ವಿಷಯಕ್ಕೆ ಹೋಗು

ಸುಮಂಗಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಮಂಗಲಾ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಸಣ್ಣಕತೆ, ಕಾವ್ಯ, ಜೀವನಚರಿತ್ರೆ, ಐತಿಹಾಸಿಕ ಸ್ಮಾರಕಗಳನ್ನು ಕುರಿತ,ಸಾಮಾಜಿಕ ಕಳಕಳಿಯ ಲೇಖನಗಳು, ವೈಚಾರಿಕ ಬರೆಹಗಳು, ಮೊದಲಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬರೆಹಗಾರ್ತಿ.

ಜನನ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

೧೯೬೮ರಲ್ಲಿ ಜನ್ಮವೆತ್ತ ಇವರು ಶಿವಮೊಗ್ಗ ಜಿಲ್ಲೆಸಾಗರ ತಾಲೂಕಿನ ಗೀಜಗಾರು ಗ್ರಾಮದವರು. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಬಳಿಕ ವಿಜಾಪುರ ಜಿಲ್ಲೆಯ ಸಿಂಧಗಿಯ ಕಾಲೆಜಲ್ಲಿ ಉಪನ್ಯಾಸಕಿಯಾಗಿ ಸುಮಾರು ೮ ವರ್ಷಗಳವರೆಗಿದ್ದರು. ಆ ನಂತರ ೨೦೦೩ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಹವ್ಯಾಸಿ ಪತ್ರಕರ್ತೆಯೂ ಆಗಿದ್ದಾರೆ. ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಂತರ-ಇಲಾಖೆಯ ನಿಯತಕಾಲಿಕಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ ರಂಗ

[ಬದಲಾಯಿಸಿ]

ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡಲು ಬಾಲ್ಯದಲ್ಲಿ ಕಂಡ ಅಪ್ಪನ ಪುಸ್ತಕ-ಪ್ರೀತಿಯೇ ಕಾರಣ ಎನ್ನುತ್ತಾರೆ, ಈ ಲೇಖಕಿ. ಅವರ ಮೊದಲಕತೆ ಸೀತಾಳೆ ಹೂ ಕನ್ನಡ ಕಥಾಲೋಕ ಎದ್ದುನಿಂತು ಗಮನಿಸುವಷ್ಟು ಪರಿಣಾಮಕಾರಿಯಾಗಿದೆ. ಕನ್ನಡದ ಹಲವಾರು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡ ಹಲವು ಕತೆಗಳು ಸೀತಾಳೆ ಹೂ ಮತ್ತು ಇತರ ಕಥೆಗಳು ಎಂಬ ಇವರ ಮೊದಲ ಕಥಾಸಂಕಲನದಲ್ಲಿ ೧೯೯೮ರಲ್ಲಿ ಕಾಣಿಸಿಕೊಂಡವು. ತದನಂತರ ೨೦೦೫ರಲ್ಲಿ ಜುಮುರು ಮಳೆ ಮತ್ತು ೨೦೦೯ ರಲ್ಲಿ ಕಾಲಿಟ್ಟಲ್ಲಿ ಕಾಲುದಾರಿ ಎಂಬ ಕಥಾಸಂಕಲನಗಳು ಬೆಳಕು ಕಂಡವು.

ವಿಜ್ಞಾನ ಮತ್ತು ಸಾಹಿತ್ಯ ಒಂದನ್ನೊಂದು ಬೆಸೆದುಕೊಂಡಿವೆ. ನಾವು ಬರೆಯುವ ಯಾವದೇ ವಿಷಯಗಳ ವಾಸ್ತವವನ್ನರಿಯಲು ವಿಜ್ಞಾನ ಸಹಾಯಮಾಡುತ್ತದೆ ಎಂದು ಇವರು ಅಭಿಪ್ರಾಯಪಡುತ್ತಾರೆ.ಜನಜೀವನವನ್ನು ಅವಲೋಕಿಸುತ್ತಾ, ಬದುಕಿನ ಹಾದಿಯನ್ನು ಕಥನಕಣ್ಣುಗಳಿಂದ ಶೋಧ ಮಾಡುತ್ತಿದ್ದೇನೆ ಎಂದು ತಮ್ಮ ಕೃತಿರಚನೆಯ ಬಗೆಯನ್ನು ಬಣ್ಣಿಸುತ್ತಾರೆ.

ಸಣ್ಣಕಥೆಗಳ ಸಂಕಲನ

[ಬದಲಾಯಿಸಿ]

೧. ಸೀತಾಳೆ ಹೂ ಮತ್ತು ಇತರ ಕತೆಗಳು ೧೯೯೮ರಲ್ಲಿ

೨. ಜುಮುರು ಮಳೆ - ಹನ್ನೆರಡು ಕತೆಗಳು ೨೦೦೫ರಲ್ಲಿ

೩. ಕಾಲಿಟ್ಟಲ್ಲಿ ಕಾಲುದಾರಿ ೨೦೦೯ರಲ್ಲಿ

೪. ಹನ್ನೊಂದನೇ ಅಡ್ಡರಸ್ತೆ ೨೦೧೪ರಲ್ಲಿ

ಕವನಗಳು

[ಬದಲಾಯಿಸಿ]

ಸು ಮಂ ಗ ಲಾ

[ಬದಲಾಯಿಸಿ]

ಜೀವನ ಚರಿತ್ರೆ ನಿರೂಪಣೆ

[ಬದಲಾಯಿಸಿ]

ಸರೋದ್ ಮಾಂತ್ರಿಕ ಪಂಡಿತ ರಾಜೀವ ತಾರಾನಾಥರ ಜೀವನರಾಗ, ೨೦೧೦ರಲ್ಲಿ

ಪ್ರಶಸ್ತಿಗಳು

[ಬದಲಾಯಿಸಿ]

೧. ಚೌಕಟ್ಟಿನಿಂದ ಹೊರಬಂದ ಚಿತ್ರ ಎ೦ಬ ಕತೆಗೆ ವಿಜಯ ಕರ್ನಾಟಕ ಪತ್ರಿಕೆಯ ೨೦೦೨ರ ಯುಗಾದಿ ಕಥಾಸ್ಪರ್ಧೆಯ ಮೊದಲ ಬಹುಮಾನ

೨. ಜುಮುರು ಮಳೆ ಸಂಕಲನಕ್ಕೆ ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿ.

೩. ಕಾಲಿಟ್ಟಲ್ಲಿ ಕಾಲುದಾರಿ ಕಥಾಸಂಕಲನಕ್ಕೆ

೪. "ಶಾಂತಾದೇವಿ ಕಣವಿ ಕಥಾ ಪುರಸ್ಕಾರ” - ಉತ್ತರ ಕರ್ನಾಟಕದ ಲೇಖಕಿಯರ ಸಂಘದ ಶಾಂತದೇವಿ ಕಣವಿ ದತ್ತಿನಿಧಿಯಿಂದ - ೨೦೧೩

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಸುಮಂಗಲಾ&oldid=924041" ಇಂದ ಪಡೆಯಲ್ಪಟ್ಟಿದೆ