ವಿಷಯಕ್ಕೆ ಹೋಗು

ಜಿಮ್ ಕಾರ್ಬೆಟ್ (ಬೇಟೆಗಾರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Edward James "Jim" Corbett
Jim Corbett
ಜನನ(೧೮೭೫-೦೭-೨೫)೨೫ ಜುಲೈ ೧೮೭೫
ಮರಣApril 19, 1955(1955-04-19) (aged 79)
ರಾಷ್ಟ್ರೀಯತೆBritish
ವೃತ್ತಿ(ಗಳು)hunter, naturalist, writer

ಎಡ್ವರ್ಡ್ ಜೇಮ್ಸ್ "ಜಿಮ" ಕಾರ್ಬೆಟ್ (೨೫ ಜುಲೈ೧೮೭೫ ನೈನಿತಾಲ್,ಭಾರತ-೧೯ ಏಪ್ರಿಲ್ ೧೯೫೫ ನೆಯೆರಿ ಕೀನ್ಯಾ);ಇವರೊಬ್ಬ ಬ್ರಿಟಿಷ್ ಬೇಟೆಗಾರ, ಪರಿಸರ ಸಂರಕ್ಷಕ ಮತ್ತು ನಿಸರ್ಗವಾದಿಯಾಗಿದ್ದರು.ನರ-ಭಕ್ಷಕ ದೊಡ್ಡ ಹುಲಿಗಳು ಮತ್ತು ಚಿರತೆಗಳನ್ನು ಅವರು ಭಾರತದಲ್ಲಿ ಬೇಟೆಯಾಡಿದ್ದರು.

ಕಾರ್ಬೆಟ್ ಅವರು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಕರ್ನಲ್ ಶ್ರೇಣಿಯಲ್ಲಿ ಕೆಲಸ ಮಾಡುತ್ತಿದ್ದರಲ್ಲದೇ ಯುನೈಟೆಡ್ ಪ್ರಾವಿನ್ಸಿಸ್ ಸರ್ಕಾರದ ಕರೆಯ ಮೇರೆಗೆ ಆಗಾಗ ಭಾರತಕ್ಕೆ ಭೇಟಿ ನೀಡುತ್ತಿದ್ದರು.ಯಾಕೆಂದರೆ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಉತ್ತರ ಖಂಡ್ ಗಳಲ್ಲಿ ಮನುಷ್ಯರ ಪ್ರಾಣಕ್ಕೆ ಎರವಾದ ನರ-ಭಕ್ಷಕ ಹುಲಿಗಳು ಮತ್ತು ಚಿರತೆಗಳ ಬೇಟೆಗೆ ಅವರನ್ನು ನೇಮಿಸಲಾಗುತ್ತಿತ್ತು.ಈ ರಾಜ್ಯಗಳ ಘರವಾಲ್ ಮತ್ತು ಕುಮಾನ್ ಪ್ರದೇಶಗಳ ಗ್ರಾಮಗಳಲ್ಲಿ ಇವುಗಳ ಉಪಟಳವಿತ್ತು. ಇಂತಹ ನರ-ಭಕ್ಷಕ ಪ್ರಾಣಿಗಳನ್ನು ವಧಿಸುವ ಅವರ ಯಶಸ್ಸು ಕುಮಾನ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗೌರವ ಮತ್ತು ಖ್ಯಾತಿಯನ್ನೂ ತಂದುಕೊಟ್ಟಿತ್ತು.ಹಲವರು ಅವರನ್ನು ಸಾಧು (ಸಂತ) ಎಂದೂ ಕರೆಯುತ್ತಿದ್ದರು.

ಕಾರ್ಬೆಟ್ ಓರ್ವ ಅತ್ಯಾಸಕ್ತಿಯ ಛಾಯಾಚಿತ್ರಗ್ರಾಹಕ;ತಮ್ಮ ನಿವೃತ್ತಿ ನಂತರ ಮ್ಯಾನ್-ಈಟರ್ಸ್ ಆಫ್ ಕುಮಾನ್ , ಜಂಗಲ್ ಲೊರೆ ಮತ್ತು ಇನ್ನಿತರ ಕೃತಿಗಳನ್ನು ರಚಿಸಿದರು;ಅವುಗಳಲ್ಲಿ ಬೇಟೆಗಳ ವಿವರ ಮತ್ತು ಅನುಭವಗಳು ಅದರಿಂದಾದ ಟೀಕೆ-ಸಂತಸ-ಉತ್ಸಾಹಗಳು ಮತ್ತು ವಾಣಿಜ್ಯೋದ್ದೇಶದ ಯಶಸ್ಸುಗಳನ್ನು ಚಿತ್ರಿಸಿದ್ದಾರೆ. ಭಾರತದ ವನ್ಯಜೀವಿ ವರ್ಗವು ನಿರ್ನಾಮವಾಗುವುದನ್ನು ರಕ್ಷಿಸಬೇಕಾದುದು ಅತ್ಯಗತ್ಯ ಎಂದು ಕಾರ್ಬೆಟ್ ನಿಸ್ಸಂಕೋಚವಾಗಿ ಹೇಳಿದರು. ಕುಮಾನ್ ನಲ್ಲಿರುವ ದಿ ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್ ಗೆ ಅವರ ಗೌರವಾರ್ಥ ೧೯೫೭ ರಲ್ಲಿ ಈ ಹೆಸರನ್ನಿಡಲಾಗಿದೆ.

