ಕೆವಿನ್ ಒ'ಬ್ರೇನ್ (ಕ್ರಿಕೆಟ್ ಆಟಗಾರ)
Kevin O'Brien | ||||
ಚಿತ್ರ:Flag of Ireland cricket team.svg Ireland | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | Kevin Joseph O'Brien | |||
ಹುಟ್ಟು | 03 04 1984 | |||
Dublin, Ireland | ||||
ಪಾತ್ರ | All-rounder | |||
ಬ್ಯಾಟಿಂಗ್ ಶೈಲಿ | Right-hand | |||
ಬೌಲಿಂಗ್ ಶೈಲಿ | Right arm medium-fast | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ODI ಪಾದಾರ್ಪಣೆ (cap 10) | 13 June 2006: v England | |||
ಕೊನೆಯ ODI ಪಂದ್ಯ | 18 March 2011: v Netherlands | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
2006–2009 | Ireland | |||
2001–present | Railway Union | |||
2009 | Nottinghamshire | |||
ವೃತ್ತಿಜೀವನದ ಅಂಕಿಅಂಶಗಳು | ||||
ODI | FC | LA | T20I | |
ಪಂದ್ಯಗಳು | 58 | 18 | 100 | 17 |
ಒಟ್ಟು ರನ್ನುಗಳು | 1,534 | 743 | 2,448 | 129 |
ಬ್ಯಾಟಿಂಗ್ ಸರಾಸರಿ | 34.86 | 32.30 | 32.21 | 10.75 |
೧೦೦/೫೦ | 2/7 | 1/5 | 3/11 | 0/0 |
ಅತೀ ಹೆಚ್ಚು ರನ್ನುಗಳು | 142 | 171* | 142 | 39* |
ಬೌಲ್ ಮಾಡಿದ ಚೆಂಡುಗಳು | 1,720 | 1,121 | 2,870 | 213 |
ವಿಕೆಟ್ಗಳು | 47 | 22 | 71 | 8 |
ಬೌಲಿಂಗ್ ಸರಾಸರಿ | 30.08 | 24.00 | 34.60 | 33.00 |
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 0 | 1 | 0 | 0 |
೧೦ ವಿಕೆಟುಗಳು ಪಂದ್ಯದಲ್ಲಿ | n/a | 0 | n/a | n/a |
ಶ್ರೇಷ್ಠ ಬೌಲಿಂಗ್ | 3/18 | 5/39 | 4/31 | 2/15 |
ಕ್ಯಾಚುಗಳು /ಸ್ಟಂಪಿಂಗ್‍ಗಳು | 25/– | 13/– | 41/– | 7/– |
ದಿನಾಂಕ 21 March, 2011 ವರೆಗೆ. |
ಕೆವಿನ್ ಜೋಸೆಫ್ ಒ'ಬ್ರೇನ್ (೧೯೮೪ ರ ಮಾರ್ಚ್ ೪ ರಂದು ಡಬ್ಲಿನ್ ನಲ್ಲಿ ಜನಿಸಿದರು) ಇವರು ಐರಿಶ್ ಕ್ರಿಕೆಟ್ ಆಟಗಾರರಾಗಿದ್ದು, ರೈಲ್ವೆ ಯೂನಿಯನ್ ಕ್ರಿಕೆಟ್ ಕ್ಲಬ್ ಗಾಗಿ ಆಡುತ್ತಾರೆ ಹಾಗು ವಿಶ್ವಕಪ್ ನಲ್ಲೆ ಅತ್ಯಂತ ಹೆಚ್ಚು ವೇಗವಾಗಿ ಶತಕವನ್ನು ಗಳಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ೨೦೧೧ ರ ಮಾರ್ಚ್ ೨ ರಂದು ಇಂಗ್ಲೆಂಡ್ ನ ವಿರುದ್ಧ ೫೦ ಬಾಲ್ ಗಳಿಗೆ ಶತಕವನ್ನು ಗಳಿಸಿದ್ದಾರೆ. ಬಹುಮುಖ ಸಾಮರ್ಥ್ಯದ ಆಟಗಾರನಾಗಿದ್ದುಕೊಂಡು ಒ'ಬ್ರೇನ್, ಮಧ್ಯಮದಿಂದ ಕೆಳ ಕ್ರಮದಲ್ಲಿರುವ ಬಲಗೈ ಬ್ಯಾಟ್ಸ್ ಮನ್ ಆಗಿದ್ದಾರೆ ಹಾಗು ಮಧ್ಯವೇಗದ ಬಲಗೈ ಬೌಲರ್ ಆಗಿದ್ದಾರೆ. ಅವರ ಪ್ರಥಮ ಏಕ ದಿನ ಅಂತರರಾಷ್ಟ್ರೀಯ (ODI) ಪಂದ್ಯವನ್ನು ೨೦೦೬ ರಲ್ಲಿ ಐರ್ಲೆಂಡ್ ನ ಉದ್ಘಾಟನ ಪಂದ್ಯದಲ್ಲಿ ಆಡಿದರು. ಒ'ಬ್ರೇನ್ ೨೦೦೯ ರಲ್ಲಿ ನಾಟಿಂಗ್ಹ್ಯಾಮ್ಶೈರ್ ಗಾಗಿ ಆಡಿದರು ಮತ್ತು ೨೦೧೦ ರಲ್ಲಿ ಕ್ರಿಕೆಟ್ ಐರ್ಲೆಂಡ್ ನೊಂದಿಗೆ ಗುತ್ತಿಗೆಯನ್ನು ಪಡೆದರು. ಇದು ಇವರನ್ನು ಮಂಡಳಿಯೊಂದಿಗೆ ಪೂರ್ಣಕಾಲಿಕ ಗುತ್ತಿಗೆಯನ್ನು ಪಡೆದ ಆರು ಜನ ಆಟಗಾರರಲ್ಲಿ ಒಬ್ಬರನ್ನಾಗಿಸಿತು.
