ವಿಷಯಕ್ಕೆ ಹೋಗು

ಇಂಡಿಯನ್‌ ಸ್ಕೂಲ್‌ ಆಫ್ ಬಿಸಿನೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಡಿಯನ್‌ ಸ್ಕೂಲ್‌ ಆಫ್ ಬಿಸಿನೆಸ್
[[File:
ಹೈದರಾಬಾದಿನಲ್ಲಿರುವ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಕ್ಯಾಂಪಸ್
|300px|alt=]]
ಸ್ಥಾಪನೆ೧೯೯೯
ಪ್ರಕಾರಖಾಸಗಿ ವಿದ್ಯಾಸಂಸ್ಥೆ
ಸ್ನಾತಕೋತ್ತರ ಶಿಕ್ಷಣ567 (2010)
ಸ್ಥಳಹೈದರಾಬಾದ್, ಆಂಧ್ರ ಪ್ರದೇಶ, ಭಾರತ
ಅಂತರಜಾಲ ತಾಣISB.edu

ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‌ಬಿ ) ಎನ್ನುವುದು ಭಾರತದ ಆಂಧ್ರಪ್ರದೇಶದ ಹೈದರಾಬಾದ್ನಲ್ಲಿರುವ ಅಂತರಾಷ್ಟ್ರೀಯ ವಾಣಿಜ್ಯ ಶಾಲೆಯಾಗಿದೆ. ಶಾಲೆಯು ವಾಣಿಜ್ಯ ನಿರ್ವಹಣಾಧಿಕಾರಿಗಳಿಗೆ ಮ್ಯಾನೇಜ್‌ಮೆಂಟ್ (ಪಿಜಿಪಿ), ಪೋಸ್ಟ್-ಡಾಕ್ಟರಲ್ ಶಿಕ್ಷಣಕ್ರಮಗಳಲ್ಲಿ ಸ್ನಾತಕೋತ್ತರ ಶಿಕ್ಷಣಕ್ರಮವನ್ನು, ಜೊತೆಗೆ ಕಾರ್ಯನಿರ್ವಹಣೆ ಶಿಕ್ಷಣವನ್ನು ಒದಗಿಸುತ್ತದೆ. ಇದರ ಯೋಚನೆಯು ಆಂಧ್ರಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಭವಿಷ್ಯದ 500 ವಾಣಿಜ್ಯೋದ್ಯಮಿಗಳ ಸಮೂಹದಿಂದ 1995 ರಲ್ಲಿ ಮೊಳಕೆಯೊಡೆಯಿತು[]. ಮ್ಯಾಕ್‌ಕಿನ್ಸೀ & ಕಂಪನಿ ವರ್ಲ್ಡ್‌ವೈಡ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ರಜತ್ ಗುಪ್ತಾ ಮತ್ತು ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ನಾರಾ ಚಂದ್ರಬಾಬು ನಾಯ್ಡು ಅವರುಗಳು ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ನಿರ್ವಹಿಸಿದರು. ವಾರ್ಟನ್ ಸ್ಕೂಲ್ ಆಫ್ ಬಿಸಿನೆಸ್, ಕೆಲ್ಲೋಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಲಂಡನ್ ಬಿಸಿನೆಸ್ ಸ್ಕೂಲ್ ಗಳು ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಸಹಯೋಗಿಗಳಲ್ಲಿ ಒಳಗೊಂಡಿದ್ದಾರೆ.[] ತ್ವರಿತ ಒಂದು-ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗವು ಐಎಸ್‌ಬಿಯ ವಿಶೇಷತೆಯಾಗಿದೆ. ಇದು ಗ್ಲೋಬಲ್ ಬಿಸಿನೆಸ್ ಸ್ಕೂಲ್ ಆಫ್ ನೆಟ್‌ವರ್ಕ್ನ ಸದಸ್ಯವಾಗಿದೆ. ಫೈನಾನ್ಶಿಯಲ್ ಟೈಮ್ಸ್ ನ ಜಾಗತಿಕ ಎಂಬಿಎ 2010 ರ ಶ್ರೇಣಿಗಳ ಪ್ರಕಾರ ಅತ್ಯುನ್ನತ 100 ಜಾಗತಿಕ ಬಿ-ಶಾಲೆಗಳ ಪಟ್ಟಿಯಲ್ಲಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಲ್ 12 ನೇ ಶ್ರೇಣಿಯನ್ನು ಪಡೆದಿದೆ[].

ಇತಿಹಾಸ

[ಬದಲಾಯಿಸಿ]
ಇಂಡಿಯನ್‌ ಸ್ಕೂಲ್‌ ಆಫ್ ಬಿಸಿನೆಸ್‌

1996 ರಲ್ಲಿ, ವ್ಯಾಪಾರದ ಅಗ್ರಗಣ್ಯರು ಮತ್ತು ಅಕಾಡೆಮಿ ಸದಸ್ಯರುಗಳು ಏಷ್ಯಾದಲ್ಲಿ ಜಾಗತಿಕವಾಗಿ ಅತ್ಯುನ್ನತ ಶ್ರೇಣಿಯ ಮತ್ತು ವೈಶಿಷ್ಟ್ಯವಾದ ವಾಣಿಜ್ಯ ಶಾಲೆಯ ಅಗತ್ಯತೆಯನ್ನು ಮನಗಂಡರು. ಬದಲಾಗುತ್ತಿರುವ ವ್ಯಾಪಾರ ಸನ್ನಿವೇಶದಲ್ಲಿ ಬದಲಾವಣೆಯ ಆರ್ಥಿಕ ನಿರ್ವಹಣೆಯ ಸೂಕ್ಷ್ಮಗಳಲ್ಲಿ ತರಬೇತಿಯನ್ನು ಪಡೆದ, ಮತ್ತು ಜಾಗತಿಕ ದೃಷ್ಟಿಕೋನಕ್ಕೆ ಒಡ್ಡಲ್ಪಟ್ಟ ಯುವ ನಾಯಕರ ಅಗತ್ಯವಿರುವುದನ್ನು ಅವರು ಮನಗಂಡರು.ನಾವಿನ್ಯ ಶೈಕ್ಷಣಿಕ ಕ್ರಮಗಳು ಮತ್ತು ಜಾಗತಿಕ ಗುಣಮಟ್ಟವನ್ನು ಹೊಂದಿರುವ ಆದರೆ ಕೈಗೆಟುಕುವಂತಹ, ಒಟ್ಟಾರೆಯಾಗಿ ಮೌಲ್ಯ ಪ್ರತಿಪಾದನೆಯ ಬಹು ಪ್ರಕಾರವಾಗಿ ವಿಭಿನ್ನವಾಗಿರುವ ಶಾಲೆಯೊಂದನ್ನು ಸ್ಥಾಪಿಸುವುದು ಸ್ಥಾಪಕರ ದೂರದೃಷ್ಟಿಯಾಗಿತ್ತು[]. ಇದರ ಒಂದು ವರ್ಷದೊಳಗೆಯೇ, ಕಾರ್ಯನಿರ್ವಾಹಕ ಮಂಡಳಿಯನ್ನು ಹಾಗೂ ಶೀಘ್ರದಲ್ಲೇ ಕೆಲ್ಲೋಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ವಾರ್ಟನ್ ಸ್ಕೂಲ್ನ ಶೈಕ್ಷಣಿಕ ಉಪಸದಸ್ಯರುಗಳನ್ನು ಒಳಗೊಂಡಿರುವ ಅಂತರಾಷ್ಟ್ರೀಯ ಶೈಕ್ಷಣಿಕ ಕೌನ್ಸಿಲ್ ಅನ್ನು ರೂಪಿಸಲಾಯಿತು. ಆನಂತರದ ಶೀಘ್ರದಲ್ಲೇ ಲಂಡನ್ ಬಿಸಿನೆಸ್ ಸ್ಕೂಲ್ ಸಹ ಒಳಗೊಂಡಿತು. 1999 ರಲ್ಲಿ ಕ್ಯಾಂಪಸ್‌ಗೆ ಶಂಕುಸ್ಥಾಪನೆಯನ್ನು ನೆರವೇರಿಸುವ ಮೂಲಕ ಆಂಧ್ರಪ್ರದೇಶ ಸರ್ಕಾರವು ಐಎಸ್‌ಬಿಯನ್ನು ಹೈದರಾಬಾದ್‌ಗೆ ಸ್ವಾಗತಿಸಿತು. 128 ವಿದ್ಯಾರ್ಥಿಗಳನ್ನು ಒಳಗೊಂಡ ಮೊದಲ ತಂಡದೊಂದಿಗೆ 2001 ರಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ಆನಂತರ ಎಕ್ಸಿಕ್ಯೂಟಿವ್ ಎಜುಕೇಶನ್ ಪ್ರೋಗ್ರಾಂಗಳನ್ನು ಪ್ರಾರಂಭಿಸಲಾಯಿತು.

