ಡಯಾಬಿಟಿಸ್ ಇನ್ಸಿಪಿಡಸ್ (ಮಧುಮೇಹದ ತೀವ್ರತೆ)
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (February 2009) |
Diabetes insipidus | |
---|---|
Classification and external resources | |
ICD-10 | E23.2 N25.1 |
ICD-9 | 253.5 588.1 |
OMIM | 304800 125800 |
DiseasesDB | 3639 |
MedlinePlus | 000377 Central000460 Congenital000461 Nephrogenic 000511 |
eMedicine | med/543 ped/580 |
MeSH | D003919 |
ಡಯಾಬಿಟಿಸ್ ಇನ್ಸಿಪಿಡಸ್ (DI ) ಎಂಬುದು ತೀವ್ರತರವಾದ ಬಾಯಾರಿಕೆ ಹಾಗು ತೀವ್ರವಾಗಿ ಸಾರಗುಂದಿಸಿದ ಮೂತ್ರದ ಅಪಾರ ಪ್ರಮಾಣದ ವಿಸರ್ಜನೆಯಂತಹ ಲಕ್ಷಣವನ್ನು ಹೊಂದಿರುವ ಒಂದು ಪರಿಸ್ಥಿತಿ, ದ್ರವ ಸೇವನೆಯನ್ನು ಕಡಿಮೆಗೊಳಿಸಿದರೂ ಈ ಪರಿಸ್ಥಿತಿಯ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ.
DIನಲ್ಲಿ ಹಲವು ವಿವಿಧ ಮಾದರಿಗಳಿವೆ, ಇದರಲ್ಲಿ ಪ್ರತಿಯೊಂದು ಪರಿಸ್ಥಿತಿಗೂ ಭಿನ್ನವಾದ ಕಾರಣವಿರುತ್ತದೆ. ಮನುಷ್ಯರಲ್ಲಿ ಸಂಭವಿಸುವ ಅತ್ಯಂತ ಸಾಮಾನ್ಯ ಮಾದರಿಯೆಂದರೆ ಸೆಂಟ್ರಲ್ DI, ಇದು ಆಂಟಿಡೈಯುರೇಟಿಕ್ ಹಾರ್ಮೋನ್ (ADH) ಎಂದು ಕರೆಯಲ್ಪಡುವ ಅರ್ಜಿನೈನ್ ವಾಸೋಪ್ರೆಸ್ಸಿನ್ (AVP)ಯ ಕೊರತೆಯಿಂದ ಉಂಟಾಗುತ್ತದೆ. DIನ ಎರಡನೇ ಸಾಮಾನ್ಯ ಮಾದರಿಯೆಂದರೆ ನೆಫ್ರೋಜೆನಿಕ್ ಡಯಾಬಿಟಿಸ್ ಇನ್ಸಿಪಿಡಸ್, ಇದು ADHಗೆ ಮೂತ್ರಪಿಂಡವು ಸಂವೇದನೆ ತೋರದ ಕಾರಣದಿಂದಾಗಿ ಉಂಟಾಗುವ ಲಕ್ಷಣ. ಇದು ಔಷಧದ ಬಳಕೆಯಿಂದ ಉಂಟಾಗುವ ವೈದ್ಯಜನ್ಯ ಕೃತಕಜವೂ ಆಗಿರಬಹುದು.
ಲಕ್ಷಣಗಳು ಹಾಗು ರೋಗ-ಲಕ್ಷಣ
[ಬದಲಾಯಿಸಿ]ವಿಪರೀತ ಮೂತ್ರ ವಿಸರ್ಜನೆ ಹಾಗು ವಿಪರೀತ ಬಾಯಾರಿಕೆ (ವಿಶೇಷವಾಗಿ ತಣ್ಣೀರು ಹಾಗು ಕೆಲವೊಂದು ಬಾರಿ ಐಸ್ ಅಥವಾ ಐಸ್ ನೀರು ಕುಡಿದಾಗ) DI ರೋಗ ಪರಿಸ್ಥಿತಿಯಲ್ಲಿ ವಿಶಿಷ್ಟವಾಗಿರುತ್ತದೆ. ಡಯಾಬಿಟಿಸ್ ಇನ್ಸಿಪಿಡಸ್ ನ ರೋಗ ಲಕ್ಷಣವು ಚಿಕಿತ್ಸೆ ಮಾಡದ ಡಯಾಬಿಟಿಸ್ ಮೆಲ್ಲಿಟಸ್ ಲಕ್ಷಣವನ್ನು ಹೋಲುತ್ತದೆ. ಈ ಪರಿಸ್ಥಿತಿಯ ಒಂದು ವ್ಯತ್ಯಾಸವೆಂದರೆ ಮೂತ್ರವು ಗ್ಲುಕೋಸ್ ನ್ನು ಒಳಗೊಳ್ಳದ ಕಾರಣ ಅದು ಸಕ್ಕರೆಯ ಅಂಶವನ್ನು ಒಳಗೊಂಡಿರುವುದಿಲ್ಲ ಜೊತೆಗೆ ಹೈಪರ್ ಗ್ಲೈಸೆಮಿಯಇರುವುದಿಲ್ಲ. (ರಕ್ತದಲ್ಲಿ ಸಕ್ಕರೆಯ ಹೆಚ್ಚಳ). ಅಪರೂಪದ ಪರಿಸ್ಥಿತಿಯಲ್ಲಿ ದೃಷ್ಟಿಯಲ್ಲಿ ಮಂದತೆ ಉಂಟಾಗುತ್ತದೆ. ಕೆಲವು ವ್ಯಕ್ತಿಗಳಲ್ಲಿ ನಿರ್ಜಲೀಕರಣದ ಲಕ್ಷಣಗಳು ಸಹ ಕಂಡುಬರಬಹುದು. ಏಕೆಂದರೆ ದೇಹಕ್ಕೆ ತಾನು ತೆಗೆದುಕೊಳ್ಳುವಷ್ಟು ಪ್ರಮಾಣದ ನೀರನ್ನು(ಸೇವಿಸಿದ್ದರೆ)ಶೇಖರಿಸಿಟ್ಟುಕೊಳ್ಳಲು ಸಾಧ್ಯವಿಲ್ಲ.
