ವಿಷಯಕ್ಕೆ ಹೋಗು

ಡಾನ್‌ ಬ್ರೌನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dan Brown
ಜನನ (1964-06-22) ಜೂನ್ ೨೨, ೧೯೬೪ (ವಯಸ್ಸು ೬೦)
Exeter, New Hampshire, U.S.
ವೃತ್ತಿNovelist
ಪ್ರಕಾರ/ಶೈಲಿThriller,
Mystery fiction

ಪ್ರಭಾವಗಳು

ಸಹಿ

www.danbrown.com

ಡಾನ್‌ ಬ್ರೌನ್‌ (ಜನನ: ೧೯೬೪ ರ ಜೂನ್‌ ೨೨) ಅಮೆರಿಕಾದ ರೋಮಾಂಚಕ ಕಥೆಗಾರರಾಗಿದ್ದು, ೨೦೦೩ ಲ್ಲಿ ಅತಿ ಹೆಚ್ಚು ಮಾರಾಟವಾದ ಕಾದಂಬರಿ ದಿ ಡಾ ವಿನ್ಸಿ ಕೋಡ್‌ ನಿಂದ ಇವರ ಜನಪ್ರಿಯತೆ ಹೆಚ್ಚಾಯಿತು. ಬ್ರೌನ್‌ರ ಕಾದಂಬರಿಗಳು ೨೪ ಗಂಟೆಗಳ ಅವಧಿಯಲ್ಲಿನ ನಿಧಿ ಅನ್ವೇಷಣೆ ಒಳಗೊಂಡಿರುವುದಲ್ಲದೆ,[] ಗೂಢಲಿಪಿಶಾಸ್ತ್ರ, ಕೀಲಿಕೈಗಳು,(ಅತಿ ಮುಖ್ಯ ಭೇದನಗಳು) ಚಿಹ್ನೆಗಳು, ಸಂಕೇತಗಳು, ಮತ್ತು ಒಳಸಂಚಿನ ವಿಷಯಗಳನ್ನು ಒಳಗೊಂಡಿರುತ್ತವೆ. ಅವರ ಪುಸ್ತಕಗಳು ಸುಮಾರು ೪೦ ಭಾಷೆಗಳಲ್ಲಿ ಭಾಷಾಂತರಗೊಂಡು, 2009ರ ಅಂಕಿಅಂಶದ ಪ್ರಕಾರ ಸುಮಾರು ೮೦ ದಶಲಕ್ಷಕಿಂತಲೂ ಅಧಿಕ ಪ್ರತಿಗಳು ಮಾರಾಟವಾಗಿದ್ದವು.ಬ್ರೌನ್‌ರ ಕಾದಂಬರಿಗಳಲ್ಲಿ ಐತಿಹಾಸಿಕ ವಿಷಯಗಳು ಮತ್ತು ಹಿಂದಿನ ಕ್ರೈಸ್ತ ಧರ್ಮದ ಕಲಾಕೃತಿಗಳು ಸೇರಿದಂತೆ ರಾಬರ್ಟ್‌ ಲ್ಯಾಂಗ್ಡನ್‌ನನ್ನು ಪ್ರಮುಖ ಪಾತ್ರದಲ್ಲಿ ಬಿಂಬಿಸಲಾಗಿರುತ್ತದೆ. ಹಾಗಾಗಿ ಇವುಗಳು ಕೆಲವೆಡೆ ವಿವಾದ ಸೃಷ್ಟಿಸಿವೆ. ಬ್ರೌನ್‌ ತಮ್ಮ ಪುಸ್ತಕಗಳು ಕ್ರೈಸ್ತ ವಿರೋಧಿಯಲ್ಲ, ತಾವು ಸಹ 'ನಿರಂತರ ಆಧ್ಯಾತ್ಮಿಕ ಪ್ರಯಾಣ'ವನ್ನು ಮಾಡುತ್ತಿದ್ದೇನೆ ಎಂದು ತಮ್ಮ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ದಿ ಡಾ ವಿನ್ಸಿ ಕೋಡ್‌ ಪುಸ್ತಕದ ಬಗ್ಗೆ ಹೇಳುತ್ತಾ, ಅದೊಂದು "ಆಧ್ಯಾತ್ಮಿಕ ಚರ್ಚೆ ಉತ್ತೇಜಿಸುವ ಸರಳ ಮನರಂಜನಾ ಕಥೆಯಾಗಿದೆ" ಎಂದರು. ನಂತರ ಅವರು "ನಮ್ಮ ನಂಬಿಕೆಯ ಒಳವಿಮರ್ಶೆ ಮತ್ತು ಪರಿಶೋಧನೆಗೆ ಸಕಾರಾತ್ಮಕ ಪರಿವರ್ತಕದಂತೆ" ಈ ಪುಸ್ತಕ ಬಳಸಬಹುದೆಂದು ಸಲಹೆ ಮಾಡಿದ್ದಾರೆ.[]

ಆರಂಭಿಕ ಜೀವನ ಹಾಗೂ ಶಿಕ್ಷಣ

[ಬದಲಾಯಿಸಿ]

USAನ ನ್ಯೂ ಹಂಪ್‌ಶೈರ್‌ನಲ್ಲಿರುವ ಎಕ್ಸೆಟರ್‌ನಲ್ಲಿ ಡಾನ್‌ ಬ್ರೌನ್‌ ಹುಟ್ಟಿಬೆಳೆದಿದ್ದಾರೆ. ಮೂವರು ಮಕ್ಕಳಲ್ಲಿ ಇವರು ಹಿರಿಯವರಾಗಿದ್ದಾರೆ. ಬ್ರೌನ್‌ ಫಿಲಿಪ್ಸ್‌ ಎಕ್ಸೆಟರ್‌ ಅಕ್ಯಾಡಮಿಯ ಆವರಣದಲ್ಲಿ ಬೆಳೆದರು. ಅಲ್ಲಿ ಅವರ ತಂದೆ ರಿಚರ್ಡ್‌ ಜಿ. ಬ್ರೌನ್‌ ಗಣಿತದ ಗೌರವ ಶಿಕ್ಷಕರಾಗಿದ್ದರು. ಅವರು ೧೯೬೮ ರಿಂದ ೧೯೮೨ ರಲ್ಲಿ ನಿವೃತ್ತಿಯಾಗುವವರೆಗೆ ಪಠ್ಯಪುಸ್ತಕಗಳನ್ನು ಬರೆಯುತ್ತಿದ್ದರು.[][] ಬ್ರೌನ್‌ನ ಹೆತ್ತವರು ಸಹ ಗಾಯಕ/ಸಂಗೀತಗಾರರಾಗಿದ್ದರು. ಅವರ ತಂದೆ ಚರ್ಚಿನ ಗಾಯಕವೃಂದದ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದರು. ಅವರ ತಾಯಿ ಆರ್ಗನ್‌ ವಾದಕರಾಗಿ ಕೆಲಸಮಾಡುತ್ತಿದ್ದರು.[] ಬ್ರೌನ್‌ ಎಪಿಸ್ಕೊಪಲಿಯನ್‌ (ಬ್ರಿಟಿಷ್ ಚರ್ಚಿನ ಸದಸ್ಯ)ಆಗಿ ಬೆಳೆದರು.[] ಬ್ರೌನ್‌ ಬಾಲ್ಯದಿಂದಲೂ ರಹಸ್ಯಗಳು ಮತ್ತು ಒಗಟುಗಳೊಂದಿಗೆ ಬೆಳೆದವರು, ಅವುಗಳ ಕುರಿತು ಆಸಕ್ತಿ ಹೊಂದಿದ್ದರು. ಮನೆಯಲ್ಲಿ ಕೂಡಾ ಅವರ ಹೆತ್ತವರು ಗಣಿತ, ಸಂಗೀತ ಮತ್ತು ಭಾಷಾಶಾಸ್ತ್ರದ ಕುರಿತು ಅಧ್ಯಯನ ಮಾಡುತ್ತಿದ್ದರು. ಇವುಗಳಿಂದಾಗಿ ಅವರಿಗೆ ಗಣಿತ ಸಂಕೇತಗಳು ಮತ್ತು ರಹಸ್ಯ,ಗೂಢಲಿಪಿಗಳ ಬಗ್ಗೆ ಆಸಕ್ತಿ ಬೆಳೆಯಿತು. ಬ್ರೌನ್‌ ಯುವಕರಾಗಿರುವಾಗ, ಅಕ್ಷರಪಲ್ಲಟಗಳು ಮತ್ತು ಪದಬಂಧಗಳನ್ನು ಬಿಡಿಸಲು ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದರು. ಜನ್ಮದಿನ ಮತ್ತು ರಜಾದಿನಗಳಲ್ಲಿ ಬ್ರೌನ್‌ ಮತ್ತು ಅವರ ಒಡ ಹುಟ್ಟಿದವರು ತಂದೆಯ ಯೋಜನೆಯ ಮೇರೆಗೆ ನಿಧಿ ಅನ್ವೇಷಣೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಉದಾಹರಣೆಗೆ ಕ್ರಿಸ್ಮಸ್‌ನಲ್ಲಿ ಬ್ರೌನ್‌ ಮತ್ತು ಅವರ ಒಡ ಹುಟ್ಟಿದವರಿಗೆ ಮರದಡಿ ಉಡುಗೊರೆಗಳು ದೊರೆಯುತ್ತಿರಲಿಲ್ಲ. ಆದರೆ ಅವರು ತಮ್ಮ ಮನೆ ಮತ್ತು ನಗರದ ಸುತ್ತಮುತ್ತಲಿನ ಸಂಕೇತ ಮತ್ತು ಸುಳಿವುಗಳ ಮೂಲಕ ನಿಧಿ ನಕ್ಷೆ ಅನುಸರಿಸಿ ಹುಡುಕಾಟದ ಕಾರ್ಯ ನಡೆಸುತ್ತಿದ್ದರು. ಅವರು ಅಡಗಿದ ಸ್ಥಳದ ಶೋಧನೆಗೆ ತೊಡಗಿಕೊಳ್ಳುತ್ತಿದ್ದರು.[] ಬ್ರೌನ್‌ ಅವರ ತಂದೆಯೊಂದಿಗಿನ ನಿಕಟ ಸಂಬಂಧ ದಿ ಡಾ ವಿನ್ಸಿ ಕೋಡ್‌ ನಲ್ಲಿ ಸೊಫೀ ನೆವಿ ಮತ್ತು ಜಕಾಸ್‌ ಸೊಯಂಜರ್‌ ಪಾತ್ರಗಳ ಸೃಷ್ಟಿಗೆ ಕಾರಣವಾಗಿದೆ. ಆ ಕಾದಂಬರಿಯ 23ನೇ ಅಧ್ಯಾಯವು ಅವರ ಬಾಲ್ಯ ಜೀವನದಿಂದ ಪ್ರೇರೆಪಿತಗೊಂಡಿದೆ.[] ಫಿಲಿಪ್ಸ್‌ ಎಕ್ಸೆಟರ್‌ನಿಂದ ಪದವಿ ಪಡೆದ ನಂತರ, ಬ್ರೌನ್‌ ಅಂಹರ್ಸ್ಟ್‌ ಕಾಲೇಜನ್ನು ಸೇರಿದರು. ಅಲ್ಲಿ ಅವರು ಸೈ ಅಪ್ಸಿಲೊನ್‌ ಸೋದರತ್ವದ ಪಂಥದ ಸದಸ್ಯರಾಗಿದ್ದರು. ಅಂಹರ್ಸ್ಟ್‌ ಗ್ಲೀ ಕ್ಲಬ್‌ನಲ್ಲಿ ಅವರು ಸ್ಕ್ವಾಶ್‌ ನೊಂದಿಗೆ, ಹಾಡು ಹಾಡಿದರು. ಅಲ್ಲದೇ ಅವರು ಕಾದಂಬರಿಕಾರ ಅಲಾನ್‌ ಲೆಲ್ಚುಕ್‌ರನ್ನು ಭೇಟಿ ಮಾಡಿದರು. 1985ರ ಶೈಕ್ಷಣಿಕ ವರ್ಷವನ್ನು ಬ್ರೌನ್‌ ಸ್ಪೈನ್‌ನ ಸೆವಿಲ್‌ನಲ್ಲಿ ಕಳೆದರು. ಅಲ್ಲಿರುವ ಯುನಿವರ್ಸಿಟಿ ಆಫ್‌ ಸೆವಿಲ್‌ನಲ್ಲಿ ಕಲಾ ಇತಿಹಾಸ ಕೋರ್ಸಿಗೆ ಸೇರಿದರು.[] 1986ರಲ್ಲಿ ಬ್ರೌನ್‌ ಅಂಹರ್ಸ್ಟ್‌ನಿಂದ ಪದವಿ ಪಡೆದರು.[]

