ಜಾರ್ಜ್ ಸ್ಟಿಫನ್ಸನ್
George Stephenson | |
---|---|
Born | |
Died | 12 ಆಗಸ್ಟ್ 1848 | (age 67)
Resting place | Holy Trinity Church, Chesterfield |
Nationality | English |
Citizenship | British |
ಜಾರ್ಜ್ ಸ್ಟಿಫನ್ಸನ್ (9 ಜೂನ್ 1781 – 12 ಆಗಸ್ಟ್ 1848), ಓರ್ವ ಇಂಗ್ಲೀಷ್ ಸಿವಿಲ್ ಎಂಜಿನಿಯರ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದರು. ವಿಶ್ವದಲ್ಲೇ ಮೊದಲ ಸಾರ್ವಜನಿಕ ರೈಲ್ವೆ ಮಾರ್ಗದ ಸ್ವಯಂಚಾಲಿತ ಹಬೆ ಎಂಜಿನ್ ನನ್ನು ಲೊಕೊಮೊಟಿವ್ ಗಳ ಮೂಲದಲ್ಲಿ ನಿರ್ಮಿಸಿದವರಾಗಿದ್ದಾರೆ. ಅವರು "ರೈಲ್ವೆಗಳ ಪಿತಾಮಹ" ಎಂದು ಹೆಸರಾಗಿದ್ದಾರೆ. ಅತ್ಯುತ್ತಮ ಕಾರ್ಯನಿಷ್ಠೆಗೆ ಅವರದೊಂದು ಉತ್ತಮ ಉದಾಹರಣೆ ಮತ್ತು ಸ್ಟಿಫನ್ಸನ್ ಅಭಿವೃದ್ಧಿಯ ಹಸಿಯುಳ್ಳವರು ಎಂದು ವಿಕ್ಟೊರಿಯನ್ ಗಳು ಪರಿಗಣಿಸುತ್ತಾರೆ.ಸ್ವಯಂ-ಸಹಾಯದ ವಕೀಲ ರಾದ ಸ್ಯಾಮ್ಯುವಲ್ ಸ್ಮೈಲ್ಸ್ ಅವರು ವಿಶೇಷವಾಗಿ ಇಂತಹ ಸಾಧನೆಗಳನ್ನು ಹೀಗೆ ಬಣ್ಣಿಸುತ್ತಾರೆ. ಅವರ ರೇಲ್ ಗೇಜ್ ಪ್ರಮಾಣಕವನ್ನು ಹಲವು ಬಾರಿ "ಸ್ಟಿಫನ್ಸನ್ ಗೇಜ್ " ಎಂದು ಕರೆಯುತ್ತಾರೆ.ಇದು ವಿಶ್ವದ ಅತ್ಯಂತ ಸರಳ ಪ್ರಮಾಣೀಕೃತ ಗೇಜ್ ಗೆ ಆಧಾರವಾಗಿದೆ.
ಬಾಲ್ಯ ಜೀವನ
[ಬದಲಾಯಿಸಿ]ಜಾರ್ಜ್ ಸ್ಟಿಫನ್ಸನ್ ನಾರ್ತ್ ಅಂಬರಲ್ಯಾಂಡ್ ನ ವೆಲಾಮ್ ನಲ್ಲಿ ಜನಿಸಿದರು. ಇದು ನಿವ್ ಕ್ಯಾಸ್ಟಲ್ ಅಪಾನ್ ಟೈನೆಗೆ ಪಶ್ಚಿಮಾಭಿಮುಖವಾಗಿದೆ. ರಾಬರ್ಟ್ ಮತ್ತು ಮಾಬೆಲ್ [೧]ದಂಪತಿಯ ಎರಡನೆಯ ಪುತ್ರನಾಗಿದ್ದ ಸ್ಟಿಫನ್ಸನ್. ಆದರೆ ಅವರಿಬ್ಬರಲ್ಲಿ ಯಾರಿಗೂ ಓದು ಅಥವಾ ಬರೆಹ ಗೊತ್ತಿರಲಿಲ್ಲ. ರಾಬರ್ಟ್, ವೆಲಾಮ್ ನಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಪಂಪಿಂಗ್ ಎಂಜಿನ್ ನಲ್ಲಿ ಫೈಯರ್ ಮನ್ ಆಗಿ ಅತ್ಯಂತ ಕಡಿಮೆ ಆದಾಯ ಪಡೆಯುತ್ತಿದ್ದ. ಹೀಗಾಗಿ ಶಾಲಾ ಶಿಕ್ಷಣಕ್ಕಾಗಿ ಹಣದ ಕೊರತೆ ಇತ್ತು. ತಮ್ಮ 17ನೆಯ ವಯಸ್ಸಿನಲ್ಲಿ ಸ್ಟಿಫನ್ಸನ್ ನಿವ್ ಬರ್ನ್ ನಲ್ಲಿದ್ದ ವಾಟರ್ ರೊ ಪಿಟ್ ಕಂಪನಿಯಲ್ಲಿ ಎಂಜಿನ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಆ ವೇಳೆಯಲ್ಲಿ ಜಾರ್ಜ್ ಗೆ ಶಿಕ್ಷಣದ ಮೌಲ್ಯ ಅರಿವಾಯಿತು. ಓದು, ಬರೆಹ ಮತ್ತು ಅಂಕಗಣಿತ ಕಲಿಯಲು ಅವರು ರಾತ್ರಿ ಶಾಲೆಗೆ ಸೇರಿಕೊಂಡರು. ಅವರು ತಮ್ಮ 18ನೆಯ ವಯಸ್ಸಿನವರೆಗೂ ಅನಕ್ಷರಸ್ಥರಾಗಿದ್ದರು. ಅವರು 1801ರಲ್ಲಿ ಬ್ಲ್ಯಾಕ್ ಕಾಲೆರ್ಟನ್ ಕಲ್ಲಿದ್ದಲು ಗಣಿಯಲ್ಲಿ 'ಬ್ರೇಕ್ಸ್ ಮ್ಯಾನ್ 'ಆಗಿ ಕೆಲಸ ಆರಂಭಿಸಿದ್ದರು. ಆಳದ ಗಣಿಯಲ್ಲಿನ ಬಿಸಿ ಗಾಳಿಯನ್ನು ನಿಯಂತ್ರಿಸುವ ಕೆಲಸ ಅವರದಾಗಿತ್ತು. ಅವರು 1802ರಲ್ಲಿ ಫ್ರಾನ್ಸೆಸ್ (ಫ್ಯಾನ್ನಿ)ಹೆಂಡೆರ್ಸನ್ ಅವರನ್ನು ವಿವಾಹವಾದರು. ಅದೇ ವೇಳೆಗೆ ನಿವ್ ಕ್ಯಾಸ್ಟಲ್ ನ ಪೂರ್ವಭಾಗದ ವಿಲ್ಲಿಂಗ್ಟನ್ ಕ್ವೆಯ್ ಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ಬ್ರೇಕ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದಾಗ ಕಾಟೇಜ್ ವೊಂದರಲ್ಲಿನ ಕೊಠಡಿಯಲ್ಲಿ ವಾಸವಾಗಿದ್ದರು. ಜಾರ್ಜ್ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಪೂರಕವಾಗಿ ಶೂ ಹೊಲಿಯುವುದು ಮತ್ತು ಗಡಿಯಾರಗಳ ದುರಸ್ತಿ ಕಾಯಕ ಮಾಡುತ್ತಿದ್ದರು. ನಂತರ 1803 ರಲ್ಲಿ ಅವರ ಪುತ್ರ ರಾಬರ್ಟ್ ಜನಿಸಿದ; ಬಳಿಕ 1804ರಲ್ಲಿ ಅವರು ಕಿಲ್ಲಿಂಗ್ ವರ್ತ್ ಹತ್ತಿರದ ವೆಸ್ಟ್ ಮೊರ್ ಗೆ ಸ್ಥಳಾಂತರಗೊಂಡರು. ಅದೇ ವೇಳೆಗೆ ಜಾರ್ಜ್ ಕಿಲ್ಲಿಂಗ್ ವರ್ತ್ ಪಿಟ್ ನಲ್ಲಿ ಬ್ರೇಕ್ಸಮನ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದರು; ಆದರೆ ಮಗು ಕೆಲವೇ ವಾರಗಳಲ್ಲಿ ಮರಣವನ್ನಪ್ಪಿತು. ಅದಲ್ಲದೇ 1806ರಲ್ಲಿ ಫ್ಯಾನ್ನಿ ಕೂಡ ಶ್ವಾಸಕೋಶ ಹಾಳಾಗಿದ್ದರಿಂದ (ಕ್ಷಯರೋಗ) ಸಾವನ್ನಪ್ಪಿದರು. ನಂತರ ಜಾರ್ಜ್ ಸ್ಕಾಟ್ ಲ್ಯಾಂಡ್ ನಲ್ಲಿ ಕೆಲಸ ಹುಡುಕಲು ನಿರ್ಧರಿಸಿದರು ಅವರು ಮೊಂಟ್ರೊಸ್ ಗೆ ಕೆಲಸಕ್ಕೆ ಹೋಗುವ ಮುಂಚೆ ರಾಬರ್ಟ್ ನನ್ನು ಸ್ಥಳೀಯ ಮಹಿಳೆಯೊಬ್ಬರ ಹತ್ತಿರ ಬಿಟ್ಟು ಹೋದರು. ಕೆಲವು ತಿಂಗಳುಗಳ ನಂತರ ಅವರು ಮರಳಿ ಬಂದರು; ಬಹುಶಃ ಅವರ ತಂದೆ ಗಣಿಗಾರಿಕೆ ಕೆಲಸದಲ್ಲಿ ಕಣ್ಣು ಕಳೆದುಕೊಂಡಿದ್ದೇ ಇದಕ್ಕೆ ಕಾರಣವಾಗಿತ್ತು. ಜಾರ್ಜ್ ಮತ್ತೆ ವೆಸ್ಟ್ ಮೂರ್ ನಲ್ಲಿರುವ ತಮ್ಮ ಕಾಟೇಜ್ ಗೂಡಿಗೆ ಮರಳಿದರು. ಅವರೊಂದಿಗೆ ಅವರ ಅವಿವಾಹಿತ ಸಹೋದರಿ ಎಲೆನೊರ್ ರಾಬರ್ಟ್ ನನ್ನು ನೋಡಿಕೊಳ್ಳಲು ಜೊತೆಯಾದರು. ಆಗ 1811 ರಲ್ಲಿ ಹೈ ಪಿಟ್ ಕಿಲ್ಲಿಂಗ್ ವರ್ತ್ ನಲ್ಲಿನ ನೀರೆತ್ತುವ ಪಂಪಿಂಗ್ ಯಂತ್ರವೊಂದು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ; ಆಗ ಸ್ಟಿಫನ್ಸನ್ ರಿಗೆ ಅದನ್ನು ಸರಿಪಡಿಸುವಂತೆ ಕೇಳಿಕೊಳ್ಳಲಾಯಿತು. ಅವರು ಆ ಕೆಲಸ ಒಪ್ಪಿಕೊಂಡು ಯಶಸ್ವಿ ಯಾಗಿ ದುರಸ್ತಿ ಪೂರ್ಣಗೊಳಿಸಿದ ನಂತರ ಎಂಜಿನ್ ದುರಸ್ತಿಯಲ್ಲಿ ಶೀಘ್ರದಲ್ಲೇ ಪ್ರಾವಿಣ್ಯತೆಯೊಂದಿಗೆ ಬಡ್ತಿ ಪಡೆದು ಕೊಂಡರು. ಅದೇ ವೇಳೆಗೆ ಹತ್ತಿರದ ಕಲ್ಲಿದ್ದಲಿನ ಗಣಿಗಳಿಗೂ ಅವರ ಸೇವೆ ವಿಸ್ತರಿಸಲ್ಪಟ್ಟಿತು. ಹೀಗಾಗಿ ಆ ಪ್ರದೇಶದ ಎಲ್ಲಾ ಕಲ್ಲಿದ್ದಲು ಗಣಿಗಳಲ್ಲಿನ ಯಂತ್ರಗಳ ಉಸ್ತುವಾರಿ ಮತ್ತು ದುರಸ್ತಿಯ ಜವಾಬ್ದಾರಿಯೂ ದೊರೆಯಿತು. ಶೀಘ್ರದಲ್ಲಿಯೇ ಅವರು ಹಬೆ-ಶಕ್ತಿಮೂಲದ ಯಂತ್ರಗಳಲ್ಲಿ ಪರಿಣತರಾದರು.[೨]
