ವಾಲ್ ಚಂದ್ ಹೀರಾಚಂದ್
ವಾಲ್ ಚಂದ್ ಹೀರಾಚಂದ್, ಒಬ್ಬ ದೂರದೃಷ್ಟಿಯ ಉದ್ಯಮಿ, [೧] 'ಬೆಂಗಳೂರನ್ನು ವಾಯುಯಾನದ ಭೂಪಟದಲ್ಲಿ ಮೂಡಿಸಿದ ಕೀರ್ತಿಶಾಲಿಗಳು'. ಕನ್ನಡ ನೆಲ, ಭಾರತದ ವಾಯುಯಾನದ ತವರೂರಾಗಲು 'ವಾಲ್ ಚಂದ್ ಹೀರಾಚಂದ'ರ ಪರಿಶ್ರಮ ಅನನ್ಯ. ಭಾರತದಲ್ಲಿ ಒಂದು ಸೈಕಲ್ ತಯಾರಿಸುವ ಕಾರ್ಖಾನೆ ಇಲ್ಲದ ಕಾಲದಲ್ಲಿ ಆಗಿನ ಮೈಸೂರು ಸಂಸ್ಥಾನದಲ್ಲಿ ವಿಮಾನಕಾರ್ಖಾನೆ ಸ್ಥಾಪಿತವಾಗಿದ್ದು ದೇಶಪ್ರೇಮಿ ಉದ್ಯಮಿಯೊಬ್ಬರ ಕನಸಿನ ಪ್ರೇರಣೆಯಾಗಿತ್ತು.[೨]
ಜನನ, ಬಾಲ್ಯ
[ಬದಲಾಯಿಸಿ]'ಸೇಠ್ ವಾಲ್ ಚಂದ್' [೩]ರವರು ೧೮೮೨ ರ ೨೩ ರ ನವೆಂಬರ್ ನಲ್ಲಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ದಿಗಂಬರ ಜೈನ ಕುಟುಂಬ'ದಲ್ಲಿ ಜನಿಸಿದರು. ಲಕ್ಷ್ಮಣರಾವ್ ಬಲ್ವಂತ್ ಪಾಠಕ್ ರೊಂದಿಗೆ ಸೇರಿ, ಅವರು ರೈಲು ಗುತ್ತಿಗೆಯ ಉದ್ಯಮ'ಕ್ಕೆ ಸಂಬಂಧಿಸಿದ ಪಾಠಕ್-ವಾಲ್ ಚಂದ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಆರಂಭಿಸಿದರು. ಬೊಂಬಾಯಿನಿಂದ ಪುಣೆಗೆ ಭೋರ್ ಘಾಟ್ ಮೂಲಕ ಕೊರೆದು ಹೊರಟ ರೈಲು ಹಳಿಮಾರ್ಗ ಈ ಕಂಪೆನಿಯ ಕಾರ್ಯವಾಗಿತ್ತು. ಸಿಂಧೂನದಿಯಮೇಲೆ ಕಾಲಾಬಾಗ್ ಸೇತುವೆಯ ನಿರ್ಮಾಣದ ಕೆಲಸವನ್ನೂ ಇದೇ ಕಂಪೆನಿ ಮಾಡಿತ್ತು.
