ವಿಷಯಕ್ಕೆ ಹೋಗು

ಪೆನೆಲೊಪ್‌ ಕ್ರೂಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Penélope Cruz

Penélope Cruz in 2008
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Penélope Cruz Sánchez
(1974-04-28) ಏಪ್ರಿಲ್ ೨೮, ೧೯೭೪ (ವಯಸ್ಸು ೫೦)
Alcobendas, Community of Madrid, Spain
ವೃತ್ತಿ Actress
ವರ್ಷಗಳು ಸಕ್ರಿಯ 1990–present


ಪೆನೆಲೊಪ್‌‍ ಕ್ರೂಜ್‌ ಎಂದೇ ಗುರುತಿಸಲ್ಪಡುವ ಪೆನೆಲೊಪ್‌ ಕ್ರೂಜ್‌ ಸ್ಯಾನ್‌ಚೀಸ್‌ (ಜನನ:ಏಪ್ರಿಲ್‌ 28, 1974) ಸ್ಪ್ಯಾನಿಷ್‌ ದೇಶದ ನಟಿಯಾಗಿದ್ದಾರೆ. ಜಮೌನ್‌‌, ಜಮೌನ್‌ ದಿ ಗರ್ಲ್ ಆಫ್ ಯುವರ್ ಡ್ರೀಮ್ಸ್ ಮತ್ತು ಬೆಲ್ ಎಪೊಕ್ ಮುಂತಾದ ಚಲನಚಿತ್ರಗಳಲ್ಲಿನ ತಮ್ಮ ಅಮೋಘ ಅಭಿನಯಕ್ಕೆ ಹಲವು ವಿಮರ್ಶಕರಿಂದ ಉದಯೋನ್ಮುಖ ನಟಿ ಎಂಬ ಹೊಗಳಿಕೆಗೆ ಪಾತ್ರರಾದರು. ಅಲ್ಲದೇ ಅವರು ಹಲವಾರು ಅಮೇರಿಕನ್‌ ಚಲನಚಿತ್ರಗಳಾದ ಬ್ಲೊವ್ , ವೆನಿಲ್ಲಾ ಸ್ಕೈ ,ವಿಕ್ಕಿ ಕ್ರಿಸ್ಟಿನಾ ಬಾರ್ಸಿಲೋನಾ ಹಾಗೂ ನೈನ್‌ ಚಿತ್ರಗಳಲ್ಲೂ ನಟಿಸಿದ್ದಾರೆ. ಅವರು ಪ್ರಾಯಶಃ ಹೆಚ್ಚಾಗಿ ಹೆಸರಾಂತ ಸ್ಪ್ಯಾನಿಷ್‌ ನಿರ್ದೇಶಕ ಪೆಡ್ರೊ ಅಲ್ಮೊಡೊವರ್‌ ನಿರ್ದೇಶಿಸಿದ ಬ್ರೊಕನ್‌ ಎಂಬ್ರೆಸಿಸ್‌ , ವೊಲ್ವೆರ್ ಮತ್ತು ಆಲ್ ಅಬೌಟ್ ಮೈ ಮದರ್ ಚಿತ್ರಗಳಲ್ಲಿನ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ.

ಕ್ರೂಜ್ ಅವರು ಮೂರು ಬಾರಿ ಗೊಯಾಸ್‌ ಪ್ರಶಸ್ತಿ, ಎರಡು ಯುರೋಪಿಯನ್ ಫಿಲ್ಮ್ ಪ್ರಶಸ್ತಿಗಳು ಮತ್ತು ಕ್ಯಾನೇ ಚಲನಚಿತ್ರ ಸಮ್ಮೇಳನದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.[] 2009ರಲ್ಲಿ ವಿಕೀ ಕ್ರಿಸ್ಟೀನಾ ಬಾರ್ಸಿಲೋನ ಚಲನಚಿತ್ರದಲ್ಲಿನ ಅಭಿನಯಕ್ಕೆ ಅಕಾಡೆಮಿಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಗೊಯಾ ಪ್ರಶಸ್ತಿ ಮತ್ತು ವಿಕ್ಕಿ ಕ್ರಿಸ್ಟಿನಾ ಬಾರ್ಸಿಲೋನಾ ಚಲನಚಿತ್ರದಲ್ಲಿನ ಪಾತ್ರಕ್ಕೆ BAFTA ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಆಸ್ಕರ್ ಪ್ರಶಸ್ತಿ ಗೆದ್ದ ಸ್ಪ್ಯಾನಿಷ್‌ನ ಮೊದಲ ನಟಿ ಹಾಗೂ ಜೊಸೆ ಫೆರ್ರೆರ್, ರಿಟಾ ಮೊರೆನೊ, ಬೆನಿಸಿಯೋ ಡೆಲ್ ಟೊರೊ (ಪೋರ್ಟೊ ರಿಕಾ, ಆಂಟೋನಿ ಕ್ವಿನ್‌‍ (ಮೆಕ್ಸಿಕೋ), ಮತ್ತು ಫೆಲೋ ಸ್ಪನಿಯಾರ್ಡ್ ಜೇವಿಯರ್ ಬರ್ಡೆಮ್ ನಂತರ ಈ ಪ್ರಶಸ್ತಿ (ಅಸ್ಕರ್ ಪ್ರಶಸ್ತಿ) ಗೆದ್ದ ಆರನೇ ಹಿಸ್ಪಾನಿಕ್ ವ್ಯಕ್ತಿಯಾಗಿದ್ದಾರೆ.[][]

ಆರಂಭಿಕ ಜೀವನ

[ಬದಲಾಯಿಸಿ]

ಪೆನೆಲೊಪ್‌ ಕ್ರೂಜ್‌ ಸ್ಯಾನ್‌‍ಚೀಸ್ ಅವರು ಕೇಶ ವಿನ್ಯಾಸಕಿ ಹಾಗೂ ವೈಯಕ್ತಿಕ ವ್ಯವಸ್ಥಾಪಕಿ ಯನ್‌ಕಾರ್ನಾ ಸ್ಯಾನ್‌‍ಚೀಸ್ ಮತ್ತು ಆಟೊ ಮೆಕ್ಯಾನಿಕ್‌ ಹಾಗೂ ಚಿಲ್ಲರೆ ವ್ಯಾಪಾರಿಯಾಗಿದ್ದ ಎಡ್ಯೂರಾಡೋ ಕ್ರೂಜ್‌ ಎಂಬ ಮ್ಯಾಡ್ರಿಡ್‌ ಸಮುದಾಯದ ದಂಪತಿಗಳ ಮಗಳಾಗಿ ಸ್ಪೇನ್‌ದೇಶದ ಅಲ್ಲ್ಕೋಬೆಂದಾಸ್ ಎಂಬಲ್ಲಿ ಜನಿಸಿದರು.[][]]] ಇವರು ಮಗುವಾಗಿದ್ದಾಗಲೆ ಅಂದರೆ ಅಂಬೆಗಾಲಿಡುವಾಗಲೇ ಉತ್ತಮ ಅಭಿನೇತ್ರಿಯಾಗಿದ್ದರು. ದೂರದರ್ಶನದಲ್ಲಿ(ಟಿವಿ) ಬರುವಂತಹ ಕಾರ್ಯಕ್ರಮಗಳ ಅಥವಾ ಆ ಕಾರ್ಯಕ್ರಮಗಳಲ್ಲಿ ಮೂಡಿಬರುವಂತಹ ಪಾತ್ರಗಳನ್ನು ವೀಕ್ಷಿಸಿ, ಅದರಂತೆಯೇ ತಮ್ಮ ಮನೆಯವರ ಮುಂದೆ ನಟಿಸಿ ಅಥವಾ ಪ್ರದರ್ಶಿಸಿ ಅವರನ್ನು ರಂಜಿಸುತ್ತಿದ್ದರು. ಕ್ರೂಜ್ ಅವರು ತಮ್ಮ ಆರಂಭದ ದಿನಗಳಲ್ಲಿ ನೃತ್ಯದ ಕಡೆಗೆ ಹೆಚ್ಚು ಗಮನವನ್ನು ಕೇಂದ್ರಿಕರಿಸಿದ್ದರು. ಸ್ಪೇನ್‌‍ನ ರಾಷ್ಟ್ರೀಯ ಲಲಿತಕಲಾ ಶಾಲೆಯಲ್ಲಿ, ಒಂಭತ್ತು ವರ್ಷಗಳ ಕಾಲ ಶಾಸ್ತ್ರೀಯ ಬ್ಯಾಲೆ ನೃತ್ಯವನ್ನು ಕಲಿತು, ನಂತರ ಅವರ ನೃತ್ಯ ತರಬೇತಿಯನ್ನು ಹಲವಾರು ಪ್ರಖ್ಯಾತ ನೃತ್ಯಗಾರರ ಗರಡಿಯಲ್ಲಿ ಮುಂದುವರೆಸಿದರು. ಇವರು ಏಂಜಿಲಾ ಗಾರ್ರೈಡೊ ಅವರೊಂದಿಗೆ ಮೂರು ವರ್ಷಗಳ ಕಾಲ ಸ್ಪ್ಯಾನೀಷ್ ಬ್ಯಾಲೆಯ ತರಬೇತಿಯನ್ನು ಪಡೆದರು. ರೌಲ್ ಕಬಾಲೆರೋ ಅವರೊಂದಿಗೂ ಕೂಡ ಜಾಜ್ಜ್ (ಅಮೇರಿಕಾದ ನೀಗ್ರೋಗಳು ಬಳಕೆಗೆ ತಂದ ನೃತ್ಯಗೀತ) ನೃತ್ಯ ತರಬೇತಿಯನ್ನು ಪಡೆದು, ಮ್ಯಾಡ್ರಿಡ್‌‍ನಲ್ಲಿರುವ ಕ್ರಿಸ್ಟೀನಾ ರೊಟಾ (ಜುವಾನ್ ಡೈಗೊ ಬೊಟ್ಟೋ ತಾಯಿ) ಶಾಲೆಯಲ್ಲಿ ಅಭ್ಯಸಿಸಿದರು. ತಮ್ಮ ಹದಿನೈದನೇ ವಯಸ್ಸಿನಲ್ಲಿ ಪ್ರತಿಭಾ ಶೋಧನಾ ಸಂಸ್ಥೆಯ ಪರೀಕ್ಷೆಯಲ್ಲಿ ಸುಮಾರು ಮೂನ್ನೂರಕ್ಕಿಂತಲೂ ಹೆಚ್ಚು ಹುಡುಗಿಯರನ್ನು ಹಿಮ್ಮೆಟ್ಟಿ ಗೆದ್ದ ನಂತರ ಇವರಿಗೆ ಮತ್ತೊಂದು ವೃತ್ತಿಕ್ಷೇತ್ರದಿಂದ ಕರೆ ಬರಲಾರಂಭವಾಯಿತು.[ಸೂಕ್ತ ಉಲ್ಲೇಖನ ಬೇಕು]

