ವಿಷಯಕ್ಕೆ ಹೋಗು

ಭಾರತೀಯ ಆಡಳಿತಾತ್ಮಕ ಸೇವೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತೀಯ ಆಡಳಿತಾತ್ಮಕ ಸೇವೆ
ಸೇವೆಯ ಸ್ಥೂಲನೋಟ
ಸಂಕ್ಷೇಪಣ I.A.S. (ಐಎಎಸ್‌)
ಕ್ರಮಬದ್ದ ರಚನೆ 1946
ರಾಷ್ಟ್ರ  India
ತರಬೇತಿಯ ಸ್ಥಳ ಲಾಲ್ ಬಹಾದುರ್‌ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಶಿಕ್ಷಣ ಸಂಸ್ಥೆ, ಮಸ್ಸೂರಿ
ನಿಯಂತ್ರಣಾ ಪ್ರಾಧಿಕಾರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ನಿವೃತ್ತಿವೇತನ ಮಂತ್ರಾಲಯ
ಕಾನೂನು ವ್ಯಕ್ತಿತ್ವದ ಅಸ್ತಿತ್ವ ಸರ್ಕಾರಿ: ಸರ್ಕಾರಿ ಸೇವೆ
ಸಾಮಾನ್ಯ ಸ್ವರೂಪ ನೀತಿ-ಸೂತ್ರ ರಚನೆ
ನೀತಿ ಕಾರ್ಯಗತಗೊಳಿಸುವಿಕೆ.
ನಾಗರಿಕ ಆಡಳಿತ
ಮಂತ್ರಿಗಳಿಗೆ ಸಲಹೆಗಾರರು
(ಕೇಂದ್ರ ಮತ್ತು ರಾಜ್ಯ) ಮಟ್ಟಗಳಲ್ಲಿ ಸರ್ಕಾರೀ ಅಧಿಕಾರಿಗಳನ್ನು ನಿಭಾಯಿಸುವುದು
ಇದಕ್ಕೆ ಮುಂಚೆಯಿದ್ದದ್ದು ಭಾರತೀಯ ನಾಗರಿಕ ಸೇವೆ (1893–1946)(ಐಸಿಎಸ್)
ಸಿಬ್ಬಂದಿವರ್ಗದ ಸಂಖ್ಯೆ-ಗಾತ್ರ 5159 ಹುದ್ದೆಗಳು (ನೇರ ನೇಮಕಾತಿ - 66.67%, ಬಡ್ತಿ 33.33%) (2009)
ನಾಗರಿಕ ಸೇವಾ ಮುಖ್ಯಸ್ಥರು
ಸಂಪುಟ ಕಾರ್ಯದರ್ಶಿ
ಸದ್ಯಕ್ಕೆ: ಕೆ. ಎಂ. ಚಂದ್ರಶೇಖರ್‌

ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್‌ (IAS) ) ಎಂಬುದು ಭಾರತ ಗಣರಾಜ್ಯ ಸರ್ಕಾರದ ಕಾರ್ಯಕಾರಿ ವಿಭಾಗದ ಆಡಳಿತಾತ್ಮಕ ನಾಗರಿಕ ಸೇವೆಯಾಗಿದೆ.

ದೇಶಾದ್ಯಂತ ಐಎಎಸ್‌ ಅಧಿಕಾರಿಗಳು ನಿರ್ಣಾಯಕ ಹುದ್ದೆಗಳಲ್ಲಿರುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರಶಾಹಿಗಳನ್ನು ನಿರ್ವಹಿಸುವಲ್ಲಿ ಈ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ. ಮೂರು ಅಖಿಲ ಭಾರತ ಸೇವೆಗಳಲ್ಲಿ ಇದೂ ಒಂದು.[]

ನಾಗರಿಕ ಸೇವೆಗಳ ಸ್ವಾತಂತ್ರ್ಯ

[ಬದಲಾಯಿಸಿ]

ಈ ಅಧಿಕಾರಿ ವರ್ಗವು ಯಾವುದೇ ಹಿಂಜರಿಕೆ, ಬೆದರಿಕೆಗೆ ಹೆದರದೆ ಹಾಗೂ ಹಣಕಾಸಿನ ಅಸ್ಥಿರತೆಗೆ ಅಂಜದೆ, ತಮಗನಿಸಿದ್ದನ್ನು ಹೇಳಬೇಕು ಮತ್ತು ಮಾಡಬೇಕು. ಈ ರೀತಿ ರಾಷ್ಟ್ರವನ್ನು ಒಗ್ಗೂಡಿಸುವ ಅತ್ಯಗತ್ಯ ಅಂಶ ಎಂದು ಭಾರತದ ಸಂವಿಧಾನಾತ್ಮಕವಾಗಿ ರಚಿತ ಶಾಸನಾಂಗದ ಪ್ರತಿನಿಧಿ ಸಭೆ, Constituent Assembly of India ನಿರ್ಣಯಿಸಿತ್ತು. ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್‌ಸಿ ಶಿಫಾರಸಿನ ಮೇರೆಗೆ, ಕೇಂದ್ರ ಸರ್ಕಾರವು ಐಎಎಸ್‌ ಅಧಿಕಾರಿಗಳನ್ನು ನೇಮಿಸಿ ಆಯಾ ರಾಜ್ಯ ಸರ್ಕಾರಗಳ ಅಗತ್ಯದ ಸೇವಾಡಳಿತಕ್ಕೆ ಒದಗಿಸುತ್ತದೆ. ಸಂಬಂಧಿತ ರಾಜ್ಯ ಸರ್ಕಾರಗಳು ಐಎಎಸ್‌ ಅಧಿಕಾರಿಗಳ ಬಗೆಗೆ ನಿಯಂತ್ರಣ ವಹಿಸಬಹುದಾದರೂ, ಕೇಂದ್ರ ಸರ್ಕಾರ ಮತ್ತು ಯುಪಿಎಸ್‌ಸಿಯ ಅನುಮತಿಯಿಲ್ಲದೆ ಐಎಎಸ್‌ ಹಾಗೂ ಇತರೆ ಅಖಿಲ ಭಾರತ ಸೇವಾ ಅಧಿಕಾರಿಗಳ ವಿರುದ್ಧ ಯಾವುದೇ ಛೀಮಾರಿ ಅಥವಾ ಶಿಸ್ತಿನ ಕ್ರಮ ಕೈಗೊಳ್ಳುವಂತಿಲ್ಲ. ನಾಗರಿಕ ಸಮಾಜದ ಹಲವು ಕ್ಷೇತ್ರಗಳಿಂದ ಈ 'ರಕ್ಷಣೆ'ಯು ಕೆಲವೊಮ್ಮೆ ತೀವ್ರ ಟೀಕೆಗೆ ಗುರಿಯಾಗಿದೆ.

ಸ್ಥಾಪನಾ ವ್ಯವಸ್ಥೆ

[ಬದಲಾಯಿಸಿ]

ಪ್ರವೇಶ ಮತ್ತು ಪರೀಕ್ಷೆ

[ಬದಲಾಯಿಸಿ]