ವೈಯಕ್ತಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಒ'ಬ್ರೇನ್ ಬಾಲ್ಸ್ ಬ್ರಿಡ್ಜ್ ನ ಮರಿಯನ್ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪಡೆದರು.[೧][೨] ಮಾರಾಟ ಮತ್ತು ಜಾಹೀರಾತು ವಿಭಾಗದಲ್ಲಿ ಪದವಿಯನ್ನು ಗಳಿಸಿದರು.[೩] ಇವರ ಸಹೋದರ ನಿಯಾಲ್ ಕೂಡ ಐರಿಶ್ ತಂಡದ ಸದಸ್ಯರಾಗಿದ್ದಾರೆ. ಅವರ ತಂದೆ ಬ್ರೆಂಡ್ಯಾನ್ ಐರ್ಲೆಂಡ್ ನ ಪರವಾಗಿ ೫೨ ಬಾರಿ ಆಡಿದ್ದಾರೆ. ಇವರು ಕ್ರಿಕೆಟ್ ಆಟವನ್ನು ಆಡುವ ಐದು ಮಂದಿ ಒ'ಬ್ರೇನ್ ಸಹೋದರರಲ್ಲಿ ಒಬ್ಬರಾಗಿದ್ದಾರೆ.[೪]
ವೃತ್ತಿಜೀವನ
[ಬದಲಾಯಿಸಿ]ಕೆವಿನ್ ಒ'ಬ್ರೇನ್ ೨೦೦೪ ರ ವಿಶ್ವಕಪ್ ನಲ್ಲಿ ಆಡುವ ಮೂಲಕ ತಮ್ಮ ೧೯ ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೆ ಐರ್ಲೆಂಡ್ ಅನ್ನು ಪ್ರತಿನಿಧಿಸಿದರು. ಈ ವಿಶ್ವ ಕಪ್ ನಲ್ಲಿ ಆಸ್ಟ್ರೇಲಿಯಾದಿಂದ ಸೋಲನ್ನು ಅನುಭವಿಸುವ ಮೊದಲು ತಮ್ಮ ರಾಷ್ಟ್ರವನ್ನು ಪ್ಲೇಟ್ ಸೆಮಿ ಫೈನಲ್ ನತ್ತ ಕೊಂಡೊಯ್ಯಲು ೨೪೧ ರನ್ ಗಳನ್ನು ಗಳಿಸಿಕೊಟ್ಟರು. ಅನಂತರದ ವರ್ಷದಲ್ಲಿ ಅವರು MCC ಯಂಗ್ ಕ್ರಿಕೆಟರ್ಸ್ ಗಾಗಿ ಆಡಿದರು.[೫]
೨೦೦೬ ರ ಜೂನ್ ನಲ್ಲಿ ಅವರ ಪ್ರಥಮ ಏಕ ದಿನ ಅಂತರರಾಷ್ಟ್ರೀಯ ಪಂದ್ಯವನ್ನು ಐರ್ಲೆಂಡ್ ನ ಉದ್ಘಾಟನ ODI ಆಟದೊಂದಿಗೆ ಇಂಗ್ಲೆಂಡ್ ನ ವಿರುದ್ಧ ಬೆಲ್ ಫಾಸ್ಟ್ ನಲ್ಲಿ ಆಡಿದರು. ಮೊದಲಿಗೆ ಬೌಲಿಂಗ್ ಮಾಡಿದ ಅವರು ೧೦ ಓವರ್ ಗಳಿಗೆ ೪೭ ರನ್ ಕೊಡುವುದರೊಂದಿಗೆ ೧ ವಿಕೆಟ್ ಅನ್ನು ತೆಗೆದುಕೊಂಡರು. ಇಂಗ್ಲೆಂಡ್ ೩೦೧ ರನ್ ಗಳನ್ನು ಗಳಿಸಿತ್ತು. ಅವರ ಮೊದಲ ಎಸೆತದಲ್ಲಿ ನಾಯಕ ಆಂಡ್ರೀವ್ ಸ್ಟ್ರಾಸ್ ರವರ ವಿಕೆಟ್ ಅನ್ನು ಉರುಳಿಸಿದರು. ಇವರು ಬಾರಿಸಿದ ಚೆಂಡನ್ನು ಸ್ಕ್ವೇರ್ ಲೆಗ್ ಸ್ಥಾನದಲ್ಲಿದ್ದ ಆಂಡ್ರೆ ಬೊಥ ಕ್ಯಾಚ್ ಹಿಡಿದರು. ಅಲ್ಲದೇ ೮ ನೇ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿದ ಒ'ಬ್ರೇನ್ ೪೮ ಬಾಲ್ ಗಳಿಗೆ ೩೫ ರನ್ ಗಳನ್ನು ಗಳಿಸಿದರು. ಆದರೆ ೩೮ ರನ್ನುಗಳ ಅಂತರದಲ್ಲಿ ಐರ್ಲೆಂಡ್ ಸೋತಿತು.[೨][೬]
