ಸವಣೂರ

ವಿಕಿಪೀಡಿಯ ಇಂದ
Jump to navigation Jump to search
{{#if:|
Savanur
ಸವಣೂರು
Savanuru
—  town  —
Savanur is located in Karnataka
Savanur
Savanur
Location in Karnataka, India
ರೇಖಾಂಶ: 14°58′01″N 75°21′00″E / 14.967°N 75.35°E / 14.967; 75.35Coordinates: 14°58′01″N 75°21′00″E / 14.967°N 75.35°E / 14.967; 75.35
Country  India
State Karnataka
District Haveri district
ವಿಸ್ತೀರ್ಣ
 - ಒಟ್ಟು ೫.೪೯ ಚದರ ಕಿಮಿ (೨.೧ ಚದರ ಮೈಲಿ)
ಎತ್ತರ ೫೭೩ ಮೀ (೧,೮೮೦ ಅಡಿ)
ಜನಸಂಖ್ಯೆ (2001)
 - ಒಟ್ಟು ೩೫,೫೬೩
 - ಸಾಂದ್ರತೆ ೬,೪೭೭.೭೮/ಚದರ ಕಿಮಿ (೧೬,೭೭೭.೪/ಚದರ ಮೈಲಿ)
{{{language}}} {{{ಭಾಷೆ}}}
PIN 581 118
ದೂರವಾಣಿ ಕೋಡ್ 08378
ಅಂತರ್ಜಾಲ ತಾಣ: www.savanurtown.gov.in

ಇದು ಹಾವೇರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಪ್ರೇಕ್ಷಣೀಯ ಸ್ಥಳಗಳು:[ಬದಲಾಯಿಸಿ]

ದೊಡ್ಡ ಹುಣಿಸೆಮರಗಳು:

ಸವಣೂರಿನ ಅತ್ಯದ್ಭುತ ತ್ರಿವಳಿ ಮರಗಳು ನೋಡುಗರನ್ನು ಮೂಕವಿಸ್ಮಿತಗೊಳಿಸುತ್ತವೆ. ಇವು Baobab ಮರಗಳೇ ಆಗಿದ್ದು, ಸುಮಾರು ೫೦೦೦ ವರ್ಷಗಳಷ್ಟು ಹಳೆಯವಿರಬಹುದು. ಇಡೀ ಭಾರತದಲ್ಲಿಯೇ ಬೇರೆಡೆಯೆಲ್ಲಿಯೂ ಇಂಥ ಮರಗಳು ಇರಲಿಕ್ಕಿಲ್ಲ! ಊರಿನ ಹೊರಭಾಗದಲ್ಲಿರುವ ಈ ಮರಗಳು ತ್ರಿಕೋಣಾಕೃತಿಯಲ್ಲಿ ನೆಡಲ್ಪಟ್ಟಿವೆ. ಈ ಜಾತಿಯ ಮರಗಳು ೨೫ ಮೀಟರುಗಳಷ್ಟು ಎತ್ತರ, ಹಾಗೂ ೧೧ ಮೀಟರುಗಳಷ್ಟು ದಪ್ಪ ಬೆಳೆಯುತ್ತವೆ. ಆದರೆ ಇಲ್ಲಿನ ಮರಗಳು ಈ ಅಳತೆಗಳನ್ನು ಮೀರುತ್ತವೆ! ಅತಿ ದೊಡ್ಡ ಮರವು ೧೮ ಮೀಟರ್ ದಪ್ಪ (!), ಇನ್ನೊಂದು ೧೬ ಮೀಟರ್ ದಪ್ಪ, ಹಾಗೂ ಕಡೆಯದು ೧೪ ಮೀಟರ್ ದಪ್ಪ ಇವೆ. ಸ್ಥಳೀಯರ ಪ್ರಕಾರ, ಶ್ರೀಕೃಷ್ಣನು ಈ ಮರಗಳನ್ನು ಹೊರದೇಶದಿಂದ ತಂದು ನೆಟ್ಟನು ಎಂಬುದಾಗಿದೆ. ಕರ್ನಾಟಕ ಸರ್ಕಾರವು ಇವುಗಳ ಸುತ್ತ ಬೇಲಿಯನ್ನು ರಚಿಸಿ ತುಸು ರಕ್ಷಣೆ ನೀಡಿದೆ. ಆದರೂ, ವಿಷಾದದ ಸಂಗತಿಯೆಂದರೆ, ಈ ಅದ್ಭುತ ಮರಗಳ ಬಗ್ಗೆ ಸ್ಥಳೀಯರಿಗೇ ಹೆಚ್ಚಿನ ಅರಿವು ಇಲ್ಲದಿರುವುದು! ಸೂಕ್ತ ಪ್ರಚಾರವಿದ್ದರೆ ಇದೊಂದು ಉತ್ತಮ ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಸಂಶಯವಿಲ್ಲ.

ಕೆಲವು ಚಿತ್ರಗಳನ್ನು ಇಲ್ಲಿ ನೀಡಲಾಗಿದೆ:

ಕಾರಡಗಿ:

ಇಲ್ಲಿ ಸುಕ್ಷೇತ್ರ ಕಾರಡಗಿ ಶ್ರೀವೀರಭದ್ರೇಶ್ವರ ದೇವರ ಮಹಾರಥೋತ್ಸವನ್ನು ಶ್ರದ್ದಾ ಭಕ್ತಿ ಪೂರ್ವಕವಾಗಿ ಕೈಗೊಳ್ಳಲಾಗುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]

ಕಾರಡಗಿ


ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಾನ. ಸವಣೂರ : ಶ್ರೀಮದ್ ಉತ್ತರಾಧಿಮಠದ ಪರಂಪರೆಯಲ್ಲಿನ 25 ನೇ ಯತಿಶ್ರೇಷ್ಠರಾದ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲ ವೃಂದಾವನ ಸನ್ನಿಧಿ ಸವಣೂರಿನಲ್ಲಿದೆ. ಶ್ರೀಗಳಿಗೆ ಸಾಕ್ಷಾತ್ ಗಂಗಾ ಪ್ರತ್ಯಕ್ಷಳಾದ ಶ್ರೀ ವಿಷ್ಣುತೀರ್ಥ ಪುಷ್ಕರಣಿ, ಅಹೋಬಲ ಲಕ್ಷ್ಮಿ ನರಸಿಂಹ ದೇವರ ಸನ್ನಿಧಿ, ಶ್ರೀ ಸತ್ಯಧರ್ಮರ ಸನ್ನಿಧಿಯೂ ಸವಣೂರಿನಲ್ಲಿದೆ, ವೈಷ್ಣವ ಪರಂಪರೆಯ ಅತ್ಯಂತ ಶ್ರದ್ಧಾ ಕೇಂದ್ರ ಹಾಗೂ ಪುಣ್ಯಕ್ಷೇತ್ರವಾಗಿದೆ ಸವಣೂರ,

ಸವಣೂರ ತಾಲೂಕಿನ ಸಿದ್ದಾಪೂರ ಗ್ರಾಮ ವಿಷ್ಣುತೀರ್ಥರ ಜನ್ಮಸ್ಥಳ. ಕಳಸೂರು ಶ್ರೀ ಸತ್ಯಧರ್ಮರ ತವರೂರು. ಸವಣೂರಿನ ಶ್ರೀಮಠದಲ್ಲಿಯೇ ಜಗನ್ನಾಥದಾಸರು ಶ್ರೀಮದ್ ಹರಿಮಥಾಮೃತಸಾರದ ಹಲವು ಸಂಧಿಗಳನ್ನು ರಚಿಸಿದರು ಎಂಬ ಐತಿಹ್ಯವಿದೆ. ಇಲ್ಲಿ ಸರಕಾರಿ ಬಾಲಕಿಯರ ಪ್ರೌಢ ಶಾಲೆ ಪ್ರಸಿದ್ಧವಾಗಿದೆ.

"https://kn.wikipedia.org/w/index.php?title=ಸವಣೂರ&oldid=1002543" ಇಂದ ಪಡೆಯಲ್ಪಟ್ಟಿದೆ