ಗಣಿ ಕೆಲಸಗಾರರ ಸುರಕ್ಷತಾ ಕೈದೀವಿಗೆ
[ಬದಲಾಯಿಸಿ]ಆಗ 1818 ರಲ್ಲಿ ಗಣಿಗಳಲ್ಲಿನ ಸ್ಫೋಟಕಗಳೊಂದಿಗೆ ಕಾಣಿಸುವ ಉರಿ-ಬೆಂಕಿ ಎಲ್ಲೆಡೆಗೂ ವ್ಯಾಪಿಸುತ್ತಿತ್ತು. ಅದೇ ವೇಳೆಗೆ ಸ್ಟಿಫನ್ಸನ್ ಸುರಕ್ಷಿತ ಕೈದೀವಿಗೆಯನ್ನು ಕಂಡು ಹಿಡಿಯಲು ಪ್ರಯೋಗ ನಡೆಸುತ್ತಿದ್ದರು. ಇದು ಉರಿದರೂ ಯಾವುದೇ ಸ್ಫೋಟವನ್ನುಂಟು ಮಾಡುತ್ತಿರಲಿಲ್ಲ. ಅದೇ ವೇಳೆ ಗೆ ಕೊರ್ನಿಶ್ ಮನ್ ಸರ್ ಹಂಫ್ರಿ ಡಾವಿ ಕೂಡ ಒಬ್ಬ ವಿಜ್ಞಾನಿಯಾಗಿ ಈ ಸಮಸ್ಯೆಯ ಬಗೆಗೆ ಅವಲೋಕನ ನಡೆಸುತ್ತಿದ್ದರು. ಯಾವುದೇ ವೈಜ್ಞಾನಿಕ ತಿಳಿವಳಿಕೆ ಇಲ್ಲದಿದ್ದರೂ ಸ್ಟಿಫನ್ಸನ್ ನಿರಂತರವಾದ ಪ್ರಯೋಗದಿಂದಾಗಿ ಒಂದು ದೀವಿಗೆಯನ್ನು ಆವಿಷ್ಕರಿಸಿದರು. ಅದರಲ್ಲಿ ಸಣ್ಣ ರಂಧ್ರಗಳ ಮೂಲಕ ಗಾಳಿಯ ಪ್ರವೇಶವಾಗುತ್ತಿತ್ತು. ಸ್ಟಿಫನ್ಸನ್ ಅವರೇ ಸ್ವತಹ ಇಬ್ಬರು ವ್ಯಕ್ತಿಗಳಿಗೆ ಕಿಲ್ಲಿಂಗ್ ವರ್ತ್ ನ ಕಲ್ಲಿದ್ದಲು ಗಣಿಯಲ್ಲಿಯೇ ಇದರ ಪ್ರಾತ್ಯಕ್ಷಿಕೆ ತೋರಿಸಿದರು. ಅದನ್ನು ನೇರವಾಗಿ ಬಿರುಕಿನ ಕಂದರದೆದುರು ಹಿಡಿದು ಅಲ್ಲಿ ಬರುವ ಮಂದ ಬೆಂಕಿಯ ಸುರಿಯುವಿಕೆ ಯನ್ನು ಪ್ರದರ್ಶಿಸಿದರು. ಡಾವಿ ಇದರ ವಿನ್ಯಾಸವನ್ನು ರಾಯಲ್ ಸೊಸೈಟಿಗೆ ನೀಡುವ ಒಂದು ತಿಂಗಳ ಮುಂಚೆಯೇ ಇದರ ಪ್ರಯೋಗ ನಡೆದಿತ್ತು. ಈ ಎರಡೂ ಕೈದೀವಿಗೆಗಳು ಬೇರೆ ಬೇರೆ ವಿನ್ಯಾಸ ಪಡೆದಿದ್ದವು.ಡಾವಿಯವರ ಲ್ಯಾಂಪ್ ಒಂದು ನಿಗದಿತ ಅಳತೆಯ ಪರದೆಯನ್ನೊಳ ಗೊಂಡಿದ್ದರೆ, ಸ್ಟಿಫನ್ಸನ್ ರ ಲ್ಯಾಂಪ್ ಗಾಜಿನ ಸಿಲಿಂಡರ್ ವೊಂದನ್ನು ಒಳಗೊಂಡಿತ್ತು. ಡಾವಿ ಅವರು ತಮ್ಮ ಆವಿಷ್ಕಾರಕ್ಕಾಗಿ £2,000,ಬಹುಮಾನ ಪಡೆದಿದ್ದರೆ, ಸ್ಟಿಫನ್ಸನ್ ರು ಈ ವಿನ್ಯಾಸವನ್ನು ಕದ್ದಿದ್ದಾರೆಂಬ ಆಪಾದನೆ ಹೊರಬೇಕಾಯಿತು. ಒಂದು ಸ್ಥಳೀಯ ಸಮಿತಿಯು ಸ್ಟಿಫನ್ಸನ್ ಅವರನ್ನು ಈ ಆರೋಪದಿಂದ ಮುಕ್ತಗೊಳಿಸಿ, ಅವರು ಪ್ರತ್ಯೇಕವಾಗಿ ಈ ಬಗ್ಗೆ ಅಧ್ಯಯನ ನಡೆಸಿದ್ದರೆಂದು ತಿಳಿಸಿ £1,000 ಬಹುಮಾನ ಘೋಷಿಸಿತು. ಆದರೆ ಡಾವಿ ಮತ್ತವರ ಬೆಂಬಲಿಗರು ಈ ಕ್ರಮವನ್ನು ಸ್ವಾಗತಿಸಲಿಲ್ಲ. ಸ್ಟಿಫನ್ಸನ್ ನಂತಹ ಅಶಿಕ್ಷಿತನೊಬ್ಬ ಹೇಗೆ ಇಂತಹ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯ ಎನ್ನುವುದು ಅವರ ಪ್ರಶ್ನೆಯಾಗಿತ್ತು. ನಂತರ 1833 ರಲ್ಲಿ ಹೌಸ್ ಆಫ್ ಕಾಮನ್ಸ್ ನ ಸಮಿತಿಯು ಈ ಸುರಕ್ಷತಾ ಲ್ಯಾಂಪ್ ಕಂಡು ಹಿಡಿಯುವಲ್ಲಿ ಸ್ಟಿಫನ್ಸನ್ ರಿಗೂ ಸಮನಾದ ಶ್ರಮದ ಪಾಲಿದೆ ಎಂದು ಹೇಳಿತು. ಆದರೆ ಡಾವಿ ಮಾತ್ರ ಕುರುಡು ನಂಬಿಗೆಯಿಂದಾಗಿ ಸ್ಟಿಫನ್ಸನ್ ರೇ ತನ್ನ ಸಿದ್ಧಾಂತದ ಸೂತ್ರ ಕದ್ದಿದ್ದಾರೆಂದು ತೀವ್ರವಾಗಿ ನಂಬಿದ್ದರು. ಸ್ಟಿಫನ್ಸನ್ ಅವರ ಲ್ಯಾಂಪ್ ನ್ನು ಈಶಾನ್ಯ ಭಾಗದಲ್ಲಿ ಮಾತ್ರ ಬಳಸಲಾಗುತ್ತದೆ,ಆದರೆ ಡಾವಿಯವರ ಲ್ಯಾಂಪ್ ನ್ನು ಎಲ್ಲೆಡೆಯೂ ಉಪಯೋಗಿಸಲಾಗುತ್ತದೆ. ಆದರೆ ಡಾವಿಯೊಂದಿಗಿನ ಸ್ಟಿಫನ್ಸನ್ ಅವರ ಅನುಭವವು ಜೀವನದುದ್ದಕ್ಕೂ ಲಂಡನ್ ಮೂಲದ ವಿಜ್ಞಾನ ಪರಿಣತರಲ್ಲಿ ಅಪನಂಬಿಕೆ ಮೂಡಿಸುವಂತೆ ಮಾಡಿತ್ತು.[೨]
ಒಂದು ಸಿದ್ಧಾಂತದ ಪ್ರಕಾರ ಸ್ಟಿಫನ್ಸನ್ ಪರೋಕ್ಷವಾಗಿ ಟೆನೆಸೈಡ್ ಜನರಿಗೆ ಗಿಯಾರ್ಡೆ ಗಳು (ಲಂಡನ್ ಪೂರ್ವದಲ್ಲಿನ ವಾಸಿಗಳು)ಎಂಬ ಸಂಕ್ಷಿಪ್ತ ಹೆಸರನ್ನಿಟ್ಟಿದ್ದರು. ಆ ಸಿದ್ಧಾಂತದ ಪ್ರಕಾರ ಈಶಾನ್ಯ ಭಾಗದ ಕಲ್ಲಿದ್ದಲು ಗಣಿಗಾರರು ತಮ್ಮ ಲ್ಯಾಂಪ್ ಗಳನ್ನು ಗಿಯಾರ್ಡಿಸ್ ಎಂದು ಕರೆಯುತ್ತಿದ್ದರು. ಇದೇ ಮುಂದೆ ಆಳವಾದ ಗಣಿಗಳಲ್ಲಿ ಕೆಲಸ ಮಾಡುವವರಿಗೆ ಅನ್ವರ್ಥಕ ನಾಮವಾಯಿತು. ಹೀಗೆ 1886ರ ಹೊತ್ತಿಗೆ ಯಾವುನೇ ಟಿನೆಸೈಡ್ ನ ರಹವಾಸಿಗೆ ಗಿಯಾರ್ಡೆ ಎಂದು ಕರೆಯಲು ಪ್ರಾರಂಭಿಸಲಾಯಿತು.[೩]
ಆರಂಭಿಕ ಸ್ವಯಂಚಲನೆಯ ಯಂತ್ರಗಳು
[ಬದಲಾಯಿಸಿ]- ಕೊರ್ನಿಶ್ ಮನ್ ಆಗಿದ್ದ ರಿಚರ್ಡ್ ತ್ರೆವೆಥಿಕ್ ಎಂಬಾತನೇ ಹಬೆ ರೈಲ್ವೆಯ ಸ್ವಯಂಚಾಲಿತ ಯಂತ್ರಕ್ಕೆ ಮೊದಲ ಬಾರಿಗೆ 1804 ರಲ್ಲಿ ವಿನ್ಯಾಸ ಒದಗಿಸಿದ. ನಂತರ ಆತ ಟಿನೆಸೈಡ್ ಗೆ ಭೇಟಿ ನೀಡಿ, ಅಲ್ಲಿನ ಗಣಿ-ಮಾಲಿಕರೊಬ್ಬರಿಗೆ ಒಂದು ಯಂತ್ರವೊಂದನ್ನು ನಿರ್ಮಿಸಿ ಕೊಟ್ಟನು. ಹಲವಾರು ಸ್ಥಳೀಯರು ಇದರಿಂದ ಸ್ಫೂರ್ತಿ ಪಡೆದು ತಮ್ಮದೇ ವಿನ್ಯಾಸದ ಯಂತ್ರಗಳನ್ನು ಸಿದ್ದಪಡಿಸಿಕೊಂಡರು.
- ಸ್ಟಿಫನ್ಸನ್ ಮೊದಲ ಲೊಕೊಮೊಟಿವ್ ವನ್ನು 1814 ರಲ್ಲಿ ಕಲ್ಲಿದ್ದಲು ಸಾಗಿಸಲು ಕಿಲ್ಲಿಂಗ್ ವರ್ತ್ ವ್ಯಾಗೊನ್ವೆ ಮೇಲೆ ವಿನ್ಯಾಸಿಸಿದರು. ಇದಕ್ಕೆ ಬ್ಲುಚರ್ ಪ್ರಿಸಿಯಾನ್ ಜನರಲ್ ಗೆಭಾರ್ಡ್ ಲೆಬೆರೆಕ್ಟ್ ವೊನ್ ಬ್ಲುಚೆರ್ ಅವರ ಹೆಸರನ್ನಿಟ್ಟರು. ಲೈಮ್ ರಸ್ತೆಯಲ್ಲಿನ ಸ್ಟಿಫನ್ಸನ್ ಮನೆ, ಡಯಲ್ ಕಾಟೇಜ್ ಹಿಂದಿರುವ ಕಲ್ಲಿದ್ದಲು ಗಣಿಯ ಕಾರ್ಯಾಗಾರದಲ್ಲಿ ಅದನ್ನು ನಿರ್ಮಿಸಲಾಗಿದೆ.
- ರೈಲ್ವೆ ಎಂಜಿನ್ ಲೊಕೊಮೊಟಿವ್ ಸುಮಾರು ಎತ್ತರದ ಬೆಟ್ಟದ ಮೇಲೆ ಅಂದಾಜು 30 ಟನ್ ಗಳಷ್ಟು ಕಲ್ಲಿದ್ದಲನ್ನು ಸಾಗಿಸಬಲ್ಲ ದಾಗಿತ್ತು. ದೊಡ್ಡ-ಚಕ್ರದ ಮೊದಲ ಯಶಸ್ವಿ ಲೊಕೊಮೊಟಿವ್ ಗೆ ಹಳಿಗಳಿಗೆ ಬಿಗಿಯಾಗಿ ಹಿಡಿದುಕೊಳ್ಳುವ ಪದಾರ್ಥವನ್ನು ಬಳಸಲಾಗಿತ್ತು. ಅಂದರೆ ಅದರ ಒಳಮಡಿಕೆಯ ಚಕ್ರಗಳು ರೈಲ್ವೆ ಹಳಿಗಳಿಗೆ ಅಂಟಿಕೊಳ್ಳುವಂತೆ ಮಾಡಲಾಗಿತ್ತು. ಅದರ ಕರ್ಷಣವು ಗಾಲಿಯ ಚಲನೆ ಮೇಲೆ ಅವಲಂಬಿತವಾಗಿರುತ್ತದೆ. ಒಟ್ಟಾರೆ ಸ್ಟಿಫನ್ಸನ್ ಸುಮಾರು 16 ಲೊಕೊಮೊಟಿವ್ಸ್ ಗಳನ್ನು ಕಿಲ್ಲಿಂಗ್ ವರ್ತ್ [೨]ನಲ್ಲಿ ರೂಪಿಸಿದ್ದರೆಂದು ಹೇಳಲಾಗುತ್ತದೆ.