ಕೀನ್ಯಾದಲ್ಲಿ ಐರ್ಲೆಂಡ್ ನ ನಿರಾಶದಾಯಕ ವಿಶ್ವ ಕ್ರಿಕೆಟ್ ಸರಣಿ ಕಾರ್ಯಾಚರಣೆಯಲ್ಲಿ ಭಾಗವಹಿಸುವುದರೊಂದಿಗೆ, ಒ'ಬ್ರೇನ್ ಯಶಸ್ವಿವ್ಯಕ್ತಿಯಾಗಿದ್ದಾರೆ. ಪಂದ್ಯಾವಳಿಯ ಅವರ ಎರಡನೆ ಆಟದಲ್ಲಿ, ಬರ್ಮುಡದ ವಿರುದ್ಧ ಒ'ಬ್ರೇನ್ ೨ ಓವರ್ ಗಳಿಗೆ ೩೮ ರನ್ ಗಳನ್ನು ಕೊಡುವ ಮೂಲಕ, ಮಧ್ಯಮ ಕ್ರಮದ ಬ್ಯಾಟ್ಸ್ ಮನ್ ಡೇವಿಡ್ ಹೆಂಪ್ ಮತ್ತು ಲಿಯೊನೆಲ್ ಕ್ಯಾನ್ ರವರ ವಿಕೆಟ್ ಗಳನ್ನು ಉರುಳಿಸುವುದರೊಂದಿಗೆ ಅವರ ವೃತ್ತಿಜೀವನದ ಅತ್ಯುತ್ತಮ ಆಟವನ್ನು ಆಡಿದ್ದಾರೆ. ಬ್ಯಾಟಿಂಗ್ ನಲ್ಲಿ ೫೪ ರನ್ ಗಳನ್ನು ಗಳಿಸಿದರು. ಇನ್ನು ೮ ಚೆಂಡುಗಳು ಬಾಕಿ ಇರುವಾಗ ಅವರ ಮೊದಲ ODIಅರ್ಧ ಶತಕದ ಮೂಲಕ ತಂಡವನ್ನು ಗೆಲ್ಲಿಸಿದರು. ಐರ್ಲೆಂಡ್ ಕೀನ್ಯಾದ ವಿರುದ್ಧ ಮೊದಲು ಬ್ಯಾಟಿಂಗ್ ನಲ್ಲಿ ೨೮೪ ರನ್ ಗಳನ್ನು ಮಾಡಿದಾಗ, ಅನಂತರದ ಆಟದಲ್ಲಿ ಅರ್ಧದಷ್ಟು ರನ್ ಗಳನ್ನು ಒ'ಬ್ರೇನ್ ಕಲೆಹಾಕಿದ್ದರು. ಅವರ ೧೪೨ ರನ್ ಗಳ ಇನ್ನಿಂಗ್ಸ, ಐರಿಶ್ ಬ್ಯಾಟ್ಸ್ ಮೆನ್ ಇಲ್ಲಿಯವರೆಗು ಗಳಿಸಿದ್ದಂತಹ ರನ್ ಗಳಲ್ಲೆ ಅತ್ಯಂತ ಹೆಚ್ಚಾಗಿದೆ. ಇದನ್ನು ಅವರು ೧೨೮ ಬಾಲುಗಳಿಗೆ ೧೦ ಫೋರ್ ಗಳನ್ನು ಮತ್ತು ೬ ಸಿಕ್ಸ್ ಗಳನ್ನು ಬಾರಿಸುವ ಮೂಲಕ ಗಳಿಸಿದ್ದರು. ಅನಂತರ ಐರ್ಲೆಂಡ್ ಕೆನಡಾದ ಮೇಲೆ ಆಡಲಾದ ಪಂದ್ಯದಲ್ಲಿ, ಒ'ಬ್ರೇನ್ ೫೨ ರನ್ ಗಳ ಅವರ ೩ ನೇಯ ಕ್ರಮಾನುಗತ ರನ್ ಗಳನ್ನು ಗಳಿಸುವ ಮೂಲಕ ಬ್ಯಾಟಿಂಗ್ ನಲ್ಲಿ ಅವರ ಉತ್ತಮ ಆಟವನ್ನು ಮುಂದುವರೆಸಿದರು. ಪಂದ್ಯಾವಳಿಯ ಅಂತಿಮ ಆಟವನ್ನು ನೆದರ್ಲೆಂಡ್ ನ ವಿರುದ್ಧ ಆಡಲಾಯಿತು. ಕೆವಿನ್ ಬ್ಯಾಟಿಂಗ್ ನಲ್ಲಿ ವಿಫಲನಾದರು ೨ ವಿಕೆಟ್ ಗಳನ್ನು ಪಡೆದುಕೊಂಡರು. ಅವರು ೫೨.೮೦. ಓವರ್ ಗಳಿಗೆ ೨೬೩ ರನ್ ಗಳನ್ನು ಗಳಿಸುವುದರೊಂದಿಗೆ ಸರಣಿಯಲ್ಲಿ ಎರಡನೆ ಅತ್ಯಂತ ರನ್ ಗಳಿಸಿದ ಆಟಗಾರರಾದರು.
