ಘನ್ ಸೋಲಿ
Ghansoli | |
ರಾಜ್ಯ | ಮಹಾರಾಷ್ಟ್ರ |
ನಿರ್ದೇಶಾಂಕಗಳು | |
ವಿಸ್ತಾರ | {{{area_total}}} km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
{{{population_total}}} - {{{population_density}}}/ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 400 701 - +022 - MH-43 |
ಮರಾಠಿ ಭಾಷೆಯಲ್ಲಿ (घणसोली),
’ಸಿಡ್ಕೊ’(CIDCO) ಸಂಸ್ಥೆ, ಸುಮಾರು ೩ ಸಾವಿರ ಫ್ಲಾಟ್ ಗಳನ್ನು ನಿರ್ಮಿಸಿದ್ದಾರೆ. ಘನ್ ಸೋಲಿಯಲ್ಲಿ ಅನೇಕ ರಸಾಯನಿಕ ಕಾರ್ಖಾನೆಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು :
- 'ರಿಲೆಯನ್ಸ್'
- 'ಸಿಮೆನ್ಸ್'
- 'ಸ್ಟಾಂಡರ್ಡ್ ಆಲ್ಕಲಿ'ಘಟಕಗಳಿವೆ.
ಬಸ್ ಮಾರ್ಗ
[ಬದಲಾಯಿಸಿ]'ಹೊಸ ಮುಂಬಯಿ' ಎಂದು ಹೆಸರಾದ, ವಾಶಿ ಯಿಂದ ಇಲ್ಲಿಗೆ, ಕೇವಲ ೨೦ ನಿಮಿಷಗಳಲ್ಲಿ ಬಸ್ಸಿನಲ್ಲಿ ಬರಬಹುದು. ಅತಿ ಹಳೆಯ ಕುರುಹುಗಳಲ್ಲೊಂದಾದ ಮೂಕಾಂಬಿಕಾ ದೇವಸ್ಥಾನ, ರೈಲ್ವೆ ನಿಲ್ದಾಣದ ಬಳಿಯಲ್ಲೇ ಸ್ಥಾಪಿಸಲ್ಪಟ್ಟಿದೆ. ಥಾಣೆಯಿಂದ ವಾಶಿ/ನೇರೂಲ್ ರೈಲ್ವೆ ದಾರಿ ಬಂದ ಮೇಲೆ, ಈ ಸ್ಥಳಕ್ಕೆ ಹೆಚ್ಚು ಹೆಚ್ಚು ಜನರು ಬರಲು ಆರಂಭಿಸಿದರು. ಇಲ್ಲಿ ವಸತಿಗೃಹಗಳ ನಿರ್ಮಾಣವಾಗಿದೆ. ಕಡಿಮೆ ಬೆಲೆಗೆ ದೊರೆಯುವ, ಹಲವು ಬಗೆಯ ವಸತಿ ಗೃಹಗಳು ಲಭ್ಯವಿವೆ. ನಿರ್ಮಲವಾದ ಗಾಳಿ ಹಾಗೂ ಪರಿಸರವಿರುವ ಈ ಸ್ಥಳ, ಈಗೀಗ ಹೊಸದಾಗಿ ಇನ್ನೂ ಹೆಚ್ಚು ಪ್ರಬುದ್ಧಮಾನಕ್ಕೆ ಬರುತ್ತಿದೆ.'ಘನ್ ಸೋಲಿ' ಯಲ್ಲಿ, 'ಕೃಷಿಕ ಸಂಸ್ಥೆ ಸಂಚಾಲಿತ ವಿದ್ಯಾಲಯ'ವಿದೆ. ಎ.ಎಸ್.ಪಿ ಸಂಚಾಲಿತ, ಇಂಗ್ಲೀಷ್ ಕಾನ್ವೆಂಟ್ ಪ್ರೌಢಶಾಲೆ ನಗರದಲ್ಲಿದೆ. ರೈಲ್ವೆ ನಿಲ್ದಾಣದ ಸಮೀಪದಲ್ಲಿ ಕೆಲವು ಪೂಜಾಸ್ಥಳಗಳ ನಿರ್ಮಾಣವಾಗಿದೆ. ಅವುಗಳಲ್ಲಿ ಮುಖ್ಯವಾದವುಗಳು :
- ’ಅವರ್ ಲೇಡಿ ಆಫ್ ದ ಫಾರ್ಸೇಕನ್’ಎಂಬ ರೋಮನ್ ಕ್ಯಾಥೊಲಿಕ್ ಪಂಥದ ಇಗರ್ಜಿಇದೆ.