ಹಾಡು ರಚನೆಗಾರ ಮತ್ತು ಪಾಪ್‌ ಗಾಯಕ

[ಬದಲಾಯಿಸಿ]

ಅಂಹರ್ಸ್ಟ್‌ನಿಂದ ಪದವಿ ಪಡೆದ ನಂತರ, ಸಂಗೀತ ಸಂಯೋಜನೆ ಮಾಡಿ ಬ್ರೌನ್‌ ಸಂಗೀತವನ್ನೇ ವೃತ್ತಿಯಾಗಿ ಸ್ವೀಕರಿಸಿದರು. ಅಲ್ಲದೇ ಸಿಂಥ್‌ಎನಿಮಲ್ಸ್‌ ಎಂಬ ಹೆಸರಿನ ಮಕ್ಕಳ ಕ್ಯಾಸೆಟ್‌ನ್ನು ಅವರೇ ಹೊರತಂದರು. ಇದು "ಹ್ಯಾಪಿ ಫ್ರಾಗ್ಸ್‌" ಮತ್ತು "ಸುಜುಕಿ ಎಲಿಫೆಂಟ್ಸ್‌"ನಂತಹ ಹಾಡುಗಳನ್ನು ಒಳಗೊಂಡಿದ್ದು, ಇದರ ಕೆಲವೇ ಪ್ರತಿಗಳು ಮಾರಾಟವಾಗಿದ್ದವು. ನಂತರ ಅವರು ಡಾಲಿಯಾನ್ಸ್‌ ಎನ್ನುವ ತನ್ನದೇ ಆದ ಧ್ವನಿಮುದ್ರಣ ಸಂಸ್ಥೆ ಪ್ರಾರಂಭಿಸಿದರು. ೧೯೯೦ ರಲ್ಲಿ ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡು, ಪರ್ಸ್ಪೆಕ್ಟಿವ್‌ ಎಂಬ ಶೀರ್ಷಿಕೆಯ ಧ್ವನಿಮುದ್ರಿಕೆಯನ್ನು ಹೊರತಂದರು. ಆದರೆ ಇಲ್ಲಿಯೂ ಸಹ ಕೆಲವೇ ಪ್ರತಿಗಳ ಮಾರಾಟಕಂಡಿತು. ೧೯೯೧ ರಲ್ಲಿ ಅವರು ಗಾಯಕ-ಗೀತರಚನೆಗಾರ ಮತ್ತು ಪಿಯಾನೋವಾದಕನಾಗಬೇಕೆಂದು ಹಾಲಿವುಡ್‌ಗೆ ಸ್ಥಳಾಂತರವಾದರು. ತಮ್ಮ ಬದುಕು ಸಾಗಿಸಲು, ಅವರು ಬೆವರ್ಲಿ ಹಿಲ್ಸ್‌ ಪ್ರಿಪರೇಟರಿ ಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.ಅಲ್ಲದೆ ಅವರು ನ್ಯಾಷನಲ್ ಆಕ್ಯಾಡಮಿ ಆಫ್ ಸಾಂಗ್‌ರೈಟರ್‌ಗೆ ಸೇರಿ, ಅದರ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಲ್ಲಿ ಅವರಿಗಿಂತ ೧೨ ವರ್ಷ ದೊಡ್ಡವರಾಗಿರುವ ಆರ್ಟಿಸ್ಟ್‌ ಡೆವಲಪ್‌ಮೆಂಟ್‌ನ ಅಕ್ಯಾಡಮಿ ನಿರ್ದೇಶಕಿಯಾಗಿರುವ ಬ್ಲೈಥ್‌ ನ್ಯೂಲೊನ್‌ರನ್ನು ಭೇಟಿ ಮಾಡಿದರು. ಅವರು ಬ್ರೌನ್‌ರ ಯೋಜನೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ತಮಗೆ ಸಂಬಂಧಿಸಿದ ಕೆಲಸದಲ್ಲಿ ಬ್ರೌನ್‌ರಿಗೆ ಸಹಾಯ ಮಾಡಿದರು; ಅವರಿಗೆ ಪ್ರಚಾರ ಕಾರ್ಯಕ್ರಮ ಆಯೋಜಿಸುವುದಕ್ಕೆ, ಪತ್ರಿಕಾ ಹೇಳಿಕೆ ನೀಡಿ ,ಬ್ರೌನ್‌ರಿಗೆ ತಮ್ಮ ವೃತ್ತಿಯಲ್ಲಿ ಸಹಾಯ ಮಾಡಬಹುದಾದ ವ್ಯಕ್ತಿಗಳನ್ನು ಸಂಪರ್ಕಿಸುವಂತೆ ಮಾಡಿದರು. ಅದಲ್ಲದೇ, ಬ್ಲೈಥ್‌ ಮತ್ತು ಬ್ರೌನ್‌ ವೈಯಕ್ತಿಕ ಸಂಬಂಧ ಹೊಂದಿದ್ದರು. ಆದರೆ ೧೯೯೩ ರಲ್ಲಿ ಬ್ರೌನ್‌ ನ್ಯೂ ಹಂಪ್‌ಶೈರ್‌ಗೆ ಹಿಂದಿರುಗಿ, ಬ್ಲೈಥ್‌ರನ್ನು ಮದುವೆಯಾಗುವವರೆಗೆ, ಈ ವಿಷಯ ಅವರ ಸಹೋದ್ಯೋಗಿಗಳಿಗೂ ಸಹ ತಿಳಿಯಲಿಲ್ಲ. ೧೯೯೭ ರಲ್ಲಿ ನ್ಯೂ ಹಂಪ್‌ಶೈರ್‌ನ‌ ಕಾನ್‌ವೇಗೆ ಹತ್ತಿರವಿರುವ ಪೀ ಪೋರಿಡ್ಜ್ ಪಾಂಡ್‌‌ನಲ್ಲಿ ಅವರಿಬ್ಬರು ಮದುವೆಯಾದರು.[] ೧೯೯೩ ರಲ್ಲಿ ಬ್ರೌನ್‌ ಡಾನ್‌ ಬ್ರೌನ್‌ ಎಂಬ ತಮ್ಮದೇ ಹೆಸರಿನ CDಯನ್ನು ಬಿಡುಗಡೆ ಮಾಡಿದರು. ಇದು "೯೭೬-ಲವ್‌" ಮತ್ತು "ಇಫ್‌ ಯು ಬಿಲೀವ್‌ ಇನ್‌ ಲವ್‌"ನಂತಹ ಹಾಡುಗಳನ್ನು ಒಳಗೊಂಡಿತ್ತು. ೧೯೯೪ ರಲ್ಲಿ ಬ್ರೌನ್‌ ಎಂಜೆಲ್ಸ್‌ ಆಂಡ್ ಡಿಮನ್ಸ್ ಎಂಬ ಹೆಸರಿನ CD ಯನ್ನು ಬಿಡುಗಡೆ ಮಾಡಿದರು. ಇದರ ಕಲಾಕೃತಿಯಾದ ಅಂಬಿಗ್ರಾಮ್‌ ಅನ್ನು ಕಲಾವಿದ ಜಾನ್‌ ಲ್ಯಾಂಗ್ಡನ್‌ ಮಾಡಿದ್ದರು. ಬ್ರೌನ್‌ ಇದನ್ನು ಎಂಜೆಲ್ಸ್‌ ಆಂಡ್ ಡಿಮನ್ಸ್ ಕಾದಂಬರಿಯಲ್ಲಿ ಬಳಸಿಕೊಂಡಿದ್ದರು. ಆಲ್ಬಮ್‌ನಲ್ಲಿ ಬರೆದ ಟಿಪ್ಪಣಿಯಲ್ಲಿ ಬ್ರೌನ್‌, ತಮ್ಮ ಪತ್ನಿಯ ಸಹಕಾರವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ,ನೆನಪಿಸಿಕೊಂಡಿದ್ದಾರೆ. ಅದರಲ್ಲಿ "ನನ್ನ ದಣಿವಿಲ್ಲದ ಸಹ ಬರಹಗಾರ, ಸಹ ನಿರ್ಮಾಪಕರು, ಎರಡನೇ ಎಂಜಿನಿಯರ್‌, ಇತರ ಭಾವಗರ್ಬಿತಲೇಖಕರು ಮತ್ತು ಭಾಷಾ ಚಿಕಿತ್ಸಕರಾಗಿ" ಎಂದು ಅವರು ತಮ್ಮ ಪತ್ನಿಗೆ ಕೃತಜ್ಞತೆ ಸಲ್ಲಿಸಿದ್ದರು. ಈ CD ಯು "ಹಿಯರ್ ಇನ್ ದೀಸ್‌ ಫೀಲ್ಡ್ಸ್‌" ಮತ್ತು ಧಾರ್ಮಿಕ ಗೀತೆ ಎನಿಸಿದ"ಆಲ್ ಐ ಬಿಲೀವ್‌"ನಂತಹ ಹಾಡುಗಳನ್ನು ಒಳಗೊಂಡಿತ್ತು.[೧೦] ೧೯೯೩ ರಲ್ಲಿ ಬ್ರೌನ್‌ ಮತ್ತು ಬ್ಲೈಥ್‌ರು ತಮ್ಮ ಹುಟ್ಟೂರಾದ ನ್ಯೂ ಹಂಪ್‌ಶೈರ್‌ಗೆ ಸ್ಥಳಾಂತರಗೊಂಡರು. ಬ್ರೌನ್‌ ಅವರ ಅಲ್ಮಾ ಮೇಟರ್‌(ಅವರ ಮೂಲ ಶಿಕ್ಷಣಶಾಲೆ) ಫಿಲಿಪ್ಸ್‌ ಎಕ್ಸೆಟರ್‌ನಲ್ಲಿ ಇಂಗ್ಲೀಷ್‌ ಶಿಕ್ಷಕರಾಗಿದ್ದರು. ಲಿಂಕನ್‌ ಅಕರ್ಮಾನ್‌ ಸ್ಕೂಲ್‌ನಲ್ಲಿ ೬ನೇ, ೭ನೇ, ಮತ್ತು ೮ನೇ ಗ್ರೇಡರ್‌ ವಿದ್ಯಾರ್ಥಿಗಳಿಗೆ ಸ್ಪ್ಯಾನಿಷ್‌ ಶಿಕ್ಷಣ ಮತ್ತು ಹಂಪ್ಟನ್‌ ಫಾಲ್ಸ್‌ನಲ್ಲಿರುವ ಸುಮಾರು ೨೫೦ ಮಕ್ಕಳ ಶಾಲೆಯಲ್ಲಿ K–೮ ನೇ ಗ್ರೇಡ್‌ನ ಮಕ್ಕಳಿಗೆ ಕಲಿಸುತ್ತಿದ್ದರು.[೧೧]