ವಿದ್ಯಾಸಂಸ್ಥೆಯ ಆವರಣ

[ಬದಲಾಯಿಸಿ]

ಹೈದರಾಬಾದ್‌ನ ಗಾಚಿಬೌಲಿ ಪ್ರದೇಶದಲ್ಲಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ ಕ್ಯಾಂಪಸ್ ನೆಲೆಸಿದೆ. ಕ್ಯಾಂಪಸ್‌ನ ಒಂದು ಭಾಗವು ಸಸ್ಯಗಳು, ಕಲ್ಲಿನ ರಚನೆಗಳು, ಸಸ್ಯಗಳ ಸ್ವಾಭಾವಿಕ ನೆಲೆಯಾಗಿದ್ದು, ಕ್ಯಾಂಪಸ್‌ನ ಮತ್ತೊಂದು ಭಾಗವು ಹಸ್ತಾಲಂಕಾರದ ಹುಲ್ಲುಪ್ರದೇಶಗಳು, ಸಾಲುಮರಗಳುಳ್ಳ ವಿಶಾಲವಾದ ಬೀದಿ ಮತ್ತು ಉದ್ಯಾನವನಗಳನ್ನು ಹೊಂದಿರುವ ಹಾಗೆ ಕ್ಯಾಂಪಸ್ ಅನ್ನು ವಿನ್ಯಾಸಗಳೊಳಿಸಲಾಗಿದೆ. ಭಾರತೀಯ ರಾಷ್ಟ್ರಹಕ್ಕಿಯಾದ ನವಿಲನ್ನು ಒಳಗೊಂಡಂತೆ ವ್ಯಾಪಕ ಪ್ರಕಾರದ ಸಸ್ಯವರ್ಗಗಳು ಮತ್ತು ಪ್ರಾಣಿಕೋಟಿಯನ್ನು ಕ್ಯಾಂಪಸ್‌ನ ಒಳಗೆ ಕಾಣಬಹುದು. ಸಂಸ್ಥೆಯ ಅಂತರಜಾಲ ತಾಣದ ಮುಖಪುಟದಲ್ಲಿ ಕ್ಯಾಂಪಸ್‌ನ ವಾಸ್ತವಪ್ರಾಯವಾದ ವಿಹಾರವು ಲಭ್ಯವಿದೆ.[] ಐಎಸ್‌ಬಿಯ ಕೇಂದ್ರಭಾಗದಲ್ಲಿ ಅಕಾಡೆಮಿಕ್ ಬ್ಲಾಕ್ ಇದೆ. ಅದು ಪ್ರವಚನ ಕೋಣೆಗಳು, ಸಭಾಂಗಣ, ಗ್ರಂಥಾಲಯ, ಪ್ರೊಫೆಸರ್‌ಗಳ ಕೊಠಡಿಗಳು, ಆಡಳಿತ ಕಚೇರಿಗಳು ಮತ್ತು ಕೆಫೆಟೇರಿಯಾವನ್ನು ಒಳಗೊಂಡಿದೆ. ಎಲ್ಲಾ ಪ್ರವಚನ ಕೋಣೆಗಳು ಎವಿ ಸಾಧನ ಮತ್ತು ನೆಟ್‌ವರ್ಕ್ ಸಂಪರ್ಕಗಳನ್ನು ಹೊಂದಿವೆ ಮತ್ತು ಖೇಮ್ಕಾ ಸಭಾಂಗಣದಲ್ಲಿ 400 ಜನರು ಆಸೀನರಾಗಬಹುದಾಗಿದೆ. ಗ್ರಂಥಾಲಯವು ಸುಮಾರು 31,000 ಕ್ಕೂ ಹೆಚ್ಚು ಪುಸ್ತಕಗಳು, 2000 ಎಮಿ ಸಂಪನ್ಮೂಲಗಳು, 374 ಮುದ್ರಣ ನಿಯತಕಾಲಿಕಗಳು ಮತ್ತು ಸುಮಾರು 2,000 ಇ-ನಿಯತಕಾಲಿಕಗಳನ್ನು ಒಳಗೊಂಡು 40 ಡೇಟಾಬೇಸ್‌ಗಳಿಗೆ ಆನ್‌ಲೈನ್ ಸಂಪರ್ಕವನ್ನು ಹೊಂದಿರುವ ಕಂಪ್ಯೂಟರ್ ಕೇಂದ್ರವನ್ನು ಹೊಂದಿದೆ.[] ಪೂರ್ಣಕಾಲಿಕ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಸತಿ ಸೌಲಭ್ಯವು ಸ್ಟುಡೆಂಟ್ ವಿಲೇಜ್ (ಎಸ್‌ವಿ) ಎಂದು ಕರೆಯಲಾಗುವ ನಾಲ್ಕು ವಸತಿಸೌಕರ್ಯದ ಬ್ಲಾಕ್‌ಗಳನ್ನು ಹೊಂದಿದ್ದು, ಪ್ರತಿಯೊಂದರಲ್ಲಿ ಸುಮಾರು 130 ವಿದ್ಯಾರ್ಥಿಗಳು ಒಂದು ಬಾರಿಗೆ ತಂಗಬಹುದು. ಪ್ರತ್ಯೇಕ ವಿದ್ಯಾರ್ಥಿಗಳು ಮತ್ತು ಕುಟುಂಬಸಹಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳು ಪ್ರತಿ ಎಸ್‌ವಿಯಲ್ಲಿ ಲಭ್ಯವಿದೆ. ಎಲ್ಲಾ ವಿದ್ಯಾರ್ಥಿ ಕೊಠಡಿಗಳಿಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು ಕಲ್ಪಿಸಲಾಗಿದ್ದು, ಹೆಚ್ಚುವರಿಯಾಗಿ ಕ್ಯಾಂಪಸ್‌ನ ಬಹುತೇಕ ಎಲ್ಲಾ ಭಾಗಗಳಳ್ಲಿ ವಿ-ಫೈ ಸಂಪರ್ಕವು ಲಭ್ಯವಿದೆ. ಕಾರ್ಯನಿರ್ವಾಹಕ ವಿಷಯಕ್ರಮಗಳ ಅಭ್ಯರ್ಥಿಗಳು, ಅತಿಥಿ ಪ್ರೊಫೆಸರ್‌ಗಳು ಮತ್ತು ಕಾರ್ಪೊರೇಟ್ ಕಾರ್ಯನಿರ್ವಾಹಕರುಗಳಿಗೆ ಪ್ರತ್ಯೇಕವಾದ ಎಕ್ಸಿಕ್ಯೂಟಿವ್ ಹೌಸಿಂಗ್ (ಇಹೆಚ್) ಲಭ್ಯವಿದೆ. ಖಾಯಂ ಅಧ್ಯಾಪಕರುಗಳು ಫ್ಯಾಕಲ್ಟಿ ಹೌಸಿಂಗ್ ಬ್ಲಾಕ್‌ನಲ್ಲಿ ನೆಲೆಸಿದ್ದಾರೆ. ದೈಹಿಕ ಸಾಮರ್ಥ್ಯ ಕೇಂದ್ರ, ಈಜುಕೊಳಗಳು, ಟೆನ್ನಿಸ್, ಸ್ಕ್ವಾಷ್, ಬ್ಯಾಡ್ಮಿಂಟನ್ ಮತ್ತು ಬಾಸ್ಕೆಟ್‌ಬಾಲ್ ಅಂಗಣಗಳು, ಪುಟ್‌ಬಾಲ್ ಮೈದಾನ ಜೊತೆಗೆ ಬಿಲಿಯರ್ಡ್ಸ್, ಕೇರಮ್ ಮತ್ತು ಚೆಸ್‌ನಂತಹ ಒಳಾಂಗಣ ಕ್ರೀಡೆಗಳು ಲಭ್ಯವಿರುವ ಮನರಂಜನೆಯ ಸೌಲಭ್ಯಗಳಲ್ಲಿ ಸೇರಿದೆ. ಕ್ಯಾಂಪಸ್‌ನ ಸಂತೋಷಕೂಟಗಳಿಗೆ "ಕ್ಲಾಸ್ ಆಫ್ 2008 ಈವೆಂಟ್ಸ್ ಲಾಂಜ್" ಅನ್ನು ನಿರ್ಮಾಣ ಮಾಡಲು 2008 ರ ತರಗತಿಯವರು ವಿದ್ಯಾರ್ಥಿಗಳ ಸಮುದಾಯದಿಂದ ಹಣ ಸಂಗ್ರಹವನ್ನು ಮಾಡಿದ್ದಾರೆ. 2009 ರ ತರಗತಿಯವರು ದಾನ ನೀಡಿದ ಹಣದ ನೆರವಿನಿಂದ ತೆರೆದ- ವರ್ತುಲ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಕಿರಾಣಿ ಅಂಗಡಿ, ಪುಸ್ತಕದ ಅಂಗಡಿ, ಬ್ಯಾಂಕ್/ಎಟಿಮ್, ಪ್ರಯಾಣದ ವಿಭಾಗ, ವೈದ್ಯಕೀಯ ಸಹಾಯ/ವೈದ್ಯರು ಮತ್ತು ಮಕ್ಕಳಿಗಾಗಿ ಚಿಕ್ಕ ಶಿಶುಧಾಮವು ಕ್ಯಾಂಪಸ್‌ನಲ್ಲಿರುವ ಸೌಲಭ್ಯಗಳಾಗಿವೆ.