ಅನಂತರ ಒ'ಬ್ರೇನ್ ಕ್ಯಾರಿಬೀನ್ ನಲ್ಲಿ ನಡೆದ ೨೦೦೭ ರ ವಿಶ್ವ ಕಪ್ ನಲ್ಲಿ ಪಾಲ್ಗೊಂಡರು. ಇದು ಅವರಿಗೆ ಪರೀಕ್ಷೆಯ ಘಟ್ಟವಾಗಿತ್ತು. ಏಕೆಂದರೆ ಅವರ ಹಿಂದಿನ ೭ ಏಕ ದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೬ ಅನ್ನು ಟೆಸ್ಟ್ ಆಡದ ರಾಷ್ಟ್ರಗಳೊಂದಿಗೆ ಆಡಿದ್ದರು. ಜಿಂಬಾಬ್ವೆಯ ವಿರುದ್ಧ ಆಡಿದ ಅವರ ಆರಂಭಿಕ ಪಂದ್ಯ, ಅಂತಿಮ ಹಂತಗಳಲ್ಲಿ ಜಿಂಬಾಬ್ವೆ ಕುಸಿದಾಗ ಟೈ ನಲ್ಲಿ ಕೊನೆಕೊಂಡಿತು. ಜಿಂಬಾಬ್ವೆ ಗೆಲ್ಲಲ್ಲು ೧೨ ಬಾಲ್ ಗಳಿಗೆ ೯ ರನ್ ಗಳ ಅಗತ್ಯವಿದ್ದಾಗ ಮತ್ತು ೩ ವಿಕೆಟ್ ಗಳು ಕೈಲಿದ್ದಾಗ, ಒ'ಬ್ರೇನ್ ೪೯ನೇ ಓವರ್ ನಲ್ಲಿ ಬೌಲಿಂಗ್ ಮಾಡಲು ಕಣಕ್ಕಿಳಿದರು. ಅವರ ಮೊದಲ ಬಾಲ್ ಫುಲ್ ಟಾಸ್ ಆಗಿತ್ತು, ಆದರೆ ಜಿಂಬಾಬ್ವೆಯ ನಾಯಕ ಪ್ರಾಸ್ಪರ್ ಅಟ್ಸೆಯಾ ಅದನ್ನು ಇವೊಇನ್ ಮಾರ್ಗನ್ ಗೆ ನೇರವಾಗಿ ಬಾರಿಸಿದರು.ಇದು ಅವರಿಗೆ ಅವರ ಮೊದಲ ವಿಶ್ವ ಕಪ್ ವಿಕೆಟ್ ಅನ್ನು ತಂದುಕೊಟ್ಟಿತ್ತು. ಕ್ರಿಸ್ ಪೊಫು , ಒ'ಬ್ರೇನ್ ರ ಅಂತಿಮ ಬಾಲ್ ಗೆ ರನ್ ಔಟ್ ಆದರು. ಅಲ್ಲದೇ ಮೊದಲ ವಿಕೆಟ್ ನೊಂದಿಗೆ ಹಿಂದಿನ ಓವರ್ ಅನ್ನು ಮುಗಿಸಿದ್ದರು. ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ಪಾಕಿಸ್ತಾನದ ವಿರುದ್ಧ ಆಟವಾಡಿತು. ಈ ಬಾರಿ ಅವರು ಟೆಸ್ಟ್ ಆಡುವ ರಾಷ್ಟ್ರವನ್ನು ಕೇವಲ ೧೩೨ ರನ್ ಗಳಿಗೆ ಸೀಮಿತಗೊಳಿಸಿದ್ದರು. ಇದರೊಂದಿಗೆ ಒ'ಬ್ರೇನ್ ಶೋಯಿಬ್ ಮಲಿಕ್ ರ ವಿಕೆಟ್ ಅನ್ನು ಉರುಳಿಸಿದ್ದರು. ತಂಡದ ಸ್ಥಿತಿ ೭೦/೪ ಗಳಿರುವ ಸಮಯದಲ್ಲಿ ಒ'ಬ್ರೇನ್ ಬ್ಯಾಟಿಂಗ್ ಮಾಡಲೆಂದು ಕಣಕ್ಕಿಳಿದರು ಹಾಗು ಅವರ ಸಹೋದರ ನಿಯಾಲ್ ನೊಂದಿಗೆ ೩೮ ರನ್ ಗಳನ್ನು ಸೇರಿಸಿದರು. ಅಂತಿಮವಾಗಿ ಐರ್ಲೆಂಡ್ ೩ ವಿಕೆಟ್ ಗಳಿಂದ ಜನಗಳಿಸಿತು ಹಾಗು ಒ'ಬ್ರೇನ್ ೫೨ ಬಾಲುಗಳಿಗೆ ೧೬ ರನ್ ಗಳನ್ನು ಗಳಿಸುವುದರೊಂದಿಗೆ ಔಟ್ ಆಗದೆ ಉಳಿದುಕೊಂಡರು. ಅವರ ಅತ್ಯಂತ ಹೆಚ್ಚು ಸ್ಕೋರ್ ಅನ್ನು ಸೂಪರ್ ಏಟ್ ಹಂತದಲ್ಲಿ ನ್ಯೂಜಿಲೆಂಡ್ ನ ವಿರುದ್ಧ ಆಡಿದ ಪಂದ್ಯದಲ್ಲಿ ಗಳಿಸಿದರು. ಈ ಪಂದ್ಯದಲ್ಲಿ ೩ ಸಿಕ್ಸ್ ಗಳನ್ನು ಬಾರಿಸುವುದರೊಂದಿಗೆ ೪೯ ರನ್ ಗಳನ್ನು ಗಳಿಸಿದ್ದರು. ಅವರ ಸಹೋದರನಿಂದಾಗಿ ರನ್ ಔಟ್ ಆದ ಕಾರಣ ಅವರ ಅರ್ಧ ಶತಕದಿಂದ ವಂಚಿತರಾದರು. ವಿಶ್ವಕಪ್ ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವೆಂದರೆ]] ಬಾಂಗ್ಲಾದೇಶದ ವಿರುದ್ಧ ಅವರು ಗಳಿಸಿದ ವೇಗದ ೪೮ ರನ್ ಗಳು. ಇದು ಐತಿಹಾಸಿಕ ಐರಿಶ್ ವಿಜಯವನ್ನು ಸಾಧಿಸಲು ಸಹಾಯಮಾಡಿತು.