- ಆದರೆ ಈ ಎಲ್ಲಾ 16 ಯಂತ್ರಗಳ ನಿರ್ಮಾಣದ ಪೂರ್ಣ ಪ್ರಮಾಣ ಪುರಾವೆ ದೊರಕಿಲ್ಲ ಎಂದು ಹೇಳಲಾಗುತ್ತದೆ. ಇವುಗಳೆಲ್ಲವುಗಳನ್ನು ಸಾಮಾನ್ಯವಾಗಿ ಕಿಲ್ಲಿಂಗ್ ವರ್ತ್ ನಲ್ಲಿ ಪ್ರಮುಖವಾಗಿ ಅಥವಾ ಹೆಟ್ಟೊನ್ ಕಾಲ್ಯರಿ ರೈಲ್ವೆಯಲ್ಲಿ ಬಳಸಲು ಮಾತ್ರ ಸಿದ್ದಪಡಿಸಲಾಗಿತ್ತೆಂದು ಗುರ್ತಿಸ ಲಾಗಿದೆ. ಒಂದು ಆರು-ಚಕ್ರಗಳ ಲೊಕೊಮೊಟಿವ್ ವೊಂದನ್ನು ಕಿಲ್ಮಾರ್ನೊಕ್ ಅಂಡ್ ಟ್ರೂನ್ ರೈಲ್ವೆಗಾಗಿ 1817 ರಲ್ಲಿ ನಿರ್ಮಿಸಲಾಗಿತ್ತು. ಆದರೆ ಕಬ್ಬಿಣ ಹಳಿಗಳ ಲೇಪನದಲ್ಲಿನ ಹಾನಿಯಿಂದಾಗಿ ಅದರ ಸೇವೆಯನ್ನು ಶೀಘ್ರದಲ್ಲೇ ಹಿಂಪಡೆಯಲಾಯಿತು.[೪]
- ಭವಿಷ್ಯತ್ ನ ಲೊಕೊಮೊಟಿವ್ ವನ್ನು ಸ್ವಾನ್ ಸಿ ಬಳಿಯ ಲಾನ್ಸಮಲೆಟ್ ನಲ್ಲಿರುವ ರೈಲ್ವೆ ಮಾರ್ಗಕ್ಕೆ 1819 ರಲ್ಲಿ ಪೂರೈಸಲಾಗಿತ್ತು. ಆದರೆ ಇದನ್ನೂ ಕೂಡಲೇ ಸೇವೆಯಿಂದ ಹಿಂದೆ ಪಡೆಯಲಾಯಿತು. ಯಾಕೆಂದರೆ ಅದು ಅಪೂರ್ಣ-ಕುದಿಯುವಿಕೆಯಿಂದಾದ ಹಬೆಯ ಕೊರತೆ ಮತ್ತು ಹಳಿಗಾದ ಹಾನಿ ಪ್ರಮುಖ ಕಾರಣವಾಗಿದ್ದವು.[೫]
- ಈ ಹೊಸ ಎಂಜಿನ್ ಗಳು ಮರದ ಹಳಿಗಳ ಮೇಲೆ ಕ್ರಮಿಸಲಾಗಲಿಲ್ಲ. ಅಲ್ಲದೇ ಅತ್ಯಧಿಕ ಭಾರವನ್ನು ತಡೆಯದೇ ಹೋದವು. ಆದರೆ ಆಗ ಕಬ್ಬಿಣದ ಹಳಿಗಳ ನಿರ್ಮಾಣ ಇನ್ನೂ ಶೈಶಾವವಸ್ಥೆಯಲ್ಲಿತ್ತು. ಇಲ್ಲಿ ಬಳಸಿದ್ದ ಎರಕ ಕಬ್ಬಿಣವು ಹೆಚ್ಚು ಸೀಳಿ ಹೋಗುವ ಅಪಾಯವಿತ್ತು. ಆಗ ವಿಲಿಯಮ್ ಲೊಶ್ ರೊಂದಿಗೆ ಜೊತೆಗೂಡಿದ ಸ್ಟಿಫನ್ಸನ್ ರು ಎರಕ ಕಬ್ಬಿಣದ ಹಳಿಗಳು ಒಡೆದು ಹೋಗುವುದನ್ನು ಕಡಿಮೆ ಮಾಡಲು ಹೊಸ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿದರು.
- ರೊಲ್ಟ್ ಅವರು ಹೇಳುವ ಪ್ರಕಾರ, ಈ ಮೊದಲ ಮತ್ತು ಪುರಾತನ ಹಳಿಗಳ ಮೇಲೆ ಎಂಜಿನ್ ಭಾರದಿಂದ ಉಂಟಾಗುವ ಸಮಸ್ಯೆ ಪರಿಹರಿಸಲು ಸಹ ಅವರು ಉಪಾಯ ಹುಡುಕಿದ್ದರು. ಅವರು ಒಂದು 'ಹಬೆ ಸ್ಪ್ರಿಂಗ್ 'ವೊಂದನ್ನು ಬಳಸುವ ಪ್ರಯತ್ನ ಮಾಡಿದರು.(ಅಲ್ಲಿನ ಭಾರ ತಡೆಯಲು ಹಬೆ ಒತ್ತಡವನ್ನು ಬಳಸಿ 'ಸೂಜಿಗಳ ಮೆತ್ತೆ ನಿರ್ಮಿಸಿದರು)ಆದರೆ ಅದರ ನಂತರ ಈ ಭಾರವನ್ನು ವಿವಿಧ ಚಕ್ರಗಳ ಮೇಲೆ 'ಹಂಚಿಕೆ ಮಾಡುವ' ವಿಧಾನ ಕಂಡು ಕೊಂಡರು. ಆದರೆ ಸ್ಟಾಕ್ಟನ್ ಅಂಡ್ ಡಾರ್ಲಿಗ್ಟನ್ ರೈಲ್ವೆಗೆ ಮಾತ್ರ ಸ್ಟಿಫನ್ಸನ್ ಕೇವಲ ಮೆತು ಕಬ್ಬಿಣವನ್ನೇ ಬಳಸಿದ್ದರು. ಏನೇ ಆದರೂ ಹಣಕಾಸಿನ ದುಬಾರಿತನ ಲೆಕ್ಕಿಸದೇ ತನ್ನ ಸ್ವಂತ ವಿನ್ಯಾಸವನ್ನು ಆತ ಬಳಸಿದ್ದರು.(ಕೆಳಗೆ ನೋಡಬಹುದು)[೬]
- ಸ್ಟಿಫನ್ಸನ್ ಅವರು 1820 ರಲ್ಲಿ ಹೆಟ್ಟೊನ್ ಕಾಲ್ಯರಿಯಿಂದ ಸಂಡರ್ ಲ್ಯಾಂಡ್ ವರೆಗಿನ 8-ಮೈಲಿ(13-ಕಿ.ಮೀ)ರೈಲ್ವೆ ಮಾರ್ಗದ ಕಾರ್ಯಕ್ಕೆ ಗುತ್ತಿಗೆ ಕರಾರಿನ ಮೇಲೆ ಹಳಿಗಳ ನಿರ್ಮಿಸಿದರು. ಇದರ ಒಟ್ಟಾರೆ ಫಲಿತಾಂಶದಲ್ಲಿ ಗುರುತ್ವಾಕರ್ಷಣೆ ಮತ್ತು ಚಕ್ರದ ಕೆಳ ವಾಲುವಿಕೆಯನ್ನು ಅಳವಡಿಸಲಾಗಿತ್ತು.ಲೊಕೊಮೊಟಿವ್ಸ್ ಗಳನ್ನು ಸಮಮಟ್ಟ ಮತ್ತು ಮೇಲ್ಮುಖವಾಗಿ ಜೋಡಿಸಲಾಗಿತ್ತು. ಪ್ರಾಣಿಗಳ ಬಲ ಬಳಸದೆಯೇ ಉಪಯೋಗಿಸಿದ ರೈಲ್ವೆ ಇದಾಗಿತ್ತು.
ಸ್ಟಾಕ್ಟನ್ ಅಂಡ್ ಡಾರ್ಲಿಂಗ್ಟನ್ ರೈಲ್ವೆ
[ಬದಲಾಯಿಸಿ]- 1821 ರಲ್ಲಿ ಸ್ಟಾಕ್ಟನ್ ಅಂಡ್ ಡಾರ್ಲಿಂಗ್ಟನ್ (S&DR)ರೈಲ್ವೆ ನಿರ್ಮಾಣ ಮಾಡಲು ಸಂಸತ್ತಿನಲ್ಲೊಂದು ಮಸೂದೆ ಪಾಸ್ ಮಾಡಲಾಯಿತು. ಈ ರೈಲ್ವೆಯನ್ನು ಬಿಶಪ್ ಆಕ್ಲಂಡ್ ನಿಂದ ಸ್ಟಾಕ್ಟನ್ [[ನಲ್ಲಿರುವ ರಿವರ್ ಟೀಸ್ ವರೆಗೆ ನಿರ್ಮಿಸಲಾಗಿತ್ತು. ಇದು ಹತ್ತಿರದ ಎಲ್ಲಾ ಕಾಲ್ಯರಿ ಗಳನ್ನು ಸಂಪರ್ಕಿಸುವ ಉದ್ದೇಶ ಹೊಂದಿತ್ತು. ಈ ಮಾರ್ಗವು ಮಧ್ಯದ ಡಾರ್ಲಿಂಗ್ಟನ್ ]]ಮೂಲಕ ಸಾಗುತ್ತಿತ್ತು. ಈ ಮೊದಲ ಯೋಜನೆಯಂತೆ ಕಲ್ಲಿದ್ದಲು ಗಾಡಿಗಳನ್ನು ಲೋಹದ ಹಳಿಗಳ ಮೇಲೆ ಎಳೆಯಲು ಕುದುರೆಗಳನ್ನು ಬಳಸಲಾಗುತ್ತಿತ್ತು. ಆದರೆ ಯಾವಾಗ ಕಂಪನಿಯ ನಿರ್ದೇಶಕ ಎಡ್ವರ್ಡ್ ಪಿಸೆ ಸ್ಟಿಫನ್ಸನ್ ಅವರನ್ನು ಭೇಟಿಯಾದರು. ಆಗ ಅವರು ಈ ಯೋಜನೆಗಳನ್ನು ಬದಲಾಯಿಸಲು ಒಪ್ಪಿದರು.
- ಸ್ಟಿಫನ್ಸನ್ ಈ ಮಾರ್ಗವನ್ನು ತಮ್ಮ ಎಂಟು ವರ್ಷದ ಪುತ್ರ ರಾಬರ್ಟ್ ನ ನೆರವಿನಿಂದ 1821 ರಲ್ಲಿ ಸರ್ವೇಕ್ಷಣೆ ಮಾಡಿದರು. ಅದೇ ವರ್ಷ ನಿರ್ಮಾಣ ಕಾರ್ಯ ಆರಂಭಗೊಂಡಿತು.[೨]
- ಈ ಹೊಸ ಮಾರ್ಗಕ್ಕೆ ಉತ್ತಮ ರೈಲ್ವೆ ಸಿದ್ದಪಡಿಸುವ ಉತ್ಪಾದಕನ ಅವಶ್ಯಕತೆ ಇತ್ತು. ಆದರೆ ಈ ಕಾರ್ಯಸಿಂಧುವಾಗದಿದ್ದಾಗ ಪಿಸೆ ಮತ್ತು ಸ್ಟಿಫನ್ಸನ್ ಜಂಟಿಯಾಗಿ ನಿವ್ ಕ್ಯಾಸ್ಟಲ್ ನಲ್ಲಿ ಲೊಕೊಮೊಟಿವ್ಸ್ ತಯಾರಿಕೆಗೆ ಕಂಪನಿಯೊಂದನ್ನು ಆರಂಭಿಸಿದರು. ಕಂಪನಿಯನ್ನು ರಾಬರ್ಟ್ ಸ್ಟಿಫನ್ಸನ್ ಅಂಡ್ ಕಂಪನಿ ಎಂದು ಪ್ರಾರಂಭಿಸಲಾಯಿತು. ಜಾರ್ಜ್ ಅವರ ಪುತ್ರ ರಾಬರ್ಟ್ ಇದರ ವ್ಯವಸ್ಥಾಪಕ ನಿರ್ದೇಶಕರಾದರು.
- ಬೆಡ್ಲಿಂಗ್ಟನ್ ಐರನ್ ವರ್ಕ್ಸ್ ಕಂಪನಿಯ ಮೈಕೆಲ್ ಲಾಂಗ್ರಿಜ್ ನಾಲ್ಕನೆಯ ಪಾಲುದಾರ ಸದಸ್ಯರಾದರು. ಹೀಗೆ ಸೆಪ್ಟೆಂಬರ್ 1825 ರಲ್ಲಿ ನಿವ್ ಕ್ಯಾಸ್ಟಲ್ ನ ಫೊರ್ತ್ ಸ್ಟ್ರೀಟ್ ನ ಮೊದಲ ಲೊಕೊಮೊಟಿವ್, ಮೊದಲ ರೈಲ್ವೆ ಮಾರ್ಗ ನಿರ್ಮಾಣದ ಕಾರ್ಯ ಪೂರ್ಣಗೊಂಡಿತು.
- ಇದನ್ನು ಮೂಲದಲ್ಲಿ ಆಕ್ಟಿವ್ ಎಂದು ಹೆಸರಿಸಲಾಯಿತು.ಅದಾದ ಶೀಘ್ರದಲ್ಲಿಯೇ ಅದನ್ನು ಲೊಕೊಮೊಶನ್ ಎಂದು ಮರುನಾಮಕರಣ ಮಾಡಲಾಯಿತು. ಇದರ ನಂತರ "ಆಶಾವಾದ" "ಕುದುರೆ ಗಾಡಿ" ಬ್ಲ್ಯಾಕ್ ಡೈಮಂಡ್ ಕಲ್ಲಿದ್ದಲಿನ ಸಾಗಾಟದ ಪ್ರಕ್ರಿಯೆ ಮುಂದುವರಿಯಿತು. ಸ್ಟಾಕ್ಟನ್ ಅಂಡ್ ಡಾರ್ಲಿಂಗ್ಟನ್ ರೈಲ್ವೆಯು 1825 ರ ಸೆಪ್ಟೆಂಬರ್ 27 ರಂದು ಆರಂಭವಾಯಿತು.