ಭಾರತದಲ್ಲಿನ ಹಲವು ಆಡಳಿತಾತ್ಮಕ ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ನಾಗರಿಕ ಸೇವಾ ಪರೀಕ್ಷೆ ನಡೆಸಲಾಗುತ್ತದೆ. ಕೇಂದ್ರೀಯ ಲೋಕ ಸೇವಾ ಆಯೋಗವು (ಯುಪಿಎಸ್ ಸಿ)ಈ ನಾಗರಿಕ ಸೇವಾ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ಮೂರು ಹಂತಗಳಿವೆ: ಪ್ರಾಥಮಿಕ ಪರೀಕ್ಷೆ, ಪ್ರಧಾನ ಪರೀಕ್ಷೆ ಹಾಗೂ ಸಂದರ್ಶನವಿದೆ. ಇವು ಬಹಳಷ್ಟು ಸ್ಪರ್ಧಾತ್ಮಕತೆಯುಳ್ಳವು ಎಂದು ಹೆಸರಾಗಿವೆ. ಇತ್ತೀಚೆಗೆ, ಪ್ರಾಥಮಿಕ ಪರೀಕ್ಷೆಯ ರೂಪರೇಖೆಯನ್ನು ಬದಲಾಯಿಸಲಾಗಿದೆ. ಸುಮಾರು 23 ಐಚ್ಛಿಕ ವಿಷಯಗಳಿದ್ದವು, ಜೊತೆಗೆ, ಸಾಮಾನ್ಯ ಅಧ್ಯಯನ ಪತ್ರಿಕೆಯೂ ಇತ್ತು. ಈಗ ಪ್ರಾಥಮಿಕ ಪರೀಕ್ಷೆಯಲ್ಲಿ ಯಾವುದೇ ಐಚ್ಛಿಕ ವಿಷಯಗಳಿರುವುದಿಲ್ಲ. ಬದಲಿಗೆ, ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಬರೆಯಲೇಬೇಕಾದ ಎರಡನೆಯ ಪರೀಕ್ಷೆಯುಂಟು. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಡಳಿತಾತ್ಮಕ ಕುಶಲತೆಯನ್ನು ಪರೀಕ್ಷಿಸುತ್ತದೆ. ಆದ್ದರಿಂದ ಈ ಪರೀಕ್ಷೆಗೆ ನಾಗರಿಕ ಸೇವಾ ಕುಶಲತಾ ಪರೀಕ್ಷೆ ಎನ್ನಲಾಗಿದೆ. ಸಿವಿಲ್ ಸರ್ವಿಸ್ ಆಪ್ಟಿಟ್ಯುಡ್ ಟೆಸ್ಟ್ [CSAT]ಎನ್ನುತ್ತಾರೆ.ಕುಶಲತೆ, ಸಾಮಾನ್ಯ ಗಣಿತ, ಸಮಗ್ರ ಇಂಗ್ಲಿಷ್‌ ಭಾಷೆ ಇತ್ಯಾದಿ ಸೇರಿದಂತೆ, ಇದರಲ್ಲಿ ಹಲವು ವಿಭಾಗಗಳಿವೆ. ಐಎಎಸ್‌ನಲ್ಲಿ ಪ್ರವೇಶ ಬಹಳ ದುಸ್ತರವೆನಿಸಿದೆ. ಇದರೊಂದಿಗಿನ ಸ್ಥಾನಮಾನ, ಸಂಬಳ-ಸೌಲಭ್ಯಗಳು ಹಾಗೂ ಅಂತಹ ಹುದ್ದೆಯೊಂದಿಗಿರುವ ಅನುಕೂಲ ಮತ್ತು ಸವಲತ್ತುಗಳಿರುವ ಕಾರಣ, ಹಲವು ಅಭ್ಯರ್ಥಿಗಳು ಭಾರತೀಯ ಆಡಳಿತಾತ್ಮಕ ಸೇವೆಯನ್ನು ತಮ್ಮ ಪ್ರಥಮ ಆಯ್ಕೆ ಎಂದು ಹಲವು ಅರ್ಜಿದಾರರು ಅಭಿಪ್ರಾಯಪಟ್ಟಿದ್ದಾರೆ. ಉದಾಹರಣೆಗೆ, 2005ರ ಸಮೂಹದಲ್ಲಿನ, ಆಯ್ಕೆಯ 425 ಅಭ್ಯರ್ಥಿಗಳಲ್ಲಿ, 398 ಜನರು ತಮ್ಮ ಮೊದಲ ಆದ್ಯತೆಗನುಸಾರ ಐಎಎಸ್‌, 18 ಜನರು ಐಎಫ್‌ಎಸ್‌ ಹಾಗೂ ಕೇವಲ ಒಂಬತ್ತು ಅಭ್ಯರ್ಥಿಗಳು ಐಪಿಎಸ್‌ ಆಯ್ದುಕೊಳ್ಳಲು ಇಚ್ಛಿಸಿದರು.ಎರಡನೆಯ ಆಯ್ಕೆಯಲ್ಲಿ 200 ಅಭ್ಯರ್ಥಿಗಳು ಐಪಿಎಸ್ ಆಯ್ಕೆ ಮಾಡಿಕೊಂಡರೆ,ಅಲ್ಲದೇ 155 ಅಭ್ಯರ್ಥಿಗಳು ಐಎಫ್ ಎಸ್ ನ್ನು ತಮ್ಮ ಎರಡನೆಯ ಆಯ್ಕೆಯಾಗಿಸಿಕೊಂಡಿದ್ದರು.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ನಾಲ್ಕು ಬಾರಿ ಹಾಗೂ ಒಬಿಸಿ ಅಭ್ಯರ್ಥಿಗಳಿಗಾಗಿ ಗರಿಷ್ಠ ಏಳು ಬಾರಿ ಪರೀಕ್ಷೆ ಬರೆಯಲು ಅನುಮತಿಯಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಎಷ್ಟು ಬಾರಿಯಾದರೂ ಪರೀಕ್ಷೆಗೆ ಹಾಜರಾಗಬಹುದು. ಪರೀಕ್ಷೆಗೆ ಹಾಜರಾಗಲು ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ/ಪಂಗಡದವರಿಗೆ 35, ಒಬಿಸಿಗಾಗಿ 33 ಹಾಗೂ ಇತರೆ ವರ್ಗದವರಿಗೆ 30. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯು ಆ ವರ್ಷ ಆಗಸ್ಟ್‌ 1ರಂದು 30ರ ವಯಸ್ಸು ದಾಟಿರಬಾರದು. ಕನಿಷ್ಠ ವಯೋಮಿತಿ 21 ವರ್ಷ. UPSC ಪ್ರವೇಶ ಪರೀಕ್ಷೆ ಗೆ ನಿಮ್ಮ ವಯಸ್ಸು ನಿರ್ದರಿಸಿಕೊಳ್ಳಿ.

ಪ್ರತಿವರ್ಷ, ಸುಮಾರು 200,000 ಅಭ್ಯರ್ಥಿಗಳಲ್ಲಿ 850 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆದರೆ, ಶ್ರೇಯಾಂಕ ಗಳಿಸಿದವರು (50 ಅಥವಾ 100 ಅತ್ಯುತ್ತಮ ಅಭ್ಯರ್ಥಿಗಳು) ಮಾತ್ರ ಐಎಎಸ್ ಅಥವಾ ಐಎಫ್‌ಎಸ್‌ ಆಯ್ಕೆಗಾಗಿ ಅರ್ಹತೆ ಪಡೆಯುವವರು. ಸ್ವೀಕೃತಿಯ ದರ 0.01%ರಷ್ಟಿದ್ದು, ಇದು ವಿಶ್ವದಲ್ಲೇ ಅತಿ ಸ್ಪರ್ಧಾತ್ಮಕ ಪರೀಕ್ಷೆ ಎನಿಸಿದೆ.

ನಿಗದಿ ಮತ್ತು ನಿಯೋಜನೆ

[ಬದಲಾಯಿಸಿ]

ಐಎಎಸ್‌ಗೆ ಆಯ್ಕೆಯಾದ ನಂತರ, ಅಭ್ಯರ್ಥಿಗಳನ್ನು ವಿವಿಧ ರಾಜ್ಯವಾರು ಗುಂಪು (ಕ್ಯಾಡರ್‌)ಗಳಾಗಿ ಹಂಚಲಾಗುತ್ತದೆ. ಮೂರು ಜಂಟಿ ವರ್ಗಗಳ ಗುಂಪು ಇರುತ್ತದೆ: (ಆಸ್ಸಾಂ–ಮೇಘಾಲಯ, ಮಣಿಪುರ–ತ್ರಿಪುರ, ಮತ್ತು ಅರುಣಾಚಲ ಪ್ರದೇಶಗೊವಾ–ಮಿಝೊರಾಮ್‌–ಕೇಂದ್ರಾಡಳಿತ ಪ್ರದೇಶಗಳು (ಎಜಿಎಂಯುಟಿ)) ಹೊರತುಪಡಿಸಿ, ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಹ ಕೇಡರ್ ಸಮೂಹವಿದೆ.