೨೦೦೯ ರ ಜೂನ್ ೮ ರಂದು, ಟ್ವೆಂಟಿ೨೦ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಒ'ಬ್ರೇನ್ ಐರ್ಲೆಂಡ್ ಅನ್ನು ಬಾಂಗ್ಲಾದೇಶದ ವಿರುದ್ಧ ಗೆಲುವಿನತ್ತ ಕೊಂಡೊಯ್ಯದರು.[೭] ಒ'ಬ್ರೇನ್ ೨೦೦೯ ರ ಅಸೋಸಿಯೇಟ್ ಅಂಡ್ ಅಫಿಲಿಯೇಟ್ ವರ್ಷದ ಆಟಗಾರ (ಒಟ್ಟು ಹದಿನಾಲ್ಕು ಮಂದಿ ನಾಮ ನಿರ್ದೇಶನಗೊಂಡಿದ್ದಾರೆ) ಪ್ರಶಸ್ತಿಗೆ ಆಯ್ಕೆಯಾಗದಿದ್ದರು[೮], ಇದಕ್ಕೆ ನಾಮನಿರ್ದೇಶನಗೊಂಡ ಏಳು ಐರ್ಲೆಂಡ್ ನ ಆಟಗಾರರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.[೯][nb ೧]
ಪರೀಕ್ಷಾ ಆಧಾರದ ಮೇಲೆ ೨೦೦೯ ರಲ್ಲಿ ಒ'ಬ್ರೇನ್ ರನ್ನು ನಾಟಿಂಗ್ಹ್ಯಾಮ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಗೆ ಸೇರಿಸಿಕೊಳ್ಳಲಾಯಿತು. ಹಿಂದಿನ ಸರಣಿಯಲ್ಲಿ ಒ'ಬ್ರೇನ್ ಕ್ಲಬ್ ನ ವಿರುದ್ಧ ೯೩ ರನ್ ಗಳನ್ನು ಗಳಿಸುವ ಮೂಲಕ ನಾಟಿಂಗ್ ಹ್ಯಾಮ್ಷಿಮ್ ನ ಕ್ರಿಕೆಟ್ ಮಹಾನಿರ್ದೇಶಕರಾದ ಮೈಕ್ ನೆವೆಲ್ ರ ಮೆಚ್ಚುಗೆ ಗಳಿಸಿದ್ದರು. ಫ್ರೆಂಡ್ಸ್ ಪ್ರಾವಿಡೆಂಟ್ ಟ್ರೋಫಿಯಿಂದ ಐರ್ಲೆಂಡ್ ಮನೆಗೆ ನಡೆದ ನಂತರ ಅವರು ಕ್ಲಬ್ ಅನ್ನು ಸೇರಿಕೊಂಡರು. ಇದು ಇಂಗ್ಲೆಂಡ್ ನಲ್ಲಿ ನಡೆಯುವ ಸ್ವದೇಶಿಯರ ಸ್ಪರ್ಧೆಯಾಗಿದೆ.[೧೧] ಕ್ಲಬ್ ನೊಂದಿಗೆ ಒ'ಬ್ರೇನ್ ಏಟ್ ಲಿಸ್ಟ್ A ಪಂದ್ಯಗಳನ್ನು ೧೩.೧೬ ಓವರ್ ಗಳಿಗೆ ಅತ್ಯಂತ ಹೆಚ್ಚು ೪೨ ರನ್ ಗಳನ್ನು ಕೊಡುವುದರೊಂದಿಗೆ ಆಡಿ ೭೯ ರನ್ ಗಳನ್ನು ಗಳಿಸಿದರು,[೧೨] ಅಲ್ಲದೇ ೭೨ ರನ್ ಗಳಿಗೆ ಒಂದು ವಿಕೆಟ್ ಅನ್ನು ಕೂಡ ಗಳಿಸಿದರು;[೧೩] ಅವರು ನಾಟಿಂಗ್ಹ್ಯಾಮ್ಶೈರ್ ಗಾಗಿ ಐದು T೨೦ ಪಂದ್ಯಗಳನ್ನು ಕೂಡ ಆಡಿ, ೩೧ ರನ್ ಗಳನ್ನು ಗಳಿಸಿ, ಎರಡು ವಿಕೆಟ್ ಗಳನ್ನು ಪಡೆದುಕೊಂಡರು.[೧೪][೧೫]
ಐರ್ಲೆಂಡ್ ನಲ್ಲಿನ ಕ್ರಿಕೆಟ್ ಆಡಳಿತ ಮಂಡಳಿಯಾದ ಕ್ರಿಕೆಟ್ ಐರ್ಲೆಂಡ್, ೨೦೧೦ ರ ಜನವರಿಯಲ್ಲಿ ಒ'ಬ್ರೇನ್ ರಿಗೆ ಪೂರ್ಣಕಾಲಿಕ ಗುತ್ತಿಗೆಯನ್ನು ನೀಡಿತು. ಇವರು ಕ್ರಿಕೆಟ್ ಐರ್ಲೆಂಡ್ ನೊಂದಿಗೆ ಇಂತಹ ಗುತ್ತಿಗೆಯನ್ನು ಪಡೆದ ಆರು ಮಂದಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ[೧೬]. ಅಲ್ಲದೇ ಐರ್ಲೆಂಡ್ ನ ಕ್ರಿಕೆಟಿಗರಿಗೆ ಮೊದಲ ವೃತ್ತಿಪರ ಗುತ್ತಿಗೆಯನ್ನು ನೀಡಲು ಪ್ರಾರಂಭಿಸಿದ ನಂತರದ ವರ್ಷವೇ ಇವರು ಆಗಮಿಸಿದರು. ಈ ಕ್ರಿಕೆಟಿಗರು ಹವ್ಯಾಸಿ ಆಟಗಾರರಾಗುವ ಮೊದಲು ಇತರ ಉದ್ಯೋಗಗಳಿಂದ ಗಳಿಸುತ್ತಿದ್ದ ಆದಾಯದ ಮೇಲೆ ಅವಲಂಬಿಸಿದ್ದರು, ಮತ್ತು ಅವರ ಬಿಡುವಿನ ಕಾಲದಲ್ಲಿ ಕ್ರಿಕೆಟ್ ಅನ್ನು ಆಡುತ್ತಿದ್ದರು. ಈ ಗುತ್ತಿಗೆಯು ೨೦೧೧ ರ ವಿಶ್ವಕಪ್ ಗಾಗಿ ಮುಂಚಿತವಾಗಿಯೇ ತಯಾರಾಗುವ ಗುರಿಯೊಂದಿಗೆ ಒ'ಬ್ರೇನ್ ಮತ್ತು ಇತರರಿಗೆ ಕ್ರಿಕೆಟ್ ನ ಮೇಲೆ ಗಮನಹರಿಸಲು ಅವಕಾಶ ನೀಡಿತು.[೧೭]