ವೃತ್ತಿಜೀವನ

[ಬದಲಾಯಿಸಿ]

ಕ್ರೂಜ್‌ರವರು ಮೊದಲಬಾರಿಗೆ ಸ್ಪ್ಯಾನೀಷ್ ಸಿಂಥ್‌ಪೊಪ್ ತಂಡ ಮೆಕನೋದ "ಲಾ ಫುಯರ್ಜಾ ಡೆಲ್‌ ಡೆಸ್ಟಿನೋ" ಎಂಬ ವಿಡಿಯೋದಲ್ಲಿ ಕಾಣಿಸಿಕೊಂಡು ಖ್ಯಾತಿಯನ್ನು ಗಳಿಸಿದರು. ಇವರು ನಂತರ ಈ ತಂಡದ ಒಬ್ಬ ಸದಸ್ಯನಾದ ನಕೋ ಕನೊ, ಅವರೊಂದಿಗೆ ಸಂಬಂಧ ಬೆಳೆಸಿದರು.[] ಯುವ ಜನಾಂಗವನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರಾರಂಭವಾದ ದೂರದರ್ಶನ ಕಾರ್ಯಕ್ರಮ ಲಾ ಕ್ವೀಂಟಾ ಮರ್ಚ [] ದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡರು. ಇದಕ್ಕೂ ಮೊದಲೇ ಇವರು ಸೆರೀಯೆ(ಸೆರೈ) ರೋಸ್ ಎಂಬ ಕಾಮಪ್ರಚೋದಕವಾದ ಫ್ರೆಂಚ್‌ಟಿವಿ ಧಾರಾವಾಹಿಯೊಂದರಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು.[] ಒಂದು ಸಂಚಿಕೆಯಲ್ಲಿ ಇವರು ಕುರುಡ ವೇಶ್ಯೆಯಾಗಿ ಪಾತ್ರನಿರ್ವಹಿಸಿದ್ದರು ಮತ್ತೊಂದು ಸಂಚಿಕೆಯಲ್ಲಿ ಯುವ ಶ್ರೀಮಂತ ಸ್ತ್ರೀಯೊಬ್ಬಳು ಶ್ರೀಮಂತ ಪುರುಷನ ಸೋಗುಹಾಕಿಕೊಂಡು ದಾರಿತಪ್ಪಿಸುವ ಹಾಸ್ಯಪಾತ್ರವನ್ನು ನಿರ್ವಹಿಸಿದ್ದರು. ಇವರು 1994ರಲ್ಲಿ ನಾಕೋ ಕ್ಯಾನೋಸ್‌‍ನ "ಎಲ್ ವಾಲ್ಟ್ಜ್‌‍ ದೇ ಲಾಸ್ ಲೋಕೋಸ್" ಎಂಬ ವಿಡಿಯೋವನ್ನು ಸಹ ನಿರ್ದೇಶನ ಮಾಡಿದ್ದರು.

ಜಮೌನ್‌ ಜಮೌನ್‌ ಮತ್ತು ಬೆಲ್ಲೆ ಎಪೋಕ್‌ ಕ್ರೂಜ್‌ರವರ ಮೊದಲ ಚಲನಚಿತ್ರಗಳಾಗಿವೆ. ಇವುಗಳಲ್ಲಿ ಮೊದಲ ಚಿತ್ರ ಬೆಲ್ಲೆ ಎಪೋಕ್‌ ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಯನ್ನು ಪಡೆಯಿತು. ಮೊದಲ ಚಿತ್ರದಲ್ಲಿ ನಟಿಸಿವಾಗ ಇವರಿಗೆ ಕೇವಲ ಹದಿನಾರು ವರ್ಷ ವಯಸ್ಸಾಗಿತ್ತು.[] 1997ರಲ್ಲಿ ಇವರು ಸೊಫಿಯಾ ಪನಾಂಗಿಯಾ ಪಾತ್ರದಲ್ಲಿ ಏಡೂರ್ದೊ ನೊರೈಗಾ ಅವರೊಂದಿಗೆ ಅಲೆಜಂಡ್ರೊ ಅಮೆನಬರ್ ನಿರ್ದೇಶನದ ಒಪನ್ ಯುವರ್ ಐಸ್ ಚಿತ್ರದಲ್ಲಿ ನಟಿಸಿದರು, ನಂತರ 1999ರಲ್ಲಿ ಪೆಡ್ರೋ ಅಲ್‌ಮೋಡೋವರ್‌‌‍ರವರ ಆಲ್ ಅಬೌಟ್ ಮೈ ಮದರ್ ಚಿತ್ರದಲ್ಲಿ ನಟಿಸಿದರು. ಈ ಚಲನಚಿತ್ರವೂ ಕೂಡ ವಿದೇಶಿ ಭಾಷಾ ಚಲನಚಿತ್ರಗಳ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಯನ್ನು ಪಡೆಯಿತು. 2000ರಲ್ಲಿ ಮಾಟ್ಟ್ ಡಾಮನ್‌ನ ಜೊತೆಗೆ ಆಲ್ ದಿ ಪ್ರೆಟ್ಟಿ ಹಾರ್ಸಸ್‌‍ ಚಿತ್ರದಲ್ಲಿ ಕಾಣಿಸಿಕೊಂಡರು.