ತೀವ್ರತರವಾದ ಮೂತ್ರವಿಸರ್ಜಿಸುವ ಲಕ್ಷಣಗಳು ಹಗಲು ಹಾಗು ರಾತ್ರಿಯುದ್ದಕ್ಕೂ ಮುಂದುವರೆಯುತ್ತದೆ. ಮಕ್ಕಳಲ್ಲಿ, DI ಅವರ ಹಸಿವು, ಆಹಾರ ಸೇವನೆ, ತೂಕದ ಹೆಚ್ಚಳ, ಹಾಗು ಅವರ ಬೆಳವಣಿಗೆಗೂ ಅಡ್ಡಿಪಡಿಸಬಹುದು. ಅವರು ಜ್ವರ, ವಾಂತಿ, ಅಥವಾ ಅತಿಸಾರದಂತಹ ಪರಿಸ್ಥಿತಿಗೆ ಒಳಗಾಗಬಹುದು. DIಗೆ ಚಿಕಿತ್ಸೆ ಪಡೆಯದ ವಯಸ್ಕರು, ಮೂತ್ರವಿಸರ್ಜನೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಗಟ್ಟಲು ಹೆಚ್ಚು ನೀರನ್ನು ಸೇವಿಸುವ ತನಕವೂ ಹಲವಾರು ದಶಕಗಳ ಕಾಲ ಆರೋಗ್ಯಕರವಾಗಿ ಜೀವಿಸಬಹುದು.
ಆದಾಗ್ಯೂ, ನಿರ್ಜಲೀಕರಣದ ಸತತ ಅಪಾಯದ ಜೊತೆಗೆ ಪೊಟ್ಯಾಸಿಯಂನ ನಷ್ಟವೂ ಉಂಟಾಗಬಹುದು.
ರೋಗನಿರ್ಣಯ
[ಬದಲಾಯಿಸಿ]ತೀವ್ರತರವಾದ ಮೂತ್ರವಿಸರ್ಜನೆಗೆ ಕಾರಣವಾಗುವ ಇತರ ಅಂಶಗಳನ್ನು DIನಿಂದ ವ್ಯತ್ಯಾಸಗೊಳಿಸುವ ದೃಷ್ಟಿಯಿಂದ, ರಕ್ತದಲ್ಲಿನ ಗ್ಲುಕೋಸ್ ನ ಮಟ್ಟಗಳು, ಬೈಕಾರ್ಬನೆಟ್ ಮಟ್ಟಗಳು, ಹಾಗು ಕ್ಯಾಲ್ಸಿಯಂ ಮಟ್ಟಗಳನ್ನು ಪರೀಕ್ಷಿಸುವ ಅಗತ್ಯವಿದೆ. ರಕ್ತದಲ್ಲಿನ ಇಲೆಕ್ಟ್ರಲೈಟ್ (ದ್ರವಿಸಿದಾಗ ಅಥವಾ ಸೂಕ್ತ ದ್ರವದಲ್ಲಿ ಕರಗಿಸಿದಾಗ ಅಂತಹ ದ್ರವವನ್ನು ನೀಡಬಲ್ಲ ರಾಸಾಯನಿಕ ಪದಾರ್ಥಗಳ ಮಾಪನವು ಒಂದು ಅಧಿಕ ಸೋಡಿಯಂ ಮಟ್ಟವನ್ನು ಪ್ರದರ್ಶಿಸುತ್ತದೆ (ನಿರ್ಜಲೀಕರಣ ಹೆಚ್ಚಾದಂತೆ ಹೈಪರ್ ನಟ್ರೆಮಿಯ ಉಂಟಾಗುತ್ತದೆ). ಮೂತ್ರಪರೀಕ್ಷೆಯು ಕಡಿಮೆ ಮಟ್ಟದ ವಿಶಿಷ್ಟ ಗುರುತ್ವದೊಂದಿಗೆ ಸಾರಗುಂದಿಸಿದ ಮೂತ್ರವನ್ನು ನಿರೂಪಿಸುತ್ತದೆ. ಮೂತ್ರದ ಆಸ್ಮೋಲಾರಿಟಿ(ದ್ರಾವ್ಯ ಸಾರೀಕರಣದ ಮಾಪನ) ಹಾಗು ಇಲೆಕ್ಟ್ರೋಲೈಟ್ ಮಟ್ಟಗಳು ಸಾಂಕೇತಿಕ ರೀತಿಯಲ್ಲಿ ಕಡಿಮೆಯಿರುತ್ತದೆ.