ಬದುಕಿನಲ್ಲಿ ಬರಹ ವೃತ್ತಿ

[ಬದಲಾಯಿಸಿ]

೧೯೯೩ ರಲ್ಲಿ ಟಹಿಟಿಯಲ್ಲಿ ರಜಾದಿನದಲ್ಲಿದ್ದಾಗ,[] ಬ್ರೌನ್‌ ಸಿಡ್ನಿ ಶೆಲ್ಡನ್‌ರ ಕಾದಂಬರಿ ದಿ ಡೂಮ್ಸ್‌ಡೇ ಕೈಸ್ಪಿರೆಸಿ ಕಾದಂಬರಿ ಓದಿದ್ದರು. ಅದರಿಂದ ಅವರು ಪ್ರಭಾವಿತರಾಗಿ ರೋಮಾಂಚಕ ಕಥೆಗಳ ಬರಹಗಾರರಾದರು.[][೧೨][೧೩] 1985ರಲ್ಲಿ ಅವರು ವಿದ್ಯಾಭ್ಯಾಸ ಮಾಡಿದ ಸ್ಪೈನ್‌ನ ಸೆವಿಲ್‌ನಲ್ಲಿದ್ದಾಗ, ಅವರು ಡಿಜಿಟಲ್ ಫಾರ್ಟ್ರೆಸ್‌ ಕಾದಂಬರಿ ಬರೆಯಲು ಪ್ರಾರಂಭಿಸಿದ್ದರು. ಅಲ್ಲಿಯೇ ಅದರ ಹೆಚ್ಚಿನ ಭಾಗ ಪೂರ್ಣಗೊಳಿಸಿದ್ದರು. ೧೮೭ ಮೆನ್‌ ಟು ಎವೈಡ್‌: ಎ ಗೈಡ್‌ ಫಾರ್‌ ದಿ ರೋಮಾಂಟಿಕ್‌ ಫ್ರಸ್ಟ್ರೇಟೆಡ್‌ ವುಮನ್‌ ಎನ್ನುವ ಹಾಸ್ಯ ಪುಸ್ತಕ ಬರೆಯುವಾಗ ಬ್ರೌನ್‌ "ಡೇನಿಯಲ್‌ ಬ್ರೌನ್‌" ಎನ್ನುವ ಗುಪ್ತನಾಮದೊಂದಿಗೆ ತನ್ನ ಪತ್ನಿಗೆ ಸಹಾಯಮಾಡಿದ್ದರು. ಪುಸ್ತಕದ ಲೇಖಕರ ವ್ಯಕ್ತಿಚಿತ್ರದಲ್ಲಿ, "ಡೇನಿಯಲ್‌ ಬ್ರೌನ್‌ ಪ್ರಸ್ತುತ ನ್ಯೂ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದು, ಇಂಗ್ಲೆಂಡ್‌ನಲ್ಲಿ ಶಾಲಾ ಶಿಕ್ಷಕ, ಪುಸ್ತಕ ಬರಹಗಾರರು, ಮತ್ತು ಏಕಾಂಗಿಯಾಗಿ ಇರುತ್ತಾರೆ." ಡಾನ್‌ ಬ್ರೌನ್‌ರು‌ ಈ ಪುಸ್ತಕದ ಕೃತಿಸ್ವಾಮ್ಯ ಹೊಂದಿದ್ದರು. ೧೯೯೬ ರಲ್ಲಿ ಬ್ರೌನ್‌ ಶಿಕ್ಷಕ ವೃತ್ತಿಯನ್ನು ಬಿಟ್ಟು, ಪೂರ್ಣಾವಧಿಯ ಬರಹಗಾರರಾದರು. ೧೯೯೮ ರಲ್ಲಿ ಡಿಜಿಟಲ್ ಫಾರ್ಟ್ರೆಸ್‌ ಪ್ರಕಟವಾಯಿತು. ಅವರ ಪತ್ನಿ ಬ್ಲೈಥ್‌ ಪುಸ್ತಕದ ಪ್ರಚಾರಕ್ಕಾಗಿ ತುಂಬಾ ಕೆಲಸ ಮಾಡಿದ್ದಾರೆ. ಅವರು ಪತ್ರಿಕಾ ಹೇಳಿಕೆಗಳನ್ನು ನೀಡಿ, ಮುಖಾಮುಖಿ ಕಾರ್ಯಕ್ರಮಗಳಿಗೆ ಬ್ರೌನ್‌ರನ್ನು ನಿಗದಿಪಡಿಸಿದರು. ಪತ್ರಿಕಾ ಸಂದರ್ಶನಗಳನ್ನು ಏರ್ಪಡಿಸಿದರು. ಇದಾದ ಕೆಲವು ತಿಂಗಳಗಳ ನಂತರ, ಬ್ರೌನ್‌ ಮತ್ತು ಅವರ ಪತ್ನಿ ದಿ ಬಾಲ್ಡ್‌ ಬುಕ್‌ ಎನ್ನುವ ಇನ್ನೊಂದು ವಿನೋದ ಪುಸ್ತಕ ಬಿಡುಗಡೆ ಮಾಡಿದರು. ಈ ಪುಸ್ತಕ ಅಧಿಕೃತವಾಗಿ ಅವರ ಪತ್ನಿಗೆ ಸೇರಿದ್ದರೂ ಸಹ, ಪ್ರಕಾಶಕರ ಪ್ರತಿನಿಧಿಯು ಹೇಳಿದಂತೆ, ಈ ಬ್ರೌನ್‌ರು ಇದನ್ನು ಮೊದಲೇ ಬರೆದಿದ್ದಾರೆ. ನಂತರ ಬ್ರೌನ್‌ ಡಿಸೆಪ್ಶನ್ ಪಾಯಿಂಟ್‌ ಮತ್ತು ಎಂಜೆಲ್ಸ್‌ ಆಂಡ್ ಡಿಮನ್ಸ್ ಪುಸ್ತಕಗಳನ್ನು ಬರೆದರು. ಅವುಗಳಲ್ಲಿ ಹಾರ್ವರ್ಡ್‌ ಸಂಕೇತಶಾಸ್ತ್ರಜ್ಞ ರಾಬರ್ಟ್‌ ಲ್ಯಾಂಗ್ಡನ್‌ ಎನ್ನುವ ಪ್ರಮುಖ ಪಾತ್ರ ಮೊದಲ ಬಾರಿಗೆ ಬಳಸಲಾಗಿದೆ.ಬ್ರೌನ್‌ರ ಮೊದಲ ಮೂರು ಕಾದಂಬರಿಗಳು, ಅವುಗಳ ಮೊದಲ ಮುದ್ರಣದಲ್ಲಿ ೧೦,೦೦೦ ಪ್ರತಿಗಳು ಮಾರಾಟವಾಗುವ ಮೂಲಕ ಸ್ವಲ್ಪ ಮಟ್ಟಿನ ಯಶಸ್ಸು ಗಳಿಸಿದವು. ಅವರ ನಾಲ್ಕನೇ ಕಾದಂಬರಿ ದಿ ಡಾ ವಿನ್ಸಿ ಕೋಡ್‌ ವು ಅತ್ಯಧಿಕ ಮಾರಾಟವಾದ ಕಾದಂಬರಿಯಾಗಿದೆ. ೨೦೦೩ ರಲ್ಲಿ ಇದು ಬಿಡುಗಡೆಯಾದ ಮೊದಲ ವಾರದಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ಪಟ್ಟಿ ಮಾಡಿದ ಅತ್ಯಧಿಕ ಮಾರಾಟದ ಪುಸ್ತಕಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು. ಕಳೆದ ೨೦೦೯ ರ ಅಂಕಿಅಂಶದ ಪ್ರಕಾರ ಈ ಪುಸ್ತಕ ೮೧ ದಶಲಕ್ಷ ಪ್ರತಿಗಳು ಮಾರಾಟವಾಗುವುದರೊಂದಿಗೆ ಸಾರ್ವಕಾಲಿಕ ಜನಪ್ರಿಯ ಪುಸ್ತಕಗಳಲ್ಲಿ ಇದೂ ಒಂದಾಗಿದೆ.[೧೪][೧೫] ಇದರ ಯಶಸ್ಸಿನಿಂದಾಗಿ ಬ್ರೌನ್‌ರ ಆರಂಭಿಕ ಪುಸ್ತಕಗಳ ಮಾರಾಟ ಹೆಚ್ಚಾಯಿತು. 2004ರಲ್ಲಿ ಅದೇ ವಾರದಲ್ಲಿ ಅವರ ಎಲ್ಲಾ ನಾಲ್ಕು ಕಾದಂಬರಿಗಳು ನ್ಯೂಯಾರ್ಕ್‌ ಟೈಮ್ಸ್‌ ನ ಪುಸ್ತಕದ ವಿವರ ಪಟ್ಟಿಯಲ್ಲಿ ಕಾಣಿಸಿಕೊಂಡವು.[೧೬]೨೦೦೫ ರಲ್ಲಿ ಅವರು ಟೈಮ್‌ ನಿಯತಕಾಲಿಕೆಯ ವರ್ಷದ ೧೦೦ ಅತ್ಯಧಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡರು. ಫೋರ್ಬ್ಸ್‌ ನಿಯತಕಾಲಿಕೆಯು ತಮ್ಮ ೩೦೦೫ ರ "೧೦೦ ಜನಪ್ರಿಯ ವ್ಯಕ್ತಿಗಳ" ಪಟ್ಟಿಯಲ್ಲಿ ಬ್ರೌನ್‌ರಿಗೆ #೧೨ನೇ ಸ್ಥಾನ ನೀಡಿದೆ. ಅವರ ವಾರ್ಷಿಕ ಆದಾಯ US$೭೬.೫ ದಶಲಕ್ಷ ಎಂದು ಅಂದಾಜಿಸಲಾಗಿದೆ. ಅವರಿಗೆ ಡಾ ವಿನ್ಸಿ ಕೋಡ್‌ ನ ಮಾರಾಟದಿಂದ $೨೫೦ ದಶಲಕ್ಷದಷ್ಟು ಆದಾಯ ಬಂದಿರಬಹುದೆಂದು ದಿ ಟೈಮ್ಸ್‌ ಅಂದಾಜಿಸಿದೆ. ೨೦೦೯ ರ ಸಪ್ಟೆಂಬರ್‌ ೧೫ ರಲ್ಲಿ ರಾಬರ್ಟ್‌ ಲ್ಯಾಂಗ್ಡನ್‌ ಪಾತ್ರ ಒಳಗೊಂಡಿರುವ ಬ್ರೌನ್‌ರ ಮೂರನೇ ಕಾದಂಬರಿ ದಿ ಲಾಸ್ಟ್‌ ಸಿಂಬಲ್‌ ಬಿಡುಗಡೆಯಾಯಿತು.