ವಿಷಯಕ್ಕೆ ಹೋಗು

ನಾವಲ್ ಹರ್ಮುಸ್ ಜಿ ಟಾಟಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೧೯೦೪-೧೯೮೯)

ಚಿತ್ರ:Naval tata01.jpg
'ನಾವಲ್ ಹರ್ಮುಸ್ ಜಿ ಟಾಟಾ'

'ನಾವಲ್ ಹರ್ಮುಸ್ ಜಿ ಟಾಟಾ','ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ' ರವರ ನೇರ ವಂಶಾವಳಿಯಲ್ಲಿ ಬರದಿದ್ದರೂ ದೂರದಿಂದ ಸಂಬಂಧಿಗಳೆಂದು ಹೇಳಬಹುದು.[] ಟಾಟಾ ಸಾಮ್ರಾಜ್ಯದಲ್ಲಿ ಪಾದಾರ್ಪಣೆಮಾಡುವ ಯೋಗ ಅವರಿಗೆ ದೈವವಶದಿಂದ ದೊರೆಯಿತು. ಆದರೆ 'ನಾವಲ್' ಆ ಅವಕಾಶಗಳನ್ನು ದೇವರವರವೆಂದೇ ಪರಿಗಣಿಸಿ, ತಮ್ಮ ಶುದ್ಧಮನಸ್ಸಿನಿಂದ 'ಟಾಟಾ ಕೈಗಾರಿಕಾ ಸಾಮ್ರಾಜ್ಯ'ದ ಏಳಿಗೆಗಾಗಿ ತಮ್ಮ ತನು-ಮನಗಳನ್ನು ಮುಡಿಪಾಗಿಟ್ಟರು.[]

ಜನನ, ಬಾಲ್ಯ, ವಿದ್ಯಾಭ್ಯಾಸ

[ಬದಲಾಯಿಸಿ]

'ನಾವಲ್ ಹರ್ಮುಸ್ ಜಿ ಟಾಟಾ' ರವರ ಬಾಲ್ಯದ ೪ ನೇ ವರ್ಷದಲ್ಲೇ ತಂದೆಯವರ ವಿಯೋಗವಾಯಿತು. ಹತ್ತಿರದ ಸಂಬಂಧಿಗಳ ನೆರವಿನಿಂದ, ನವಸಾರಿಪಟ್ಟಣಕ್ಕೆ ಹೋದರು. ಕೊನೆಗೆ ಸೂರತ್ ಪಟ್ಟಣದಲ್ಲಿ ನೆಲೆಯೂರಬೇಕಾಯಿತು. ತಾಯಿಯವರ ಹೊಲಿಗೆ, ಹಾಗೂ ಕಸೂತಿಕೆಲಸಗಳಲ್ಲಿ ದೊರೆತ ಹಣದಿಂದ ಜೀವನ ನಿರ್ವಹಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಆ ಪರಿವಾರಕ್ಕೆ ದಿಕ್ಕಾದವರು, ಸರ್ ದೊರಾಬ್ ಟಾಟ ರವರು. ಜೆ.ಎನ್.ಪೆಟಿಟ್ ಪಾರ್ಸಿ ಅನಾಥಾಲಯದಲ್ಲಿ, ಭರ್ತಿಮಾಡಿದರು. ಸನ್, ೧೯೧೮ ರಲ್ಲಿ, ಸರ್. ರತನ್ ಟಾಟಾರವರು, ತಮ್ಮ ೪೭ ನೇ ವಯಸ್ಸಿನಲ್ಲಿ ಅಚಾನಕ್ ಇಂಗ್ಲೆಂಡ್ ನಲ್ಲಿ ನಿಧನರಾದರು. ಅವರ 'ಅಂತ್ಯಕ್ರಿಯೆ'ಗಳನ್ನು ಮಾಡುವ ಗಂಡುಸಂತಾನವಿಲ್ಲದೆ,ಲೇಡಿ ನವಾಜ್ ಬಾಯಿಯವರು, ನಾವಲ್ ಹರ್ಮುಸ್ ಜಿ ಯವರನ್ನು ದತ್ತುತೆಗೆದುಕೊಂಡರು. 'ನಾವಲ್'ರವರು, ಮುಂಬಯಿ ವಿಶ್ವವಿದ್ಯಾಲಯದಿಂದ 'ಎಕೊನಾಮಿಕ್ಸ್' ನಲ್ಲಿ ಪದವಿಗಳಿಸಿದ ಬಳಿಕ ಇಂಗ್ಲೆಂಡ್ ಗೆ ಹೋಗಿ 'ಅಕೌಂಟಿಂಗ್' ನಲ್ಲಿ ಪ್ರಶಿಕ್ಷಣ ಪಡೆದರು. ಸನ್, ೧೯೩೦ ರಲ್ಲಿ 'ಟಾಟ ಸಂಸ್ಥೆಗೆ ಪಾದಾರ್ಪಣೆ'ಮಾಡಿದರು. 'ಕಾಗದ-ಪತ್ರ ವಿಲೇವಾರಿ ಕಾರಕೂನ'ನಾಗಿ, ೧೩೦ ರೂಪಾಯಿಗಳ ವೇತನದಿಂದ ಪ್ರಾರಂಭಿಸಿದ ನಾವಲ್ ಟಾಟರವರು, ತಮ್ಮ ಶ್ರದ್ಧೆ, ಅಸಾಧಾರಣ-ಪರಿಶ್ರಮ ಹಾಗೂ ಪ್ರಾಮಾಣಿಕತೆಗಳಿಂದಾಗಿ, ಸ್ವಲ್ಪ ಸಮಯದಲ್ಲೇ ’ಟಾಟ ಟೆಕ್ಸ್ ಟೈಲ್ ಮಿಲ್ಸ್’, ಮತ್ತು ೩ ಟಾಟ ಎಲೆಕ್ಟ್ರಿಕ್ ಪವರ್ ಕಂಪೆನಿಗಳ ಛೇರ್ಮನ್ ಆಗಿ ನಿಯುಕ್ತರಾದರು. 'ಕಾರ್ಮಿಕರ ಸಂಘಟನೆಗಳ ಒಳಿತಿಗೆ ಅನೇಕ ಉತ್ತಮ ಕೆಲಸಗಳನ್ನು ಕೈಗೊಂಡರು. 'ಅಂತಾರಾಷ್ಟ್ರೀಯ ಲೇಬರ್ ಯೂನಿಯನ್ ನ ಸದಸ್ಯ'ರಾಗಿದ್ದ ಅವರು, 'ಅಂತಾರಾಷ್ಟ್ರೀಯ ಸಮಾಲೋಚನೆ'ಗಳಲ್ಲಿ ಭಾರತದ ಶ್ರಮಿಕರ ಅಹವಾಲುಗಳನ್ನು ಸಮರ್ಥವಾಗಿ ಪ್ರತಿನಿಧಿಸಿದ್ದರು. ಅಂತಾರಾಷ್ಟ್ರೀಯ ಗಿರಣಿಮಾಲೀಕರ ಸಂಸ್ಥೆಗೆ ಉಪಾಧ್ಯಕ್ಷರಾಗಿ ದುಡಿದರು. ನಾವಲ್ ಟಾಟರವರು, ಕಾರ್ಮಿಕರ ಮತ್ತು ಗಿರಣಿ ಮಾಲೀಕರ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸಿದ್ದರಿಂದ ಅನೇಕ ಪ್ರಶಸ್ತಿಗಳಿಗೆ ಭಾಜನರಾದರು. ಅವುಗಳಲ್ಲಿ ಮುಖ್ಯವಾದವುಗಳು :