ಒಂದು ಫ್ಲೂಯಿಡ್ ಡಿಪ್ರಿವೆಶನ್ ಟೆಸ್ಟ್ DI ಈ ಕೆಲ ಕಾರಣಗಳಿಂದ ಉಂಟಾಗಿರಬಹುದೇ ಎಂಬುದನ್ನು ನಿರ್ಧರಿಸುತ್ತದೆ:
ಮಿತಿಮೀರಿದ ದ್ರವಪದಾರ್ಥದ ಸೇವನೆ
ಈ ವಿಧಾನದ ಪರೀಕ್ಷೆಯು ಶರೀರದ ತೂಕದಲ್ಲಿ ಬದಲಾವಣೆ, ಮೂತ್ರದ ವಿಸರ್ಜನೆ, ಹಾಗು ದ್ರವ ಪದಾರ್ಥಗಳನ್ನು ನಿರೋಧಿಸಿದಾಗ ಉಂಟಾಗುವ ಮೂತ್ರದ ಲಕ್ಷಣ ಹಾಗು ನಿರ್ಜಲೀಕರಣದ ಸಂಭವಗಳನ್ನು ಮಾಪನ ಮಾಡುತ್ತದೆ. ನಿರ್ಜಲೀಕರಣಕ್ಕೆ ಶರೀರದ ಸಾಮಾನ್ಯ ಪ್ರತಿಕ್ರಿಯೆಯೆಂದರೆ ಮೂತ್ರದ ಸಾರೀಕರಣ ಹಾಗು ನೀರಿನ ಸಂರಕ್ಷಣೆ, ಈ ರೀತಿಯಾಗಿ ಮೂತ್ರವು ಹೆಚ್ಚು ಸಾರೀಕರಣಗೊಂಡು ಮೂತ್ರ ವಿಸರ್ಜನೆಯ ಪುನರಾವರ್ತನೆಯು ಕಡಿಮೆಗೊಳ್ಳುತ್ತದೆ. DIನ ಲಕ್ಷಣವನ್ನು ಹೊಂದಿರುವವರು ಯಾವುದೇ ದ್ರವಪದಾರ್ಥವನ್ನು ಸೇವನೆ ಮಾಡದಿದ್ದರೂ ದೊಡ್ಡ ಪ್ರಮಾಣದಲ್ಲಿ ಸಾರಗುಂದಿಸಿದ ಮೂತ್ರವನ್ನು ವಿಸರ್ಜಿಸುತ್ತಾರೆ. ಕೆಲವೊಂದು ಬಾರಿ ಈ ಪರೀಕ್ಷೆಗೆ ADHನ ರಕ್ತದ ಮಟ್ಟವನ್ನು ಮಾಪನ ಮಾಡುವುದೂ ಸಹ ಅಗತ್ಯವಾಗಿರುತ್ತದೆ.
ಪ್ರಮುಖ ಅಂಶಗಳ ಜೊತೆಗೆ ವ್ಯತ್ಯಾಸವನ್ನು ಗ್ರಹಿಸುವಾಗ, ಡೆಸ್ಮೋಪ್ರೆಸ್ಸಿನ್‌ಉತ್ತೇಜಕ ದ್ರವ್ಯವನ್ನು ಸಹ ಬಳಸಲಾಗುತ್ತದೆ; ಡೆಸ್ಮೋಪ್ರೆಸ್ಸಿನ್ ಅನ್ನು ಚುಚ್ಚುಮದ್ದಿನ ಮೂಲಕ, ಮೂಗಿಗೆ ದ್ರವವನ್ನು ಸೇಚಿಸುವ ಮೂಲಕ, ಅಥವಾ ಒಂದು ಮಾತ್ರೆಯ ಮೂಲಕ ತೆಗೆದುಕೊಳ್ಳಬಹುದಾಗಿದೆ. ಡೆಸ್ಮೋಪ್ರೆಸ್ಸಿನ್ ಅನ್ನು ತೆಗೆದುಕೊಳ್ಳುವಾಗ, ರೋಗಿಯು ದ್ರವಪದಾರ್ಥಗಳನ್ನು ಅಥವಾ ನೀರನ್ನು ಬಾಯಾರಿಕೆಯಾದಾಗಷ್ಟೇ ತೆಗೆದುಕೊಳ್ಳಬೇಕು, ಇತರ ಸಮಯದಲ್ಲಿ ಅಲ್ಲ. ಏಕೆಂದರೆ ಇದು ಕೇಂದ್ರ ನರಮಂಡಲದಲ್ಲಿ ಹಠಾತ್ತಾಗಿ ದ್ರವದ ಸಂಗ್ರಹಣೆಗೆ ಕಾರಣವಾಗಬಹುದು. ಡೆಸ್ಮೋಪ್ರೆಸ್ಸಿನ್ ಮೂತ್ರ ವಿಸರ್ಜನೆಯನ್ನು ಕಡಿಮೆಗೊಳಿಸಿ ಆಸ್ಮೋಲಾರಿಟಿಯನ್ನು ಅಧಿಕಗೊಳಿಸಿದರೆ, ADHನಲ್ಲಿ ಪಿಟ್ಯೂಟರಿಯ ಉತ್ಪಾದನೆಯು ಅಪೂರ್ಣವಾಗಿರುತ್ತದೆ, ಜೊತೆಗೆ ಮೂತ್ರಪಿಂಡವು ಸಾಮಾನ್ಯ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. DI ಮೂತ್ರಪಿಂಡಗಳ ರೋಗಲಕ್ಷಣವನ್ನು ಹೊಂದಿದ್ದರೆ, ಡೆಸ್ಮೋಪ್ರೆಸ್ಸಿನ್ ಮೂತ್ರ ವಿಸರ್ಜನೆಯಲ್ಲಾಗಲಿ ಅಥವಾ ಆಸ್ಮೋಲಾರಿಟಿಯಲ್ಲಾಗಲಿ ಯಾವುದೇ ಬದಲಾವಣೆ ತರುವುದಿಲ್ಲ.