2000ನೇ ವರ್ಷದ ಆರಂಭವು ಕ್ರೂಜ್‌ ಅವರ ಚಿತ್ರಗಳಿಗೆ ಸಾಧಾರಣ ವಿಮರ್ಶೆ ಮತ್ತು ಮಿಶ್ರವಾಣಿಜ್ಯಾತ್ಮಕ ಯಶಸ್ಸು ದೊರಕಿದ ಸಮಯವಾಗಿತ್ತು. 2001ರ ಕೊನೆಯಲ್ಲಿ ಇವರು ಓಪನ್‌ ಯುವರ್ ಐಸ್‌ ಚಿತ್ರದ ರಿಮೇಕ್‌ ವೆನಿಲ್ಲಾ ಸ್ಕೈ ಎಂಬ ಹಾಲಿವುಡ್‌ ಸಿನೆಮಾದಲ್ಲಿ ಕಾಣಿಸಿಕೊಂಡರು. 2004ರಲ್ಲಿ ಕ್ರೂಜ್ ಯೂರೋಪಿಗೆ ಹಿಂತಿರುಗಿದ ನಂತರ ಡೋಂಟ್ ಮೂವ್‌‍ ಚಿತ್ರದಲ್ಲಿ ಅಭಿನಯಿಸಲು, ಇಟಾಲಿಯನ್‌ ಭಾಷೆಯನ್ನು ಕಲಿತರು (ಈ ಮೊದಲೇ ಅವರು ಸ್ಪ್ಯಾನೀಷ್,ಫ್ರೆಂಚ್ ಮತ್ತು ಇಂಗ್ಲೀಷ್‌ ಮಾತಾಡಬಲ್ಲವರಾಗಿದ್ದರು) ಇವರ ಪಾತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರಶಂಸೆಗಳನ್ನು ಪಡೆದರು ಮತ್ತು ಅಸ್ಕರ್ ಪ್ರಶಸ್ತಿಗೆ ಸಮಾನವಾದಂತಹ ಇಟಲಿಯ ಡೇವಿಡ್‌ ಡಿ ಡೊನಾಟೆಲೋ ಪ್ರಶಸ್ತಿಯನ್ನು ಪಡೆದರು.

2006ರಲ್ಲಿ ಬಾಂಡಿಡಾಸ್ ಚಿತ್ರದದಲ್ಲಿ ಸಲ್ಮಾ ಹಯೆಕ್‌‌ರವರ ಜೊತೆ ಸಹನಟಿಯಾಗಿ ಅಭಿನಯಿಸಿದ್ದರು.[] ಅದೇ ವರ್ಷ ಕ್ರೂಜ್, ಪೆಡ್ರೊ ಅಲ್‌ಮೋಡೋವರ್ ಅವರ ವೋಲ್ವರ್ ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ತುಂಬಾ ಧನಾತ್ಮಕ ವಿಮರ್ಶೆಯನ್ನು ಪಡೆದರು. 2006ರಲ್ಲಿ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಇವರಿಗೆ ದೊರೆತ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮ ಐವರು ಸಹ ಕಲಾವಿದರೊಂದಿಗೆ ಹಂಚಿಕೊಂಡಿದ್ದರು[]. ಅಲ್ಲದೆ ಈ ಚಿತ್ರವು ಗೋಲ್ಡನ್ ಗ್ಲೋಬ್ [[ಸ್ಕ್ರೀನ್‌ ಆ‍ಯ್‌ಕ್ಪರ್ಸ್ ಗಿಲ್ಡ್‌‍ ಪ್ರಶಸ್ತಿ, BAFTA ಪ್ರಶಸ್ತಿ ಮತ್ತು ಮುಖ್ಯಪಾತ್ರದಲ್ಲಿರುವ ಅತ್ಯುತ್ತಮ ನಟಿ|ಸ್ಕ್ರೀನ್‌ ಆ‍ಯ್‌ಕ್ಪರ್ಸ್ ಗಿಲ್ಡ್‌‍ ಪ್ರಶಸ್ತಿ, BAFTA ಪ್ರಶಸ್ತಿ]] ಮತ್ತು ಮುಖ್ಯಪಾತ್ರದಲ್ಲಿರುವ ಅತ್ಯುತ್ತಮ ನಟಿ ಅಕಾಡೆಮಿ ಪ್ರಶಸ್ತಿಗೂ ಕೂಡ ನಾಮಾಂಕಿತವಾಗಿತ್ತು. ಈ ಎಲ್ಲವೂ ಅವಳನ್ನು ಅತ್ಯುತ್ತಮ ನಟಿ ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಂಡ ಮೊದಲ ಸ್ಪೇನ್‌ನ ನಟಿಯನ್ನಾಗಿಸಿದವು.[೧೦]

81ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಕ್ರೂಜ್‌. ಅದೇ ದಿನ ರಾತ್ರಿ ಆಕೆ ತನ್ನ ಮೊದಲ ಆಸ್ಕರ್ ಪ್ರಶಸ್ತಿಯನ್ನು ಪಡೆದಳು.

ಮೇ 2007ರಲ್ಲಿ ಬಾರ್ಸಿಲೋನಾ ಮೂಲದ ಪ್ಯಾಶನ್‌ ಸರಣಿ ಮಳಿಗೆ ಮ್ಯಾಂಗೋಗಾಗಿ, ಪೆನೆಲೋಪ್‌ ಮತ್ತು ಆಕೆಯ ಸೋದರಿ ಮೋನಿಕಾ 25 ಉಡುಪುಗಳನ್ನು ವಿನ್ಯಾಸಗೊಳಿಸುತ್ತಾರೆಂದು ಪ್ರಕಟಣೆಯಾಯಿತು.[೧೧] ಜುಲೈ 7, 2007ರಲ್ಲಿ ಕ್ರೂಜ್‌ರವರು ಲೈವ್ ಅರ್ಥ್‌‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಇವರು 2007ರ ಕೊನೆಯಲ್ಲಿ ಜೌಮೆ ದೆ ಲೈಗುವ್ನಾ ನಿರ್ದೇಶನ ಮಾಡಿದ ಇವರ ಸಹೋದರನ ಮೊದಲ ಸಿಂಗಲ್‌ ವಿಡಿಯೋ "ಕೋಸಾಸ್ ಕ್ಯು ಕಾನ್ಟಾರ್‌‌"ನಲ್ಲಿ ಗೆಳತಿ ಮಿಯಾ ಮೇಸ್ಟ್ರೋ ಮತ್ತು ಸಹೋದರಿ ಮೋನಿಕಾಳ ಜೊತೆಗೂಡಿ ಅಭಿನಯಿಸಿದರು. ಕ್ರೂಜ್‌ ಈ ಮೊದಲು ಫ್ಯಾಷನ್‌ ಕುರಿತಾಗಿ ತೀವೃ ಆಸಕ್ತಿ ಹೊಂದಿದ್ದರು ಮತ್ತು ಇವರು ಲೋರಿಯಲ್‌ ಮತ್ತು ಇದರ ಉತ್ಪನ್ನವಾದ ’ಟೆಲಿಸ್ಕೊಪಿಕ್‌’ ಹೆಸರಿನ ಕಾಡಿಗೆಗೆ ಇವರು ರೂಪದರ್ಶಿಯಾಗಿದ್ದಾರೆ.