- ಸ್ಟಿಫನ್ಸನ್ ಅವರು ಚಾಲನೆ ಮಾಡಿದ ಈ ಲೊಕೊಮೊಶನ್ ಸುಮಾರು 80-ಟನ್ ಕಲ್ಲಿದ್ದಲು ಮತ್ತು ಹುಡಿಯನ್ನು ಹೊತ್ತು ಒಂಬತ್ತು ಮೈಲುಗಳ (15ಕಿ.ಮೀ) ಅಂತರವನ್ನು ಎರಡು ಗಂಟೆಗಳಲ್ಲಿ ಕ್ರಮಿಸಿತು. ಪ್ರತಿ ಗಂಟೆಗೆ 24 ಮೈಲಿ (39ಕಿ.ಮೀ) ಅದರ ವೇಗದ ಸಾಮರ್ಥ್ಯವಾಗಿತ್ತು. ಕೇವಲ ಪ್ರಯಾಣಿಕರ ಸಾಗಾಟದ-ಉದ್ದೇಶಕ್ಕಾಗಿ ನಿರ್ಮಿಸಿದ ಪ್ರಾಯೋಗಿಕ ಬೋಗಿಯೊಂದನ್ನು ಜೋಡಿಸಲಾಗಿತ್ತು. ತನ್ನ ಮೊದಲ ಸಾರಿಗೆ ಕಾರ್ಯದಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನು ಅದು ಹೊತ್ತೊಯ್ದಿತ್ತು. ಅದೇ ಮೊದಲ ಬಾರಿಗೆ ಪ್ರಯಾಣಿಕರ ಸಂಚಾರವನ್ನು ಹಬೆ ಶಕ್ತಿಯ ಲೊಕೊಮೊಟಿವ್ ರೈಲ್ವೆ ಮೂಲಕ ಪರಿಚಯಿಸಲಾಗಿತ್ತು.[೨]
- ಕೆಲವು ಬಾರಿ ಸ್ಟಿಫನ್ಸನ್ ಲೊಕೊಮೊಟಿವ್ ಚಕ್ರಗಳ ಮೇಲೆ ವಿವಿಧ ಪ್ರಯೋಗ ನಡೆಸಿದರು. ಇದರ ಹೆಚ್ಚಿನ ಅನುಭವಕ್ಕಾಗಿ ಅವರು ಅವಳಿ-ಸ್ಕ್ರಿವ್ ಕ್ಯಾನಲ್ ಸ್ಟೀಮರ್ ಕಂಡು ಹಿಡಿದಿದ್ದ ಬರ್ಮಿಂಗ್ ಹ್ಯಾಮ್ ನಲ್ಲಿನ ಜಾನ್ ಇನ್ಶಾವ್ ಅವರನ್ನು ಸಂಪರ್ಕಿಸಿದರು.
- ಹೊಸ ಮಾರ್ಗದ ಹಳಿಗಳಿಗೆ ಬೆಡ್ಲಿಂಗ್ಟನ್ ಐರನ್ವರ್ಕ್ಸ್ ನಲ್ಲಿ ಜಾನ್ ಬಿರ್ಕಿನ್ಶಾವ್ ಅವರು ಉತ್ಪಾದಿಸಿದ ಮೆತು-ಕಬ್ಬಿಣ ಬಳಸಲಾಗಿತ್ತು. ಈ ಮೆತು-ಕಬ್ಬಿಣದ ಹಳಿಗಳನ್ನು ಸಾಕಷ್ಟು ಉದ್ದದಲ್ಲಿ ಅಂದರೆ ಬೀಡು-ಕಬ್ಬಿಣಕ್ಕಿಂತ ಹೆಚ್ಚು ಅಳತೆಗೆ ವಿಸ್ತರಿಸಬಹುದಾಗಿತ್ತು. ದೊಡ್ಡ ಪ್ರಮಾಣದ ಭಾರ ಹೊರುವ ಲೊಕೊಮೊಟಿವ್ಸ್ ಬಳಕೆಯ ಸಂದರ್ಭದಲ್ಲಿಯೂ ಅವು ಬಿರುಕು ಬಿಡಲಾರವು ಎಂಬುದು ಆಗ ತಿಳಿದಿತ್ತು. ಆಗ ವಾಕರ್ ಐರನ್ವರ್ಕ್ಸ್ ಕಂಪನಿಯ ವಿಲಿಯಮ್ ಲೊಶ್ ಅವರು ಈ ರೈಲ್ವೆ ಹಳಿಗಳ ಬಳಕೆಗಾಗಿ ಸ್ಟಿಫನ್ಸನ್ ಅವರ ಜೊತೆಗೆ ಒಂದು ಒಪ್ಪಂದ ಮಾಡಿಕೊಳ್ಳಲು ಆಲೋಚಿಸಿದರು. ಸ್ಟಿಫನ್ಸನ್ ಅವರ ಬೀಡು-ಕಬ್ಬಿಣ ಹಳಿಗಳ ಬಳಕೆಗೆ ಅವರ ಅನುಮತಿ ಕೇಳಿದರು. ಆದರೆ ಸ್ಟಿಫನ್ಸನ್ ಅವರ ನಿರ್ಧಾರವು ಇವರಿಬ್ಬರ ಮಧ್ಯೆ ಶಾಶ್ವತ ಬಿರುಕನ್ನು ತಂದಿತು. ಆಗ ಸ್ಟಿಫನ್ಸನ್ ಹಳಿಗಳಿಗೆ ಬಳಸಿದ ಗೇಜ್ ರಷ್ಟಾಗಿತ್ತು. ಅದಲ್ಲದೇ ಇದನ್ನೇ ರೈಲ್ವೆಗಳಿಗೆ ಬರ ಬರುತ್ತಾ ಪ್ರಮಾಣಿತ ಅಳತೆಯೆಂದು ಪರಿಗಣಿಸಲಾಯಿತು. ಕೇವಲ ಬ್ರಿಟನ್ ಗೆ ಮಾತ್ರವಲ್ಲದೇ ವಿಶ್ವಾದ್ಯಂತ ಮಾನ್ಯತೆಗೊಳಪಟ್ಟಿತು.[೨]
ಲಿವರ್ ಪೂಲ್ ಅಂಡ್ ಮ್ಯಾಂಚೆಸ್ಟರ್ ರೈಲ್ವೆ
[ಬದಲಾಯಿಸಿ]- ಸ್ಟಾಕ್ಟನ್ ಅಂಡ್ ಡಾರ್ಲಿಂಗ್ಟನ್ ರೈಲ್ವೆ ಸಿದ್ದ ಪಡಿಸುವಾಗ ಸಣ್ಣ ವ್ಯತ್ಯಾಸಗಳೇ ಲೊಕೊಮೊಟಿವ್ ಎಂಜಿನ್ ನ ವೇಗ ಕಡಿಮೆ ಮಾಡುತ್ತವೆ ಎಂದು ಸ್ಟಿಫನ್ಸನ್ ಕಂಡು ಕೊಂಡಿದ್ದರು.(ಅದಲ್ಲದೇ ಸಣ್ಣ ಪ್ರಮಾಣದ ಇಳಿಮುಖತೆಯ ವ್ಯತ್ಯಾಸವು ಪ್ರಮುಖ ಬ್ರೇಕ್ ಗಳನ್ನು ನಿರುಪಯುಕ್ತ ಗೊಳಿಸುತ್ತವೆ.) ರೈಲ್ವೆಗಳನ್ನು ಆಯಾ ಮಟ್ಟಕ್ಕನುಗುಣವಾಗಿ ಸಾಧ್ಯವಿರುವಷ್ಟು ನಿಖರತೆ ಕಾಪಾಡಬೇಕೆಂಬ ನಿರ್ಧಾರಕ್ಕೆ ಅವರು ಬಂದರು. ಈ ಮಾಹಿತಿಯ ಜ್ಞಾನವನ್ನು ಅವರು ಬೊಲ್ಟನ್ ಅಂಡ್ ಲೆಘ್ ರೈಲ್ವೆ ಯೋಜನೆ ಮೇಲೆ ಕೆಲಸ ಮಾಡುವಾಗ ಬಳಸಿಕೊಂಡರು.
- ಲಿವರ್ ಪೂಲ್ ಅಂಡ್ ಮ್ಯಾಂಚೆಸ್ಟರ್ ರೈಲ್ವೆ (L&MR), ಕಂಪನಿಯು ಹಲವು ಕಠಿಣ ತಿರುವುಗಳುಳ್ಳ ಸರಣಿ ಯೋಜನೆಗಳು, ಒಡ್ಡೆಗಳ ನಿರ್ಮಾಣ ಮತ್ತು ರೈಲ್ವೆ ಮಾರ್ಗಕ್ಕಾಗಿಯೇ ಇರುವ ಕಮಾನ ಸೇತುವೆಗಳು ಇತ್ಯಾದಿಗಳನ್ನು ರೈಲ್ವೆ ಸಂಚಾರದ ಸುಗಮತೆಗಾಗಿ ನಿರ್ಮಿಸಿ ಕಾರ್ಯರೂಪಕ್ಕಿಳಿಸಲು ಮುಂದಾಯಿತು. ಆದರೆ ಮಾರ್ಗಗಳ ಸರ್ವೇಕ್ಷಣೆ ಮಾಡುವಾಗ L&MR ಕಂಪನಿಯು ಕೆಲವು ದೋಷಗಳಿಗೆ ಎಡೆ ಮಾಡಿಕೊಟ್ಟಿದ್ದರಿಂದ ಭೂ ಮಾಲಿಕರಿಗೆ ಅದು ದುಷ್ಪರಿಣಾಮ ಬೀರಿತು.ಅದಲ್ಲದೇ ಈ ಬಗೆಗೆ ಮಸೂದೆ ಪಾಸ್ ಮಾಡುವಾಗ ಸಹ ಸ್ಟಿಫನ್ಸನ್ ಕೆಲವು ತೊಂದರೆ ಅನುಭವಿಸಬೇಕಾಯಿತು.
- ಮೂಲ ಮಸೂದೆಯ ಮರು-ಪರೀಕ್ಷೆಯ ಸಂದರ್ಭದಲ್ಲಿ ಸಂಸತ್ತಿನ ಪರಿಷ್ಕರಣಾ ವರದಿಯು ಎಡ್ವರ್ಡ್ ಹಾಲ್ ಅಲ್ಡರ್ಸನ್ ಅವರಿಂದ ತಪಾಸಣೆಗೆ ಒಳಪಟ್ಟಿತ್ತು. ಈ ಮಸೂದೆಯು ನಿರಾಕರಿಸಲ್ಪಟ್ಟಿತು. ಪರಿಷ್ಕೃತಗೊಂಡ ಹೊಸದಾದ ಮಸೂದೆಯೊಂದನ್ನು ಪ್ರತಿಪಾದಿಸಲಾಯಿತು. ಹೀಗೆ ಅನಂತರದ ಅಧಿವೇಶನದಲ್ಲಿ ಇದು ಅಂಗೀಕಾರವಾಯಿತು.
- ಆದರೆ ಈ ಪರಿಷ್ಕೃತ ಹೊಸ ಮಸೂದೆಯು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಯಿತು: ಚಾಟ್ ಮೊಸ್ ಎಂಬ ಸೂಕ್ತ ತಳಪಾಯವಿಲ್ಲದ ಜೌಗು ಮತ್ತು ಹೆಂಟೆಗಳಿರುವ ಸ್ಥಳದಲ್ಲಿ ಉಂಟಾದ ಸಮಸ್ಯೆ ಬಗೆಹರಿಸಲು ಸ್ಟಿಫನ್ಸನ್ ಯಶಸ್ವಿಯಾದರು. ಅದರ ಮೇಲೆಯೇ ಗಟ್ಟಿಯಾದ ಹಳಿಗಳ ನಿರ್ಮಾಣ ಮಾಡುವಲ್ಲಿ ಸಫಲರಾದರು.[೨] ಅವರು ಉದ್ದದ ರಸ್ತೆಗಳ ನಿರ್ಮಾಣದಲ್ಲಿ ಜಾನ್ ಮೆಟ್ಕಲ್ ಬಳಸಿದ ವಿಧಾನವನ್ನೇ ಇದರಲ್ಲಿ ಬಳಸಿದರು.
- ಪೆನ್ನಿನೆಸ್ ಪ್ರದೇಶದಲ್ಲಿನ ಮುಳ್ಳುಗಂಟಿಗಳ ಸದಾ ನೀರು ಹರಿವ ದುರ್ಗಮ ಹಾದಿಯಲ್ಲಿ ನೂರಾರು ಮೈಲು ಗಳಷ್ಟು ರಸ್ತೆ ನಿರ್ಮಿಸಿದ ಪದ್ದತಿಯನ್ನೇ ಅವರು ಅನುಕರಿಸಿದರು. ಪೊದೆ ಮತ್ತು ಕೊಂಬೆಗಳ ರಾಶಿಯ ಒಟ್ಟುಗೂಡಿಸಿ ಅವರು ತಳಪಾಯವೊಂದನ್ನು ನಿರ್ಮಿಸಿದರು.ಮೇಲ್ಭಾಗದಲ್ಲಿ ಕಲ್ಲುಗಳನ್ನು ಜೋಡಿಸಿ ಅದರ ಮೇಲೆ ಸಂಚರಿಸುವ ಭಾರದ ಕೋಚ್ ಗಳು ಸರಿಯಾಗಿ ಚಲಿಸುವಂತೆ ಅವರು ಮಾಡಿದ್ದು ಕೂಡ ಒಂದು ಸಾಧನೆಯೇ ಎನ್ನಬಹುದು.
- ಹೀಗೆ L&MR ತನ್ನ ಕಾರ್ಯವನ್ನು 1829 ರಲ್ಲಿ ಪೂರ್ಣಗೊಳಿಸಲು ಹತ್ತಿರವಾಗುತ್ತಿದ್ದಂತೆ ಇದಕ್ಕೆ ಬೇಕಾದ ಲೊಕೊಮೊಟಿವ್ಸ್ ಗಳನ್ನು ತಯಾರು ಮಾಡುವಲ್ಲಿ ಸ್ಪರ್ಧೆ ಏರ್ಪಟ್ಟಿತು. ಅದೇ ರೀತಿ ರೇನ್ ಹಿಲ್ ಟ್ರೇಲ್ಸ್ ಅಕ್ಟೋಬರ್ 1829 ರಲ್ಲಿ ತನ್ನ ಪ್ರಾಯೋಗಿಕ ಸಂಚಾರಕ್ಕೆ ಅಣಿಯಾಗಿತ್ತು. ಮೊದಲ ಬಾರಿಗೆ ಸುಮಾರು ಆರು ಟನ್ ಗಳಿಗಿಂತ ಹೆಚ್ಚು ಭಾರವನ್ನು ಸಾಗಣೆ ಮಾಡಲಾಯಿತು. ಇದು ಒಟ್ಟಾರೆಯಾಗಿ ಒಂದಷ್ಟು ಅಂತರ ಕ್ರಮಿಸಿತು. ರೈಲು ಹಳಿಗಳ ಮೇಲಿನ ಸಂಚಾರ ಒಂದು ಪರಿಮಿತಿಗೆ ಒಳಪಟ್ಟಿತು.
