ಚಿಕ್ಕಪೇಟೆ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಕ್ಕಪೇಟೆ
neighbourhood
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ನಗರ
ಮಹಾನಗರಬೆಂಗಳೂರು
ಭಾಷೆಗಳು
 • Officialಕನ್ನಡ
Time zoneUTC+5:30 (IST)
ಪಿನ್ ಕೋಡ್
560053 [೧]
Telephone code080
Vehicle registrationKA 05

'ಚಿಕ್ ಪೇಟ್'- ಕನ್ನಡ-ಭಾಷೆಯಲ್ಲಿ ಚಿಕ್ಕ-ವ್ಯಾಪಾರ ಸ್ಥಳವೆಂಬ ಅರ್ಥದ, ಹಳೆ ಬೆಂಗಳೂರಿನ ಅತ್ಯಂತ ಪ್ರಸಿದ್ಧ ಶಾಪಿಂಗ್ ವಲಯ. ಹೆಚ್ಚಾಗಿ ಮದುವೆಯ ಜವಳಿ ಹಾಗೂ ಮನೆಯಲ್ಲಿ ವರ್ಷವಿಡೀ ಬರುವ ಹಬ್ಬ-ಹರಿದಿನಗಳು, ಪಾರ್ಟಿಗಳಿಗೆ, ವಿಶೇಷ ಪೂಜೆಗಳಿಗೆ ಬೇಕಾದ,ರೇಷ್ಮೆ-ಸೀರೆಗಳ ಎಂಪೋರಿಯಮ್ ಗಳು, ಪುಸ್ತಕದ ಅಂಗಡಿಗಳು, ದಿನ ಬಳಕೆಯ ಸಮಸ್ತ ವಸ್ತುಗಳೂ ಚಿಕ್ಕಪೇಟೆಯಲ್ಲಿ ದೊರೆಯುತ್ತವೆ. ಇಲ್ಲಿನ ಎಲ್ಲಾ ಜವಳಿ ಅಂಗಡಿಗಳೂ, ಅಪ್ಪಟ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿವೆ. ಚಿಕ್ಕ ಬಳಕೆದಾರರಿಗೆ, ಮತ್ತು ಅತಿ ಶ್ರೀಮಂತರಿಗೆ ಬೇಕಾದಂತಹ ವಸ್ತ್ರಗಳನ್ನು ಮಾರುವ, ಸೀರೆಮಳಿಗೆಗಳಿವೆ. 'ಓಲ್ಡ್ ಸಿಟಿಮಾರ್‍ಕೆಟ್', ಹತ್ತಿರವಿರುವ,'ಚಿಕ್ ಪೇಟ್' ಒಂದು ಅಂಕು-ಡೊಂಕಾಗಿ, ಸಾಗುವ ಗಲ್ಲಿಯೆನ್ನಬಹುದು. ಅದು 'ಸಿಟಿ ಮಾರ್ಕೆಟ್,' ನಿಂದ ಅರಂಭವಾಗಿ, ಪಕ್ಕದ, ಅವೆನ್ಯೂ ರಸ್ತೆಗೆ ಸೇರಿಕೊಳ್ಳುತ್ತದೆ. ಇಲ್ಲಿ ಉದ್ನದಕ್ಕೂ ನಡೆದೇ ಹೋಗಬೇಕು, ವಾಹನಗಳ ಪಾರ್ಕಿಂಗ್ ಸಾಧ್ಯವಿಲ್ಲ. ಮುಂದೆ ಸಾಗಿದಂತೆ, ರಸ್ತೆಯ ಎರಡೂ ಬದಿಯಲ್ಲಿ ಒಂದು ದೊಡ್ಡ ಅಂಗಡಿಗಳ ಸಾಲೇ ಇದೆ. ಇಲ್ಲಿ ಕಣ್ಣಿಗೆ ಬೇಕಾದ ಎಲ್ಲ ವೈವಿದ್ಯಮಯ ರೇಷ್ಮೆ ಸೀರೆಗಳು, ಅಂಗವಸ್ತ್ರಗಳು ಮಕ್ಕಳ ಉಡುಪುಗಳು ಸಿಕ್ಕುತ್ತವೆ.