2008ರಲ್ಲಿ ಸ್ಪೈನ್ ದೇಶದವರಾದ ಇಸಾಬೆಲ್ ಕೊಕ್ಸೆಟ್‌ರ ಚಿತ್ರ ಎಲಜಿ ಯಲ್ಲಿ ಕ್ರೂಜ್‌‌ ಅವರು ಸರ್ ಬೆನ್ ಕಿಂಗ್ಸ್‌ಲೆ ಜೊತೆ ಕಾಣಿಸಿಕೊಂಡರು. ಇಂಗ್ಲಿಷ್ ಮಾತನಾಡುವ ಆ ಸಿನೆಮಾದಲ್ಲಿನ ತಮ್ಮ ಪಾತ್ರಕ್ಕಾಗಿ ವಿಮರ್ಶಾತ್ಮಕ ಪ್ರಶಂಸೆ ಗಳಿಸಿದರು. ಈ ಚಿತ್ರವು ಫಿಲಿಪ್ ರೋಥ್‌ದ ಡೈಯಿಂಗ್ ಆ‍ಯ್‌ನಿಮಲ್‌ ಕಥೆಯನ್ನು ಆಧರಿಸಿತ್ತು. ಆಕೆ ತನ್ನ ಉತ್ತಮ ಅಭಿನಯಕ್ಕಾಗಿ ಗೋಲ್ಡನ್ ಸ್ಯಾಟಲೈಟ್ ಪ್ರಶಸ್ತಿಗೆ ನಾಮನಿರ್ದೇಶಿತರಾದರು. ನಂತರ ಅದೇ ವರ್ಷ, ಆಕೆ ವುಡಿ ಅಲೆನ್‌ರ ವಿಕಿ ಕ್ರಿಸ್ಟಿನಾ ಬಾರ್ಸಿಲೊನಾ ಚಿತ್ರದಲ್ಲಿ ಮರಿಯಾ ಎಲೆನಾ ಪಾತ್ರದಲ್ಲಿ ಅಭಿನಯಿಸಿದರು. ಮಾನಸಿಕವಾಗಿ ಚಂಚಲೆಯಾದ ಜೇವಿಯರ್ ಬರ್ಡೆಮ್‌ರ ಮಾಜಿ-ಪತ್ನಿಯ ಪಾತ್ರ ಅದಾಗಿತ್ತು. ಆಕೆಯ ಅಭಿನಯ ವಿಸ್ತಾರವಾದ ವಿಮರ್ಶಾ ಪ್ರಶಂಸೆಯನ್ನು ಪಡೆದುಕೊಂಡಿತು. ಆ ಪಾತ್ರಕ್ಕಾಗಿ ಕ್ರೂಜ್‌ ಅವರು ತನ್ನ ಎರಡನೇ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನವನ್ನು ಪಡೆದುಕೊಂಡರು ಮತ್ತು ನಂತರದಲ್ಲಿ ಅತ್ಯುತ್ತಮ ಪೋಷಕ ನಟಿ [೧೨] ಪ್ರಶಸ್ತಿಯನ್ನು ಗಳಿಸಿದರು. ಇದಕ್ಕೂ ಒಂದು ವರ್ಷ ಮೊದಲು ಅವರ ಗೆಳೆಯ ಜೇವಿಯರ್ ಬರ್ಡೆಮ್ ನೊ ಕಂಟ್ರಿ ಫಾರ್ ಓಲ್ಡ್ ಮೆನ್ ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿ ಗಳಿಸಿದ್ದ. ಆದ್ದರಿಂದ ಕ್ರೂಜ್‌ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ ಎರಡನೇ ಸ್ಪ್ಯಾನಿಶ್‌ ನಟಿ ಎನಿಸಿಕೊಂಡರು. ಕಲಾವಿದರ ರೀತಿಯಲ್ಲಿ ನೋಡಿದರೆ ಈಕೆ ಅಕಾಡೆಮಿ ಪ್ರಶಸ್ತಿ ಗಳಿಸಿದವರಲ್ಲಿ ಎರಡನೆಯವರು ಆದರೆ ಅಕಾಡೆಮಿ ಪ್ರಶಸ್ತಿ ಗಳಿಸಿದ ಸ್ಪ್ಯಾನಿಶ್‌ ಮಹಿಳೆಯರಲ್ಲಿ ಮೊದಲಿಗರಾದರು. ರಾಬರ್ಟ್‌ ಡೆ ನಿರೊ ಮತ್ತು ಇಂಗ್ರಿಡ್‌ ಬರ್ಗ್‌ಮನ್‌ರನ್ನು ಹೊರತುಪಡಿಸಿದರೆ ಎರಡು ಭಾಷೆಗಳನ್ನಾಡುವ ಪಾತ್ರಕ್ಕಾಗಿ ಆಸ್ಕರ್ ಪಡೆದವರಲ್ಲಿ ಈಕೆಯೂ ಕೂಡಾ ಸೇರಿದ್ದಾಳೆ. ಆಸ್ಕರ್ ಪ್ರಶಸ್ತಿಯನ್ನಷ್ಟೇ ಅಲ್ಲದೆ ಕ್ರೂಜ್‌ ಅವರು BAFTA ಪ್ರಶಸ್ತಿ, ಇಂಡಿಪೆಂಡೆಂಟ್ ಸ್ಪಿರಿಟ್ ಪ್ರಶಸ್ತಿ, ದಿ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿ ಮತ್ತು ವಿಕಿ ಕ್ರಿಸ್ಟಿನಾ ಬಾರ್ಸಿಲೋನಾ ಚಿತ್ರದಲ್ಲಿನ ಪೋಷಕ ಪಾತ್ರದಲ್ಲಿನ ನಟನೆಗಾಗಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಯ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗಳಿಸಿದರು. ತನ್ನ ಆ ಪಾತ್ರಕ್ಕಾಗಿ ಆಕೆ ಗೋಲ್ಡನ್ ಗ್ಲೋಬ್ ಮತ್ತು ಸ್ಕ್ರೀನ್ ಆ‍ಯ್‌ಕ್ಟರ್ಸ್ ಗಿಲ್ಡ್ ನಾಮನಿರ್ದೇಶನಗಳನ್ನೂ ಸಹ ಪಡೆದರು.

ಕ್ರೂಜ್‌‌ ಅವರು ಪೆಡ್ರೊ ಆಲ್ಮೊಡೊವರ್‌ನೊಂದಿಗೆ ಬ್ರೊಕನ್ ಎಂಬ್ರಾಸಸ್‌ ನಲ್ಲಿ ಮತ್ತೆ ಒಟ್ಟಿಗೆ ಕೆಲಸ ಮಾಡಿದರು. ಈ ಚಿತ್ರವು ನವೆಂಬರ್ 2009ರಲ್ಲಿ ಯುಎಸ್‌ನಲ್ಲಿ ಬಿಡುಗಡೆಯಾಯಿತು. ಸಂಗೀತದ ಆಲ್ಬಮ್‌ ಆಗಿದ್ದ ’ನೈನ್‌’ಸಿನೆಮಾ ಆವೃತ್ತಿಯಲ್ಲಿ ಇತರೆ ಆಸ್ಕರ್ ವಿಜೇತರಾದ ಸೊಫಿಯಾ ಲೊರೆನ್, ಜುದಿ ಡೆಂಚಿ, ಡೆನಿಯಲ್ ಡೇ-ಲೇವಿಸ್, ನಿಕೊಲ್ ಕಿಡ್ಮನ್ ಮತ್ತು ಮಾರಿಯಾನ್ ಕೊಟಿಲ್ಯಾರ್ಡ್ ಅವರ ಜೊತೆಯಲ್ಲಿ ಅಭಿನಯಿಸಿದ್ದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಕ್ರೂಜ್‌ ಅವರಿಗೆ ಎಡ್ಯುರ್ಡೊ ಎಂಬ ಸಹೋದರನಿದ್ದು, ಆತ ಗಾಯಕನಾಗಿದ್ದಾನೆ. ಮೊನಿಕಾ ಎಂಬ ಸಹೋದರಿಯನ್ನು ಇವರು ಹೊಂದಿದ್ದಾರೆ. ಕ್ರೂಜ್‌ ಅವರು 2000ದಿಂದ ಸಸ್ಯಹಾರಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.[೧೩] ಅವರು ಸ್ಪ್ಯಾನೀಷ್, ಇಟಾಲಿಯನ್, ಫ್ರೆಂಚ್ ಮತ್ತು ಇಂಗ್ಲೀಷ್, ನಾಲ್ಕೂ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದಾರೆ. ಕ್ರೂಜ್‌ ಅವರು ಸಮಾಜ ಸೇವೆಗಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ವಿನಿಯೋಗಿಸಿದ್ದಾರೆ. 1997ರಲ್ಲಿ ಇವರು ಎರ‍ಡು ತಿಂಗಳು ಉಗಾಂಡಾದಲ್ಲಿ ಸ್ವಯಂ ಸೇವಕಿಯಾಗಿ ಕಾರ್ಯನಿರ್ವಹಿಸಿದರು.