ಶೈಕ್ಷಣಿಕ ವಿಷಯಕ್ರಮಗಳು

[ಬದಲಾಯಿಸಿ]

ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿನ ಶೈಕ್ಷಣಿಕ ವಿಷಯಕ್ರಮಗಳು ಆಸಕ್ತಿಯ ವಿವಿಧ ಕ್ಷೇತ್ರಗಳನ್ನು ಅನ್ವೇಷಿಸುವ ಸ್ವಾತಂತ್ರದೊಡನೆ ನಿರ್ವಹಣೆ ಶಿಕ್ಷಣದಲ್ಲಿ ಇತ್ತೀಚಿನ ಅಭ್ಯಾಸಗಳು ಮತ್ತು ಪ್ರವೃತ್ತಿಗಳನ್ನು ಒದಗಿಸುತ್ತದೆ. ಐಎಸ್‌ಬಿಯ ಕಲಿಕೆಯ ಮಾದರಿಯು ವ್ಯವಹಾರ ನಾಯಕರನ್ನು ನಿರ್ಮಿಸುವ ಬಗ್ಗೆ ಕೇಂದ್ರೀಕರಿಸುವ ನಿರ್ವಹಣೆ ಶಿಕ್ಷಣ ಮತ್ತು ಆಡಳಿತ ಅಭ್ಯಾಸಗಳ ನಡುವಿನ ನಿಕಟ ಸಂಪರ್ಕದ ಕುರಿತು ಪ್ರಾಧಾನ್ಯತೆ ನೀಡುತ್ತದೆ. ಐಎಸ್‌ಬಿಯಲ್ಲಿ ಈ ಮುಂದಿನ ಶಿಕ್ಷಣಕ್ರಮವನ್ನು ನೀಡಲಾಗುತ್ತದೆ.

ನಿರ್ವಹಣೆಯಲ್ಲಿ ಸ್ನಾತಕೋತ್ತರ ಶಿಕ್ಷಣಕ್ರಮ

[ಬದಲಾಯಿಸಿ]

ನಿರ್ವಹಣೆಯಲ್ಲಿ ಒಂದು ವರ್ಷದ ಶಿಕ್ಷಣಕ್ರಮವು ಉದ್ಯಮದಲ್ಲಿ ವಿದ್ಯಾರ್ಥಿಗಳಿಗೆ ಸಂವಹನವನ್ನು ಅನುಮತಿಸುವ ಮೂಲ ಪಠ್ಯಕ್ರಮಗಳ ಸಂಯೋಜನೆ, ಆಯ್ಕೆಮಾಡಿದ ಐಚ್ಛಿಕಗಳು ಮತ್ತು ಅನುಭವಿ ಕಲಿಕೆಯ ಯೋಜನೆಯನ್ನು ಒಳಗೊಂಡಿರುತ್ತದೆ. ಭಾರತದಲ್ಲಿರುವ ಇತರ ವಾಣಿಜ್ಯ ಶಾಲೆಗಳಿಗೆ ವಿಭಿನ್ನವಾಗಿ, ಐಎಸ್‌ಬಿಯ ಭಾವಿ ವಿದ್ಯಾರ್ಥಿಗಳು ಸೇರ್ಪಡೆಗೆ ಮೊದಲು ಪ್ರಮುಖವಾದ ಪೂರ್ಣಕಾಲೀನ ಕೆಲಸದ ಅನುಭವವನ್ನು ಹೊಂದಿರಬೇಕಾಗುತ್ತದೆ ಮತ್ತು ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವವನ್ನು ಶಿಫಾರಸು ಮಾಡಲಾಗಿದೆ. ಪ್ರವೇಶದ ಪ್ರಕ್ರಿಯೆಯು ಅತ್ಯಂತ ಸ್ಪರ್ಧಾತ್ಮಕವಾಗಿದೆ ಮತ್ತು ಪದವಿ ನಿರ್ವಹಣೆ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಮತ್ತು ಬಹುವಿಧದ ವೃತ್ತಿಪರ ಅನುಭವವನ್ನು ಹೊಂದಿದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತದೆ. ಆಯ್ದ ವಿದ್ಯಾರ್ಥಿಗಳನ್ನು ನಂತರ ಬಹುಪಾಲು ಐಎಸ್‌ಬಿ ಅಧ್ಯಾಪಕರು ಮತ್ತು ಹಳೆಯ ವಿದ್ಯಾರ್ಥಿಗಳಿಂದ ಆಯ್ದ 2-3 ತಜ್ಞರ ಸಮಿತಿಯು ಸಂದರ್ಶಿಸುತ್ತದೆ.

ಪಠ್ಯಕ್ರಮಗಳ ಸ್ವರೂಪ ಮತ್ತು ಅಧ್ಯಯನ ವಿಷಯಗಳು

ಶೈಕ್ಷಣಿಕ ವರ್ಷವು ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಅದನ್ನು 8 ವ್ಯಾಸಂಗಾವಧಿಗಳಾಗಿ ವಿಭಾಗಿಸಲಾಗಿದೆ - 4 ಮೂಲಭೂತ ವ್ಯಾಸಂಗಾವಧಿ ಮತ್ತು 4 ಐಚ್ಛಿಕ ವ್ಯಾಸಂಗಾವಧಿ, ಇದರಲ್ಲಿ ಪ್ರತಿಯೊಂದು ವ್ಯಾಸಂಗಾವಧಿಯು 6-7 ವಾರಗಳ ಕಾಲ ನಡೆಯುತ್ತದೆ. ಮೂಲಭೂತ ವ್ಯಾಸಂಗಾವಧಿಯಲ್ಲಿ, ಎಲ್ಲಾ ವಿದ್ಯಾರ್ಥಿಗಳು ಅಕೌಂಟಿಂಗ್, ಮಾರ್ಕೆಟಿಂಗ್, ಹಣಕಾಸು, ಸಂಸ್ಥೆಯಲ್ಲಿನ ನಡವಳಿಕೆ, ಮಾಹಿತಿ ತಂತ್ರಜ್ಞಾನ, ಕೌಶಲ್ಯ, ಕಾರ್ಯಾಚರಣೆ ಹಾಗೂ ಇತರವುಗಳಂತಹ ವಿಭಿನ್ನ ಪಠ್ಯಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇವುಗಳು ವ್ಯವಹಾರ ಪದವಿಗೆ ಅಡಿಗಟ್ಟನ್ನು ಒದಗಿಸುತ್ತದೆ. ಐಚ್ಛಿಕ ಕಾಲಾವಧಿಯಲ್ಲಿ, ವಿದ್ಯಾರ್ಥಿಗಳು ತಮ್ಮ ಕೇಂದ್ರೀಕರಣವನ್ನು ಮುಂದುವರಿಸುವಲ್ಲಿ ನೀಡಿದ ಐಚ್ಛಿಕಗಳಲ್ಲಿ ಆಯ್ಕೆ ಮಾಡಬಹುದು. ಪ್ರತಿ ಪಠ್ಯಕ್ರಮಗಳು 1 ಎಂದು ಮನ್ನಣೆ ಗಳಿಸುತ್ತದೆ, ಮತ್ತು ಕೇಂದ್ರೀಕರಣವನ್ನು ಪಡೆಯಲು ಅಭ್ಯಾಸದಿಂದ 6 ಮನ್ನಣೆಗಳು ಅಗತ್ಯವಾಗಿರುತ್ತದೆ. ವಿದ್ಯಾರ್ಥಿಗಳು ಗರಿಷ್ಠ ಎರಡು ಕೇಂದ್ರೀಕರಣವನ್ನು ಆಯ್ಕೆಮಾಡಬಹುದಾದರೂ ಯಾವುದೇ ಒಂದು ಕ್ಷೇತ್ರದಲ್ಲಿ ಕೇಂದ್ರೀಕರಣವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ನುರಿತ ಕಲಿಕೆಯ ಯೋಜನೆಯು ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಮೂರು ಅಥವಾ ನಾಲ್ಕು ಜನರ ಗುಂಪಿನಲ್ಲಿ ಕಾರ್ಪೊರೇಟ್ ಪರಿಸರದಲ್ಲಿ ಸಕ್ರಿಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