- ಸ್ಟಿಫನ್ಸನ್ ಅವರ ಮೊದಲ ಪ್ರವೇಶವು ರಾಕೆಟ್ ನೊಂದಿಗಾಯಿತು. ಅದು ಆಗ ನಿಗದಿಯಾದ ಸ್ಪರ್ಧೆಯಲ್ಲಿ ಉತ್ತಮ ಕಾರ್ಯದಕ್ಷತೆ ತೋರುವ ಮೂಲಕ ಗೆಲುವು ಸಾಧಿಸಿ ಖ್ಯಾತಿ ಪಡೆಯಿತು. ಜಾರ್ಜ್ ಅವರ ಪುತ್ರ ರಾಬರ್ಟ್ ಅವರು 1824 ರಿಂದ 1827 ರ ವರೆಗೆ ದಕ್ಷಿಣ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಜಾರ್ಜ್ ಅವರು ಹೊಸ ಮಾರ್ಗ ನಿರ್ಮಾಣದ ಮೇಲ್ವಿಚಾರಣೆಗಾಗಿ ಲಿವರ್ ಪೂಲ್ ನಲ್ಲಿ ವಾಸಿಸಲು ಆರಂಭಿಸಿದಾಗಿನಿಂದ, ಫೊರ್ತ್ ಸ್ಟ್ರೀಟ್ ವರ್ಕ್ಸ್ ಉಸ್ತುವಾರಿ ನೋಡಿಕೊಳ್ಳಲು ವಾಪಸಾದರು. ಈ ರಾಕೆಟ್ ನ ಸಂಪೂರ್ಣ ಜವಾಬ್ದಾರಿಯನ್ನು ರಾಬರ್ಟ್ ತೆಗೆದುಕೊಂಡಿದ್ದರೆಂದೇ ಹೇಳಬೇಕು. ಆದರೂ ಕೂಡ ಅವರು ನಿರಂತರವಾಗಿ ಜಾರ್ಜ್ ಅವರೊಂದಿಗೆ ಅಂಚೆ ಸಂಪರ್ಕದಲ್ಲಿದ್ದೇ ಇದ್ದರು.
೮ಜಾರ್ಜ್ ಅವರು ಅದರ ವಿನ್ಯಾಸಕ್ಕಾಗಿ ಹಲವು ಸಲಹೆಗಳನ್ನು ನೀಡಿದ್ದರು. ಒಂದು ಅತ್ಯಂತ ಮಹತ್ವದ ಹೊಸ ಮಾರ್ಪಾಟೆಂದರೆ ಹಬೆ ಸಿದ್ದ ಪಡಿಸಲು ಮಾಡಿದ ನವೀನ ಶೈಲಿಯ ಫೈಯರ್-ಟ್ಯೂಬ್ ಬಾಯ್ಲರ್, ಇದನ್ನು ಫ್ರೆಂಚ್ ಎಂಜಿನಿಯರ್ ಮಾರ್ಕ್ ಸೆಗುಇನ್ ಅವರು ಕಂಡು ಹಿಡಿದರು. ಇದು ಸುಧಾರಿತ ರೀತಿಯಲ್ಲಿ ಶಾಖದ ವಿನಿಮಯಕ್ಕೆ ಅನುಕೂಲ ಮಾಡಿಕೊಟ್ಟಿತು. ಇದನ್ನು L&MR ಕಂಪನಿಯ ಕೋಶಾಧಿಕಾರಿ ಯಾದ ಹೆನ್ರಿ ಬೂತ್ ಅವರು ಸಲಹೆ ಮಾಡಿದ್ದರು.[೨]
- ಆಗ 1830, ಸೆಪ್ಟೆಂಬರ್ 15 ರಂದು L&MR ನ ಉದ್ಘಾಟನಾ ಸಮಾರಂಭವು ಅತ್ಯಂತ ಮಹತ್ವದ ಮತ್ತು ಪರಿಗಣಿತ ಸಂದರ್ಭವೆಂದು ಹೇಳಲಾಗುತ್ತಿತ್ತು. ಇದರಿಂದಾಗಿ ಇದು ಸರ್ಕಾರ ಮತ್ತು ಕೈಗಾರಿಕೆಗಳಿಂದ ಅತ್ಯಂತ ಪ್ರತಿಭಾನ್ವಿತರು ಮತ್ತು ಪ್ರಭಾವಶಾಲಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲದೇ ಪ್ರಧಾನ ಮಂತ್ರಿ ಡ್ಯುಕ್ ಆಫ್ ವೆಲ್ಲಿಂಗ್ಟನ್ ರನ್ನು ಆಕರ್ಷಿಸುವಲ್ಲಿ ಸಫಲವಾಯಿತು. ಆ ದಿನ ಲಿವರ್ ಪೂಲ್ ನಿಂದ ಹೊರಟ ಎಂಟು ಟ್ರೇನ್ ಗಳ ಮೆರವಣಿಗೆ ಆರಂಭಗೊಂಡಿತ್ತು. ಈ ಪರೇಡ್ ಗೆ ಜಾರ್ಜ್ ಸ್ಟಿಫನ್ಸನ್ ಚಲಾಯಿಸುತ್ತಿದ್ದ "ನಾರ್ತುಂಬ್ರಿನ್ " ನೇತೃತ್ವ ವಹಿಸಿತ್ತು. ಇದರೊಂದಿಗೆ ಅವರ ಪುತ್ರ ರಾಬರ್ಟ್ "ಫೀನಿಕ್ಸ್ "ನ್ನು ನಡೆಸುತ್ತಿದ್ದರು. ನಾರ್ತ್ ಸ್ಟಾರ್ ನ್ನು ರಾಬರ್ಟ್ ಅವರ ಸಹೋದರ ಚಲಾಯಿಸುತಿದ್ದರು; ಅದಲ್ಲದೇ "ರಾಕೆಟ್"ನ್ನು ಸಹಾಯಕ ಎಂಜಿನಿಯರ್ ಜೊಸೆಫ್ ಲೊಕೆ ಮುನ್ನಡೆಸುತ್ತಿದ್ದರು.
- ಆದರೆ ಆ ದಿನ ಲಿವರ್ ಪೂಲ್ ನ ಸಂಸತ್ ಸದಸ್ಯ ವಿಲಿಯಮ್ ಹಸ್ಕಿನ್ಸನ್ ಅವರು ರಾಕೆಟ್ ನ ಹೊಡೆತದ ಆಘಾತಕ್ಕೆ ಸಿಲುಕಿ ಕೊಲ್ಲಲ್ಪಟ್ಟರು. ಹೀಗಾಗಿ ಸಂಭ್ರಮದ ದಿನಕ್ಕೆ ಹೊಡೆತ ಬಿತ್ತೆಂದು ಹೇಳಬಹುದು. ಸ್ಟಿಫನ್ಸನ್ ಅವರು ಗಾಯಗೊಂಡ ಹಸ್ಕಿನ್ಸನ್ ಅವರನ್ನು ವೈಯಕ್ತಿಕವಾಗಿ ಎಕ್ಲೆಸ್ ಗೆ ಟ್ರೇನ್ ಮೂಲಕ ಸಾಗಿಸಲು ಪ್ರಯತ್ನಪಟ್ಟರಾದರೂ ಗಾಯವು ವಾಸಿಯಾಗದಷ್ಟು ಗಂಭೀರವಾಗಿತ್ತು. ಈ ಘೋರ ಅಪಘಾತವಾದಾಗ್ಯೂ ರೈಲ್ವೆಯ ಯಶಸ್ವು ಮಾತ್ರ ಜನಜನಿತವಾಯಿತು. ಸ್ಟಿಫನ್ಸನ್ ಆಗ ಖ್ಯಾತಿ ಗಳಿಸಿದರು. ಇನ್ನುಳಿದ ರೈಲ್ವೆ ವಲಯದ ವಿಶಾಲ ವ್ಯಾಪ್ತಿಗೆ ಪ್ರಧಾನ ಎಂಜಿನಿಯರಾಗುವಂತೆ ಅವರನ್ನು ಕೇಳಿಕೊಳ್ಳಲಾಯಿತು.[೨]
ಸ್ಟಿಫನ್ಸನ್ ಅವರ ತ್ರಿವಿಮಿತೀಯ ಕಮಾನುಳ್ಳ ಸೇತುವೆ
[ಬದಲಾಯಿಸಿ]ಆಗ 1830 ರಲ್ಲಿ ಲಿವರ್ ಪೂಲ್ ಅಂಡ್ ಮ್ಯಾಂಚೆಸ್ಟರ್ ರೈಲ್ವೆಯ ಉದ್ಘಾಟನೆಯ ಭಾಗವಾಗಿ ರೇನ್ ಹಿಲ್ ನಲ್ಲಿನ ತ್ರಿವಿಮಿತೀಯ ಸೇತುವೆಯನ್ನು ಸಂಭ್ರಮದಿಂದ ಆರಂಭಗೊಳಿಸಲಾಯಿತು. ಈ ಸೇತುವೆ ಮೂಲಕ ಯಾವುದೇ ರೈಲ್ವೆ ಯಾವುದೇ ಕೋನದಲ್ಲಿ ಸಂಚರಿಸಬಹುದಾದ ಮೊದಲ ಸೇತುವೆಯಾಗಿದೆ.[೭] ಇದರ ರಚನೆ ಮಾಡುವಲ್ಲಿ ಎರಡು ಸಮಾಂತ ರದ ಎರಡು ಹಳಿಗಳ ವಿಶಾಲತೆ ಗಮನಿಸಬೇಕು.(ಈ ಪ್ರಕರಣದಲ್ಲಿ 6' ರಷ್ಟು ಹೆಚ್ಚಿರುತ್ತದೆ.)ಇಲ್ಲಿನ ಕಲ್ಲಿನ ಕೆಲಸವು ಸಮತಲೀಯ ಚತುರ್ಭುಜವನ್ನೊಳಗೊಂಡಿರುತ್ತದೆ. ಮೇಲಿನಿಂದ ನೋಡಿದಾಗ ಇದು ಚತುಷ್ಕೋನದಂತೆ ಕಾಣಿಸುತ್ತದೆ. ಇದು ಕಮಾನು ಅಗಲಗೊಳ್ಳುವಂತೆ ಪರಿಣಾಮ ಬೀರುತ್ತದೆ. ಆಗ ಕಮಾನಿನ ಗುದ್ದುಗಂಬಕ್ಕೆ ಇಟ್ಟಿಗೆಗಳನ್ನು ಜೋಡಿಸಿ ಇದಕ್ಕೆ ಪರಿಹಾರ ಹುಡುಕಲಾಗುತ್ತದೆ.(ಇಲ್ಲಿ ಕಟ್ಟಿದ ಒಡ್ಡುಗಳ ಮೇಲೆ ಈ ಕಮಾನುಗಳು ಆಸರೆ ಪಡೆಯುತ್ತವೆ) ಈ ತಂತ್ರವು ಕಮಾನಿನ ಕಲ್ಲು ಕಟ್ಟಡದ ಮೇಲೆ ಸಮತಲೀಯ ಪರಿಣಾಮಕ್ಕೆ ಕಾರಣವಾಗುತ್ತದೆ.ಇದರಿಂದ ಕಮಾನಿಗೆ ಇನ್ನಷ್ಟು ಹೆಚ್ಚಿನ ಶಕ್ತಿ ದೊರೆತು ತಿರುವಿನಲ್ಲಿನ ಮೂಲೆಯ ಗುದ್ದುಗಂಬಕ್ಕೆ ಸಮವಾಗಿರುತ್ತದೆ.[೮] ರೇನ್ ಹಿಲ್ ರೈಲ್ವೆ ಸ್ಟೇಶನ್ ನಲ್ಲಿರುವ ಆಗಿನ ಈ ಸೇತುವೆಯು ಇನ್ನೂ ಬಳಕೆಯಲ್ಲಿದೆ, ಸಂಚಾರ ದಟ್ಟನೆಯ A57 (ವಾರಿಂಗ್ಟನ್ ರಸ್ತೆ)ಯಲ್ಲಿ ಸಾಗಾಟಕ್ಕೆ ನೆರವಾಗುತ್ತದೆ. ಈ ಸೇತುವೆಯು ಇಂದು ಪ್ರಸಿದ್ದ ವಿನ್ಯಾಸಗಳ ಪಟ್ಟಿಯಲ್ಲಿದೆ.
ನಂತರದ ವೃತ್ತಿಜೀವನ
[ಬದಲಾಯಿಸಿ]- ನಂತರದ ವೃತ್ತಿಜೀವನದ ಹತ್ತು ವರ್ಷಗಳು ಮಾತ್ರ ಸ್ಟಿಫನ್ಸನ್ ರಿಗೆ ಅತ್ಯಂತ ವೇಗದ ಚಟುವಟಿಕೆಯ ದಿನಗಳಾಗಿದ್ದವು. ಯಾಕೆಂದರೆ ರೈಲ್ವೆ ಪ್ರವರ್ತಕರ ದಂಡೇ ಅವರನ್ನು ಕಾರ್ಯನಿಮಿತ್ಯ ಮುತ್ತಿಗೆ ಹಾಕಿತ್ತು. ಹಲವು ಮೊದಲ ಅಮೆರಿಕನ್ ರೇಲ್ ರೋಡ್ ನಿರ್ಮಾತೃಗಳು ನಿವ್ ಕ್ಯಾಸ್ಟಲ್ ಗೆ ಬಂದು ಸ್ಟಿಫನ್ಸನ್ ಅವರಲ್ಲಿ ರೈಲು ಮಾರ್ಗ ನಿರ್ಮಾಣದ ಬಗ್ಗೆ ಕಲಿಯಲು ಧಾವಿಸಿದರು.