ಲಾಲ್ ಬಹಾದುರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಶಿಕ್ಷಣ ಸಂಸ್ಥೆ , ಮಸ್ಸೂರಿ, ಉತ್ತರಾಖಂಡ

"ಸ್ಥಳೀಯ-ಹೊರಗಿನವರ ಅನುಪಾತ" (ತಮ್ಮ ರಾಜ್ಯದಲ್ಲೇ ನಿಯೋಜಿತರಾಗಿರುವ ಅಧಿಕಾರಿಗಳು) 1:2ರಷ್ಟು ಪ್ರಮಾಣದಲ್ಲಿ ಕಾಯ್ದುಕೊಳ್ಳಲಾಗಿದೆ. ಸ್ಥಳೀಯರಾಗಿ. ತಮ್ಮ ರಾಜ್ಯವಲ್ಲದೇ ಇತರೆ ರಾಜ್ಯಗಳ ಸರದಿಪಟ್ಟಿಯ ಪ್ರಕಾರ, ಉಳಿದವರನ್ನು ಪರರಾಜ್ಯದವರಾಗಿ ನಿಯೋಜಿಸಲಾಗುವುದು. ತಮ್ಮದೇ ರಾಜ್ಯಗಳಲ್ಲಿ ಸ್ಥಳೀಯರಿಗಾಗಿ ಹುದ್ದೆ ಲಭ್ಯವಿಲ್ಲದಿದ್ದಾಗ, ಯಾವುದೇ ರಾಜ್ಯದ ಗುಂಪು ಮತ್ತು ಅಭ್ಯರ್ಥಿಗಳಿಗಾಗಿ ಯಾವುದೇ ವಿಕಲ್ಪವಿರಲಿಲ್ಲ. ಇವರನ್ನು ಈ ಸ್ಥಿತಿ 2008ರ ತನಕ ಮುಂದುವರೆದಿತ್ತು. A,H,M,T ಅಕ್ಷರಗಳೊಂದಿಗೆ ಆರಂಭಗೊಳ್ಳುವ ಸರದಿಪಟ್ಟಿಯ ಕ್ರಮದಲ್ಲಿ ವಿವಿಧ ರಾಜ್ಯಗಳಿಗೆ ಆ ವರ್ಷದ ಅವಧಿಗಾಗಿ ನಿಯೋಜಿಸಲಾಗುತ್ತಿತ್ತು. ಉದಾಹರಣೆಗೆ, ಒಂದು ನಿರ್ದಿಷ್ಟ ವರ್ಷದಲ್ಲಿ ಸರದಿಪಟ್ಟಿಯು 'A'ಇಂದ ಆರಂಭವಾದಲ್ಲಿ, ಆ ಸರದಿಪಟ್ಟಿಯಲ್ಲಿರುವ ಮೊದಲ ಅಭ್ಯರ್ಥಿಯು ಆಂಧ್ರಪ್ರದೇಶ ರಾಜ್ಯದ ಐಎಎಸ್‌ ಕ್ಯಾಡರ್‌ಗೆ ಹೋಗುವರು. ಮುಂದಿನ ಅಭ್ಯರ್ಥಿಯು ಬಿಹಾರಕ್ಕೆ, ನಂತರದವರು ಛತ್ತೀಸಗಢಕ್ಕೆ, ಗುಜರಾತ್‌. ಈ ರೀತಿ ಕಾಗುಣಿತಾಕ್ಷರದ ಅನುಕ್ರಮದಲ್ಲಿ ನಿಯೋಜಿತರಾಗುವರು. ತರುವಾಯ ವರ್ಷ ಸರದಿಪಟ್ಟಿಯು 'H' ಅಕ್ಷರದಿಂದ ಆರಂಭವಾಗುತ್ತದೆ. ಇದು ಹರಿಯಾಣ ಅಥವಾ ಹಿಮಾಚಲ ಪ್ರದೇಶವನ್ನು ಉಲ್ಲೇಖಿಸಬಹುದು. ಹಿಂದಿನ ಸಲ 'H' ಸರದಿಯಲ್ಲಿ ಹರಿಯಾಣ ಎಂದು ಉಲ್ಲೇಖಿಸಿದರೆ, ಈ ಸಲ ಅಧಿಕಾರಿಗಳನ್ನು ಹಿಮಾಚಲಪ್ರದೇಶಕ್ಕೆ ನಿಯೋಜಿಸುವುದರೊಂದಿಗೆ ಆರಂಭವಾಗುವುದು. ಇಂತಹ ಸಂಕೀರ್ಣ ವ್ಯವಸ್ಥೆಯಂತೆ ವಿವಿಧ ರಾಜ್ಯಗಳ ಅಧಿಕಾರಿಗಳನ್ನು ಭಾರತದೆಲ್ಲೆಡೆ ನಿಯೋಜಿಸಲಾಗುವುದು. ಆದರೆ ಈ ಅಧಿಕಾರಿಗಳಿಗೆ ಲಭ್ಯವಾಗುವ ಅನುಭವದ ಪ್ರಮಾಣದಲ್ಲಿ ಬಹಳಷ್ಟು ವ್ಯತ್ಯಾಸವಾಗುವುದುಂಟು. ಏಕೆಂದರೆ ಕೆಲವು ರಾಜ್ಯಗಳು ಕೈಗಾರಿಕಾ ಕ್ಷೇತ್ರದಲ್ಲಿ ಮುಂದುವರೆದಿದ್ದರೆ, ಇನ್ನು ಕೆಲವು ರಾಜ್ಯಗಳು ಹಿಂದುಳಿದಿವೆ. ಈ ಅಧಿಕಾರಿಗಳು ತಮ್ಮ ಸೇವಾ ಅವಧಿಯುದ್ದಕ್ಕೂ ಒಂದೇ ರಾಜ್ಯದ ಕ್ಯಾಡರ್‌ಗೆ ನಿಯೋಜಿತರಾಗಿರುವುದರಿಂದ, ಆಯಾ ರಾಜ್ಯಗಳ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ವೃತ್ತಿಪರ ಅನುಭವವೂ ಸಹ ಲಭಿಸುವುದು. ಉದಾಹರಣೆಗೆ, ಇತರೆ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್‌ ಅಧಿಕಾರಿಗಳಿಗೆ ಹೋಲಿಸಿದರೆ, ಹಿಂದುಳಿದ, ಅಭಿವೃದ್ಧಿ ಪ್ರಮಾಣ ಕಡಿಮೆಯಿರುವ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ವೃತ್ತಿಪರ ಅನುಭವ ಕಡಿಮೆಯಿರುವುದು ರುಜುವಾತಾಗಿರುತ್ತದೆ. ಇನ್ನೊಂದು ರಾಜ್ಯದ ಐಎಎಸ್‌/ಐಪಿಎಸ್‌/ಐಎಫ್‌ಎಸ್‌ ಕ್ಯಾಡರ್‌ ಅಧಿಕಾರಿಯನ್ನು ವಿವಾಹವಾಗುವುದರ ಮೂಲಕ ನಿಯೋಜಿತವಾಗಿರುವ ರಾಜ್ಯವನ್ನು ಬದಲಾಯಿಸಬಹುದು. ಅಧಿಕಾರಿಯೊಬ್ಬರು ತಮ್ಮ ಸ್ವ-ರಾಜ್ಯದ ಕ್ಯಾಡರ್‌ಗೆ ಕೆಲ ದಿನ ಹೋಗಿ ಬರಬಹುದು. ನಂತರ ಪುನಃ ಅವರು ತಮ್ಮ ನಿಯೋಜಿತ ಕ್ಯಾಡರ್‌ಗೆ ವಾಪಸಾಗಬೇಕು.