ಉದ್ಯಮವಲಯಕ್ಕೆ ಪಾದಾರ್ಪಣೆ
[ಬದಲಾಯಿಸಿ]೧೯೧೯ರಲ್ಲಿ ಮೊದಲ ಮಹಾಯುದ್ಧದ ನಂತರ ವಾಲ್ ಚಂದ್,ಹಡಗು ಉದ್ಯಮಕ್ಕೆ ಕಾಲಿಟ್ಟರು. ಗ್ವಾಲಿಯರ್ ನ ಸಿಂಧಿಯಾ ರಾಜರೊಡನೆ ಮಾತುಕತೆ ನಡೆಸಿ, ಎಸ್.ಎಸ್.ಲಾಯಲ್ಟಿಯೆಂಬ ಒಂದು ಉಗಿಹಡಗನ್ನು ಕೊಂಡರು. ಬ್ರಿಟಿಷ್ ಸರ್ಕಾರ ಮಾತ್ರ ಒಡೆತನವನ್ನು ಹೊಂದಿದ್ದ ಆಗಿನ ಹಡಗು ಉದ್ಯಮಕ್ಕೆ ಹೊಸಬರಾಗಿದ್ದರೂ ಇವರಿಗೆ ಮೊದಲು ಯಾರಿಗೂ ಪರವಾನಗಿ ದೊರೆತಿರಲಿಲ್ಲ. ಮಹಾತ್ಮ ಗಾಂಧಿ ಯವರು ಹೆಮ್ಮೆಯಿಂದ ಅಂದು, ತಮ್ಮ 'ಯಂಗ್ ಇಂಡಿಯಾ' ಹಾಗೂ 'ಹರಿಜನ್' ಪತ್ರಿಕೆಯಲ್ಲಿ ದಾಖಲಿಸಿದ, 'ಮೊಟ್ಟಮೊದಲ ಸ್ವದೇಶಿ ಶಿಪ್ಪಿಂಗ್ ಕಂಪೆನಿ'ಯಾಗಿದ್ದ, ಸಿಂಧಿಯಾ ಸ್ಟೀಮ್ ನ್ಯಾವಿಗೆಷನ್ ಕಂ. ಲಿಮಿಟೆಡ್ ಹೆಸರಾಯಿತು. ವಿದೇಶಿಯರ ಜೊತೆ ಸ್ಪರ್ಧೆಗಿಳಿದ ನಮ್ಮ ದೇಸಿ ಉದ್ಯಮ ಶೀಲರನ್ನು ಗಾಂಧೀಜಿ ಕೊಂಡಾಡಿದ್ದರು. ಆಗ ವಾಲ್ ಚಂದರಿಗೆ ಮೊದಲು ಅರಿವಾಗಿದ್ದು, 'ಒಂದು ಸಶಕ್ತ ಶಿಪ್ ಯಾರ್ಡ್' ನ ನಿರ್ಮಾಣ, ಅಂದರೆ, ಹಡಗು ಕಟ್ಟುವ, ದುರಸ್ತಿಮಾಡುವ ತಾಣ, ಅತಿಅನಿವಾರ್ಯವೆಂದು ವಿಶಾಖಪಟ್ಟಣದಲ್ಲಿ ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ೧೯೪೦ ರಲ್ಲಿ ಸ್ಥಾಪಿಸಿದರು. ಆ ಕಂಪೆನಿಯ ಅಡಿಯಲ್ಲಿ ಮೊಟ್ಟಮೊದಲ ಹಡಗು "ಜಲುಶಾ" ೧೯೪೮ ರಲ್ಲಿ ಜವಹರಲಾಲ್ ನೆಹರೂ ರವರು ಉದ್ಘಾಟಿಸಿದ್ದರು. ಭಾರತದ ರೈಲು, ವಿಮಾನ, ಹಡಗು, ಕಾರು ಮುಂತಾದ ಉದ್ಯಮಳ ಹಿಂದೆ 'ವಾಲ್ ಚಂದ್' ರವರ ಆರಂಭದ ಶ್ರಮವೆದ್ದು ಕಾಣಿಸುತ್ತಿತ್ತು.[೪]
ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ ವಿಮಾನಕಾರ್ಖಾನೆ ಸ್ಥಾಪಿತವಾದ ೫ ವರ್ಷಗಳ ಬಳಿಕ ಬೊಂಬಾಯಿನ ಉಪನಗರವಾದ,ಕುರ್ಲಾದಲ್ಲಿ ೧೯೪೫ ರಲ್ಲಿ ಪ್ರೀಮಿಯರ್ ಆಟೋಮೊಬೈಲ್ಸ್ ಎಂಬ ಕಾರು ನಿರ್ಮಾಣದ ಕಂಪೆನಿ ತಲೆಯೆತ್ತಿತು. ಸ್ವಾತಂತ್ರ್ಯ ಪೂರ್ವದ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಗಳ ಜೊತೆ ತಮ್ಮ ಯೋಜನೆಗಳಿಗೆ ದುಡಿದರೂ ಭಾರತದ ಸ್ವಾತಂತ್ರ್ಯದ ಹೋರಟದಲ್ಲಿ ಅಚಲ ಬೆಂಬಲಿಗರಾಗಿ ಸ್ವದೇಶಿ ಸ್ವಾವಲಂಬನೆಯ ಹಾದಿಯಲ್ಲಿ ಮುನ್ನುಗ್ಗಿಸುವಷ್ಟು ಸಫಲರಾದವರು. ಅವರ ಬಹಳಷ್ಟು ಯೋಜನೆಗಳನ್ನು ಉದ್ಘಾಟಿಸಿದವರು ಸ್ವಾತಂತ್ರ್ಯ ಚಳುವಳಿಗಾರರು.