[೧೭] ಪ್ರಕಾಶಕರು ಹೇಳುವಂತೆ, ಪುಸ್ತಕ ಬಿಡುಗಡೆಯಾದ ಮೊದಲ ದಿನ U.S., U.K. ಮತ್ತು ಕೆನಡಾದಲ್ಲಿ ಈ ಪುಸ್ತಕದ ಗಟ್ಟಿರಟ್ಟಿನ ಹೊದಿಕೆಯ ಮತ್ತು ಈ-ಬುಕ್‌ ಆವೃತ್ತಿಯ ಒಂದು ದಶಲಕ್ಷಕಿಂತಲೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದವು. ಇದು ಮೊದಲ ಮುದ್ರಣದ ಐದು ದಶಲಕ್ಷ ಪ್ರತಿಗಳಲ್ಲದೆ, ಅದಕ್ಕೆ ಹೆಚ್ಚುವರಿಯಾಗಿ ೬೦೦,೦೦೦ ಗಟ್ಟಿರಟ್ಟಿನ ಪ್ರತಿಗಳನ್ನು ಮುದ್ರಿಸುವುದಕ್ಕೆ ಪ್ರೇರೆಪಿಸಿತು.[೧೮] ವಾಷಿಂಗ್ಟನ್‌ D.C.ನಲ್ಲಿ ಪ್ರಕಟನೆಯ ನಂತರದ ೧೨ ಗಂಟೆಗಳಲ್ಲಿ ಫ್ರೀಮಸನ್ಸ್‌ ಮಳಿಗೆಯಲ್ಲಿ ಮಾರಾಟಕ್ಕೆ ಲಭ್ಯವಿತ್ತು. ವರ್ಜಿನಿಯಾದ ಲಂಗ್ಲಿCIA ಕೇಂದ್ರ ಕಛೇರಿಯಲ್ಲಿರುವ ಕ್ರಿಪ್ಟೊಸ್‌ ಕಲಾಕೃತಿಯ ಎರಡು ಉಲ್ಲೇಖ ಸೇರಿದಂತೆ ದಿ ಡಾ ವಿನ್ಸಿ ಕೋಡ್‌ ಪುಸ್ತಕದ ಹೊದಿಕೆಯೊಳಗೆ ಅಡಗಿದ ಒಗಟುಗಳು ಮುಂದಿನ ಪುಸ್ತಕದ ವಿಷಯದ ಬಗ್ಗೆ ಸುಳಿವು ನೀಡುತ್ತವೆ ಎಂದು ಬ್ರೌನ್‌ರ ಪ್ರಚಾರ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಬ್ರೌನ್‌ರ ಹಿಂದಿನ ಪುಸ್ತಕಗಳಂತೆ ಇಲ್ಲಿಯೂ ವಿಷಯನಾಕ್ರಮದ ಪಟ್ಟಿ ಪುನರಾವರ್ತನೆಯಾಗಿದೆ. ಉದಾಹರಣೆಗೆ, ಡಿಸೆಪ್ಶನ್ ಪಾಯಿಂಟ್‌ ಪುಸ್ತಕದ ಕೊನೆಯಲ್ಲಿ ಒಂದು ಒಗಟಿದ್ದು, ಅದನ್ನು ಬಿಡಿಸಿದಾಗ, "ದಿ ಡಾ ವಿನ್ಸಿ ಕೋಡ್‌ ವಿಲ್‌ ಸರ್‌ಫೇಸ್‌" ಎನ್ನುವ ಸಂದೇಶ ದೊರೆಯುತ್ತದೆ.[] ರಾಬರ್ಟ್‌ ಲ್ಯಾಂಗ್ಡನ್‌ ಪಾತ್ರ ಒಳಗೊಂಡಿರುವ 12 ಪುಸ್ತಕಗಳನ್ನು ಬರೆಯುವ ಯೋಜನೆ ಹೊಂದಿದ್ದೇನೆ ಎಂದು ಬ್ರೌನ್‌ ಹೇಳಿದ್ದಾರೆ.[೧೯] ಬ್ರೌನ್‌ನ ಪುಸ್ತಕದಲ್ಲಿರುವ ಪಾತ್ರಗಳ ಹೆಸರುಗಳಿಗೆ ಅವರು ಹೆಚ್ಚಾಗಿ ತಮ್ಮ ನಿಜ ಜೀವನದ ವ್ಯಕ್ತಿಗಳ ಹೆಸರುಗಳನ್ನು ಬಳಸುತ್ತಿದ್ದರು. ಎಂಜೆಲ್ಸ್‌ ಆಂಡ್ ಡಿಮನ್ಸ್ CD ಮತ್ತು ಕಾದಂಬರಿಗಾಗಿ ಬಳಸಿದ ಅಂಬಿಗ್ರಾಮ್ಸ್‌ ಅನ್ನು ರಚಿಸಿದ ಕಲಾವಿದ ಜಾನ್‌ ಲ್ಯಾಂಗ್ಡನ್‌ನ ಹೆಸರನ್ನು ರಾಬರ್ಟ್‌ ಲ್ಯಾಂಗ್ಡನ್‌ ಆಗಿ ಪರಿವರ್ತಿಸಿ, ಅದನ್ನು ತಮ್ಮ ಕಾದಂಬರಿಯಲ್ಲಿ ಬಳಸಿಕೊಂಡರು. "ಆನ್‌ ಎ ಕ್ಲೇರ್‌ ಡೇ"ನ ವ್ಯಂಗ್ಯಚಿತ್ರಗಾರ, ಸ್ನೇಹಿತ ಕಾರ್ಲಾ ವೆಂಟ್ರೆಸ್ಕಾರ ಹೆಸರನ್ನು ಕ್ಯಾಮರ್ಲೆಂಗೊ ಕಾರ್ಲೊ ವೆಂಟ್ರೆಸ್ಕಾ ಎಂದು ಕಾದಂಬರಿಯಲ್ಲಿ ಬಳಸಿಕೊಂಡರು. ವ್ಯಾಟಿಕನ್‌ ಆರ್ಕೀವ್ಸ್‌ನಲ್ಲಿ, ಲ್ಯಾಂಗ್ಡನ್‌ ಡಿಕ್‌ ಮತ್ತು ಕೊನೀ ಎಂಬ ಹೆಸರಿನ ಇಬ್ಬರನ್ನು ನೆನಪಿಸಿಕೊಂಡರು. ಅದು ಅವರ ಹೆತ್ತವರ ಹೆಸರಾಗಿತ್ತು. ಬ್ರೌನ್‌ರ ನಿಜ ಜೀವನದ ಸಂಪಾದಕ ಜೋಸನ್‌ ಕೋಫ್‌ಮ್ಯಾನ್‌ರ ಹೆಸರನ್ನು ಪರಿವರ್ತಿಸಿ, ಕಾದಂಬರಿಯಲ್ಲಿ ರಾಬರ್ಟ್‌ ಲ್ಯಾಂಗ್ಡನ್‌ರ ಸಂಪಾದಕ ಜೋನಸ್‌ ಪೋಕ್‌ಮ್ಯಾನ್‌ ಎಂದು ಬದಲಿಸಲಾಗಿದೆ. ನ್ಯೂ ಹಂಪ್‌ಶೈರ್‌ ಗ್ರಂಥಪಾಲಕ ಮತ್ತು ಎಕ್ಸೆಟರ್‌ದಲ್ಲಿನ ಫ್ರೆಂಚ್‌ ಶಿಕ್ಷಕ ಅಂಡ್ರೆ ವರ್ನೆಟ್‌ರ ಪಾತ್ರಗಳನ್ನು ಕಾದಂಬರಿ ಒಳಗೊಂಡಿದೆ ಎಂದು ಬ್ರೌನ್‌ ಹೇಳಿದರು. ಎಂಜೆಲ್ಸ್‌ ಆಂಡ್ ಡಿಮನ್ಸ್ನಲ್ಲಿರುವ ಫಿಲಿಪ್ಸ್‌ ಎಕ್ಸೆಟರ್‌ ಆಕ್ಯಾಡಮಿಯ ಆಧುನಿಕ ಭಾಷಾ ತರಬೇತುದಾರರಾದ ಕಾರ್ಡಿನಲ್ ಆಲ್ಡೊ ಬಗ್ಗಿಯಾರನ್ನು ಕಾದಂಬರಿಯಲ್ಲಿ ಆಲ್ಡೊ ಬಗ್ಗಿಯಾ ಪಾತ್ರದಲ್ಲಿ ಬಿಂಬಿಸಲಾಗಿದೆ.ಒಂದು ಸಂದರ್ಶನಗಳಲ್ಲಿ ಬ್ರೌನ್‌ ತಮ್ಮ ಪತ್ನಿ ಇತಿಹಾಸತಜ್ಞೆ ಮತ್ತು ವರ್ಣಚಿತ್ರಕಾರಳು ಎಂದು ಹೇಳಿದ್ದಾರೆ. ಅವರಿಬ್ಬರು ಪರಸ್ಪರ ಭೇಟಿ ಮಾಡಿದಾಗ, ಅವರ ಪತ್ನಿ ಲಾಸ್‌ ಎಂಜೆಲ್ಸ್‌ನ ನ್ಯಾಷನಲ್‌ ಆಕ್ಯಾಡಮಿಯಲ್ಲಿ ಆರ್ಟಿಸ್ಟಿಕ್‌ ಡೆವಲಪ್‌ಮೆಂಟ್ ವಿಭಾಗದಲ್ಲಿ ನಿರ್ದೇಶಕಿಯಾಗಿದ್ದರು. ೨೦೦೬ ರಲ್ಲಿ ದಿ ಡಾ ವಿನ್ಸಿ ಕೋಡ್‌ ನಲ್ಲಿ ಕೃತಿಸ್ವಾಮ್ಯ ಉಲ್ಲಂಘನೆಯಾಗಿದೆಯೆಂದು ಮೊಕದ್ದಮೆ ಹೂಡಲಾಗಿತ್ತು. ಆ ಪುಸ್ತಕಕ್ಕಾಗಿ ಬ್ಲೈಥ್‌ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿತು.[೨೦] ಒಂದು ಲೇಖನದಲ್ಲಿ ಬ್ಲೈಥ್‌ರನ್ನು "ಪ್ರಮುಖ ಸಂಶೋಧಕಿ"ಯಂತೆ ವರ್ಣಿಸಲಾಗಿದೆ.[೨೧]

ಪ್ರಭಾವ ಮತ್ತು ಹವ್ಯಾಸಗಳು

[ಬದಲಾಯಿಸಿ]