  • ಸನ್ ೧೯೬೮ ರಲ್ಲಿ, ’ಸರ್ ಜೆಹಂಗೀರ್ ಮೆಡಲ್ ಫಾರ್ ಇನ್ ಡಸ್ಟ್ರಿ ಯಲ್ ಪೀಸ್’
  • ಸನ್, ೧೯೬೯ ರಲ್ಲಿ ಭಾರತಸರಕಾರದ ’ಪದ್ಮಭೂಷಣ ಪ್ರಶಸ್ತಿ’

ಕಾರ್ಮಿಕರ ಹಿತಾಸಕ್ತಿಗಳನ್ನು ಬಲ್ಲ ಉದ್ಯೋಗಪತಿ

[ಬದಲಾಯಿಸಿ]

ಮೊದಲನೆಯ ಹೆಂಡತಿ, ಸೂನಿ ಕಮಿಸಾರಿಯೆಟ್ ಗೆ, ರತನ್ ಹಾಗೂ ಜಿಮ್ಮಿ ಗಂಡು ಮಕ್ಕಳು. ಎರಡನೆಯ ಪತ್ನಿ, ಸಿಮೋನ್ ರವರಿಗೆ, ಒಬ್ಬ ಮಗ, ’ನೋಯೆಲ್.’ ೧೯೬೫ ರಲ್ಲಿ ’ಸರ್ ರತನ್ ಟಾಟ ಟ್ರಸ್ಟ್’ ಗೆ ಛೇರ್ಮನ್ ಆಗಿ, ೧೯೫೧ ನಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿಗೆ ಚೇರ್ಮನ್, ಜನರ ಕಷ್ಟಗಳನ್ನು ಸಮಚಿತ್ತದಿಂದ ಕೇಳಿ ಅವುಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಹಾಗಾಗಿ ಮನೆಯಲ್ಲಿ ಅವರ ಸಹಾಯಕ್ಕಾಗಿ ಬರುವವರ ಸಂಖ್ಯೆ ಹೆಚ್ಚಿತ್ತು. ಭಾರತದಲ್ಲಿ ಕ್ರೀಡೆಗಳಿಗೆ ಅತಿಯಾದ ಪ್ರೋತ್ಸಾಹಕೊಟ್ಟು ಯುವಕರನ್ನು ಸಜ್ಜುಗೊಳಿಸುವಲ್ಲಿ ನೆರವಾದರು. ಭಾರತದ ಇಂಡಿಯನ್ ಕೌನ್ಸಿಲ್ ಆಫ್ ಸ್ಪೋರ್ಟ್ಸ್ ಗೆ ಪ್ರಥಮ ಅಧ್ಯಕ್ಷರಾದರು. ಅವರ ನೆರವಿನಿಂದಾಗಿ ಹಾಕಿ ಆಟವನ್ನು ರಾತ್ರಿಯಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಆಡುವಂತಾಯಿತು. ೧೯೫೮ ಪ್ರಥಮಬಾರಿಗೆ, ಅವರ ಸಹಾಯ ಹಾಗೂ ಪ್ರೋತ್ಸಾಹದಿಂದಲೇ ಭಾರತ, ಲಂಡನ್ (೧೯೪೮), ಹೆಲ್ಸಿಂಕಿ, (೧೯೫೨), ಮತ್ತು ಮೆಲ್ಬೋರ್ನ್ 'ಒಲಂಪಿಕ್ ಕ್ರೀಡೆ'ಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲಲು ನೆರವಾಯಿತು.