ಶೀಲಂಕಾ ಅಸೋಸಿಯೇಟ್ಸ್ T೨೦ ಸರಣಿಗಳಲ್ಲಿ ಅಫ್ಘಾನಿಸ್ತಾನದ ವಿರುದ್ಧ ಐರ್ಲೆಂಡ್ ನ ಮೊದಲ ಪಂದ್ಯದಲ್ಲಿ ಒಟ್ಟಾರೆಯಾಗಿ ಒ'ಬ್ರೇನ್ ಕಳಪೆ ಪ್ರದರ್ಶನವನ್ನು ನೀಡಿದ್ದರು. ಬ್ಯಾಟಿಂಗ್ ನಿಂದ ನಿರ್ಗಮಿಸುವ ಮೊದಲು ೨ ಬಾಲುಗಳಿಗೆ ೧ ರನ್ ಅನ್ನು ಗಳಿಸಿದ್ದರು. ಅವರ ಬೌಲಿಂಗ್ ನಲ್ಲೂ ೦-೩೪ ರನ್ ಗಳನ್ನು ನೀಡಿದ್ದರು. ಆದರೆ ಐರ್ಲೆಂಡ್ ೫ ವಿಕೆಟ್ ಗಳಿಂದ ಜಯಗಳಿಸುವಲ್ಲಿ ಯಶಸ್ವಿಯಾಯಿತು. ಕೆನಡಾದ ವಿರುದ್ಧ ಅವರ ಎರಡನೆಯ ಪಂದ್ಯದಲ್ಲಿ, ಕೆನಡಾ ಇನ್ನಿಂಗ್ಸ್ ನಲ್ಲಿ ಒ'ಬ್ರೇನ್ ೦-೩೮ ನೊಂದಿಗೆ ಮತ್ತು ೨ ಚೆಂಡುಗಳಿಗೆ ೫ ರನ್ ಗಳನ್ನು ಗಳಿಸುವುದರೊಂದಿಗೆ ಅವರ ಆಟವನ್ನು ಮುಗಿಸಿದ್ದರು. ಐರ್ಲೆಂಡ್ ೪ ರನ್ ಗಳಿಂದ ಸ್ವಲ್ಪ ಅಂತರದಲ್ಲೆ ಸೋತಿತು. ಮೂರನೆಯ ಮತ್ತು ಅಂತಿಮ ಪಂದ್ಯದಲ್ಲಿ (ಶೀಲಂಕಾAಯ ವಿರುದ್ಧ), ಒ'ಬ್ರೇನ್ ಎರಡು ಓವರ್ ಗಳಿಗೆ ೦-೧೫ ರನ್ ಗಳನ್ನು ಕೊಡುವುದರೊಂದಿಗೆ ಯಾವುದೇ ವಿಕೆಟ್ ಅನ್ನು ಪಡೆಯದೇ ಪಂದ್ಯಾವಳಿಯನ್ನು ಮುಗಿಸಿದರು. ಈ ಪಂದ್ಯದಲ್ಲಿ ೧೦ ಚೆಂಡುಗಳಿಗೆ ೧೧ ರನ್ ಗಳನ್ನು ಗಳಿಸಿದರು ಐರ್ಲೆಂಡ್ ೫ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಸೋತಿತು.
೨೦೧೦ರಲ್ಲಿ, ಒ'ಬ್ರೇನ್ ಐರ್ಲೆಂಡ್ ನ ಇನ್ನಿಬ್ಬರು ಆಟಗಾರರೊಂದಿಗೆ ಅಸೋಸಿಯೇಟ್ ಅಂಡ್ ಅಫಿಲಿಯೇಟ್ ವರ್ಷದ ಆಟಗಾರ ಪ್ರಶಸ್ತಿಗೆ (೧೬ ಮಂದಿ ನಾಮನಿರ್ದೇಶನಗೊಂಡಿದ್ದರು) ಪುನಃ ನಾಮನಿರ್ದೇಶನಗೊಂಡರು;[೧೮] ಪ್ರಶಸ್ತಿಯನ್ನು ನೆದರ್ಲೆಂಡ್ ನ ರೈನ್ ಟೆನ್ ಡೊಸ್ಚಾಟೆ ಯವರಿಗೆ ನೀಡಲಾಯಿತು.[೧೯] ೨೦೧೧ರ ವಿಶ್ವಕಪ್ ಗಾಗಿ ಕಳುಹಿಸಲಾದ ಐರ್ಲೆಂಡ್ ನ ೧೫ ಮಂದಿಯ ತಂಡಕ್ಕೆ ಒ'ಬ್ರೇನ್ ರು ಆಯ್ಕೆಯಾದರು.[೨೦]
೨೦೧೧ರ ವಿಶ್ವಕಪ್ ಗಾಗಿ ಕಳುಹಿಸಲಾದ ಐರ್ಲೆಂಡ್ ನ ೧೫ ಮಂದಿಯ ತಂಡಕ್ಕೆ ಒ'ಬ್ರೇನ್ ರು ಆಯ್ಕೆಯಾದರು.[೨೧] ಮಾರ್ಚ್ ೨ ರಂದು, ಒ'ಬ್ರೇನ್ ವಿಶ್ವ ಕಪ್ ನ ಇತಿಹಾಸದಲ್ಲೆ ಅತ್ಯಂತ ವೇಗದ ಶತಕವನ್ನು ಬಾರಿಸಿದರು. ಬೆಂಗಳೂರಿನ ಎಮ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ನ ವಿರುದ್ಧ ಕೇಲವ ೫೦ ಚೆಂಡುಗಳಿಗೆ ಶತಕವನ್ನು ಬಾರಿಸುವ,[೨೨] ಮೂಲಕ ಒಂದು ಹಂತದಲ್ಲಿ ೧೧೧/೫ ರಲ್ಲಿ ಹೋರಾಡುತಿದ್ದ ತಂಡಕ್ಕೆ ೩೨೮ ಗುರಿಯನ್ನು ಮುಟ್ಟಲು ಸಹಾಯ ಮಾಡಿದರು.
