ವಿಷಯಕ್ಕೆ ಹೋಗು

ಕಾರಡಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರಡಗಿ ಸವಣೂರ ತಾಲ್ಲೂಕನ ಒಂದು ಗ್ರಾಮ. ಇಲ್ಲಿ ಸುಕ್ಷೇತ್ರ ಕಾರಡಗಿ ಶ್ರೀವೀರಭದ್ರೇಶ್ವರ ದೇವರ ಮಹಾರಥೋತ್ಸವನ್ನು ಶ್ರದ್ದಾ ಭಕ್ತಿ ಪೂರ್ವಕವಾಗಿ ಕೈಗೊಳ್ಳಲಾಗುತ್ತದೆ.

ರಥೋತ್ಸವ

[ಬದಲಾಯಿಸಿ]

ಮಹಾರಥೋತ್ಸವ ದೇವಸ್ಥಾನದ ಮಹಾದ್ವಾರದಿಂದ ಆರಂಭಗೊಂಡ ಭವ್ಯ ತೇರಿನ ಉತ್ಸವ ಪಾದಗಟ್ಟಿಯವರೆಗೆ ಜರುಗಿ ಪುನಃ ತೇರನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಮೂರು ದಿನಗಳ ಪರ್ಯಂತ ಜರುಗಲಿರುವ ಈ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ, ಮಹಾಗಣಾರಾಧನೆ, ಗುಗ್ಗಳ ಮಹೋತ್ಸವ ಹಾಗೂ ಸ್ವಾಮಿಯ ರಥೋತ್ಸವವನ್ನು ವಿಧಿವತ್ತಾಗಿ ಕೈಗೊಳ್ಳಲಾಗುತ್ತದೆ. ಹಾಗೂ ರಥೋತ್ಸವ ಅಂಗವಾಗಿ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗ ಮತ್ತು ಕಡುಬಿನ ಕಾಳಗ ಹಾಗೂ ಪಲ್ಲಕ್ಕಿ ಉತ್ಸವ ಜರುಗುತ್ತವೆ.

ಸವಣೂರ ತಾಲೂಕಿನ ಸುಪ್ರಸಿದ್ಧವಾದ ಕಾರಡಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಾಳೆಹೊನ್ನೂರು ಶ್ರೀ ಮದ್ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಶನಿವಾರ ಭೇಟಿಯಿತ್ತು ಪೂಜೆ ಸಲ್ಲಿಸಿದರು. ನಂತರ ಆಶೀರ್ವಚನದಲ್ಲಿ ಧರ್ಮ ಸಂದೇಶ ನೀಡಿದ ಜಗದ್ಗುರುಗಳು ಎಲ್ಲ ಜಾತಿ ಜನಾಂಗದ ಜನಸಮುದಾಯ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯದಿಂದ ಬಾಳಬೇಕಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಸಾರಿದ್ದಾರೆ. ಕಾರಡಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪ್ರಾಚೀನ ಇತಿಹಾಸ ಪವಿತ್ರ ಪರಂಪರೆಯನ್ನು ಹೊಂದಿದೆ. ಶ್ರೀ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ತಮಗೆ ಅತೀವ ಸಂತೋಷ ತಂದಿದೆ. ಶ್ರೀ ವೀರಭದ್ರೇಶ್ವರ ದೇವಸ್ಥಾನದ ಒಳ ಆವರಣವನ್ನು ಹೊಸ ವಿನ್ಯಾಸದೊಂದಿಗೆ ಸುಂದರ ಗೊಳಿಸಬೇಕೆಂಬ ಸಂಕಲ್ಪವನ್ನು ಬೆಳಗಲಿಯ ವಿರುಪಾಕ್ಷಯ್ಯ ಹಿರೇಮಠ ಹೊಂದಿದ್ದು ಮೂಲ ಸ್ವರೂಪ ಸ್ಥಿರವಾಗಿಟ್ಟುಕೊಂಡು ಅಭಿವೃದ್ಧಿ ಕಾರ್ಯ ಮಾಡಲು ಅನುಮತಿಯನ್ನು ಕೊಡಲಾಗಿದೆ. ಶ್ರೀ ವೀರಭದ್ರಸ್ವಾಮಿಯ ಜಾತ್ರೋತ್ಸವದ ಮುನ್ನ ಅಂದರೆ ಏಪ್ರೀಲ್ 17ರಂದು ಶ್ರೀ ಕ್ಷೇತ್ರದಲ್ಲಿ ಗಣಹೋಮ, ರುದ್ರಹೋಮ, ಚಂಡಿಹೋಮ ಪೂಜೆಯೊಂದಿಗೆ ವಿಶೇಷ ಧರ್ಮಸಮಾರಂಭ ನಡೆಸಲಾಗುವುದು ಎಂದು ಸುಳಿವು ನೀಡಿದರು. ನಾಡಿನ ನಾನಾ ಭಕ್ತರು ಬಂದು ಹೋಗುವ ಭಕ್ತ ಸಮುದಾಯಕ್ಕೆ ಹೆಚ್ಚಿನ ಸೌಕರ್ಯವನ್ನು ಒದಗಿಸಿಕೊಡಲು ಟ್ರಸ್ಟಿನವರು ಶ್ರಮವಹಿಸಿ ಕಾರ್ಯ ಮಾಡುತ್ತಿರುವುದಕ್ಕೆ ತಮ್ಮ ಹರುಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಕ್ತಿಮಂದಿರ ಕ್ಷೇತ್ರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು, ಟ್ರಸ್ಟಿನ ಅಧ್ಯಕ್ಷ ಮಾಜಿ ಶಾಸಕ ರಾಜಶೇಖರ ಸಿಂಧೂರ, ನಿರ್ದೇಶಕ ಸಿ. ಆರ್. ಪಾಟೀಲ, ಅಶೋಕ ದೇಸಾಯಿ, ರುದ್ರಗೌಡ ಪಾಟೀಲ ಒಳಗೊಂಡಂತೆ ಹಲವಾರು ಗಣ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

"https://kn.wikipedia.org/w/index.php?title=ಕಾರಡಗಿ&oldid=719483" ಇಂದ ಪಡೆಯಲ್ಪಟ್ಟಿದೆ