ಪ್ರಮುಖ DI ಎಂದು ಭಾವಿಸಲಾಗಿದ್ದರೆ, ಪಿಟ್ಯೂಟರಿಯ ಇತರ ಹಾರ್ಮೋನ್ ಗಳ ಪರೀಕ್ಷೆಯ ಜೊತೆಗೆ ಮ್ಯಾಗ್ನೆಟಿಕ್ ರೆಸೋನನ್ಸ್ ಇಮೇಜಿಂಗ್(MRI) ಗಳನ್ನು ನಡೆಸುವುದು ರೋಗದ ಪ್ರಕ್ರಿಯೆಯನ್ನು ಕಂಡುಹಿಡಿಯಲು ಅಗತ್ಯವಾಗಿರುತ್ತದೆ (ಉದಾಹರಣೆಗೆ ಪ್ರೋಲ್ಯಾಕ್ಟಿನೋಮ, ಅಥವಾ ಹಿಸ್ಟಿಯೋಸೈಟೋಸಿಸ್, ಸಿಫಿಲಿಸ್, ಟ್ಯೂಬರ್ಕ್ಯೂಲೋಸಿಸ್(ಕ್ಷಯ) ಅಥವಾ ಇತರ ದುರ್ಮಾಂಸ ಅಥವಾಗ್ರ್ಯಾನ್ಯುಲೋಮದ ಪರೀಕ್ಷೆ) ಏಕೆಂದರೆ ಇವುಗಳು ಪಿಟ್ಯೂಟರಿಯ ಕಾರ್ಯನಿರ್ವಹಣೆಗೆ ಪರಿಣಾಮವನ್ನು ಬೀರುತ್ತಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಈ ರೋಗ ಲಕ್ಷಣವನ್ನು ಉಳ್ಳ ಹೆಚ್ಚಿನ ಜನರು ಮುಂಚೆ ತಲೆಗೆ ಪೆಟ್ಟು ಬಿದ್ದ ಅನುಭವವನ್ನು ಪಡೆಯುತ್ತಾರೆ ಅಥವಾ ಇವರಲ್ಲಿ ಪತ್ತೆಯಾಗದ ಕಾರಣಗಳಿಂದ ADHನ ಉತ್ಪಾದನೆಯು ಸ್ಥಗಿತಗೊಂಡಿರುತ್ತದೆ.
ಮದ್ಯಪಾನದ ಚಟವು (ಇದರ ತೀವ್ರತರವಾದ ರೋಗ ಲಕ್ಷಣವನ್ನು ಸೈಕೊಜೆನಿಕ್ ಪಾಲಿಡಿಪ್ಸಿಯ ಎಂದು ಕರೆಯಲಾಗುತ್ತದೆ) ಎಲ್ಲ ವಯಸ್ಸಿನವರಲ್ಲಿ ಅತ್ಯಂತ ಸಾಮಾನ್ಯವಾಗಿ ಡಯಾಬಿಟಿಸ್ ಇನ್ಸಿಪಿಡಸ್ ನ ಅನುಕರಣವಾಗಿರುತ್ತದೆ. ವೈದ್ಯಕೀಯ ಸಾಹಿತ್ಯದಲ್ಲಿ ವಯಸ್ಕರಲ್ಲಿ ಕಂಡುಬರುವ ಇಂತಹ ಹಲವು ಪರಿಸ್ಥಿತಿಗಳನ್ನು ಮಾನಸಿಕ ಅಸ್ವಸ್ಥತೆಯ ಜೊತೆಗೆ ಸಂಬಂಧಿಸಲಾಗಿದೆ, ಪಾಲಿಡಿಪ್ಸಿಯ ಎಂದು ಕರೆಯಲ್ಪಡುವ ಮದ್ಯಪಾನದ ಚಟವನ್ನು ಹೊಂದಿರುವ ಹಲವು ರೋಗಿಗಳಲ್ಲಿ ಇತರ ಯಾವುದೇ ಪತ್ತೆ ಹಚ್ಚಬಲ್ಲ ರೋಗ ಲಕ್ಷಣವು ಕಂಡುಬರುವುದಿಲ್ಲ. ಈ ವ್ಯತ್ಯಾಸವನ್ನು ನೀರಿನ ಅಭಾವ ಪರೀಕ್ಷೆಯ ಸಮಯದಲ್ಲಿ ಗ್ರಹಿಸಲಾಗುತ್ತದೆ, ಐಸೊಮೋಲಾರ್ ಗಿಂತ ಸ್ವಲ್ಪ ಹೆಚ್ಚಿನ ಮಟ್ಟದ ಮೂತ್ರದ ಸಾರೀಕರಣವನ್ನು ಸಾಮಾನ್ಯವಾಗಿ ರೋಗಿಯು ನಿರ್ಜಲೀಕರಣವನ್ನು ಹೊಂದುವ ಮುಂಚೆ ಪಡೆದುಕೊಳ್ಳಲಾಗುತ್ತದೆ.
ರೋಗ-ಜೀವಶಾಸ್ತ್ರ
[ಬದಲಾಯಿಸಿ]ಇಲೆಕ್ಟ್ರೋಲೈಟ್ ಹಾಗು ಪ್ರಮಾಣಿತ ಸಂತುಲನವು ಒಂದು ಸಂಕೀರ್ಣ ವ್ಯವಸ್ಥೆಯಾಗಿದೆ. ಇದು ಶರೀರದ ರಕ್ತದೊತ್ತಡ ಹಾಗು ಪ್ರಮುಖ ಇಲೆಕ್ಟ್ರೋಲೈಟ್ ಗಳಾದ ಸೋಡಿಯಂ ಹಾಗು ಪೊಟ್ಯಾಸಿಯಂಗಳ ಅಗತ್ಯತೆಯನ್ನು ಸಮತೋಲನಗೊಳಿಸುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ, ಇಲೆಕ್ಟ್ರೋಲೈಟ್ ನ ನಿಯಂತ್ರಣವು, ನಿಯಂತ್ರಿತ ಪ್ರಮಾಣವನ್ನು ಹಿಂದಿಕ್ಕುತ್ತದೆ. ಯಾವುದೇ ಮಟ್ಟದಲ್ಲಾದರೂ ನಿಯಂತ್ರಿತ ಪ್ರಮಾಣವು ತೀವ್ರತರವಾಗಿ ಕುಗ್ಗಿದಾದ, ಶರೀರವು ಇಲೆಕ್ಟ್ರೋಲೈಟ್ ಮಟ್ಟಗಳಿಗೆ ಅಡ್ಡಿ ಮಾಡುವ ಪ್ರಮಾಣಕ್ಕೆ ಬದಲಿಯಾಗಿ ನೀರನ್ನು ಉಳಿಸಿಕೊಳ್ಳುತ್ತದೆ.