- ನಿಜವಾಗಿಯೂ ಹೇಳಬೇಕೆಂದರೆ ಮೊದಲ ಸುಮಾರು ಒಂದು ಡಜನ್ ಅಥವಾ ಅದಕ್ಕಿಂತ ಹೆಚ್ಚಿನ ಬಳಕೆಯಾದ ಲೊಕೊಮೊಟಿವುಗಳನ್ನು ಸ್ಟಿಫನ್ಸನ್ ಅವರ ಅಂಗಡಿಗಳಿಂದ ಖರೀದಿಸಲಾಗಿತ್ತು ಎಂದು ಹೇಳಬಹುದು. ಇನ್ನುಳಿದ ಪ್ರತಿಭಾನ್ವಿತ ವ್ಯಕ್ತಿಗಳೂ ತಮ್ಮ ಕಾರ್ಯದಲ್ಲಿ ಆಸಕ್ತಿ ತೋರಿಸಲಾರಂಭಿಸಿದರು. ಉದಾಹರಣೆಗೆ ಅವರ ಪುತ್ರ ರಾಬರ್ಟ್, ಅವರ ಶಿಷ್ಯ ಜೊಸೆಫ್ ಲೊಕೆ ಮತ್ತು ಕೊನೆಯಲ್ಲಿ ಇಸಮ್ಬಾರ್ಡ್ ಕಿಂಗಡಮ್ ಬ್ರುನೆಲ್ ಈ ಕೆಲಸಗಳಲ್ಲಿ ತೊಡಗಿಕೊಳ್ಳಲಾರಂಭಿಸಿದರು. ಅವರ ಸಾಂಪ್ರದಾಯಿಕ ಅಭಿಪ್ರಾಯಗಳಲ್ಲಿ ಲೊಕೊಮೊಟಿವ್ ಗಳ ಸಾಮರ್ಥ್ಯವು ಸುತ್ತು ಬಳಸಿನ ದಾರಿಯದಾಗಿದೆ.
- ಆಗ ಸಿವಿಲ್ ಎಂಜಿನಿಯರ್ ಗಳು ಹೆಚ್ಚು ವೆಚ್ಚದಾಯಕವೆಂದು ಪರಿಗಣಿಸಿದರೂ ಅವರ ಉತ್ತರಾಧಿಕಾರಿಗಳು ಇದನ್ನು ಸಮ್ಮತಿಸುವುದಿಲ್ಲ. ಉದಾಹರಣೆಗೆ ಈ ವೆಸ್ಟ್ ಕೋಸ್ಟ್ ಮೇನ್ ಲೈನ್ ನೇರವಾದ ದಾರಿಕಂಡುಕೊಳ್ಳುವಂತೆ ಜೊಸೆಫ್ ಲೊಕೆ ಇಷ್ಟಪಟ್ಟರು. ಇದು ಶಾಪ್, ಲ್ಯಾಂಚೆಸ್ಟರ್ ಮತ್ತು ಕಾರ್ಲಿಸ್ಲೆ ಗಳ ಬದಲಾಗಿ, ಸ್ಟಿಫನ್ಸನ್ ಉದ್ದದ ಸಮುದ್ರ-ಮಟ್ಟದ ಉಲ್ವರ್ ಸ್ಟೊನ್ ಮತ್ತು ವೈಟ್ ಹೆವನ್ ಮಾರ್ಗಗಳ ಮುಖಾಂತರ ಹೋಗುವುದನ್ನು ಪ್ರತಿಪಾದಿಸಿದರು. ಲೊಕೆ ಮಾರ್ಗವನ್ನು ಇದೊಂದರಲ್ಲಿ ನಿರ್ಮಿಸಲಾಗಿತ್ತು.
- ಸ್ಟಿಫನ್ಸನ್ ಕೂಡ ಸಾಮಾನ್ಯವಾಗಿ ವೆಚ್ಚಗಳು ಮತ್ತು ಪೇಪರ್ ವರ್ಕ್ ಗಳ ಬಗ್ಗೆ ಹೆಚ್ಚು ಔಪಚಾರಿಕವಾಗಿದ್ದರು. ಅವರು ಜೊಸೆಫ್ ಲೊಕೆಯವರೊಂದಿಗೆ ಗ್ರ್ಯಾಂಡ್ ಜಂಕ್ಷನ್ ರೈಲ್ವೆ ಯೋಜನೆ ಮೇಲೆ ಕೆಲಸ ಮಾಡಿದರು. ಜೊತೆಗೆ ಮಾರ್ಗದ ಅರ್ಧದಷ್ಟು ಭಾಗವನ್ನು ಪ್ರತಿಯೊಬ್ಬರಿಗೂ ಹಂಚಿಕೊಡಲಾಗಿತ್ತು. ಸ್ಟಿಫನ್ಸನ್ ಅವರ ಅಂದಾಜುಗಳು ಮತ್ತು ಸಂಘಟನಾತ್ಮಕ ಸಾಮರ್ಥ್ಯಗಳು ಲೊಕೆ ಅವರದಕ್ಕೆ ಹೋಲಿಸಿದಾಗ, ಅವು ಮಂಡಳಿಗೆ ತೃಪ್ತಿ ತರಲಿಲ್ಲ. ಈ ಪ್ರಕರಣದಿಂದಾಗಿ ಸ್ಟಿಫನ್ಸನ್ ಅವರ ರಾಜಿನಾಮೆಗೆ ದಾರಿ ಮಾಡಿ ಕೊಟ್ಟಿತು. ಈ ಪ್ರಸಂಗವು ಲೊಕೆ ಮತ್ತು ಸ್ಟಿಫನ್ಸನ್ ಅವರ ನಡುವೆ ಬಿರುಕನ್ನು ಉಂಟು ಮಾಡಿತು. ಅದು ಎಂದಿಗೂ ಸರಿಹೊಂದಲೇ ಇಲ್ಲವೆನ್ನುವಂತಾಯಿತು.[೨]
- ಸ್ಟಿಫನ್ಸನ್ ಅವರು ಕೆಲವು ಮಾರ್ಗಗಳನ್ನು ಸ್ಪರ್ಧಿಗಳಿಗಾಗಿ ಕಳೆದುಕೊಂಡರೂ ಕೂಡ ಅವರ ಎಚ್ಚರಿಕೆಯ ಕಾರಣದಿಂದಾಗಿ ಅವರಿಗೆ ಹೆಚ್ಚಿನ ಕೆಲಸ ನೀಡಲಾಯಿತು. ಈ ನಿಟ್ಟಿನಲ್ಲಿ ಹೆಚ್ಚುವರಿ ಕಾರ್ಯಭಾರವನ್ನು ತೆಗೆದುಕೊಳ್ಳಲು ಅವರು ಅಸಮರ್ಥರಾದರು. ಬೇಡಿಕೆ ಇರುವ ಕೆಲಸದೊಂದಿಗೆ ಸಹಕರಿಸಿ ನಡೆಯುವುದು ಅವರಿಂದ ಸಾಧ್ಯವಾಗಲಿಲ್ಲ. ಅವರು ನಾರ್ತ್ ಮಿಡ್ ಲ್ಯಾಂಡ್ ಮಾರ್ಗದ ಮೇಲೆ ಕೆಲಸ ಮಾಡಿದರು; ಇದು ಡರ್ಬಿಯಿಂದ ಲೀಡ್ಸ್ ವರೆಗೆ,ಯಾರ್ಕ್ ನಿಂದ ನಾರ್ತ್ ಮಿಡ್ ಲ್ಯಾಂಡ್, ಹೀಗೆ ಇದು ನಾರ್ಮಂಟನ್ ನಿಂದ ಯಾರ್ಕ್ ಗೆ ಹೋಗುತ್ತದೆ. ಇಲ್ಲಿ ಮ್ಯಾಂಚೆಸ್ಟರ್ ಅಂಡ್ ಲೀಡ್ಸ್, ದಿ ಬರ್ಮಿಂಗ್ ಹ್ಯಾಮ್ ಅಂಡ್ ಡರ್ಬಿ, ದಿ ಶೆಫೆಲ್ಡ್ ಅಂಡ್ ರೊಥರ್ ಹ್ಯಾಮ್ ಮುಂತಾದವುಗಳನ್ನು ಇನ್ನಿತರ ಕೆಲಸಗಳ ಜೊತೆಗೆ ಅವರು ಕೈಗೆತ್ತಿಕೊಂಡರು.[೨]
- ಸ್ಟಿಫನ್ಸನ್ ಅವರ ಹೆಸರು ಇದರ ಬಗ್ಗೆ ಭರವಸೆ ನೀಡುವುದರಲ್ಲೇ ಹೆಚ್ಚು ಪ್ರಖ್ಯಾತಿ ಪಡೆಯಿತು. ಯಾಕೆಂದರೆ ತಂತ್ರಜ್ಞಾನದ ಸಲಹೆಗಾರನಿಗಿಂತ ಪ್ರಾಯೋಗಿಕತೆಗೆ ಅವರು ಅಧಿಕ ಒತ್ತು ನೀಡಿದ್ದರೆಂಬುದನ್ನು ಇದರಿಂದ ಕಾಣಬಹುದು. ಅವರು, 1847ರಲ್ಲಿ ಮೊದಲ ಬಾರಿಗೆ ರಚನೆಗೊಂಡ ದಿ ಇನ್ ಸ್ಟಿಟುಶನ್ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್ ಸಂಸ್ಥೆಗೆ ಪ್ರಥಮ ಅಧ್ಯಕ್ಷರಾದರು. ಆಗ ಅವರು ತಮ್ಮ ಅರೆ-ನಿವೃತ್ತಿ ಪರ್ವದಲ್ಲಿದ್ದರು. ಡರ್ಬ್ ಶೈಯರ್ ನಲ್ಲಿನ ಗಣಿಗಾರಿಕೆ ಕೆಲಸಗಳ ಮೇಲ್ವಿಚಾರಣೆ, ಸುರಂಗ ತೋಡುವಿಕೆ ಕೆಲಸವನ್ನು ನಾರ್ತ್ ಮಿಡ್ ಲ್ಯಾಂಡ್ ರೈಲ್ವೆಗೆ ಮಾಡು ತ್ತಿದ್ದರು. ಕಾರ್ಯ ಮಾಡಲಾಗದ ಗಣಿ ಪ್ರದೇಶಗಳಲ್ಲಿ ಅವರು ಕಾರ್ಯೋನ್ಮುಖರಾಗಿ ಅದಕ್ಕಾಗಿ ಹೆಚ್ಚು ಹಣ ವ್ಯಯಿಸಿದರು.
ವೈಯಕ್ತಿಕ ಜೀವನ
[ಬದಲಾಯಿಸಿ]- ಜಾರ್ಜ್ ಮೊದಲು ಎಲೆಜಾಬೆತ್ (ಬೆಟ್ಟಿ) ಹಿಂಡ್ ಮಾರ್ಶ್, ಈಕೆ ಬ್ಲ್ಯಾಕ್ ಕಾಲಾರ್ಟನ್ ನ ಓರ್ವ ರೈತನ ಪುತ್ರಿ, ಈಕೆಯನ್ನು ಜಾರ್ಜ್ ಕದ್ದು ಭೇಟಿಯಾಗಿ ಒಟ್ಟಿಗೆ ವಿಹರಿಸುತ್ತಿದ್ದರು. ಆದರೆ ಆಕೆಯ ತಂದೆ ಈ ಮದುವೆಯನ್ನುನಿರಾಕರಿಸಿದ್ದರು; ಯಾಕೆಂದರೆ ಜಾರ್ಜ್ ಕೇವಲ ಒಬ್ಬ ಗಣಿ ಕೆಲಸಗಾರರಾದ್ದರಿಂದ ಆದಾಯ ಅಷ್ಟಾಗಿ ಇರಲಿಲ್ಲ. ಜಾರ್ಜ್ ನಂತರ ತಮ್ಮ ಗಮನವನ್ನು ಆನ್ನೆ ಹೆಂಡರ್ಸನ್ ಎಡೆಗೆ ತೋರಿದರು. ಅವರು ಆ ಕುಟುಂಬದೊಂದಿಗೇ ಇದ್ದರೂ ಆಕೆಯೂ ಇವರನ್ನು ನಿರಾಕರಿಸಿದಳು; ಇದರಿಂದಾಗಿ ಜಾರ್ಜ್ ತನಗಿಂತ ಒಂಭತ್ತು ವರ್ಷ ದೊಡ್ಡವಳಿದ್ದ ಆನ್ನೆಯ ಸಹೋದರಿ ಫ್ರಾನ್ಸಿಸ್ (ಫ್ಯಾನ್ನಿ) ಅವರತ್ತ ಒಲವು ತೋರಿದರು.
- ಜಾರ್ಜ್ ಮತ್ತು ಫ್ಯಾನ್ನಿ ನಿವ್ ಬರ್ನ್ ಚರ್ಚ್ Archived 2020-09-23 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ 28 ನವೆಂಬರ್ 1802 ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಾದರು. ರಾಬರ್ಟ್ (1803) ಮತ್ತು ಫ್ಯಾನ್ನಿ (1805); ಆದರೆ ಹೆಣ್ಣು ಮಗು ಕೆಲವೇ ವಾರಗಳಲ್ಲಿ ಮರಣವನ್ನಪ್ಪಿತು. ಅದಲ್ಲದೇ ಜಾರ್ಜ್ ಅವರ ಪತ್ನಿಯೂ ಮರಣ ಹೊಂದಿದರು. ಬಹುಶಃ ಒಂದೇ ವರ್ಷದ ಅವಧಿಯಲ್ಲಿನ ಅನಾರೋಗ್ಯ ಈ ಸಾವಿಗೆ ಕಾರಣವಾಗಿತ್ತು. ಜಾರ್ಜ್ ಸ್ಕಾಟ್ ಲ್ಯಾಂಡ್ ಗೆ ಕೆಲಸಕ್ಕೆ ತೆರಳಿದಾಗ ತಮ್ಮ ಪುತ್ರ ರಾಬರ್ಟ್ ನನ್ನು ನೆರೆಯವರೊಬ್ಬರಲ್ಲಿ ಪಾಲನೆಗೆ ಬಿಟ್ಟು ಹೋಗಿದ್ದರು. ಅದಾದ ನಂತರ ಜಾರ್ಜ್ ಅವರ ಅವಿವಾಹಿತ ಸಹೋದರಿ ಎಲೆನೊರ್ (ನೆಲ್ಲಿ) ಕಿಲ್ಲಿಂಗ್ ವರ್ತ್ ನಲ್ಲಿ ಜಾರ್ಜ್ ಅವರ ವಾಪಸಾತಿ ನಂತರ ಅವರೊಂದಿಗೆ ಉಳಿದಿದ್ದರು.