ಕ್ರೂಜ್‌ ಅವರು ಕ್ಯಾಥೋಲಿಕ್ ಆಗಿ ಬೆಳೆದರೂ, ಈಗ ಬೌದ್ಧ ಧರ್ಮಕ್ಕೆ ಅತ್ಯಂತ ಹತ್ತಿರವಾಗಿದ್ದಾರೆ ಎನಿಸುತ್ತದೆ.[೧೪] ಟಾಮ್ ಕ್ರುಸ್‌‍ನೊಂದಿಗೆ ವೆನಿಲಾ ಸ್ಕೈ ನಲ್ಲಿ ಕಾಣಿಸಿಕೊಂಡ ನಂತರದಲ್ಲಿ ಅವರಿಬ್ಬರಲ್ಲಿ ಮೂರು-ವರ್ಷದವರೆಗೆ ಸಂಬಂಧವಿತ್ತು. ಜನವರಿ 2004ರಲ್ಲಿ ಅದು ಕೊನೆಗೊಂಡಿತು. ಆ ಸಮಯದಲ್ಲಿ ಆಕೆ ಮತ್ತು ಕ್ರೂಸ್‌‍ ಹಾಲಿವುಡ್‌ನಲ್ಲಿಯ ಅನೇಕ ಸೈಂಟಾಲಜಿ ಧರ್ಮದ ಚರ್ಚ್ ಸ್ಥಳಗಳಿಗೆ ಭೇಟಿನೀಡಿದ್ದರು. ಆಗ ಕ್ರೂಸ್‌‍, ಕ್ರೂಜ್‌‌ ಅವರನ್ನು ಚರ್ಚ್‌ಗೆ ಸೇರಿಕೊಳ್ಳುವಂತೆ ಮನವೊಲಿಸಿದ್ದ ಎಂಬ ಊಹಾಪೋಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.[೧೫]

ಫೆಬ್ರುವರಿ 2005ರಲ್ಲಿನ ಸಹರಾ ಚಿತ್ರದ ಚಿತ್ರೀಕರಣದ ನಂತರ ಅವರು ನಟ ಮ್ಯಾಥ್ಯೂ ಮಿಕ್‌ನಾಯ್ ಜೊತೆ ಡೇಟಿಂಗ್ ಆರಂಭಿಸಿದರು. ಮೇ 2006ರಲ್ಲಿ ಅವರು ಪೀಪಲ್ ಪತ್ರಿಕೆಗೆ ಜಂಟಿಯಾಗಿ "ತಾವು ದಂಪತಿಗಳಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ" ಎಂದು ಹೇಳಿಕೆ ನೀಡಿದರು. ಅದೇ ವರ್ಷದ ಕೊನೆಯಲ್ಲಿ ಅವರು "ತಾವು ದೀರ್ಘಕಾಲ ಅನೋನ್ಯವಾಗಿರಲಿಲ್ಲ ಮತ್ತು ಈ ಸಮಯದಲ್ಲಿ ತಾವು ಬೇರ್ಪಡುವುದೇ ಒಳ್ಳೆಯದು" ಎಂದು ಘೋಷಿಸಿದರು.[೧೬] 2007ರಿಂದ ಅವರು ನಟ ಜೇವಿಯರ್ ಬರ್ಡೆಮ್‌ರೊಂದಿಗೆ ಡೇಟಿಂಗ್ ಮಾಡಿದರು; ಅವರಿಬ್ಬರೂ ಒಟ್ಟಿಗೆ ಜಾಮನ್, ಜಾಮನ್ , ಲೈವ್ ಫ್ಲೆಶ್ ಮತ್ತು 2008ರ ವಿಕಿ ಕ್ರಿಸ್ಟಿನಾ ಬಾರ್ಸಿಲೊನಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.[೧೭]