ಡಾನ್‌ ಬ್ರೌನ್‌ ತಮ್ಮ ಕಾದಂಬರಿ ಬರೆಯಲು ಪ್ರಭಾವ ಬೀರಿದ ಸಿಡ್ನಿ ಶೆಲ್ಡನ್‌ ಮಾತ್ರವಲ್ಲದೆ, ಇತರ ಹಲವು ಬರಹಗಳ ಸ್ಪೂರ್ತಿಯ ಬಗ್ಗೆ ಹೇಳುತ್ತಿದ್ದರು. ಅವರು ಶೇಕ್ಸ್‌ಪಿಯರ್‌ಮಚ್‌ ಅಡೊ ಅಬೌಟ್‌ ನಥಿಂಗ್‌ ಕುರಿತು ಮಾತನಾಡುತ್ತಾ, ಅದರಲ್ಲಿರುವ ಹಾಸ್ಯ ಪ್ರವೃತ್ತಿಯನ್ನು ಹೊಗಳಿದರಲ್ಲದೆ: "ನಾನು ಇಂಗ್ಲೀಷ್‌ ಶಿಕ್ಷಕನಾಗಿ ಈ ಮಚ್‌ ಅಡೊ ಅಬೌಟ್‌ ನಥಿಂಗ್‌ ನಾಟಕವನ್ನು ಕಲಿಸುವವರೆಗೆ, ನನಗೆ ಆ ನಾಟಕ ಅಷ್ಟೊಂದು ಹಾಸ್ಯಭರಿತವಾಗಿದೆ ಎಂದು ತಿಳಿದಿರಲಿಲ್ಲ ಎಂದರು. ಆದರೂ ನಾಟಕದಲ್ಲಿ ಎಲ್ಲಿಯೂ ಗಟ್ಟಿಹಾಸ್ಯದ ಸಂಭಾಷಣೆಗಳಿಲ್ಲ" ಎಂದು ಹೇಳಿದರು.[೨೨] ಅವರ ಆಪ್ತ ಗೆಳೆಯರ ಪಟ್ಟಿಯಲ್ಲಿ ಪತ್ತೇದಾರಿ ಕಥೆ ಬರಹಗಾರರಾದ ಹಾರ್ಲನ್‌ ಕೊಬೆನ್‌ ಮತ್ತು ಬರ್ನ್‌ , ಪುಸ್ತಕ ಸರಣಿಯ ಬರಹಗಾರರಾದ ರಾಬರ್ಟ್‌ ಲಡ್ಲುಮ್‌ ಅವರನ್ನು ಹೆಸರಿಸುತ್ತಾರೆ. ಲಡ್ಲುಮ್‌ನ ಬಗ್ಗೆ ಮಾತನಾಡುತ್ತಾ ಅವರು, "ಲಡ್ಲುಮ್‌ನ ಆರಂಭದ ಪುಸ್ತಕಗಳು ಸಂಕೀರ್ಣ ಮತ್ತು ಚಾಣಾಕ್ಷತೆಯಿಂದ ಕೂಡಿವೆ. ಇಂದಿಗೂ ಸಹ ಈ ಪುಸ್ತಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಈ ಸರಣಿಯು ಉತ್ತಮ ವಿಷಯದ ಪರಿಕಲ್ಪನೆಯಿಂದ ಕೂಡಿದ್ದರಿಂದ, ಅಂತರರಾಷ್ಟ್ರೀಯ ಮಟ್ಟದ ರೊಮಾಂಚಕ ಕಥೆಯಲ್ಲಿ ನನಗೆ ಆಸಕ್ತಿಯನ್ನು ಮೂಡುವಂತೆ ಮಾಡಿತು." ಎಂದು ಹೇಳಿದರು.[೨೩] ಕಾದಂಬರಿಯಲ್ಲಿ ಅವರಿಗೆ ಪರಿಚಿತ ವ್ಯವಸ್ಥೆಗೆ ಸರಳ ನಾಯಕನನ್ನು ಸೃಷ್ಟಿಸಿದರು. ಜನರಿಗೆ ತಿಳಿಯದ ವಿಷಯಕ್ಕೆ ಸರಳ ಉತ್ತರ, ಬಲಿಷ್ಟ ಮಹಿಳಾ ಪಾತ್ರಗಳು, ಆಸಕ್ತಿದಾಯಕ ಸ್ಥಳಗಳಿಗೆ ಪ್ರಯಾಣ, ಮತ್ತು ೨೪-ಗಂಟೆಗಳ ಕಥೆಯಂತಹ ಅಂಶಗಳನ್ನು ಬ್ರೌನ್‌ರ ಕಾದಂಬರಿಗಳು ಒಳಗೊಂಡಿದ್ದು, ಇವುಗಳು ಪುನರಾವರ್ತನೆಯಾಗುತ್ತಿರುತ್ತವೆ.[] ಬ್ರೌನ್‌ರ ಕಾದಂಬರಿಗಳಲ್ಲಿರುವ ಸಂಶೋಧನಾ ವಿಷಯಗಳ ತೀವ್ರತೆಯಿಂದಾಗಿ, ಅವರಿಗೆ ಕಾದಂಬರಿ ಬರೆಯಲು ಎರಡು ವರ್ಷಗಳು ಬೇಕಾಗುತ್ತದೆ. ಅಂತಹ ಯೋಜನೆಗಳ ಮೇಲೆ ಗಮನ ಹರಿಸುವುದಕ್ಕಾಗಿ, ಬ್ರೌನ್‌ ತಮ್ಮ ಕಾದಂಬರಿಗೆ ವಿಷಯವನ್ನು (ಅವರು "ದೊಡ್ಡ ಆಲೋಚನೆ" ಎಂದು ಉಲ್ಲೇಖಿಸುವ) ಆಯ್ಕೆ ಮಾಡುವಾಗ, ಆ ವಿಷಯ ಅವರ ಆಸಕ್ತಿ ಹಿಡಿದಿಟ್ಟುಕೊಳ್ಳುವುದೇ ಎಂದು ಖಚಿತ ಪಡಿಸಿಕೊಳ್ಳುತ್ತಾರೆ. ಬ್ರೌನ್‌ರ ದೃಷ್ಟಿಯಲ್ಲಿ ಒಂದು ಮಾದರಿ ವಿಷಯವನ್ನು ಸುಲಭವಾಗಿ ಸರಿ ಅಥವಾ ತಪ್ಪು ಎಂದು ಹೇಳಲಾಗುವುದಿಲ್ಲ, ಆದರೆ ಚರ್ಚೆಗೆ ಬಂದಾಗ ಮಾತ್ರ, ಅದರ ಸತ್ಯಾಸತ್ಯತೆ ಹೊರಬರುವುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅವರ ನೆಚ್ಚಿನ ವಿಷಯಗಳು ಅಸ್ಪಷ್ಟ ವಿಷಯದಲ್ಲಿರುವ ಸಂಕೇತ, ಒಗಟು, ನಿಧಿ ಅನ್ವೇಷಣೆ, ನಿಗೂಢ ಸಂಸ್ಥೆಗಳು ಮತ್ತು ಶೈಕ್ಷಣಿಕ ಉಪನ್ಯಾಸಕರನ್ನು ಒಳಗೊಂಡಿದೆ. ಅವರು ಈ ವಿಷಯಗಳನ್ನು ತಮ್ಮ ಕಾದಂಬರಿಗಳಲ್ಲಿ ಬಳಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಬ್ರೌನ್‌ ನಿರಂತರ ಅಭ್ಯಾಸದ ಅಗತ್ಯವಿರುವ ವಿಷಯದ ಮೇಲೆ ಬರೆಯಲು ಇಚ್ಛಿಸುತ್ತಾರೆ. ಅವರ ಸಾಮರ್ಥ್ಯ ಸರಿದೂಗಿಸಲು ತಮ್ಮ ದೈನಂದಿನ ಚಟುವಟಿಕೆಗಳನ್ನು ಅಭಿವೃದ್ಧಿಸಿಕೊಂಡಿದ್ದಾರೆ. ಅವರು ಬೆಳಗ್ಗೆ ೪:೦೦ ಗೆ ಏಳುವರು. ಏಕೆಂದರೆ ಆ ಸಮಯದಲ್ಲಿ ಯಾವುದೇ ರೀತಿಯ ಏಕಾಗ್ರತೆ ಭಂಗವಿರುವದಿಲ್ಲ. (ಈ ಅಭ್ಯಾಸವನ್ನು ಅವರು ಡಿಜಿಟಲ್ ಫಾರ್ಟ್ರೆಸ್‌ ಕಾದಂಬರಿಯೊಂದಿಗೆ ಪ್ರಾರಂಭಿಸಿದರು, ಆಗ ಅವರು ಹಗಲು ವೇಳೆ ಶಿಕ್ಷಣ ವೃತ್ತಿ ಮಾಡುತ್ತಿದ್ದರು.) ಅವರು ತಮ್ಮ ಈ ಕೆಲಸದಿಂದ ತೃಪ್ತಿಪಡೆದಾಗ ಮಾತ್ರ ದೈನಂದಿನ ಕೆಲಸಗಳಿಗೆ ಮರಳುತ್ತಿದ್ದರು. ಅವರು ತಮ್ಮ ಮೇಜಿನ ಮೇಲೆ ಪುರಾತನ ಮರಳು ಗಡಿಯಾರವನ್ನು ಇಟ್ಟುಕೊಳ್ಳುತ್ತಿದ್ದರು. ಹಾಗಾಗಿ ಅವರು ಪ್ರತಿ ಒಂದು ಗಂಟೆಯ ನಂತರ ಸ್ವಲ್ಪ ವಿರಾಮ ತೆಗೆದುಕೊಂಡು, ತಮ್ಮ ರಕ್ತ ಪರಿಚಲನೆಯನ್ನು ಸರಿಯಾಗಿ ಇರಿಸಲು, ಪುಶ್‌-ಅಪ್ಸ್‌, ಸಿಟ್‌-ಅಪ್ಸ್‌ ಮತ್ತು ಹಿಗ್ಗಿಸುವ ವ್ಯಾಯಾಮಗಳನ್ನು ಮಾಡುತ್ತಿದ್ದರು.[೨೪] ಬ್ರೌನ್‌ ತಮ್ಮ ಮನೆಯ ಮೇಲ್ಭಾಗದ ಮಹಡಿ ಕೋಣೆಯಲ್ಲಿ ತಮ್ಮ ಬರಹದ ಕೆಲಸ ಮಾಡುತ್ತಿದ್ದರು. ತಮ್ಮ ಭೇಟಿಗೆ ಬರುವ ಬರಹಗಾರರ ನೂಕುನುಗ್ಗಲು (writer's block)ದಿಂದ ತಪ್ಪಿಸಿಕೊಳ್ಳಲು ತಾವು ತಲೆಕೆಳಗೆ ಮಾಡುವ ವ್ಯಾಯಾಮ ಚಿಕಿತ್ಸೆಯನ್ನು ಬಳಸುವುದಾಗಿ ತಮ್ಮ ಅಭಿಮಾನಿಗಳಿಗೆ ಹೇಳಿದರು. ಅವರು ಗುರುತ್ವ ಗಾಂಭೀರ್ಯದ ಬೂಟುಗಳನ್ನು ಬಳಸುತ್ತಿದ್ದರು.ಅವರು ಹೀಗೆ ಹೇಳಿದರು, "ತಲೆಕೆಳಗಾಗಿ ನೇತಾಡುವ ವ್ಯಾಯಾಮದಿಂದ, ನನಗೆ ಸಂಪೂರ್ಣ ಕಾಲ್ಪನಿಕ ದೃಶ್ಯ ನೋಡಲು ಸಾಧ್ಯವಾಯಿತು."[೨೫]