'ಸರ್ ಮಿರ್ಜಾ ಇಸ್ಮಾಯಿಲ್' ರವರ ಪ್ರೋತ್ಸಾಹ ನೆರವು
[ಬದಲಾಯಿಸಿ]ಸನ್, ೧೯೨೬ ರಿಂದ ೧೯೪೧ ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ, ಮಿರ್ಜಾ ಇಸ್ಮೇಲ್ ರವರು, ಉದ್ಯಮಿಗಳು ಮೇಲೇರಲು ಬಹಳವಾಗಿ ಕಾರಣರಾಗಿದ್ದರು.ನಾಲ್ಮಡಿ ಕೃಷ್ಣರಾಜ ಒಡೆಯರು ಆಗಿನ ಸಮಯದ ಮೈಸೂರಿನ ಅರಸರಾಗಿದ್ದರು. ಮಿರ್ಜಾ ರವರ ದಿವಾನರಾಗಿದ್ದ ಕಾಲದಲ್ಲಿ ಕಾಗದ, ಸಿಮೆಂಟ್, ಸ್ಟೀಲ್, ವಿದ್ಯುತ್ , ಬಲ್ಬ್, ಸಕ್ಕರೆ, ಪೋರ್ಸಲೇನ್, ಗಾಜು, ಖಾದಿ, ಮುಂತಾದ ಕಾರ್ಖಾನೆಗಳು ಸ್ಥಾಪಿತವಾಗಿದ್ದು. [೫]ಸರ್.ಎಂ.ವಿಶ್ವೇಶ್ವರಯ್ಯನವರು, ನೆಟ್ಟ ಬುನಾದಿಯಮೇಲೆ, 'ಮಿರ್ಜಾ ಇಸ್ಮಾಯಿಲ್' ರವರು ಕನಸಿನ ಸೌಧಗಳನ್ನು ನಿರ್ಮಿಸಿದರು. ಅವರ ಕಾಲಾವಧಿಯಲ್ಲಿ ಮೈಸೂರು ಸಂಸ್ಥಾನ, ಅತ್ಯಧಿಕ ಕಾರ್ಖಾನೆಗಳನ್ನು ಹೊಂದಿತ್ತು. ಮಿರ್ಜಾ,ಒಬ್ಬ ದಕ್ಷ ಆಡಳಿತಗಾರ ; ಜನರೊಡನೆ ನೇರವಾಗಿ ಸಂಪರ್ಕವನ್ನಿಟ್ಟುಕೊಂಡು ಅವರ ದುಗುಡ-ದುಮ್ಮಾನಗಳಿಗೆ ಸ್ಪಂದಿಸುತ್ತಿದ್ದು, ಶ್ರಮವಹಿಸಿ ಕೆಲಸಮಾಡುವ ಅಧಿಕಾರಿಗಳಿಗೆ ಸ್ಪೂರ್ಥಿಯ ಮಾದರಿಯಾಗಿದ್ದರು. 'ಕಾರು ನಿರ್ಮಾಣದ ಕಾರ್ಖಾನೆಯ ಸ್ಥಾಪನೆ'ಯನ್ನೂ ಮಾಡುವ ಆಶೆಯಿಟ್ಟುಕೊಂಡಿದರು. ಆದರೆ ಅದೆ ಸಮಯದಲ್ಲಿ ಮಹಾಪ್ರಭುಗಳಾಗಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರುತೀರಿಕೊಂಡಿದ್ದರು. ಮೈಸೂರು ರಾಜರನ್ನು ಸಂಪರ್ಕಿಸಿದಾಗ ಅರಸರು, ಸ್ಥಳವನ್ನು ಉಚಿತವಾಗಿ ನೀಡುವುದಾಗಿಯೂ ಸುಲಭದರದಲ್ಲಿ ನೀರು, ವಿದ್ಯುತ್ ಹಾಗೂ ಮತ್ತಿತರ ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ತಿಳಿಸಿದರು. ಮೈಸೂರು