ಆರಂಭಿಕ ಜೀವನ

[ಬದಲಾಯಿಸಿ]

ಎಡ್ವರ್ಡ್ ಜೇಮ್ಸ್ ಕಾರ್ಬೆಟ್ ಮೂಲತಃ ಐರಿಶ್ ಮನೆತನಕ್ಕೆ ಸೇರಿದವರಾಗಿದ್ದಾರೆ.ಹಿಮಾಲಯಗಳ ಪರ್ವತದಡಿಯಲ್ಲಿನ ನೈನಿತಾಲ್ ಪಟ್ಟಣವು ಕುಮಾನ್ ಪ್ರದೇಶಕ್ಕೆ ಹತ್ತಿರವಿದೆ.ಇದು ಆಗ ಯುನೈಟೆಡ್ ಪ್ರಾವಿನ್ಸಿಸ್ ಗೆ ಸೇರಿತ್ತು.(ಸದ್ಯ ಭಾರತದ ಉತ್ತರಖಂಡ್ ರಾಜ್ಯವಾಗಿದೆ.) ಜಿಮ್ ೧೩ ಮಕ್ಕಳಿದ್ದ ಅತ್ಯಂತ ದೊಡ್ಡ ಕುಟುಂಬದಲ್ಲಿ ಎಂಟನೆಯ ಮಗುವಾಗಿ ಜನಿಸಿದರು.ವಿಲಿಯಮ್ ಕ್ರಿಸ್ಟಾಫರ್ ಮತ್ತು ಮೇರಿ ಜೇನ್ ಕಾರ್ಬೆಟ್ ಅವರ ತಂದೆ-ತಾಯಿಗಳು. ಅವರ ತಂದೆ-ತಾಯಿಗಳು ೧೮೬೨ ರಲ್ಲಿ ನೈನಿತಾಲ್ ಗೆ ಸ್ಥಳಾಂತರವಾದರು.ಕ್ರಿಸ್ಟಾಫರ್ ಕಾರ್ಬೆಟ್ ಈ ನಗರದ ಪೋಸ್ಟ್ ಮಾಸ್ಟರ್ ಆಗಿ ನೇಮಕವಾದಾಗ ಅವರ ಕುಟುಂಬ ಇಲ್ಲಿಗೆ ಬಂದಿತು. ಚಳಿಗಾಲದಲ್ಲಿ ಕುಟುಂಬವು ಬೆಟ್ಟದ ಬುಡದಲ್ಲಿ ತಮ್ಮ ವಾಸಸ್ಥಾನ ಆಯ್ದುಕೊಳ್ಳುತ್ತಿತ್ತು.ಅಲ್ಲಿ ಅವರು ಕಾಲಾಧುಂಗಿ ಬಳಿ 'ಅರುಂಡೇಲ್' ಎಂಬ ಹಳ್ಳಿ ಕುಟೀರವೊಂದನ್ನು ನಿರ್ಮಿಸಿಕೊಂಡಿದ್ದರು.ನಂತರ ಅದನ್ನೇ ಛೋಟಿ ಹಲ್ದವಾನಿ ಅಥವಾ ಕಾರ್ಬೆಟ್ಸ್ ವಿಲೇಜ್ ಎಂದು ಕರೆಯಲಾಯಿತು. ಅವರ ತಂದೆಯ ನಿಧನಾನಂತರ ಜಿಮ್ ಕೇವಲ ನಾಲ್ಕು ವರ್ಷದವರಾಗಿದ್ದರು;ಹೀಗಾಗಿ ಅವರ ಹಿರಿಯಣ್ಣ ಟಾಮ್ ನೈನಿತಾಲ್ ಪೋಸ್ಟ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸಲಾರಂಭಿಸಿದರು. ಎಳೆವಯಸ್ಸಿನಲ್ಲೇ ಜಿಮ್ ತನ್ನ ಕಾಲಾಧುಂಗಿಯ ಸುತ್ತಮುತ್ತಲಿನ ಪರಿಸರದಿಂದಾಗಿ ವನ್ಯಜೀವಿ ಮತ್ತು ಅರಣ್ಯಗಳ ಬಗ್ಗೆ ಆಕರ್ಷಣೆಗೊಳಪಟ್ಟಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಯಾವ ಪ್ರಾಣಿ,ಯಾವ ಪಕ್ಷಿ ಎಂಬುದನ್ನು ಅವುಗಳ ಧ್ವನಿ ಗುರುತಿಸುವಿಕೆ ಮೇಲೆಯೇ ಪತ್ತೆಹಚ್ಚಲು ಕಲಿತುಕೊಂಡರು.ಅದಕ್ಕೆ ಕಾರಣವೆಂದರೆ ಅವರ ನಿರಂತರ ಪ್ರವಾಸ ಮತ್ತು ಸುತ್ತಾಟಗಳು,ಈ ಅನುಭವ ನೀಡಿದ್ದವು. ಬರಬರುತ್ತಾ ಅವರು ಉತ್ತಮ ಅನ್ವೇಷಕ ಮತ್ತು ಬೇಟೆಗಾರನಾಗಿ ಮಾರ್ಪಟ್ಟರು. ವೋಕ್ ಒಪನಿಂಗ್ ಸ್ಕೂಲ್ ನಲ್ಲಿ ಜಿಮ್ ತಮ್ಮ ಓದು ಪೂರ್ಣಗೊಳಿಸಿದ್ದಾರೆ.ನಂತರ ಈ ಶಾಲೆಯನ್ನು ಸ್ಮಿತ್ ಕಾಲೇಜ್ ಎಂದು ಮರುನಾಮಕರಣ ಮಾಡಲಾಯಿತು.ಅದಲ್ಲದೇ ಅದನ್ನು ಡೈಯೊಸೆಸೆ ಬಾಯ್ಸ್ ಸ್ಕೂಲ್ ಎಂದೂ (ಮುಂದೆ ಅದನ್ನೇ ಶೆರ್ವುಡ್ ಕಾಲೇಜ್ )ಎಂದು ನೈನಿತಾಲ್ ನಲ್ಲಿ ಮರುನಾಮಕರಣ ಮಾಡಲಾಯಿತು. ಅವರು ತಮ್ಮ ೧೯ ನೆಯ ವಯಸ್ಸಿಗೆ ಕಾಲಿಡುವ ಮುಂಚೆಯೇ ಶಾಲಾಭ್ಯಾಸ ಬಿಟ್ಟು ಬೆಂಗಾಲ್ ಅಂಡ್ ನಾರ್ತ್ ವೆಸ್ಟರ್ನ್ ರೈಲ್ವೆಯಲ್ಲಿ ಕೆಲಸ ಪಡೆದರು.ಆರಂಭದಲ್ಲಿ ಪಂಜಾಬ್ ನ ಮಾನಕಪುರದಲ್ಲಿ ಇಂಧನ ಪರೀಕ್ಷಕನೆಂದು ಕೆಲಸ ನಿರ್ವಹಿಸಿದರು.ನಂತರದ ದಿನಗಳಲ್ಲಿ ಬಿಹಾರದಲ್ಲಿ ಗಂಗಾ ನದಿಯ ಮೊಕ್ಮೆಹ್ ಘಾಟ್ ನಲ್ಲಿ ಟ್ರಾನ್ಸ್-ಶಿಪ್ಮೆಂಟ್ ಗೆ ಸರಕು ಸಾಗಣೆಯ ಗುತ್ತಿಗೆದಾರರಾಗಿ ಕೆಲಸ ಮಾಡಿದರು.