ಆಧಾರಿತ ಚಲನಚಿತ್ರಗಳು

[ಬದಲಾಯಿಸಿ]

೨೦೦೬ ರಲ್ಲಿ ಬ್ರೌನ್‌ರ ಕಾದಂಬರಿ ದಿ ಡಾ ವಿನ್ಸಿ ಕೋಡ್‌ ಅನ್ನು ಚಲನಚಿತ್ರಕ್ಕೆ ರೂಪಾಂತರಿಸಿ, ಬಿಡುಗಡೆ ಮಾಡಲಾಯಿತು. ರಾನ್‌ ಹೊವರ್ಡ್‌ರು ನಿರ್ದೇಶಿಸಿದ ಈ ಚಿತ್ರವನ್ನು ಕೋಲಂಬಿಯಾ ಪಿಕ್ಚರ್ಸ್‌ ಸಂಸ್ಥೆ ನಿರ್ಮಿಸಿತು; ಈ ಚಿತ್ರದಲ್ಲಿ ರಾಬರ್ಟ್‌ ಲ್ಯಾಂಗ್ಡನ್‌ ಪಾತ್ರದಲ್ಲಿ ಟಾಮ್‌ ಹಾಂಕ್ಸ್‌, ಸೊಫೀ ನೆವಿ ಪಾತ್ರದಲ್ಲಿ ಔಡ್ರೆ ಟೋಟೋ ಮತ್ತು ಸರ್‌ ಲೀಹ್‌ ಟೀಬಿಂಗ್‌ ಪಾತ್ರದಲ್ಲಿ ಸರ್‌ ಇಯಾನ್‌ ಮ್ಯಾಕ್‌ಕೆಲನ್‌ ನಟಿಸಿದ್ದಾರೆ. ಈ ಚಿತ್ರವು ೨೦೦೬ ರ ಕ್ಯಾನಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬಹುನಿರೀಕ್ಷೆಯಿಂದ ಬಿಡುಗಡೆಯಾಗಿದ್ದರೂ ಸಹ, ಒಟ್ಟಾರೆ ಚಿತ್ರ ಅಷ್ಟೊಂದು ಒಳ್ಳೆಯ ವಿಮರ್ಶೆ ಪಡೆಯಲಿಲ್ಲ. ರಾಟನ್‌ ಟೊಮಾಟೊಸ್‌ ವೆಬ್‌ಸೈಟ್‌ನಲ್ಲಿ ಪ್ರಸ್ತುತ ಚಿತ್ರದ ವಿಮರ್ಶೆಯು ಸರಾಸರಿ 24%ದಷ್ಟು ದರ ಪ್ರಮಾಣ ಪಡೆದಿದ್ದು, ಈ ಚಿತ್ರಕ್ಕೆ ಬಂದಿರುವ ಒಟ್ಟು ೨೧೪ ವಿಮರ್ಶೆಗಳಲ್ಲಿ ೧೬೫ ಸ್ಥಳೀಯ ವಿಮರ್ಶೆಗಳಾಗಿವೆ.[೨೬] ಈ ಚಿತ್ರ ಎಬರ್ಟ್‌ ಆಂಡ್‌ ರೋಪರ್‌ ನಲ್ಲಿ 2006ರ ಕೆಟ್ಟ ಚಿತ್ರಗಳಲ್ಲಿ ಒಂದೆಂದು ಪಟ್ಟಿಯಲ್ಲಿ ಸೇರಿಕೊಂಡಿದೆ.[೨೭] ಆದರೆ ವಿಶ್ವದಾದ್ಯಂತ $೭೫೦ ದಶಲಕ್ಷ USDನಷ್ಟು ಆದಾಯ ಗಳಿಸುವುದರೊಂದಿಗೆ, ಆ ವರ್ಷದ ಎರಡನೇ ಅತಿ ಹೆಚ್ಚು ಆದಾಯ ಗಳಿಸಿದ ಚಿತ್ರವೂ ಇದಾಗಿದೆ.[೨೮] ಬ್ರೌನ್‌ರನ್ನು ದಿ ಡಾ ವಿನ್ಸಿ ಕೋಡ್‌ ಚಿತ್ರದ ಕಾರ್ಯಕಾರಿ ನಿರ್ಮಾಪಕರಲ್ಲಿ ಒಬ್ಬರಂತೆ ಮತ್ತು ಚಿತ್ರಕ್ಕಾಗಿ ಹೆಚ್ಚುವರಿ ಸಂಕೇತಗಳ ಸೃಷ್ಟಿಸಿದವರೆಂದು ಹೆಸರಿಸಲಾಗಿದೆ. ಅವರ ಹಾಡುಗಳಲ್ಲಿ ಒಂದಾದ "ಪಿಯಾನೊ"ವನ್ನು ಬ್ರೌನ್‌ ಸ್ವತಃ ಬರೆದು, ಅದರಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಧ್ವನಿಸುರುಳಿ ಅಥವಾ ಸೌಂಡ್ ಟ್ರ್ಯಾಕ್ ನ ಭಾಗವಾಗಿ ಇದನ್ನು ಅಳವಡಿಸಲಾಗಿದೆ. ಈ ಚಿತ್ರದಲ್ಲಿ ಆರಂಭಿಕ ಪುಸ್ತಕವೊಂದಕ್ಕೆ ಸಹಿ ಹಾಕುವ ದೃಶ್ಯದಲ್ಲಿ, ಬ್ರೌನ್‌ ಮತ್ತು ಅವರ ಪತ್ನಿ ಹಿನ್ನಲೆಯಲ್ಲಿ ಕಂಡುಬರುತ್ತಾರೆ.2009ರ ಮೇ 15ರಲ್ಲಿ ಬಿಡುಗಡೆಯಾದ ಎಂಜೆಲ್ಸ್‌ ಆಂಡ್ ಡಿಮನ್ಸ್ ಚಿತ್ರದಲ್ಲಿ ಹಾವರ್ಡ್‌ ಮತ್ತು ಹಾಂಕ್ಸ್‌ ಮತ್ತೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಅವರ ಹಿಂದಿನ ಚಿತ್ರಗಳಿಗಿಂತ ತೀರಾ ಕೆಟ್ಟ ವಿಮರ್ಶೆಗಳನ್ನು ಪಡೆಯಿತು.As of ಸೆಪ್ಟೆಂಬರ್ 2009[[ವರ್ಗ:Articles containing potentially dated statements from Expression error: Unexpected < operator.]] ಆದರೂ ಇದು ರಾಟನ್‌ ಟೊಮಾಟೊಸ್‌ನಲ್ಲಿ 36% ಮೇಟಾ-ಶ್ರೇಯಾಂಕ ಗಳಿಸಿತ್ತು.[೨೯]

ಕೃತಿಸ್ವಾಮ್ಯ ಉಲ್ಲಂಘನೆ ಪ್ರಕರಣಗಳು

[ಬದಲಾಯಿಸಿ]

೨೦೦೬ ರ ಆಗಸ್ಟ್‌ನಲ್ಲಿ, ಲೇಖಕ ಲೆವಿಸ್‌ ಪೆರ್ಡು ತಮ್ಮ ಕಾದಂಬರಿಗಳಾದ ದಿ ಡಾ ವಿನ್ಸಿ ಲೆಗಸಿ (1983) ಮತ್ತು ಡಾಟರ್ ಆಫ್ ಗಾಡ್‌ (೨೦೦೦) ಮತ್ತು ದಿ ಡಾ ವಿನ್ಸಿ ಕೋಡ್‌ ನ ನಡುವೆ ಸಮಾನ ಅಂಶಗಳಿವೆಯೆಂದು ಬ್ರೌನ್‌ ಮೇಲೆ ಕೃತಿಚೌರ್ಯದ ಮೊಕದ್ದಮೆ ಹೂಡಿದರು. ಆದರೆ ಅದು ಫಲಕಾರಿಯಾಗಲಿಲ್ಲ. ನ್ಯಾಯಾಧೀಶರಾದ ಜಾರ್ಜ್‌ ಡಾನಿಯಲ್ಸ್‌ ತಮ್ಮ ತೀರ್ಪಿನಲ್ಲಿ ಹೀಗೆ ತಿಳಿಸಿದ್ದರು: "ಸರಾಸರಿ ವಿಮರ್ಶಕರು ದಿ ಡಾ ವಿನ್ಸಿ ಕೋಡ್‌ ವು ಮೂಲಭೂತವಾಗಿ ಡಾಟರ್ ಆಫ್ ಗಾಡ್‌ ಅನ್ನು ಕೃತಿಯನ್ನು ಹೋಲುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ".[೩೦] ೨೦೦೬ ರ ಏಪ್ರಿಲ್‌ನಲ್ಲಿ , ಮೈಕಲ್‌ ಬೈಜೆಂಟ್‌ ಮತ್ತು ರಿಚರ್ಡ್‌ ಲೇಘ್‌ರು ೧೯೮೨ ರಲ್ಲಿ ಬರೆದ ತಮ್ಮ ಹುಸಿ ಇತಿಹಾಸ ಪುಸ್ತಕ ಹೋಲಿ ಬ್ಲಡ್‌ ಹೋಲಿ ಗ್ರೈಲ್‌ ನಿಂದ ಬ್ರೌನ್‌ ೨೦೦೩ ರ ದಿ ಡಾ ವಿನ್ಸಿ ಕೋಡ್‌ ಕಾದಂಬರಿಗಾಗಿ ವಿಷಯಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಕೃತಿಸ್ವಾಮ್ಯ ಉಲ್ಲಂಘನೆ ಮೊಕದ್ದಮೆ ದಾಖಲಿಸಲಾಗಿತ್ತು. ಆದರೆ ತೀರ್ಪು ಬ್ರೌನ್‌ ಪರವಾಗಿತ್ತು. ಹೋಲಿ ಬ್ಲಡ್‌ ಹೋಲಿ ಗ್ರೈಲ್‌ ಪುಸ್ತಕದಲ್ಲಿ ಬೈಜೆಂಟ್‌, ಲೇಘ್‌ ಮತ್ತು ಸಹ-ಲೇಖಕ ಹೆನ್ರಿ ಲಿಂಕನ್‌ರು, ಜೀಸಸ್‌ ಮತ್ತು ಮೇರಿ ಮಗ್ದಲೇನ್‌ ಮದುವೆಯಾಗಿ, ಮಗು ಪಡೆದಿದ್ದರು. ಅವರ ವಂಶಜರು ಇಂದಿಗೂ ಮುಂದುವರಿದಿದ್ದಾರೆ ಎನ್ನುವ ಸಿದ್ಧಾಂತ ಮಂಡಿಸಿದ್ದಾರೆ. ಬ್ರೌನ್‌ ತಮ್ಮ ಪುಸ್ತಕದಲ್ಲಿ ಇಬ್ಬರು ಲೇಖಕರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಎರಡು ಕಾದಂಬರಿ ಮತ್ತು ಚಲನಚಿತ್ರಗಳಲ್ಲಿ ಲೇಘ್ ಟೀಬಿಂಗ್‌ ಪ್ರಮುಖ ಪಾತ್ರವಾಗಿದೆ. ಮೊದಲ ಹೆಸರಾಗಿ ಲೇಘ್‌ ಮತ್ತು ಬೈಜೆಂಟ್‌ ಹೆಸರಿನಿಂದ ಕೊನೆಯ ಹೆಸರು ಅಕ್ಷರಪಲ್ಲಟವಾಗಿ ಟೀಬಿಂಗ್‌ ಆಗಿದೆ. ಈ ಮೊಕದ್ದಮೆಯಲ್ಲಿ Mr ಜಸ್ಟಿಸ್‌ ಪೀಟರ್‌ ಸ್ಮಿತ್‌ ಬ್ರೌನ್‌ರ ಪರ ತೀರ್ಪು ನೀಡಿದರು. ಆದರೆ ಖಾಸಗಿಯಾಗಿ ತಿಳಿಸಿದ ತೀರ್ಪಿನಲ್ಲಿ ಸ್ಮಿತಿ ಸಂಕೇತವನ್ನು ಬರೆದಿದ್ದರು.[೩೧] ೨೦೦೫ ರ ಮಾರ್ಚ್‌ ೨೮ ರಲ್ಲಿ ಬ್ರೌನ್‌ರ ಪ್ರಕಾಶಕ ರಾಂಡಮ್‌ ಹೌಸ್‌ ಕೃತಿಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆಯ ಮೇಲ್ಮನವಿಯನ್ನು ಗೆದ್ದಿತು. ಇಂಗ್ಲೆಂಡ್‌ ಮತ್ತು ವೇಲ್ಸ್‌ನ ಅಪೀಲು ನ್ಯಾಯಾಲಯ ಬೈಜೆಂಟ್‌ ಮತ್ತು ಲೇಘ್‌ರ ಮೇಲ್ಮನವಿಯನ್ನು ತಿರಸ್ಕರಿಸಿತು. ನಂತರ ಅವರು ಕಾನೂನು ವೆಚ್ಚವಾಗಿ ಸುಮಾರು $೬ ದಶಲಕ್ಷ USDದಷ್ಟು ಒಂದು ರೂಪದ ದಂಡ ಪಾವತಿಸಬೇಕಾಯಿತು.[೩೨] ತೀರ್ಪು ತಮ್ಮ ಪರವಾಗಬೇಕೆಂದು ಈ ಲೇಖಕರು ತಮ್ಮ ಬರಹಗಳನ್ನು ವಾಸ್ತವಾಂಶದಂತೆ ಪ್ರಸ್ತುತಪಡಿಸಿದರು. ಕಾಲ್ಪನಿಕ ಬರಹಗಾರರು ತಮ್ಮ ವಿಷಯ ಸಂಶೋಧನೆಗಾಗಿ ಹೆಚ್ಚಾಗಿ ವಾಸ್ತವಿಕ ವಿಷಯ ಮೂಲಗಳನ್ನು ಬಳಸುವರು.