ಏಪ್ರಿಲ್ 2007ರಲ್ಲಿ ಏಕಾಂಗಿಯಾಗಿದ್ದ ಸಮಯದಲ್ಲಿ ಕ್ರೂಜ್‌, ತಾನು ಮುಂದೊಂದು ದಿನ ಮಕ್ಕಳನ್ನು ಹೊಂದಲು ಇಚ್ಚಿಸಿರುವುದಾಗಿಯೂ ಮತ್ತು ತನಗೆ ದತ್ತು ಮಕ್ಕಳನ್ನು ಪಡೆಯಲು ಬಯಸಿರುವುದಾಗಿ ಹೇಳಿಕೆ ನೀಡಿದರು. "ಹೌದು, ನಾನು ಮಕ್ಕಳನ್ನು ಹೊಂದಲು ಬಯಸಿದ್ದೇನೆ" ಎಂದು ಕ್ರೂಜ್‌ ಅವರು ಸ್ಪ್ಯಾನೀಷ್ ಆವೃತ್ತಿಯ ಮೇರಿ ಕ್ಲೈರ್‌ ಪತ್ರಿಕೆಯ ಏಪ್ರಿಲ್ ಸಂಚಿಕೆಯಲ್ಲಿ ಹೇಳಿದ್ದರು. "ನನಗೆ ನನ್ನ ಸ್ವಂತ ಮಕ್ಕಳು ಬೇಕು ಮತ್ತು ಜೊತೆಗೆ ದತ್ತು ಮಕ್ಕಳನ್ನೂ ಸಹ ಪಡೆಯುತ್ತೇನೆ. ನಾನು ಮಕ್ಕಳನ್ನು ದತ್ತು ತೆಗೆದುಕೊಳ್ಳದಿದ್ದರೆ ನನ್ನ ಜೀವನ ಸಾರ್ಥಕವಾಗುವುದಿಲ್ಲ ಎಂಬ ಭಾವನೆ ಸಧ್ಯ ನನಗಿದೆ" ಎಂದು ವಿವರಿಸಿದ್ದರು. [೧೮]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವೇನಿಲಾ ಸ್ಕೈ
Year Film Role Notes
1992 ಜಾಮೌನ್, ಜಾಮೌನ್ ಸಿಲ್ವಿಯಾ ಉತ್ತಮ ನಟಿಗಾಗಿ ನೀಡುವ ಗೋಯಾ ಪ್ರಶಸ್ತಿಗೆ-ನಾಮನಿರ್ದೇಶನಗೊಂಡಿದೆ
ಸ್ಪ್ಯಾನಿಶ್ ಆ‍ಯ್‌ಕ್ಟರ್ಸ್ ಯೂನಿಯನ್ ನ್ಯೂಕಮರ್ ಪ್ರಶಸ್ತಿ‌ಗೆ- ನಾಮನಿರ್ದೇಶನಗೊಂಡಿದೆ.
ಬೆಲ್ ಎಪಾಕ್ ಲುಜ್ ಪೋಷಕ ಪಾತ್ರಕ್ಕಾಗಿ ಸ್ಪ್ಯಾನೀಶ್ ಆ‍ಯ್‌ಕ್ಟರ್ಸ್ ಯೂನಿಯನ್ ಪ್ರಶಸ್ತಿ (ಸಿಕಂಡಾರಿಯೋ ಸಿನೆ)
1993 ಫಾರ್ ಲವ್, ಒನ್ಲೀ ಫಾರ್ ಲವ್ ಮೇರಿ ಪರ್ ಅಮೊರ್, ಸೊಲೊ ಪರ್ ಅಮೊರ್
ದ ಗ್ರೀಕ್ ಲಿಬ್ರಿನಾಥ್ ಎಲಿಸ್ ಎಲ್ ಲೆಬರಿಂಟೊ ಗ್ರಿಯಾಗೊ
ದ ರೆಬೆಲ್ ಎನ್ಜಾ ಲ ರಿಬೆಲ್
1994 ಅಲೆಗ್ರೆ ಮ ನಾನ್ ಟ್ರೊಪೊ ಸಲೊಮ್
ಟೊಡೊ ಎಸ್ ಮೆಂಟಿರಾ ಲುಷಿಯಾ
1995 ಎಂಟ್ರಿ ರೊಜಾಸ್ ಲುಷಿಯಾ
ಎಲ್ ಎಫೆಕ್ಟೊ ಮ್ಯಾರಿಪೊಸಾ ಸಮಾರಂಭದ ಅತಿಥಿ
1996 ಲ ಸೆಲೆಸ್ಟಿನಾ ಮೆಲಿಬಿಯಾ
ಬ್ರುಜಾಸ್ ಪಟ್ರಿಷಿಯಾ
ಮಾಸ್ ಕ್ಯೂ ಅಮೊರ್, ಫ್ರೆನೆಸಿ
2000 ಲವ್ ಕ್ಯಾನ್ ಸೀರಿಯಸ್‌ಲೀ ಡ್ಯಾಮೇಜ್ ಯುವರ್ ಹೆಲ್ತ್ ಯುವತಿ ಡಯಾನಾ / ಡಯಾನಾಳ ಪುತ್ರಿ ಎಕ್ ಅಮೊರ್ ಪರ್ಜುಡಿಕಾ ಸೆರಿಯಾಮೆಂಟೆ ಲ ಸಲುದ್
ಓಪನ್ ಯುವರ್ ಐಸ್ ಸೊಫಿಯಾ ಅಬ್ರೆ ಲೊಸ್ ಒಜೊಸ್
ಲೈವ್ ಫ್ಲೆಶ್ ಇಸಾಬೆಲ್ ಪ್ಲಾಜಾ ಕ್ಯಾಬಲೆರೊ ಕಾರ್ನೆ ಟ್ರಿಮುಲಾ
ಸಣ್ಣ ಪಾತ್ರದ ಅಭಿನಯಕ್ಕಾಗಿ ಸ್ಪ್ಯಾನೀಶ್ ಆ‍ಯ್‌ಕ್ಟರ್ಸ್ ಪ್ರಶಸ್ತಿ‌ಗೆ ನಾಮನಿರ್ದೇಶನಗೊಂಡಿದೆ (ರೆಪಾರ್ಟೊ ಸಿನೆ)
ಹಜೊರ್ನೆ ಅಫ್ ಪರಾಡಿಸ್, ಯೆಟ್ ಡೊನಾ ಹೆಲೆನಾ
1998 ದ ಗರ್ಲ್ ಆಫ್ ಯುವರ್ ಡ್ರೀಮ್ಸ್ ಮಕರೆನಾ ಲ ನಿನ ಡೆ ಟುಸ್ ಒಜೊಸ್
ಫೊಟೊಗ್ರಾಮಸ್ ಡೆ ಪ್ಲಾಟ ಉತ್ತಮ ಚಿತ್ರ ನಟಿ (ಮೇಜರ್ ಆಕ್ಟಿಜ್ ಡೆ ಸಿನೆ)
ಉತ್ತಮ ನಟಿಗಾಗಿ ಗೊಯಾ ಪ್ರಶಸ್ತಿ
ಮುಖ್ಯ ಪಾತ್ರದ ಅಭಿನಯಕ್ಕಾಗಿ ಸ್ಪ್ಯಾನೀಶ್ ಆ‍ಯ್‌ಕ್ಟರ್ಸ್ ಯೂನಿಯನ್ ಪ್ರಶಸ್ತಿ(ಪೊಟೊಗೊನಿಸ್ಟ ಸಿನೆ)
ಉತ್ತಮ ನಟಿಗಾಗಿ ಯುರೋಪಿಯನ್ ಫಿಲ್ಮ್ ಪ್ರಶಸ್ತಿ‌ಗೆ ನಾಮನಿರ್ದೇಶನಗೊಂಡಿದೆ.
ದ ಹಿ-ಲೊ ಕಂಟ್ರಿ ಜೊಸೆಫಾ
ಉತ್ತಮ ನಟಿಗಾಗಿ ALMA ಪ್ರಶಸ್ತಿ‌ಗೆ ನಾಮನಿರ್ದೇಶನಗೊಂಡಿದೆ.
ಡಾನ್ ಜಾನ್ ಮ್ಯಾಥುರಿನ್
1999 ಆಲ್ ಎಬೌಟ್ ಮೈ ಮದರ್ ಸಿಸ್ಟರ್ ಮರಿಯಾ ರೊಸಾ ಸ್ಯಾನ್ಜ್ ಟೊಡೊ ಸೊಬ್ರೆ ಮಿ ಮಡ್ರೆ
2007 ಆಲ್ ದ ಪ್ರೆಟಿ ಹರ್ಸಸ್ ಅಲೆಜಾಂಡ್ರ ವಿಲರೆಯಲ್ [[ನಾಟಕ/ಪ್ರೇಮ ಪ್ರಸಂಗ ಸಿನಿಮಾಗಳಲ್ಲಿ ನೆಚ್ಚಿನ ನಟಿಗೆ ನೀಡುವ ಬ್ಲಾಕ್‌ಬಸ್ಟರ್ ಎಂಟರ್‌ಟೈನ್‌ಮೆಂಟ್ ಪ್ರಶಸ್ತಿ‌ಗೆ]] ನಾಮನಿರ್ದೇಶನಗೊಂಡಿದೆ.
ವುಮೆನ್ ಆನ್ ಟಾಪ್ ಇಸಾಬೆಲಾ ಒಲಿವೆರಿಯಾ
2000 ಬ್ಲೊ ಮಿರ್ಥಾ ಜಂಗ್
ಡೊಂಟ್ ಟೆಂಪ್ಟ್ ಮೆ ಕರ್ಮೆನ್ ರಾಮೊಸ್ ಬೆಂಡಿಟೊ ಇನ್ಫೈರ್ನೊ
ಕ್ಯಾಪ್ಟೈನ್ ಕೊರ್ಲಿಸ್ ಮ್ಯಾಂಡೊಲಿನ್ ಪೆಲಾಜಿಯಾ ಉತ್ತಮ ನಟಿಗಾಗಿ ಯುರೋಪಿಯನ್ ಫಿಲ್ಮ್ ಪ್ರಶಸ್ತಿ- ಆಡಿಯನ್ಸ್ ಪ್ರಶಸ್ತಿ‌ ನಾಮನಿರ್ದೇಶನಗೊಂಡಿದೆ.
ಸೊಫಿಯಾ ಸೆರನೊ
ಉತ್ತಮ ನಟಿಗಾಗಿ ALMA ಪ್ರಶಸ್ತಿ‌ಗೆ ನಾಮನಿರ್ದೇಶನಗೊಂಡಿದೆ.
2002 ವೇಕಿಂಗ್ ಅಪ್ ಇನ್ ರೆನೊ ಬ್ರೆಂಡ
2003 ಫ್ಯಾನ್‌ಫ್ಯಾನ್ ಲ ಟುಲಿಪ್ ಅಡೆಲಿನ್ ಲ ಫ್ರಾಂಚೀಸ್ ಉತ್ತಮ ನಟಿಗಾಗಿ ಯುರೋಪಿಯನ್ ಫಿಲ್ಮ್ ಪ್ರಶಸ್ತಿ- ಆಡಿಯನ್ಸ್ ಪ್ರಶಸ್ತಿ‌ ನಾಮನಿರ್ದೇಶನಗೊಂಡಿದೆ.
ಗೊಥಿಕಾ ಕ್ಲೂಯಿ ಸವ
1986 ಹೆಡ್ ಇನ್ ಕ್ಲೌಡ್ಸ್ ಮಿಯಾ
ಡೊಂಟ್ ಮೂವ್ ಇಟಾಲಿಯಾ ನಾನ್ ಟಿ ಮೂವೆರ್
ಉತ್ತಮ ನಟಿಗಾಗಿ ಡೇವಿಡ್ ಡಿ ಡೊನಾಟೆಲೊ ಪ್ರಶಸ್ತಿ
ಉತ್ತಮ ನಟಿಗಾಗಿ ಯುರೋಪಿಯನ್ ಫಿಲ್ಮ್ ಪ್ರಶಸ್ತಿ- ಆಡಿಯನ್ಸ್ ಪ್ರಶಸ್ತಿ‌
ಉತ್ತಮ ನಟಿಗಾಗಿ ನೀಡುವ ಯುರೋಪಿಯನ್ ಫಿಲ್ಮ್ ಪ್ರಶಸ್ತಿ ಗೆ ನಾಮನಿರ್ದೇಶನಗೊಂಡಿದೆ.
ಉತ್ತಮ ನಟಿಗಾಗಿ ಗೊಯಾ ಪ್ರಶಸ್ತಿ‌ಗೆ ನಾಮನಿರ್ದೇಶನಗೊಂಡಿದೆ.
ನೊಯೆಲ್ ನಿನಾ ವ್ಯಾಸ್ಕ್ವೆಜ್
(2005) ಸಹರಾ ಇವಾ ರೊಜಾಸ್
1986 ಕ್ರೊಮೊಫೊಬಿಯಾ ಗ್ಲೊರಿಯಾ
ಬಂಡಿದಾಸ್ ಮರಿಯಾ ಅಲ್ವರೇಜ್
ವೋಲ್ವರ್ ರೈಮುಂಡ ಉತ್ತಮ ನಟಿಗಾಗಿ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ (ಪ್ರಿಕ್ಸ್ ಡಿ’ಇಂಟರ್ಪ್ರಿಟೇಷನ್ ಫೇಮಿನಿನ್) ಕಾರ್ಮೆನ್ ಲೊರ ಮೌರಾ, ಲೊಲಾ ಡ್ಯುಯೆನಾಸ್, ಬ್ಲಾಂಕ ಪೊರ್ಟಿಲೊ, ಯೊಹಾನ ಕೊಬೊ, ಚಸ್ ಲ್ಯಾಂಪ್ರೆವ್‌-ಇವರಿಗೂ ವಿತರಿಸಲಾಗಿದೆ[]
ಉತ್ತಮ ನಟಿಗಾಗಿ ಸಿನಿಮಾ ರೈಟರ್ಸ್ ಸರ್ಕಲ್ ಪ್ರಶಸ್ತಿ