ಶೈಕ್ಷಣಿಕ ಮತ್ತು ಸಾಮಾಜಿಕ ಕ್ಲಬ್‌ಗಳು

ವಿದ್ಯಾರ್ಥಿಗಳಿಂದ ನಡೆಸಲ್ಪಡುವ ಹಲವಾರು ಕ್ಲಬ್‌ಗಳು, 14 ವೃತ್ತಿಪರ ಕ್ಲಬ್‌ಗಳು("ವ್ಯವಹಾರ ತಂತ್ರಜ್ಞಾನ", "ಸಲಹೆ", "ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳು", "ಇಂಧನ, ತಯಾರಿಕೆ & ಕಾರ್ಯಾಚರಣೆಗಳು", "ವಾಣಿಜ್ಯೋದ್ಯಮ & ವಿಸಿ", "ಹಣಕಾಸು", "ಸಾಮಾನ್ಯ ನಿರ್ವಹಣೆ", "ಆರೋಗ್ಯ", "ಮಾರ್ಕೆಟಿಂಗ್", "ಮಾಧ್ಯಮ", "ನೆಟ್ ಇಂಪ್ಯಾಕ್ಟ್", "ರಿಯಲ್ ಎಸ್ಟೇಟ್", "ರಿಟೇಲ್ ಕ್ಲಬ್" & "ವ್ಯವಹಾರದಲ್ಲಿ ಮಹಿಳೆ"), ಮತ್ತು 11 ಸಾಮಾಜಿಕ ಕ್ಲಬ್ (ಅಂತರಾಷ್ಟ್ರೀಯ, ಕಲೆಗಳು & ರಚನಾತ್ಮಕತೆ, ನೃತ್ಯ, ಗಾಲ್ಫ್, ಸಂಗೀತ, ಛಾಯಾಚಿತ್ರ ಗ್ರಹಣ, ರೇಡಿಯೋ, ರಸಪ್ರಶ್ನೆ, ನಾಟಕ, ಕ್ರೀಡೆ, ದಂಪತಿ ಮತ್ತು ಕುಟುಂಬ ಸಂಬಂಧ) ಇವೆ ವಿವರಗಳಿಗೆ ಇಲ್ಲಿಗೆ ಸಂಪರ್ಕಿಸಿ : [೧]

ಅಂತರಾಷ್ಟ್ರೀಯ ಅನುಭವ

ವಿದೇಶದಲ್ಲಿನ ಐಎಸ್‌ಬಿಯ ವಿನಿಮಯ ಪಾಲುದಾರ ಶಾಲೆಗಳಲ್ಲಿ ಕೆಲವು ಸೆಮಿಸ್ಟರ್‌ಗಳನ್ನು ಕಳೆಯಲು ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಅವಕಾಶವನ್ನು ಒದಗಿಸುತ್ತದೆ. ಏಷ್ಯಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯ ಮತ್ತು ಉತ್ತರ ಅಮೇರಿಕದಲ್ಲಿ ಐಎಸ್‌ಬಿಯು 20 ಕ್ಕೂ ಹೆಚ್ಚು ವಿನಿಮಯ ಪಾಲುದಾರರನ್ನು ಹೊಂದಿದೆ. ಕೆಲವು ಪಾಲುದಾರ ಶಾಲೆಗಳಲ್ಲಿ ಥಂಡರ್‌ಬರ್ಡ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್, ಲಂಡನ್ ಬಿಸಿನೆಸ್ ಸ್ಕೂಲ್, ಕೆಲ್ಲೋಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಸಿಇಐಬಿಎಸ್ ಚೀನಾ, ಫುಕ್ವಾ ಸ್ಕೂಲ್ ಆಫ್ ಬಿಸಿನೆಸ್, ದಿ ಫ್ಲೆಚರ್ ಸ್ಕೂಲ್, ಹೆಚ್ಇಸಿ ಪ್ಯಾರಿಸ್, ಮೆಲ್ಪೋರ್ನ್ ಬಿಸಿನೆಸ್ ಸ್ಕೂಲ್, ಮತ್ತು ವಾರ್ಟನ್ ಬಿಸಿನೆಸ್ ಸ್ಕೂಲ್ ಸೇರಿದೆ. ಐಎಸ್‌ಬಿಯು ವಾರ್ಟನ್ ಬಿಸಿನೆಸ್ ಸ್ಕೂಲ್ನೊಂದಿಗೆ ವಾರ್ಟನ್ ಗ್ಲೋಬಲ್ ಕನ್ಸಲ್ಟಿಂಗ್ ಪ್ರಾಕ್ಟಿಕಮ್ ಅನ್ನು ಸಹ ನೀಡುತ್ತದೆ. ಇದು ಜಾಗತಿಕ ಸಲಹಾ ಕಾರ್ಯಕ್ರಮವಾಗಿದ್ದು, ಇದು ಜಾಗತಿಕ ದೃಷ್ಟಿಕೋನದಲ್ಲಿ ಸಂಧಾನ ಮತ್ತು ಸಲಹೆಯಲ್ಲಿ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ಸಹಾಯ ಮಾಡುತ್ತದೆ.

ನಿಯೋಜನೆಗಳು

ಭಾರತದ ಇತರ ಬಿ-ಶಾಲೆಗಳಿಗೆ ಹೊರತಾಗಿ, ಐಎಸ್‌ಬಿಯು ತನ್ನ ವಿದ್ಯಾರ್ಥಿಗಳಿಗೆ ರೋಲಿಂಗ್ ನಿಯೋಜನೆ ಅವಧಿಯನ್ನು ನಡೆಸುತ್ತದೆ. ಕ್ಯಾಂಪಸ್ ಸಂದರ್ಶನದ ಮೂಲಕ ಐಎಸ್‌ಬಿ ಪದವೀಧರರು ಭಾರತೀಯ ಜೊತೆಗೆ ವಿದೇಶಿ ಹುದ್ದೆಗಳನ್ನು ಗಳಿಸಿದ್ದಾರೆ. ಈ ಹಿಂದಿನ ನೇಮಕಾತಿದಾರರಲ್ಲಿ ಗೂಗಲ್, ಮ್ಯಾಕ್‌ಕಿನ್ಸೀ & ಕಂ, ಗೋಲ್ಡ್‌ಮ್ಯಾನ್ ಸಾಚ್ಸ್, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಮೈಕ್ರೋಸಾಫ್ಟ್, ಡಾಯ್ಚ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಬ್ರಿಟಿಷ್ ಪೆಟ್ರೋಲಿಯಂ, ಪೆಪ್ಸಿಕೋ, ಅಸೆಂಚರ್, ಎ ಟಿ ಕೀರ್ನಿ, ಓಲಿವರ್ ವೈಮ್ಯಾನ್, ಯೆಸ್ ಬ್ಯಾಂಕ್, ಅಲ್ವಾರೆಜ್ & ಮಾರ್ಷಲ್, ಆರ್ಸೆಲರ್ ಮಿತ್ತಲ್, ಡಿಎಲ್ಎಫ್ ಲಿಮಿಟೆಡ್, ಜಿನ್ನೋವ್, ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯುಷನ್ಸ್, ಆರ್ಥರ್ ಡಿ ಲಿಟಲ್, ಇನ್ಫೋಸಿಸ್, ವಿಪ್ರೋ, ಡೈಮಂಡ್ ಮ್ಯಾನೇಜ್‌ಮೆಂಟ್ & ಟೆಕ್ನಾಲಜಿ ಕನ್ಸಲ್‌ಟೆಂಟ್ಸ್, ಲುಫ್ತಾನ್ಸಾ, ಫಿಜರ್, ಭಾರ್ತಿ, ರಿಲಯನ್ಸ್ ಎಡಿಎಜಿ, ಕ್ಯಾಪೆಮಿನಿ, ಜೆಎಸ್ ಅಸೋಸಿಯೇಟ್ಸ್, ಹೆವಿಟ್, ದಿ ಪಾರ್ಥೆನನ್ ಗ್ರೂಪ್, ನೊವಾರ್ಟಿಸ್, ಜೆಎಲ್ಎಲ್ಎಮ್, ಆದಿತ್ಯ ಬಿರ್ಲಾ ಗ್ರೂಪ್, ಅಲ್ಗಾನಿಮ್ ಇಂಡಸ್ಟ್ರೀಸ್, ಡಸ್ಸಾಲ್ಟ್ ಸಿಸ್ಟಮ್ಸ್, ಯೂನಿವರ್ಸಲ್ ಕನ್ಸಲ್ಟಿಂಗ್, ಪ್ರೈಸ್‌ವಾಟರ್‌ಹೌಸ್ ಕೂಪರ್ಸ್, ಎನ್ಐಐಟಿ, ಐಸಿಐಸಿಐ, ಜೆನ್ಸರ್ ಟೆಕ್ನಾಲಜೀಸ್, ಕೆಪಿಎಂಜಿ, ಅರ್ನ್ಸಟ್ & ಯಂಗ್, ಫ್ಲಾಗ್‌ಸ್ಟೋನ್ ರೆ, ಕೋಕಾ ಕೋಲಾ, ವಾಲ್ಯೂ ಪಾರ್ಟ್ನರ್ಸ್, ಸಿಟಿಗ್ರೂಪ್, ಡೆಲೋಯ್ಟೆ, ಐಟಿಸಿ, ಮತ್ತು ಅಮೇಜಾನ್ ಸೇರಿದೆ.

ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಾಕ್ಟರಲ್ ಶಿಕ್ಷಣಕ್ರಮ

[ಬದಲಾಯಿಸಿ]

ಸಂಸ್ಥೆಯು ಸಂಶೋಧನೆ ನಿರ್ವಹಣೆಯನ್ನು ಪೋಷಿಸುವಲ್ಲಿ ಮತ್ತು ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ನೆರವಾಗುವ ಗುರಿಯಲ್ಲಿ ನಂಬಿಕೆ ಇಟ್ಟಿದೆ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿರುವ ಮಾರುಕಟ್ಟೆಗಳಲ್ಲೆರಡರಲ್ಲೂ ಪೀಡಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರೀಕರಿಸಲು ಬಿಸಿನೆಸ್ ರಿಸರ್ಚ್ ಫೆಲೋಶಿಪ್ ಪ್ರೋಗ್ರಾಂ (ಬಿಆರ್ಇ) ಉದ್ದೇಶಿಸಿದೆ. ಕಾರ್ಯಕ್ರಮದ ಕಾಲಾವಧಿಯು 2 ವರ್ಷಗಳು ಮತ್ತು 4 ತಿಂಗಳವರೆಗಾಗಿದೆ. ಫೆಲೋಗಳು ತಮ್ಮ ಸಂಶೋಧನೆಯನ್ನು ವ್ಯವಹಾರ/ನಿರ್ವಹಣೆಯಲ್ಲಿ ಪ್ರಧಾನವಾದ ನಿಯತಕಾಲಿಕಗಳಲ್ಲಿ ಪ್ರಕಟಿಸಬೇಕಾಗುತ್ತದೆ ಮತ್ತು ಅವರು ಅಧ್ಯಾಪಕರಿಗೆ ತರಗತಿಗಳು ಮತ್ತು ಸಂಶೋಧನೆಯಲ್ಲಿ ಸಹ ಸಹಾಯ ಮಾಡುತ್ತಾರೆ. ಪ್ರಮುಖ ವ್ಯಾಪಾರ ಶಾಲೆಗಳಲ್ಲಿ ಕೆಲವು ಸೆಮಿಸ್ಟರ್‌ಗಳನ್ನು ಕಳೆಯಲು ಸಹ ಶಾಲೆಯು ಅರ್ಹ ಫೆಲೋಗಳಿಗೆ ಅವಕಾಶವನ್ನು ಸಹ ಒದಗಿಸುತ್ತದೆ. ಕಾರ್ಯಕ್ರಮವು ವ್ಯಕ್ತಿಗಳು ಸಂಶೋಧನೆಯನ್ನು ನಿರ್ವಹಣೆ ಮಾಡುವ ಸಾಮರ್ಥ್ಯಗಳನ್ನು ಪ್ರದರ್ಶಿಸುವುದನ್ನು ನಿರೀಕ್ಷಿಸುತ್ತದೆ. ಕಂಪ್ಯೂಟರ್ ವಿಜ್ಞಾನ, ಸಂಖ್ಯಾಶಾಸ್ತ್ರ, ಕಾರ್ಯಾಚರಣೆ ಸಂಶೋಧನೆ ಹಾಗೂ ಇತರವುಗಳಲ್ಲಿ. ಪಿಹೆಚ್‌ಡಿ ಅನ್ನು ಹೊಂದಿರುವ ವಿದ್ವಾಂಸರುಗಳಿಗೆ ಎದುರು ನೋಡುತ್ತದೆ. ಆಯ್ಕೆಯು ಹಿಂದಿನ ಸಂಶೋಧನೆ, ಉದ್ದೇಶದ ಹೇಳಿಕೆ, ಶಿಫಾರಸುಗಳು ಹಾಗೂ ನಂತರ ಕ್ಯಾಂಪಸ್ ಪ್ರಸ್ತುತಿ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ.

ಕಾರ್ಯನಿರ್ವಾಹಕ ಶಿಕ್ಷಣಕ್ರಮ

[ಬದಲಾಯಿಸಿ]

ಕಾರ್ಯನಿರ್ವಾಹಕರ ಶಿಕ್ಷಣಕ್ಕಾಗಿ ಕೇಂದ್ರ (ಸಿಇಇ) ವು ಮಧ್ಯ ಮತ್ತು ಉನ್ನತ ಆಡಳಿತ ಕಾರ್ಯನಿರ್ವಾಹಕರಿಗೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ನಿರ್ವಹಣೆಯ ಶಿಕ್ಷಣಕ್ರಮಗಳನ್ನು ನಡೆಸುತ್ತದೆ. ನಿರ್ವಾಹಕರ ತರಬೇತಿಗಳನ್ನು ನೀಡಿದ ಮತ್ತು ಬೃಹತ್ ಸಂಸ್ಥೆಗಳಿಗೆ ಸಲಹಾಕಾರರಾಗಿ ಪರಿಣತಿಯನ್ನು ಪಡೆಯದಿರುವ ಜಾಗತಿಕ ಮಟ್ಟದ ಅತ್ಯುತ್ತಮ ಅಧ್ಯಾಪಕ ವರ್ಗದವರನ್ನು ಈ ಶಿಕ್ಷಣಕ್ರಮಗಳಿಗೆ ತೆಗೆದುಕೊಳ್ಳಲಾಗುತ್ತದೆ. ಕಾರ್ಯನಿರ್ವಾಹಕರಿಗೆ ಸಿಇಇಯ ನಡೆಸುವ ಶಿಕ್ಷಣಕ್ರಮಗಳನ್ನು 3 ವಿಶಾಲವಾದ ವರ್ಗಗಳಾಗಿ ವಿಂಗಡಿಸಬಹುದು.

  • ಮುಕ್ತ ಶಿಕ್ಷಣಕ್ರಮಗಳು
  • ಸಾಮಾನ್ಯ ನಿರ್ವಹಣೆ
  • ಗ್ರಾಹಕೀಯಗೊಳಿಸಿದ ಶಿಕ್ಷಣಕ್ರಮಗಳು

ಮಾರ್ಕೆಟಿಂಗ್, ಕೌಶಲ್ಯ ಮತ್ತು ನಾಯಕತ್ವ, ಹಣಾಕಸು ಮತ್ತು ಅಕೌಂಟಿಂಗ್ ಮತ್ತು ಕಾರ್ಯಾಚರಣೆ ಮತ್ತು ತಂತ್ರಜ್ಞಾನದಲ್ಲಿ ಮುಕ್ತ ಶಿಕ್ಷಣಕ್ರಮಗಳನ್ನು ಸಿಇಇ ನೀಡುತ್ತದೆ. ಅತ್ಯುತ್ತಮ ಅಧ್ಯಾಪಕರುಗಳು ಮತ್ತು ನಾವಿನ್ಯ ಪಠ್ಯಕ್ರಮದೊಂದಿಗೆ ಈ ಶಿಕ್ಷಣಕ್ರಮಗಳು ಕಾರ್ಯನಿರ್ವಾಹಕರುಗಳಾದ್ಯಂತ ಸಂಪರ್ಕದ ಅವಕಾಶಗಳನ್ನು ಮತ್ತು ಪರಸ್ಪರರ ಅನುಭವಗಳನ್ನು ಹಂಚಿಕೊಳ್ಳುವ ಮತ್ತು ಕಲಿಯುವ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಬಹು ವಿಧವಾದ ಉದ್ದಿಮೆಗಳಿಂದ ನಾನಾ ಬಗೆಯ ವಾಣಿಜ್ಯೋದ್ಯಮಿಗಳು, ಸಿಇಓಗಳು ಮತ್ತು ವ್ಯವಸ್ಥಾಪಕರನ್ನು ಈ ಶಿಕ್ಷಣಕ್ರಮಗಳು ಸೆಳೆಯುತ್ತವೆ. ಸಿಇಇ ಯು ನೀಡುವ ಸಾಮಾನ್ಯ ನಿರ್ವಹಣೆ ಶಿಕ್ಷಣಕ್ರಮವು ಯಂಗ್ ಗ್ಲೋಬಲ್ ಎಂಟರ್‌ಪ್ರೈಸ್ (ಮೈ ಗ್ಲೋಬ್), ಐಎಸ್‌ಬಿ ಕೆಲ್ಲೋಗ್ ಗ್ಲೋಬಲ್ ಅಡ್ವಾನ್ಸ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂ ಮತ್ತು ಅಸ್ಸೆಲೆರೇಟೆಡ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂ ಅನ್ನು ಒಳಗೊಂಡಿರುತ್ತದೆ. ಈ ಶಿಕ್ಷಣಕ್ರಮಗಳು ಪ್ರತಿನಿಧಿಸುವ ಅಥವಾ ಮುನ್ನಡೆಸುವ ವೈಯಕ್ತಿಕ ಜನರು ಮತ್ತು ಸಂಸ್ಥೆಗಳೆರಡರ ಸಾಧನೆಯನ್ನು ಪರಿವರ್ತಿಸುವ ಉದ್ದೇಶವನ್ನು ಹೊಂದಿರುತ್ತದೆ. ಸಂಸ್ಥೆಗಳ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸಲು ಗ್ರಾಹಕೀಯಗೊಳಿಸಿದ ನಿರ್ವಹಣೆ ಶಿಕ್ಷಣಕ್ರಮವನ್ನೂ ಸಹ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನ ಸಿಇಇ ನೀಡುತ್ತದೆ. ಐಎಸ್‌ಬಿಯು ಕಲಿಕೆಗಾಗಿ 4-ಡಿ ವಿಧಾನವೆಂದು ಕರೆಯಲಾಗುವುದರ ಆಧಾರದಲ್ಲಿ ಏಕೀಕೃತ ಪಾಲುದಾರಿಕೆಯನ್ನು ಸ್ಥಾಪಿಸಲು ಗ್ರಾಹಕರೊಂದಿಗೆ ಕಾರ್ಯನಿರ್ವಹಿಸುತ್ತದೆ. ಅನ್ವೇಷಣೆ, ಅಭಿವೃದ್ಧಿ, ವಿನ್ಯಾಸ ಮತ್ತು ವಿತರಣೆ.