ಆಡುವ ಶೈಲಿ
[ಬದಲಾಯಿಸಿ]ಒ'ಬ್ರೇನ್ ಬೌಂಡ್ರಿಯ ಅಂಚುಗಳನ್ನು ಯಶಸ್ವಿಯಾಗಿ ದಾಟಿಸುವ ಸಾಮರ್ಥ್ಯವಿರುವ ಪ್ರಬಲ ಬ್ಯಾಟ್ಸ್ ಮನ್ ಆಗಿದ್ದಾರೆ.[೨೩] ೨೦೧೧ ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ನ ವಿರುದ್ಧ ಅವರ ದಾಖಲೆ ಮೂರಿದ ಶತಕದಲ್ಲಿ ಪಂದ್ಯಾವಳಿಯ ಅತ್ಯಂತ ದೂರದ ಸಿಕ್ಸ್ ಅನ್ನು ಬಾರಿಸಿದರು.[೨೪] ಅವರ ಸಹೋದಾರರಾದ ನಿಯಾಲ್ ಅವರನ್ನು ಕುರಿತು, "ಕಣದಲ್ಲಿ ಅವರು ಮುಂಗೋಪದಲ್ಲಿದ್ದಾಗ, ಸಿಡುಕಿನಲ್ಲಿದ್ದಾಗ... ಯಾವುದೇ ಕಷ್ಟವನ್ನಾದರು ಹಿಂದೆ ಸರಿಯದೆ ಎದುರಿಸುತ್ತಾನೆ" ಎಂದು ಹೇಳಿದ್ದಾರೆ.[೨೩] ಐರ್ಲೆಂಡ್ ನ ತರಬೇತುದಾರ, ಫಿಲ್ ಸಿಮನ್ಸ್, ಒ'ಬ್ರೇನ್ ಕುರಿತು ಹೀಗೆಂದಿದ್ದಾರೆ; "ಅವರ ಬ್ಯಾಟಿಂಗ್ ನ ಬಗ್ಗೆ ಅನೇಕ ಆಲೋಚನೆಗಳಿವೆ. ಅಲ್ಲದೇ ಸ್ಪಿನ್ ಎಸೆತದ ವಿರುದ್ಧವು ಬ್ಯಾಟಿಂಗ್ ಮಾಡುವಂತಹ ಅನೇಕ ವಿಭಿನ್ನ ಶೈಲಿಗಳ ಮೇಲೆ ಅವರು ಅಭ್ಯಾಸಮಾಡಿದ್ದಾರೆ. ಅವರು ಕೌಂಟಿಯ ಸೌಲಭ್ಯತೆಗಳನ್ನು ಹೊಂದಿಲ್ಲ. ಆದರೆ ಮನೆಯಲ್ಲೆ ಅವರ ಆಟದ ಮೇಲೆ ಕಷ್ಟಪಟ್ಟು ಅಭ್ಯಾಸಮಾಡುತ್ತಾರೆ."[೨೫]
ಅಡಿ ಟಿಪ್ಪಣಿಗಳು
[ಬದಲಾಯಿಸಿ]- ↑ The award was eventually won by William Porterfield.[೧೦]
ಉಲ್ಲೇಖಗಳು
[ಬದಲಾಯಿಸಿ]- ↑ Kevin O'Brien –Congrats!, Marian College, archived from the original on 4 ಮಾರ್ಚ್ 2016, retrieved 6 ಮಾರ್ಚ್ 2011
- ↑ ೨.೦ ೨.೧ Kevin O'Brien wins Player of the Year Award, Cricket Europe, archived from the original on 23 ಜುಲೈ 2011, retrieved 6 ಮಾರ್ಚ್ 2011
- ↑ Cricket World Cup: Kevin O'Brien hails 'best innings', BBC Sport, 2 ಮಾರ್ಚ್ 2011, retrieved 6 ಮಾರ್ಚ್ 2011
- ↑ ಒ'ಬ್ರೇನ್ ಇಸ್ ಟೋಸ್ಟ್ ಆಫ್ ಐರ್ಲೆಂಡ್. ೨೦೦೯-೦೬-೦೮ರಂದು ಪುನಃ ಪಡೆಯಲಾಗಿದೆ
- ↑ ಕೆವಿನ್ ಒ'ಬ್ರೇನ್ ಪ್ರೊಫೈಲ್. ೨೦೦೯-೦೬-೦೮ರಂದು ಪುನಃ ಪಡೆಯಲಾಗಿದೆ
- ↑ Luke, Will (13 ಜೂನ್ 2006), England's win fails to hide cracks, Cricinfo, retrieved 2 ಮಾರ್ಚ್ 2011
- ↑ ಐರ್ಲೆಂಡ್ ಬೀಟ್ ಬಾಂಗ್ಲಾದೇಶ್. ೨೦೦೯-೦೬-೦೮ರಂದು ಪಡೆಯಲಾಗಿದೆ
- ↑ Cricinfo staff (15 ಸೆಪ್ಟೆಂಬರ್ 2010), Strauss, Johnson and Gambhir lead ICC nominations, retrieved 20 ಆಗಸ್ಟ್ 2010
- ↑ Cricinfo staff (೨ September ೨೦೦೯), Dhoni, Dilshan pick up maximum nominations, Cricinfo, retrieved ೩ September ೨೦೦೯
{{citation}}
: Check date values in:|accessdate=
and|date=
(help) - ↑ Cricinfo staff (1 ಅಕ್ಟೋಬರ್ 2010). "Porterfield named Associate Player of the Year". Retrieved 20 ಆಗಸ್ಟ್ 2010.