ಇಂತಹ ರೂಪುರೇಖೆಯ ಕೇಂದ್ರೀಕರಣ ಪ್ರಭಾವವು ವ್ಯವಸ್ಥೆಯ ವಿನ್ಯಾಸಕರಿಗೆ ಬಹಳಷ್ಟು ಮುಖ್ಯವಾಗಿತ್ತು. ಆದರೆ ಹಲವು ವರ್ಷಗಳಿಂದ ಮತ್ತು ಕಾಲಾನಂತರದಿಂದ ಈ ವಿಚಾರ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ಈ ಸೇವೆಯ 50ನೆಯ ವಾರ್ಷಿಕೋತ್ಸವದಲ್ಲಿ, ಈ ಹಿಂದಿನ, ಸಂಪುಟ ಕಾರ್ಯದರ್ಶಿ ನಿರ್ಮಲ್‌ ಮುಖರ್ಜಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ,'ದಕ್ಷತೆ ಕಾಣಬೇಕಾದರೆ, ಐಎಎಸ್‌ ಬದಲಿಗೆ ಪ್ರತ್ಯೇಕವಾದ ರಾಜ್ಯ, ಕೇಂದ್ರೀಯ ಮತ್ತು ಸ್ಥಳೀಯವಾಗಿ ಅಧಿಕಾರ ವ್ಯವಸ್ಥೆಗಳನ್ನು ಜಾರಿಗೆ ತರಬೇಕು' ಎಂದು ಅಭಿಪ್ರಾಯಪಟ್ಟರು.[] ಇಂತಹ ಸುಧಾರಣೆಯಿಲ್ಲದಿರೆ, ಐಎಎಸ್‌ ಆದೇಶ ಮತ್ತು ನಿಯಂತ್ರಣಾ ವ್ಯವಸ್ಥೆ ಕ್ರಮತಪ್ಪಬಹುದು; ಇನ್ನಷ್ಟು ಪರಸ್ಪರ ವಿಚಾರ ವಿನಿಮಯದ, ಆಂತರಿಕವಾದ ಅವಲಂಬನಾತ್ಮಕ ವ್ಯವಸ್ಥೆಗಳಲ್ಲಿ ಅವ್ಯವಸ್ಥೆ ಕಾಣುವುದು ಎಂಬ ತಳಮಳ-ಕಾಳಜಿಯ ಅಭಿಪ್ರಾಯಗಳು ಕೇಳಿಬರುತ್ತಿವೆ.[]

ರಾಜ್ಯದಲ್ಲಿ ನಾಗರಿಕ ಸೇವಾಧಿಕಾರಿಯ ಅಧಿಕಾರಗಳು ಮತ್ತು ವ್ಯಾಪ್ತಿ

[ಬದಲಾಯಿಸಿ]

ತಮ್ಮ ಕಾರ್ಯವ್ಯಾಪ್ತಿಯಲ್ಲಿನ ಕಾನೂನು, ಸುವ್ಯವಸ್ಥೆ ಮತ್ತು ಸಾಮಾನ್ಯ ಆಡಳಿತ ನಿರ್ವಹಣೆಯು ಒಬ್ಬ ನಾಗರಿಕ ಸೇವೆಯಲ್ಲಿರುವ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.

ಪದವಿ ಹುದ್ದೆ ಹೆಸರುಗಳು

[ಬದಲಾಯಿಸಿ]
ಚಿತ್ರ:Progression of IAS.jpg
ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಐಎಎಸ್‌ ಅಧಿಕಾರಿಗಳ ಹುದ್ದೆ-ಬಡ್ತಿಗಳು

ಭಾರತೀಯ ಆಡಳಿತಾತ್ಮಕ ಸೇವಾ ಅಧಿಕಾರಿಗಳ ಅವಧಿಗಳು:

ಭಾರತ ಸರ್ಕಾರದಲ್ಲಿನ ಹುದ್ದೆ ಮಟ್ಟ ಮತ್ತು ಶ್ರೇಣಿ ಆದ್ಯತೆಯ ಕ್ರಮ
(ರಾಷ್ಟ್ರಪತಿಯ ಅಪ್ಪಣೆಯಂತೆ)
1 ಕಿರಿಯ ಶ್ರೇಣಿಯ ಸೇವಾವಧಿ ಆರಂಭ-ಪ್ರವೇಶಿಕಾ ಮಟ್ಟ --
2 ಹಿರಿತನದ ಸೇವಾವಧಿ ಭಾರತ ಸರ್ಕಾರದ ಉಪ-ಕಾರ್ಯದರ್ಶಿ (ಇದಕ್ಕೆ ಸಮಾನ) --
3 ಕಿರಿಯ ಆಡಳಿತ --
4 ಆಯ್ಕೆ ದರ್ಜೆ ಭಾರತ ಸರ್ಕಾರದಲ್ಲಿ ನಿರ್ದೇಶಕ --
5 ಜಂಟಿ ಕಾರ್ಯದರ್ಶಿ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ 26
6 ಹೆಚ್ವುವರಿ ಕಾರ್ಯದರ್ಶಿ ಭಾರತ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ 25
7 ಸಂಪುಟ ಕಾರ್ಯದರ್ಶಿ ಭಾರತ ಸರ್ಕಾರದ ಕಾರ್ಯದರ್ಶಿ
(ಇಲಾಖೆಯಲ್ಲಿನ ಅತ್ಯುನ್ನತ ಹುದ್ದೆ )
23
8 ಸಂಪುಟ ಕಾರ್ಯದರ್ಶಿ ಭಾರತ ಸರ್ಕಾರದಲ್ಲಿ ಸಂಪುಟ ಕಾರ್ಯದರ್ಶಿ (ಏಕೈಕ)
ಅತ್ಯುನ್ನತ ಶ್ರೇಣಿಯ ಹುದ್ದೆ, (Ex-Officio ಮತ್ತು ಭಾರತ ಗಣರಾಜ್ಯದಲ್ಲಿ ನಾಗರಿಕ ಸೇವಾ ಮಂಡಳಿಯ ಅಧ್ಯಕ್ಷ; ಭಾರತ ಸರ್ಕಾರದ ನಿಯಮಾವಳಿಗಳು ಮತ್ತು ವ್ಯವಹಾರಗಳಡಿ ಐಎಎಸ್‌ ಹಾಗೂ ಎಲ್ಲಾ ನಾಗರಿಕ ಸೇವಾ ವಿಭಾಗದ ಅಧ್ಯಕ್ಷ )
11

ವೇತನ ವಿವರಗಳೊಂದಿಗೆ ಆರನೆಯ ವೇತನಾ ಆಯೋಗದ ವರದಿಯನ್ನು ಇಲ್ಲಿ ವೀಕ್ಷಿಸಬಹುದಾಗಿದೆ. http://india.gov.in/govt/studies/ias_revised_eng.pdf Archived 2011-04-27 ವೇಬ್ಯಾಕ್ ಮೆಷಿನ್ ನಲ್ಲಿ.

ಬದಲಾವಣೆಗಾಗಿ ಅಭಿಪ್ರಾಯ ಪ್ರಸ್ತಾಪ

[ಬದಲಾಯಿಸಿ]

ಸವಾಲುಗಳು

[ಬದಲಾಯಿಸಿ]