- ಹೀಗೆ 29 ಮಾರ್ಚ್ 1820 ರಲ್ಲಿ ಅಂತಿಮವಾಗಿ ಬೆಟ್ಟಿ ಹಿಂಡರ್ ಮಾರ್ಶ್ ಅವರನ್ನು ನಿವ್ ಬರ್ನ್ ನಲ್ಲಿ ವಿವಾಹವಾಗಲು ಜಾರ್ಜ್ ಅವರಿಗೆ ಅನುಮತಿ ನೀಡಲಾಯಿತು.(ಆಗ ಅವರು ಸಾಕಷ್ಟು ಶ್ರೀಮಂತರಾಗಿದ್ದರು.) ಈ ವಿವಾಹ ಸಂತಸದಾಯಕವೆನಿಸಿದರೂ ಈ ದಾಂಪತ್ಯದಲ್ಲಿ ಮಕ್ಕಳಾಗಲಿಲ್ಲ. ಆದರೆ ಬೆಟ್ಟಿ 1845 ರಲ್ಲಿ ಮೃತಪಟ್ಟರು.
- ನಂತರ 11 ಜನವರಿ,1848 ರಲ್ಲಿ ಶ್ರೆವ್ಸ್ ಬರಿ ಯ ಸೇಂಟ್ ಜಾನ್ಸ್ ಚರ್ಚ್ ನಲ್ಲಿ ಜಾರ್ಜ್ ಮೂರನೆಯ ವಿವಾಹವಾದರು. ಡರ್ಬ್ ಶೈಯರ್ ನಲ್ಲಿನ ಬೇಕ್ ವೆಲ್ ನ ರೈತರೊಬ್ಬರ ಪುತ್ರಿ ಎಲೆನ್ ಜಾರ್ಜ್ ಆಗ ಅವರ ಜೊತೆಯಾದರು. ಆಕೆಯ ತಂದೆ ಜಾರ್ಜ್ ಅವರ ಮನೆಯಲ್ಲಿಯೇ ಗೃಹಕೃತ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
- ವಿವಾಹದ ಆರು ತಿಂಗಳ ಬಳಿಕ ಜಾರ್ಜ್ ಎದೆಗೂಡಿನ ವ್ಯಾಧಿಯಿಂದಾಗಿ ಮರಣವನ್ನಪ್ಪಿದರು. ಅದೇ 12 ಆಗಷ್ಟ್ 1848 ರಲ್ಲಿ ಅವರು ಮೃತಪಟ್ಟಾಗ ಅವರಿಗೆ 67 ವರ್ಷ ವಯಸ್ಸಾಗಿತ್ತು. ಡರ್ಬೆಶೈಯರ್ ನ ಚೆಸ್ಟರ್ ಫೀಲ್ಡ್ ನಲ್ಲಿನ ಟಾಪ್ಟನ್ ಹೌಸ್ ನಲ್ಲಿ ಅವರು ಮೃತಪಟ್ಟರು. ಚೆಸ್ಟರ್ ಫೀಲ್ಡ್ ನಲ್ಲಿನ ಹೋಲಿ ಟ್ರಿನಿಟಿ ಚರ್ಚ್ ನಲ್ಲಿ ಅವರ ಎರಡನೆಯ ಪತ್ನಿಯ ಸಮಾಧಿಯ ಪಕ್ಕದಲ್ಲಿ ಇವರಿಗೂ ಜಾಗ ಕಲ್ಪಿಸಲಾಯಿತು.[೨]
ವಂಶಸ್ಥರು
[ಬದಲಾಯಿಸಿ]ಜಾರ್ಜ್ ಸ್ಟಿಫನ್ಸನ್ ರಿಗೆ ಇಬ್ಬರು ಮಕ್ಕಳು:
- ರಾಬರ್ಟ್ ಅಕ್ಟೋಬರ್ 16 ,1803ರಲ್ಲಿ ಜನಿಸಿದ್ದ. ಸಿಟಿ ಆಫ್ ಲಂಡನ್ ನ ವೃತ್ತಿಪರ ಜಾನ್ ಸ್ಯಾಂಡರ್ಸನ್ ಅವರ ಪುತ್ರಿ ಫ್ರಾನ್ಸಸ್ ಸ್ಯಾಂಡರ್ಸನ್ ಅವರನ್ನು ಜೂನ್ 17,1829 ರಲ್ಲಿ ವಿವಾಹವಾಗಿದ್ದರು. ಯಾವುದೇ ಸಂತಾನವಿಲ್ಲದೇ ರಾಬರ್ಟ್ 1859 ರಲ್ಲಿ ನಿಧನ ಹೊಂದಿದರು.
- ಅವರ ಪುತ್ರಿ 1805ರಲ್ಲಿ ಜನಿಸಿದಳಾದರೂ ಕೆಲವೇ ವಾರಗಳಲ್ಲಿ ಸಾವನ್ನಪ್ಪಿದಳು.
ಪರಂಪರೆ
[ಬದಲಾಯಿಸಿ]ರೈಲ್ವೆಗಳ ಅಭಿವೃದ್ಧಿಯಲ್ಲಿ ಬ್ರಿಟನ್ ಜಗತ್ತನ್ನು ತನ್ನ ನಾಯಕತ್ವದಲ್ಲಿ ಮುನ್ನಡೆಸಿತು; ಇದು ಕೈಗಾರಿಕಾ ಕ್ರಾಂತಿಗೆ ಪ್ರೇರಕ ಶಕ್ತಿಯಾಗಿ ಪರಿಣಮಿಸಿತು.ಉತ್ಪಾದನೆಗಾಗಿ ಕಚ್ಚಾ ಸಾಮಗ್ರಿಗಳ ಸಾಗಾಟ ಮತ್ತು ಉತ್ಪನ್ನಗಳ ತ್ವರಿತ ಸಾಗಾಟಕ್ಕೆ ಸೌಕರ್ಯ ಒದಗಿಸಿತು. ಜಾರ್ಜ್ ಸ್ಟಿಫನ್ಸನ್ ತಾನೇ ಲೊಕೊಮೊಟಿವ್ ವನ್ನು ಆವಿಷ್ಕರಿಸಿರುವುದಾಗಿ ಹೇಳಲು ಸಾಧ್ಯವಿಲ್ಲ. ಈ ಖ್ಯಾತಿಯನ್ನು ರಿಚರ್ಡ್ ಟ್ರೆವಿಥಿಕ್ ರಿಗೆ ನೀಡಲಾಗುತ್ತದೆ. ಜಾರ್ಜ್ ಸ್ಟಿಫನ್ಸನ್ ಅವರು ಸ್ಟಾಕ್ಟನ್ ಮತ್ತು ಡಾರ್ಲಿಂಗ್ಟನ್ ರೈಲ್ವೆ ಮತ್ತು ಲಿವರ್ ಪೂಲ್ ಹಾಗು ಮ್ಯಾಂಚೆಸ್ಟರ್ ರೈಲ್ವೆಗಾಗಿ ಮಾಡಿದ ಸಾಧನೆಗಳು ಎಂಜಿನಿಯರುಗಳಿಗೆ ಅನುಸರಿಸಲು ಅತ್ಯುತ್ತಮ ಮಾರ್ಗದರ್ಶಿಗಳಾದವು.ಅದರ ಲಾಭ ಪಡೆದವರಲ್ಲಿ ಅವರ ಪುತ್ರ ರಾಬರ್ಟ್, ಆತನ ಸಹಾಯಕ ಜೊಸೆಫ್ ಲೊಕೆ, ಇವರು ಇದೇ ತಂತ್ರಜ್ಞಾನದ ಮೇಲೆ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಕೈಗೊಂಡರು. ಅದರೊಂದಿಗೆ ಬ್ರಿಟನ್ ನ ಪ್ರಸಿದ್ದ ಸಿವಿಲ್ ಎಂಜಿನಿಯರ್ ಇಸಾಂಬರ್ಡ್ ಕಿಂಗ್ಡಮ್ ಬ್ರುನೆಲ್ ಕೂಡ ಅದಕ್ಕಾಗಿ ತಕ್ಕ ಶ್ರಮ ವಹಿಸಿದರು. ಇವರೆಲ್ಲರೂ ಅವರಿಟ್ಟ ಹೆಜ್ಜೆಯಲ್ಲಿಯೇ ಸಾಗಿದ್ದರು. ಸ್ಟಿಫನ್ಸನ್ ರಿಗಿದ್ದ ದೂರಾಲೋಚನೆಯೇ ಒಂದೇ ಹಳಿ ಜೋಡನೆ ಜೊತೆಗೆ ಮುಂದಿನ ಮಾರ್ಗ ರಚನೆಗೆ ಅನುಕೂಲ ಆಗುವಂತೆ ಅವರು ವ್ಯವಸ್ಥೆ ಮಾಡಿದ್ದಾರೆ. ಸಮಯ ಕಳೆದಂತೆ ಗೇಜ್ ಗಳ ಬದಲಾವಣೆ ಮಾಡಲಾಗುವಂತೆ ಅವರು ಯೋಜನೆ ರೂಪಿಸಿದ್ದಾರೆ. ಇದರಲ್ಲಿಯೂ ಕೆಲವನ್ನು ಮಾರ್ಪಾಡು ಮಾಡಬಹುದಾಗಿದೆ. ಇಡೀ ವಿಶ್ವಾದ್ಯಂತ ಒಂದೇ ಪ್ರಮಾಣಿತ ಗೇಜ್ ಬಳಕೆಗೆ ಅವರೇ ಕಾರಣರಾಗಿದ್ದಾರೆ.
ಜನ್ಮಸ್ಥಳ
[ಬದಲಾಯಿಸಿ]ಜಾರ್ಜ್ ಸ್ಟಿಫನ್ಸನ್ ರ ಜನ್ಮಸ್ಥಳವನ್ನು 18ನೆಯ ಶತಮಾನದ ಐತಿಹಾಸಿಕ ವಸ್ತುಸಂಗ್ರಾಹಲಯದ ಮನೆ ಎನ್ನಲಾಗುತ್ತದೆ. ವೆಲಮ್ ನ ಹಳ್ಳಿಯೊಂದರಲ್ಲಿರುವ ಇದು ನ್ಯಾಶನಲ್ ಟ್ರಸ್ಟ್ ನ ಉಸ್ತುವಾರಿಯಲ್ಲಿ ನಡೆಯುತ್ತಿದೆ.
ಚಿರಸ್ಮರಣೀಯ ಘಟನೆಗಳು
[ಬದಲಾಯಿಸಿ]- ಡರ್ಬೆಶೈಯರ್ ನ ಚೆಸ್ಟರ್ ಫೀಲ್ಡ್ ನಲ್ಲಿರುವ ವಸ್ತು ಸಂಗ್ರಹಾಲವು ಒಂದು ಇಡೀ ಕೊಠಡಿ ತುಂಬಾ ಸ್ಟಿಫನ್ಸನ್ ಅವರ ಚಿರಸ್ಮರ್ಣೀಯ ವಸ್ತುಗಳು ಆಗಿನ ಘಟನೆಗಳನ್ನು ನೆನಪಿಗೆ ತರುತ್ತವೆ. ನೇರವಾದ ದಪ್ಪನೆಯ ಗಾಜಿನ ಕೊಳವೆಗಳು, ಸೌತೆಕಾಯಿಗಳು ನೇರವಾಗಿ ಬೆಳೆಯುವಂತೆ ಮಾಡುವ ಉದ್ದೇಶಕ್ಕಾಗಿ ಇವುಗಳ ಉಪಯೋಗ ಮಾಡಲಾಗಿತ್ತು.
- ಈ ಚೆಸ್ಟರ್ ಫೀಲ್ಡ್ ಮ್ಯುಜಿಯಮ್ ಸ್ಟಿಫನ್ಸನ್ ಮೆಮೊರಿಯಲ್ ಹಾಲ್ ನೊಳಗಡೆಗೇ ಇದೆ.(ಇದರಲ್ಲಿ ಪೊಮೊಗ್ರೆನೇಟ್ ಥೆಯಟರ್-ಕೂಡ ಇದ್ದು ಇದನ್ನು ಈ ಮೊದಲು ಚೆಸ್ಟರ್ ಫೀಲ್ಡ್ ಸಿವಿಕ್ ಥೆಯಟರ್ ಎಂದು ಕರೆಯಲಾಗುತ್ತಿತ್ತು.)ಅದಲ್ಲದೇ ಇದು ಸ್ಟಿಫನ್ಸನ್ ಪ್ಲೇಸ್ ಗೆ ನಿಕಟವಾಗಿದೆ, ಅಂದರೆ ಟಾಪ್ಟನ್ ಹೌಸ್ ನಲ್ಲಿನ ಸ್ಟಿಫನ್ಸನ್ ಅವರ ಮನೆ ಮತ್ತು ಟ್ರಿನಿಟಿ ಚರ್ಚ್ ನಲ್ಲಿನ ವಿಶ್ರಾಂತಿ ಸ್ಥಳಕ್ಕೆ ಈ ಫೈನಲ್ ಹೋಮ್ ಮಧ್ಯದಲ್ಲಿದೆ.
