ವಿಷಯಕ್ಕೆ ಹೋಗು

ಕೊಂಡ್ಲಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಂಡ್ಲಹಳ್ಳಿ ಇದು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಮೊಳಕಾಲ್ಮೂರು ತಾಲೂಕಿನ ಒಂದು ಗ್ರಾಮ, ಇಲ್ಲಿ ಸುಮಾರು ೮ ಸಾವಿರ ಜನಸಂಖ್ಯೆಯನ್ನು ಹೊಂದಿದೆ, ಸುಮಾರು ೧೫೦೦ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಇಲ್ಲಿ ಹೆಚ್ಚಾಗಿ ನೇಕಾರರು ವಾಸವಾಗಿದ್ದು ಇತರೆ ಜನಾಂಗದವರು ಬೆರಳೆಣಿಕೆಯಷ್ಟಿರುತ್ತಾರೆ. ಇದು ರಾಷ್ಟ್ರದಾದ್ಯಂತ ರೇಷ್ಮೆ ಸೀರೆ ಹಾಗೂ ಕಂಬಳಿ (ಉಲ್ಲನ್ ಬ್ಲಾಂಕೆಟ್) ತಯಾರಿಕೆ ಹಾಗೂ ಮಾರಾಟಕ್ಕೆ ಪ್ರಸಿದ್ದವಾಗಿದೆ. ಇಲ್ಲಿಯ ನೇಕಾರರು ರೇಷ್ಮೆ ಸೀರೆ ಹಾಗೂ ಕಂಬಳಿ ನೇಯ್ದು(ತಯಾರಿಸಿ) ಮಾರಿ ಜೀವನ ಸಾಗಿಸುತ್ತಿರುತ್ತಾರೆ,

ವಾಣಿಜ್ಯ :

[ಬದಲಾಯಿಸಿ]

ಇಲ್ಲಿ ಕಂಬಳಿ ಹಾಗೂ ರೇಷ್ಮೆ ಸೀರೆಗಳೇ ಮಾರಾಟವೇ ಮುಖ್ಯ ಉದ್ಯಮವಾಗಿರುತ್ತದೆ. ಅಂತೆಯೇ ಇಲ್ಲಿ ರೇಷ್ಮೆ ಸೀರೆ ನೇಕಾರರು ಹಾಗೂ ಮಾರಾಟಗಾರರು ಹಾಗು ಕಂಬಳಿ ನೇಕಾರರು ಹಾಗೂ ಮಾರಾಟಗಾರರೂ ಇರುತ್ತಾರೆ.

ಇಲ್ಲಿ ಸಮತಟ್ಟಾದ ಬಯಲು ಪ್ರದೇಶವಾಗಿದ್ದು ಮಳೆಯಾಧಾರಿತ ಹಾಗೂ ನೀರಾವರಿ (ಬೋರ್ರ್ವೆಲ್ಗಳಲ್ಲಿ ಪಂಪ್ ಸೆಟ್) ಸಹಾಯದಿದ ಬೆಳೆಯುತ್ತಿದ್ದು, ಇಲ್ಲಿಂದ ಸುಮಾರು ೧೦ಕೀಮೀ ಗಳಷ್ಟು ದೂರ ಯಾವುದೇ ಗುಡ್ದ ಗಾಡು ಪ್ರದೇಶವಿರುವುದಿಲ್ಲ, ಇಲ್ಲಿಗೆ ಹತ್ತಿರದ ಗುಡ್ಡ ಎಂದರೆ ಕೋನಸಾಗರದ ಗುಡ್ಡ.

ಮರಗಳು: ಈ ಊರಿನ ಸುತ್ತ ಮತ್ತು ಊರಿನ ಒಳಬಾಗದಲ್ಲಿ ಕಂಡುಬರುವ ಮರಗಳು ಎಂದರೆ ಬೇವು,ಚಿನಕೇಸರಿ, ಗ್ಲಿರ್ಸೀಡಿಯ, ಆಲ, ಅತ್ತಿ, ಆಸು, ಆಕಾಶಮಲ್ಲಿಗೆ, ನೀಲಗಿರಿ, ತೆಂಗು, ಅಡಿಕೆ, ಬಾಳೆ, ಸೀತಾಫಲ, ಬಾರೆ, ಬೇವು, ಹೆಬ್ಬೇವು, ದಾಳಿಂಬೆ, ಪೇರಲ(ಬುಕ್ಕೆ), ನೇರಳೆ, ಕಾರೆ, ಹಲಸು,