ನಾಮನಿರ್ದೇಶಿತ – ಉತ್ತಮ ನಟಗಾಗಿ ಎಂಪೈರ್ ಪ್ರಶಸ್ತಿ
ಉತ್ತಮ ನಟಿಗಾಗಿ ಯುರೋಪಿಯನ್ ಫಿಲ್ಮ್ ಪ್ರಶಸ್ತಿ
ಫೊಟೊಗ್ರಾಮಸ್ ಡೆ ಪ್ಲಾಟ ಉತ್ತಮ ಚಿತ್ರ ನಟಿ (ದ ಬೆಸ್ಟ್ ಆ‍ಯ್‌ಕ್ಟ್ರೆಸ್)
ಉತ್ತಮ ನಟಿಗಾಗಿ ಗೊಯಾ ಪ್ರಶಸ್ತಿ
ಮುಖ್ಯ ಪಾತ್ರ ಅಭಿನಯಕ್ಕಾಗಿ ಸ್ಪ್ಯಾನೀಶ್ ಆ‍ಯ್‌ಕ್ಟರ್ಸ್ ಯೂನಿಯನ್ ಪ್ರಶಸ್ತಿ(ಪ್ರೊಟಾಗೊನಿಸ್ಟ ಸಿನೆ)
ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿ‌ಗೆ ನಾಮನಿರ್ದೇಶನಗೊಂಡಿದೆ
ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ BAFTA ಪ್ರಶಸ್ತಿ‌‌ಗೆ ನಾಮನಿರ್ದೇಶಿತವಾಗಿದೆ.
ಅತ್ಯುತ್ತಮ ನಟಿಗಾಗಿ ಬ್ರಾಡ್‌ಕ್ಯಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ಅತ್ಯುತ್ತಮ ನಟಿಗಾಗಿ ಶಿಕಾಗೊ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ಚಲನಚಿತ್ರ ನಾಟಕದಲ್ಲಿ -ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ಅತ್ಯುತ್ತಮ ನಟಿಗಾಗಿ ಐರಿಷ್ ಫಿಲ್ಮ್ ಆ‍ಯ್‌೦ಡ್ ಟೆಲಿವಿಷನ್ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ಅತ್ಯುತ್ತಮ ನಟಿಗಾಗಿ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ಅತ್ಯುತ್ತಮ ನಟಿಗಾಗಿ ಆನ್‌ಲೈನ್‌ ಫಿಲ್ಮ್‌ ಕ್ರಿಟಿಕ್ಸ್‌ ಸೊಸೈಟಿ ಪ್ರಶಸ್ತಿ‌‌ಗೆ ನಾಮನಿರ್ದೇಶಿತವಾಗಿದೆ
ಚಲನಚಿತ್ರ ನಾಟಕದಲ್ಲಿನ ಅತ್ಯುತ್ತಮ ನಟಿಗಾಗಿ ಸ್ಯಾಟೆಲೈಟ್‌ ಪ್ರಶಸ್ತಿ‌‌ಗೆ ನಾಮನಿರ್ದೇಶಿತವಾಗಿದೆ
ಮುಖ್ಯ ಪಾತ್ರದಲ್ಲಿನ ಅತ್ಯುತ್ತಮ ನಟಿಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌‌ಗೆ ನಾಮನಿರ್ದೇಶಿತವಾಗಿದೆ

2007 ದ ಗುಡ್ ನೈಟ್ ಅನ್ನಾ
ಮನೊಲೆಟ್ ಅಂಟೊನಿಟ "ಲುಪ್" ಸಿನೊ
2007 ಎಲೆಜಿ ಕಾನ್ಸುಯೆಲಾ ಕಾಸ್ಟಿಲೊ ವರ್ಷದ ಅತ್ಯುತ್ತಮ ನಟಿಗಾಗಿ [[ಸಂಟ ಬಾರ‍್ಬರಾ ಇಂಟರ್‌ನ್ಯಾಷನಲ್

ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ]] ವಿಕಿ ಕ್ರಿಸ್ಟಿನಾ ಬಾರ್ಸೆಲೊನಾ ಗೆ ದೊರಕಿದ್ದನ್ನೂ ಗಮನಿಸಬಹುದು
ಚಲನಚಿತ್ರದ ಅತ್ಯುತ್ತಮ ಪೋಷಕ ನಟಿಗಾಗಿ ಸ್ಯಾಟೆಲೈಟ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ

ವಿಕಿ ಕ್ರಿಸ್ಟಿನಾ ಬಾರ್ಸಿಲೊನಾ ಮರಿಯಾ ಎಲೆನಾ ಅತ್ಯುತ್ತಮ ಪೋಷಕ ನಟಿಗಾಗಿ ಅಕಾಡೆಮಿ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ಪೋಷಕ ನಟನೆಯಲ್ಲಿ ಅತ್ಯುತ್ತಮ ನಟಿಗಾಗಿ BAFTA ಪ್ರಶಸ್ತಿ‌
ಉತ್ತಮ ಪೋಷಕ ನಟಿಗಾಗಿ ಬೊಸ್ಟನ್ ಸೊಸೈಟಿ ಆಫ್ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ
ಪೋಷಕ ನಟಿಗಾಗಿ ಗೊಯಾ ಪ್ರಶಸ್ತಿ
ಉತ್ತಮ ಪೋಷಕ ನಟಿಗಾಗಿ ಇಂಡಿಪೆಂಡೆಂಟ್ ಸ್ಪಿರಿಟ್ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ವರ್ಷದ ಅತ್ಯುತ್ತಮ ನಟಿಗಾಗಿ [[ಸಂಟ ಬಾರ‍್ಬರಾ ಇಂಟರ್‌ನ್ಯಾಷನಲ್

ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಎಲೆಜಿಗೂ ಸಹ ಸಂದಿದೆ|ಸಂಟ ಬಾರ‍್ಬರಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಎಲೆಜಿ ಗೂ ಸಹ ಸಂದಿದೆ]]
ಉತ್ತಮ ಪೋಷಕ ನಟಿಗಾಗಿ ಬೊಸ್ಟನ್ ಸೊಸೈಟಿ ಆಫ್ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ
ನಟಿಯ ಪೋಷಕ ನಟನೆಗಾಗಿ ಗೌದಿ ಪ್ರಶಸ್ತಿ ಫಾರ್ ಬೆಸ್ಟ್ ಪರ್ಫಾಮೆನ್ಸ್ (ಎರಡನೇ ಅತ್ಯುತ್ತಮ ನಟಿ)
ಅತ್ಯುತ್ತಮ ಸಮಗ್ರ ಪಾತ್ರವರ್ಗಕ್ಕಾಗಿ ಗಾಥಮ್ ಪ್ರಶಸ್ತಿ‌
ಅತ್ಯುತ್ತಮ ಪೋಷಕ ನಟಿಗಾಗಿ ಕ್ಯಾನ್ಸಾಸ್ ಸಿಟಿ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿಗಾಗಿ ಲಾಸ್‌ ಎಂಜಲ್ಸ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಸಿಯೆಷನ್‌ ಪ್ರಶಸ್ತಿ‌
ಅತ್ಯುತ್ತಮ ಪೋಷಕ ನಟಿಗಾಗಿ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿಗಾಗಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿಗಾಗಿ ಸೌತ್‌ಈಸ್ಟರ್ನ್ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ALMA ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ಅತ್ಯುತ್ತಮ ಪೋಷಕ ನಟಿಗಾಗಿ ಬ್ಲಾಕ್ ರೀಲ್ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ಅತ್ಯುತ್ತಮ ಪೋಷಕ ನಟಿಗಾಗಿ ಬ್ರಾಡ್‌ಕಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ಉತ್ತಮ ಪೋಷಕನಟಿಗಾಗಿ ಚಿಕಾಗೋ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ಅತ್ಯುತ್ತಮ ಪೋಷಕ ನಟಿಗಾಗಿ ಸಿನಿಮಾ ರೈಟರ್ಸ್ ಸರ್ಕಲ್ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ಫೊಟೊಗ್ರಾಮಸ್ ಡೆ ಪ್ಲಾಟ ಉತ್ತಮ ಚಿತ್ರ ನಟಿ ( ಮೆಜೊರ್ ಆಕ್ಟ್ರಿಜ್ ಡೆ ಸಿನೆ) ಎಂದು ನಾಮ ನಿರ್ದೇಶಿತವಾಗಿದ್ದಾರೆ.
ಚಲನಚಿತ್ರದ ಅತ್ಯುತ್ತಮ ಪೋಷಕ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ಅತ್ಯುತ್ತಮ ನಟಿಗಾಗಿ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ಅತ್ಯುತ್ತಮ ಪೋಷಕ ನಟಿಗಾಗಿ ಆನ್‌ಲೈನ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ನಟಿಯ ಪೋಷಕ ಪಾತ್ರದ ಅತ್ಯುತ್ತಮ ನಟನೆಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ನಟಿಯ ಪೋಷಕ ಪಾತ್ರದ ಅತ್ಯುತ್ತಮ ನಟನೆಗಾಗಿ ಸ್ಪ್ಯಾನೀಶ್ ಆ‍ಯ್‌ಕ್ಟರ್ಸ್ ಯೂನಿಯನ್ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ (ಸಿಕಂಡ್ರಿಯಾ ಸಿನೆ-ಮಹಿಳಾ ವಿಭಾಗದಲ್ಲಿ)