ಚಿಕ್ಕಪೇಟೆ-ಗಲ್ಲಿಯಂತಿರುವ ತಾಣದ, ಶುದ್ಧ-ರೇಷ್ಮೆ, ಹತ್ತಿ ಬಟ್ಟೆಗಳ ಕಣಜ[ಬದಲಾಯಿಸಿ]

ಚಿಕ್ಕ-ಗಲ್ಲಿಯಂತಿರುವ ಚಿಕ್ಕಪೇಟೆಯ ಎರಡೂ ಪಕ್ಕದಲಿ ಮತ್ತು ಅಕ್ಕ ಪಕ್ಕದ ಗಲ್ಲಿಗಳ ಓಣಿಗಳಲ್ಲಿಯೂ ನಾವು ತರಹಾವರಿ ಬಟ್ಟೆ ಎಂಪೋರಿಯಮ್ ಗಳನ್ನು ವೀಕ್ಷಿಸಬಹುದು. ಇಂತಹ ಚಿಕ್ಕ-ಗಲ್ಲಿಯ ಶಾಪೊಂದರಲ್ಲಿ ಜವಳಿ-ಬಟ್ಟೆಗಳನ್ನು ಖರೀದಿಸಿದೆವೆಂದು ಭಯಪಡಬೇಕಾಗಿಲ್ಲ. ನಂಬಿಕೆಗರ್ಹವಾದ ವ್ಯಾಪಾರಿಗಳು, ಅತಿ-ನಯ, ವಿನಯಗಳಿಂದ ಬರುವ ಹೆಣ್ಣುಮಕ್ಕಳ, ವೃದ್ಧರ, ಯುವಜನರ, ಚಿಕ್ಕಮಕ್ಕಳ ಜೊತೆ ಪ್ರೀತಿಗೌರವಗಳಿಂದ ನಡೆದುಕೊಳ್ಳುವುದು ಇಲ್ಲಿನ ವಿಶೇಷತೆಗಳಲ್ಲೊಂದು. ಕೆಲವು ಶಾಪ್ ಗಳು, ೫೦ ವರ್ಷ ಹಿಂದಿನದಾದರೆ, ಮತ್ತೆ ಕೆಲವು ಅಂಗಡಿಗಳು ನೂರಾರುವರ್ಷಗಳಷ್ಟು ಹಳೆಯವು. ಬೆಲೆಯಲ್ಲಿ ಕೆಲವೊಮ್ಮೆ ಚೌಕಾಸಿಮಾಡಬಹುದಾದರೂ ಗುಣಮಟ್ಟದಲ್ಲಿ ನಂಬಿಕೆಯನ್ನು ಕಾಯ್ದಿರಿಸಿಕೊಂಡಿದ್ದಾರೆ. ಸ್ವಲ್ಪ ಕ್ವಾಲಿಟಿಯಲ್ಲಿ ಏರುಪೇರಾದರು, ಮನೆಗೆ ತೆಗೆದುಕೊಂಡು ಹೋಗಿ ನೋಡಿ ವಾಪಸ್ ಕೊಟ್ಟು ಬೇರೆಯದನ್ನು ಪಡೆಯುವ ಸುವ್ಯವಸ್ಥೆ ಇದೆ. ಕೆಲವು ಸೀರೆ ಮಾರ್ಟ್ ಗಳು ಮೈಸೂರಿನ ರಾಜಪರಿವಾರಕ್ಕೆ ಶುದ್ಧ-ರೇಷ್ಮೆಯ ದುಬಾರಿ ಕಸೂತಿಮಾಡಿದ ಸೀರೆ, ಉಡುಪುಗಳನ್ನು ಒದಗಿಸುವ ಪರಿಪಾಠವಿಟ್ಟುಕೊಂಡಿದ್ದಾರೆ. ಸಾಹುಕಾರರಿಗೆ, ನೆರೆರಾಜ್ಯದ ರಾಜಮನೆತನದವರಿಗೆ, 'ಕೈಸರ್ ಹಿಂದ್,' ಎಂಬ ಸೀರೆ ಅಂಗಡಿ ಶುರುವಾಗಿ ಸುಮಾರು ೭೦ ವರ್ಷಗಳಾಗಿವೆ. ಜರ್ಮನ್ ಸಂಸ್ಥೆಯೊಂದಿಗೆ, ಜೊತೆಗಾರಿಕೆಯಿದೆ. 'ಮೈಸೂರ್,' ಮತ್ತು 'ಘರ್ವಾಲ್,' ರಾಜಪರಿವಾರಕ್ಕೆ ವಿಶೇಷ ಉಡುಪುಗಳನ್ನು ಒದಗಿಸುತ್ತಾರೆ. ಸಿಲ್ಕ್ ಸೂಟಿಂಗ್ಸ್, ಉಡುಪು,ಶುದ್ಧ-ಹತ್ತಿಯ ಉಡುಪುಗಳು, ಇತ್ಯಾದಿ. ಅಂತಹ ಬಳಕೆದಾರರ ಸಮಾಧಾನ ಮತ್ತು ತೃಪ್ತಿ, ಅಲ್ಲಿನ ವಸ್ತ್ರ-ವ್ಯಾಪಾರಿಗಳಿಗೆ ಬೇಕು. ಈ ಬಟ್ಟೆ ಅಂಗಡಿಗಳು, ಸಾಂಪ್ರದಾಯಕ ಬಟ್ಟೆಬರೆಗೆ ಹೆಸರುವಾಸಿ.