ನರಭಕ್ಷಕ ಹುಲಿಗಳ ಬೇಟೆಗಾರ

[ಬದಲಾಯಿಸಿ]
ಮನುಷ್ಯರನ್ನು ತಿನ್ನುವ ರುದ್ರಪ್ರಯಾಗದ ಚಿರತೆ ಕೊಂದ ನಂತರ ಜಿಮ್ ಕಾರ್ಬೆಟ್ 1925 ರಲ್ಲಿ

ಆಗ ೧೯೦೭ ಮತ್ತು ೧೯೩೮ ರ ಅವಧಿಯಲ್ಲಿ ಕಾರ್ಬೆಟ್ ಒಟ್ಟು ೧೯ ಹುಲಿಗಳು ಮತ್ತು೧೪ ಚಿರತೆಗಳನ್ನು ಬೇಟೆಯಾಡಿದ ದಾಖಲೆ ಇದೆ.ಹೀಗೆ ೩೩ ನರಭಕ್ಷಕ ಪ್ರಾಣಿಗಳನ್ನು ವಧಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಈ ಬೃಹತ್ ಗಾತ್ರದ ಪ್ರಾಣಿಗಳು ಸುಮಾರು ೧,೨೦೦ ಪುರುಷರು,ಮಹಿಳೆಯರು ಮತ್ತು ಮಕ್ಕಳನ್ನು ಕೊಂದು ಹಾಕಿದ್ದವು. ಮೊದಲಿಗೆ ಚಂಪವಾಟ್ ಹುಲಿಯನ್ನು, ಚಂಪವಾಟ್ ನಲ್ಲಿ ಬೇಟೆಯಾಡಿ ಕೊಂದಿದ್ದು, ಅದು ಸುಮಾರು ೪೩೬ ಜನರ ಸಾವಿಗೆ ಕಾರಣವಾಗಿತ್ತೆಂದು ದಾಖಲಾಗಿದೆ. ಅದಲ್ಲದೇ ಅವರು ಪನಾರ್ ಚಿರತೆಯೊಂದನ್ನು ಗುಂಡಿಟ್ಟು ಕೊಂದಿದ್ದಾರೆ. ಅದು ಸುಮಾರು ೪೦೦ ಜನರನ್ನು ಕೊಂದು ಹಾಕಿತ್ತೆಂದು ಹೇಳಲಾಗಿದೆ. ಈ ಚಿರತೆಯ ತಲೆಬುರುಡೆ ಮತ್ತು ದಂತ ವಿನ್ಯಾಸ ಪರೀಕ್ಷಿಸಿದಾಗ ಅದಕ್ಕೆ ವಸಡೊಳಗೆ ದಂತ ರೋಗವೊಂದು ಬೆಳವಣಿಗೆಯ ಹಂತದಲ್ಲಿದ್ದುದು ಕಾಣಿಸಿದೆ.ಅದರ ಈ ಭಾಗ ಕೊಳೆಯುವ ಮಟ್ಟಕ್ಕೆ ತಲುಪಿತ್ತೆಂದು ಹೇಳಲಾಗುತ್ತದೆ.ಹೀಗಾಗಿ ಅದು ಕಾಡು ಪ್ರಾಣಿಗಳನ್ನು ತಿನ್ನಲಾಗದೇ ನರಭಕ್ಷಕವಾಗಿ ಬೆಳೆದಿತ್ತೆಂದೂ ಹೇಳಲಾಗಿದೆ. ಇದರಲ್ಲಿ ಬಹಳ ಪ್ರಮುಖವಾದ ನರಭಕ್ಷಕವಾಗುವಲ್ಲಿ ಕುಖ್ಯಾತಿ ಗಳಿಸಿದ ರುದ್ರಪ್ರಯಾಗದ ಚಿರತೆ;ಇದು ಹಿಂದೂ ಧರ್ಮದವರಿಗೆ ಪವಿತ್ರ ಸ್ಥಳಗಳಾದ ಕೇದಾರನಾಥ್ ಮತ್ತು ಬದರಿನಾಥ್ ಗಳಿಗೆ ಬರುವ ಯಾತ್ರಾರ್ಥಿಗಳಲ್ಲಿ ಸುಮಾರು ಹತ್ತು ವರ್ಷಗಳಿಗೂ ಅಧಿಕ ಕಾಲದ ವರೆಗೆ ಭಯಹುಟ್ಟಿಸಿತ್ತು.

ಇನ್ನುಳಿದ ನರ-ಭಕ್ಷಕ ಪ್ರಾಣಿಗಳೆಂದರೆ ತಲ್ಲಾ-ದೆಸ್ ನರ-ಭಕ್ಷಕ,ಮೋಹನ್ ನರ-ಭಕ್ಷಕ,ಥಕ್ ನರ-ಭಕ್ಷಕ ಮತ್ತು ಚೌಗಢ್ ಹೆಣ್ಣು ಹುಲಿ ಪ್ರಮುಖವಾಗಿವೆ.