2009 ಜಿ-ಫೊರ್ಸ್ ಜರೇಜ್ (daನಿ)
ಬ್ರೊಕನ್ ಎಂಬ್ರೆಸಸ್ ಮ್ಯಾಗ್ಡಲೇನಾ ಲೊಸ್ ಅಬ್ರಜೊಸ್ ರೊಟೊಸ್
ಉತ್ತಮ ನಟಿಗಾಗಿ ಯುರೋಪಿಯನ್ ಫಿಲ್ಮ್ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ.
ಚಲನಚಿತ್ರ ನಾಟಕದಲ್ಲಿ ಅತ್ಯುತ್ತಮ ನಟಿಗಾಗಿ ಸ್ಯಾಟೆಲೈಟ್‌ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ನೈನ್ ಕಾರ್ಲಾ ಆಲ್ಬನೆಸ್ ಚಲನಚಿತ್ರದ ಅತ್ಯುತ್ತಮ ಪಾತ್ರವರ್ಗಕ್ಕಾಗಿ ಸ್ಯಾಟೆಲೈಟ್‌ ಪ್ರಶಸ್ತಿ
ಚಲನಚಿತ್ರದ ಅತ್ಯುತ್ತಮ ಪೋಷಕ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ಅತ್ಯುತ್ತಮ ಪೋಷಕ ನಟಿಗಾಗಿ ಹಾಸ್ಟನ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ಚಲನಚಿತ್ರದ ಅತ್ಯುತ್ತಮ ಪೋಷಕ ನಟಿಗಾಗಿ ಸ್ಯಾಟೆಲೈಟ್‌ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ನಟಿಯ ಪೋಷಕ ಪಾತ್ರದ ಅತ್ಯುತ್ತಮ ನಟನೆಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ[೧೯]
2010 ಸೆಕ್ಸ್ ಆ‍ಯ್೦ಡ್ ದ ಸಿಟಿ 2[೨೦] ಲಿಡಿಯಾ

ಇತರೆ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
15ನೇ ಸ್ಕ್ರೀನ್ ಆ‍ಯ್‌ಕ್ಟರ್ಸ್ ಗಿಲ್ಡ್ ಪ್ರಶಸ್ತಿ ಸಮಾರಂಭದಲ್ಲಿದ್ದರು.

ಇಮ್ಯಾಜಿನ್ ಪೌಂಡೇಷನ್ ಪ್ರಶಸ್ತಿಗಳು

  • 2003 ಕ್ರಿಯೇಟಿವ್ ಅಚೀವ್‌ಮೆಂಟ್ ಪ್ರಶಸ್ತಿ

MTV ಚಲನಚಿತ್ರ ಪ್ರಶಸ್ತಿಗಳು

NAACP ಇಮೇಜ್ ಪ್ರಶಸ್ತಿಗಳು

ಒಂಡಾಸ್ ಪ್ರಶಸ್ತಿಗಳು

  • 1992 ರ ಒಂಡಾಸ್ ಫಿಲ್ಮ್ ಪ್ರಶಸ್ತಿ‌ ಅನ್ನು ಉತ್ತಮ ನಟನೆಗಾಗಿ(ಬೆಸ್ಟ್ ಪರ್ಫಾಮೆನ್ಸ್) ಜೇವಿಯರ್ ಬರ್ಡೆಮ್‌ರೊಂದಿಗೆ ಗಳಿಸಿದರು , ಅದನ್ನು ನಿರ್ಬಂಧಿಸಲಾಯಿತು,(ಅಧಿಕೃತವಾಗಿ ಯಾವುದೇ ವಿಭಾಗಕ್ಕೂ ಪ್ರಶಸ್ತಿಯನ್ನು ಕೊಡಲಿಲ್ಲ).

ಪೆನಿಸ್ಕೊಲ ಕಾಮಿಡಿ ಫಿಲ್ಮ್ ಫೆಸ್ಟಿವಲ್

  • ಟೊಡೊ ಎಸ್ ಮೆಂಟಿರಾ (1994) ಚಿತ್ರಕ್ಕಾಗಿ 1994ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದರು .

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ೧.೦ ೧.೧ ೧.೨ "Festival de Cannes: Volver". festival-cannes.com. Retrieved 2009-12-13.
  2. ಪೆನೆಲೊಪ್ ಕ್ರೂಜ್‌:ಹಾಲಿವುಡ್ ಹೊಸ ಸಿನಿಮಾ ಭಾಷೆಯೊಂದನ್ನು ಕಲಿಯುತ್ತದೆ
  3. ಹಾಲಿವುಡ್ ವಿದೇಶಿಗರನ್ನು ಪ್ರೀತಿಸುತ್ತೆ, ಆದರೆ ಅವರೆಲ್ಲರೂ ನಟರಾಗಿರುವುದಿಲ್ಲ
  4. ೪.೦ ೪.೧ "Yahoo Corazon!" (in Spanish). Archived from the original on 2007-10-25. Retrieved 2007-03-15.{{cite web}}: CS1 maint: unrecognized language (link)
  5. ಪೆನೆಲೊಪ್ ಕ್ರೂಜ್‌ ಜೀವನಚರಿತ್ರೆ (1974-)
  6. "Terra.com entry" (in Spanish). Retrieved 2007-03-15.{{cite web}}: CS1 maint: unrecognized language (link)
  7. "IMDb entry - "Série rose" (1986)". Retrieved 2007-03-15.
  8. 60 minutes. Season 42. ೧೭ ಜನವರಿ ೨೦೧೦. CBS. Archived from the original on 2010-01-20. https://web.archive.org/web/20100120080910/http://www.cbsnews.com/video/watch/?id=6108525n. 
  9. "Cruz on Hayek: Like Sisters! Not Lovers". Archived from the original on 2008-05-26. Retrieved 2007-03-15.
  10. "ElPais.com - De un vídeoclip a la carrera de los Oscars" (in Spanish). Retrieved 2007-03-15.{{cite web}}: CS1 maint: unrecognized language (link)
  11. "Mango spain, fashion, collection, newspage". Retrieved 2008-01-08.
  12. « ಪೆನೆಲೊಪ್ ಕ್ರೂಜ್‌ ವಿಕಿ ಕ್ರಿಸ್ಟಿನಾ ಬಾರ್ಸಿಲೊನಾಗೆ ನಾಮನಿರ್ದೇಶಿತಗೊಂಡರು » Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ., peoplestar.co.uk ,2009-01-24 ರಂದು ಮರುಪತ್ತೇಹಚ್ಚಲಾಯಿತು.
  13. "International Vegetarian Union entry".
  14. Galloway, Stephen (December 2000). "Penelope Cruz". Interview. Retrieved 2009-05-17. {{cite news}}: Cite has empty unknown parameter: |coauthors= (help)[permanent dead link]
  15. "Cruise Controlled", Hispanic, vol. 14, no. 12, p. 18
  16. "Matthew McConaughey & Penelope Cruz Are 'Separating' - AOL". Archived from the original on 2006-06-22. Retrieved 2007-01-25.
  17. "Spain's hottest stars back together for Woody Allen's Europe venture". Archived from the original on 2011-09-13. Retrieved 2009-01-04.
  18. "ಪೆನೆಲೊಪ್ ಕ್ರೂಜ್‌ ಮಗುವನ್ನು ದತ್ತು ಪಡೆಯಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ". Archived from the original on 2013-07-04. Retrieved 2010-02-11.
  19. "Screen Actors Guild announces award nominees". sfgate.com. Retrieved 2009-12-22.
  20. Chris Morran (2009-10-13). "Penélope, Miley & Liza All in for SATC 2". OKMagazine.com. Archived from the original on 2010-05-02. Retrieved 2009-10-13.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:AcademyAwardBestSupportingActress 2001-2020