- ↑ Kevin O'Brien To Appear For Nottinghamshire, Cricket World, 14 ಮೇ 2009, archived from the original on 7 ಮಾರ್ಚ್ 2012, retrieved 3 ಮಾರ್ಚ್ 2011
- ↑ ListA batting and fielding for each team by Kevin O'Brien, Cricket Archive, retrieved 6 ಮಾರ್ಚ್ 2011
- ↑ ListA bowling for each team by Kevin O'Brien, Cricket Archive, retrieved 6 ಮಾರ್ಚ್ 2011
- ↑ Twenty20 batting and fielding for each team by Kevin O'Brien, Cricket Archive, retrieved 6 ಮಾರ್ಚ್ 2011
- ↑ Twenty20 bowling for each team by Kevin O'Brien, Cricket Archive, retrieved 6 ಮಾರ್ಚ್ 2011
- ↑ Ireland back players ahead of 2011 World Cup, Cricinfo, 15 ಜನವರಿ 2010, retrieved 2 ಮಾರ್ಚ್ 2011
- ↑ Cricket Ireland announce player contract details, CricketEurope, 13 ಜನವರಿ 2010, archived from the original on 23 ಜುಲೈ 2011, retrieved 2 ಮಾರ್ಚ್ 2011
- ↑ Paul Stirling nominated in two categories in ICC Awards, Cricket Ireland, ೧೮ August ೨೦೧೦, archived from the original on 25 ಆಗಸ್ಟ್ 2010, retrieved ೨೦ August ೨೦೧೦
{{citation}}
: Check date values in:|accessdate=
and|date=
(help) - ↑ Ryan ten Doeschate is Associate Player of the Year, ESPNcricinfo staff, 6 ಅಕ್ಟೋಬರ್ 2010, retrieved 11 ಅಕ್ಟೋಬರ್ 2010
- ↑ ESPNcricinfo staff (19 ಜನವರಿ 2011), Ireland pick Ed Joyce for World Cup, Cricinfo, retrieved 27 ಜನವರಿ 2011
- ↑ Ireland pick Ed Joyce for World Cup, Cricinfo, 19 ಜನವರಿ 2011, retrieved 27 ಜನವರಿ 2011
- ↑ "Cricket World Cup: Brilliant Ireland shock England". BBC News Online. ೨ March ೨೦೧೧. Retrieved ೨೦೧೧-೦೩-೦೨.
{{cite news}}
: Check date values in:|accessdate=
and|date=
(help)[ಶಾಶ್ವತವಾಗಿ ಮಡಿದ ಕೊಂಡಿ] - ↑ ೨೩.೦ ೨೩.೧ Ugra, Sharda (3 ಮಾರ್ಚ್ 2011), Niall O'Brien aims high after 'regulation' win, Cricinfo, retrieved 3 ಮಾರ್ಚ್ 2011
- ↑ Brickhill, Liam (2 ಮಾರ್ಚ್ 2011), Awesome O'Brien laps up finest hour, Cricinfo, retrieved 3 ಮಾರ್ಚ್ 2011
- ↑ Cricket World Cup: Kevin O'Brien can improve – Simmons, BBC Sport, 6 ಮಾರ್ಚ್ 2011, retrieved 6 ಮಾರ್ಚ್ 2011
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕೆವಿನ್ ಒ'ಬ್ರೇನ್ ಅಟ್ ಕ್ರಿಕೆಟ್ ಆರ್ಚೀವ್
- ಕೆವಿನ್ ಒ'ಬ್ರೇನ್ ಫಾಸ್ಟೆಸ್ಟ್ ಸೆಂಚ್ಯೂರಿ ವಿಡಿಯೋ Archived 7 March 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಅಟ್ ಕ್ರಿಕೆಟ್ ವಲ್ಡ್ ಕಪ್ ೨೦೧೧
- CS1 errors: dates
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Use dmy dates from March 2011
- Articles with invalid date parameter in template
- Persondata templates without short description parameter
- 1984ರಲ್ಲಿ ಜನಿಸಿದವರು
- ಐರಿಶ್ ಕ್ರಿಕೆಟ್ ಆಟಗಾರರು
- ಐರ್ಲೆಂಡ್ ನ ಏಕ ದಿನ ಅಂತರರಾಷ್ಟ್ರೀಯ ಪಂದ್ಯಾವಳಿಯ ಕ್ರಿಕೆಟ್ ಆಟಗಾರರು
- ಐರ್ಲೆಂಡ್ ನ ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಾವಳಿಯ ಕ್ರಿಕೆಟ್ ಆಟಗಾರರು
- ಪ್ರಸ್ತುತದಲ್ಲಿ ಇರುವ ಜನರು
- ಡಬ್ಲಿನ್(ನಗರ)ದ ಜನರು
- ನಾಟಿಂಗ್ಹಾಮ್ಶೈರ್ ಕ್ರಿಕೆಟ್ ಆಟಗಾರರು
- 2007ರ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು
- 2011ರ ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು
- ಕ್ರಿಕೆಟ್ ಆಟಗಾರ