ಮೂತ್ರದ ಉತ್ಪತ್ತಿಯಲ್ಲಿನ ನಿಯಂತ್ರಣವು ಹೈಪೋಥಲಮಸ್ ನಲ್ಲಿ ಉಂಟಾಗುತ್ತದೆ. ಇದು ADH ನಲ್ಲಿ ಸುಪ್ರಆಪ್ಟಿಕ್ ಹಾಗು ಪ್ಯಾರವೆಂಟ್ರಿಕ್ಯುಲರ್ ಬೀಜಕಣವನ್ನು ಉತ್ಪಾದಿಸುತ್ತದೆ. ಸಂಶ್ಲೇಷಣೆಯ ನಂತರ, ಹಾರ್ಮೋನುಗಳು ನರಸ್ರಾವಕ ಗ್ರ್ಯಾನ್ಯೂಲ್ (ಸಣ್ಣ ಕಣಗಳು) ಗಳಿಗೆ ಹೈಪೋತ್ಯಾಲಮಿಕ್ (ಮಿದುಳಿನ ಕೆಳಗಿರುವ ದೇಹದ ಉಷ್ಣತೆ, ಹಸಿವು, ಬಾಯಾರಿಕೆಗಳನ್ನು ನಿಯಂತ್ರಿಸುವ ಅಂಗ) ನರ ಕೋಶದ ತಂತುಗಳ ಕೆಳಗೆ ಪಿಟ್ಯೂಟರಿ ಗ್ರಂಥಿಯ ಹಿಂಭಾಗದ ಹಾಲೆಗೆ ವರ್ಗಾವಣೆಯಾಗುತ್ತದೆ. ಅಲ್ಲಿ ಇದು ನಂತರದ ಬಿಡುಗಡೆಗೆ ಶೇಖರಣೆಯಾಗಿರುತ್ತದೆ. ಇದರ ಜೊತೆಯಲ್ಲಿ, ಹೈಪೋತ್ಯಾಲಮಸ್ ಬಾಯಾರಿಕೆಯ ಅನುಭವವನ್ನು ವೆಂಟ್ರೋಮೀಡಿಯಲ್ ನ್ಯೂಕ್ಲಿಯಸ್ ನಲ್ಲಿ ರಕ್ತಸಾರದ ಆಸ್ಮೋಲಾರಿಟಿಯ ಸಂವೇದನೆಯನ್ನು ಅಧಿಕಗೊಳಿಸುವ ಮೂಲಕ ನಿಯಂತ್ರಿಸುತ್ತದೆ ಜೊತೆಗೆ ಈ ಮಾಹಿತಿಯನ್ನು ಮೂತ್ರಪಿಂಡದ ಹೊರಪದರಕ್ಕೆ ಒದಗಿಸುತ್ತದೆ.
ದ್ರವದ ಸಂತುಲನಕ್ಕೆ ಮುಖ್ಯ ನಿರ್ವಾಹಕ ಅಂಗವೆಂದರೆ ಮೂತ್ರಪಿಂಡ. ADH ಸಂಗ್ರಹಣಾ ನಾಳದಲ್ಲಿ ನೀರಿನ ವ್ಯಾಪ್ಯತೆಯನ್ನು ಅಧಿಕಗೊಳಿಸುವ ಮೂಲಕ ಕಾರ್ಯ ನಿರ್ವಹಿಸುತ್ತದೆ ಜೊತೆಗೆ ಅಂತ್ಯದ ಸುರುಳಿಯಾಕಾರದ ನಾಳಿಕೆಯು ನಿರ್ದಿಷ್ಟವಾಗಿ ಆಕ್ವಾಪೋರಿನ್ ಗಳೆಂದು ಕರೆಯಲ್ಪಡುವ ಪ್ರೋಟೀನ್ ಮೇಲೆ ಪ್ರಭಾವವನ್ನು ಬೀರುತ್ತದೆ. ಇದು ಸಂಗ್ರಹಣಾ ನಾಳದ ಕೋಶದಲ್ಲಿ ನೀರಿನ ಪ್ರವೇಶಕ್ಕೆ ಮುಕ್ತವಾಗಿರುತ್ತದೆ. ವ್ಯಾಪ್ಯತೆಯಲ್ಲಿನ ಈ ಅಧಿಕತೆಯು ರಕ್ತದ ಹರಿವಿನಲ್ಲಿ ನೀರಿನ ಪುನಃ ಹೀರಿಕೊಳ್ಳುವಿಕೆಗೆ ಅವಕಾಶವನ್ನು ನೀಡುವುದರ ಮೂಲಕ ಮೂತ್ರವನ್ನು ಸಾರೀಕರಣಗೊಳಿಸುತ್ತದೆ.
ವರ್ಗೀಕರಣ
[ಬದಲಾಯಿಸಿ]DIನಲ್ಲಿ ಹಲವಾರು ವರ್ಗಗಳಿವೆ:
ನ್ಯೂಅರೋಜೆನಿಕ್ (ನರಗಳ ಊತಕದಿಂದ ಉಂಟಾಗುವ ಪರಿಸ್ಥಿತಿ)
[ಬದಲಾಯಿಸಿ]ನ್ಯೂಅರೋಜೆನಿಕ್ ಡಯಾಬಿಟಿಸ್ ಇನ್ಸಿಪಿಡಸ್ ಹೆಚ್ಚಾಗಿ ಸೆಂಟ್ರಲ್(ಪ್ರಮುಖ) ಡಯಾಬಿಟಿಸ್ ಇನ್ಸಿಪಿಡಸ್ ಎಂದು ಸಾಮಾನ್ಯವಾಗಿ ಪರಿಚಿತವಾಗಿದೆ. ಈ ಪರಿಸ್ಥಿತಿಯು ಮಿದುಳಿನಲ್ಲಿ ವಾಸೋಪ್ರೇಸ್ಸಿನ್ ಉತ್ಪಾದನೆಯ ಕೊರತೆಯಿಂದ ಉಂಟಾಗುತ್ತದೆ.