ಜಾಗತಿಕ ಕಾವಲು ಸಮಿತಿ ಟ್ರ್ಯಾನ್ಸ್ಪರೆನ್ಸಿ ಇಂಟರ್ನ್ಯಾಷನಲ್‌, ತನ್ನ ಭ್ರಷ್ಟಾಚಾರ ಮಾಪನಾ ಸೂಚ್ಯಾಂಕದಲ್ಲಿ ಪಟ್ಟಿ ಮಾಡಿದ 102 ದೇಶಗಳಲ್ಲಿ, ಭಾರತಕ್ಕೆ 73ನೆಯ ಸ್ಥಾನ ನೀಡಿತ್ತು. ಆನಂತರದ 2008ರ ಸಮೀಕ್ಷೆಯಲ್ಲಿ, 128 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 85ನೆಯ ಸ್ಥಾನ ನೀಡಿತ್ತು. ಇನ್ನೊಂದೆಡೆ,ವರ್ಲ್ಡ್ ಎಕಾನಾಮಿಕ್ ಫೊರಮ್,ವಿಶ್ವ ಆರ್ಥಿಕ ವೇದಿಕೆಯು ಸಮೀಕ್ಷೆ ನಡೆಸಿದ 49 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 44ನೆಯ ಸ್ಥಾನ ನೀಡಿತ್ತು.[] ಏಷ್ಯಾದ ಪ್ರಮುಖ ಆರ್ಥಿಕತೆಗಳ ಬಗ್ಗೆ 2009ರಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಸಿಂಗಪುರ, ಹಾಂಗ್‌ಕಾಂಗ್‌, ಥಾಯ್ಲೆಂಡ್‌, ದಕ್ಷಿಣ ಕೊರಿಯಾ, ಜಪಾನ್‌, ಮಲೇಷ್ಯಾ, ತೈವಾನ್‌, ವಿಯಟ್ನಾಮ್‌, ಚೀನಾ, ಫಿಲಿಪೀನ್ಸ್‌ ಮತ್ತು ಇಂಡೊನೇಷ್ಯಾ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ದೇಶದ ಅಧಿಕಾರಿಗಳು ಕನಿಷ್ಠಪಕ್ಷವಾದರೂ ದಕ್ಷ ಎಂದು ನಿರ್ಣಯಿಸಿದೆ. ಜೊತೆಗೆ, ಭಾರತದಲ್ಲಿನ ನಾಗರಿಕ ಸೇವಾ ಸಿಬ್ಬಂದಿಯೊಂದಿಗೆ ಕೆಲಸ ಮಾಡುವುದೆಂದರೆ ತೀವ್ರ ನಿಧಾನ ಗತಿಯ ಮತ್ತು ನರಕಯಾತನಾಮಯ ಅನುಭವ ಎಂದೂ ತಿಳಿಸಿದೆ.[]

ಆಗ 1990ರ ದಶಕದಲ್ಲಿ, ಭಾರತೀಯ ಆರ್ಥಿಕತೆಯ ಸುಧಾರಣೆ ಮತ್ತು ಲೈಸೆನ್ಸ್‌ ಸಾಮ್ರಾಜ್ಯ ಅಂತ್ಯಗೊಂಡು ಆರ್ಥಿಕತೆಯ ಬಾಗಿಲು ತೆರೆಯಿತು. ಹಿಂದಿನ ಯುಗದಲ್ಲಿ ನಿಯಂತ್ರಣಾತ್ಮಕ ವ್ಯವಸ್ಥೆಯನ್ನು ರದ್ದುಗೊಳಿಸಿ, ನಾಗರಿಕ ಸೇವಾ ಅಧಿಕಾರಿಗಳ ಮೇಲಿನ ಹಿಡಿತವನ್ನು ಸಡಿಲಿಸಿತು. ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿನ ಬಂಡವಾಳ ಹಿಂತೆಗೆತ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಾಗೂ ಸರ್ಕಾರಿ ಗುತ್ತಿಗೆ ಪಡೆಯುವ ಸಮಯ ಲಂಚ ತೆಗೆದುಕೊಳ್ಳುವ ದುರಭ್ಯಾಸಗಳು ಬೆಳಕಿಗೆ ಬಂದಿವೆ. ಹಲವು ದಶಕಗಳ ಕಾಲ ಭಾರತೀಯ ಉದ್ದಿಮೆಗಳು ತಮ್ಮ ಉದ್ದಿಮೆ ಸ್ಥಾಪಿಸುವಾಗ ಬೆಳೆಸಿಕೊಂಡ ಭ್ರಷ್ಟ ನೀತಿಗಳನ್ನು ಇಂದು ವಿದೇಶಿ ಉದ್ದಿಮೆಗಳೂ ಸಹ ಕರಗತಗೊಳಿಸಿಕೊಂಡಿವೆ.[]

ವರ್ಷಗಳಾನಂತರದಲ್ಲಿ, ಭಾರತೀಯ ಅಧಿಕಾರಶಾಹಿ (ಆಡುಭಾಷೆಯಲ್ಲಿ ಬಾಬುಗಿರಿ ) ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಅದರಲ್ಲೂ ವಿಶಿಷ್ಟವಾಗಿ ರಾಜಕೀಯ ಭ್ರಷ್ಟಾಚಾರದೊಂದಿಗಿನ ನಿಕಟ ಸಂಬಂಧ, ಹೊಣೆಗಾರಿಕೆಯ ಕೊರತೆ ಹಾಗೂ ನಿಯಂತ್ರಣಾತ್ಮಕ ವ್ಯವಸ್ಥೆಯ ದೌರ್ಬಲ್ಯ ಇನ್ನೂ ಉಳಿದಿರುವ ಹಲವು ಕಾರಣಗಳನ್ನು ಮುಂದಿಟ್ಟಿದ್ದಾರೆ. ವಿಪರೀತ ಕೇಂದ್ರೀಕೃತವಾಗಿರಿಸುವ ವ್ಯವಸ್ಥೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ತಮ್ಮದೇ ಎನ್ನುವ ಮೊಂಡು ಅಧಿಕಾರಶಾಹಿಯೇ ಈ ರೀತಿಯ ಭ್ರಷ್ಟಾಚಾರಕ್ಕೆ ಮುಖ್ಯ ಕಾರಣ ಎಂದು ಇತರರು ಅಭಿಪ್ರಾಯಪಟ್ಟಿದ್ದಾರೆ. ಹಲವು ಸರ್ಕಾರಗಳು ಸುಧಾರಣೆ ತರಲು ಯತ್ನಿಸಿದರೂ, ಈ ಪರಿವರ್ತನೆಗೆ ಈ ಐಎಎಸ್ ಅಧಿಕಾರಿಗಳ ತಡೆಯೊಡ್ಡುವಿಕೆಯೇ ಮುಖ್ಯ ಕಾರಣ ಎಂದು ಸಮೀಕ್ಷೆಗಳು ಸ್ಪಷ್ಟವಾಗಿ ತಿಳಿಸಿವೆ.[] ಈಗಿರುವ ದರಿದ್ರ ಭ್ರಷ್ಟಾಚಾರ ಮತ್ತು ಕೆಂಪು ಪಟ್ಟಿಯಿಂದಾಗಿ, ಭಾರತದ ಆರ್ಥಿಕತೆ ಹಾಳಾಗುವುದೆಂದು ಕೆಲವು ತಜ್ಞರು ನಂಬಿದ್ದಾರೆ. ಈ ರೀತಿಯ ರಾಜಕೀಯ ಮತ್ತು ಅಧಿಕಾರಶಾಹಿ ಭ್ರಷ್ಟಾಚಾರ ಮತ್ತು ವ್ಯವಸ್ಥಿತ ಅದಕ್ಷತೆಯಿಂದಾಗಿ ವಿದೇಶಿ ಉದ್ದಿಮೆಗಳು ಭಾರತದಲ್ಲಿ ಬಂಡವಾಳ ಹೂಡಿ ವಾಣಿಜ್ಯ ಸ್ಥಾಪಿಸುವುದೂ ಕಷ್ಟಸಾಧ್ಯ. ಹೂಡಿಕೆಯ ಕೊರತೆಯಿಂದಾಗಿ, ವಾಣಿಜ್ಯ ಯೋಜನೆಗಳು ವಿಳಂಬವಾಗಿ, ಅದರಿಂದ ವೆಚ್ಚವೂ ಮಿತಿಮೀರಿಹೋಗಿ, ಮಂಗನಂತೆ ಚಂಚಲವಾದ ಮಾರುಕಟ್ಟೆ ಆರ್ಥಿಕತೆಯಲ್ಲಿ ವೆಚ್ಚಗಳು ಮುಗಿಲುಮುಟ್ಟಲಿವೆ.[] ಅಲ್ಲದೇ, ಇತ್ತೀಚಿನ ವರ್ಷಗಳಲ್ಲಿ, ಏಷ್ಯಾದ ಹಲವು ಭ್ರಷ್ಟ ಆರ್ಥಿಕತೆಯ ದೇಶಗಳಲ್ಲಿ ಆರ್ಥಿಕತೆಯ ಹಿಗ್ಗು ಮಾಸಿಹೋದ ನಂತರ ಹಿನ್ನೆಡೆಯುಂಟಾಗಿದೆ. ಇದರಿಂದಾಗಿ, ಸರಿಪಡಿಸುವ ಕ್ರಮಗಳಿಗೆಡೆಗೆ ಗಮನ ಹರಿಸುವುದು ಬಹಳಷ್ಟು ಅಗತ್ಯವಿದೆ.[][೧೦]