ಉಪನಗರಗಳು ಬೆಳೆದಂತೆ ಚಿಕ್ಕಪೇಟೆ ಯುವಜನರ ಆಕರ್ಷಣೆ ಕಳೆದುಕೊಳ್ಳುತ್ತಿದೆ[ಬದಲಾಯಿಸಿ]

ಕಾಲಾನುಕ್ರಮದಲ್ಲಿ, ಬೆಂಗಳೂರು, ಭರದಿಂದ ಬೆಳೆಯುತ್ತಿದೆ. ಐಟಿ ಉದ್ಯಮದಿಂದಾಗಿ ನೌಕರಿಗಾಗಿ ನಗರಕ್ಕೆ ಬರುವವರ ಸಂಖ್ಯೆ ಬೆಳೆದಂತೆ, ಅಂಗಡಿ-ಮುಂಗಟ್ಟುಗಳು, ಎಂಪೋರಿಯಮ್ ಗಳು, ಫ್ಯಾಷನಬಲ್ ಮಾಲ್ ಗಳು ಬೆಂಗಳೂರಿನ ಸುತ್ತಮುತ್ತಲೂ ತಲೆಯೆತ್ತಿವೆ. ಮಹಾತ್ಮಗಾಂಧಿ ರಸ್ತೆ, ಮುಂತಾದ ಕಡೆಯಲ್ಲೂ ಸೀರೆಮಳಿಗೆಗಳು ತಲೆದೋರಿದನಂತರ, ಚಿಕ್ ಪೇಟ್ ನಲ್ಲಿ ಮೊದಲಿನಂತೆ ಬೇಡಿಕೆ ಇಲ್ಲ. ಕಡಿಮೆಯಾಗುತ್ತಿದೆ. ನೆರೆ ರಾಜ್ಯ, 'ಚೆನ್ನೈ,' ನ ಸೀರೆ ವರ್ತಕರು, ಬಂದು ಸೇರಿಕೊಂಡು ಗ್ರಾಹಕರಿಗೆ ಅನೇಕ ವಿಧಗಳ, ವಸ್ತ್ರಗಳನ್ನು ಕೊಟ್ಟು, ಆಕರ್ಷಿಸಿದ್ದಾರೆ.