ಉತ್ಕೃಷ್ಟತೆಯ ಕೇಂದ್ರಗಳು

[ಬದಲಾಯಿಸಿ]

ಐಎಸ್‌ಬಿಯು ೭ ಉತ್ಕೃಷ್ಟತೆಯ ಕೇಂದ್ರಗಳನ್ನು ಹೊಂದಿದ್ದು, ಉದಯೋನ್ಮುಖ ಮಾರುಕಟ್ಟೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪ್ರತಿಯೊಂದು ನಿರ್ದಿಷ್ಟ ಗಮನವನ್ನು ನೀಡುತ್ತದೆ. ೨೦೦೯ ರಲ್ಲಿರುವ ಪ್ರಕಾರ, ಕೇಂದ್ರಗಳೆಂದರೆ

  • ಸೆಂಟರ್ ಫಾರ್ ಅನಾಲಿಟಿಕಲ್ ಫೈನಾನ್ಸ್ (ಸಿಎಫ್)
  • ಸೆಂಟರ್ ಫಾರ್ ಎಮರ್ಜಿಂಗ್ ಮಾರ್ಕೆಟ್ ಸೊಲ್ಯೂಷನ್ಸ್ (ಸಿಇಎಮ್‌ಎಸ್)
  • ಸೆಂಟರ್ ಫಾರ್ ಗ್ಲೋಬಲ್ ಲಾಜಿಸ್ಟಿಕ್ಸ್ ಎಂಡ್ ಮ್ಯಾನುಫ್ಯಾಕ್ಚರಿಂಗ್ ಸ್ಟ್ರಾಟೆಜೀಸ್ (ಜಿಎಲ್‌ಎಎಮ್ಎಸ್)
  • ಶ್ರೀನಿ ರಾಜು ಸೆಂಟರ್ ಫಾರ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಎಂಡ್ ನೆಟ್‌ವರ್ಕ್‌ಡ್ ಎಕಾನಮಿ (ಎಸ್‌ಆರ್ಐಟಿಎನ್ಇ)
  • ಸೆಂಟರ್ ಫಾರ್ ಲೀಡರ್‌ಶಿಪ್, ಇನ್ನೋವೇಶನ್ ಎಂಡ್ ಚೇಂಜ್ (ಸಿಎಲ್ಐಸಿ)
  • ವಾದ್ವಾನಿ ಸೆಂಟರ್ ಫಾರ್ ಎಂಟರ್‌ಪ್ರೆನ್ಯೂರ್‌ಶಿಪ್ ಡೆವಲಪ್‌ಮೆಂಟ್ (ಡಬ್ಲ್ಯೂಸಿಇಡಿ)
  • ಇಂದು ಸೆಂಟರ್ ಫಾರ್ ರಿಯಲ್ ಎಸ್ಟೇಟ್ ಎಂಡ್ ಇನ್‌ಫ್ರಾಸ್ಟ್ರಕ್ಚರ್ಸ್(ಐಸಿಎರ್‌ಇಐ)

ಸಮ್ಮೇಳನಗಳು, ವಿಚಾರಗೋಷ್ಠಿಗಳು ಮತ್ತು ಕಾರ್ಯಾಗಾರಗಳ ಮೂಲಕ ಕೈಗಾರಿಕೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಶೋಧನೆಯನ್ನು ರೂಪಿಸುವಲ್ಲಿ ಕೇಂದ್ರಗಳು ಗಮನ ಹರಿಸುತ್ತವೆ. ಭವಿಷ್ಯದಲ್ಲಿ ಕೌಶಲ್ಯ ಮಾರುಕಟ್ಟೆಗಾಗಿ ಕೇಂದ್ರವನ್ನು ಪ್ರಾರಂಭಿಸಲು ಐಎಸ್‌ಬಿಯು ಯೋಜಿಸಿದೆ.[]

ಅಧ್ಯಾಪಕ ವರ್ಗ

[ಬದಲಾಯಿಸಿ]

ಅತಿಥಿ ಅಧ್ಯಾಪಕರು ಮತ್ತು ಖಾಯಂ ಅಧ್ಯಾಪಕ ವರ್ಗದ ಮಿಶ್ರಣವನ್ನು ಹೊಂದುವ ಮಾದರಿಯನ್ನು ಐಎಸ್‌ಬಿ ಅನುಸರಿಸುತ್ತದೆ. ವಿಶ್ವದಾದ್ಯಂತದ ವಾಣಿಜ್ಯ ಶಾಲೆಗಳಿಂದ ಅತಿಥಿ ಅಧ್ಯಾಪಕರು ಐಎಸ್‌ಬಿಗೆ ಬಂದು ಭೋದನೆಯನ್ನು ಮಾಡುತ್ತಾರೆ. ಈ ಪ್ರೊಫೆಸರ್‌ಗಳು ವಿವಿಧ ಸಂಶೋಧನೆ ಮತ್ತು ತಜ್ಞ ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆದವರಾಗಿರುತ್ತಾರೆ. ವಾರ್ಟನ್, ಕೆಲ್ಲೋಗ್, ಲಂಡನ್ ಬಿಸಿನೆಸ್ ಸ್ಕೂಲ್, ಯುಸಿಎಲ್ಎ, ಹೆಚ್‌ಕೆಯುಎಸ್‌ಟಿ, ಐಇಎಸ್ಇ ಸ್ಪೇನ್, ಐಎನ್‌ಎಸ್ಇಎಡಿ ಫ್ರಾನ್ಸ್, ಕೆನನ್-ಫ್ಲಾಗ್ಲರ್, ಡ್ಯೂಕ್ ಫುಕ್ವಾ, ಯು ಮಿಕ್, ಹಾಸ್, ಎಮೋರಿ ಗೋಯ್‌ಜುಯೆಟಾ, ಸಿಇಐಬಿಎಸ್, ಓಹಿಯೋ ಸ್ಟೇಟ್ ಮತ್ತು ಕಾರ್ನೆಲ್ (ಇತರವುಗಳಲ್ಲಿ) ನಂತರ ಶಾಲೆಗಳಿಂದ ಅಧ್ಯಾಪಕ ವರ್ಗದವರು ಐಎಸ್‌ಬಿಯಲ್ಲಿ ಪಠ್ಯಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಶಿಕ್ಷಣಾವಧಿಯ ಸಂದರ್ಭದಲ್ಲಿ, ಅಧ್ಯಾಪಕ ವರ್ಗದವರು ಕ್ಯಾಂಪಸ್‌ನಲ್ಲಿಯೇ ನೆಲಸುವ ಮೂಲಕ ವಿದ್ಯಾರ್ಥಿಗಳು ತರಗತಿ ಅವಧಿಯ ಬಳಿಕವೂ ಅವರೊಂದಿಗೆ ಸಂವಹನ ಮಾಡಲು ಅವಕಾಶವನ್ನು ಒದಗಿಸುತ್ತಾರೆ. ಅತಿಥಿ ಅಧ್ಯಾಪಕ ವರ್ಗದವರನ್ನು ಹೊರತುಪಡಿಸಿ, ಅತ್ಯುತ್ತಮ ಖಾಯಂ ಆಗಿ ನೆಲಸಿರುವ ಅಧ್ಯಾಪಕರುಗಳು ಸಹ ಇದ್ದಾರೆ. ಐಎಸ್‌ಬಿ ಅಧ್ಯಾಪಕ ವರ್ಗದ ವ್ಯಕ್ತಿಪರಿಚಯವನ್ನು ಐಎಸ್‌ಬಿ ವೆಬ್‌ಸೈಟ್‌ನಲ್ಲಿ ಕಾಣಬಹುದು.[]

ವಿಚಾರಗೋಷ್ಠಿಗಳು ಮತ್ತು ಸಮ್ಮೇಳನಗಳು

[ಬದಲಾಯಿಸಿ]

ಅಂತರ್ಗತ ಮೇಧಾಶಕ್ತಿಯನ್ನು ಹೊತ್ತಿಸುವ ಬಗ್ಗೆ ಮೊದಲ ಅಂತರಾಷ್ಟ್ರೀಯ ವಿಚಾರಗೋಷ್ಠಿಯನ್ನು ನಾಯಕತ್ವ, ನಾವಿನ್ಯತೆ ಮತ್ತು ಬದಲಾವಣೆಯ ಕೇಂದ್ರ (ಸಿಎಲ್ಐಸಿ) [] ಯು ಐಎಸ್‌ಬಿಯಲ್ಲಿ ಆಯೋಜಿಸಿತ್ತು ಮತ್ತು ಇದು ಭಾಗವಹಿಸುವವರಿಗೆ ನಾಯಕತ್ವ, ನಾವಿನ್ಯತೆ ಮತ್ತು ಬದಲಾವಣೆಯೆಂಬ ಮೂರು ವಿಷಯಗಳ ಸಂಗಮವನ್ನು ಮೂರು ಮಸೂರಗಳ ಮೂಲಕ ಸೂಕ್ಷ್ಮವಾಗಿ ಅವಲೋಕಿಸುವ ವಿಶಿಷ್ಟವಾದ ಅವಕಾಶವನ್ನು ಒದಗಿಸಿತು:

  • ಜ್ಞಾನದ ದೃಷ್ಟಿಕೋನ: ಸಮಯದ ಪರೀಕ್ಷೆಯನ್ನು ಸಹಿಸಿಕೊಂಡ ಮತ್ತು ನಮಗೆ ನಿರ್ದೇಶನ, ಉದ್ವೇಗ ಮತ್ತು ಅರ್ಥವನ್ನು ನೀಡಿದ ಆಧ್ಯಾತ್ಮಿಕ ಕ್ಷೇತ್ರದಿಂದ ಆಧರಿಸಿದ ಯೋಚನೆಗಳು ಮತ್ತು ಜಾಗತಿಕ-ಅಭಿಪ್ರಾಯಗಳು
  • ವೈಜ್ಞಾನಿಕ ತತ್ವಗಳು: ನರ ವಿಜ್ಞಾನಗಳು, ಅರಿವಿನ ವಿಜ್ಞಾನಗಳು ಮತ್ತು ಸಂಕೀರ್ಣ ಮಾದರಿಗಳ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನೆಗಳ ಮೇಲಿನ ಆಧಾರ
  • ನಿರ್ವಹಣೆ ಅಭ್ಯಾಸಗಳು: ವಿಶ್ವದಾದ್ಯಂತದ ಅತ್ಯುತ್ತಮ ಅಭ್ಯಾಸಗಳ ಮೇಲೆ ಆಧರಿಸಿದೆ

ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ: http://www.isb.edu/CLIC/IgnitingtheGeniusWithin.Shtml ಹೆಚ್ಚುವರಿಯಾಗಿ, ಖಾಸಗಿ ಈಕ್ವಟಿ ಸಮ್ಮೇಳನ (2008 ರಲ್ಲಿ ಜರುಗಿತು) ಮತ್ತು ಯೋಜನಾತಂತ್ರ ನಿರ್ವಹಣೆ ಸಮ್ಮೇಳನ (2008 ರಲ್ಲಿ ಜರುಗಿತು) ಗಳನ್ನು ಆಯೋಜಿಸಲಾಗಿದ್ದು, ಅಲ್ಲಿ ಅತ್ಯುಚ್ಛ ಶ್ರೇಣಿಯ ಅಧ್ಯಾಪಕ ವರ್ಗದವರು ಔದ್ಯೋಗಿಕ ನಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡರು (ಉದಾ. ಸಿ ಕೆ ಪ್ರಹ್ಲಾದ್, ಅವರು ಕೆ ವಿ ಕಾಮತ್ ಅವರೊಂದಿಗೆ ವೇದಿಕೆ ಹಂಚಿಕೊಂಡರು). ಇದು ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರಗಳೆರಡರಲ್ಲೂ ಐಎಸ್‌ಬಿಯ ಪ್ರಕಟಪಡಿಸುವಿಕೆ ಮತ್ತು ಪ್ರಭಾವವನ್ನು ಪ್ರದರ್ಶಿಸುತ್ತದೆ.

ಹಳೆವಿದ್ಯಾರ್ಥಿಗಳ ಪುನರ್ಮಿಲನ

[ಬದಲಾಯಿಸಿ]

ಪುನರ್ಮಿಲನವು ಭಾರತದ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ನಡೆಯುತ್ತದೆ, ಮತ್ತು ಸಭೆಗಳನ್ನು ಆಯೋಜಿಸುವಲ್ಲಿ ನವದೆಹಲಿ ಮತ್ತು ಮುಂಬಯಿ ಸಂಘಗಳಂತಹ ಕೆಲವು ಸಂಘಗಳು ಸಕ್ರಿಯವಾಗಿದೆ. ಶಾಲೆಯ ಪ್ರತಿನಿಧಿಗಳು ಕೆಲವೊಮ್ಮೆ ಈ ಸಭೆಗಳಲ್ಲಿ ಭಾಗವಹಿಸುತ್ತಾರೆ.

ಪ್ರಖ್ಯಾತ ಸಂದರ್ಶಕರು

[ಬದಲಾಯಿಸಿ]
ಐಎಸ್‌ಬಿಯಲ್ಲಿ ಅಮೇರಿಕದ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ.ಬುಷ್
  • ಭಾರತದ ಪ್ರಧಾನ ಮಂತ್ರಿಗಳಾದ, ಡಾ. ಮನಮೋಹನ್ ಸಿಂಗ್ [೧೦]
  • ಅಮೇರಿಕಾದ ಮಾಜಿ ರಾಷ್ಟ್ರಪತಿಗಳಾದ ಜಾರ್ಜ್ ಡಬ್ಲ್ಯೂ. ಬುಷ್ ಅವರು 2006 ರಲ್ಲಿನ ತಮ್ಮ ಭಾರತದ ಭೇಟಿಯ ವೇಳೆ ಐಎಸ್‌ಬಿಗೆ ಭೇಟಿ ನೀಡಿದ್ದರು.[೧೧]

ಪ್ರೊ. ಜೆಫ್ರಿ ಸಾಚ್ಸ್ ಮತ್ತು ಥಾಮಸ್ ಫ್ರೀಡ್‌ಮನ್ ಅವರುಗಳು ಐಎಸ್‌ಬಿಗೆ ಭೇಟಿ ನೀಡಿದ ಪ್ರಮುಖ ವ್ಯಕ್ತಿಗಳಲ್ಲಿ ಸೇರಿದ್ದಾರೆ.

ಜಾಗತಿಕ ಎಂಬಿಎ ಶ್ರೇಣಿಗಳು

[ಬದಲಾಯಿಸಿ]

2010 ರಲ್ಲಿ ಫೈನಾನ್ಶಿಯಲ್ ಟೈಮ್ಸ್ ಜಾಗತಿಕ ಎಂಬಿಎ ಶ್ರೇಣಿಗಳ[೧೨] ಅನುಸಾರ, 100 ಜಾಗತಿಕ ಬಿ-ಶಾಲೆಗಳ ಪಟ್ಟಿಯಲ್ಲಿ ಐಎಸ್‌ಬಿಯು #12 ನೇ ಶ್ರೇಣಿ ಪಡೆದುಕೊಂಡಿದೆ. 2008 ರಲ್ಲಿ ಇದು #20 ನೇ ಸ್ಥಾನದಲ್ಲಿ ಶ್ರೇಣಿಗಳ ಪಟ್ಟಿಯಲ್ಲಿ ಮೊದಲ ಬಾರಿ ಕಾಣಿಸಿಕೊಂಡಿತು ಮತ್ತು 2009 ರಲ್ಲಿ #15 ನೇ ಸ್ಥಾನಕ್ಕೆ ಮೇಲಕ್ಕೇರಿತು. 2009 ರಲ್ಲಿ ಕ್ಯೂಎಸ್ ಜಾಗತಿಕ 200 ವಾಣಿಜ್ಯ ಶಾಲೆಗಳ ವರದಿ[೧೩] ಯ ಪ್ರಕಾರ ಶಾಲೆಯು ಏಷ್ಯಾ ಫೆಸಿಫಿಕ್ ಪ್ರಾಂತ್ಯದಲ್ಲಿ 13 ನೇ ಶ್ರೇಣಿಯಲ್ಲಿತ್ತು. ಐಎಸ್‌ಬಿಯು ಎಫ್‌ಟಿಯ ಜಾಗತಿಕ ಬಿ-ಶಾಲೆಗಳ ಶ್ರೇಣಿಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಮೊದಲ ಭಾರತೀಯ ಬಿ-ಶಾಲೆಯಾಗಿದೆ ಮತ್ತು ಪಟ್ಟಿಯಲ್ಲಿ ಅದು ಸೇರ್ಪಡೆಗೊಂಡ ಮೊದಲ ವರ್ಷದಲ್ಲೇ ಮೊದಲ ಇಪ್ಪತ್ತರ ಶ್ರೇಣಿಯಲ್ಲಿ ಸ್ಥಾನವನ್ನು ಪಡೆದುಕೊಂಡಿತು.[೧೪]

ವಿಸ್ತರಣೆ ಯೋಜನೆಗಳು

[ಬದಲಾಯಿಸಿ]