ಮೃತಪಟ್ಟ ಪ್ರಾಣಿಗಳು,ತಲೆ ಬುರುಡೆಗಳು ಮತ್ತು ಕೆಲವು ಕಾಯ್ದಿಟ್ಟ ದೇಹದ ಭಾಗಗಳನ್ನು ಪರಿಶೀಲಿಸಿ ವಿಶ್ಲೇಷಿಸಿದಾಗ ಬಹಳಷ್ಟು ನರ-ಭಕ್ಷಕಗಳು ಒಂದಿಲ್ಲ ಒಂದು ಕಾಯಿಲೆಯಿಂದ ನರಳುತ್ತಿರುವುದು ಅಥವಾ ಮುಳ್ಳು ಹಂದಿಯೊಂದಿಗಿನ ಕಾದಾಟದಲ್ಲಿ ಚರ್ಮದೊಳಗೆ ಆಳ ಗಾಯಗಳು ಇಲ್ಲವೆ ಬಂದೂಕಿನಿಂದಾದ ಹಳೆ ಗಾಯಗಳು ಶಾಶ್ವತವಾಗಿ ಮಾಯದೇ ಹಾಗೆಯೇ ಉಳಿದಿದ್ದು ಕಂಡು ಬಂದಿದೆ. ಥಕ್ ನರ-ಭಕ್ಷಕ ಹೆಣ್ಣುಹುಲಿಯ ಮೃತದೇಹವನ್ನು ಕಾರ್ಬೆಟ್ ಸಮಗ್ರವಾಗಿ ಪರಿಶೀಲಿಸಿದಾಗ ಎರಡು ಬಂದೂಕಿನಿಂದಾಗ ಹಳೆಯ ಗಾಯಗಳು ಕಂಡುಬಂದವು.ಅದರ ಭುಜದಲ್ಲಾದ ಒಂದು ಗಾಯವು ನಂಜಾಗಿ ಕೀವುಗಟ್ಟಿತ್ತು.ಕಾರ್ಬೆಟ್ ಹೇಳುವ ಪ್ರಕಾರ ಈ ಹೆಣ್ಣುಹುಲಿಯು ನರ-ಭಕ್ಷಕವಾಗಿ ಮಾರ್ಪಟ್ಟಿದ್ದರಿಂದ ಈ ನಂಜು ವಿಪರೀತವಾಗಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಮ್ಯಾನ್ ಈಟರ್ಸ್ ಆಫ್ ಕುಮಾನ್ , ನ ಮುನ್ನುಡಿಯಲ್ಲಿ ಕಾರ್ಬೆಟ್ ಹೀಗೆ ಬರೆಯುತ್ತಾರೆ,

"ನರ-ಭಕ್ಷಕವಾದ ಈ ಹುಲಿಗೆ ಗಾಯಗಳಾದ ಕಾರಣವೆಂದರೆ ಗುರಿಯಿಲ್ಲದ ಬಂದೂಕು ಹಾರಿಸಿದ್ದು ಅದಕ್ಕೆ ಗುಂಡು ತಗುಲಿ ಗಾಯಗೊಂಡಿರಬಹುದು; ಮತ್ತು ಮಾಯಲು ಸರಿಯಾದ ಕಾಳಜಿ ತೆಗೆದುಕೊಂಡಿಲ್ಲ ಎಂಬುದೂ ತಿಳಿದು ಬಂದಿದೆ,ಅಥವಾ ಆ ಹುಲಿಯು, ಮುಳ್ಳು ಹಂದಿಯೊಂದನ್ನು ಕೊಲ್ಲಲು ಹೋಗಿ ತನ್ನ ಕೋಪದಲ್ಲಿ ಗಾಯ ಮಾಡಿಕೊಂಡಿರಬಹುದಾಗಿದೆ."

ಆಗ ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ರಿಗೆ ಹುಲಿಗಳು ಮತ್ತು ಇನ್ನಿತರ ವನ್ಯಪ್ರಾಣಿಗಳನ್ನು ಕೊಲ್ಲುವುದೆಂದರೆ ಷೋಕಿಗಾಗಿ ಮಾಡುವ ಒಂದು 'ಕ್ರೀಡೆ'ಯ ವಿಚಾರವೆನಿಸಿತ್ತು.ಅದಲ್ಲದೇ ಸುಮಾರು ೧೯೦೦ರ ವೇಳೆಗೆ ಹಲವು ನರಭಕ್ಷಕಗಳು ಹಠಾತ್ ಕಾಣಿಸಿಕೊಂಡಿದ್ದು ಕೂಡ ಆಶ್ಚರ್ಯವೇನಲ್ಲ.

ಅಪಾಯಕಾರಿಯಾದ ಇಂತಹ ಬೇಟೆಯ ಕ್ರೀಡೆಯನ್ನು ಕಾರ್ಬೆಟ್ ಒಬ್ಬಂಟಿಯಾಗಿ ಮತ್ತು ಕಾಲ್ನಡಿಗೆಯಲ್ಲಿಯೇ ಹೋಗಿ ನಡೆಸುತ್ತಿದ್ದುದು ಅವರ ಅಚ್ಚು ಮೆಚ್ಚಿನ ಹವ್ಯಾಸವಾಗಿತ್ತು. ಬೇಟೆಗೆ ಹೋಗುವಾಗ ಅವರು ಹೆಚ್ಚಾಗಿ ತಮ್ಮೊಂದಿಗೆ ರಾಬಿನ್ ಎಂಬ ಹೆಸರಿನ ಪುಟ್ಟ ನಾಯಿಯೊಂದನ್ನು ಜೊತೆಗೆ ಕರೆದೊಯ್ಯುತ್ತಿದ್ದರು.ಈ ಶ್ವಾನ ಸಂಗಾತಿ ಬಗ್ಗೆ ತಮ್ಮ ದಿ ಮ್ಯಾನ್-ಈಟರ್ಸ್ ಆಫ್ ಕುಮಾನ್ ನಲ್ಲಿ ಅಧಿಕ ಪ್ರಮಾಣದಲ್ಲಿ ಬರೆದು ಉಲ್ಲೇಖಿಸಿದ್ದಾರೆ. ಬೇರೆಯವರ ಜೀವಗಳನ್ನು ಉಳಿಸಲು ಕಾರ್ಬೆಟ್, ಆಗಾಗ ದೊಡ್ಡ ಪ್ರಮಾಣದ ವೈಯಕ್ತಿಕ ಗಂಡಾಂತರಗಳಿಗೆ ಒಳಗಾಗಿದ್ದಾರೆ. ಭಾರತದಲ್ಲಿ ಇವತ್ತಿಗೂ ಕೂಡಾ ಅವರೊಬ್ಬ ಮಹಾನ್ ಸಂರಕ್ಷಣಾವಾದಿ ಎಂದು ಸ್ಮರಿಸಲಾಗುತ್ತದೆ.ಅವರು ಕಾರ್ಯನಿರ್ವಹಿಸಿದ ಎಲ್ಲಾ ರಂಗಗಳಲ್ಲಿಯೂ ಮೆಚ್ಚುಗೆ ಮತ್ತು ಗೌರವ ಗಳಿಸಿದ್ದನ್ನು ಈಗಲೂ ಕಾಣಬಹುದಾಗಿದೆ.[]