ಲೋಕೋಪಕಾರ

[ಬದಲಾಯಿಸಿ]

೨೦೦೪ ರ ಅಕ್ಟೋಬರ್‌ನಲ್ಲಿ ಬ್ರೌನ್‌ ಮತ್ತು ಅವರ ಮಕ್ಕಳು, ಬ್ರೌನ್ ತಂದೆಯ ಗೌರವಾರ್ಥ ಫಿಲಿಪ್ಸ್‌ ಎಕ್ಸೆಟರ್‌ ಆಕ್ಯಾಡಮಿಗೆ US$೨.೨ ದಶಲಕ್ಷದಷ್ಟು ದೇಣಿಗೆ ನೀಡಿದರು. ಆದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಮತ್ತು ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲು" ರಿಚರ್ಡ್‌ ಜಿ. ಬ್ರೌನ್‌ ಟೆಕ್ನಾಲಜಿ ಎಂಡೋಮೆಂಟ್‌ ಅನ್ನು ಸ್ಥಾಪಿಸಲಾಯಿತು.[೩೩]

ಟೀಕೆಗಳು

[ಬದಲಾಯಿಸಿ]

ಬ್ರೌನ್‌ರ ಗದ್ಯ ಬರಹ ಶೈಲಿ ವಿಕಾರವಾಗಿದ್ದಲ್ಲದೇ, ಅಂದಗೆಟ್ಟದ್ದು ಎಂದು ಟೀಕಿಸಲಾಗಿತ್ತು.[೩೪] ಒಪಸ್‌ ಡೆಯಿ ಮತ್ತು ಪ್ರಿಯಾರಿ ಆಫ್‌ ಸಿಯೊನ್‌ ನಡುವಿನ ಸಂಬಂಧದ ವಾಸ್ತವಾಂಶ ಆಧರಿಸಿದ ಕಾದಂಬರಿಯಾಗಿದೆ. "ಕಾದಂಬರಿ ಕಲಾಕಾರ್ಯ‌, ವಾಸ್ತುಶಿಲ್ಪ, ದಾಖಲೆಗಳು ಮತ್ತು ರಹಸ್ಯ ವ್ರತಾಚರಣೆಯ ಕುರಿತ ಎಲ್ಲಾ ವಿವರಣೆಗಳು ನಿಖರವಾಗಿವೆ" ಎನ್ನುವ ಬ್ರೌನ್‌ರ ದಿ ಡಾ ವಿನ್ಸಿ ಕೋಡ್‌ ನ ಮುನ್ನುಡಿಯು ಹಲವು ಟೀಕೆಗೆ ಗುರಿಯಾಯಿತು.[೩೫][೩೬] ೨೦೯ ರ ಸಪ್ಟೆಂಬರ್‌ನಲ್ಲಿ ದಿ ಟುಡೇ ಶೋ ನಲ್ಲಿ ಮ್ಯಾಟ್‌ ಲೋರ್‌ರೊಂದಿಗಿನ ಸಂದರ್ಶನದಲ್ಲಿ ಬ್ರೌನ್‌ ಹೀಗೆ ಹೇಳಿದರು, "ಈ ಪುಸ್ತಕಗಳನ್ನು ನಾನು ಉದ್ದೇಶಪೂರ್ವಕ ಮತ್ತು ನಿರ್ದಿಷ್ಟ ರೀತಿಯಲ್ಲಿ ಮಾಡಿದ್ದೇನೆ. ಕಥೆಯಲ್ಲಿ ವಾಸ್ತವಾಂಶ ಮತ್ತು ಕಲ್ಪನೆಯನ್ನು ಅತ್ಯಾಧುನಿಕ ಮತ್ತು ಪರಿಣಾಮಕಾರಿ ರೀತಿಯಲ್ಲಿ ಮಿಶ್ರಣ ಮಾಡಿ ಕಥೆ ಹೆಣೆಯಲಾಗಿದೆ. ತಾವೇನು ಮಾಡಬೇಕೆಂದು ಕೆಲವರು ತಿಳಿದಿರುತ್ತಾರೆ. ಅವರು ಸ್ವಲ್ಪ ತರಬೇತಿ ಪಡೆದು, ಸ್ಪರ್ಧೆಗೆ ಹೋಗಿ ಯಶಸ್ಸು ಗಳಿಸುವರು. ಸಾಮಾನ್ಯವಾಗಿ ಇನ್ನು ಉಳಿದವರು ಇತರರ ಪುಸ್ತಕಗಳನ್ನು ಓದಬೇಕು" ಎಂದು ಹೇಳಿದರು.[೩೭]

ಕೃತಿಗಳು

[ಬದಲಾಯಿಸಿ]
  • ಸಿಂಥ್‌ಎನಿಮಲ್ಸ್‌ , ಮಕ್ಕಳ ಆಲ್ಬಮ್‌
  • ಪರ್ಸ್ಪೆಕ್ಟಿವ್‌ , ೧೯೯೦, ಡಾಲಿಯಾನ್ಸ್‌. ಮ್ಯುಸಿಕ್‌ CD
  • ಡಾನ್‌ ಬ್ರೌನ್‌ , ೧೯೯೨, DBG ರೆಕಾರ್ಡ್ಸ್‌
  • ಎಂಜೆಲ್ಸ್‌ ಆಂಡ್ ಡಿಮನ್ಸ್ , ೧೯೯೪, DBG ರೆಕಾರ್ಡ್ಸ್‌
  • ಮ್ಯುಸಿಕಾ ಎನಿಮಲಿಯಾ , ೨೦೦೩, ಪದ್ಯ & ಹಾಡಿನಲ್ಲಿ ಪ್ರಾಣಿಗಳನ್ನು ವರ್ಣಿಸುವ ೧೫ ಹಾಡುಗಳನ್ನು ಒಳಗೊಂಡಿರುವ ಮಕ್ಕಳ CD. ಅದರ ಆದಾಯವನ್ನು ಫ್ಯಾಮಿಲಿಸ್‌ ಫಸ್ಟ್‌ ದತ್ತಿನಿಧಿಗೆ ನೀಡಲಾಯಿತು.[೩೮]

ಹಾಸ್ಯ ಬರಹ

[ಬದಲಾಯಿಸಿ]
  • ೧೮೭ ಮೆನ್‌ ಟು ಎವೈಡ್‌: ಎ ಸರ್ವೈವಲ್‌ ಗೈಡ್‌ ಫಾರ್‌ ದಿ ರೋಮ್ಯಾಂಟಿಕ್‌ ಫ್ರಸ್ಟ್ರೇಟೆಡ್‌ ವುಮನ್‌ , ೧೯೯೫, ಬೆರ್ಕ್ಲಿ ಪಬ್ಲಿಷಿಂಗ್ ಗ್ರೂಪ್‌ (ಡೇನಿಯಲ್‌ ಬ್ರೌನ್ ಎಂಬ ‌ಗುಪ್ತನಾಮದೊಂದಿಗೆ ತನ್ನ ಪತ್ನಿಯೊಂದಿಗೆ ಬರೆದರು). ISBN 0-425-14783-5, ೨೦೦೬ರ ಆಗಸ್ಟ್‌ನಲ್ಲಿ ಮತ್ತೆ ಬಿಡುಗಡೆ ಮಾಡಲಾಯಿತು
  • ದಿ ಬಾಲ್ಡ್‌ ಬುಕ್‌ , ೧೯೯೮, ತನ್ನ ಪತ್ನಿ ಬ್ಲೈಥ್‌ ಬ್ರೌನ್‌ರೊಂದಿಗೆ ಬರೆದಿದ್ದಾರೆ. ISBN 0-7860-0519-X

ಕಾದಂಬರಿಗಳು

[ಬದಲಾಯಿಸಿ]

ರಾಬರ್ಟ್ ಲಾಂಗ್ಡನ್ ಥ್ರಿಲ್ಲರ್ಗಳು

[ಬದಲಾಯಿಸಿ]