ನೆಫ್ರೋಜೆನಿಕ್
[ಬದಲಾಯಿಸಿ]ನೆಫ್ರೋಜೆನಿಕ್ ಡಯಾಬಿಟಿಸ್ ಇನ್ಸಿಪಿಡಸ್ ಎಂಬ ಪರಿಸ್ಥಿತಿಯು ADHಗೆ ಸಾಧಾರಣವಾಗಿ ಪ್ರತಿಕ್ರಿಯಿಸುವ ಮೂತ್ರಪಿಂಡದ ಅಸಮರ್ಥತೆಯಿಂದ ಉಂಟಾಗುತ್ತದೆ.
ಡಿಪ್ಸೋಜೆನಿಕ್
[ಬದಲಾಯಿಸಿ]ಡಿಪ್ಸೋಜೆನಿಕ್ DI ಬಾಯಾರಿಕೆ ಪ್ರಕ್ರಿಯೆಯ ಕಾರ್ಯರೀತಿಯ ಕೊರತೆ ಅಥವಾ ಅದಕ್ಕೆ ಆದ ಹಾನಿಯಿಂದ ಉಂಟಾಗುತ್ತದೆ, ಇದು ಹೈಪೋತ್ಯಾಲಮಸ್ ನಲ್ಲಿ ಕಂಡು ಬರುತ್ತದೆ ಈ ಕೊರತೆಯಿಂದಾಗಿ ಬಾಯಾರಿಕೆಯಲ್ಲಿ ಒಂದು ಅಸಾಧಾರಣ ಅಧಿಕತೆಯು ಪರಿಣಮಿಸುತ್ತದೆ ಜೊತೆಗೆ ಸೇವಿಸಿದ ದ್ರವವು ADH ಸುರಿಸುವಿಕೆಗೆ ಅಡ್ಡಿಪಡಿಸುವುದರ ಜೊತೆಗೆ ಮೂತ್ರ ವಿಸರ್ಜನೆಯನ್ನು ಅಧಿಕಗೊಳಿಸುತ್ತದೆ. ಅಲ್ಲದೇ ಸ್ಮೋಪ್ರೆಸ್ಸಿನ್ ನಿಷ್ಪರಿಣಾಮಕಾರಿಯಾಗಿರುತ್ತದೆ, ಜೊತೆಗೆ ದ್ರವದ ಸೇವನೆಯು ಅಧಿಕವಾದರೂ ಬಾಯಾರಿಕೆಯೂ ಹಾಗೆ ಉಳಿಯುತ್ತದೆ.
ಗರ್ಭಾವಸ್ಥೆಯಲ್ಲಿ ಉಂಟಾಗುವ ಪರಿಸ್ಥಿತಿ
[ಬದಲಾಯಿಸಿ]ಗರ್ಭಾವಸ್ಥೆಯ DI ಕೇವಲ ಗರ್ಭಾವಸ್ಥೆಯಲ್ಲಿ ಮಾತ್ರ ಕಂಡುಬರುತ್ತದೆ. ಎಲ್ಲ ಗರ್ಭಿಣಿ ಮಹಿಳೆಯರ ಗರ್ಭವೇಷ್ಟನದಲ್ಲಿ ವಾಸ್ಪ್ರೆಸ್ಸಿನೆಸ್ ಉತ್ಪತ್ತಿಯಾಗುತ್ತದೆ, ಇದು ADH ಗೆ ಹಾನಿಯನ್ನು ಉಂಟುಮಾಡುತ್ತದೆ, ಇದು GDIನಲ್ಲಿ ಉಂಟಾಗುವ ತೀವ್ರತರ ಲಕ್ಷಣವನ್ನು ಊಹಿಸುತ್ತದೆ.[೧][೧]
ಗರ್ಭಾವಸ್ಥೆಯ DIನ ಹಲವು ಪರಿಸ್ಥಿತಿಗಳನ್ನು ಡೆಸ್ಮೋಪ್ರೆಸ್ಸಿನ್ ಮೂಲಕ ಗುಣಪಡಿಸಬಹುದಾಗಿದೆ. ಆದಾಗ್ಯೂ, ವಿರಳ ಪರಿಸ್ಥಿತಿಗಳಲ್ಲಿ ಬಾಯಾರಿಕೆ ಪ್ರಕ್ರಿಯೆಯ ವ್ಯವಸ್ಥೆಯ ಅಸಾಧಾರಣತೆಯು ಗರ್ಭಾವಸ್ಥೆಯ DIಗೆ ಕಾರಣವಾಗುತ್ತದೆ, ಜೊತೆಗೆ ಈ ಪರಿಸ್ಥಿತಿಯಲ್ಲಿ ಡೆಸ್ಮೋಪ್ರೆಸ್ಸಿನ್ ನನ್ನು ಬಳಕೆ ಮಾಡಬಾರದು.