ಬೇಟೆಗಾರ ಪರಿಸರ ಸಂರಕ್ಷಕನಾಗಿದ್ದು

[ಬದಲಾಯಿಸಿ]

ಕಾರ್ಬೆಟ್ ಮೊದಲ ಬಾರಿಗೆ ೧೯೨೦ ರಲ್ಲಿ ಕ್ಯಾಮರಾವೊಂದನ್ನು ಖರೀದಿಸಿದರು.ಅವರ ಮಿತ್ರ ಎಫ್.ಡಬ್ಲು ಚ್ಯಾಂಪಿಯನ್ ಅವರಿಂದ ಸ್ಪೂರ್ತಿ ಪಡೆದು, ಈ ಕ್ಯಾಮರಾದಲ್ಲಿ ಹುಲಿಗಳ ಬಗೆಗಿನ ವಿಷಯಗಳನ್ನು ಸೆರೆ ಹಿಡಿದು ದಾಖಲಿಸಲು ಆರಂಭಿಸಿದರು.[] ಅವರಿಗೆ ಜಂಗಲ್ ಪ್ರದೇಶದ ಬಗ್ಗೆ ನಿಕಟವಾದ ತಿಳಿವಳಿಕೆ ಇದೆ.ಆದ್ದರಿಂದಲೇ ಅತ್ಯುತ್ತಮ ಚಿತ್ರಗಳನ್ನು ಸೆರೆ ಹಿಡಿಯಬೇಕಾದುದು ಕೂಡ ಅಷ್ಟೇ ಸವಾಲಿನ ಕೆಲಸವಾಗಿದೆ.ಯಾವಾಗಲೂ ಪ್ರಾಣಿ ವರ್ಗವು ತುಂಬಾ ಸಂಕೋಚ ಮತ್ತು ನಾಚಿಕೆ ಸ್ವಭಾವವನ್ನು ಸ್ವಾಭಾವಿಕವಾಗಿ ಹೊಂದಿರುತ್ತದೆ.ಇದನನ್ನು ಪರಿಗಣಿಸಿ ಕ್ಯಾಮರಾ ಬಳಸಬೇಕಾಗುತ್ತದೆ. ಹೀಗೆ ದಿನೇ ದಿನೇ ಅವರ ಒಲವು ಹುಲಿಗಳು ಮತ್ತು ಚಿರತೆಗಳೆಡೆಗೆ ವಾಲತೊಡಗಿದಾಗ ಅವರು ಅವುಗಳ ಬೇಟೆಯಾಡುವುದರಲ್ಲಿ ಲೆಕ್ಕಾಚಾರ ಹಾಕಲಾರಂಭಿಸಿದರು.ಅವು ನರಭಕ್ಷಕಗಳಾದರೆ ಅಥವಾ ಸಾಕು ಪ್ರಾಣಿ,ಪಶುಪಕ್ಷಿಗಳಿಗೆ ಅಪಾಯಕಾರಿ ಎನಿಸಿದರೆ ಮಾತ್ರ ಅವುಗಳನ್ನು ಕೊಲ್ಲಲು ಮುಂದಾದರು. ಬ್ಯಾಚಲರ್ ಆಫ್ ಪೌಲಗಢ್ ವನ್ನು ಕೊಂದಿದ್ದರ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದರು.

ಕಾರ್ಬೆಟ್ ಅವರು, ಹುಲಿಗಳ ಸಾವಿನ ಬಗ್ಗೆ ಮತ್ತು ಅವುಗಳ ವಾಸಸ್ಥಾನಗಳ ವಿನಾಶದಿಂದ ಉಂಟಾದ ಅಸ್ಥಿರತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.[] ಅವರು ಶಾಲಾಮಕ್ಕಳ ಗುಂಪುಗಳಿಗೆ ನೈಸರ್ಗಿಕ ಪರಂಪರೆ ಮತ್ತು ಅರಣ್ಯಗಳ ರಕ್ಷಣೆ ಹಾಗು ವನ್ಯ ಜೀವಿಗಳ ಸಂರಕ್ಷಣೆ ಬಗ್ಗೆ ಉಪನ್ಯಾಸ ಮಾಲಿಕೆಗಳನ್ನು ಏರ್ಪಡಿಸುತ್ತಿದ್ದರು.ಈ ಉದ್ದೇಶಕ್ಕಾಗಿ ಯುನೈಟೆಡ್ ಪ್ರಾವಿನ್ಸಸ್ ನಲ್ಲಿ ಅಸೊಶಿಯೇಶನ್ ಫಾರ್ ದಿ ಪ್ರಿಜರ್ವೇಶನ್ ಆಫ್ ಗೇಮ್ ಎಂಬ ಪ್ರತಿಷ್ಠಾನವನ್ನು ಉತ್ತ್ತೇಜಿಸಿದರಲ್ಲದೇ ಆಲ್-ಇಂಡಿಯಾ ಕಾನ್ ಫೆರೆನ್ಸ್ ಫಾರ್ ದಿ ಪ್ರಿಜರ್ವೇಶನ್ ಆಫ್ ವೈಲ್ಡ್ ಲೈಫ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಅವರು ಎಫ್.ಡಬ್ಲ್ಯು ಚ್ಯಾಂಪಿಯನ್ ಅವರ ಜೊತೆ ಸೇರಿ ಭಾರತದಲ್ಲೇ ಪ್ರಥಮ ಬಾರಿಗೆ ಕುಮಾನ್ ಹಿಲ್ಸ್ ನಲ್ಲಿ ರಾಷ್ಟ್ರೀಯ ಉದ್ಯಾನ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಆಗ ಅದೇ ಹೆಯಲಿ ನ್ಯಾಶನಲ್ ಪಾರ್ಕ್ ,[] ಆಗಿತ್ತು. ಆರಂಭದಲ್ಲಿ ಅದಕ್ಕೆ ಲಾರ್ಡ್ ಮಾಲ್ಕೊಲ್ಮ್ ಹೆಯಲಿ ಅವರ ಹೆಸರಿಡಲಾಗಿತ್ತು. ಅವರ ಗೌರವಾರ್ಥ ಉದ್ಯಾನಕ್ಕೆ ೧೯೫೭ ರಲ್ಲಿ ಈ ಮರುನಾಮಕರಣ ಮಾಡಲಾಯಿತು.[]