ಅತ್ಯಾಕರ್ಷಕ ಮೈಸೂರ್ ಸಿಲ್ಕ್-ಸೀರೆಗಳು, ವಸ್ತ್ರಗಳು, ಗುಣಮಟ್ಟದಲ್ಲಿ ಯಾವಾಗಲೂ ಗ್ಯಾರಂಟಿ[ಬದಲಾಯಿಸಿ]

ಕೂಡಲೂ, ನಿಲ್ಲಲು, ಜಾಗವಿಲ್ಲದ ಕಿಷ್ಕಿಂದವಾದ ಚಿಕ್ಕಪೇಟೆಯ ಸೀರೆ ಎಂಪೋರಿಯಮ್ ಗಳು ಇಂದಿನ ನವ-ಯುವಕ-ಯುವತಿಯರಿಗೆ ಸಮಾಧಾನ ಕೊಡುತ್ತಿಲ್ಲ. ವಿಶಾಲವಾದ, ಹವಾನಿಯಂತ್ರಿತ-ಮಾಲ್ ಗಳು ಅವರಿಗೆ ಇಷ್ಟ. ಹೆಚ್ಚು ಬೆಲೆಕೊಡಲು ಅವರು ಸಿದ್ಧರಾಗಿದ್ದಾರೆ. ಇಂದಿಗೂ ಸಾಂಪ್ರದಾಯಿಕ ಮನೋಭಾವವನ್ನು ಹೊಂದಿದ ಬೆಂಗಳೂರಿನ ಕನ್ನಡ ಪರಿವಾರಗಳು, ಚಿಕ್ಕಪೇಟೆ, ಅನೆನ್ಯೂ ರಸ್ತೆ, ಬಳೆಪೇಟೆ, ಕೆಂಪೇಗೌಡ ಸರ್ಕಲ್ ನ ರೆಷ್ಮೆ ಅಂಗಡಿಗಳಲ್ಲೇ ತಮ್ಮ ಜವಳಿ ಖರೀದಿಸಲು ಇಚ್ಛಿಸುತ್ತಾರೆ. ಕೆಲವು ಪ್ರಸಿದ್ಧ ಜವಳಿ ಅಂಗಡಿಗಳ ಹೆಸರುಗಳು ಹೀಗಿವೆ.

ಚಿಕ್ಕಪೇಟೆಯ ಶಾಪಿಂಗ್ ವಲಯಗಳಲ್ಲಿ 'ತಾಜಾ-ಅಪ್ಪಟ ರೇಷ್ಮೆಯ ಡ್ರೆಸ್ ಮೆಟೀರಿಯಲ್ಸ್,' ಗಳೇ ಲಭ್ಯ[ಬದಲಾಯಿಸಿ]

ನಂಬಿಕೆಗೆ ಅರ್ಹವಾದ ಶುದ್ಧ-ಹತ್ತಿ ಬಟ್ಟೆಗಳು, ಶುದ್ಧ-ರೇಷ್ಮೆ, ಆರ್ಟ್ ಸಿಲ್ಕ್, ವಸ್ತ್ರಗಳು, ಇತ್ಯಾದಿಗಳು ದೊರೆಯುತ್ತವೆ. ಅತ್ಯಂತ ಹೊಸ ಫ್ಯಾಶನ್ ನ ಮನಮೋಹಕ ಡಿಸೈನ್ ಗಳ ಕಸೂತಿ ಹಾಕಿದ, ಬಟ್ಟೆಬರೆಗಳನ್ನು ಟೂರಿಸ್ಟ್ ಗಳು ತುಂಬಾ ಮೆಚ್ಚಿಕೊಳ್ಳುತ್ತಾರೆ. ಅವರುಗಳಿಗೆ, ಅಮೆರಿಕಾ, ಬ್ರಿಟನ್ ದೇಶಗಳಿಗೆ ಹೋಲಿಸಿದರೆ, ಅತಿ-ಸೋವಿಯಾಗಿ ಸಿಕ್ಕುವ ಅಪ್ಪಟ ಹಾಗೂ, ಸುಂದರ, ಆಕರ್ಷಕ ರೇಷ್ಮೆ ಡ್ರೆಸ್ ಮೆಟೀರಿಯಲ್ಸ್ ಗಳು ಹೆಚ್ಚಾಗಿ ಖರ್ಚಾಗುತ್ತವೆ. ನಮ್ಮ ದೇಶಕ್ಕೆ 'ಫಾರಿನ್ ಎಕ್ಸ್ ಚೇಂಗ್,' ಕೂಡಾ ದೊರೆಯುತ್ತದೆ.

  1. http://www.indiamapia.com/Bangalore/chickpet.html