ಗರ್ಭಾವಸ್ಥೆಯ ಕೆಲವು ತೀವ್ರತರವಾದ ಕಾಯಿಲೆಗಳ ಜೊತೆಗೆ ಡಯಾಬಿಟಿಸ್ ಇನ್ಸಿಪಿಡಸ್ ಕೂಡಾ ಸಂಬಂಧಿಸಿದೆ. ಇವುಗಳೆಂದರೆ ಪ್ರಸವಕ್ಕೆ ಪೂರ್ವದಲ್ಲಿ ಸಂಭವಿಸುವ ಅಪಸ್ಮಾರ, HELLP ಸಿಂಡ್ರೋಮ್ ಹಾಗು ಗರ್ಭಾವಸ್ಥೆಯಲ್ಲಿ ಉಂಟಾಗುವ ತೀವ್ರತರವಾದ ಫ್ಯಾಟಿ ಲಿವರ್(ಪಿತ್ತಜನಕಾಂಗದಲ್ಲಿ ಕೆಲವು ಕೊಬ್ಬುಗಳ ಸಂಗ್ರಹಣೆಯಿಂದ ಮೂತ್ರವು ಹಳದಿ ಬಣ್ಣಕ್ಕೆ ತಿರುಗುತ್ತದೆ). ಇವುಗಳು ಪಿತ್ತಜನಕಾಂಗದ ವಾಸೋಪ್ರೆಸ್ಸಿನೆಸ್ ಅನ್ನು ಸಕ್ರಿಯಗೊಳಿಸುವ ಮೂಲಕ ಡಯಾಬಿಟಿಸ್ ಇನ್ಸಿಪಿಡಸ್ ಗೆ ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯು ಡಯಾಬಿಟಿಸ್ ಇನ್ಸಿಪಿಡಸ್ ನಿಂದ ಬಳಲುತ್ತಿರುತ್ತಾರೆ. ಆಗ ಈ ಮೇಲಿನ ಅಂಶಗಳು ಪ್ರಮುಖವಾಗುತ್ತವೆ, ಏಕೆಂದರೆ ಈ ಕಾಯಿಲೆಗಳಿಗೆ ಚಿಕಿತ್ಸೆಯನ್ನು ರೋಗ ಲಕ್ಷಣಗಳು ಬೆಳವಣಿಗೆಯಾಗುವುದಕ್ಕೆ ಮುಂಚೆ ಮಗುವನ್ನು ಹೆರಿಗೆ ಮಾಡಿಸುವ ಅಗತ್ಯವಿರುತ್ತದೆ. ಈ ಕಾಯಿಲೆಗಳಿಗೆ ಕೂಡಲೇ ಸೂಕ್ತ ಚಿಕಿತ್ಸೆಯನ್ನು ನೀಡದಿದ್ದರೆ ಇದು ತಾಯಿಯ ಅಥವಾ ಪ್ರಸವಪೂರ್ವದ ಮರಣಕ್ಕೆ ಕಾರಣವಾಗಬಹುದು.
ಚಿಕಿತ್ಸಾಕ್ರಮ
[ಬದಲಾಯಿಸಿ]ಸೆಂಟ್ರಲ್ DI ಹಾಗು ಗರ್ಭಾವಸ್ಥೆಯ DI ಡೆಸ್ಮೋಪ್ರೆಸ್ಸಿನ್ ಗೆ ಪ್ರತಿಕ್ರಿಯೆ ನೀಡುತ್ತದೆ. ಈ ವಿಧದ DIಗೆ ಕಾರ್ಬಮಜೆಪಿನ್ ಎಂಬ ಸೆಳವು ನಿರೋಧಕ ಔಷಧಕ್ಕೆ ಸ್ವಲ್ಪ ಮಟ್ಟಿಗಿನ ಯಶಸ್ಸನ್ನು ತೋರಿದೆ. ಅಲ್ಲದೆ ಗರ್ಭಾವಸ್ಥೆಯ DI ಗರ್ಭ ಧರಿಸಿದ 4 ರಿಂದ 6 ವಾರಗಳೊಳಗಾಗಿ ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ, ಆದಾಗ್ಯೂ ಕೆಲವು ಮಹಿಳೆಯರಲ್ಲಿ ನಂತರದ ಗರ್ಭಧಾರಣೆಯ ಸಂದರ್ಭಗಳಲ್ಲೂ ಇದು ಮತ್ತೆ ಉಂಟಾಗುವ ಸಂಭವವಿರುತ್ತದೆ. ಡಿಪ್ಸೋಜೆನಿಕ್ DIನಲ್ಲಿ, ಡೆಸ್ಮೋಪ್ರೆಸ್ಸಿನ್ ಸಾಮಾನ್ಯವಾಗಿ ಚಿಕಿತ್ಸೆಯ ಆಯ್ಕೆಯಾಗಿರುವುದಿಲ್ಲ.
ಡೆಸ್ಮೋಪ್ರೆಸ್ಸಿನ್ ನೆಫ್ರೋಜೆನಿಕ್ DIಗೆ ನಿಷ್ಪರಿಣಾಮಕಾರಿಯಾಗಿರುತ್ತದೆ. ಇದಕ್ಕೆ ಪರ್ಯಾಯವಾಗಿ, ಮೂತ್ರವರ್ಧಕ ಹೈಡ್ರೋಕ್ಲೋರೋತಿಯಾಜೈಡ್ (ಒಂದು ತಿಯಾಜೈಡ್ ಮೂತ್ರವರ್ಧಕ) ಅಥವಾ ಇಂಡೋಮೆಥಸಿನ್ ನೆಫ್ರೋಜೆನಿಕ್ ಡಯಾಬಿಟಿಸ್ ಇನ್ಸಿಪಿಡಸ್ ಅನ್ನು ಗುಣಪಡಿಸುವಲ್ಲಿ ಸಹಕಾರಿಯಾಗಿದೆ. ತಿಯಾಜೈಡ್ ಮೂತ್ರವರ್ಧಕಗಳನ್ನು ಹೈಪೋಕಲೇಮಿಯವನ್ನು ತಡೆಗಟ್ಟಲು ಕೆಲವೊಂದು ಬಾರಿ ಅಮಿಲೋರೈಡ್ ಗಳ ಜೊತೆಗೆ ಮಿಶ್ರಣ ಮಾಡಲಾಗುತ್ತದೆ. ತೀವ್ರತರವಾದ ಮೂತ್ರವರ್ಧನವನ್ನು ಒಂದು ಮೂತ್ರವರ್ಧಕದಿಂದ ಚಿಕಿತ್ಸೆ ಪಡಿಸುವುದು ಅಸಹಜವಾಗಿ ಕಂಡುಬರಬಹುದು. ಆದರೆ ತಿಯಾಜೈಡ್ ಮೂತ್ರವರ್ಧಕಗಳು ಅಂತ್ಯದ ಸುರುಳಿಯಾಕಾರದ ನಾಳಿಕೆಯು ಸೋಡಿಯಂ ಹಾಗು ನೀರಿನ ಪುನಃ ಹೀರಿಕೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಅಂತ್ಯದ ನೆಫ್ರಾನ್ ಗೆ ದ್ರವದ ಆಸ್ಮೋಲಾರಿಟಿಯನ್ನು ತಗ್ಗಿಸುವುದರ ಜೊತೆಗೆ ಮೂತ್ರ ವಿಸರ್ಜನೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮತ್ತೊಮ್ಮೆ, DIನ ರೋಗಿಗಳು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸುವುದು ಅಗತ್ಯವಾಗಿರುತ್ತದೆ, ಏಕೆಂದರೆ ಅವರು ಸುಲಭವಾಗಿ ನಿರ್ಜಲೀಕರಣ ಹೊಂದುತ್ತಾರೆ.