ಚಲನಚಿತ್ರಗಳು

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ೧.೦ ೧.೧ ಬ್ರೌನ್‌. ಸಾಕ್ಷಿ ಹೇಳಿಕೆ; ಪುಟಗಳು 17 & 21.
  2. ದಿ ಡಾ ವಿನ್ಸಿ ಕೋಡ್‌ FAQ ಪುಟ; ಡಾನ್‌ ಬ್ರೌನ್‌ನ ಅಧಿಕೃತ ವೆಬ್‌ಸೈಟ್‌
  3. ೩.೦ ೩.೧ ಪೌಲ್‌ಸನ್‌, ಮೈಕಲ್‌. "ಡಾನ್‌ ಬ್ರೌನ್‌ ಆನ್‌ ರಿಲಿಜನ್‌ ಆಂಡ್‌ ರೈಟಿಂಗ್‌" Boston.com; 2009ನ ಸಪ್ಟೆಂಬರ್‌ 20
  4. Kaplan, James (September 13, 2009). "Life after 'The Da Vinci Code'". Retrieved September 13, 2009.
  5. "ಡಾ ವಿನ್ಸಿ ಕೋಡ್‌ ಲೇಖಕ ಡಾನ್‌ ಬ್ರೌನ್‌ ಮತ್ತು ಅವರ ಸಹೋದರರಾದ ವೇಲೆರೀ ಬ್ರೌನ್‌ '85 ಮತ್ತು ಗ್ರೇಗೊರಿ ಬ್ರೌನ್‌ '93 ತಮ್ಮ ತಂದೆಗಾಗಿ ಹೊಸ ನಿಧಿಯನ್ನು ಸ್ಥಾಪಿಸಿದರು" ದಿ ಎಕ್ಸೆಟರ್‌ ಇನಿಷಿಯೆಟಿವ್ಸ್‌. Archived 2009-05-23 ವೇಬ್ಯಾಕ್ ಮೆಷಿನ್ ನಲ್ಲಿ.ನವೆಂಬರ್ 17, 2004 Archived 2009-05-23 ವೇಬ್ಯಾಕ್ ಮೆಷಿನ್ ನಲ್ಲಿ.
  6. ೬.೦ ೬.೧ ೬.೨ ೬.೩ "Dan Brown witness statement in The Da Vinci Code case". March 14, 2006. Archived from the original on ಆಗಸ್ಟ್ 13, 2009. Retrieved September 13, 2009.
  7. ಬ್ರೌನ್‌. ಸಾಕ್ಷಿ ಹೇಳಿಕೆ; ಪುಟ 36.
  8. ಅಂಹರ್ಸ್ಟ್‌ ಅಲುಮ್ನಿ ಪುಟ
  9. ೯.೦ ೯.೧ ವಾಲ್ಟರ್ಸ್‌, ಜೊನ್ನಾ ಮತ್ತು ಅಲೈಸ್‌ ಒ'ಕೀಫೆ. 2006ರ ಮಾರ್ಚ್‌ 12ರಲ್ಲಿ ದಿ ಆಬ್ಸರ್ವರ್‌ಹೌ ಡಾನ್‌ ಬ್ರೌನ್‌'ಸ್‌ ವೈಫ್‌ ಅನ್‌ಲಾಕಡ್‌ ದಿ ಕೋಡ್‌ ಟು ಬೆಸ್ಟ್‌ಸೆಲ್ಲರ್‌ ಸಕ್ಸೆಸ್‌.
  10. ರೋಗಾಕ್‌, ಲಿಸಾ. ದಿ ಮ್ಯಾನ್‌ ಬಿಹೈಂಡ್‌ ದಿ ಡಾ ವಿನ್ಸಿ ಕೋಡ್‌ - ಆನ್‌ ಅನ್‌ಆತರೈಸ್ಡ್‌ ಬಯೋಗ್ರಫಿ ಆಫ್‌ ಡಾನ್‌ ಬ್ರೌನ್‌ . ಅಂಡ್ರೆವ್ಸ್‌ ಮ್ಯಾಕ್‌ಮೀಲ್‌ ಪಬ್ಲಿಷಿಂಗ್‌, 2005. ISBN 0-7407-5642-7
  11. "Lincoln Akerman School website". Retrieved September 13, 2009.
  12. ಶೆಲ್ಡನ್‌ ಬ್ರೌನ್‌ರನ್ನು ಹೇಗೆ ಪ್ರೇರೆಪಿಸಿದರು ಎನ್ನುವುದನ್ನು ವಿವಿಧ ಮೂಲಗಳು ವಿಭಿನ್ನ ರೀತಿ ತಿಳಿಸುತ್ತವೆ. ಶೆಲ್ಡನ್‌ರ ಪುಸ್ತಕದ ಗಮನ ಸೆಳೆಯುವ ಪುಟಗಳು, ತಮಗೆ ಓದುವುದರಲ್ಲಿ ವಿನೋದವು ಹೇಗಿರುವುದೆಂದು ತಿಳಿಸಿಕೊಟ್ಟವು ಎಂದು ಬ್ರೌನ್‌ ತಮ್ಮ ಸಾಕ್ಷಿ ಹೇಳಿಕೆಯ 3ನೇ ಪುಟದಲ್ಲಿ ಬರೆದಿದ್ದಾರೆ. ಆದರೆ ಅವರು ಶೆಲ್ಡನ್‌ಗಿಂತ "ಉತ್ತಮವಾಗಿ ಬರೆಯಬಹುದೆಂದು" ಅವರಿಗೆ ತಿಳಿಯಿತು ಎಂದು BBC ಮೂಲಗಳು ತಿಳಿಸಿವೆ.
  13. "Decoding the Da Vinci Code author". BBC. 2004-08-10. Retrieved 2009-05-18.
  14. Daniel Henninger. "Holy Sepulchre! 60 Million Buy 'The Da Vinci Code'". The Wall Street Journal. Retrieved 2009-05-18. {{cite news}}: Italic or bold markup not allowed in: |publisher= (help)
  15. Marcus, Caroline (September 13, 2009). "Brown is back with the code for a runaway bestseller". Sydney Morning Herald. Retrieved September 13, 2009.
  16. Mehegan, David (2004-05-08). "Thriller instinct". The Boston Globe. Retrieved 2009-04-20.
  17. Carbone, Gina (2009-04-20). "Dan Brown announces new book, 'The Lost Symbol'". Boston Herald. Archived from the original on 2012-02-22. Retrieved 2009-04-20.
  18. "Dan Brown's 'Lost Symbol' Sells 1 Million Copies in the First Day". ದ ನ್ಯೂ ಯಾರ್ಕ್ ಟೈಮ್ಸ್. 2009-09-16. Retrieved 2009-09-16.
  19. "'Da' Last Big Interview". Entertainment Weekly. 2006-03-26. Archived from the original on 2009-05-24. Retrieved 2009-05-18.
  20. "Librarian comments on 'Da Vinci' lawsuit". USA Today. 2006-03-01. Retrieved 2009-05-18.
  21. "Brown duels in court". The Standard. 2006-03-16. Retrieved 2009-05-18. {{cite news}}: Italic or bold markup not allowed in: |publisher= (help)
  22. "ಶೇಕ್ಸ್‌ಪಿಯರ್‌ನಲ್ಲಿ ಡಾನ್‌ ಬ್ರೌನ್‌". Archived from the original on 2011-07-13. Retrieved 2010-03-22.
  23. "ರಾಬರ್ಟ್‌ ಲಡ್ಲುಮ್‌ನ ಬರ್ನ್‌ ಸರಣಿಯಲ್ಲಿ ಡಾನ್‌ ಬ್ರೌನ್‌". Archived from the original on 2011-07-13. Retrieved 2010-03-22.
  24. ಬ್ರೌನ್‌. ಸಾಕ್ಷಿ ಹೇಳಿಕೆ; ಪುಟಗಳು 6 ಮತ್ತು 7.
  25. "Brown plays down Code controversy". BBC. 2006-04-24. Retrieved 2009-05-18.
  26. ರೋಟೆನ್‌ ಟೊಮಾಟೊಸ್‌ನಲ್ಲಿ ದಿ ಡಾ ವಿನ್ಸಿ ಕೋಡ್‌
  27. ಅತಿಥಿ ವಿಮರ್ಶಕರಾದ ಮೈಕಲ್‌ ಫಿಲಿಪ್ಸ್‌ ರೋಜರ್‌ ಎಬರ್ಟ್‌ರವರಿಗಾಗಿ ತಯಾರಿಸಿದ ಪಟ್ಟಿಯಲ್ಲಿ ದಿ ಡಾ ವಿನ್ಸಿ ಕೋಡ್‌ ಗೆ #2 ಸ್ಥಾನವನ್ನು ನೀಡಿದ್ದರು. ಮೊದಲನೇ ಸ್ಥಾನದಲ್ಲಿ ಆಲ್‌ ದಿ ಕಿಂಗ್ಸ್‌ ಮೆನ್‌ ಇತ್ತು. "ವರ್ಸ್ಟ್‌ ಮೂವಿ ಆಫ್‌ 2006", ಎಬರ್ಟ್‌ ಆಂಡ್‌ ರೊಪರ್‌, 2007 ಜನವರಿ 13
  28. ಬಾಕ್ಸ್‌ ಆಫೀಸ್‌ ಮೊಜೊ. ದಿ ಡಾ ವಿನ್ಸಿ ಕೋಡ್‌ (2006)
  29. ರೋಟೆನ್‌ ಟೊಮಾಟೊಸ್‌ನಲ್ಲಿ ಎಂಜೆಲ್ಸ್‌ ಆಂಡ್ ಡಿಮನ್ಸ್
  30. "Author Brown 'did not plagiarise'". BBC. 2005-08-06. Retrieved 2009-05-18.
  31. "Judge creates own Da Vinci code". BBC News. April 27, 2006. Retrieved September 13, 2009.
  32. "Historians lose Da Vinci Code plagiarism appeal". London: The Times. 2007-03-28. Archived from the original on 2011-08-08. Retrieved 2009-05-18.
  33. "Da Vinci Code Author Dan Brown and Siblings, Valerie Brown '85 and Gregory Brown '93 Establish New Fund in Honor of their Father". 2004-11-01. Archived from the original on 2009-05-23. Retrieved 2009-05-18.
  34. "The Lost Symbol and The Da Vinci Code author Dan Brown's 20 worst sentences". 2009-09-15. Retrieved 2009-09-20.
  35. ರಿಚರ್ಡ್‌ ಅಬನೆಸ್‌, ದಿ ಟ್ರುಥ್‌ ಬಿಹೈಂಡ್‌ ದಿ ಡಾ ವಿನ್ಸಿ ಕೋಡ್‌ (ಹಾರ್ವೆಸ್ಟ್‌ ಹೌಸ್‌ ಪಬ್ಲಿಷರ್ಸ್‌, 2004 ISBN 0-7369-1439-0).
  36. David F. Lloyd. "Facing Facts". Archived from the original on 2008-12-06. Retrieved 2009-05-18.
  37. "Dan Brown on dealing with criticism". today.msnbc.com. September 2009. Archived from the original on ಜುಲೈ 11, 2009. Retrieved September 21, 2009.
  38. "ಫೆಮಿಲಿಸ್‌ ಫಸ್ಟ್‌ ಪ್ರೆಸ್‌ ರಿಲೀಸ್‌ ಎಬೌಟ್‌ ಮ್ಯುಸಿಕಾ ಎನಿಮಲಿಯಾ". Archived from the original on 2010-11-29. Retrieved 2010-03-22.


ಹೊರಗಿನ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Dan Brown Books etc