ಶೈಕ್ಷಣಿಕ ಕಟ್ಟಡಗಳು
[ಬದಲಾಯಿಸಿ]ಸ್ಟಾಕ್ಟನ್-ಆನ್-ಟೀಸ್ ನ ಕ್ಯಾಂಪಸ್ ನಲ್ಲಿರುವ ಜಾರ್ಜ್ ಸ್ಟಿಫನ್ಸನ್ ಕಾಲೇಜ್ 2001 ರಲ್ಲಿ ಆರಂಭವಾಯಿತು. ಇದು ಯುನ್ವರ್ಸಿಟಿ ಆಫ್ ದುರಾಮ್ಸ್ ಅಡಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಸ್ಟೀಫನ್ಸನ್ ಅವರ ನೆನಪಿಗಾಗಿ ದಿ ರಾಕೆಟ್ ಎಂಬ ಹೆಸರಿಡುವ ಮೂಲಕ ಸ್ಮರಿಸಲಾಗುತ್ತದೆ. ಅದಲ್ಲದೇ ಕಿಲ್ಲಿಂಗ್ ವರ್ತ್ ನಲ್ಲಿ ಅವರು ಮತ್ತು ಅವರ ಪುತ್ರನ ಹೆಸರಲ್ಲಿ ಜಾರ್ಜ್ ಸ್ಟಿಫನ್ಸನ್ ಹೈಸ್ಕೂಲ್ ಗೆ ಅವರ ಹೆಸರಿಡಲಾಗಿದೆ. ಅಷ್ಟೇ ಅಲ್ಲದೇ ನಾರ್ತ್ ಶೀಲ್ಡ್ಸ್ ನಲ್ಲಿರುವ ಸ್ಟಿಫನ್ಸನ್ ರೈಲ್ವೆ ಮ್ಯುಜಿಯಮ್ ಹಾಗು ಸ್ಟಿಫನ್ಸನ್ ಲೊಕೊಮೊಟಿವ್ ಸೊಸೈಟಿ ಎಂದು ನಾಮಕರಣ ಮಾಡಲಾಗಿದೆ. ಡಾರ್ಲಿಂಗ್ಟನ್ ನಲ್ಲಿನ SEBD ಯು ಬಿಮೌಂಟ್ ಹಿಲ್ ಸ್ಕೂಲ್ ನ ಘಟಕವಾಗಿದೆ; ಇದಕ್ಕೆ ಸ್ಟಿಫನ್ಸನ್ ಸೆಂಟರ್ ಎನ್ನಲಾಗುತ್ತಿದ್ದು ಜಾರ್ಜ್ ಸ್ಟಿಫನ್ಸನ್ ಅವರ ಹೆಸರಿಡಲಾಗಿದೆ.
ಪ್ರತಿಮೆಗಳು ಹಾಗೂ ಸ್ಮಾರಕಗಳು
[ಬದಲಾಯಿಸಿ]ಅವರ ಬದುಕು ಮತ್ತು ಸಾಧನೆಗಳ ಪ್ರತೀಕವಾಗಿ ಸ್ಟಿಫನ್ಸನ್ ಅವರ ಕಂಚಿನ ಪ್ರತಿಮೆಯೊಂದನ್ನು ಚೆಸ್ಟರ್ ಫೀಲ್ಡ್ ರೈಲ್ವೆ ಸ್ಟೇಶನ್ ನಲ್ಲಿ ಅನಾವರಣಗೊಳಿಸಲಾಗಿದೆ.(ಟಾಪ್ಟನ್ ಹೌಸ್ ಗಿಂತ ಹೆಚ್ಚು ಖ್ಯಾತಿ ಪಡೆದಿದೆ.ಇಲ್ಲಿ ಸ್ಟಿಫನ್ಸನ್ ತಮ್ಮ ಕೊನೆಯ ಹತ್ತು ವರ್ಷಗಳನ್ನು ಇಲ್ಲಿ ಕಳೆದಿದ್ದರು.)ಈ ರೈಲ್ವೆ ನಿಲ್ದಾಣಕ್ಕೆ ಕಳೆದ 28 ಅಕ್ಟೋಬರ್ 2005 ರಲ್ಲಿ ಅಭಿವೃದ್ಧಿಯ ಕೊನೆಯ ಕ್ಷಣದ ಅಗತ್ಯ ಗುರುತುಗಳನ್ನು ಮಾಡಲಾಗಿದೆ. ಅದೇ ಸಮಯದಲ್ಲಿ ರಾಕೆಟ್ ನ ಪೂರ್ಣ-ಗಾತ್ರ ಪ್ರಮಾಣದ ಸಕ್ರಿಯ ಪ್ರತಿಕೃತಿಯೊಂದನ್ನು (ಅದಕ್ಕೆ ಬುಲೆಟ್ ಎಂಬ ಹೆಸರಿತ್ತು.) ಅಲ್ಲಿ ಪ್ರದರ್ಶನಕ್ಕಾಗಿ ಇಡಲಾಗಿತ್ತು.ಅದನ್ನು ಈ ಮೊದಲು ಚೆಸ್ಟರ್ ಫೀಲ್ಡ್ ಮಾರ್ಕೆಟ್ ಫೆಸ್ಟಿವಲ್ ನಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿತ್ತು. ನಿವ್ ಕ್ಯಾಸ್ಟಲ್ ನ ನೆವಿಲ್ಲೆ ಸ್ಟ್ರೀಟ್ ನಲ್ಲಿ ಪೂರ್ಣ ಪ್ರಮಾಣದ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿರುವ ಜಾರ್ಜ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ.ಇದು ದಿ ಲಿಟರರಿ ಅಂಡ್ ಫಿಲಾಸಫಿಕಲ್ ಸೊಸೈಟಿ ಮತ್ತು ದಿ ಮೈನಿಂಗ್ ಇನ್ ಸ್ಟಿಟ್ಯುಟ್ ಕಟ್ಟಡಗಳ ಮುಂದೆ ಎದುರಿಗೇ ಮುಖಮಾಡಿ ನಿಂತಿದೆ.ಇದಕ್ಕೆ ಹತ್ತಿರದಲ್ಲೇ ನಿವ್ ಕ್ಯಾಸ್ಟಲ್ ರೈಲ್ವೆ ಸ್ಟೇಶನ್ ಇದೆ.
ಬ್ಯಾಂಕ್ ನ ನೋಟ್ ಗಳು
[ಬದಲಾಯಿಸಿ]ಇತ್ತೀಚಿಗೆ 1990 ರಿಂದ 2003 ರ ವರೆಗೆ ಬ್ಯಾಂಕ್ ಆಫ್ ಇಂಗ್ಲೆಂಡ್ ಹೊರಡಿಸಿದ E £5 ಸಿರೀಸ್ ನ ಕರೆನ್ಸಿ ನೋಟ್ ಗಳ ಹಿಮ್ಮೊಗದಲ್ಲಿ ಸ್ಟಿಫನ್ಸನ್ ಅವರ ಭಾವಚಿತ್ರವನ್ನು ಮುದ್ರಿಸಲಾಗಿತ್ತು. ಅವರ ರಾಕೆಟ್ ಸ್ಟೀಮ್ ಎಂಜಿನ್ ನಿರ್ಮಾಣದಲ್ಲಿ ಸಹ ಅದರ ಪಕ್ಕದಲ್ಲಿಯೇ ಸ್ಟಿಫನ್ಸನ್ ಅವರ ಚಹರೆಯನ್ನು ಕೆತ್ತಲಾಗಿದೆ.ಅದಲ್ಲದೇ ಸ್ಟಾಕ್ಟನ್ ದಿಂದ ಡಾರ್ಲಿಂಗ್ಟನ್ ರೈಲ್ವೆ ವರೆಗಿರುವ ಸ್ಕೆರ್ನೆ ಸೇತುವೆಯ ಭಾಗದಲ್ಲಿಯೂ ಸ್ಟಿಫನ್ಸನ್ ಅವರ ಭಾವ ಚಿತ್ರವನ್ನು ಕೆತ್ತಲಾಗಿದೆ. ಆದರೆ ಅವರ ಭಾವಚಿತ್ರವನ್ನು 2003 ರಲ್ಲಿ ತೆಗೆದು ಹಾಕಿ ಎಲೆಜಾಬೆತ್ ಫ್ರಾಯ್ ಅವರದನ್ನು ಕೆತ್ತಲಾಗಿದೆ.[೯]
ಇವನ್ನೂ ಗಮನಿಸಿ
[ಬದಲಾಯಿಸಿ]- ಹಿಸ್ಟರಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ.
- ಕೈಗಾರಿಕಾ ಕ್ರಾಂತಿ
- ರೈಲು (ಟ್ರೇನ್)
- ರಾಬರ್ಟ್ ಸ್ಟಿಫನ್ಸನ್
- ರಾಬರ್ಟ್ ಸ್ಟಿಫನ್ಸನ್ ಅಂಡ್ ಕಂಪನಿ
ಉಲ್ಲೇಖಗಳು
[ಬದಲಾಯಿಸಿ]- ↑ Kirby, M. W. (1984). "Stephenson, George (1781–1848)". Oxford Dictionary of National Biography (2 ed.). Oxford, England: Oxford University Press.
- ↑ ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ Davies, Hunter (1975). George Stephenson. Weidenfeld and Nicolson. ISBN 0-297-76934-0.
- ↑ "Geordie". Oxford English Dictionary (2 ed.). Oxford, England: Oxford University Press. 1989.
- ↑ ಸ್ಮೈಲ್ಸ್(1857)
- ↑
- ಪೌಲ್ ರೆನಾಲ್ಡ್ಸ್, 'ಜಾರ್ಜ್ ಸ್ಟಿಫನ್ಸನ್ಸ್ 1819 ಲಾನ್ಸ್ ಮ್ಲೆಟ್ ಲೊಕೊಮೊಟಿವ್ ' ಇನ್ ಎಂ.ಜೆ.ಟಿ. ಲೆವಿಸ್(ed.), ಅರ್ಲಿ ರೈಲ್ವೆಸ್ 2: ಪೇಪರ್ಸ್ ಫ್ರಾಮ್ ದಿ ಸೆಕೆಂಡ್ ಇಂಟರ್ ನ್ಯಾಶನಲ್ ಅರ್ಲಿ ರೈಲ್ವೆಸ್ ಕಾನ್ ಫೆರೆನ್ಸ್ (ಲಂಡನ್: ನಿವ್ ಕೊಮನ್ ಸೊಸೈಟಿ, 2003), pp 165–76
- ↑ Nock, Oswald (1955). "Building the first main lines". The Railway Engineers. London: Batsford. p. 62.
- ↑ "Railway History". Rainhill Parish Council. Archived from the original on 2011-08-25. Retrieved 2011-05-17.
- ↑ Simmons, Jack and Biddle, Gordon (1997). The Oxford companion to British railway history. Oxford University Press. pp. 45–47. ISBN 0-19-211697-5.
{{cite book}}
: CS1 maint: multiple names: authors list (link) - ↑ "Withdrawn banknotes reference guide". Bank of England. Archived from the original on 2011-06-10. Retrieved 2008-10-17.
ಜೀವನ ಚರಿತ್ರೆಯ ಕೃತಿಗಳು
[ಬದಲಾಯಿಸಿ]- Smiles, Samuel (1857). The Life of George Stephenson. London.
{{cite book}}
: Cite has empty unknown parameter:|coauthors=
(help)CS1 maint: location missing publisher (link) - Davies, Hunter (2004). George Stephenson: The Remarkable Life of the Founder of Railways. Stroud: Sutton Publishing. ISBN 978-0-7509-3795-5.
{{cite book}}
: Cite has empty unknown parameter:|coauthors=
(help) - Rolt, L.T.C. (1960). George and Robert Stephenson: The Railway Revolution. London: Penguin. ISBN 978-0-14-007646-2.
{{cite book}}
: Cite has empty unknown parameter:|coauthors=
(help) - Ross, David (2010). George and Robert Stephenson: A Passion for Success. Stroud: History Press. ISBN 978-0-752-452777.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಜೀವನ ವೃತ್ತಾಂತ Archived 2006-08-03 ವೇಬ್ಯಾಕ್ ಮೆಷಿನ್ ನಲ್ಲಿ.
- ಜೀವನ ವೃತ್ತಾಂತ Archived 2007-03-16 ವೇಬ್ಯಾಕ್ ಮೆಷಿನ್ ನಲ್ಲಿ.
- ಜೀವನ ವೃತ್ತಾಂತ
- ಸ್ಟಿಫನ್ಸನ್ ರ ಜನ್ಮಸ್ಥಳ Archived 2008-02-15 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 maint: multiple names: authors list
- Articles with hCards
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: empty unknown parameters
- CS1 maint: location missing publisher
- Commons link from Wikidata
- Persondata templates without short description parameter
- 1781ರಲ್ಲಿ ಜನಿಸಿದವರು
- 1848 ರಲ್ಲಿ ನಿಧನ ಹೊಂದಿದವರು
- 18ನೇ-ಶತಮಾನದ ಇಂಗ್ಲಿಷ್ ಜನರು
- 19ನೇ-ಶತಮಾನದ ಇಂಗ್ಲಿಷ್ ಜನರು
- ಕೈಗಾರಿಕಾ ಕ್ರಾಂತಿಯ ಜನರು
- ಇಂಗ್ಲಿಷ್ ಆವಿಷ್ಕಾರಕರು
- ಉಗಿಯಂತ್ರ ಎಂಜಿನಿಯರುಗಳು
- ಬ್ರಿಟಿಷ್ ರೈಲ್ವೆ ಮೆಕ್ಯಾನಿಕಲ್ ಎಂಜಿನಿಯರ್ಸ್
- ಬ್ರಿಟಿಷ್ ರೈಲ್ವೆ ಪ್ರವರ್ತಕರು
- ಇಂಗ್ಲೀಷ್ ಸಿವಿಲ್ ಎಂಜಿನಿಯರ್ಸ್
- ಲೊಕೊಮೊಟಿವ್ ಬಿಲ್ಡರ್ಸ್ ಅಂಡ್ ಡಿಸೈನರ್ಸ್
- ಸ್ಟಾಕ್ ಟಾನ್-ಆನ್-ಟೀಸ್ ಬರೊ
- ವೆಲಮ್ ನ ಜನರು
- ರೈಲ್ವೆ ಸಾರಿಗೆಯಲ್ಲಿ ಬ್ರಿಟಿಶ್ ಜನರು
- ಸ್ಟರ್ಲಿಂಗ್ ಬ್ಯಾಂಕ್ನೋಟುಗಳ ಮೇಲೆ ಚಿತ್ರಿಸಲಾಗಿರುವ ಜನರು
- ಡಾಲಿಂಗ್ಟನ್(ಬರೊ)
- ಇಂಗ್ಲಿಷ್ ಮೆಕ್ಯಾನಿಕಲ್ ಎಂಜಿನಿಯರ್ಸ್
- ಯಂತ್ರವಿಜ್ಞಾನ