ಕಾರ್ಯನಿರ್ವಾಹಕ ಮಂಡಳಿ

[ಬದಲಾಯಿಸಿ]
  • ರಜತ್ ಗುಪ್ತಾ, ಅಧ್ಯಕ್ಷ, ಐಎಸ್‌ಬಿ
    • ಹಿರಿಯ ಪಾಲುದಾರ ಎಮಿರಿಟಸ್, ಮ್ಯಾಕ್‌ಕಿನ್ಸೀ & ಕಂಪನಿ ಐಎನ್‌ಸಿ
  • ಮೈಕೆಲ್ ಡೆಲ್, ಅಧ್ಯಕ್ಷ, ಡೆಲ್ ಐಎನ್‌ಸಿ.
  • ಅನಿಲ್ ಅಂಬಾನಿ, ಸಮೂಹ ಅಧ್ಯಕ್ಷರು ಮತ್ತು ಸಿಇಓ, ರಿಲಯನ್ಸ್ ಧೀರೂಬಾಯಿ ಅಂಬಾನಿ ಸಮೂಹ
  • ರಾಹುಲ್ ಬಜಾಜ್, ಅಧ್ಯಕ್ಷರು, ಬಜಾಜ್ ಆಟೋ ಲಿಮಿಟೆಡ್
  • ಪೂರ್ಣೇಂದು ಚಟರ್ಜಿ, ಅಧ್ಯಕ್ಷರು, ಚಟರ್ಜಿ ಸಮೂಹ
  • ಕೇಕಿ ದಾಡಿಸೇಥ್, ಅಧ್ಯಕ್ಷರು, ಓಮ್ನಿಕಾನ್ ಇಂಡಿಯಾ
  • ಯೋಗಿಶ್ ದೇವೇಶ್ವರ್, ಅಧ್ಯಕ್ಷರು, ಐಟಿಸಿ ಲಿಮಿಟೆಡ್
  • ಆದಿ ಗೋದ್ರೇಜ್, ಅಧ್ಯಕ್ಷರು, ಗೋದ್ರೇಜ್ ಸಮೂಹ
  • ಶ್ರೀನಿ ರಾಜು, ಅಧ್ಯಕ್ಷರು, ಸಹ-ಸ್ಥಾಪಕ ಮತ್ತು ಅಧ್ಯಕ್ಷರು, ಪೀಪುಲ್ ಕ್ಯಾಪಿಟಲ್ (ಐಲಿಬ್ಸ್ ವೆಂಚೂರ್ ಕ್ಯಾಪಿಟಲ್ ಫಂಡ್‌ನ ಉತ್ತರಾಧಿಕಾರಿ)
  • ಉದಯ್ ಕೋಟಕ್, ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು, ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್
  • ಹರೀಶ್ ಮನ್ವಾನಿ, ಅಧ್ಯಕ್ಷರು, ಏಷ್ಯಾ ಮತ್ತು ಆಫ್ರಿಕಾ, ಯೂನಿಲಿವರ್ ಪಿಎಲ್‌ಸಿ
    • ಅಧ್ಯಕ್ಷರು, ಹಿಂದೂಸ್ತಾನ್ ಲೀವರ್ ಲಿಮಿಟೆಡ್
  • ಕಿರಣ್ ಮಜುಂದಾರ್-ಶಾಹ್, ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು, ಬಯೋಕಾನ್ ಇಂಡಿಯಾ ಲಿಮಿಟೆಡ್
  • ಲಕ್ಷ್ಮೀ ಮಿತ್ತಲ್, ಅಧ್ಯಕ್ಷರು ಮತ್ತು ಸಿಇಓ, ಆರ್ಸೆಲರ್ ಮಿತ್ತಲ್ ಸ್ಟೀಲ್ ಕಂಪನಿ
  • ಸುನಿಲ್ ಕಾಂತ್ ಮುಂಜಲ್, ಕಾರ್ಯನಿರ್ವಾಹಕ ನಿರ್ದೇಶಕ, ಹೀರೋ ಕಾರ್ಪೊರೇಟ್ ಸರ್ವೀಸಸ್ ಲಿಮಿಟೆಡ್
  • ಎನ್.ಆರ್. ನಾರಾಯಣ ಮೂರ್ತಿ, ಮುಖ್ಯ ಮಾರ್ಗದರ್ಶಿ, ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್
  • ಶಿವ ನಡಾರ್, ಸ್ಥಾಪಕರು, ಹೆಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್
  • ಸಂಜಯ್ ನಾಯರ್, ಸಿಇಓ ಮತ್ತು ಪ್ರಾಂತೀಯ ಮುಖ್ಯಸ್ಥರು, ಭಾರತದ ಕೋಹ್ಲ್‌ಬರ್ಗ್ ಕ್ರಾವಿಸ್ ರೋಬರ್ಟ್ಸ್ ಎಂಡ್ ಕಂ
  • ದೀಪಕ್ ಪಾರೇಖ್, ಅಧ್ಯಕ್ಷರು, ಹೆಚ್‌ಡಿಎಫ್‌ಸಿ
  • ರಾಜೇಂದ್ರ ಪವಾರ್, ಅಧ್ಯಕ್ಷರು, ಎನ್ಐಐಟಿ ಲಿಮಿಟೆಡ್
  • ನಿಮ್ಮಗಡ್ಡ ಪ್ರಸಾದ್, ಉಪಾಧ್ಯಕ್ಷರು, ಮ್ಯಾಟ್ರಿಕ್ಸ್ ಲ್ಯಾಬೋರಟರೀಸ್ ಲಿಮಿಟೆಡ್
  • ಗಿರೀಶ್ ರೆಡ್ಡಿ, ಸ್ಥಾಪಕರು, ಪ್ರಿಸ್ಮಾ ಕ್ಯಾಪಿಟರ್ ಪಾರ್ಟ್ನರ್ಸ್ ಎಲ್‌ಪಿ
  • ಅನಾಲ್ಜಿತ್ ಸಿಂಗ್, ಅಧ್ಯಕ್ಷರು, ಮ್ಯಾಕ್ಸ್ ಇಂಡಿಯಾ ಲಿಮಿಟೆಡ್
  • ಕೆ ಪಿ ಸಿಂಗ್, ಮಂಡಳಿ ಅಧ್ಯಕ್ಷರು, ಡಿಎಲ್ಎಫ್ ಲಿಮಿಟೆಡ್
  • ಶ್ಯಾಮ್ ಪ್ರಸಾದ್ ರೆಡ್ಡಿ, ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು, ಇಂದು ಪ್ರಾಜೆಕ್ಟ್ಸ್ ಲಿಮಿಟೆಡ್
  • ಪ್ರಾಮತ್ ರಾಜ್ ಸಿನ್ಹಾ, ಸ್ಥಾಪಕ ಡೀನ್, ಇಂಡಿಯನ್ ಸ್ಕೂಲ್ ಬಿಸಿನೆಸ್
    • ಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು, 9.9 ಮೀಡಿಯಾವರ್ಕ್ಸ್ ಪ್ರೈವೇಟ್ ಲಿಮಿಟೆಡ್
  • ಮಲ್ಲಿಕಾ ಶ್ರೀನಿವಾಸನ್, ನಿರ್ದೇಶಕರು, ಟ್ರಾಕ್ಟರ್ ಎಂಡ್ ಫಾರ್ಮ್ ಎಕ್ಯುಪ್‌ಮೆಂಟ್ ಲಿಮಿಟೆಡ್
  • ಚಂದಾ ಕೊಚ್ಚರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐಸಿಐಸಿಐ ಬ್ಯಾಂಕ್ ಲಿಮಿಟೆಡ್
  • ಮಾರ್ಕ್ ರಾಬಿನ್ಸನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಕ್ಷಿಣ ಆಫ್ರಿಕಾದಲ್ಲಿ ಸಿಟಿ ಬ್ಯಾಂಕ್ ಎನ್‌ಎ
  • ಲಕ್ಷ್ಮೀ ನಾರಾಯಣನ್, ಉಪಾಧ್ಯಕ್ಷರು, ಕಾಗ್ನಿಜಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಕಾರ್ಪೊರೇಷನ್

ಉಲ್ಲೇಖಗಳು

[ಬದಲಾಯಿಸಿ]
  1. "Idea for the School was conceived". 1995.
  2. "ISB associate schools list".
  3. "ISB MOVES UP IN GLOBAL MBA RANKINGS – STANDS AT 15".
  4. "History of Indian School of business". December 20, 1999.
  5. "Campus Tour". Archived from the original on 2010-11-07. Retrieved 2010-10-20.
  6. "ISB Learning Resource Centre".
  7. "ISB Centres of Excellence".
  8. "Faculty Directory".
  9. "Centre for Leadership, Innovation and Change".
  10. "Dr. Manmohan Singh's visit to ISB". December 5, 2006. Archived from the original on 2010-12-03. Retrieved 2010-10-20. {{cite web}}: Check date values in: |date= (help); line feed character in |date= at position 12 (help)
  11. "President George W. Bush's visit to ISB". March 3, 2006.
  12. "ISB RANKED 12 IN GLOBAL B-SCHOOL RANKINGS".
  13. "QS Global 200 Business Schools Report 2009 North America". Archived from the original on 2009-09-04. Retrieved 2010-10-20.
  14. (ಮೂಲ: http://rankings.ft.com/businessschoolrankings/global-mba-rankings Archived 2021-05-09 ವೇಬ್ಯಾಕ್ ಮೆಷಿನ್ ನಲ್ಲಿ.)

ಬಾಹ್ಯ ಕೊಂಡಿಗಳು

[ಬದಲಾಯಿಸಿ]