ಸಂಸ್ಥಾನ, ಯೆಲ್ಲಾ ವಿಧದ ನೆರವನ್ನು ನೀಡುವ ಭರವಸೆ ಕೊಟ್ಟಿದ್ದಾಗ್ಯೂ, ಬ್ರಿಟಿಷ್ ಸರಕಾರ,ಹೆಚ್ಚಿನ ರಿಯಾಯಿತಿಗಳನ್ನು ನೀಡಲು ಸಿದ್ಧವಿರಲಿಲ್ಲ. ವಿಮಾನ ಕಾರ್ಖಾನೆ,ಉದ್ಘಾಟನೆಯಾದ ಮೂರೇದಿನಗಳಲ್ಲಿ 'ವಿಮಾನ ಕಾರ್ಖಾನೆಯ ಕಟ್ಟಡಗಳು' ಮೇಲೆದ್ದು ನಿಂತವು. ಅದಕ್ಕೆ ಬೇಕಾದ ರಸ್ತೆಗಳು, ರನ್ ವೇ ಸಿದ್ಧವಾಯಿತು. ಹಗಲಿರುಳು ಶ್ರಮಿಸಿದ, ಕಾರ್ಖಾನೆಯ ಶ್ರಮಿಕರ ತಂಡದ ನೆರವಿನಿಂದ, ೭ ತಿಂಗಳಲ್ಲಿ ಮೊಟ್ಟಮೊದಲ, ’ಹಾರ್ಲೋ ಟ್ರೇನರ್ ವಿಮಾನ’ ಜೋಡಣೆಗೊಂಡು, ಜುಲೈ, ೨೯, ೧೯೪೧ ರಂದು ನೆಲಬಿಟ್ಟು ಆಗಸದಲ್ಲಿ ಹಾರಿತು.
ಮರಣ
[ಬದಲಾಯಿಸಿ]ಸನ್, ೧೯೪೯ ರಲ್ಲಿ ಪಾರ್ಶ್ವವಾಯುವಿಗೆ ಈಡಾದ ವಾಲ್ ಚಂದ್ [೬]ರವರು, ೧೯೫೩ ರಲ್ಲಿ ತೀರಿಕೊಂಡರು.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2012-08-27. Retrieved 2014-03-30.
- ↑ "'ಕಣಜ,' ಅಂತರಜಾಲ ಕನ್ನಡ ಜ್ಞಾನಕೋಶ 'ವಾಲಚಂದ್ ಹೀರಾಚಂದ್'". Archived from the original on 2016-03-06. Retrieved 2014-11-12.
- ↑ "ಆರ್ಕೈವ್ ನಕಲು". Archived from the original on 2013-12-14. Retrieved 2014-03-30.
- ↑ http://www.jainsamaj.org/rpg_site/literature2.php?id=3735&cat=62
- ↑ "ಆರ್ಕೈವ್ ನಕಲು". Archived from the original on 2014-04-09. Retrieved 2014-03-30.
- ↑ "ಆರ್ಕೈವ್ ನಕಲು". Archived from the original on 2013-01-25. Retrieved 2014-03-30.