'ನಾವಲ್ ಹರ್ಮುಸ್ ಜಿ ಟಾಟಾ'ರವರ ಆಸಕ್ತಿಗಳು

[ಬದಲಾಯಿಸಿ]

'ಜ್ಯೋತಿಷ್ಯ ಶಾಸ್ತ್ರ'ದಲ್ಲಿ ಒಲವು, ರಾಜಕೀಯದಲ್ಲಿ ಅತ್ಯಂತ ಆಸಕ್ತಿ,ಶಾಖಾಹಾರಿ, ವ್ಯವಸ್ಥಿತ ಶಿಸ್ತಿನ ಜೀವನ. ವಿಶ್ವದ ಆರ್ಥಿಕ-ಸಾಮಾಜಿಕ, ಕಾರ್ಮಿಕರ ಸಮಸ್ಯೆಗಳಲ್ಲಿ ತೊಡಗಿದ್ದಾಗ್ಯೂ, ಎಲ್ಲರೊಡನೆಯೂ ನಗುನಗುತ್ತ ತಾಳ್ಮೆಯಿಂದ ವರ್ತಿಸುತ್ತಿದ್ದರು. ಟಾಟ ವಾಣಿಜ್ಯ ವ್ಯಾಪಾರ, ಇಂಜಿನಿಯರಿಂಗ್, ಚೆಮಿಕಲ್ಸ್, ಮತ್ತು ಗ್ರಾಹಕರ ಆವಶ್ಯಕತೆಯ ದಿನನಿತ್ಯದ ಸಾಮಾನುಗಳ ತಯಾರಿಕೆ, ಸಂಪರ್ಕ, ದೂರವಾಣಿ, ವಲಯಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಿದಂತೆ, ಕಾರ್ಮಿಕರ ಸಮಸ್ಯೆಗಳೂ ಹೆಚ್ಚಾಗಿದ್ದವು. ನಾವಲ್ ಅವಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಒಬ್ಬ ಅಸಹಾಯಕ, ಹಾಗೂ ನಿರ್ಗತಿಕನಾಗಿ ಬೆಳೆದು ಬಂದು ವಿಧಿಯ ಪವಾಡದಿಂದ ಹಂತ ಹಂತವಾಗಿ ಪ್ರಗತಿಯ ಪಥವೇರಿದ ವಾವಲ್ ಹರ್ಮುಸ್ ಟಾಟರವರು, ಜೀವನದ ಕಟು ಸತ್ಯಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ’ನಾನು ಮೊದಲು ಭಾರತೀಯ; ನಂತರ ಒಬ್ಬ ಉದ್ಯೋಗಪತಿ ಎನ್ನುತ್ತಿದ್ದರು'. ಭಾರತ ದೇಶದ ಭ್ಯವ್ಯ ಪರಂಪರೆ, ಹಾಗೂ ಸಂಸ್ಕೃತಿಗಳನ್ನು ಆಳವಾಗಿ ಪ್ರೀತಿಸಿ, ಗೌರವಿಸುತ್ತಿದ್ದರು.

'ನಾವಲ್ ಟಾಟ ರವರು,[] ಮೇ, ೧೯೮೯ ರಲ್ಲಿ, ದೈವಾಧೀನರಾದರು.

ಉಲ್ಲೇಖಗಳು

[ಬದಲಾಯಿಸಿ]
  1. "Tata titans". Archived from the original on 2015-01-08. Retrieved 2015-01-11.
  2. "A life lived from the heart". Archived from the original on 2014-12-02. Retrieved 2015-01-11.
  3. "Keeper of the flame, Naval Tata's wife, Simone*, recalls". Archived from the original on 2014-12-02. Retrieved 2015-01-11.