ಕೀನ್ಯಾದಲ್ಲಿ ವಿಶ್ರಾಂತಿ ಪರ್ವ

[ಬದಲಾಯಿಸಿ]

ಆಗ ೧೯೪೭ ರಲ್ಲಿ ಕಾರ್ಬೆಟ್ ಮತ್ತು ಅವರ ಸಹೋದರಿ ಮ್ಯಾಗೀ ಕೀನ್ಯಾ[] ದ ನೆಯರಿಗೆ ತೆರಳಿದರು.ಅಲ್ಲಿ ಕೂಡ ಅವರು ಬರೆಹವನ್ನು ಮುಂದುವರೆಸಿದರು;ಹುಲಿ,ಚಿರತೆಗಳು ಮತ್ತು ಇನ್ನಿತರ ವನ್ಯಜೀವಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದರ ಬಗ್ಗೆ ಅವರು ಎಚ್ಚರಿಕೆಯ ಗಂಟೆಯಾಗಿ ಅದನ್ನು ನೆನಪಿಸುವುದನ್ನು ಬಿಟ್ಟಿರಲಿಲ್ಲ. ಬೇಟೆಗಾರಿಕೆ ಸಮಯದಲ್ಲಿ ಜಿಮ್ ಕಾರ್ಬೆಟ್ ಟ್ರೀ ಟಾಪ್ಸ್ ಹೊಟೆಲ್ ಜಾಗೆಯಲ್ಲಿ ತಂಗುತ್ತಿದ್ದರು.ದೊಡ್ಡ ಮರವೊಂದರ ಮೇಲೆ ಅವರ ವಾಸಸ್ಥಾನವಾಗಿತ್ತು.ಅದೇ ಜಾಗೆಯಲ್ಲಿ ಪ್ರಿನ್ಸೆಸ್ ಎಲೆಜೆಬೆತ್ ಫೆಬ್ರವರಿ ೫-೬,೧೯೫೨ ರಲ್ಲಿ,ಅಂದರೆ ಆಕೆಯ ತಂದೆ ಕಿಂಗ್ ಜಾರ್ಜ್ VI ಅವರ ಮರಣಾನಂತರದ ಸಮಯದಲ್ಲಿ ಅಲ್ಲಿ ತಂಗಿದ್ದರು.ಕಾರ್ಬೆಟ್ ಆ ಹೊಟೆಲ್ ನ ಸಂದರ್ಶಕರ ನೊಂದಣಿ ಪುಸ್ತಕದಲ್ಲಿ ಇದನ್ನು ನಮೂದಿಸಿದ್ದಾರೆ:

ಮೊಟ್ಟ ಮೊದಲ ಬಾರಿಗೆ ಯುವತಿಯೊಬ್ಬಳು ಮರವೇರಿದ್ದು ವಿಶ್ವದ ಇತಿಹಾಸದಲ್ಲೇ ಸೋಜಿಗದ ಸಂಗತಿ.ಅದೂ ಅಲ್ಲದೇ ಮಹಾರಾಣಿಯೊಬ್ಬಳ ಸಾಹಸ ಕೂಡ ದಾಖಲೆಯಾಗಿದೆ.ಮರುದಿನವೇ ಅದೇ ಯುವರಾಣಿ ಅದೇ ಮರದಿಂದ ಕೆಳಗಿಳಿದಿದ್ದು-ಓ ದೇವರೆ ಆಕೆಗೆ ನಿನ್ನ ಆಶೀರ್ವಾದವಿರಲಿ.

ಜಿಮ್ ಕಾರ್ಬೆಟ್ ತಮ್ಮ ಆರನೆಯ ಪುಸ್ತಕ, ಟ್ರೀ ಟಾಪ್ಸ್ ಪೂರ್ಣಗೊಳಿಸಿದ ನಂತರದ ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ನಿಧನರಾದರು.ಅವರನ್ನು ನೆಯೆರೆಯ ಸೇಂಟ್.ಪೀಟರ್ಸ್ ಆಂಗ್ಲಿಕನ್ ಚರ್ಚ್ ಆವರಣದಲ್ಲಿ ಸಮಾಧಿ ಮಾಡಲಾಯಿತು.

ಕೊಡುಗೆ

[ಬದಲಾಯಿಸಿ]

ಕಾಲಾಧುಂಗಿಯಲ್ಲಿರುವ ಕಾರ್ಬೆಟ್ ಅವರ ವಾಸದ ಮನೆ, ಛೋಟಿ ಹಲ್ದವಾನಿಯನ್ನು ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಯಿತು. ಅವರು ೧೯೧೫ ರಲ್ಲಿ ಕೊಂಡುಕೊಂಡ 221 acres (0.89 km2; 0.345 sq mi)ಗ್ರಾಮವು ಚೌಪಾಲಿ ಎಂಬ ಹೆಸರಿನಲ್ಲಿ ಅಂದರೆ ಸಭಾ ಸ್ಥಳವಾಗಿದೆ; ಇದು ಇನ್ನೂ ತನ್ನ ನೆನಪುಗಳನ್ನು ಆಳವಾಗಿ ತನ್ನಲ್ಲಿ ಉಳಿಸಿಕೊಂಡಿದೆ.ಅಲ್ಲಿರುವ ಮೋತಿ ಹೌಸ್,ಇದನ್ನು ತನ್ನ ಸ್ನೇಹಿತ ಮೋತಿ ಸಿಂಗ್ ಅವರ ನೆನಪಿಗಾಗಿ ಕಟ್ಟಿಸಿದ್ದ.ಅದಲ್ಲದೇ ಕಾರ್ಬೆಟ್ ವಾಲ್,ಎಂಬುದನ್ನು ಕಾಡು ಮೃಗಗಳಿಂದ ರಕ್ಷಣೆಗಾಗಿ ಸುತ್ತಲೂ ಬೇಲಿ ಬೆಳಸಲಾಗಿತ್ತು.ಗ್ರಾಮದ ಸುತ್ತಲೂ ಈ ತೆರನಾದ ಸುಮಾರು 4.5 miles (7.2 km)ಉದ್ದವಾದ ಗೋಡೆ ನಿರ್ಮಾಣ ಮಾಡಲಾಗಿತ್ತು.