- 'ಮುಸ್ಲಿಮ್ ಮತಸ್ಥರ ಮಸೀದಿ' ಇದೆ.
'ಘನಸೋಲಿ' ಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ೧. 'ಘನ್ ಸೋಲಿ ಗ್ರಾಮ'. ೨. 'ಘನ್ ಸೋಲಿ ಹೊಸ ಸೆಕ್ಟರ್.' 'ಘನ್ ಸೋಲಿ ಗ್ರಾಮ'ದಲ್ಲಿ ಹಳೆಯ ಮಾದರಿಯ ಮನೆಗಳಿವೆ. 'ಹೊಸದಾಗಿ ನಿರ್ಮಿಸಿದ ಸೆಕ್ಟರ್' ನಲ್ಲಿ, ಹಲವಾರು ಆಧುನಿಕ ಕಟ್ಟಡಗಳು ನಿರ್ಮಾಣವಾಗಿವೆ.
ಥಾಣೆ ವಾಶಿ ರೈಲುಮಾರ್ಗ
[ಬದಲಾಯಿಸಿ]ಈ ರೈಲು ಮಾರ್ಗದಲ್ಲಿ ಪ್ರಯಾಣಿಸಿ, 'ಘನ್ ಸೋಲಿ' ಯನ್ನು ತಲುಪಬಹುದು.
- ಐರೋಲಿ,
- ರಾಬಲೆ,
- ಘನ್ಸೋಲಿ,
- ಕೋಪರ್ ಖೈರಾನೆ,
- ತುರ್ಭೆ,
- ಸಾನ್ ಪಾಡ,
- ವಾಶಿ,
- ಮಾನ್ ಖುರ್ಡ್,
- ಗೋವಂಡಿ
- ಚೆಂಬೂರ್,
- ತಿಲಕ್ ನಗರ್,
- ಕುರ್ಲಾ
ಕೊಂಕಣ್ ರೈಲ್ವೆಯಿಂದಲೂ ಸಂಪರ್ಕವಿದೆ
[ಬದಲಾಯಿಸಿ]- ಪನವೇಲ್
- ಖಾಂಡೇಶ್ವರ್,
- ಮಾನಸರೋವರ್,
- ಖಾರ್ ಘರ್,
- ಬೇಲಾಪುರ್,
- ಸೀವುಡ್,
- ನೇರುಲ್,
- ಇಯುನಗರ್,
- ವಾಶಿ
'ವಾಶಿ'ಯಿಂದ ರೈಲು ಬದಲಾಯಿಸಿ, 'ಘನ್ ಸೋಲಿ'ಗೆ ಬರಬಹುದು.
ಘನಸೋಲಿ ಗ್ರಾಮ
[ಬದಲಾಯಿಸಿ]ಘನಸೋಲಿ ಗ್ರಾಮದ ಬಗ್ಗೆ ಹೆಚ್ಚು ವಿವರಗಳು ತಿಳಿದಿಲ್ಲ. 'ಮೀನು ಹಿಡಿಯುವವರ ಬಸದಿ'ಯೆನ್ನುವ ವಿಷಯ ಬಿಟ್ಟರೆ, 'ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮ'ದ ಸಮಯದಲ್ಲಿ 'ಗಾಂಧೀಜಿ'ಯವರು ಆಯೋಜಿಸಿದ 'ಉಪ್ಪಿನ ಸತ್ಯಾಗ್ರಹ'ದ ಸಮಯದಲ್ಲಿ ಇದು ಪ್ರಮುಖಪಾತ್ರವಹಿಸಿತ್ತು. ಆ ಸಮಯದಲ್ಲಿ ದೇಶದ ನಾಯಕರಾಗಿದ್ದ ಸ್ವಾತಂತ್ರ್ಯ ಸೇನಾನಿಗಳು,ಡಾ. ರಾಜೇಂದ್ರ ಪ್ರಸಾದ್, ಕಸ್ತುರ್ ಬಾ ಗಾಂಧಿ, ಮತ್ತು ಸರೋಜಿನಿ ನಾಯುಡುರವರು 'ಘನಸೋಲಿ ಗ್ರಾಮ'ದಲ್ಲಿ ಸಭೆಸೇರಿ ಐರೋಲಿ ಮತ್ತು ದಿವಾ ಗ್ರಾಮಗಳಿಂದ ಉತ್ಪಾದಿಸಲ್ಪಟ್ಟ ಉಪ್ಪನ್ನು, ಸಂಗ್ರಹಿಸಿ,ಥಾಣೆಯ ಮಾರುಕಟ್ಟೆಯಲ್ಲಿ ಮಾರಿದ ದಾಖಲೆಗಳು ಸಿಗುತ್ತವೆ.