ಸುಧಾರಣೆಯ ಅಗತ್ಯ

[ಬದಲಾಯಿಸಿ]

ಐಎಎಸ್‌ ಸೇವೆಗಳ ಮೂಲಕ ರಾಜ್ಯಗಳ ಅಸ್ತಿತ್ವದ ಆಧಾರವನ್ನು ಗಟ್ಟಿಗೊಳಿಸಬೇಕಾಗಿದೆ;ಬಿರುಕು-ಭಿನ್ನತೆಗಳನ್ನು ಮೀರಿ, ಭಾರತ ರಾಷ್ಟ್ರದ ಏಕತೆ ಮತ್ತು ಭಾವೈಕ್ಯವನ್ನು ಉತ್ತೇಜಿಸುತ್ತದೆ ಎಂಬ ಮಾತು ಇಂದಿನ ಕಾಲದಲ್ಲಿ ಜನರನ್ನು ನಂಬಿಸುವುದು ಅಸಾಧ್ಯವೆನ್ನುವಷ್ಟು ಕಷ್ಟವಾಗಿದೆ. ಎಲ್ಲಾ ಕಾಲದಲ್ಲಿಯೂ ಸಮಕಾಲೀನತೆ ತರುವುದು ಸಾಧ್ಯವಾಗದು.ಸ್ವಾತಂತ್ರ್ಯ ಸಿಕ್ಕ ಕಾಲವೇ ಬೇರೆ,ಇಂದಿನ ಕಾಲವೇ ಬೇರೆ. ವ್ಯತ್ಯಾಸಗಳು ಏನೇ ಇರಲಿ, ಎಲ್ಲಾ ಭಾರತೀಯರಲ್ಲಿಯೂ ಒಂದೇ ರಾಷ್ಟ್ರಕ್ಕೆ ಸೇರಿರುವುದು ಎಂಬ ಭಾವನೆ ಮೂಡಿಸುವಂತಹ ಐತಿಹಾಸಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳಿಗೆ ಹೋಲಿಸಿದಲ್ಲಿ, ರಾಷ್ಟ್ರದ ಏಕತೆಯನ್ನು ಸುಭದ್ರಗೊಳಿಸುವಲ್ಲಿ ಅಖಿಲ-ಭಾರತ ಸೇವೆಗಳ ಕೊಡುಗೆ ಬಹಳ ಮಹತ್ತರವಾದದ್ದು ಎಂದು ಹೇಳಲಾಗದು. ಉನ್ನತ ಮಟ್ಟದ ನಾಗರಿಕ ಸೇವೆಯನ್ನು ಮೀಸಲುಗಳ ಮೂಲಕ ಇನ್ನಷ್ಟು ಪ್ರಾತಿನಿಧಿತ್ವ ತರುವ ಯತ್ನವು, ರಾಷ್ಟ್ರೀಯ ಏಕತೆಯತ್ತ ಕೇವಲ ಸೀಮಿತ ಪ್ರಮಾಣದ ಯತ್ನವಾಗಿದೆ. ಇದು ಭಾರತೀಯ ಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಜನಾಂಗೀಯ ಬಿರುಕುಗಳನ್ನು ಮುಚ್ಚುವಲ್ಲಿ ಕಿಂಚಿತ್ತೂ ನೆರವಾಗುವುದಿಲ್ಲ. ಜಾತಿ, ಧರ್ಮ ಮತ್ತು ಪ್ರಾದೇಶಿಕ ಪಕ್ಷಪಾತ ಹೊಂದಿರುವ ಇಂತಹ ಉತ್ಕೃಷ್ಟ ಆಡಳಿತವು ಹೇಗೆ ಉತ್ತಮವಾದ ಸಾಮಾನ್ಯ ಧ್ಯೇಯದತ್ತ ದೃಷ್ಟಿಯನ್ನು, ಯಾವ ರೀತಿಯಲ್ಲಿ ನೀಡಬಲ್ಲದು? ಅಧಿಕಾರಶಾಹಿಗಳು ಮತ್ತು ರಾಜಕಾರಣಿಗಳ ನಡುವಿನ ದೃಢರೇಖೆಯ ಏಕತೆಯು, ಜಾತಿಯ ಆಧಾರದ ಮೇಲೆ ರಚನೆಯಾಗಿರುವ ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಳ್ಳುವ ಐಎಎಸ್‌ ಅಧಿಕಾರಿಗಳ ಒಗ್ಗಟ್ಟನ್ನು ಮೀರುತ್ತದೆ. ಕೇವಲ ಸ್ವಾರ್ಥ ಅಥವಾ ವೃತ್ತಿಯಲ್ಲಿ ಮುನ್ನಡೆಯೇ ಏಕೈಕ ಉದ್ದೇಶವಾಗಿ ಮಾರ್ಪಡುವ ಸಾಧ್ಯತೆ ಹೆಚ್ಚು.

ಈ ವಿದ್ಯಮಾನವನ್ನು ವಿರೋಧಿಸುವ ದಕ್ಷ ಐಎಎಸ್‌ ಅಧಿಕಾರಿಗಳು ಈ ವ್ಯವಸ್ಥೆಯನ್ನು ಸರಿಪಡಿಸಲಾರರು. ಏಕೆಂದರೆ ಇಂತಹ ದರಿದ್ರ, ಅತಿ ಭ್ರಷ್ಟ ವ್ಯವಸ್ಥೆಯು ದಬ್ಬಾಳಿಕೆ, ಮಾನಸಿಕ ಹಿಂಸೆ, ಸ್ಥಳೀಯ ರಾಜಕಾರಣಿಗಳಿಂದ ಒತ್ತಡ, ಪದೇ-ಪದೇ ಪೂರ್ವಾಗ್ರಹ-ಪ್ರೇರಿತ ವರ್ಗಾವಣೆಗಳು ಹಾಗೂ ಇಂತಹ ದಕ್ಷ ಅಧಿಕಾರಿಗಳ ಕುಟುಂಬಗಳಿಗೆ ಜೀವಬೆದರಿಕೆ ಹಾಕುವವರಿಗೆ ಕುಮ್ಮಕ್ಕು ನೀಡುತ್ತವೆ. ಅಧಿಕಾರದ ದುರ್ಬಳಕೆ ಅಂತ್ಯಗೊಳಿಸಲು, ಅಖಿಲ ಭಾರತ ನಾಗರಿಕ ಸೇವಕರ ನೇಮಕಾತಿಯಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳ ಅಧಿಕಾರ ವ್ಯಾಪ್ತಿಯನ್ನು ಕಡಿಮೆಗೊಳಿಸಲು ಸದ್ಯದ ಮನಮೋಹನ ಸಿಂಗರ ಸರ್ಕಾರವು ನಿರ್ಧರಿಸಿದೆ. ಆದರೆ ಇಂತಹ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳು ಈ ವಿಚಾರಗಳಲ್ಲಿ ಮಧ್ಯೆ ಮೂಗು ತೂರಿಸುತ್ತಲೇ ಇರುತ್ತಾರೆ. ಅತ್ಯುತ್ತಮ ಆಡಳಿತಕ್ಕಾಗಿ, ಲೋಕಸೇವಾ ಸಂಸ್ಥೆಗಳಲ್ಲಿ ಸುಧಾರಣೆ ತರಲು ರಾಜಕೀಯ ಪ್ರೋತ್ಸಾಹ ದೊರೆಯದಿದ್ದಲ್ಲಿ, ಸೈದ್ಧಾಂತಿಕವಾಗಿ ಸೂಕ್ತವಿನ್ಯಾಸ ಹೊಂದಿರುವ ಯಾವುದೇ ಸಂಸ್ಥೆಯಾಗಲಿ, ಇದೇ ರೀತಿಯ ಒತ್ತಡ ಎದುರಿಸುವ ಸಾಧ್ಯತೆಯಿದೆ.