ಲಿಥಿಯಂನ ಅಳವಡಿಕೆಯಿಂದ ನೆಫ್ರೋಜೆನಿಕ್ DI ಅನ್ನು ಅಮಿಲೋರೈಡ್ ನ ಪ್ರಾಶನದಿಂದ ಪರಿಣಾಮಕಾರಿಯಾಗಿ ನಿರ್ವಹಿಸಬಹುದು, ಒಂದು ಮಿತ ಪೊಟ್ಯಾಸಿಯಮ್ ಮೂತ್ರವರ್ಧಕವನ್ನು ತಿಯಾಜೈಡ್ ಅಥವಾ ಲೂಪ್ ಮೂತ್ರವರ್ಧಕಗಳ ಸಂಯೋಗದೊಂದಿಗೆ ಸಾಮಾನ್ಯವಾಗಿ ಬಳಸಲಾಗುತ್ತದೆ. ಹಲವು ವರ್ಷಗಳಿಂದ ವೈದ್ಯರಿಗೆ ಲಿಥಿಯಂನ ವಿಷತ್ವದ ಬಗ್ಗೆ ಅರಿವಿದೆ. ಜೊತೆಗೆ ಸಾಂಪ್ರದಾಯಿಕವಾಗಿ ಪಾಲಿಯೂರಿಯ ಹಾಗು ನೆಫ್ರೋಜೆನಿಕ್ ಡಯಾಬಿಟಿಸ್ ಇನ್ಸಿಪಿಡಸ್ ನಲ್ಲಿ ಬಳಕೆಯಾಗುವ ಲಿಥಿಯಂಯುಕ್ತ ತಿಯಾಜೈಡ್ ಮೂತ್ರವರ್ಧಕಗಳನ್ನು ಪ್ರಾಶನ ಮಾಡಿಸುತ್ತಾರೆ. ಅದೇನೇ ಇದ್ದರೂ, ಇತ್ತೀಚಿಗೆ ಅಮಿಲೋರೈಡ್ ಈ ಪರಿಸ್ಥಿತಿಯ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ ಎಂದು ನಿರೂಪಿತವಾಗಿದೆ.[೨]
ನೋಡಿ
[ಬದಲಾಯಿಸಿ]- ಡಯಾಬಿಟಿಸ್ ಜೀವನಶೈಲಿ:ನಮ್ಮ ಡಯಾಬಿಟಿಸ್ಗೆ ನಮ್ಮಲ್ಲೇ ಇದೆ ಪರಿಹಾರ;ಡಾ. ಎಚ್.ಎಸ್. ಪ್ರೇಮ;ಆಹಾರತಜ್ಞೆ (9449974580);12 Nov, 2016 Archived 2016-11-16 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]- ↑ ೧.೦ ೧.೧ Kalelioglu I, Kubat Uzum A, Yildirim A, Ozkan T, Gungor F, Has R (2007). "Transient gestational diabetes insipidus diagnosed in successive pregnancies: review of pathophysiology, diagnosis, treatment, and management of delivery". Pituitary. 10 (1): 87–93. doi:10.1007/s11102-007-0006-1. PMID 17308961.
{{cite journal}}
: CS1 maint: multiple names: authors list (link) - ↑ ಫಿಂಚ್ CK, ಕೆಲ್ಲಿ KW, ವಿಲ್ಲಿಯಮ್ಸ್ RB. ಟ್ರೀಟ್ಮೆಂಟ್ ಆಫ್ ಲಿಥಿಯಂ-ಇಂಡ್ಯೂಸ್ಡ್ ಡಯಾಬಿಟಿಸ್ ಇನ್ಸಿಪಿಡಸ್ ವಿಥ್ ಅಮಿಲೋರೈಡ್. ಫಾರ್ಮಕೋಥೆರಪಿ. 2003 ಏಪ್ರಿಲ್;23(4):546-50. PMID 12680486
ಆಕರಗಳು
[ಬದಲಾಯಿಸಿ]- ದಿ ಪಬ್ಲಿಕ್ ಡೊಮೈನ್ ಡಾಕ್ಯುಮೆಂಟ್ "ಡಯಾಬಿಟಿಸ್ ಇನ್ಸಿಪಿಡಸ್", NIH ಪಬ್ಲಿಕೇಶನ್ ನಂ.01-4620, ಡಿಸೆಂಬರ್ 2000.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- CS1 maint: multiple names: authors list
- Pages using PMID magic links
- Articles with hatnote templates targeting a nonexistent page
- Articles needing additional references from February 2009
- All articles needing additional references
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles that show a Medicine navs template
- ಎಂಡೋಕ್ರಿನೋಲಜಿ
- ನೆಫ್ರಾಲಜಿ
- ಮಧುಮೇಹ