". U.S. Figure Skating. February 8, 2007. Archived from the original on ಜೂನ್ 13, 2011. Retrieved April 17, 2011.
  9. "Skaters recover from slash, ready to defend title". CTV. January 16, 2008. Archived from the original on ಫೆಬ್ರವರಿ 20, 2008. Retrieved April 17, 2011.
  10. ಟೆಂಪ್ಲೇಟು:Isu name
  11. Brannen, Sarah S. (February 12, 2011). "Denney, Barrett out of Four Continents". IceNetwork.com. Archived from the original on ಜುಲೈ 13, 2011. Retrieved February 13, 2011.
  12. Smith, Beverley (November 15, 2008). "Bad cut can't stop Buntin". The Globe and Mail. Retrieved May 6, 2011.
  13. Flade, Tatiana (April 27, 2011). "Pang and Tong lead pairs in Moscow". GoldenSkate. Retrieved May 6, 2011.
  14. "PhotoBlog: Figure skater finishes performance despite taking an elbow to the face". MSNBC. April 27, 2011. Archived from the original on ಜನವರಿ 12, 2012. Retrieved April 27, 2011.
  15. Ritoss, Robin (April 20, 2009). "Dube and Davison to Return to Canada". Skate Today. Retrieved April 17, 2011.