ಜಿಮ್ ಕಾರ್ಬೆಟ್ ಅವರ ಮ್ಯಾನ್-ಈಟರ್ಸ್ ಆಫ್ ಕುಮಾನ್ ಕೃತಿಯು ಭಾರತ,ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕದಲ್ಲಿ ಅತ್ಯಂತ ಯಶಸ್ವಿಯಾಯಿತು.ಅಮೆರಿಕಾದ ಬುಕ್-ಆಫ್-ದಿ-ಮಂತ್ ಕ್ಲಬ್ ಪಟ್ಟಿ ಪ್ರಕಾರ ಅದರ ಒಟ್ಟು ೨೫೦.೦೦೦ ಪ್ರತಿಗಳು ಮಾರಾಟ ಕಂಡಿವೆ. ಅದು ನಂತರ ೨೭ ಭಾಷೆಗಳಲ್ಲಿ ಅನುವಾದಗೊಂಡಿತು. ಅವರ ನಾಲ್ಕನೆಯ ಪುಸ್ತಕ ಜಂಗಲ್ ಲೊರೆ ಯನ್ನು ಅವರ ಆತ್ಮಚರಿತ್ರೆ ಎಂದು ಹೇಳಲಾಗುತ್ತದೆ.

ಭಾರತದ ಉತ್ತರಖಂಡ್ ದಲ್ಲಿರುವ ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್ ನ್ನು ಅವರ ಗೌರವಾರ್ಥ ೧೯೫೭ ರಲ್ಲಿ ಹೆಸರಿಸಲಾಗಿದೆ. ಇಂತಹ ಸಂರಕ್ಷಿತ ಪ್ರದೇಶಗಳನ್ನು ಸಂಸ್ಥಾಪಿಸಲು ಅವರು ೧೯೩೦ ರ ಸಮಯದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಹುಲಿಗಳ ಉಳಿದ ಐದು ಉಪಪ್ರವರ್ಗಗಳನ್ನು ಆಯ್ಕೆ ಮಾಡಿ, ೧೯೬೮ ರಲ್ಲಿ ಅವರ ಹೆಸರನ್ನಿಡಲಾಗಿದೆ:ಪಂಥೆರಾ ಟಿಗ್ರಿಸ್ ಕಾರ್ಬೆಟ್ಟಿ ,ಇಂಡೊ ಚೈನೀಸ್ ಹುಲಿಯನ್ನು ಸಹ ಕಾರ್ಬೆಟ್ಸ್ ಟೈಗರ್ ಎಂದೂ ಕರೆಯಲಾಗುತ್ತದೆ.

ಕಾರ್ಬೆಟ್ ಮತ್ತು ಅವರ ಸಹೋದರಿಯ ಸಮಾಧಿಗಳು ಬಹುದಿನಗಳ ಕಾಲ ನಿರ್ಲಕ್ಷ್ಯಕ್ಕೊಳಗಾಗಿದ್ದವು.ಸುಮಾರು ೧೯೯೪ ಮತ್ತು ೨೦೦೨ ರ ಸಮಯದಲ್ಲಿ ಜಿಮ್ ಕಾರ್ಬೆಟ್ ಫೌಂಡೇಶನ್ ನ ಸಂಸ್ಥಾಪಕ ಮತ್ತು ನಿರ್ದೇಶಕ ಜೆರ್ರಿ ಎ.ಜಲೀಲ್ ಅವುಗಳ ದುರಸ್ತಿ ಮಾಡಿ ನವೀಕರಿಸಿದರಲ್ಲದೇ ಪೂರ್ವಸ್ಥಿತಿಗೆ ತರಲು ಮುಂದಾದರು.[]

ಸಾಕ್ಷ್ಯಚಿತ್ರ

[ಬದಲಾಯಿಸಿ]

BBC ವಾಹಿನಿಯು, ಫೆಡೆರಿಕ್ ಟ್ರೆವೆಸ್ ಅವರ ಜೊತೆ ಸೇರಿ ೧೯೮೬ ರಲ್ಲಿ ಮ್ಯಾನ್-ಈಟರ್ಸ್ ಆಫ್ ಇಂಡಿಯಾ ಎಂಬ ಶೀರ್ಷಿಕೆಯಡಿ ನಾಟಕರೂಪದ ಟೀವಿ ಚಿತ್ರವೊಂದನ್ನು ಕಿರು ತೆರೆಗೆ ತಂದಿತು.ಫ್ರೆಡೆರಿಕ್ ಟ್ರೆವೆಸ್ ಅದರಲ್ಲಿ ಜಿಮ್ ಕಾರ್ಬೆಟ್ ಪಾತ್ರ ವಹಿಸಿದ್ದರು. ಒಂದು ಬೃಹತ್ ಪ್ರಮಾಣದ ಚಿತ್ರಗಳ IMAX ಮೂವಿ ಮೂಲಕ ಇಂಡಿಯಾ: ಕಿಂಗ್ಡಮ್ ಆಫ್ ದಿ ಟೈಗರ್ ಎಂಬ ಚಿತ್ರವನ್ನು ಕಾರ್ಬೆಟ್ ಅವರ ಪುಸ್ತಕ ವಿಷಯಗಳನ್ನಾಧರಿಸಿ ೨೦೦೨ರಲ್ಲಿ ನಿರ್ಮಿಸಲಾಯಿತು.ಇದರಲ್ಲಿ ಕ್ರಿಸ್ಟೊಫರ್ ಹೆಯೆದಹ್ಲ್ ಜಿಮ್ ಕಾರ್ಬೆಟ್ ಅವರ ಪಾತ್ರ ನಿರ್ವಹಿಸಿದ್ದರು. ದಿ ಮ್ಯಾನ್-ಈಟಿಂಗ್ ಲಿಯೊಪರ್ಡ್ ಆಫ್ ರುದ್ರಪ್ರಯಾಗ ಕೃತಿ ಆಧಾರಿತ ಟೀವಿ ಚಿತ್ರವೊಂದನ್ನು ೨೦೦೫ ರಲ್ಲಿ ನಿರ್ಮಿಸಲಾಯಿತು.ಇದರಲ್ಲಿ ಜಾಸನ್ ಫ್ಲೆಮಿಂಗ್ ನಟಿಸಿದ್ದಾರೆ.