ರಾಷ್ಟ್ರೀಯ ಏಕತಾ ನೀತಿಗಳಿಗೆ ಹೊಂದಿಕೊಳ್ಳಲು ವಿಫಲವಾದ ಅಖಿಲ ಭಾರತೀಯ ಸೇವೆಗಳ ರದ್ದುಗೊಳಿಸುವಿಕೆಯು ಸೂಕ್ತ ಪರಿಹಾರ ಎನ್ನಲಾಗದು.ಇಂತಹ ನೀತಿಯಿಂದ ಯಾವುದೇ ಅದರಷ್ಟಕ್ಕದೇ ಪರಿಹಾರ ಸಿಗದು. ಇದೇನಾದರೂ ಜಾರಿಯಾದಲ್ಲಿ, ರಾಜ್ಯ ನಾಗರಿಕ ಸೇವಾ ಅಧಿಕಾರಿಗಳು ಪ್ರವರ್ಧಮಾನಕ್ಕೆ ಬರುವರು. ಇವರು ಇನ್ನಷ್ಟು ಸಂಕುಚಿತ ಬುದ್ಧಿಯ ಸ್ವಭಾವ ತೋರುವ ಸಾಧ್ಯತೆ ಇದೆ. ಐಎಎಸ್‌ನ್ನು ಸುಧಾರಿಸುವ ಯತ್ನವು ಸುಲಭದ ಕೆಲಸವಲ್ಲ. ‌ ಆಡಳಿತಾತ್ಮಕ ಸುಧಾರಣೆಗಳನ್ನು ತರಲು ರಚಿಸಲಾದ ಹಲವು ಆಯೋಗಗಳು, ಹಲವು ವರ್ಷಗಳಿಂದ ತಮ್ಮ ತಮ್ಮ ವರದಿ ಮತ್ತು ಶಿಫಾರಸುಗಳನ್ನು ಕಳುಹಿಸಿವೆ. ಆದರೂ ಈ ವರದಿಗಳು ಧೂಳು ಹೊದ್ದಿಕೊಂಡು ಮಲಗಿರುವ ಕಾರಣ, ಈ ಐಎಎಸ್‌ ಸಂಸ್ಥೆಗೆ ಯಾವುದೇ ಮೂಲಭೂತ ಬದಲಾವಣೆಯೂ ಆಗಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಐಎಸ್‌ ಅಧಿಕಾರಿಗಳು ಪ್ರಬಲ ಲಾಬಿ ರಚಿಸಿಕೊಂಡಿದ್ದಾರೆ. ಐಎಎಸ್‌ ಅಧಿಕಾರಿಗಳ ಸುತ್ತಲಿನ ಸಾಂವಿಧಾನಿಕ ರಕ್ಷಣೆಯನ್ನು ತೆಗೆಯುವುದರ ಮೂಲಕ, ಅವರನ್ನು ಸಾರ್ವಜನಿಕರತ್ತ ಬಹಳಷ್ಟು ಜವಾಬ್ದಾರಿಯುತರನ್ನಾಗಿಸಲು ತರಲಾದ ಸುಧಾರಣಾತ್ಮಕ ಕ್ರಮಗಳಿವೆ.ಆದರೂ, ಇದರಿಂದಾಗಿ ಅವರ ಸ್ಥಾನಮಾನಕ್ಕೇನಾದರೂ ಅಪಾಯ ತರುವಂತಹ ಯಾವುದೇ ಪ್ರಸ್ತಾಪವನ್ನು ಸಾರಾಸಗಟಾಗಿ ತಳ್ಳಿಹಾಕುವ ಲಾಬಿಯೊಂದಿದೆ. ಸಾರ್ವಜನಿಕ ಸೇವೆ ಒದಗಿಸುವಲ್ಲಿ ವಿಫಲರಾಗುವ ಅಧಿಕಾರಿಗಳು, ಅತಿ ಭ್ರಷ್ಟರು, ಪಕ್ಷಪಾತಿಗಳೂ ಸಹ ಆಗಿರುವ ಸಾಧ್ಯತೆ ಇದೆ. ಸಂವಿಧಾನವು ಒದಗಿಸುವ ನಿಗದಿತ ಅವಧಿಯ ಶ್ರೀರಕ್ಷೆಯ ಅನುಕೂಲ ಪಡೆಯುವರು ಸತ್ಯವಂತಿಕೆಯಿಂದ ಕೆಲಸ ಮಾಡಬೇಕಾದುದು ಅಗತ್ಯವಾಗಿದೆ. ಸಂವಿಧಾನಕವಾದ ನಿಯಮಗಳಿಂದಾಗಿ ಐಎಎಸ್‌ ಅಧಿಕಾರಿಗಳನ್ನು ಉಚ್ಛಾಟಿಸುವುದು ಬಹಳ ಕಷ್ಟ.

ಉನ್ನತಮಟ್ಟದ ನಾಗರಿಕ ಸೇವೆಯ ಉತ್ಕೃಷ್ಟತೆಯು, ಸದಸ್ಯರ ದಕ್ಷತೆಯನ್ನು ಖಚಿತಪಡಿಸುವುದಲ್ಲದೇ, ಪಟ್ಟಭದ್ರ ಹಿತಾಸಕ್ತಿಗಳನ್ನು ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿತ್ತು. ಆದರೆ ಇಂದು, ವಿಮರ್ಶಕರು ಒಪ್ಪಿಕೊಂಡಿರುವ ಪ್ರಕಾರ, 'ಅಧಿಕಾರಶಾಹಿ ವರ್ಗವು ಉತ್ಕೃಷ್ಟ ಎಂಬ ಕಾರಣಕ್ಕಾಗಿ ನಾವೂ ಅಧಿಕಾರಶಾಹಿಯಿಂದ ಬಹಳಷ್ಟು ನಿರೀಕ್ಷಿಸುತ್ತಿದ್ದೇವೆ. ಆದರೆ ಉತ್ಕೃಷ್ಟತೆಯೆಂಬುದು ನಿಷ್ಪಕ್ಷಪಾತ ಅಥವಾ ನ್ಯಾಯಯುತ ವರ್ತನೆಯ ಸಮಾನಪದಗಳಲ್ಲ' (ವೆಂಕಟರತ್ನಮ್‌, 2005). ಉನ್ನತಮಟ್ಟದ ನಾಗರಿಕ ಸೇವಾಧಿಕಾರಿಗಳ ಪಕ್ಷಪಾತವು, ರಾಷ್ಟ್ರೀಯ ಏಕತೆಯ ಧ್ಯೇಯಕ್ಕೆ ವಿರುದ್ಧವಾಗಿ ಹೋಗುತ್ತದೆ.ಹೀಗಾಗಿ ರಾಜಕೀಯ ಮತ್ತು ಅಧಿಕಾರಿಶಾಹಿಗಳು ಸಮವಾಗಿ ಏಕತೆಗೆ ಬದ್ದರಾಗುವಲ್ಲಿ ಪಾಲುದಾರಿಕೆ ಅವಶ್ಯವಾಗಿದೆ. ದೇಶ ಒಗ್ಗೂಡಿಸುವ ಐಎಎಸ್‌ನವರ ಪರಿಣಾಮಕಾರಿ ಶಕ್ತಿ-ಸಾಮರ್ಥವನ್ನು ಉತ್ತಮಗೊಳಿಸದಿದ್ದಲ್ಲಿ, ಹಾಗೂ ರಾಷ್ಟ್ರೀಯ ಏಕತೆಗಾಗಿ ಕೊಡುಗೆ ನೀಡುವ ಬದಲು ಅವರ ಪಕ್ಷಪಾತದ ಧೋರಣೆ ಮುಂದುವರೆದರೆ ಈಗಿರುವ ಸಾಮಾಜಿಕ ಬಿರುಕು ಇನ್ನಷ್ಟು ಹೆಚ್ಚಾಗುತ್ತದೆ; ಈ ವ್ಯವಸ್ಥೆಯ ಮೂಲ ಧ್ಯೇಯವನ್ನೇ ಅನರ್ಥಗೊಳಿಸುತ್ತದೆ.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಇಂಡಿಯನ್‌ ಬ್ಯೂರೊಕ್ರಸಿ ಅಟ್‌ ದಿ ಕ್ರಾಸ್‌ರೋಡ್ಸ್‌ , ಲೇಖಕರು: ಶ್ಯಾಮಲ್‌ ಕುಮಾರ್‌ ರಾಯ್‌. ಸ್ಟರ್ಲಿಂಗ್‌ ಸಂಸ್ಥೆಯಿಂದ ಪ್ರಕಟಿತವಾದದ್ದು, 1979.