ಪುಸ್ತಕಗಳು

[ಬದಲಾಯಿಸಿ]
ಜಿಮ್ ಕಾರ್ಬೆಟ್ ಉಯಿತ್ ದಿನ್ ಸ್ಲೇನ್ ಬ್ಯಾಚಲರ್ ಆಫ್ ಪೊವಲ್ ಘಡ್
  • ಮ್ಯಾನ್-ಈಟರ್ಸ್ ಆಫ್ ಕುಮಾನ್ . ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ಬಾಂಬೆ ೧೯೪೪
  • ಮ್ಯಾನ್-ಈಟರ್ಸ್ ಆಫ್ ಕುಮಾನ್ . ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ಮದ್ರಾಸ್೧೯೪೫ (ಸೆಕೆಂಡ್ ed.)
  • ಮ್ಯಾನ್-ಈಟರ್ಸ್ ಆಫ್ ಕುಮಾನ್ . ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೭.
  • ದಿ ಮ್ಯಾನ್-ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್ . ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೭.
  • ಮೈ ಇಂಡಿಯಾ . ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೭.
  • ಜಂಗಲ್ ಲೊರೆ . ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೭.
  • ದಿ ಟೆಂಪಲ್ ಟೈಗರ್ ಅಂಡ್ ಮೊರ್ ಮ್ಯಾನ್-ಈಟರ್ಸ್ ಆಫ್ ಕುಮಾನ್ . ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೭.
  • ಟ್ರೀ ಟಾಪ್ಸ್ . ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೭.

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಲಿಟರರಿ ರೆಫರನ್ಸ್ ಟು ನೈನಿತಾಲ್
  • ಪ್ರಾಜೆಕ್ಟ್ ಟೈಗರ್
  • ಕೆನ್ನೆತ್ ಅಂಡರ್ಸನ್ (ರೈಟರ್)

ಉಲ್ಲೇಖಗಳು‌

[ಬದಲಾಯಿಸಿ]
  1. ೧.೦ ೧.೧ [14] ^ ರಂಗರಾಜನ್ ಎಂ. (೨೦೦೬) ಇಂಡಿಯಾಸ್ ವೈಲ್ಡ್ ಲೈಫ್ ಹಿಸ್ಟ್ರಿ : ಆನ್ ಇಂಟ್ರಾಡಕ್ಷನ್. ಪರ್ಮನಂಟ್ ಬ್ಲ್ಯಾಕ್ ಅಂಡ್ ರಂಥಾಂಬೊರೆ ಫೌಂಡೇಶನ್, ದೆಲ್ಹಿ. ISBN ೧೪೦೦೦೫೦೭೧೫. ಪುಟ ೧೫೧.
  2. ಥಾಪರ್, ವಿ. (೨೦೦೧) ಸೇವಿಂಗ್ಸ್ ವೈಲ್ಡ್ ಟೈಗರ್ಸ್ : ದಿ ಎಸೆನ್ಸಿಯಲ್ ರೈಟಿಂಗ್ಸ್. ಪರ್ಮನಂಟ್ ಬ್ಲ್ಯಾಕ್, ದೆಲ್ಹಿ ಬುಕ್ ಪ್ರಿವಿವ್
  3. ೩.೦ ೩.೧ ೩.೨ Beolens, Bo; Watkins, Michael; Grayson, Michael (2009), The Eponym Dictionary of Mammals, Johns Hopkins University Press, p. 86, ISBN 9780801893049
  4. ಜಲೀಸ್, ಜೆ.ಎ (೨೦೦೯) ದಿ ಜಿಮ್ ಕಾರ್ಬೆಟ್ ಫೌಂಡೇಶನ್, ಕೆನಡಾ[ಶಾಶ್ವತವಾಗಿ ಮಡಿದ ಕೊಂಡಿ]

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಬೂತ್, ಮಾರ್ಟಿನ್. ೧೯೮೬. ಕಾರ್ಪೆಟ್ ಸಾಹಿಬ್: ಎ ಲೈಫ್ ಆಫ್ ಜಿಮ್ ಕಾರ್ಬೆಟ್ . ಕಾನ್ ಸ್ಟೇಬಲ್, ಲಂಡನ್. ISBN ೦೦೯೪೬೭೪೦೦೦ ೯೭೮೦೦೯೪೬೭೪೦೦೪
  • ಜಲೀಲ್, ಜೆ.ಎ. ೨೦೦೧. ಅಂಡರ್ ದಿ ಶಾಡೊ ಆಫ್ ಮ್ಯಾನ್-ಈಟರ್ಸ್ : ದಿ ಲೈಫ್ ಅಂಡ್ ಲೆಜೆಂಡ್ ಆಫ್ ಜಿಮ್ ಕಾರ್ಬೆಟ್ ಆಫ್ ಕುಮಾನ್ . ಒರಿಯಂಟ್ ಲಾಂಗ್ ಮನ್, ನ್ಯುದೆಲ್ಹಿ. ISBN ೮೧೨೫೦೨೦೨೦೯ ೯೭೮೮೧೨೫೦೨೦೨೦೨
  • ಕಲಾ, ಡಿ.ಸಿ. ೧೯೭೯. ಜಿಮ್ ಕಾರ್ಬೆಟ್ ಆಫ್ ಕುಮಾನ್ . ಅಂಕುರ್ ಪಬ್ಲಿಶಿಂಗ್ ಹೌಸ್, ನ್ಯುದೆಲ್ಹಿ

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]