[ಬದಲಾಯಿಸಿ]
  • ಕರಪ್ಷನ್‌ ಇನ್‌ ಇಂಡಿಯನ್‌ ಪಾಲಿಟಿಕ್ಸ್‌ ಅಂಡ್‌ ಬ್ಯೂರೊಕ್ರಸಿ , ಲೇಖಕರು: ಸತ್ಯವಾನ್‌ ಭಟ್ನಾಗರ್‌, ಎಸ್‌ ಕೆ ಶರ್ಮಾ, ಪಂಜಾಬ್‌ ವಿಶ್ವವಿದ್ಯಾನಿಲಯ. ಪ್ರಕಾಶಕರು: ಎಸ್‌ ಎಸ್‌ ಪಬ್ಲಿಕೇಷನ್ಸ್‌, 1991. ISBN 0688168949
  • ಬ್ರೇಕಿಂಗ್‌ ಫ್ರೀ ಆಫ್‌ ನೆಹ್ರು Archived 2011-01-07 ವೇಬ್ಯಾಕ್ ಮೆಷಿನ್ ನಲ್ಲಿ. (ವಿಶೇಷವಾಗಿ 5ನೆಯ ಅಧ್ಯಾಯ), ಲೇಖಕರು: ಸಂಜೀವ್ ಸಬ್ಲೋಕ್‌, ಪ್ರಕಾಶನ - ಅಂಥಮ್‌ ಪ್ರೆಸ್‌, 2008.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಭಾರತೀಯ ನಾಗರಿಕ ಸೇವೆಗಳು
  • ಅಖಿಲ ಭಾರತೀಯ ಸೇವೆ

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು" (PDF). Archived from the original (PDF) on 2009-04-16. Retrieved 2011-02-16.
  2. ಮುಖರ್ಜಿ, ನಿರ್ಮಲ್‌ ಪ್ರಕಾಶನಗೊಂಡ ಭಾಷಣ: "ರಿಸ್ಟ್ರಕ್ಚರಿಂಗ್‌ ದಿ ಬ್ಯೂರೊಕ್ರಸಿ: ಡು ಯು ನೀಡ್‌ ದಿ ಆಲ್‌-ಇಂಡಿಯಾ ಸರ್ವಿಸಸ್‌?"ಅರೊಡಾ, ಬಲವೀರ್‌ ಮತ್ತು ರಡಿನ್‌, ಬೆರಿಲ್‌, ಸಂಪಾದಕರು. ದಿ ಚೇಂಜಿಂಗ್‌ ರೋಲ್‌ ಆಫ್‌ ದಿ ಆಲ್‌-ಇಂಡಿಯಾ ಸರ್ವಿಸಸ್‌: ಅನ್‌ ಅಸೆಸ್ಮೆಂಟ್‌ ಅಂಡ್‌ ಅಜೆಂಡಾ ಫಾರ್‌ ಫ್ಯೂಚರ್‌ ರಿಸರ್ಚ್‌ ಆನ್‌ ಫೆಡರಲಿಸಮ್‌ ಅಂಡ್‌ ದಿ ಆಲ್‌-ಇಂಡಿಯಾ ಸರ್ವಿಸಸ್‌. ನ್ಯೂದಿಲ್ಲಿ: ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌, 2000.
  3. Radin, B.A. (2007). "The Indian Administrative Service (IAS) in the 21 stCentury: Living in an Intergovernmental Environment" (PDF). International Journal of Public Administration. 30 (12): 1525–1548. doi:10.1080/01900690701229848. Retrieved 2008-06-11.
  4. ಇಂಡಿಯಾ ಟ್ರೈಸ್‌ ಟು ರೂಟ್‌ ಔಟ್‌ ಬ್ಯುರೊಕ್ರಟಿಕ್‌ ಕರಪ್ಷನ್‌ Archived 2011-06-22 ವೇಬ್ಯಾಕ್ ಮೆಷಿನ್ ನಲ್ಲಿ. ಏಷ್ಯಾ ಟೈಮ್ಸ್‌, ಆಗಸ್ಟ್‌ 7, 2003.
  5. ಇಂಡಿಯನ್‌ ಬ್ಯೂರೊಕ್ರಸಿ ರಾಂಕಡ್‌ ವರ್ಸ್ಟ್‌ ಇನ್‌ ಏಷ್ಯಾ: ಸರ್ವೆ ದಿ ಟೈಮ್ಸ್‌ ಆಫ್‌ ಇಂಡಿಯಾ, ಜೂನ್‌ 3, 2009.
  6. ಕರಪ್ಷನ್‌ ಲಿಬರಲೈಸೇಷನ್‌ ಅಂಡ್‌ ಗ್ಲೋಬಲೈಸೇಷನ್‌ ಆಫ್‌ ಇಂಡಿಯನ್‌ ಎಕನಾಮಿ , ಲೇಖಕರು ಕುಲವಂತ್‌ ರಾಯ್‌ ಗುಪ್ತ. ಅಟ್ಲಂಟಿಕ್ ಪಬ್ಲಿಶರ್ಸ್ & ಡಿಸ್ಟ್ರಿಬುಟರ್ಸ್, 2005. ISBN 0688168949 ಪುಟ 123.
  7. ಕರಪ್ಷನ್‌ ಮೇಕಿಂಗ್‌ ಸೆನ್ಸ್‌ ಆಫ್‌ ಕರಪ್ಷನ್‌ ಇನ್‌ ಇಂಡಿಯಾ: ಅನ್‌ ಇನ್ವೆಸ್ಟಿಗೇಷನ್‌ ಇಂಟು ದಿ ಲಾಜಿಕ್‌ ಆಫ್‌ ಬ್ರೈಬರಿ , ಲೇಖಕರು: ಮೀರಾ ಫೆಲ್ಸ್‌. ಪ್ರಕಾಶನ: ಎಲ್‌ಐಟಿ ವರ್ಟಾಗ್‌ ಬರ್ಲಿನ್‌-'ಹಾಂಬರ್ಗ್‌-ಮ್ಯೂನ್ಸ್ಟರ್‌, 2008. ISBN 0688168949 ಪುಟಗಳು 221-225.
  8. ಇಂಡಿಯಾಸ್‌ ಸ್ಟ್ರಗಲ್‌ ಟು ಬಿಫ್ರೆಂಡ್‌ ಇನ್ವೆಸ್ಟರ್ಸ್‌ ಬಿಬಿಸಿ ನ್ಯೂಸ್‌, ಅಕ್ಟೊಬರ್‌ 11, 2004.
  9. Vittal, N. (2003). Corruption in India: The Roadblock to National Prosperity. Academic Foundation. ISBN 8171882870.Vittal, N. (2003). Corruption in India: The Roadblock to National Prosperity. Academic Foundation. ISBN 8171882870. ಆಯ್ದ ಭಾಗಗಳು Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ.
  10. ವಿಲ್‌ ಗ್ರೋತ್‌ ಸ್ಲೊ ಕರಪ್ಷನ್‌ ಇನ್‌ ಇಂಡಿಯಾ? ಫೋರ್ಬ್ಸ್‌ , Knowledge@Wharton. ಆಗಸ್ಟ್‌ 15, 2007


http://timesofindia.indiatimes.com/NEWS/India/MEA-stalling-Indias-rise-to-great-power/articleshow/4823808.cms http://timesofindia.indiatimes.com/india/CBI-registers-corruption-case-against-IAS-officer/articleshow/5869056.cms

ಬಾಹ್ಯ ಕೊಂಡಿಗಳು

[ಬದಲಾಯಿಸಿ]